ಗಡಿಗಳಿಲ್ಲದ ಆಕ್ರೋಶ: ಜಿಗ್ನೇಶ್ ಮೇವಾನಿ ಬಂಧನದ ಬಗ್ಗೆ ‘ದಿ ಹಿ೦ದು’ ಸಂಪಾದಕೀಯ ಏಪ್ರಿಲ್ 23, 2022 ಮೇವಾನಿ ಹೇಳಿಕೆ ವಿರುದ್ಧ ಅಸ್ಸಾಂ ಪೊಲೀಸರ ಕ್ರಮ ಕಾನೂನಿನ ದುರ್ಬಳಕೆಯಾಗಿದೆ ಗುಜರಾತ್ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿರುವುದು ಕೇಂದ್ರ ಸರ್ಕಾರದ ತೀವ್ರ ಟೀಕಾಕಾರರನ್ನು ಗುರಿಯಾಗಿಸಿ ಕಾನೂನು ದುರುಪಯೋಗದ ಒಂದು ಘೋರ ಉದಾಹರಣೆಯಾಗಿದೆ. ಅವರ ಬಂಧನದಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ಆಘಾತ ಮತ್ತು ಅಸಹ್ಯ ಉಂಟು ಮಾಡುವ ಹಲವಾರು ಅಂಶಗಳಿವೆ. ಮೇವಾನಿಯವರ, ಟ್ವಿಟ್ಟರ್ನಿಂದ ತರುವಾಯ ತಡೆಹಿಡಿಯಲ್ಪಟ್ಟ, ಟ್ವೀಟ್ಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯನ್ನು "ಗೋಡ್ಸೆ ಆರಾಧಕ" ಎಂದು ಬಣ್ಣಿಸಲಾಯಿತು, ಆದರೆ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾದ ಗುಜರಾತ್ನ ಕೆಲವು ಪ್ರದೇಶಗಳಲ್ಲಿ ಶಾಂತಿಗಾಗಿ ಕರೆ ನೀಡುವಂತೆ ಅವರಿಗೆ ಮನವಿಯನ್ನು ಸಹ ಒಳಗೊಂಡಿದೆ. ಇದರಲ್ಲಿ ಪ್ರಧಾನಿಯವರ ಕಟು ಟೀಕೆಗಳ ಹೊರತಾಗಿ ಸಾರ್ವಜನಿಕ ನೆಮ್ಮದಿಯ ಮೇಲೆ ಪರಿಣಾಮ ಬೀರುವ ಅಥವಾ ಸಮಾಜದಲ್ಲಿ ಒಡಕು ಉಂಟು ಮಾಡುವಂಥದ್ದು ಏನೂ ಇಲ್ಲ ಎಂಬುದು ಸ್ಪಷ್ಟ. ಪ್ರಚೋದನಕಾರಿ ಭಾಷಣ, ಶಾಂತಿ ಭಂಗ ಮತ್ತು ಧಾರ್ಮಿಕ ಭಾವನೆಗಳ ಆಕ್ರೋಶಕ್ಕೆ ಸಂಬಂಧಿಸಿದ ಅಪರಾಧಗಳ ಸಂಪೂರ್ಣ ಕ೦ತೆಗಳನ್ನು ಪೊಲೀಸರು ಎತ್ತಿರುವದು ಮಾತ್ರವಲ್ಲದೆ, ಪಿತೂರಿ ಮತ್ತು ಕಂಪ್ಯೂಟರ್ಗಳನ್ನು ಹ್ಯಾಕಿಂಗ್ಗೆ ಸಂಬಂ...
ಪೋಸ್ಟ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಅರುಂಧತಿ ರಾಯ್ : ಹಾಡೇಹಗಲು ಮುಸ್ಲಿಮರ ಸಾಮೂಹಿಕ ಹತ್ಯೆಯಿ೦ದ ಅಧಿಕಾರಕ್ಕೆ ಬಂದ ಪುರುಷರಿಂದ ಭಾರತ ಆಳಲಾಗುತ್ತಿದೆ ಈ ಯುದ್ಧದಲ್ಲಿ ಆರ್ಎಸ್ಎಸ್ ಗೆದ್ದರೆ, ಅದರ ಗೆಲುವು ಅರ್ಥಹೀನ ಆಗಿರುತ್ತದೆ. ಏಕೆಂದರೆ ಭಾರತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಹಿಂದುತ್ವ ಗುಂಪುಗಳ ಪ್ರಾತಿನಿಧ್ಯ ಚಿತ್ರ. ಫೋಟೋ: ರಾಯಿಟರ್ಸ್. ಅರುಂಧತಿ ರಾಯ್ ಲೇಖಕಿ-ಕಾರ್ಯಕರ್ತ ಅರುಂಧತಿ ರಾಯ್ ಅವರು ಅಮೆರಿಕದಲ್ಲಿನೀಡಿದ ಫಾರೆಂಟ್ಹೋಲ್ಡ್ ಉಪನ್ಯಾಸದ ಪಠ್ಯ. ‘ಮಾನವ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ರಾಪೋಪೋರ್ಟ್ ಸೆಂಟರ್’ (‘Rapoport Centre for Human Rights and Justice’) ಈ ಕಾರ್ಯಕ್ರಮವನ್ನು ಆಯೋಜಿಸಿತು. . ಉಪನ್ಯಾಸವನ್ನು ನೀಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಪ್ರಾರಂಭಿಸುವ ಮೊದಲು, ಉಕ್ರೇನ್ನಲ್ಲಿನ ಯುದ್ಧದ ಬಗ್ಗೆ ನಾನು ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ನಾನು ರಷ್ಯಾದ ಉಕ್ರೇನ್ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಮತ್ತು ಉಕ್ರೇನಿಯನ್ ಜನರ ಧೈರ್ಯಶಾಲಿ ಪ್ರತಿರೋಧವನ್ನು ಶ್ಲಾಘಿಸುತ್ತೇನೆ. ರಷ್ಯಾದ ಭಿನ್ನಮತೀಯರು ಅಗಾಧವಾದ ನಷ್ಟದಲ್ಲಿ ತೋರಿಸಿದ ಧೈರ್ಯವನ್ನು ನಾನು ಶ್ಲಾಘಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಒಟ್ಟಾಗಿ ವಿಶ್ವದ ಇತರ ದೇಶಗಳ ಮೇಲೆ ಇದೇ ರೀತಿಯ ಯುದ್ಧಗಳನ್ನು ಮಾಡಿದ ಬೂಟಾಟಿಕೆಗಳ ಬಗ್ಗೆ ತೀವ್ರವಾಗಿ ಮತ್ತು ನೋವಿನಿಂದ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಾ೦ವಿಧಾನಿಕ ಕಾನೂನಿನ ತಜ್ಞ ಗೌತಮ್ ಭಾಟಿಯಾ ಅವರು ಭಾರತದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಆ ಹುದ್ದೆಯಲ್ಲಿ ಒಂದು ವರ್ಷವನ್ನು ಪೂರ್ಣಗೊಳಿಸಿದ ಕುರಿತು ಟ್ವೀಟ್ ಮಾಡಿದ್ದಾರೆ “ಈ ವಾರ ಇ೦ದಿನ ಭಾರತದ ಮುಖ್ಯ ನ್ಯಾಯಾಧೀಶರು ಈ ಹುದ್ದೆಯಲ್ಲಿ ಒ೦ದು ವರ್ಷಕಾಲ ಪೂರ್ತಿಸುತ್ತಾರೆ. ಪ್ರಮುಖವಾದ ಬಾಕಿ ಇರುವ ಸಾ೦ವಧಾನಿಕ ಪ್ರಕರಣಗಳಲ್ಲಿ ಒ೦ದೇ ಒ೦ದನ್ನಾದರೂ ಇತ್ಯರ್ಥಗೊಳಿಸಲಾಗಿಲ್ಲ. ಕಾನೂನಿನ ಅನುಷ್ಟಾನದ ಬಗ್ಗೆ ಅನೇಕ ಚರ್ಚಾಸಭೆಗಳನ್ನು ನಡೆಯಿಸಲಾಗಿದೆ. ಅದೇ ಕಾನೂನಿನ ಅನುಷ್ಟಾನದಮೇಲೆ ಅನೇಕ ಬುಲ್ಡೋಝರ್ಗಳನ್ನು ಚಲಾಯಿಸಲಾಗಿದೆ.”
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕೆಡಹುವಿಕೆ ಕಾರ್ಯಾಚರಣೆಗಳು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತವೆ ಪ್ರಭಾಷ್ ರಂಜನ್ , ಅಮನ್ ಕುಮಾರ್ ‘ ದಿ ಹಿ೦ದು’ ಏಪ್ರಿಲ್ 20, 2022 ಗಲಭೆಕೋರರೆ೦ದು ಹೇಳಲಾದವರಿಗೆ ಸಾಮೂಹಿಕ ಶಿಕ್ಷೆ ವಿಧಿಸಲು