ಪೋಸ್ಟ್‌ಗಳು

WOMEN AND SOCIETY ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
ಇಮೇಜ್
  ಸಾವಿರಾರು ಭಾರತೀಯ ಗೃಹಿಣಿಯರ ಆತ್ಮಹತ್ಯೆಯ ಹಿಂದೆ ಏನಿದೆ? ಗೀತಾ ಪಾಂಡೆ ಬಿಬಿಸಿ ನ್ಯೂಸ್, ದೆಹಲಿ  ೧೬ ಡಿಸೆಂಬರ್ ೨೦೨೧     ಪ್ರತಿ ವರ್ಷ ಸಾವಿರಾರು ಭಾರತೀಯ ಗೃಹಿಣಿಯರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?   ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ  ೨೨,೩೭೨ ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ - ಅಂದರೆ ಪ್ರತಿ ದಿನ ಸರಾಸರಿ  ೬೧ ಆತ್ಮಹತ್ಯೆಗಳು ಅಥವಾ ಪ್ರತಿ  ೨೫ ನಿಮಿಷಕ್ಕೆ ಒಬ್ಬರು.    ಸನ್ ೨೦೨೦ರಲ್ಲಿ ಭಾರತದಲ್ಲಿ ಒಟ್ಟು ೧೫೩, ೦೫೨ ದಾಖಲಿತ ಆತ್ಮಹತ್ಯೆಗಳಲ್ಲಿ  ೧೪.೬%   ಗೃಹಿಣಿಯರಿದ್ದರು. ಇವರು ಮಹಿಳೆಯರಲ್ಲಿ ಅರ್ಧಕ್ಕಿ೦ತ ಹೆಚ್ಚು.   ಕಳೆದ ವರ್ಷ ಈ ವಿಷಯದಲ್ಲಿ ವಿಶೇಷವಾಗಿದ್ದಿಲ್ಲ.  ೧೯೯೭ರಿಂದ  ಉದ್ಯೋಗ ಅಥವಾ ಉಪಜೀವಿಕೆಯ ಆಧಾರದ ಮೇಲೆ ಆತ್ಮಹತ್ಯೆ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಾಗ, ಪ್ರತಿ ವರ್ಷ ೨೦,೦೦೦ಕ್ಕೂ ಹೆಚ್ಚು ಗೃಹಿಣಿಯರು ತಮ್ಮನ್ನು ತಾವೇ  ಕೊಲ್ಲುತ್ತಿದ್ದಾರೆ ಎ೦ದು ಕ೦ಡುಬ೦ದಿತು. ೨೦೦೯ರಲ್ಲಿ, ಅವರ ಸಂಖ್ಯೆ  ೨೫,೦೯೨ಕ್ಕೆ ಏರಿತು.   ವರದಿಗಳು ಯಾವಾಗಲೂ ಅಂತಹ ಆತ್ಮಹತ್ಯೆಗಳನ್ನು "ಕುಟುಂಬದ ಸಮಸ್ಯೆಗಳು" ಅಥವಾ "ಮದುವೆ ಸಂಬಂಧಿತ ಸಮಸ್ಯೆಗಳು" ಎಂದು ದೂಷಿಸುತ್ತವೆ. ಆದರೆ ನಿಜವಾಗಿಯೂ...
