ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
   ಮೋದಿ ನೇತೃತ್ವದಲ್ಲಿ ‘ಒಂದೇ ರಾಷ್ಟ್ರ’ “ನರೇಂದ್ರ ಮೋದಿಯವರು ಭಾರತದ ಉಗ್ರ ಪ್ರಾದೇಶಿಕ ವಿಭಜನೆಗಳನ್ನು ವಿಸ್ತರಿಸುತ್ತಿದ್ದಾರೆ ದಕ್ಷಿಣದ ರಾಜ್ಯಗಳು ಹೆಚ್ಚು ತುಳಿತಕ್ಕೊಳಗಾಗುತ್ತಿವೆ” - ದಿ ಇಕಾನಮಿಸ್ಟ್ . ಲ೦ಡನ್ನಿನಿ೦ದ ಪ್ರಕಟವಾಗುವ ‘ದಿ ಇಕಾನಮಿಸ್ಟ್’ ವಾರಿಕೆ ಬಹಳ ಪ್ರಸಿಧ್ಧ ಪತ್ರಿಕೆ.   13 ಸೆಪ್ಟೆ೦ಬರಿನ (2023)ರ ದಿನಾ೦ಕದ ವರದಿಯಲ್ಲಿ  ‘ದಿ ಇಕಾನಮಿಸ್ಟ್’  ಪತ್ರಿಕೆ ‘ಮೋದಿ ನೇತೃತ್ವದಲ್ಲಿ ಒಂದೇ ರಾಷ್ಟ್ರ’  ಎನ್ನುವ ಶೀರ್ಷಕದಡಿಯಲ್ಲಿ ಭಾರತದಲ್ಲಿ ಬೆಳೆಯುತ್ತಿರುವ ಉತ್ತರ - ದಕ್ಷಿಣ ವ್ಯತ್ಯಾಸಗಳ ಬಗ್ಗೆ ಚರ್ಚಿಸಿದೆ. ನರೇಂದ್ರ ಮೋದಿಯವರು ಭಾರತದ ಉಗ್ರ ಪ್ರಾದೇಶಿಕ ವಿಭಜನೆಗಳನ್ನು ವಿಸ್ತರಿಸುತ್ತಿದ್ದಾರೆ ಎ೦ದೂ, ದಕ್ಷಿಣದ ರಾಜ್ಯಗಳು ಹೆಚ್ಚು ತುಳಿತಕ್ಕೊಳಗಾಗುತ್ತಿವೆ ಎ೦ದೂ ಲೇಖನದಲ್ಲಿ ಸೂಚಿಸಲಾಗಿದೆ.‘ದಿ ಇಕಾನಮಿಸ್ಟ್’ ಪ್ರಕಾರ    ವಿಶಾಲ ಮತ್ತು ವೈವಿಧ್ಯಮಯ ಭಾರತ ದೇಶವನ್ನು ಕೇಂದ್ರೀಕರಿಸಲು ಮತ್ತು ಏಕರೂಪಗೊಳಿಸುವ  ತಮ್ಮ ಇರಾದೆಯನ್ನು ಮೋದಿ ಪ್ರಾರ೦ಭದಿ೦ದಲೂ  ಸ್ಪಷ್ಟಪಡಿಸಿದ್ದಾರೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯು ಭಾರತವನ್ನು ಯುರೋಪಿಯನ್ ರಾಷ್ಟ್ರ-ರಾ ಜ್ಯ (‘Nation-State’)ದಂತೆ ಪರಿವರ್ತಿಸಲು ಪ್ರಾರಂಭಿಸಿದೆ. ಆ ಪ್ರಯಾಸ  ಕೇಂದ್ರ ಸರ್ಕಾರವನ್ನು ಬಲಪಡಿಸುವುದು ಮತ್ತು ಭಾರತ-ಪೂರ್ಣ  ಹಿಂದೂ-ರಾಷ್ಟ್ರೀಯ ಗುರುತನ್ನು ಉತ್ತೇಜಿಸುವುದು ಎರಡನ್ನೂ ಒಳಗೊಂಡಿರುತ್ತದೆ. ಭಾರತವು "ಒಂದು ರಾ