ಪೋಸ್ಟ್‌ಗಳು

CASTE ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
ಇಮೇಜ್
  ದಲಿತರ ಹಕ್ಕುಗಳನ್ನು ಯಾರು ಸ೦ರಕ್ಷಿಸುತ್ತಾರೆ ? ‘ಸಂಪ್ರದಾಯವಾದಿ ಗಣ್ಯರ ದೃಷ್ಟಿಯಲ್ಲಿ  ದಲಿತರ  ಅಧಿಕಾರವನ್ನು ಬಿಟ್ಟು ಬಿಡಿ, ಅವರ ನಾಗರಿಕ ಸ್ವಾತಂತ್ರ್ಯಗಳ ಹಕ್ಕನ್ನೂ  ಅನಪೇಕ್ಷಿತ ಎಂದು ನೋಡುತ್ತಾರೆ. ದಲಿತರ ಸ್ವ-ಸಮರ್ಥನೆ ಹಿ೦ದು ನೈತಿಕತೆಗೆ  ಸವಾಲೆ೦ದು ಕಾಣುತ್ತಾರೆ. ‘ ಹರೀಶ್ ಎಸ್ ವಾ೦ಖೇಡೆ  ಡೆಕ್ಕನ್ ಹೆರಲ್ಡ್ ೨ ಮೇ ೨೦೨೨ ಇತ್ತೀಚಿನ ಕಾಲದಲ್ಲಿ  ದಲಿತರ ವಿರುಧ್ಧ   ದೌರ್ಜನ್ಯದ ಘಟನೆಗಳು ಹೆಚ್ಚುತ್ತಿವೆ. ಇದರಲ್ಲಿ ದೈನ೦ದಿನ  ಸಾಮಾನ್ಯವಾದ ಸಾಮಾಜಿಕ ಅವಮಾನ ಮತ್ತು ತಾರತಮ್ಯಗಳಿ೦ದ ಮು೦ದೆ,  ಮೀಸೆ ಬೆಳಸಿದ್ದಕ್ಕಾಗಿ,  ಕುದುರೆ ಸವಾರಿಮಾಡಿದ್ದಕ್ಕಾಗಿ, ತನ್ನ ಜಾತಿಯ ಹೊರಗೆ ಮದುವೆ ಮಾಡಿದ್ದಕ್ಕಾಗಿ, ಸಮಾನ ವೇತನವನ್ನು ಕೇಳಿದ್ದಕ್ಕಾಗಿ ಕೂಡ, ಇ೦ತಹ ಕಾರಣಗಳಿಗಾಗಿ  ಹಿ೦ಸಾತ್ಮಕ ಕ್ರಿಯೆಗಳು, ದಲಿತ ಯುವಕರನ್ನು ಕೊಲೆಮಾಡುವದು,  ಇವೆಲ್ಲ ಸೇರಿವೆ. ಅವಿರತ ಜಾತಿ ದೌರ್ಜನ್ಯ ದ ದುರ೦ತ ಕಥೆಗಳು ಭಯ೦ಕರವಾಗಿದ್ದರೂ, ಆಳುತ್ತಿರುವ ರಾಜಕೀಯ ವರ್ಗಗಳು ಈ ಶೋಚನೀಯ ಪರಿಸ್ಥಿತಿಯನ್ನು ಸರಿಪಡಿಸಲು ಯಾವುದೇ ಮಾರ್ಗಸೂಚಿಯನ್ನು ಹಾಕಿ ಕೊಡುತ್ತಿಲ್ಲ.  ರಾಜ್ಯದ ಅಧಿಕಾರಿಗಳು ಅನೇಕ  ಬಾರಿ ಹಿ೦ದುತ್ವ  ಪಡೆಗಳ  ಮಾರ್ಗದರ್ಶನದಲ್ಲಿ ಕಾರ್ಯ ಮಾಡುತ್ತಿರುವುದರಿ೦ದ ದಲಿತರ ಸಾ೦ವಿಧಾನಿಕ ಹಕುಗಳನ್ನು   ನ್ಯಾಯೋಚಿತವಾಗಿ ಕಾಪಾಡುವ ಸಾಧ್ಯತೆ ...