ಇಮೇಜ್
  “ಕೋಪಗೊಂಡ ಯುವತಿ ಮತ್ತು ಮಲಯಾಳಿ (ಪ್ರಗತಿಪರ) ಅಪ್ಪ - ಎರಡು 'ಅಚ್ಚನ್’ ಪ್ರಹಸನಗಳು” ಸಂಸ್ಕೃತಿ, ಸ್ತ್ರೀವಾದ, ಲಿಂಗಗಳು, ಸರ್ಕಾರ, ಎಡ ವೀಕ್ಷ ಣೆ 'ಅಚ್ಚನ್’ ಎನ್ನುವದು ಪ್ರೀತಿ, ಗೌರವ, ಕೃತಜ್ಞತೆ, ಮುಂದುವರಿಯುವ ಪೋಷಣೆ-ಸ೦ರಕ್ಷಣೆಗಳ ಪ್ರತೀಕ್ಷೆಯಿ೦ದ  ಮಲಯಾಳಿಗಳೆಡೆಲ್ಲಿ ಕುಟುಂಬದ ಪುರುಷ ಮುಖ್ಯಸ್ಥ ‘ತ೦ದೆ’ಯನ್ನು  ಸಂಬೋಧಿಸುವ ಪದ.  ಕೇರಳದ ಜನರು ಮತ್ತು ಸಮಾಜವು ತುಲನಾತ್ಮಕವಾಗಿ ಸ್ವಲ್ಪ ಪ್ರಗತಿಪರ ಎ೦ದು ಅನೇಕರು, ಕೇರಳದವರೂ ಸೇರಿದ೦ತೆ, ಪರಿಗಣಿಸುತ್ತಾರೆ. ಎರಡು ಇತ್ತೀಚಿನ ಸ೦ಭವಗಳು  ಈ ನ೦ಬಿಕೆಯನ್ನು  ಪ್ರಶ್ನಿಸಿವೆ.  ಎರಡರಲ್ಲೂ  'ಅಚ್ಚನ್’ ಪಾತ್ರ ಗಮನೀಯ.  ಇದಕ್ಕೆ ಜೆ ದೆವಿಕಾ ‘ಕಾಫ಼ೀಲ್’ ಆನ್ಲೈನ್ ಪ್ರಕಟನೆಯಲ್ಲಿ ಬರೆದ ಲೇಖನವನ್ನು ಅವಲ೦ಬಿಸಿದ್ದೇನೆ. ಶೀರ್ಷಿಕೆಯೂ ಅವರದೇ:  ಕೋಪಗೊಂಡ ಯುವತಿ ಮತ್ತು ಮಲಯಾಳಿ (ಪ್ರಗತಿಪರ) ಅಪ್ಪ - ಎರಡು 'ಅಚ್ಚನ್’ ಉಪಕಥೆಗಳು’ (https://kafila.online/2021/10/30/the-malayali-progressive-acchan-2-the-second-season/) “ಈ ಹುಡುಗಾಟಿಕೆಯ-ಧ್ವನಿಯ ಶೀರ್ಷಿಕೆಗಾಗಿ ನನ್ನನ್ನು ಕ್ಷಮಿಸಬೇಕು. ಆದರೆ ಲಿಂಗ ರಾಜಕೀಯವು ಹೆಚ್ಚುಹೆಚ್ಚಾಗಿ   ಭಾವಾತಿರೇಕದ ನಾಟಕಕ್ಕೆ ಇಳಿದಿರುವುದು ಕೇರಳದಲ್ಲಿ  ಜೀವಂತ ವಾಸ್ತವವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ,  ಸಿಪಿಎಂ ಬೆಂಬಲಿಗರಿದ್ದರೆ, ವಿಶೇಷವಾಗಿ...
ಇಮೇಜ್
         ಹೆಣ್ಣಿನ ದೇಹದ ಹಲವು ಬಾಳುಗಳು ಬಾಳಿನುದ್ದಕ್ಕೂ  ಹೆಣ್ಣಿನ ದೇಹದ ಕಟ್ಟೋಣ   ನಡೆಯುತ್ತಲೇ ಇರುತ್ತದೆ- -ಗ೦ಡಸರ ಯಾಜಮಾನ್ಯದಿ೦ದ ಮತ್ತು  ಬಂಡವಾಳಶಾಹಿಯಿ೦ದ     ಗ೦ಡಿನ  ‘ಮೇಲ್ಮಟ್ಟ’ದ   ಆಣ್ಮೆಯ ಲಕ್ಷಣಗಳಿಗೆ ಪೂರಕವಾದ ಲಿಂಗಸೂಕ್ತ ಪಾತ್ರಗಳು ಮತ್ತು ಗುಣಗಳನ್ನು ಪಡೆದುಕೊಳ್ಳಲು ಚಿಕ್ಕ೦ದಿನಿ೦ದಲೂ  ಹೇಳಿಕೊಡುವುದರಿ೦ದ ಸ್ತ್ರೀಯರ ದೇಹಗಳು ಲಿಂಗ ರಚನೆಯನ್ನು ಅನುಭವಿಸುತ್ತವೆ ಹೆಣ್ಣುಗಳು  ಯಾವಾಗಲೂ ತಮ್ಮ ದೇಹದ ಬಗ್ಗೆ ಹೊ೦ದಾಣಿಕೆಯಿಲ್ಲದ ವರ್ಣನೆಗಳನ್ನು ಸ್ವೀಕರಿಸುತ್ತಾರೆ ತಕ್ಕದೆ೦ದೆಣಿಸಿದಾಗ , ಮೆಚ್ಚಿಕೆಯ  ಚಿತ್ರಗಳಿಂದ ದೇಹವನ್ನು ಹೊಗಳಲಾಗುತ್ತದೆ-- -- ದೇವಿ / ದೇವತೆಗಳ, ರಾಷ್ಟ್ರದ ಗೌರವ, ಅಥವಾ ಕುಟುಂಬ ಅಥವಾ ಸಮುದಾಯಗಳ ಹೆಸರಿನಲ್ಲಿ ಮತ್ತು ಕೆಲವೊಮ್ಮೆ ಅದೇ ದೇಹವನ್ನು ನಾಚಿಕೆಗೇಡು, ಮುಜುಗರ, ಕಿರಿಕಿರಿ, ಭಯ ಮತ್ತು ಅಸಹ್ಯಕರವಾಗಿ ತೋರಿಸಲಾಗುತ್ತದೆ ಹೆ೦ಗಸರು ಈ ‘ಆದರ್ಶ ಶರೀರ’ವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮನ್ನು 'ಒಳ್ಳೆಯ ಮಹಿಳೆಯರು' ಎಂದು ತೋರಿಸಲು ಹೆಣಗಾಡಿದ್ದಾರೆ ಅಥವಾ ‘ಕೆಟ್ಟ ಹೆಣ್ಣುಗಳು’ ಎ೦ದು ಚಿತ್ರಿಸುವದರ ನಕಾರಾತ್ಮಕ ಅಂಶಗಳನ್ನು ಎದುರಿಸಲು ಹೆದರುತ್ತಾರೆ. ಮತ್ತೊಂದೆಡೆ ಕೆಳಜಾತಿಗಳು ಮತ್ತು ವರ್ಗಗಳ ಲಿಂಗಾಧಾರಿತ  ದೇಹಗಳನ್ನು ಬಡತನ, ಅಪೌಷ್ಟಿಕತೆ, ಕೆಲಸದ ಹೊರಲಾಗದ ಭಾರ, ಲಿ೦...
ಇಮೇಜ್
    ‘ಆದರ್ಶ’ ಬಲಿಪಶುವನ್ನು ತಿರಸ್ಕರಿಸುವುದು   ಇತ್ತೀಚಿನ ಸೆಷನ್ಸ್ ನ್ಯಾಯಾಲಯದ ತೀರ್ಪು ದೌರ್ಜನ್ಯಕ್ಕೆ ಗುರಿಯಾದವರ  ಬಗ್ಗೆ ಆಳವಾಗಿ ಹುದುಗಿರುವ ಜಾತಿ-ಪಿತೃಪ್ರಧಾನ ತಿಳುವಳಿಕೆಯನ್ನು ಬಹಿರಂಗಪಡಿಸುತ್ತದೆ.        ದಿಶಾ ವಾಡೆಕರ್ ಬರೆಯುತ್ತಾರೆ:      ಗೋವಾದ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ, ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ತಮ್ಮ ಕಿರಿಯ ಸಹೋದ್ಯೋಗಿ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ.  ಆರೋಪವನ್ನು ಪುಷ್ಟೀಕರಿಸುವ ಫ಼ಿರ್ಯಾದುದಾರಳನ್ನು ಬೆ೦ಬಲಿಸುವ ಪುರಾವೆಗಳ ಕೊರತೆ,   ಮತ್ತು ಆತ್ಮವಿಶ್ವಾಸವನ್ನು ಪ್ರೇರೇಪಿಸದ ಆಕೆಯ ಹೇಳಿಕೆಯಲ್ಲಿನ ಕಡೆಗಣಿಸಲಾಗದ ವಿರೋಧಾಭಾಸಗಳು ಮತ್ತು ಲೋಪಗಳು, ಇವುಗಳನ್ನು ಉಲ್ಲೇಖಿಸಿ ನ್ಯಾಯಾಲಯವು ತೇಜ್‌ಪಾಲ್‌ನನ್ನು ಖುಲಾಸೆಗೊಳಿಸಿತು.       527 ಪುಟಗಳ ತೀರ್ಪು  ದೂರುದಾರಳ ಲೈಂಗಿಕ ಇತಿಹಾಸ ಮತ್ತು ಘಟನೆಯ ನಂತರ ಆಕೆಯ ನಡವಳಿಕೆ, ಮುಖ್ಯವಾಗಿ ಸಾರ್ವಜನಿಕ ದೃಷ್ಟಿಯಲ್ಲಿ ಆಕೆಗೆ ತಕ್ಷಣದ ಆಘಾತದ ಕೊರತೆಯ ಬಗ್ಗೆ,  ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.  ಇದುಸುಪ್ರೀಂ ಕೋರ್ಟ್‌ನ ಮಾರ್ಚ್ 2021 ರ ಅಪರ್ಣ ಭಟ್ ವಿ. ಮಧ್ಯ ಪ್ರದೇಶ್  ತೀರ್ಪಿನ ನೇರ ಉಲ್ಲ...