ಕೆಡಹುವಿಕೆ ಕಾರ್ಯಾಚರಣೆಗಳು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತವೆ

ಪ್ರಭಾಷ್ ರಂಜನ್ಅಮನ್ ಕುಮಾರ್

 

ದಿ ಹಿ೦ದು’ ಏಪ್ರಿಲ್ 20, 2022 

ಗಲಭೆಕೋರರೆ೦ದು ಹೇಳಲಾದವರಿಗೆ  ಸಾಮೂಹಿಕ ಶಿಕ್ಷೆ ವಿಧಿಸಲು  ಮಧ್ಯ ಪ್ರದೇಶದಲ್ಲಿ ಮನೆಗಳನ್ನು ಬುಲ್ಡೋಜರ್ ಯ೦ತ್ರಗಳಿ೦ದ ನೆಲಸಮ ಮಾಡಲಾಗಿದೆ

ಮಧ್ಯಪ್ರದೇಶದ ಖಾರ್ಗೋನ್ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ರಾಮನವಮಿ ಮೆರವಣಿಗೆಯಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದವು. ತರುವಾಯ, ಮಧ್ಯಪ್ರದೇಶ ಸರ್ಕಾರವು ಗಲಭೆಯಲ್ಲಿ ಭಾಗಿಯಾಗಿದ್ದವರು ಎ೦ದು ಹೇಳಲಾದವರ  ಮನೆಗಳನ್ನು ಬುಲ್ಡೋಜರ್‌ನಿಂದ ಕೆಡವಿಸಿದೆ. ಅಕ್ರಮ ಅತಿಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಈ ನೆಲಸಮವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಆದಾಗ್ಯೂ, ಈ ಅನಿಯಂತ್ರಿತ ಧ್ವಂಸಗಳನ್ನು ಒಂದು ನಿರ್ದಿಷ್ಟ ಸಮುದಾಯದ ಆಪಾದಿತ ಗಲಭೆಕೋರರ ವಿರುದ್ಧ ಮತ್ತು ಗಲಭೆಯ ನಂತರದ ತಕ್ಷಣವೇ ನಡೆಸಲಾಗುತ್ತಿದೆ ಎನ್ನ್ನುವದು ಸಾಮೂಹಿಕ ಶಿಕ್ಷೆಯನ್ನು ವಿಧಿಸುವುದು ಸರ್ಕಾರದ  ಉದ್ದೇಶ ಎ೦ಬುದನ್ನು ತೋರಿಸುತ್ತದೆ.

ಬುಲ್ಡೋಜರ್ ಯಂತ್ರಗಳು -  ಒರಟು ರಾಜ್ಯ ಶಕ್ತಿಯ ಹೊಸ ಸಂಕೇತಗಳು - ಕೇವಲ ಮನೆಗಳು ಮತ್ತು ಅಂಗಡಿಗಳನ್ನು ಕೆಡವುವುದಲ್ಲದೆ ಕಾನೂನು ಮತ್ತು ನಮ್ಮ ಸಾಂವಿಧಾನಿಕ ಆದೇಶವನ್ನು ಕೆಡಹುತ್ತಿವೆ. ಬುಲ್ಡೋಜರ್‌ಗಳ ಮೂಲಕ ತ್ವರಿತವಾಗಿ ಮತ್ತು ನಿರ್ದಯವಾಗಿ 'ನ್ಯಾಯ'ವನ್ನು ಪೂರೈಸುವ ಈ ಆಲೋಚನೆ ಉತ್ತರ ಪ್ರದೇಶದಲ್ಲಿ ಹೊರಹೊಮ್ಮಿತು. ಪೌರತ್ವ (ತಿದ್ದುಪಡಿ) ಕಾಯ್ದೆ, 2019 ರ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವಲ್ಲಿ ತೊಡಗಿಸಿಕೊಂಡಿರುವವರು ಎ೦ದು ಹೇಳಲಾದವರಿಂದ ಹಾನಿಯನ್ನು ವಸೂಲಿ ಮಾಡಲು ಆದೇಶಗಳನ್ನು ಜಾರಿಗೊಳಿಸಿತು. ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ಮರುಪಡೆಯುವಿಕೆ ಕಾಯಿದೆ 2020 ರ ಮೂಲಕ (Uttar Pradesh Recovery of Damages to Public and Private Property Act, 202) .ಈ ಪ್ರಕ್ರಿಯೆಯನ್ನು ಮತ್ತಷ್ಟು ಸಾಂಸ್ಥಿಕಗೊಳಿಸಲಾಗಿದೆ