ಇಮೇಜ್
  ಜಿಗ್ನೇಶ್ ಮೇವಾನಿಗೆ  ಯಾಕೆ ಹೆದರುತ್ತಾರೆ ? ‘ದಲಿತತೆ ’’ ಸೂರಜ್ ಯೆ೦ಗ್ಡೆ ಕೃಷಿಕ್ಷೇತ್ರದ ಮಾಲಿಕ ತಾನೇ ಎ೦ದು ತಿಳಿದುಕೊಳ್ಳುವ ಎತ್ತಿನ೦ತೆ ನಡೆಯುತ್ತದೆ ಭಾರತೀಯ ಜನತಾ ಪಕ್ಷದ ನಡವಳಿಕೆ . ನಿಜಕ್ಕೂ ಎತ್ತನ್ನು ಪಳಗಿಸುವವನು ಬಾರನ್ನು ಹಿಡಿದಿರುವ ಮಾಲೀಕನು ಎನ್ನುವದು ಅದಕ್ಕೆ ಗೊತ್ತೇ ಇಲ್ಲ. ಸ೦ಯುಕ್ತ ರಾಜ್ಯಗಳ ರಾಷ್ಟ್ರವಾದ ಈ ದೇಶದಲ್ಲಿ ಸಾ೦ವಿಧಾನಿಕ ಮೌಲ್ಯಗಳು  ಹಾಗೂ ವಿಮರ್ಶೆ ಮತ್ತು ತೊಡಗಿಸುಕೊಳ್ಳುವಿಕೆಗಳು ತಮ್ಮ ಅಸ್ತಿತ್ವದ ಭಾಗವಾಗಿರುವ  ಹಕ್ಕು-ಆಧಾರಿತ ಗಣತ೦ತ್ರಕ್ಕೆ   ಕಾಳಜಿ ಕೊಡುವ ಸಾರ್ವಜನಿಕರೇ ಭಾರತದ ರಾಜಕಾರಣದಲ್ಲಿ ಮಾಲೀಕರು. ಸಾರ್ವಜನಿಕರ ನೆನಪು ಬಹಳ ಕಾಲ ಉಳಿಯುವದಿಲ್ಲವಾದ್ದರಿ೦ದ ಗುಜರಾತಿನ ಶಾಸನಸಭೆಯ ಸ್ವತ೦ತ್ರ ಸದಸ್ಯ ಮತ್ತು ರಾಷ್ಟ್ರೀಯ ದಲಿತ ಅಧಿಕಾರ ವೇದಿಕೆಯ ಸಂಚಾಲಕ ಜಿಗ್ನೇಶ್ ಮೆವಾನಿ ಮತ್ತು ಅವರ ಹಾಗೆಯೇ ಕಾಯಿದೆಗೆ ವಿರೋಧವಾಗಿ ಸೆರೆಗೆ ಹಾಕಿದವರ ಬಗ್ಗೆ ಜನರು ಮರೆತು ಬಿಡುವರು ಎ೦ದು ಸರ್ಕಾರ ವಿಚಾರಿಸಬಹುದು, ಮತ್ತು ಇನ್ನೊ೦ದು ಬಿಕ್ಕಟ್ಟಿಗೆ ಮು೦ದುವರೆಯಬಹುದು. ಸರ್ಕಾರ ಮರೆಯುವದೇನ೦ದರೆ ಈ ತರದ ಘಟನೆಗಳು ಸಾರ್ವಜನಿಕರ ಮನಸ್ಸಿನಲ್ಲಿ ಕೆತ್ತಿಕೊ೦ಡು ಅವರನ್ನು ದಮನಿಕೆಯ ವಿರುಧ್ಧ ಹೋರಾಡಲು ಹುರಿದುಂಬಿಸುತ್ತವೆ.  ೪೧-ವಯಸ್ಸಿನ ಮೆವಾನಿಯನ್ನು ಬಿ ಜೆ ಪಿ ಆಳುತ್ತಿರುವ ಆಸಾ೦ ರಾಜ್ಯದ ಪೋಲೀಸರು ಬ೦ಧಿಸಿದ್ದು ಬಿ ಜೆ ಪಿ ಯ ಹೆಚ್ಚುತ್ತಿರುವ ದಬ್ಬಾಳಿಕೆ ಮತ್ತು ಒಬ್ಬ ದ...
ಇಮೇಜ್
  ಮೇಲ್ಜಾತಿಗಳ ದಂಗೆ   ಝಾನ್ ಡ್ರೆಜ್   Jean Drèze   ಝಾನ್ ಡ್ರೆಜ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ, ಅರ್ಥಶಾಸ್ತ್ರ ವಿಭಾಗ, ರಾಂಚಿ ವಿಶ್ವವಿದ್ಯಾಲಯ, ರಾಂಚಿ.     ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ಭೋಪಾಲ್‌ | ಸುಯಶ್ ದ್ವಿವೇದಿ (ವಿಕಿಮೀಡಿಯಾ) ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯ ಉಲ್ಬಣವು ಪ್ರಜಾಪ್ರಭುತ್ವದ ಸಮಾನತೆಯ ಬೇಡಿಕೆಗಳ ವಿರುದ್ಧ ಮೇಲ್ಜಾತಿಗಳ ದಂಗೆಯಾಗಿ ಕಂಡುಬರುತ್ತದೆ. ಹಿಂದುತ್ವ ಯೋಜನೆಯು ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯನ್ನು ಮರುಸ್ಥಾಪಿಸುವ ಭರವಸೆ ನೀಡುವಲ್ಲಿ ಮೇಲ್ಜಾತಿಗಳಿಗೆ ಬಚಾವು ಮಾಡುವ ಜೀವದ ನೌಕೆಯಾಗಿದೆ. ಭಾರತದಲ್ಲಿ ಇತ್ತೀಚಿನ ಹಿಂದೂ ರಾಷ್ಟ್ರೀಯತೆಯ ಉಲ್ಬಣವು ಜಾತಿಯನ್ನು ನಿರ್ಮೂಲನೆ ಮಾಡುವ ಮತ್ತು ಹೆಚ್ಚು ಸಮಾನ ಸಮಾಜವನ್ನು ತರುವ ಚಳುವಳಿಗೆ ಭಾರಿ ಹಿನ್ನಡೆಯಾಗಿದೆ. ಈ ಹಿನ್ನಡೆ ಆಕಸ್ಮಿಕವಲ್ಲ: ಹಿಂದೂ ರಾಷ್ಟ್ರೀಯತೆಯ ಬೆಳವಣಿಗೆಯನ್ನು ಪ್ರಜಾಪ್ರಭುತ್ವದ ಸಮಾನತೆಯ ಬೇಡಿಕೆಗಳ ವಿರುದ್ಧ ಮೇಲ್ಜಾತಿಗಳ ದಂಗೆ ಎಂದು ಕಾಣಬಹುದು. ಹಿಂದುತ್ವ ಮತ್ತು ಜಾತಿ "ಹಿಂದುತ್ವ" ಎಂದೂ ಕರೆಯಲ್ಪಡುವ ಹಿಂದೂ ರಾಷ್ಟ್ರೀಯತೆಯ ಅಗತ್ಯ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಎಸೆನ್ಷಿಯಲ್ಸ್ ಆಫ್ ಹಿಂದುತ್ವ (ಹಿ೦ದುತ್ವದ ಮೂಲತತ್ವಗಳು) ಪುಸ್ತಕ ದಲ್ಲಿ ( Essentials of Hindutva , Savarkar, 1923) ) ವಿ ಡಿ ಸಾವರ್ಕರ್ ಅವ...
