ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಹರಿದ್ವಾರದ  ದ್ವೇಷದ ದುರಹಂಕಾರ ಕೂಡಲೇ ನಿಲ್ಲಿಸಬೇಕು ವಸುಂಧರಾ ಸಿರ್ನಾಟೆ ಡ್ರೆನನ್       ದಿ ಹಿ೦ದು ದಿನ ಪತ್ರಿಕೆ ಡಿಸೆಂಬರ್ 30, 2021 ಒಂದು ಉನ್ಮಾದಪೂರ್ಣ  ವಿವೇಚನಾರಹಿತತೆಯನ್ನು,   ಎಲ್ಲರ  ಹಕ್ಕುಗಳ ಮೇಲೆ ಪ್ರಭಾವ ಬೀರುವ ದ್ವೇಷ ತುಂಬಿದ ಪದಗಳು ಸೇರಿದ೦ತೆ , ಭಾರತೀಯ ಸಮಾಜದಲ್ಲಿ ಬೀಜ ನೆಡಲಾಗುತ್ತಿದೆ. ಡಿಸೆಂಬರ್ 17 ಮತ್ತು 19, 2021ರ ನಡುವೆ ಒಂದು ಉಗ್ರಗಾಮಿ ಹಿಂದೂ ಧಾರ್ಮಿಕ ಸಭೆಯು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಿತು , ಅಲ್ಲಿ ಭಾಷಣಕಾರರು ನಿಖರವಾಗಿ ಗುರಿಪಡಿಸಿದ   ದ್ವೇಷ ಸಂದೇಶಗಳನ್ನು ವರ್ಧಿಸಿದರು. ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ಜುನಾ ಅಖಾರ ಪಂಗಡ ದ ಉನ್ನತ ಶ್ರೇಣಿಯ ಅಧಿಕಾರಿಯಾದ ಯತಿ ನರಸಿಂಹಾನಂದ ಸರಸ್ವತಿ ಅವರು   ಆಯೋಜಿಸಿದ್ದ ಈ ಸಭೆಯಲ್ಲಿ  ಭಾರತ ಮತ್ತು ಹಿಂದೂಗಳಿಗೆ ಇಸ್ಲಾಮಿಕ್ ಬೆದರಿಕೆಯ ಸುಳ್ಳು ಭಯವನ್ನು ಎತ್ತುವ ಅನೇಕ ಭಾಷಣಕಾರರು ಭಾಗವಹಿಸಿದ್ದರು.  ದ್ವೇಷದ ಕೇಳಿಯ ಹಬ್ಬ  ಬಲಪಂಥೀಯ ಸಂಘಟನೆಯಾದ ಹಿಂದೂ ರಕ್ಷಣಾ ಸೇನೆಯ ಅಧ್ಯಕ್ಷ ಸ್ವಾಮಿ ಪ್ರಬೋಧಾನಂದ ಗಿರಿ : “... ನೀವು ಇದನ್ನು ದೆಹಲಿ ಗಡಿಯಲ್ಲಿ ನೋಡಿದ್ದೀರಿ, ಅವರು ಹಿಂದೂಗಳನ್ನು ಕೊಂದು ಗಲ್ಲಿಗೇರಿಸಿದ್ದಾರೆ. ಇನ್ನು ಸಮಯವಿಲ್ಲ, ಈಗಿರುವ ಪ್ರಕರಣ ಏನೆಂದರೆ ನೀವು ಈಗಲೇ ಸಾಯಲು ತಯಾರಿ ಮಾಡಿಕೊಳ್ಳಿ, ಇಲ್ಲವೇ ಕೊಲ್ಲಲು ಸಿದ್ಧರಾಗಿ, ಬೇರೆ ದಾರಿಯೇ ಇಲ್ಲ. ಇದಕ್ಕಾಗಿಯೇ, ಮ್ಯಾನ್ಮಾರ್‌ನಂತೆ, ಇಲ್ಲಿನ ಪೊಲೀಸ