ಇಂತಹ ವಿವೇಚನಾರಹಿತ  ರಾಜ್ಯ ಅಧಿಕಾರದ ಬಳಕೆಯು ವಿವಿಧ ದೇಶೀಯ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಹಲವಾರು ವ್ಯಾಖ್ಯಾನಕಾರರು ಈಗಾಗಲೇ ಗಮನಸೆಳೆದಿದ್ದಾರೆ. ಸರಿಯಾದ ಪ್ರಕ್ರಿಯೆ ಮತ್ತು ಕಾನೂನು ಅನುಮತಿಯಿಲ್ಲದೆ ಮನೆಗಳನ್ನು ನೆಲಸಮ  ಮಾಡುವ ಕ್ರಿಯೆಯು ಭಾರತದ ಅಂತರರಾಷ್ಟ್ರೀಯ ಕಾನೂನು ಬಾಧ್ಯತೆಗಳ ಉಲ್ಲಂಘನೆಯಾಗಿದೆ ಎಂದು ವಿವರಿಸುವುದು ನಮ್ಮ ಉದ್ದೇಶವಾಗಿದೆ.

ಸಾಕಷ್ಟು ವಸತಿಯ ಹಕ್ಕು

ವಸತಿ ಹಕ್ಕು ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಗುರುತಿಸಲ್ಪಟ್ಟ ಮೂಲಭೂತ ಹಕ್ಕು ಮಾತ್ರವಲ್ಲ, ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಚೌಕಟ್ಟಿನಡಿಯಲ್ಲಿ ( Universal Declaration of Human Rights (UDHR)) ಭಾರತಕ್ಕೆ ಬದ್ಧವಾಗಿರುವ ಉತ್ತಮವಾಗಿ ದಾಖಲಿಸಲ್ಪಟ್ಟ ಹಕ್ಕು. ಉದಾಹರಣೆಗೆ  ಮಾನವ ಹಖ್ಖುಗಳ ವಿಶ್ವ ಘೋಷಣೆಯ ೨೫ ನೇ ವಿಧಿಯಡಿಯಲ್ಲಿ “ಪ್ರತಿಯೊಬ್ಬನಿ(ಳಿ)ಗೂ  ತನ್ನ ಮತ್ತು ತನ್ನ ಕುಟುಂಬದ  ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸೂಕ್ತವಾದ ಜೀವನ ಮಟ್ಟಕ್ಕೆ ಆಹಾರ, ಬಟ್ಟೆ, ವಸತಿ ಮತ್ತು ವೈದ್ಯಕೀಯ ಆರೈಕೆ…ಸೇರಿದಂತೆ” ಹಕ್ಕುಗಳಿವೆ. 

ಇದಲ್ಲದೆ, ಆರ್ಥಿಕ ಸಾಮಾಜಿಕ ಮತ್ತು ಸಾ೦ಸ್ಕೃ ತಿಕ ಹಕ್ಕುಗಳ ಅ೦ತಾರಾಷ್ಟ್ರೀಯ ಒಪ್ಪ೦ದದ ( International Covenant on Economic, Social and Cultural Rights (ICESCR)) ವಿಧಿ  11.1 ರ ಅಡಿಯಲ್ಲಿ, ತನಗೆ ಮತ್ತು ತನ್ನ  ಕುಟುಂಬಕ್ಕೆ ಅವಶ್ಯಕವಾದ ಜೀವನ ಮಟ್ಟಕ್ಕೆ ಸಾಕಷ್ಟು ಆಹಾರ, ಬಟ್ಟೆ ಮತ್ತು ವಸತಿ ಮತ್ತು ಜೀವನದ ಪರಿಸರಗಳ ನಿರಂತರ ಸುಧಾರಣೆಗೆ  ಪ್ರತಿಯೊಬ್ಬರ ಹಕ್ಕನ್ನು ಗುರುತಿಸುತ್ತದೆ. ‘ಸಾಕಷ್ಟು ವಸತಿ’ ಹಕ್ಕುಗಳಂತಹ ಈ ಹಕ್ಕುಗಳ ಸಾಕ್ಷಾತ್ಕಾರವನ್ನು ಖಚಿತಪಡಿಸಿಕೊಳ್ಳಲು "ಸೂಕ್ತ ಕ್ರಮಗಳನ್ನು" ತೆಗೆದುಕೊಳ್ಳುವ ಜವಾಬ್ದಾರಿಯನ್ನು ಅದೇ ವಿಧಿಯಡಿಯಲ್ಲಿ ದೇಶಗಳು ಹೊಂದಿವೆ.

ICESCR ಅಡಿಯಲ್ಲಿ ಗುರುತಿಸಲ್ಪಟ್ಟ ಹಕ್ಕುಗಳು, ವಿಧಿ 4 ರ ಪ್ರಕಾರ, ಈ ಹಕ್ಕುಗಳ ಸ್ವರೂಪಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಮತ್ತು ಸಮಾಜದ ಸಾಮಾನ್ಯ ಕಲ್ಯಾಣವನ್ನು ಉತ್ತೇಜಿಸಲು ಮಾತ್ರ  ಮತ್ತು ಮಿತಿಗಳನ್ನುಕಾನೂನಿನ ಮೂಲಕ ನಿರ್ಧರಿಸಿದರೆ ಮಾತ್ರ ರಾಜ್ಯಗಳಿಂದ ನಿರ್ಬಂಧಿಸಬಹುದು. ಆದಾಗ್ಯೂ, ‘ಸಾಕಷ್ಟು ವಸತಿ’ ಹಕ್ಕುಗಳಂತಹ ಒಪ್ಪಂದದಲ್ಲಿ ನೀಡಲಾದ ಹಕ್ಕುಗಳ ಮೇಲೆ ವಿಧಿಸಲಾದ ಯಾವುದೇ ಮಿತಿಯು ಈ ಹಕ್ಕುಗಳ ನಾಶಕ್ಕೆ ಮಾರ್ಗ ತೋರಿಸುವುದು ಅಸಾಧ್ಯ. ಇದನ್ನು ICESCR ನ  ವಿಧಿ 5 ರಲ್ಲಿ ನಿಸ್ಸಂಶಯವಾಗಿ ಗುರುತಿಸಲಾಗಿದೆ.

