ಪೋಸ್ಟ್‌ಗಳು

ಆಗಸ್ಟ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ  - ೧೦ ಪುಸ್ತಕಗಳ ಪರಿಚಯ ಪ್ರತಿ ವರ್ಷ,  ೨ ದಶಲಕ್ಷಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೆ ಕಳೆದ ೫೦೦ ವರ್ಷಗಳಲ್ಲಿ  ಹೊರಬಂದಿರುವ ಶತಕೋಟಿ ಶೀರ್ಷಿಕೆಗಳಲ್ಲಿ, ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು  ಮಾತ್ರ ನಿಜವಾಗಿಯೂ ಮಾನವಕುಲದ ಮಾರ್ಗವನ್ನು ಬದಲಾಯಿಸಿವೆ . ಈ ಹೊತ್ತಿಗೆಗಳು  ಕೇವಲ ಜನಪ್ರಿಯವಾಗಿರಲಿಲ್ಲ; ಈ ಕೃತಿಗಳು  ಅಧಿಕಾರಕ್ಕೆ ಸವಾಲು ಹಾಕಿದವು , ಸಮಾಜಗಳನ್ನು ಮರುರೂಪಿಸಿದವು,  ದೈವ ವಿಶ್ವಾಸ ಪಧ್ಧತಿಗಳನ್ನು ಪ್ರಶ್ನಿಸಿದವು, ರಾಜಕೀಯವನ್ನು ಪುನರ್ ವ್ಯಾಖ್ಯಾನಿಸಿದಲ್ಲದೇ  ಮನುಷ್ಯರು ಯೋಚಿಸುವ ರೀತಿಯನ್ನು ಪರಿವರ್ತಿಸಿದವು.  ನನ್ನ ಈ ವೈಯಕ್ತಿಕ   ಅತ್ಯಂತ ಪ್ರಭಾವಶಾಲಿ   ಪುಸ್ತಕಗಳು ಐತಿಹಾಸಿಕ  ಬದಲಾವಣೆಗಳ  ಕಾಲಗಳನ್ನು ಬದುಕುಳಿದರಲ್ಲದೆ  ತಾವೇ ಕಾಲದ ಚಲನೆಯ ವಿನ್ಯಾಸವನ್ನು   ವ್ಯಾಖ್ಯಾನಿಸಿವೆ . ಸಮಾಜದ ಬಗ್ಗೆ ೨೪೦೦ ವರ್ಷಗಳ ಹಳೆಯ ಕೈಪಿಡಿ  - ದಿ ರಿಪಬ್ಲಿಕ್ ಪ್ರಥಮ ಸ್ಥಾನದಲ್ಲಿದೆ  ಸಾಮಾನ್ಯ ಯುಗಕ್ಕೆ  ೩೭೫ ವರ್ಷ  ಮೊದಲು (ಇದನ್ನು ಹಿಂದೆ ‘ಕ್ರಿಸ್ತು ಪೂರ್ವ’ ಎಂದು ಹೇಳಲಾಗುತ್ತಿತ್ತು ) ಪ್ಲೇಟೋ  ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಪೊಲಿಟಿಯ   (POLITEIEA  - ಇಂಗ್ಲಿಷ್ ಅನುವಾದದಲ್ಲಿ ‘ದಿ  ರಿಪಬ್ಲಿಕ್’ -...