ಪೋಸ್ಟ್‌ಗಳು

ಏಪ್ರಿಲ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
  ಭಾರತದ ಚುನಾವಣೆಯ ಬಗ್ಗೆ ಲ೦ಡನ್ನಿನ ಪ್ರಖ್ಯಾತ  ದಿನಪತ್ರಿಕೆ ‘ದಿ ಗಾರ್ಡಿಯನ್’ ದೃಷ್ಟಿಕೋನ:   ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ಮೂಲಕ ಅನೈತಿಕ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವವನ್ನು ಹಾನಿಗೊಳಿಸುತ್ತದೆ ಸಂಪಾದಕೀಯ ನರೇಂದ್ರ ಮೋದಿಯವರಿಗೆ ಮತ್ತೊಂದು ಜನಾದೇಶ ನೀಡುವ ಬಗ್ಗೆ ಭಾರತೀಯ ಮತದಾರರು ತೀವ್ರವಾಗಿ ಯೋಚಿಸಬೇಕು ಬುಧವಾರ 17 ಏಪ್ರಿಲ್ 2024 ದೇಶವನ್ನು ಮುನ್ನಡೆಸುವ ಪೈಪೋಟಿಯನ್ನು  ಈಗಾಗಲೇ ಗೆದ್ದಿರುವ ಬಡಾಯಿಯ ನಡುವೆ ವಿಶ್ವದ ಅತಿದೊಡ್ಡ ಚುನಾವಣೆಗಳು ಭಾರತದಲ್ಲಿ ಈ ವಾರ  ಪ್ರಾರಂಭವಾಗಿವೆ.  ನರೇಂದ್ರ ಮೋದಿಯವರು ದೊಡ್ಡ ಸಂಸದೀಯ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಅವರ ಸಾಧನೆಯು ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ  ಸಾಧನೆಯನ್ನು ಸರಿಗಟ್ಟುತ್ತದೆ.  ಚುನಾವಣಾ ಫಲಿತಾಂಶ ಏನೇ ಇರಲಿ,  ಭಾರತೀಯ ಪ್ರಜಾಪ್ರಭುತ್ವ ಸೋಲುವದ೦ತೂ ಖಚಿತ.  ಯಾಕೆ ? ಶ್ರೀ ನೆಹರೂ ಅನಾಮಧೇಯವಾಗಿ ತಮ್ಮದೇ ನಾಯಕತ್ವವನ್ನು ತಾವೇ ಟೀಕಿಸಿ ದ್ದರೆ, ಅವರಿಗೆ ಭಿನ್ನವಾಗಿ ಶ್ರೀ ಮೋದಿಯವರು ತಮ್ಮ ವಿರೋಧಿಗಳನ್ನು ಅಸಡ್ಡೆಯಿ೦ದ ಕಾಣುತ್ತಾರೆ. ದೈನಂದಿನ ಆಡಳಿತದಲ್ಲಿ ವಿಚಾರಗಳ ಸ್ಪರ್ಧೆಗೆ ಅವಕಾಶ ನೀಡುವದಲ್ಲದೆ   ನಾಗರಿಕರನ್ನು ಸಮಾನವಾಗಿ ಪರಿಗಣಿಸಿದಾಗ ಪ್ರಜಾಪ್ರಭುತ್ವವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೋದಿಯವರ ಭಾರತದಲ್ಲಿ ಇವುಗಳ ಕೊರತೆಯಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ತನ್ನ ಬ್ಯ