ಜೊತೆಗೆ, ಅಂತರಾಷ್ಟ್ರೀಯ ಕಾನೂನು ಆಸ್ತಿಗೆ ವ್ಯಕ್ತಿಯ ಹಕ್ಕಿನಲ್ಲಿ ಅನಿಯಂತ್ರಿತ ಹಸ್ತಕ್ಷೇಪವನ್ನು ಸಹ ನಿಷೇಧಿಸುತ್ತದೆ. ಉದಾಹರಣೆಗೆ, UDHR ನ 12 ನೇ ವಿಧಿಯು "ಯಾರೂ ಅವರ ಗೌಪ್ಯತೆ, ಕುಟುಂಬ, ಮನೆ ಅಥವಾ ಪತ್ರವ್ಯವಹಾರದೊಂದಿಗೆ ನಿರಂಕುಶ ಹಸ್ತಕ್ಷೇಪಕ್ಕೆ ಅಥವಾ ಅವರ ಗೌರವ ಮತ್ತು ಖ್ಯಾತಿಯ ಮೇಲಿನ ದಾಳಿಗಳಿಗೆ ಒಳಗಾಗಬಾರದು" ಎಂದು ಹೇಳುತ್ತದೆ. 12 ನೇ ವಿಧಿಯು "ಅಂತಹ ಹಸ್ತಕ್ಷೇಪ ಅಥವಾ ದಾಳಿಗಳ ವಿರುದ್ಧ ಕಾನೂನಿನ ರಕ್ಷಣೆಗೆ ಪ್ರತಿಯೊಬ್ಬರಿಗೂ ಹಕ್ಕಿದೆ" ಎಂದು ಸಹ ಪ್ರತಿಪಾದಿಸುತ್ತದೆ. ಇದೇ ಹಕ್ಕನ್ನು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದದ  (International Covenant on Civil and Political Rights - ICCPR) 17 ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿದೆ. 17ನೇ ವಿಧಿಯು ಮುಂದೆ ಪ್ರತಿಯೊಬ್ಬರಿಗೂ ಏಕಾಂಗಿಯಾಗಿ ಮತ್ತು ಇತರರೊಂದಿಗೆ ಸಹವಾಸದಲ್ಲಿ ಆಸ್ತಿಯನ್ನು ಹೊಂದುವ ಹಕ್ಕನ್ನು ಹೊಂದಿದೆ ಮತ್ತು ಯಾರೂ ತನ್ನ ಆಸ್ತಿಯಿಂದ ನಿರಂಕುಶವಾಗಿ ವಂಚಿತರಾಗಬಾರದು ಎಂದು ಒದಗಿಸುತ್ತದೆ. ಹೀಗಾಗಿ, ವ್ಯಕ್ತಿಯ ಆಸ್ತಿಯೊಂದಿಗೆ ಅನಿಯಂತ್ರಿತ ಹಸ್ತಕ್ಷೇಪವು ICCPR ನ ಸಂಪೂರ್ಣ ಉಲ್ಲಂಘನೆಯಾಗಿದೆ.

ಬಲವಂತದ ಹೊರಹಾಕುವಿಕೆಗಳು

ಮಾನವ ಹಕ್ಕುಗಳ ಹೈ ಕಮಿಷನರ್ (Office of the High Commissioner for Human Rights  - OHCHR) ಕಛೇರಿಯು ಸಾಮಾನ್ಯವಾಗಿ ಯುನೈಟೆಡ್ ನೇಷನ್ಸ್ (UN) ಮಾನವ ಹಕ್ಕುಗಳ ಕಚೇರಿ ಎಂದು ಕರೆಯಲ್ಪಡುತ್ತದೆ - ಅದರ ನ್ಯಾಯಬಧ್ಧ ಧ್ಯೇಯವು  ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಖಾತರಿಪಡಿಸಲಾದ ಮಾನವ ಹಕ್ಕುಗಳನ್ನು ಉತ್ತೇಜಿಸುವುದು ಮತ್ತು ರಕ್ಷಿಸುವುದು - ಇದು ‘ಸಾಕಷ್ಟು ವಸತಿ’ ಹಕ್ಕಿನ ವಿಷಯವನ್ನು ವಿವರಿಸಿದೆ.

