ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಜಿ ಎನ್ ದೇವಿ : ಭಾರತದ ಭಾಷಾ ಸಂಪತ್ತನ್ನು ದಾಖಲೆ ಮಾಡುವದು ಅದೇ ಸಮಯ ನಾಯಕರು ಹಿಂದಿಯನ್ನು ರಾಷ್ಟ್ರದ ಭಾಷೆ ಎಂದು ಮೇಲೇರಿಸುತ್ತಿದ್ದಾರೆ.   ಜಿ ಎನ್ ದೇವಿ ಅವರ ಭಾಷಾ ಸಂಶೋಧನೆಯು  ಭಾರತದಾದ್ಯಂತ, ಹಿಮಾಲಯದಿಂದ ಹಿಡಿದು, (ಅಲ್ಲಿನ  ಚಳಿ ತನ್ನನ್ನು ಕೊಲ್ಲುತ್ತದೆ ಎಂದು ಅವರು ಭಾವಿಸಿದ್ದರು!), ಕಾಡಿನಲ್ಲಿ ವಾಸಿಸುವ ಬೆಟ್ಟದ ಬುಡಕಟ್ಟು ಜನಾಂಗದವರೆಗೆ ಅವರನ್ನು ಕರೆದೊಯ್ದಿದೆ.  ಮತ್ತು ಕೆಲವೊಮ್ಮೆ ಅವರ ಸಂಶೋಧನೆಯು ತಮ್ಮದೇ  ವಿಶ್ವ ದೃಷ್ಟಿಕೋನವನ್ನು ಪ್ರಶ್ನೆ ಮಾಡಿದೆ ಸಮೀರ್ ಯಾಸಿರ್ ಬರೆದಿದ್ದಾರೆ   ನ್ಯೂಯಾರ್ಕ್ ಟೈಮ್ಸ್ |       ಧಾರವಾಡ |       ಜೂನ್ 11, 2022  ಭಾಷಾಶಾಸ್ತ್ರಜ್ಞ ಮತ್ತು ವಿದ್ವಾಂಸರಾದ ಗಣೇಶ್ ದೇವಿ ಅವರು ಮೇ 18, 2022 ರಂದು ಭಾರತದ ತೇಜ್‌ಗಢ್‌ನಲ್ಲಿರುವ ತಮ್ಮ ಆದಿವಾಸಿ ಅಕಾಡೆಮಿಯಲ್ಲಿ ಬುಡಕಟ್ಟು ಹಕ್ಕುಗಳ ಕುರಿತು ಚರ್ಚಿಸುತ್ತಿದ್ದಾರೆ. ದೇವಿ ಅವರು ಭಾರತದ ನೂರಾರು ವಿಭಿನ್ನ ಭಾಷೆಗಳನ್ನು ದಾಖಲಿಸಲು ಹಲವು ದಶಕಗಳನ್ನು ಕಳೆದಿದ್ದಾರೆ. ಮುಂದಿನ ಯೋಜನೆ:  ಭಾರತದ 12,000 ವರ್ಷಗಳ ಇತಿಹಾಸವನ್ನು ಬರೆಯುವದು. ಇದು  ‘ಹಿಂದೂ-ಮೊದಲ’ ರಾಷ್ಟ್ರೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಈ ದೇಶದಲ್ಲಿ ರಾಜಕೀಯ ಧರ್ಮಾಂಧತೆಯನ್ನು ಹರಡುವ ಉದ್ದೇಶಕ್ಕಾಗಿ  ಇತಿಹಾಸವನ್ನು ಕಲಿಸಲಾಗುತ್ತಿದೆ, (ಸೌಮ್ಯ ಖಂಡೇಲ್ವಾಲ್ / ದಿ ನ್ಯೂಯಾರ್ಕ್ ಟೈಮ್ಸ್) ಇದೊ೦ದು ಬೃಹತ್ ಕಾರ್ಯ: 3,500 ಕ್ಕೂ
ಇಮೇಜ್
  ಕರ್ನಾಟಕದಲ್ಲಿ ಶಾಲಾ ಮಧ್ಯಾಹ್ನದ ಉಪಹಾರ:      ಸಾಮಾಜಿಕ ಸಂಪ್ರದಾಯವಾದದ ಎದುರಿನಲ್ಲಿ ವೈಜ್ಞಾನಿಕ ಪುರಾವೆಗಳು   ಸಿಧ್ಧಾರ್ಥ್ ಜೋಶಿ ಸಿಲ್ವಿಯ ಕರ್ಪಗಮ್   ಎಕೊನೊಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ   ೪ ಜೂನ್, ೨೦೨೨ ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ ಮೊಟ್ಟೆಗಳನ್ನು ಪರಿಚಯಿಸುವುದಕ್ಕೆ ವಿರೋಧದ ಸಂದರ್ಭದಲ್ಲಿ, ರಾಜ್ಯದಲ್ಲಿ ಪೌಷ್ಟಿಕಾಂಶ ನೀತಿಯನ್ನು ಸಣ್ಣ ಆದರೆ ಪ್ರಭಾವಶಾಲಿ ಧಾರ್ಮಿಕ ಮತ್ತು ಜಾತಿ ಆಧಾರಿತ ಗುಂಪುಗಳು ವಿಶ್ವಸಿಸುವ ಸಂಶಯಾಸ್ಪದ ಅವೈಜ್ಞಾನಿಕ ನಂಬಿಕೆಗಳಿಗೆ  ಹೇಗೆ ಒತ್ತೆಯಾಳಾಗಿ ಇರಿಸಲಾಗಿದೆ ಎಂಬುದನ್ನು ಲೇಖನವು ಪರಿಶೀಲಿಸುತ್ತದೆ.    ಲೇಖನದ ಪ್ರಧಾನ ಬಿ೦ದುಗಳು:   ನವೆಂಬರ್ ೨೦೨೧ರಲ್ಲಿ, ಕರ್ನಾಟಕ ಸರ್ಕಾರವು ಅಕ್ಷರ ದಾಸೋಹ ಅಥವಾ ಮಧ್ಯಾಹ್ನದ ಉಪಹಾರದ (MDM)  ಕಾರ್ಯಕ್ರಮದ (GoK 2021) ಭಾಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಎಂದೂ ಕರೆಯಲಾಗುವ   ಈಶಾನ್ಯ ಕರ್ನಾಟಕದ ಏಳು ಅಪೌಷ್ಟಿಕತೆ ಪೀಡಿತ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ೧-೮  ನೇ ತರಗತಿಯ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸುವುದಾಗಿ ಘೋಷಿಸಿತು. ತಕ್ಷಣವೇ, ಈ ಕ್ರಮವನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಆಂದೋಲನದ ಬೆದರಿಕೆಯೊಂದಿಗೆ ಧಾರ್ಮಿಕ ಮುಖಂಡರಿಂದ ಈ ಕ್ರಮಕ್ಕೆ ಬಲವಾದ ವಿರೋಧ ಬ೦ದಿತು. ಇದರಲ್ಲಿ ಅಶ್ಚರ್ಯವಿದ್ದಿಲ್ಲ ಏಕ೦ದರೆ ಧಾರ್ಮಿಕ ವ್ಯಕ್ತಿಗಳು ಇಂತಹ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಇದು ಮೊದಲ ಸಂದರ್ಭವಲ್ಲ.  ಈ