  ಒ೦ದು ಕುತೂಹಲಕರ  ಜಾಮೀನು ಆದೇಶ ಮತ್ತು ಯುಪಿ ಚುನಾವಣೆ ಮುಂದೂಡಿಕೆಯ ವದಂತಿಗಳು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಉಲ್ಲೇಖಿತ  ಜಾಮೀನು ಆದೇಶದ ಬಗ್ಗೆ  ಸಮಾಚಾರಪತ್ರಿಕೆಯಲ್ಲಿ ಓದಿದವರೆಲ್ಲ  ಸ್ವಾಭಾವಿಕವಾಗಿ ಕುತೂಹಲಗೊ೦ಡಿರುತಾರೆ. ಈಗ ಈ ಆದೇಶ, ನ್ಯಾ. ಮೂ. ಯಾದವ್  ಅವರ ಇತರ ಕೆಲವು ಆದೇಶಗಳು,  ಮತ್ತು ಈ ನ್ಯಾಯಾಧೀಶರ ರಾಜನೀತಿಗಳ ಬಗ್ಗೆ ಸ್ವಾರಸ್ಯವಾಗಿ ಅ೦ಕಣವನ್ನು ಬರೆದಿದ್ದಾರೆ ಪತ್ರ ಕರ್ತ ಭರತ್ ಭೂಷಣ್.  ಇ೦ದಿನ (೨೭ ಡಿಸ೦ಬರ್ ೨೦೨೧) ‘ಬಿಸಿನೆಸ್ ಸ್ಟೆ೦ಡರ್ಡ್’  ದೈನಿಕದಲ್ಲಿ ಪ್ರಕಟವಾಗಿರುವ ಈ ಲೇಖನದಲ್ಲಿ  ಈ ಆದೇಶವನ್ನು 'ವಿಚಿತ್ರ' (‘strange’) ಎ೦ದು ವರ್ಣಿಸಿದ್ದಾರೆ. ಚುನಾವಣೆಗೆ ಎನೂ ಸ೦ಬ೦ಧವಿಲ್ಲದ ಒಬ್ಬ ಆರೋಪಿ ದರೋಡೆಕೋರನ ಜಾಮೀನಿನ  ವಿಷಯಕ್ಕೆ ಸೇರಿದ ಆದೇಶದಲ್ಲಿ, ಮಾನ್ಯ ನ್ಯಾ. ಮೂ. ಅವರು  ಉತ್ತರ ಪ್ರದೇಶ ರಾಜ್ಯದ ಚುನಾವಣೆಯನ್ನು  ಮುಂದೂಡುವದನ್ನು ಪ್ರತಿಪಾದಿಸಿದ್ದಾರೆ. ಈ ಆದೇಶದ ಪ್ರತಿಗಳನ್ನು ಚುನಾವಣಾ ಆಯೋಗ, ಕೇ೦ದ್ರ ಸರ್ಕಾರಗಳಿಗೆ ಕಳುಹಿಸುವುದಲ್ಲದೆ   ಈ ಬಗ್ಗೆ ಪ್ರಧಾನ ಮ೦ತ್ರಿ ನರೇ೦ದ್ರ ಮೋದಿಗೆ ನೇರವಾಗಿ ಮನವಿಯನ್ನೂ ಸಲ್ಲಿಸಿದ್ದಾರೆ.  ಆದೇಶದ  ಒ೦ದು ದಿನದ ನ೦ತರ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್   ಸ್ವಾಮಿ ಉತ್ತರ ಪ್ರದೇಶ ಚುನಾವಣೆ ಮು೦ದೂಡುವದಲ್ಲದೆ  ೨೦೨೨ ಸೆಪ್ತೆ೦ಬರ್ ವರೆಗೆ    ರಾಜ್ಯದಲ್ಲಿ  ರಾಷ್ಟ್ರಪತಿ ಆಡಳಿತದ  ಸಾಧ್ಯತೆಯನ್ನೂ ಸೂಚಿಸಿದ್ದಾರೆ.
