ಪೋಸ್ಟ್‌ಗಳು

ನವೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
    ಬಡತನ ಮತ್ತು ಸಂಪತ್ತಿನ ಜಾತಿ ಆಯಾಮಗಳು   ಆದಾಯ ಮತ್ತು ಆಸ್ತಿಗಳ ಕೊರತೆಗಳ ಹೆಚ್ಚಿನ ಪ್ರಮಾಣ ಹಿಂದುಳಿದ ಜಾತಿಗಳನ್ನು ದುರ್ಬಲಗೊಳಿಸುತ್ತವೆ. ಮುಂದಿನ ದಶವಾರ್ಷಿಕ ಜನಗಣತಿಯಲ್ಲಿ ಜಾತಿಗಳ ದತ್ತಾಂಶವನ್ನು ಸೇರಿಸುವ ಕುರಿತು ದೇಶವು ಚರ್ಚಿಸುತ್ತಿರುವಾಗ, ಕಳೆದ ತಿಂಗಳು ಬಿಡುಗಡೆಯಾದ ಎರಡು ವರದಿಗಳು ಹಿಂದುಳಿದ ಜಾತಿಗಳು ಎದುರಿಸುತ್ತಿರುವ ಅಸಮಾನತೆಗಳನ್ನು ಎತ್ತಿ ತೋರಿಸುತ್ತವೆ.  The Oxford Poverty and Human Development Initiative and the United Nations Development Programme, ( ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ನೇತ್ರತ್ವ , ಮತ್ತು ಸ೦ಯುಕ್ತ ರಾಷ್ಟ್ರ ಸ೦ಸ್ಥೆಯ ಅಭಿವೃ ಧ್ಧಿ ಯೋಜನೆ) ಪ್ರಕಟಿಸಿದ “Global Multidimensional Poverty Index (GMPI), 2021,” “ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಜಿಎಂಪಿಐ), 2021” ಎಂಬ ಶೀರ್ಷಿಕೆಯ ಮೊದಲ ವರದಿಯು  ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ)  ಮತ್ತು ಇತರೆ ಹಿಂದುಳಿದ ವರ್ಗ (OBC-ಒ ಬಿ ಸಿ) ವಿಭಾಗಗಳ ಹೆಚ್ಚಿನ ಬಡತನವನ್ನು ಬಹಿರಂಗಪಡಿಸುತ್ತದೆ.  ರಾಷ್ಟ್ರೀಯ ಅಂಕಿಅಂಶ ಕಚೇರಿ ಪ್ರಕಟಿಸಿದ “All-India Debt and Investment Survey (AIDIS), 2019,”  “ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆ, 2019” ಎಂಬ ಶೀರ್ಷಿಕೆಯ ಎರಡನೇ ವರದಿಯು ಈ ಸಂಶೋಧನೆಗಳನ್ನು ಪುಷ್ಟೀಕರಿಸುತ್ತದೆ. ಇದು ಎಸ್‌ಟಿಗಳು, ಎಸ್‌ಸಿಗಳು ಮತ
ಇಮೇಜ್
  ಭಾರತದ ನಾಗರಿಕರಿಗೆ ಮುಕ್ತ ಪತ್ರ ನಾಗರಿಕ ಸಮಾಜ: ರಾಜ್ಯದ ಶತ್ರುವೇ? 28 ನವೆಂಬರ್ 2021 ಆತ್ಮೀಯ ಸಹ ನಾಗರಿಕರೇ, ನಾವು ನಮ್ಮ ವೃತ್ತಿಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ ಅಖಿಲ ಭಾರತ ಮತ್ತು ಕೇಂದ್ರ ಸೇವೆಗಳ ಮಾಜಿ ನಾಗರಿಕ ಸೇವಕರ ಗುಂಪು. ಒಂದು ಗುಂಪಿನಂತೆ, ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಆದರೆ ನಿಷ್ಪಕ್ಷಪಾತತೆ, ತಟಸ್ಥತೆ ಮತ್ತು ಭಾರತದ ಸಂವಿಧಾನಕ್ಕೆ ಬದ್ಧತೆಯನ್ನು ಪಾಲಿಸುತ್ತೇವೆ. ಕಳೆದ ಕೆಲವು ವರ್ಷಗಳಿಂದ ದೇಶದ ಆಡಳಿತದ ದಿಕ್ಕಿನಲ್ಲಿ ಗೊಂದಲದ ಪ್ರವೃತ್ತಿಯನ್ನು ಗಮನಿಸಬಹುದಾಗಿದೆ. ನಾವು ಬದಲಾಯಿಸಲಾಗದವು ಎಂದು ಏನನ್ನು ಸ್ವೀಕರಿಸಿಕೊಂಡಿದ್ದೇವೋ ಆ  ನಮ್ಮ ಗಣರಾಜ್ಯದ ಮೂಲಭೂತ ಮೌಲ್ಯಗಳು ಮತ್ತು ಆಡಳಿತದ ಪಾಲಿಸಬೇಕಾದ ನಿಯಮಗಳು, ಇ೦ದು ಒ೦ದು ದುರಹಂಕಾರಿ, ಬಹುಸಂಖ್ಯಾತ ರಾಜ್ಯಾಡಳಿತದ  ನಿರಂತರ ಆಕ್ರಮಣಕ್ಕೆ ಒಳಗಾಗಿವೆ. ಜಾತ್ಯತೀತತೆ ಮತ್ತು ಮಾನವ ಹಕ್ಕುಗಳ ಪವಿತ್ರ ತತ್ವಗಳು ಅವಹೇಳನಕಾರಿ ವ್ಯತಿರಿಕ್ತ ಅರ್ಥವನ್ನು ಪಡೆದುಕೊಂಡಿವೆ. ಈ ತತ್ವಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ನಾಗರಿಕ ಸಮಾಜದ ಕಾರ್ಯಕರ್ತರು ನಮ್ಮ ಶಾಸನ ಪುಸ್ತಕವನ್ನು ಕಲ೦ಕಗೊಳಿಸುವ ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲು ಮತ್ತು ಅನಿರ್ದಿಷ್ಟಕಾಲ ಸೆರೆಹಿಡಿಯುವುದಕ್ಕೆ ಒಳಗಾಗುತ್ತಾರೆ. ಅವರನ್ನು ರಾಷ್ಟ್ರವಿರೋಧಿ ಮತ್ತು ವಿದೇಶಿ ಏಜೆಂಟ್‌ಗಳೆಂದು ಅಪಖ್ಯಾತಿಗೊಳಿಸಲು ಆಡಳಿತ ಸ್ಥಾಪನೆಯು ತನ