ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಆರೋಪಿ ಒಮರ್ ಖಾಲಿದ್ ಗೆ ಜಾಮಿನು ಸಿಕ್ಕಿಲ್ಲ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಲಭೆಗಳನ್ನು ಪ್ರಚೋದಿಸಿದ ಆರೋಪದಲ್ಲಿ 18 ತಿಂಗಳ ಹಿಂದೆ ಬಂಧಿಸಲಾದ ಪ್ರಮುಖ ಕಾರ್ಯಕರ್ತ ಉಮರ್ ಖಾಲಿದ್ ನಿಗೆ  24  ಮಾರ್ಚ್ ೨೦೨೨ರ೦ದು ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಫೆಬ್ರವರಿ 2020 ರಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ ೫೩ ಜನರನ್ನು ಕೊ ಲ್ಲ ಲಾಯಿತು. ಇವರು ಹೆಚ್ಚಾಗಿ ಮುಸ್ಲಿಮರಾಗಿದ್ದರು. ಉಮರ್ ಖಾಲಿದ್ ಈ ಪ್ರಕರಣದಲ್ಲಿ "ಪ್ರಮುಖ ಪಿತೂರಿಕಾರ" ಎಂದು ಆರೋಪಿಸಲಾಯಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಉಮರ್ ಖಾಲಿದ್ ವಿರುದ್ಧದ "ಕೆಲವು ….ಸಾಕ್ಷಿಗಳ ಹೇಳಿಕೆಗಳಲ್ಲಿ ಕೆಲವು ಅಸಂಗತತೆಗಳಿವೆ" ಎಂದು ಒಪ್ಪಿದರೂ, ಜಾಮೀನು ವಜಾಗೊಳಿಸುವ ಆದೇಶದಲ್ಲಿ ಆದಾಗ್ಯೂ, "ಚಾರ್ಜ್ ಶೀಟ್ ಮತ್ತು ಜೊತೆಗಿರುವ ದಾಖಲೆಗಳ…” ಆಧಾರದ ಮೇಲೆ , “ಉಮರ್ ಖಾಲಿದ್ ವಿರುದ್ಧದ ಆರೋಪಗಳು ಪ್ರಾಥಮಿಕವಾಗಿ ನಿಜವಾಗಿದೆ” ಎ೦ದು ಅಭಿಪ್ರಾಯಪಟ್ಟಿದ್ದಾರೆ. ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡುವಂತೆ ಶ್ರೀ ಖಾಲಿದ್ ಅವರ ಮನವಿಯಲ್ಲಿ "ಯಾವುದೇ ಅರ್ಹತೆ ಮತ್ತು ವಸ್ತು" ಇಲ್ಲ ಎಂದು ಹೇಳಿದ್ದಾರೆ. ವಿವಾದಾಸ್ಪದ ಪೌರತ್ವ ಕಾನೂನಿನ ವಿರುದ್ಧ ಬೃಹತ್ ಪ್ರಮಾಣದಲ್ಲಿ ಅನೇಕ ತಿಂಗಳುಗಳ ಕಾಲ  ನಡೆದ ಪ್ರತಿಭಟನೆಗಳ ನಡುವೆ ದೆಹಲಿಯಲ್ಲಿ ಗಲಭೆಗಳು ಸಂಭವಿಸಿದವು.. ಪೌರತ್ವ ತಿದ್ದುಪಡಿ ಕಾಯ್ದ
ಇಮೇಜ್
    ಧರ್ಮದ ಕುರಿತಾದ ಚರ್ಚೆ  ನೋಮ್ ಚೋಮ್ಸ್ಕಿ ವಿವಿಧ ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸಿದ್ದು 1990-1999 ಡೇವಿಡ್ ಬಾರ್ಸಾಮಿಯನ್ (1992): ಪ್ರಶ್ನೆ : ನೀವು ಆಧ್ಯಾತ್ಮಿಕ ಜೀವನವನ್ನು ಗುರುತಿಸುತ್ತೀರಾ ಅಥವಾ ಅಂಗೀಕರಿಸುತ್ತೀರಾ ಮತ್ತು ಅದು  ನಿಮ್ಮ ವ್ಯಕ್ತಿತ್ವದ ಅಂಶವಾಗಿದೆಯೆ ? ಚೋಮ್ಸ್ಕಿ : ‘ಆಧ್ಯಾತ್ಮಿಕ ಜೀವನ’ದಿಂದ, ನೀವು ಆಲೋಚನೆ ಮತ್ತು ವಿಚಾರ ಮತ್ತು ಸಾಹಿತ್ಯದ ಜೀವನ ಅರ್ಥೈಸುತ್ತೀರಾ ಅಥವಾ ಧರ್ಮದ ಜೀವನವನ್ನು? ಇವು ವಿಭಿನ್ನ ಪ್ರಶ್ನೆಗಳು. ಪ್ರಶ್ನೆ : ಧರ್ಮದ  ಆಧ್ಯಾತ್ಮಿಕ ಆಯಾಮ. ಅದು ಕಿ೦ಚಿತ್ತಾದರೂ ಒಂದು ಅಂಶವೇ? ಚೋಮ್ಸ್ಕಿ: ನನ್ನ ಮಟ್ಟಿಗೆ ಅಲ್ಲ. ನಾನು ಜ್ಞಾನೋದಯದ ಚಿ೦ತನೆಯಲ್ಲಿ (Enlightenment) ಹುಟ್ಟಿ ಬೆಳೆದವನು. ಆವೈಚಾರಿಕ ನಂಬಿಕೆಯು ( irrational belief) ಅಪಾಯಕಾರಿ ವಿದ್ಯಮಾನ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಪ್ರಜ್ಞಾಪೂರ್ವಕವಾಗಿ  ಆವೈಚಾರಿಕ ನಂಬಿಕೆಯನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಮತ್ತೊಂದೆಡೆ, ಇದು ಸಾಮಾನ್ಯವಾಗಿ ಜನರಿಗೆ ಒಂದು ಪ್ರಮುಖ ವಿದ್ಯಮಾನವಾಗಿದೆ ಎಂದು ನಾನು ಖಚಿತವಾಗಿ ಗುರುತಿಸುತ್ತೇನೆ.  ಅದು ಏಕೆ ಎಂದು  ಅರ್ಥಮಾಡಿಕೊಳ್ಳಬಹುದು. ಇದು ಸ್ಪಷ್ಟವಾಗಿ, ಅನೇಕ ಜನರಿಗೆ ವೈಯಕ್ತಿಕ ಪೋಷಣೆಯನ್ನು ಒದಗಿಸುತ್ತದೆ,  ಸಹಭಾಗಿತ್ವ ಮತ್ತು ಒಗ್ಗಟ್ಟಿನ ಬಂಧಗಳನ್ನು ಮತ್ತು ಒಬ್ಬರ ವ್ಯಕ್ತಿತ್ವದ ಸಾಮಾನ್ಯವಾಗಿ ಬಹಳ ಮೌಲ್ಯಯುತ ಅಂಶಗಳನ್ನು ವ್ಯಕ್ತಪಡಿಸುವ ಸಾಧನವಾಗಿದೆ. ನನ್ನ
  ನೋಮ್ ಚೋಮ್ಸ್ಕಿ ಅವರೊಂದಿಗೆ ಸಂಭಾಷಣೆ  ಭಾಗ 3: ಪಾಕಿಸ್ತಾನ, ಭಾರತ, ಧರ್ಮ ಮತ್ತು ಹವಾಮಾನ ಬದಲಾವಣೆ ಹಸನ್ ಮಿರ್ಜಾರಿಂದ ಮೂರು-ಭಾಗದ ಸಂದರ್ಶನ ಜನವರಿ 17, 2020. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ . ಪ್ರೊಫೆಸರ್ ನೋಮ್ ಚೋಮ್ಸ್ಕಿ ಅವರೊಂದಿಗಿನ ಈ ಸಂಭಾಷಣೆಯ ಭಾಗ 1 ಅಮೇರಿಕನ್ ಸಂಸ್ಕೃತಿ ಮತ್ತು ರಾಜಕೀಯವನ್ನು ಒಳಗೊಂಡಿದೆ. ಭಾಗ 2 ವಿಜ್ಞಾನ, ಭಾಷೆ ಮತ್ತು ಮಾನವ ಸ್ವಭಾವದ ಜೊತೆಗೆ ಮಾಧ್ಯಮ, ಬುದ್ಧಿಜೀವಿಗಳು ಮತ್ತು ಸಾಮ್ರಾಜ್ಯಶಾಹಿಯನ್ನು ಒಳಗೊಂಡಿದೆ.   ಭಾಗ 3 ಭಾರತೀಯ ಉಪಖಂಡ, ಹವಾಮಾನ ಬದಲಾವಣೆ ಮತ್ತು ವಲಸೆ ಬಿಕ್ಕಟ್ಟಿನ ಬಗ್ಗೆ ಚರ್ಚೆಯೊಂದಿಗೆ ಧರ್ಮ ಮತ್ತು ಆಧ್ಯಾತ್ಮಿಕತೆ ಗೆ ಸಂಬಂಧಿಸಿದ ಸಂಭಾಷಣೆಯನ್ನು ಒಳಗೊಂಡಿದೆ. ~ ಧರ್ಮ ಮತ್ತು ಆಧ್ಯಾತ್ಮಿಕತೆ ಹಾಸನ ಮಿರ್ಜಾ (HM) : ನೀವು ಬೆಳೆಯುತ್ತಿರುವಾಗ ಧರ್ಮವು ನಿಮ್ಮ ಮೇಲೆ ದೊಡ್ಡ ಪ್ರಭಾವ ಬೀರಿದೆಯೇ? ನಿಮ್ಮ ಕುಟುಂಬದ ಸದಸ್ಯರು ಧಾರ್ಮಿಕರಾಗಿದ್ದರೆ?   ನೋಮ್ ಚೋಮ್ಸ್ಕಿ (NC) : ಯೆಹೂದಿಮತ (ದೊಡ್ಡ ಪ್ರಭಾವ) ಮಾಡಿತು, ಧರ್ಮ ಪ್ರಭಾವ ಮಾಡಲಿಲ್ಲ. ನನ್ನ ಹೆತ್ತವರು ಸಾಮಾನ್ಯ ಅರ್ಥದಲ್ಲಿ ಧಾರ್ಮಿಕರಾಗಿರಲಿಲ್ಲ. ಯಹೂದಿ/ಹೀಬ್ರ್ಯೂ  ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದರು, ಸ್ವಲ್ಪ ಆಚರಿಸುತ್ತಿದ್ದರು.   HM : ಸಾವಿನ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮತ್ತು ನೀವು ಮರಣಾನಂತರದ ಜೀವನವನ್ನು ನಂಬುತ್ತೀರಾ?   NC : ಯುವ ಹದಿಹರೆಯದವನಾಗಿದ್ದಾಗ, ನಾನು ವೈಯಕ್ತಿಕ ಪ್ರಜ್ಞೆಯ ಅಂ