ಇಮೇಜ್
  ಕೇರಳವನ್ನು ಅರ್ಥ ಮಾಡಿಕೊಳ್ಳುವದು 'ಕುಡು೦ಬಶ್ರೀ' ಕಾರ್ಯಕ್ರಮದ ಸದಸ್ಯೆಯರು ಕೋವಿಡ್ ವಿರುಧ್ಧ ಪ್ರದರ್ಶನದಲ್ಲಿ ‘ಕುಡು೦ಬಶ್ರೀ’ ಅಭಿಯಾನವು ‘ಪ್ರಜಾ ಯೋಜನಾ ಚಳುವಳಿ’ಯ ನೇರ ಫಲಿತಾ೦ಶವಾಗಿತ್ತು ಕೇರಳವನ್ನು ಅರ್ಥ ಮಾಡಿಕೊಳ್ಳುವದು ಪಟ್ರಿಕ್ ಹೆಲ್ಲರ್ ಸಮಾಜಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ಪ್ರಾಧ್ಯಾಪಕ, ಬ್ರೌನ್ ವಿಶ್ವವಿದ್ಯಾಲಯ, ಯು ಎಸ್ ಎ   ಒಲ್ ಟೊರ್ಣಕ್ವಿಸ್ಟ ರಾಜ್ಯಶಾಸ್ತ್ರ ಮತ್ತು ಅಭಿವೃದ್ಧಿ ಸಂಶೋಧನೆಯ  ಪೂರ್ವ ಪ್ರೊಫೆಸರ್, ಓಸ್ಲೋ ವಿಶ್ವವಿದ್ಯಾಲಯ, ನಾರ್ವೆ ದೇಶ ದಿ ಹಿ೦ದು ಇ೦ಗ್ಲಿಷ್ ದೈನಿಕ ಡಿಸೆಂಬರ್ ೧೩, ೨೦೨೧  ಭಾರತದ ದಕ್ಷಿಣ ರಾಜ್ಯದ ಸಾಮಾಜಿಕ ಪ್ರಜಾಪ್ರಭುತ್ವದ ಪ್ರಯೋಗದ  ಸಮೀಪ  ನೋಟ  ಜನರ ಮೂಲಭೂತ ಜೀವನದ ಅವಕಾಶಗಳಲ್ಲಿ ಭಾರತದ ಅಂತಹ ಅಸಾಮಾನ್ಯ ಪ್ರಾದೇಶಿಕ ವ್ಯತ್ಯಾಸವಿರುವ ಬೇರೆ ಯಾವುದೇ ದೇಶವು ಪ್ರಪಂಚದಲ್ಲಿ ಇಲ್ಲ. ಇದು ಭಾರತದ ಸಂಪೂರ್ಣ ಗಾತ್ರದ ಕಾರಣದಿಂದ ಎನ್ನುವದು ನಿಜ, ಆದರೆ ರಾಜ್ಯ ಮಟ್ಟದ ರಾಜಕೀಯ ಆಡಳಿತಗಳಲ್ಲಿನ ಸ್ಪಷ್ಟ ವ್ಯತ್ಯಾಸಗಳೂ ಇದಕ್ಕೆ ಕಾರಣ. ‘ಬಿಮಾರು’ ರಾಜ್ಯಗಳಿಂದ (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ) ತಮಿಳುನಾಡು ಮತ್ತು ಕೇರಳದವರೆಗೆ ಸರಾಸರಿ ಜೀವಿತಾವಧಿ, ಯೋಗಕ್ಷೇಮ, ಶಿಕ್ಷಣ ಮತ್ತು ಮೂಲಭೂತ ಘನತೆಯ ವ್ಯತ್ಯಾಸವು ಆಶ್ಚರ್ಯಕರವಾಗಿದೆ. ಒ೦ದು ಸ್ಪಷ್ಟ ವಿನ್ಯಾಸವೂ ಇದೆ. ಸ೦ಕ್ಷಿಪ್ತವಾಗಿ  ಹೇಳುವುದಾದರೆ, ಹೆಚ್ಚು ಪ್ರಜ
ಇಮೇಜ್
  2014 ರಿಂದಲೂ ಜಾರಿಬೀಳುತ್ತಿದೆ   ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 165 ರಾಷ್ಟ್ರಗಳಲ್ಲಿ ಭಾರತವು 119 ನೇ ಸ್ಥಾನದಲ್ಲಿದೆ, ಅಮೆರಿಕ ಮತ್ತು ಕೆನಡಾ ದೇಶಗಳಲಿರುವ ಎರಡು ‘ಥಿಂಕ್ ಟ್ಯಾಂಕ್‌’ಗಳ (ವೈಚಾರಿಕ ಸ೦ಸ್ಠೆಗಳ) ವರದಿ ಅಮೆರಿಕಾದ ಕ್ಯಾಟೊ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾದ ಫ್ರೇಸರ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ಮಾನವ ಸ್ವಾತಂತ್ರ್ಯ ಸೂಚ್ಯಂಕ, 2008 ರಿಂದ 2019 ರವರೆಗೆ ದೇಶಗಳನ್ನು ಅಳತೆ ಮಾಡಲು 82 ಸೂಚಕಗಳನ್ನು ಬಳಸಿದೆ. NIKHIL RAMPAL 18 ಡಿಸೆಂಬರ್, 2021 ದಿ  ಪ್ರಿಂಟ್ ಹೊಸದಿಲ್ಲಿ: ಆರ್ಥಿಕ, ವೈಯಕ್ತಿಕ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿವಿಧ ಸೂಚಕಗಳಲ್ಲಿ ಭಾರತದ ಸಾಧನೆಯು 2013 ಮತ್ತು 2019 ರ ನಡುವೆ ನಿರಂತರ ಕುಸಿತದಲ್ಲಿದೆ ಎಂದು ಗುರುವಾರ 16-12-2021 ರ೦ದು ಬಿಡುಗಡೆ ಮಾಡಿದ ಈ ವರ್ಷದ ಮಾನವ ಸ್ವಾತಂತ್ರ್ಯ ಸೂಚ್ಯಂಕ  ವರದಿಯು ಹೇಳಿದೆ. 2019 ರ ವಿವರಗಳ  ಆಧಾರದ ಮೇಲೆ, ಭಾರತವು 165 ದೇಶಗಳಲ್ಲಿ 119 ನೇ ಸ್ಥಾನದಲ್ಲಿದೆ. ಇದು 2013ರಲ್ಲಿ 157 ದೇಶಗಳ ಮಧ್ಯೆ  90 ನೇ ಸ್ಥಾನದಲ್ಲಿತ್ತು. 2013 ರಿಂದಈಚೆಗೆ "ವೈಯಕ್ತಿಕ ಸ್ವಾತಂತ್ರ್ಯ" ಕ್ಕಾಗಿ ಭಾರತದ ಶ್ರೇಯಾಂಕವು ಕುಸಿದಿದ್ದರೂ, ಆ ಅವಧಿಯಲ್ಲಿ "ಆರ್ಥಿಕ ಸ್ವಾತಂತ್ರ್ಯ" ದ ಮೇಲೆ ಅದರ ಕಾರ್ಯಕ್ಷಮತೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ವಿವರಗಳು  ತೋರಿಸಿವೆ. 2021 ರ ವರದಿ ಈ ಎರಡು ‘ಥಿಂಕ್ ಟ್ಯಾಂಕ್‌’ ಸ೦ಸ್ಥೆಗಳಿಂದ ಜ೦ಟಿಯಾಗಿ ಪ
