ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಎಬಿವಿಪಿ ಪ್ರತಿಭಟನೆಯ ನಂತರ ಪೋಲೀಸ್ ವರಿಷ್ಟಾಧಿಕಾರಿ  ಎಚ್ಚರಿಕೆ ಕಳುಹಿಸಿದ್ದಾರೆ. ಇದರಿ೦ದಾಗಿ ಮಧ್ಯಪ್ರದೇಶ ದ ಕೇ೦ದ್ರೀಯ ವಿಶ್ವವಿದ್ಯಾನಿಲಯವು ವೆಬಿನಾರ್‌ನಿಂದ ಹೊರಬಂದಿತು  ಇ೦ಡಿಯನ್ ಎಕ್ಸ್ಪ್ರೆಸ್ ಪತ್ರಿಕ ವರದಿ, ೩೧ ಜುಲ್ಯ್ ೨೦೨೧ ಸಾಗರದಲ್ಲಿಗೌರ್ ವಿಶ್ವವಿದ್ಯಾಲಯ. (ಎಕ್ಸ್‌ಪ್ರೆಸ್ ಫೈಲ್ ಫೋಟೋ) ಒ೦ದು ಕೇ೦ದ್ರೀಯ ವಿಶ್ವ ವಿದ್ಯಾನಿಲಯವು ಪೋಲೀಸರ ತಾಕೀತಿನ೦ತರ ಯೋಜಿಸಿದ್ದ ಅಂತಾರಾಷ್ಟ್ರೀಯ ವೆಬಿನಾರ್ (ಇ೦ಟರ್ನೆಟ್ ಮೂಲಕ ನಡೆಸುವ ವಿಚಾರ ಗೋಷ್ಠಿ- ವೆಬ್ ಸೆಮಿನರ್)ನಿ೦ದ ಹೊರ ಬ೦ದಿತು.  ಮಧ್ಯಪ್ರದೇಶದ ಸಾಗರದಲ್ಲಿರುವ ಡಾ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ ಒ೦ದು ಕೇ೦ದ್ರೀಯ ವಿಶ್ವವಿದ್ಯಾಲಯ.  ಈ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು ಜುಲೈ 30 ಮತ್ತು 31 ರಂದು ’ವೈಜ್ಞಾನಿಕ ಮನೋಭಾವದ ಸಾಧನೆಯಲ್ಲಿನ ಭಾಷಾ ಮತ್ತು ಸ೦ಸ್ಕೃತಿ  ಮೂಲದ  ಅಡೆತಡೆಗಳು’ ಎ೦ಬ ವಿಷಯದ ಬಗ್ಗೆ ಅಮೆರಿಕದ ಮಾಂಟ್‌ಕ್ಲೇರ್ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಜ೦ಟಿ-ಆತಿಥ್ಯದ ವಿಚಾರ ಗೋಷ್ಟಿಯನ್ನು ಯೋಜಿಸಿತ್ತು. .   ಇದರಲ್ಲಿ ಭಾಗವಹಿಸುವರಲ್ಲಿ ಮಾಜಿ ಸಿಎಸ್‌ಐಆರ್ ಮುಖ್ಯ ವಿಜ್ಞಾನಿ ಗೌಹರ್ ರಜಾ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ್, ಐಐಟಿ ಹೈದರಾಬಾದ್‌ನ ಪ್ರಾಧ್ಯಾಪಕ ಹರ್ಜಿಂದರ್ ಸಿಂಗ್ ಮತ್ತು ಅಮೆರಿಕದ ಮ್ಯಾಸಚೂಸೆಟ್ಸ್‌ನ ಬ್ರಿಡ್ಜ್‌ವಾಟರ್ ರಾಜ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.  ಅಸೀಮ್ ಹಸ್ನೇನ್ ಇವರು ಸೇರಿದ್ದರು. 
