ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ - ೧೦ ಪುಸ್ತಕಗಳ ಪರಿಚಯ ಪ್ರತಿ ವರ್ಷ, ೨ ದಶಲಕ್ಷಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೆ ಕಳೆದ ೫೦೦ ವರ್ಷಗಳಲ್ಲಿ ಹೊರಬಂದಿರುವ ಶತಕೋಟಿ ಶೀರ್ಷಿಕೆಗಳಲ್ಲಿ, ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು ಮಾತ್ರ ನಿಜವಾಗಿಯೂ ಮಾನವಕುಲದ ಮಾರ್ಗವನ್ನು ಬದಲಾಯಿಸಿವೆ . ಈ ಹೊತ್ತಿಗೆಗಳು ಕೇವಲ ಜನಪ್ರಿಯವಾಗಿರಲಿಲ್ಲ; ಈ ಕೃತಿಗಳು ಅಧಿಕಾರಕ್ಕೆ ಸವಾಲು ಹಾಕಿದವು , ಸಮಾಜಗಳನ್ನು ಮರುರೂಪಿಸಿದವು, ದೈವ ವಿಶ್ವಾಸ ಪಧ್ಧತಿಗಳನ್ನು ಪ್ರಶ್ನಿಸಿದವು, ರಾಜಕೀಯವನ್ನು ಪುನರ್ ವ್ಯಾಖ್ಯಾನಿಸಿದಲ್ಲದೇ ಮನುಷ್ಯರು ಯೋಚಿಸುವ ರೀತಿಯನ್ನು ಪರಿವರ್ತಿಸಿದವು. ನನ್ನ ಈ ವೈಯಕ್ತಿಕ ಅತ್ಯಂತ ಪ್ರಭಾವಶಾಲಿ ಪುಸ್ತಕಗಳು ಐತಿಹಾಸಿಕ ಬದಲಾವಣೆಗಳ ಕಾಲಗಳನ್ನು ಬದುಕುಳಿದರಲ್ಲದೆ ತಾವೇ ಕಾಲದ ಚಲನೆಯ ವಿನ್ಯಾಸವನ್ನು ವ್ಯಾಖ್ಯಾನಿಸಿವೆ . ಸಮಾಜದ ಬಗ್ಗೆ ೨೪೦೦ ವರ್ಷಗಳ ಹಳೆಯ ಕೈಪಿಡಿ - ದಿ ರಿಪಬ್ಲಿಕ್ ಪ್ರಥಮ ಸ್ಥಾನದಲ್ಲಿದೆ ಸಾಮಾನ್ಯ ಯುಗಕ್ಕೆ ೩೭೫ ವರ್ಷ ಮೊದಲು (ಇದನ್ನು ಹಿಂದೆ ‘ಕ್ರಿಸ್ತು ಪೂರ್ವ’ ಎಂದು ಹೇಳಲಾಗುತ್ತಿತ್ತು ) ಪ್ಲೇಟೋ ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಪೊಲಿಟಿಯ (POLITEIEA - ಇಂಗ್ಲಿಷ್ ಅನುವಾದದಲ್ಲಿ ‘ದಿ ರಿಪಬ್ಲಿಕ್’ -...
ಪೋಸ್ಟ್‌ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಿಕಲ್ ಉಪನ್ಯಾಸ:೨೧ ನೇ ಶತಮಾನದಲ್ಲಿ ವಿಶ್ವ ಅಭಿವೃದ್ಧಿಗಾಗಿ ಹೋರಾಟ: ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ಮತ್ತು ಪರಿಸರ-ಸಮಾಜವಾದ ಸಿರಿವಂತ ರಾಷ್ಟ್ರಗಳು ಮತ್ತು ಇತರರು- ವಿರೋಧಾಭಾಸಗಳು : ಈ ಚರ್ಚೆಯ ವಿಷಯ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ, ‘ಜಾಗತಿಕ ದಕ್ಷಿಣ’ದಲ್ಲಿ(ಅಂದರೆ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ; ಶ್ರೀಮಂತ ಮತ್ತು ಹೆಚ್ಚು ಕೈಗಾರಿಕೀಕರಣಗೊಂಡ ದೇಶಗಳು ಉತ್ತರ ಗೋಳಾರ್ಧದಲ್ಲಿವೆ, ಇವನ್ನು ‘ಜಾಗತಿಕ ಉತ್ತರ’ ಎ೦ದು ಕರೆಯುವ ರೂಢಿ ಇದೆ. ) ಪರಿಹಾರವಿಲ್ಲದೆ ಕಂಡುಬರುತ್ತಿರುವ ಸಾಮೂಹಿಕ ಅಭಾವ ಮತ್ತು ಅಭಿವೃದ್ಧಿಯ ಹಿಂದುಳಿದಿರುವಿಕೆಯ ನಡೆಯುತ್ತಿರುವ ಬಿಕ್ಕಟ್ಟುಗಳು, ಹಾಗೂ ವಿಶ್ವ ಮಟ್ಟದಲ್ಲಿ ಘಟಿಸುತ್ತಿರುವ ಅಸಮಾನತೆ ಮತ್ತು ಪರಿಸರ ಕುಸಿತ. ಇದನ್ನು ಐತಿಹಾಸಿಕವಾಗಿ ರೂಪಿಸುವಾಗ, ಈ ಬಿಕ್ಕಟ್ಟುಗಳನ್ನು ಬಂಡವಾಳಶಾಹಿಯಿಂದ ಸೃಷ್ಟಿಸಲ್ಪಟ್ಟ ಮತ್ತು ಶಾಶ್ವತಗೊಳಿಸಲ್ಪಟ್ಟದ್ದಾಗಿ ಮತ್ತು ಬಂಡವಾಳ ಸಂಗ್ರಹಣೆಗೆ ಆಧಾರವಾಗಿರುವ ಸಾಮ್ರಾಜ್ಯಶಾಹಿ ಚಲನಶೀಲತೆಯಿಂದ ನಿರೂಪಿಸಲ್ಪಟ್ಟಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಪ್ರಸ್ತುತ ಕ್ಷಣವನ್ನು ವಿವರಿಸಲು, ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಿದಾಗ, ನಾವು ಅಸಾಧಾರಣ ವಿರೋಧಾಭಾಸವನ್ನು ನೋಡುತ್ತೇವೆ. ಒಂದೆಡೆ, ವಿಶ್ವ ಆರ್ಥಿಕತೆ ದಿಗ್ಭ್ರಮೆಗೊಳಿಸುವ ಉತ್ಪಾದನೆಯ ಮಟ್ಟವನ್ನು ತಲುಪಿದೆ. ಅ...