UN ಮಾನವ ಹಕ್ಕುಗಳ ಕಚೇರಿಯ ಪ್ರಕಾರ, ‘ಸಾಕಷ್ಟು ವಸತಿ’ ಹಕ್ಕಿನ ಅವಿಭಾಜ್ಯ ಅಂಶವೆಂದರೆ 'ಬಲವಂತದ ಹೊರಹಾಕುವಿಕೆ ವಿರುದ್ಧ ರಕ್ಷಣೆ'. ICESCR ನ ಆರ್ಟಿಕಲ್ 11.1 ರಲ್ಲಿ ನೀಡಲಾದ ‘ಸಾಕಷ್ಟು ವಸತಿ’ ಹಕ್ಕನ್ನು ಬೆಳಸುತ್ತ, UN ಮಾನವ ಹಕ್ಕುಗಳ ಕಛೇರಿಯು 'ಬಲವಂತದ ಹೊರಹಾಕುವಿಕೆ’ಯನ್ನು 'ಮನೆಗಳು ಮತ್ತು/ಅಥವಾ ಭೂಮಿಯಿಂದ ವ್ಯಕ್ತಿಗಳು, ಕುಟುಂಬಗಳು ಮತ್ತು/ಅಥವಾ ಸಮುದಾಯಗಳ ಇಚ್ಛೆಗೆ ವಿರುದ್ಧವಾಗಿ ಕಾನೂನು ಅಥವಾ ಇತರ ರಕ್ಷಣೆಯ ಸೂಕ್ತ ರೂಪಗಳನ್ನು ಒದಗಿಸದೆ ಮತ್ತು ಲಭ್ಯತೆಯಿಲ್ಲದೆ  ಶಾಶ್ವತ ಅಥವಾ ತಾತ್ಕಾಲಿಕ ತೆಗೆದುಹಾಕುವಿಕೆ' ಎಂದು ವ್ಯಾಖ್ಯಾನಿಸುತ್ತದೆ. ಅವರು ‘ಸಾಕಷ್ಟು ವಸತಿ’ಯ ಹಕ್ಕು ಒಬ್ಬರ ಮನೆ, ಗೌಪ್ಯತೆ ಮತ್ತು ಕುಟುಂಬದೊಂದಿಗೆ ಅನಿಯಂತ್ರಿತ ಹಸ್ತಕ್ಷೇಪದ ವಿರುಧ್ಧ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ.

ಮಧ್ಯಪ್ರದೇಶ ಸರ್ಕಾರವು ಆಪಾದಿತ ಗಲಭೆಕೋರರ ಮನೆಗಳನ್ನು ಬುಲ್ಡೋಜಿಂಗ್ ಮಾಡುವುದು ಬಲವಂತದ ಹೊರಹಾಕುವಿಕೆ ಮತ್ತು ವ್ಯಕ್ತಿಯ ಮನೆಗೆ ಅನಿಯಂತ್ರಿತ ಹಸ್ತಕ್ಷೇಪಕ್ಕೆ ಸಮನಾಗಿರುತ್ತದೆ, ಹೀಗಾಗಿ ICESCR ನ ಆರ್ಟಿಕಲ್ 11.1 ರ ಉಲ್ಲಂಘನೆಯಾಗಿದೆ. ಬಲವಂತದ ಹೊರಹಾಕುವಿಕೆಯು ಕಾನೂನಿನ ಪ್ರಕಾರ ಮತ್ತು ಮಾನವ ಹಕ್ಕುಗಳ ಒಪ್ಪಂದಗಳ ನಿಬಂಧನೆಗಳಿಗೆ ಅನುಗುಣವಾಗಿದೆ ಎಂದು ತೋರಿಸಿದರೆ ಮಾತ್ರ ಈ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಸಮರ್ಥಿಸಿಕೊಳ್ಳಬಹುದು. ಅಲ್ಲದೆ, ರಾಜ್ಯದ ಕ್ರಮವು ಅಗತ್ಯವಾಗಿದೆಯೇ ಮತ್ತು ಪ್ರಮಾಣಾನುಗುಣವಾಗಿದೆಯೇ ಎಂಬಂತಹ ಇತರ ಅವಶ್ಯಕತೆಗಳನ್ನು ಪರಿಶೀಲಿಸಬೇಕಾಗುತ್ತದೆ. ಹೊರಹಾಕುವಿಕೆಗೆ ಆಯಿಕೆಮಾಡಿದ  ಸಮಯವನ್ನು ಪರಿಗಣಿಸಿದರೆ ಈ ಬಲವಂತದ ಹೊರಹಾಕುವಿಕೆಗಳನ್ನು ಕಾನೂನುಬದ್ಧವಾಗಿ ಸಮರ್ಥಿಸಿಕೊಳ್ಳುವುದು ಅಸಂಭವವಾಗಿದೆ.