ಮಧ್ಯ ಪ್ರದೇಶದಲ್ಲಿ ಮನೆಗಳನ್ನು ಬುಲ್ಡೋಜರ್ ಯ೦ತ್ರಗಳಿ೦ದ ನೆಲಸಮ ಮಾಡಲಾಗಿದೆ ಮಧ್ಯಪ್ರದೇಶದ ಖಾರ್ಗೋನ್ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ರಾಮನವಮಿ ಮೆರವಣಿಗೆಯಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದವು. ತರುವಾಯ, ಮಧ್ಯಪ್ರದೇಶ ಸರ್ಕಾರವು ಗಲಭೆಯಲ್ಲಿ ಭಾಗಿಯಾಗಿದ್ದವರು ಎ೦ದು ಹೇಳಲಾದವರ ಮನೆಗಳನ್ನು ಬುಲ್ಡೋಜರ್ನಿಂದ ಕೆಡವಿಸಿದೆ. ಅಕ್ರಮ ಅತಿಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಈ ನೆಲಸಮವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಆದಾಗ್ಯೂ, ಈ ಅನಿಯಂತ್ರಿತ ಧ್ವಂಸಗಳನ್ನು ಒಂದು ನಿರ್ದಿಷ್ಟ ಸಮುದಾಯದ ಆಪಾದಿತ ಗಲಭೆಕೋರರ ವಿರುದ್ಧ ಮತ್ತು ಗಲಭೆಯ ನಂತರದ ತಕ್ಷಣವೇ ನಡೆಸಲಾಗುತ್ತಿದೆ ಎನ್ನ್ನುವದು ಸಾಮೂಹಿಕ ಶಿಕ್ಷೆಯನ್ನು ವಿಧಿಸುವುದು ಸರ್ಕಾರದ ಉದ್ದೇಶ ಎ೦ಬುದನ್ನು ತೋರಿಸುತ್ತದೆ. ಬುಲ್ಡೋಜರ್ ಯಂತ್ರಗಳು - ಒರಟು ರಾಜ್ಯ ಶಕ್ತಿಯ ಹೊಸ ಸಂಕೇತಗಳು - ಕೇವಲ ಮನೆಗಳು ಮತ್ತು ಅಂಗಡಿಗಳನ್ನು ಕೆಡವುವುದಲ್ಲದೆ ಕಾನೂನು ಮತ್ತು ನಮ್ಮ ಸಾಂವಿಧಾನಿಕ ಆದೇಶವನ್ನು ಕೆಡಹುತ್ತಿವೆ. ಬುಲ್ಡೋಜರ್ಗಳ ಮೂಲಕ ತ್ವರಿತವಾಗಿ ಮತ್ತು ನಿರ್ದಯವಾಗಿ 'ನ್ಯಾಯ'ವನ್ನು ಪೂರೈಸುವ ಈ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬಹುಸಂಖ್ಯಾತ ರಾಜಕೀಯ ಮತ್ತು ಅಲ್ಪಸಂಖ್ಯಾತರ ಅಸಮಾನತೆಯ ಬಗ್ಗೆ ಅಂಬೇಡ್ಕರ್ ಅವರ ಭೀತಿಗಳು ಒಮ್ಮೆ ಎಚ್ಚೆತ್ತುಕೊಂಡರೆ, ಹಿಂದುತ್ವದ ರಾಕ್ಷಸ ಹೊಸ ಬಲಿಪಶುಗಳನ್ನು ಹುಡುಕುತ್ತಲೇ ಇರುತ್ತದೆ, ಹೆಚ್ಚಿನ ಸಂಘರ್ಷಗಳನ್ನು ಹುಟ್ಟುಹಾಕುತ್ತದೆ, ಕೇವಲ ಮುಸ್ಲಿಮರೊಂದಿಗೆ ಮಾತ್ರವಲ್ಲದೆ ಪ್ರತಿಯೊಂದು ಅಂಚಿನಲ್ಲಿರುವ ಗುಂಪಿನ ಸದಸ್ಯರೊಂದಿಗೆ. ಎಸ್ ಎನ್ ಸಾಹು 14 ಎಪ್ರಿಲ್ 2022 . ‘ನ್ಯೂಸ್ ಕ್ಲಿಕ್’ ಡಾ ಬಿ ಆರ್ ಅಂಬೇಡ್ಕರ್ ಅವರ 131 ನೇ ಜನ್ಮದಿನದಂದು, ಅವರಿಗೆ ಅ೦ದು ತೋಚಿದ್ದ ಭಯಗಳನ್ನು ಆತಂಕಗಳನ್ನು ನಾವು ಭಾರತದಲ್ಲಿ ನೋವಿನಿಂದ ಇ೦ದು ಎದುರಿಸುತ್ತಿದ್ದೇವೆ. ಅಲ್ಪಸಂಖ್ಯಾತರು ಹೊರಗಿಡುವಿಕೆ ಮತ್ತು ಅಭಾವವನ್ನು ಅನುಭವಿಸುತ್ತಾರೆ ಎಂಬ ಅಂಬೇಡ್ಕರ್ ಅವರ ಎಚ್ಚರಿಕೆಗಳು ಕೋಮು ಪ್ರೇರಿತ ಚುನಾವಣಾ ಪ್ರಕ್ರಿಯೆಯಿಂದಾಗಿ ಭಾರತದ ಸಾಂವಿಧಾನಿಕ ಕಲ್ಪನೆಯನ್ನು ತಲೆಕೆಳಗಾಗಿ ಮಾಡಬಹುದಾದ ಭಯಾನಕ ವಾಸ್ತವವಾಗಿದೆ. ಇತ್ತೀಚೆಗಷ್ಟೇ ರಾಮನವಮಿಯಂದು ಹಲವು ರಾಜ್ಯಗಳಲ್ಲಿ ಭಾರತೀಯ ಮುಸ್ಲಿಮರನ್ನು ಹಿಂಸಾತ್ಮಕವಾಗಿ ಗುರಿಮಾಡಲಾಗಿತ್ತು. ಮುಸಲ್ಮಾನರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡುವುದು ನಿತ್ಯದ ಸಂಗತಿಯಾಗಿದೆ. ಹಲವಾರು ಪ್ರದೇಶಗಳಲ್ಲಿ, ಸರ್ಕಾರವು ಸಮಾಜದ ದುರ್ಬಲ ವರ್ಗಗಳ ವಿಶೇಷವಾಗಿ ಮುಸಲ್ಮಾನರ ವಸತಿಗಳನ್ನು ನೆಲಸಮ ಮಾಡುತ್ತದೆ. ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಆಪಾದಿತ ಅಪರಾಧಿ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸ೦ಪರ್ಕ ಭಾಷೆಯಾಗಿ ಯಾವದು ಪ್ರಯೋಜನಕಾರಿ - ಹಿಂದಿ ಅಥವಾ ಇಂಗ್ಲಿಷ್ ? ಜಾಸ್ಮಿನ್ ನಿಹಲಾನಿ ವಿಘ್ನೇಶ್ ರಾಧಾಕೃಷ್ಣನ್ ಶ್ರೀನಿವಾಸನ್ ರಮಣಿ ‘ದಿ ಹಿ೦ದು’ ಏಪ್ರಿಲ್ 15, 2022 ಹಿ೦ದಿಗಿ೦ತ ಇಂಗ್ಲಿಷ್ ಭಾಷೆ ಸ೦ಪರ್ಕ ಭಾಷೆಯಾಗಲು ಬಲವಾದ ವಾದಗಳಿವೆ ಎಂದು ವಲಸೆ ಮತ್ತು ಅಭಿವೃದ್ಧಿ ಸೂಚ್ಯಂಕಗಳ ಅಂಕಿಅಂಶಗಳು ತೋರಿಸುತ್ತವೆ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) ಕೇವಲ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) ನಿವಾಸಿಗಳು ಹಿಂದಿಯನ್ನುಸಂವಹನಕ್ಕಾಗಿ ಮೊದಲ ಭಾಷೆ ಎ೦ದು ಆಯಿಕೆ ಮಾಡಿದರು(ಜನಗಣತಿ 2011). ಆದರೆ ಒಂದು ಎಚ್ಚರಿಕೆ ಇದೆ. "ಹಿಂದಿ" ಎಂಬುದು ಭೋಜ್ಪುರಿ, ರಾಜಸ್ಥಾನಿ, ಹಿಂದಿ ಮತ್ತು ಛತ್ತೀಸ್ಗಢಿ ಸೇರಿದಂತೆ 56 ಭಾಷೆಗಳನ್ನು (ಮಾತೃಭಾಷೆಗಳು) ಒಳಗೊಳ್ಳುವ ಒಂದು ಅಗಲವಾಗಿ ಆವರಿಸುವ ‘ಛತ್ರಿ’ ಪದವಾಗಿದೆ. 43% ಭಾರತೀಯರು "ಹಿಂದಿ" ಮಾತನಾಡುತ್ತಿದ್ದರೆ, ಕೇವಲ 26% ಜನರು ನಿರ್ದಿಷ್ಟವಾಗಿ ತಮ್ಮ ಮಾತೃಭಾಷೆಯಾಗಿ ಹಿಂದಿ ಮಾತನಾಡುತ್ತಾರೆ. ಈ ವಾಸ್ತವಿಕತೆ ಹಿಂದಿಯನ್ನು ಸ೦ಪರ್ಕ ಭಾಷೆ (‘ಲಿಂಕ್’) ಯನ್ನಾಗಿ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಕೇಳುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸುವಾಗ, ಅವರು ಇಂಗ್ಲಿಷ್ಗೆ ಪರ...