ಇಮೇಜ್
  ಬಂಧನದಲ್ಲಿರುವ ಭೀಮಾ ಕೊರೆಗಾಂವ್ ಕಾರ್ಯಕರ್ತರು (B K - 16) ಯಾರು (ಭಾಗ- ೧) ಸುಳ್ಳು ಆರೋಪದ ಮೇಲೆ ಸ್ಟಾನ್ ಸ್ವಾಮಿಯನ್ನು ಜೈಲಿಗೆ ಹಾಕಲಾಗಿತ್ತು ಎಂದು ಯು.ಎನ್. ನ ಉನ್ನತ ಅಧಿಕಾರಿ ಉಳಿದಿರುವ ಎಲ್ಲಾ 15 ಸಹ-ಆರೋಪಿಗಳನ್ನೂ ಬಿಡುಗಡೆ ಮಾಡಬೇಕು- ವಿಶ್ವ ಸ೦ಸ್ಥೆಯ ಮಾನವ ಅಧಿಕಾರಗಳ ಘಟಕದ ಮುಖ್ಯಸ್ಥೆ.   ಇತ್ತೀಚೆಗೆ  ನಿಧನರಾದ ಫಾ.ಸ್ಟಾನ್ ಸ್ವಾಮಿ ಅವರನ್ನು "ಭಯೋತ್ಪಾದನೆಯ ಸುಳ್ಳು ಆರೋಪದ ಮೇಲೆ" ಬಂಧಿಸಲಾಯಿತು. ಎಂದು ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಾನವ ಹಕ್ಕುಗಳ ರಕ್ಷಕರ ಕುರಿತ ಯುಎನ್  (ಯುನೈಟೆಡ್ ನೇಶನ್ಸ್- ವಿಶ್ವಸಂಸ್ಥೆ) ವಿಶೇಷ ಅಧಿಕಾರಿ ಮೇರಿ ಲಾಲರ್ ಅವರ ಕಳವಳಗಳಲ್ಲಿ ಯುರೊಪಿಯನ್ ಒಕ್ಕೂಟದ - ಯುರೊಪಿಯನ್ ಯೂನಿಯನ್ (ಇ ಯು) -  ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ಇಮಾನ್ ಗಿಲ್ಮೋರ್ ಭಾಗವಹಿಸಿಕೊಂಡಿದ್ದಾರೆ. ಅವರು ಯುರೋಪಿಯನ್ ಒಕ್ಕೂಟವು ಫಾ ಸ್ಟಾನ್ ಸ್ವಾಮಿ ವಿಷಯವನ್ನು ಭಾರತೀಯ ಅಧಿಕಾರಿಗಳೊಂದಿಗೆ "ಪದೇ ಪದೇ" ಎತ್ತಿ ಕೊ೦ಡಿತ್ತು,  ಎನ್ನುತ್ತಾರೆ. ಭೀಮಾ ಕೋರೆಗಾ೦ವ್ ಪ್ರಕರಣದ ವಿಚಾರಣೆ ಬಾಕಿ   ಫಾದರ್ ಸ್ಟಾನ್ ಮತ್ತು ಇತರ 15 ಮಾನವ ಹಕ್ಕುಗಳ ರಕ್ಷಕರ ಪ್ರಕರಣಗಳನ್ನು ಕಳೆದ ಮೂರು ವರ್ಷಗಳಲ್ಲಿ ಭಾರತ ಸರ್ಕಾರದೊಂದಿಗೆ  ವಿಚಾರಣೆಯ ಪೂರ್ವ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ಕಳೆದ ನವೆಂಬರ್‌ನಲ್ಲಿ "ಭಾರತದಲ್ಲಿ ನಾಗರಿಕ ಸ್ಥಳ ಕುಗ್ಗುವಿಕೆ&qu
ಇಮೇಜ್
    ‘ಆದರ್ಶ’ ಬಲಿಪಶುವನ್ನು ತಿರಸ್ಕರಿಸುವುದು   ಇತ್ತೀಚಿನ ಸೆಷನ್ಸ್ ನ್ಯಾಯಾಲಯದ ತೀರ್ಪು ದೌರ್ಜನ್ಯಕ್ಕೆ ಗುರಿಯಾದವರ  ಬಗ್ಗೆ ಆಳವಾಗಿ ಹುದುಗಿರುವ ಜಾತಿ-ಪಿತೃಪ್ರಧಾನ ತಿಳುವಳಿಕೆಯನ್ನು ಬಹಿರಂಗಪಡಿಸುತ್ತದೆ.        ದಿಶಾ ವಾಡೆಕರ್ ಬರೆಯುತ್ತಾರೆ:      ಗೋವಾದ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ, ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ತಮ್ಮ ಕಿರಿಯ ಸಹೋದ್ಯೋಗಿ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ.  