ಇಮೇಜ್
  ಬಾಂಗ್ಲಾದೇಶದ ಕಲ್ಪನೆಯನ್ನು ಅದರ ಸಾಮಾಜಿಕ-ಆರ್ಥಿಕ ಯಶಸ್ಸಿಗೆ,  ಧಾರ್ಮಿಕ ರಾಷ್ಟ್ರೀಯತೆಯನ್ನು ಅದು ಕೀಳ್ಪಡಿಸಿರುವುದಕ್ಕೆ,  ಕೊ೦ಡಾಡಿ ಸ೦ಭ್ರಮಿಸಬೇಕಾಗಿದೆ   ತನ್ನ 50 ನೇ ವಾರ್ಷಿಕೋತ್ಸವದಂದು, ಬಾಂಗ್ಲಾದೇಶವನ್ನು ದಕ್ಷಿಣ ಏಷ್ಯಾದ ಯಶಸ್ಸಿನ ಕಥೆ ಎಂದು ಹೊಗಳಲಾಗುತ್ತಿದೆ, ಅದರ ಆರ್ಥಿಕ ಅಭಿವೃದ್ಧಿಯು ಅದರ ಸಾಂವಿಧಾನಿಕ ಜಾತ್ಯತೀತತೆಯಿಂದ ಮಾರ್ಗದರ್ಶನ ಪಡೆದು ಸುಗಮಗೊಳಿಸಲ್ಪಟ್ಟಿದೆ ಎ೦ದು ಕಾಣಲಾಗುತ್ತಿದೆ  ಸ೦ಪಾದಕೀಯ : ‘ ಇ೦ಡಿಯನ್ ಎಕ್ಸ್ಪ್ರೆಸ್’   ಡಿಸೆಂಬರ್ 16, 2021  ಅದರ ವಿಮೋಚನೆಯಲ್ಲಿ ಭಾರತದ ಪಾತ್ರದ೦ತೆಯೇ ಬಾಂಗ್ಲಾದೇಶದ ಯಶಸ್ಸು ಗಮನಾರ್ಹವಾದದ್ದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಮಿಲಿಟರಿ ಹಸ್ತಕ್ಷೇಪ ಸೇರಿದಂತೆ ಭಾರತದ ಸಕ್ರಿಯ ನೆರವಿನೊಂದಿಗೆ ಪಾಕಿಸ್ತಾನದಿಂದ ವಿಮೋಚನೆಗೊಂಡ ಬಾಂಗ್ಲಾದೇಶವು  ಎರಡನೆಯ ವಿಶ್ವ ಸಮರ ದ ನಂತರ ರಚಿಸಲಾದ ಮೊದಲ ಹೊಸ ದೇಶವಾಗಿದೆ. ಭಾರತದ ಸ್ವಾತಂತ್ರ್ಯ ಮತ್ತು ಪಾಕಿಸ್ತಾನದ ಸೃಷ್ಟಿಯಾದ ಕಾಲು ಶತಮಾನದ ನಂತರ, ಈ ಹೊಸ ರಾಷ್ಟ್ರವು ‘ರಾಷ್ಟ್ರ ನಿರ್ಮಾಣಕ್ಕೆ ಧರ್ಮವು ಅತ್ಯಂತ ನಿರಾಕರಿಸಲಾಗದ ಸಾಧನವಾಗಿದೆ’ ಎಂಬ ಪ್ರತಿಪಾದನೆಯನ್ನು ಸುಳ್ಳೆ೦ದು ತೋರಿಸಿತು .  ಮೊದಲು ಪೂರ್ವ ಬಂಗಾಳವಾಗಿದ್ದ ಪೂರ್ವ ಪಾಕಿಸ್ತಾನ,  ಪ್ರಧಾನವಾಗಿ ಮುಸ್ಲಿಮ ಧರ್ಮದ್ದಾಗಿದ್ದರೂ  ಅದಕ್ಕಿಂತ ಹೆಚ್ಚಾಗಿ ಅದು ಬಂಗಾಳಿಯಾಗಿತ್ತು. ಜಿನ್ನಾ ಇದನ್ನು ಗ್ರಹಿಸಲು ವಿಫಲರಾದರು ಮತ್ತು 1948 ರ ಪೂರ್ವ ಪ