ಈ ನೆಲಸಮಗಳು ಅಕ್ರಮ ಅತಿಕ್ರಮಣಗಳ ವಿರುದ್ಧವಾಗಿದ್ದರೆ, ಅಧಿಕಾರಿಗಳು ಗಲಭೆ ನಡೆದ ದಿನವೇ ತೆರವು ಆದೇಶವನ್ನು ಪಡೆದಿದ್ದಾರೆಯೇ ಅಥವಾ ತೆರವು ಮಾಡುವ ಆದೇಶವನ್ನು ಮೊದಲೇ ಹೊಂದಿದ್ದು, ಆದರೆ ಗಲಭೆಯ ನಂತರವೇ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.  ಅಲ್ಲದೆ, ತೆರವು ಆದೇಶಗಳು ಮುಸ್ಲಿಮರು  ಇರುವ ಪ್ರದೇಶಕ್ಕೆ ಸೀಮಿತವಾಗಿದೆಯೇ?

ನ್ಯಾಯಾಂಗ ಸಂಯೋಜನೆ

ಮೇಲಾಗಿ, ಮೇಲೆ ಗುರುತಿಸಲಾದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ನ್ಯಾಯಾಂಗವಾಗಿ ಸಂಯೋಜಿಸಿದೆ. ಸುಪ್ರೀಂ ಕೋರ್ಟ್ ಬಚನ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್, ವಿಶಾಕಾ ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ, ಮತ್ತು ಇತ್ತೀಚೆಗೆ ಪ್ರಸಿದ್ಧ ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣಗಳಲ್ಲಿ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸುವ ಮೂಲಭೂತ ಹಕ್ಕುಗಳನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನೊಂದಿಗೆ ಅವರ ಅನುಸರಣೆಯನ್ನು ಹೆಚ್ಚಿಸುವ  ರೀತಿಯಲ್ಲಿ  ಓದಬೇಕು ಮತ್ತು ಅರ್ಥೈಸಿಕೊಳ್ಳಬೇಕು ಎಂಬ ತತ್ವವನ್ನು ರೂಪಿಸಿದೆ. 

ಭಾರತದ ಸಾಂವಿಧಾನಿಕ  ಸುವ್ಯವಸ್ಥೆಯ ಪಾಲಕರಾಗಿ, ಕಾರ್ಯಾಂಗದ ಅನಿಯಂತ್ರಿತ ಅಧಿಕಾರದ ವ್ಯಾಯಾಮದ ಮೇಲೆ ಕಾರ್ಯನಿರ್ವಹಿಸಲು ಮತ್ತು ಅಗತ್ಯ ತಪಾಸಣೆಗಳನ್ನು ತಡ ಮಾಡದೆ ವಿಧಿಸಲು ನ್ಯಾಯಾಂಗಕ್ಕೆ ಇದು ಸಕಾಲವಾಗಿದೆ. ರಾಷ್ಟ್ರೀಯತಾವಾದಿ-ಜನಪ್ರಿಯತಾವಾದಿ ಪ್ರವಚನವನ್ನು ಎದುರಿಸಲು ನ್ಯಾಯಾಲಯಗಳು ಅಂತರರಾಷ್ಟ್ರೀಯ ಕಾನೂನನ್ನು ಬಳಸಬೇಕು.

(ಪ್ರಭಾಷ್ ರಂಜನ್ ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅಮನ್ ಕುಮಾರ್ ಅವರು ಐಎಫ್‌ಐಎಂ ಕಾನೂನು ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ)

 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು