ಸ್ಪಿನೋಜಾ : ಧರ್ಮ, ನಾಸ್ತಿಕತೆ, ಮತಾಂಧತೆ (ಭಾಗ ೨) ಮತಾಂಧತೆ ಇಷ್ಟೊಂದು ವಿನಾಶಕಾರಿಯಾಗಿದ್ದರೆ, ಅದು ಏಕೆ ಸಾಮಾನ್ಯವಾಗಿದೆ ಎಂದು ನಾವು ಆಶ್ಚರ್ಯಪಡಬಹುದು. ಅನೇಕರು ಈ ಮಾರ್ಗವನ್ನು ಏಕೆ ಆರಿಸಿಕೊಳ್ಳುತ್ತಾರೆ? ಸ್ಪಿನೋಜಾ ನೀಡುವ ಉತ್ತರ: ಮತಾಂಧತೆಯು ಆಕರ್ಷಕವಾದ ಪ್ರಲೋಭವನ್ನು ನೀಡುತ್ತದೆ. ಅನಿಶ್ಚಿತತೆಯ ಕಾಲದಲ್ಲಿ ಸಂಪೂರ್ಣ ಖಚಿತತೆ. ಸಂಕೀರ್ಣ, ಗೊಂದಲಮಯ ಜಗತ್ತಿನಲ್ಲಿ, ಮತಾಂಧನಿಂದ ಎಲ್ಲಾ ಪ್ರಶ್ನೆಗಳಿಗೆ ಸರಳ ಉತ್ತರಗಳ ಭರವಸೆ , ಪ್ರತ್ಯೇಕತೆಯ ಬಲವಾದ ಗುರುತು, ನೈತಿಕ ಶ್ರೇಷ್ಠತೆಯ ಭಾವನೆ (ಭ್ರಮೆ ?). ಇದು ಮಾದಕ ವ್ಯಸನದಂತಿದೆ ಏಕೆಂದರೆ ಇದು ತಾತ್ಕಾಲಿಕವಾಗಿ ಅಸ್ತಿತ್ವವಾದದ ವೇದನೆಯನ್ನು ನಿವಾರಿಸುತ್ತದೆ ಆದರೆ ಆಳವಾದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ವಾಸ್ತವವಾಗಿ, ಇದು ಮತಾಂಧರಾದವರನ್ನು ಹದಗೆಡಿಸುತ್ತದೆ. ಮತಾಂಧನು ದುರಹಂಕಾರದ ಮೇಲೆ ಅವಲಂಬಿತನಾಗುತ್ತಾನೆ, ಅದರಿಂದಾಗಿ ಬೆಳೆಯಲು, ಕಲಿಯಲು ಅಥವಾ ವಿಕಸನಗೊಳ್ಳಲು ಅವನಿಂದ ಸಾಧ್ಯವಾಗುವುದಿಲ್ಲ. ಸ್ಪಿನೋಜಾ ಮತಾಂಧತೆ ಮತ್ತು ಸಹಿಷ್ಣುತೆಯ ನಡುವಿನ ಸಮಾಜದ ಪರ್ಯಾಯಗಳ ಚಕ್ರವನ್ನು ಗಮನಿಸುತ್ತಾನೆ. ಬಿಕ್ಕಟ್ಟು, ಭಯ ಮತ್ತು ಅನಿಶ್ಚಿತತೆಗಳ ಕ್ಷಣಗಳಲ್ಲಿ ಜನರು ಮತಾಂಧ ಸಂದೇಶಗಳಿಗೆ ಹೆಚ್ಚು ಭೇದ್ಯರಾಗುತ್ತಾರೆ. ಜನರಿಗೆ ಬೇಕಾಗಿರುವದು ಬಲಿಪಶುಗ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