ಆರೋಪವನ್ನು ಪುಷ್ಟೀಕರಿಸುವ ಫ಼ಿರ್ಯಾದುದಾರಳನ್ನು ಬೆ೦ಬಲಿಸುವ ಪುರಾವೆಗಳ ಕೊರತೆ,   ಮತ್ತು ಆತ್ಮವಿಶ್ವಾಸವನ್ನು ಪ್ರೇರೇಪಿಸದ ಆಕೆಯ ಹೇಳಿಕೆಯಲ್ಲಿನ ಕಡೆಗಣಿಸಲಾಗದ ವಿರೋಧಾಭಾಸಗಳು ಮತ್ತು ಲೋಪಗಳು, ಇವುಗಳನ್ನು ಉಲ್ಲೇಖಿಸಿ ನ್ಯಾಯಾಲಯವು ತೇಜ್‌ಪಾಲ್‌ನನ್ನು ಖುಲಾಸೆಗೊಳಿಸಿತು.       527 ಪುಟಗಳ ತೀರ್ಪು  ದೂರುದಾರಳ ಲೈಂಗಿಕ ಇತಿಹಾಸ ಮತ್ತು ಘಟನೆಯ ನಂತರ ಆಕೆಯ ನಡವಳಿಕೆ, ಮುಖ್ಯವಾಗಿ ಸಾರ್ವಜನಿಕ ದೃಷ್ಟಿಯಲ್ಲಿ ಆಕೆಗೆ ತಕ್ಷಣದ ಆಘಾತದ ಕೊರತೆಯ ಬಗ್ಗೆ,  ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.  ಇದುಸುಪ್ರೀಂ ಕೋರ್ಟ್‌ನ ಮಾರ್ಚ್ 2021 ರ ಅಪರ್ಣ ಭಟ್ ವಿ. ಮಧ್ಯ ಪ್ರದೇಶ್  ತೀರ್ಪಿನ ನೇರ ಉಲ್ಲಂಘನೆಯಾಗಿದೆ. ಇದರಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಬದುಕುಳಿದವರ ಸ೦ಬ೦ಧವಿಲ್ಲದ  ನಡವಳಿಕೆಯ ಬಗ್ಗೆ ನ್ಯಾಯಾಲಯಗಳು ಹೇಳಿಕೆ ನೀಡು
ಇಮೇಜ್
  ಬುಧ್ಧಿಜೀವಿಗಳ ಹೊಣೆ - ನೋಮ್ ಚೊಮ್ಸ್ಕಿಯ ಶಾಶ್ವತವಾದ ಕೊಡುಗೆ ಫೆಬ್ರವರಿ ೧೯೬೭ ರಲ್ಲಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್ ‌ ಪತ್ರಿಕೆಯಲ್ಲಿ 'ಬುದ್ಧಿಜೀವಿಗಳ ಜವಾಬ್ದಾರಿ' ಲೇಖನದ ಪ್ರಕಟಣೆಯೊಂದಿಗೆ, ವಿಯೆಟ್ನಾಂನಲ್ಲಿನ ಯುದ್ಧದ ಪ್ರಮುಖ ವಿಮರ್ಶಕರಾಗಿ ನೋಮ್ ಚೋಮ್ಸ್ಕಿ ಅಮೆರಿಕದ ರಾಜಕೀಯ ರಂಗಕ್ಕೆ ಹೊಳೆದು ಬ೦ದರು. 'ಬುದ್ಧಿಜೀವಿಗಳ ಜವಾಬ್ದಾರಿ' ವಿಯೆಟ್ನಾಂ ಅವಧಿಯ 'ಯುದ್ಧ ವಿರೋಧಿ ಸಾಹಿತ್ಯದ ಏಕೈಕ ಅತ್ಯಂತ ಪ್ರಭಾವಶಾಲಿ ತುಣುಕು' ಎಂದು ಸೂಕ್ತವಾಗಿ ವರ್ಣಿಸಲಾಗಿದೆ. ೧೯೬೦ಯ ದಶಕದ ಅಂತ್ಯದ ವೇಳೆಗೆ, ಚೋಮ್ಸ್ಕಿ ಇನ್ನೂ ನವೀನವಾದ  ಯುದ್ಧ ವಿರೋಧಿ ಚಳವಳಿಯಲ್ಲಿ ಭಾಗಿಯಾಗಿದ್ದರು. ಅಂದಿನಿಂದ, ಚೋಮ್ಸ್ಕಿ ಪ್ರಮುಖ ಸಾರ್ವಜನಿಕ ಬುದ್ಧಿಜೀವಿ, ನೂರಾರು ಪ್ರಬಂಧಗಳು ಮತ್ತು ಡಜನ್ಗಟ್ಟಲೆ ಪುಸ್ತಕಗಳನ್ನು ಪ್ರಕಟಿಸಿದರು ಮತ್ತು ಸಾವಿರಾರು ಸ೦ಭಾಷಣೆಗಳು  ಮತ್ತು ಸಂದರ್ಶನಗಳನ್ನು ನೀಡಿದರು. ೨೦೦೪ ರ ಹೊತ್ತಿಗೆ, ನ್ಯೂಯಾರ್ಕ್ ಟೈಮ್ಸ್ ಸಹ -(ಈ ಪತ್ರಿಕೆ ಚೋಮ್ಸ್ಕಿಯ ರಾಜಕೀಯ ಬರಹಗಳ ದೊಡ್ಡ ಅಭಿಮಾನಿಯಲ್ಲವಾದರೂ) - 'ಪುಸ್ತಕ ಮಾರಾಟವೇ  ಮಾನದಂಡವಾಗಿದ್ದರೆ, ಅವರು ಇಂದು ವಿದೇಶಾಂಗ ನೀತಿಯ ಬಗ್ಗೆ ಧರೆಯಲ್ಲಿಅತ್ಯ೦ತ ಹೆಚ್ಚು ಓದಲ್ಪಟ್ಟ  ಅಮೆರಿಕನ್ ಧ್ವನಿಯಾಗಿರಬಹುದು' ಎಂದು ಒಪ್ಪಿಕೊಳ್ಳಬೇಕಾಗಿಯಿತು. ತಮ್ಮ ೯೨ನೇ ವಯಸಿನಲ್ಲಿ, ಚೋಮ್ಸ್ಕಿ ಈಗಲೂ ತಮ್ಮ ಕಾರ್ಯಗಳನ್ನು ಮು೦ದುವರಿಸುತ್ತಿದ್ದಾರೆ. ಚೋಮ್ಸ್ಕಿಯ