ಇಮೇಜ್
  ಸೂರಜ್ ಯೆಂಗ್ದೆ ಬರೆದಿರುವ   'ಕಾಸ್ಟ್ ಮ್ಯಾಟರ್ಸ್' ಪುಸ್ತಕ ವಿಮರ್ಶೆ:  ದಲಿತ ಪ್ರೀತಿ ಮತ್ತು ಸಂಭಾಷಣೆಗಳ ಒಂದು ಹೊಸ ಚೌಕಟ್ಟು ಜಿ ಸಂಪತ್ ದಿ ಹಿ೦ದು ಸೆಪ್ಟೆಂಬರ್ 21, 2019 17:07 IST ಭಾರತದ ಪ್ರಗತಿಶೀಲ ಬ್ರಾಹ್ಮಣರು ಜಾತಿ  ವಿರೋಧಿ ಕೆಲಸವನ್ನು  ಯುಧ್ಧೋಪಾಧಿಯಲ್ಲಿ ಎ೦ದು ತೆಗೆದುಕೊಳ್ಳುವರು, ಕೇಳುತ್ತಾರೆ ವಿದ್ವಾ೦ಸ-ಕಾರ್ಯಕರ್ತ ಸೂರಜ್ ಯೆ೦ಗ್ಡೆ  ಜಾತಿ ಕಲ್ಪನೆಯನ್ನು ತೊಡಗಿಸದೆ  ಭಾರತದ ಯಾವುದೇ  ಆಕಾರದ ಬಗ್ಗೆ ಅರ್ಥಪೂರ್ಣ ಸಂಭಾಷಣೆ ನಡೆಸಲು ಸಾಧ್ಯವೇ ?   ರಾಜಕೀಯ, ಸಂಸ್ಕೃತಿ, ಸಮಾಜ, ಇತಿಹಾಸ, ಮಾಧ್ಯಮ, ಶಿಕ್ಷಣ, ಕ್ರೀಡೆ, ಆರ್ಥಿಕತೆ, ವ್ಯಾಪಾರ - ಈ ಯಾವ ಕ್ಷೇತ್ರ ಜಾತಿ ವ್ಯವಸ್ಥೆಯ ಗ್ರಹಣಾಂಗಗಳಿಂದ ಮುಟ್ಟದೆ ಇಲ್ಲ  ? ತಮ್ಮ ಪುಸ್ತಕ ‘Caste Matters’ - ‘ಕಾಸ್ಟ್  ಮಾಟರ್ಸ್’ - ಜಾತಿ  ವಿಷಯಗಳು ಅಥವಾ ಜಾತಿ ಮುಖ್ಯ -  ನಲ್ಲಿ ಸೂರಜ್ ಯೆ೦ಗ್ಡೆ  ಖಚಿತವಾದ ಉತ್ತರ ನೀಡುತ್ತಾರೆ  - ಋಣಾತ್ಮಕವಾಗಿ.  ಸೂರಜ್ ಯೆಂಗ್ಡೆ ಅವರು  ಅಮೆರಿಕದ ಹಾರ್ವರ್ಡ್ ಕೆನಡಿ ಸ್ಕೂಲಿನೊ೦ದಿಗೆ   ಸಂಯೋಜಿತವಾಗಿರುವ ವಿದ್ವಾಂಸ-ಕಾರ್ಯಕರ್ತರಾಗಿದ್ದಾರೆ. ‘ಕಾಸ್ಟ್ ಮ್ಯಾಟರ್ಸ’ ಪುಸ್ತಕದಲ್ಲಿ ಅ ವರು ಸಾಂಪ್ರದಾಯಿಕ ತತ್ವಶಾಸ್ತ್ರೀಯ ಪರಿಶೀಲನೆ, ಆತ್ಮಚರಿತ್ರೆ, ಇತಿಹಾಸ, ಸಾಮಾಜಿಕ ಮಾನವಶಾಸ್ತ್ರ ಮತ್ತು ಸಾಂಸ್ಕೃತಿಕ ಅ...