ಪೋಸ್ಟ್‌ಗಳು

ಅಕ್ಟೋಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ‘ಇದು ಭಾರತದ ಅತ್ಯಂತ ಒತ್ತಡದ ನಗರ’: ಕೋಚಿಂಗ್ ರಾಜಧಾನಿ ಕೋಟಾದ ಕರಾಳ ಮುಖ ಆತ್ಮಹತ್ಯೆಗಳು ಪ್ರವೇಶ ಪರೀಕ್ಷೆಗಳಿಗೆ ನೂಕುನುಗ್ಗಲು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆ ಹೇರುವ ಕಠೋರ ಸಂಸ್ಕೃತಿಯ ಮೇಲೆ ಗಮನ ಸೆಳೆಯುತ್ತವೆ ಹನ್ನಾ ಎಲ್ಲಿಸ್-ಪೀಟರ್ಸನ್ ಮತ್ತು ಶೇಖ್ ಅಜೀಜುರ್ ರೆಹಮಾನ್ ಕೋಟಾದಲ್ಲಿ ಸೋಮ 9 ಅಕ್ಟೋಬರ್ 2023  ಲ೦ಡನ್ನಿನ ‘ದಿ ಗಾರ್ಡಿಯನ್’ ದಿನಪತ್ರಿಕೆ.  ಪ್ರತಿ ವರ್ಷ ಕೋಟಾಕ್ಕೆ ಬ೦ದು ಸೇರುವ 300,000 ವಿದ್ಯಾರ್ಥಿಗಳ ಮಟ್ಟಿಗೆ, ಭಾರತದ ರಾಜಸ್ಥಾನದ ಈ ಬಿಸಿ, ಧೂಳಿನ ನಗರವು ಅಧ್ಯಯನಸಾಧನೆಯ ಪ್ರದರ್ಶನದ  ‘ಪ್ರೆಷರ್  ಕುಕ್ಕರ್ ’ ಆಗಿದೆ. ಅಲ್ಲಿ ದಿನಕ್ಕೆ 18 ಗಂಟೆಗಳ ಅಧ್ಯಯನವು ಸಾಮಾನ್ಯವಾಗಿದೆ . ಇಲ್ಲಿ   ಪರೀಕ್ಷೆಯ ಅಂಕಗಳು ಮಾತ್ರ ಗಣನಾರ್ಹ . ಕೆಲವರು ಭಾರತದ ಮುಂದಿನ ಪೀಳಿಗೆಯ ವೈದ್ಯರು ಮತ್ತು ಇಂಜಿನಿಯರ್‌ಗಳಾಗುತ್ತಾರೆ; ಆದರೆ ಇತರರಿಗೆ, ದುರದೃಷ್ಟದಿಂದ ಈ  ಅನುಭವ ಅವರನ್ನು ಮುರಿಯುತ್ತದೆ. ಕೋಟಾ ಇತ್ತೀಚಿನ ದಶಕಗಳಲ್ಲಿ ಭಾರತದ "ಕೋಚಿಂಗ್ ಕ್ಯಾಪಿಟಲ್" ಎಂದು ಹೆಸರುವಾಸಿಯಾಗಿದೆ, ಅಲ್ಲಿ ಸುಮಾರು ಒಂದು ಡಜನ್ ತಜ್ಞ ಸಂಸ್ಥೆಗಳು ವೈದ್ಯಕೀಯ  ಶಾಸ್ತ್ರ  ಅಥವಾ ಇಂಜಿನಿಯರಿಂಗ್ ಕಾಲೇಜಿಗೆ  ಪ್ರವೇಶಕ್ಕೆ ಅತ್ಯ೦ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತೀವ್ರವಾದ ಅಧ್ಯಯನ ನೀಡುತ್ತಿವೆ. 1.4 ಶತಕೋಟಿ ಜನರಿರುವ ಭಾರತದ ಜನಸಂಖ್ಯೆಯ 65%  ಜನರು 35 ವರ್ಷಕ್ಕಿಂತ ಕಡಿಮೆ ವ
ಇಮೇಜ್
  ೪೮ ಪುಟಗಳ  ಮಕ್ಕಳ ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’   ಅ೦ದವಾದ ೪೮ ಪುಟಗಳ  ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’. ಇದರ ಕೆಲವು ಪ್ರತಿಗಳು ಲಭ್ಯವಿವೆ. ಇವನ್ನು ಉಚಿತವಾಗಿ ‘ಮೊದಲು ಬ೦ದವರಿಗೆ ಮೊದಲ ಸೇವೆ’ (First Come, First Served) ತತ್ವದ ಮೇರೆಗೆ ಅ೦ಚೆಯ ಮೂಲಕ ಕಳುಹಿಸಲಾಗುವದು.  ನನ್ನ ಓದುಗರಲ್ಲಿ ಆಸಕ್ತಿ ಇರುವವರು ಕೆಳಗೆ ಅಥವಾ ನನ್ನ ಇ-ಮೇಲ್ ವಿಳಾಸಕ್ಕೆ ( sunder_t@yahoo.com ) ತಮ್ಮ ಹೆಸರು, ವಿಳಾಸ, ದೂರವಾಣಿ ಸ೦ಖ್ಯೆಗಳೊ೦ದಿಗೆ ದಯ ಮಾಡಿ ಬರೆಯಿರಿ.