ಪೋಸ್ಟ್‌ಗಳು

ಡಿಸೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
  ಉದಾರವಾದಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ವಹಿಸುವವರಿಗೆ ೨೦೨೪ರ ವರ್ಷ  ಕಳವಳವನ್ನುಂಟು ಮಾಡುತ್ತದೆ. ಸಿದ್ಧಾಂತದಲ್ಲಿ ಇದು ಪ್ರಜಾಪ್ರಭುತ್ವದ ವಿಜಯದ ವರ್ಷವಾಗಿರಬೇಕು. ಪ್ರಾಯೋಗಿಕವಾಗಿ ಇದು ಅದರ ವಿರುದ್ಧವಾಗಿರುತ್ತದೆ. ಜಗತ್ತಿನ ಅರ್ಧಕ್ಕಿ೦ತ ಹೆಚ್ಚು ಜನರು ೨೦೨೪ ರಲ್ಲಿ ರಾಷ್ಟ್ರವ್ಯಾಪಿ ಚುನಾವಣೆಗಳನ್ನು ನಡೆಸುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.ಈ ಮೈಲಿಗಲ್ಲನ್ನು ತಲುಪಿರುವುದು ಇದೇ ಮೊದಲು .ಮತದಾರರ ಮತದಾನದ ಇತ್ತೀಚಿನ ಮಾದರಿಗಳನ್ನು ಆಧರಿಸಿ, ೭೦ ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು ೨ ಶತಕೋಟಿ ಜನರು ಮತದಾನಕ್ಕೆ ಹೋಗುತ್ತಾರೆ ಎ೦ದು ಲೆಕ್ಕ ಮಾಡಬಹುದು.  ಬ್ರಿಟನ್‌ನಿಂದ ಬಾಂಗ್ಲಾದೇಶ, ಭಾರತದಿಂದ ಇಂಡೋನೇಷ್ಯಾದ ವರೆಗೂ ಮತದಾನ ನಡೆಯಲಿದೆ. ಹೀಗಾಗಿ ಇದು ಪ್ರಜಾಪ್ರಭುತ್ವದ ವಿಜಯೋತ್ಸವದ ವರ್ಷ ಎಂದು ತೋರಬಹುದು.  ಆದರೆ ನಿಜಕ್ಕೂ  ಅದು ವಿರುದ್ಧವಾಗಿರುತ್ತದೆ. ಅನೇಕ ಚುನಾವಣೆಗಳು ಉದಾರ ನೀತಿಗಳು ಮತ್ತು ಆಚರಣೆಗಳಿಗೆ ವಿರುದ್ಧವಾಗಿರುವ  ಆಡಳಿತಗಾರರನ್ನು ಭದ್ರಪಡಿಸುತ್ತವೆ. ಇತರ ಅನೇಕ ಚುನಾವಣೆಗಳು ಭ್ರಷ್ಟರು ಮತ್ತು  ಅಯೋಗ್ಯರನ್ನು ಪುರಸ್ಕರಿಸುತ್ತವೆ. ಅತ್ಯಂತ ಪ್ರಮುಖ ಸ್ಪರ್ಧೆಯಾದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ತುಂಬಾ ವಿಷಪೂರಿತ ಮತ್ತು ಧ್ರುವೀಕರಣವಾಗಿದ್ದು ಅದು ಜಾಗತಿಕ ರಾಜಕೀಯದ ಮೇಲೆ  ವಿಷಣ್ಣತೆಯನ್ನು  ಹೂಡುತ್ತದೆ. ಉಕ್ರೇನ್‌ನಿಂದ ಮಧ್ಯಪ್ರಾಚ್ಯದವರೆಗೆ ನಡೆಯುತ್ತಿರುವ ಸಂಘರ್ಷಗಳ  ಹಿನ್ನೆಲೆಯಲ್ ಲಿಅಮೆರಿಕ ಭವಿಷ
ಇಮೇಜ್
  ಹೆನ್ರಿ ಕಿಸ್ಸಿಂಜರ್, ಲಕ್ಷಗಟ್ಟಲೆ ಸಾವುಗಳಿಗೆ ಜವಾಬ್ದಾರರಾಗಿರುವ US ರಾಜತಾಂತ್ರಿಕ, 100 ನೇ ವಯಸ್ಸಿನಲ್ಲಿ ನಿಧನರಾದರು " ಹೆನ್ರಿ ಕಿಸ್ಸಿಂಜರ್ ಅವರಂತೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಹೆಚ್ಚು ಸಾವು, ವಿನಾಶ ಮತ್ತು ಮಾನವ ಸಂಕಟಗಳಿಗೆ ಜವಾಬುದಾರರು ಬೇರೆ ಯಾರೂ ಇಲ್ಲ." ನಿಕ್ ಟರ್ಸ್   ಲೇಖನ ನವೆಂಬರ್ 29 2023, 9:49 p.m.  ಅಮೆರಿಕಾದ ಇಬ್ಬರು ರಾಷ್ಟ್ರಧ್ಯಕ್ಷರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಕಾರ್ಯದರ್ಶಿ ಮತ್ತು ದೀರ್ಘಾವಧಿಯ  ಅಮೆರಿಕಾದ ವಿದೇಶಾಂಗ ನೀತಿ ಸ್ಥಾಪನೆಯಲ್ಲಿ   ಅಧಿಕೃತವಾಗಿ ಹಾಗೆಯೇ ಪರದೆಯ ಹಿಂದೆ  ಕಾರ್ಯ ಮಾಡಿದ ಹೆನ್ರಿ ಕಿಸಿಂಜರ್, ೨೦೨೩ ನವೆಂಬರ್ ೨೯ ರಂದು ನಿಧನರಾದರು. ಅವರು ೧೦೦  ವರ್ಷ ವಯಸ್ಸಿನವರಾಗಿದ್ದರು. ಕಿಸ್ಸಿಂಜರ್ ವಿಯೆಟ್ನಾಂ ಯುದ್ಧವನ್ನು ವಿಸ್ತರಿಸಲು ಮತ್ತು ಆ ಸಂಘರ್ಷವನ್ನು ತಟಸ್ಥ ಕಾಂಬೋಡಿಯಾಕ್ಕೆ ವಿಸ್ತರಿಸಲು ಸಹಾಯ ಮಾಡಿದರು; ಕಾಂಬೋಡಿಯಾ, ಪೂರ್ವ ಟಿಮೋರ್ ಮತ್ತು ಬಾಂಗ್ಲಾದೇಶದಲ್ಲಿ ನರಮೇಧಗಳನ್ನು ಸುಗಮಗೊಳಿಸಿದರು; ದಕ್ಷಿಣ ಆಫ್ರಿಕಾದಲ್ಲಿ  ಅಂತರ್ಯುದ್ಧಗಳನ್ನು ವೇಗಗೊಳಿಸಿದರು ಮತ್ತು ದಕ್ಷಿಣ  ಅಮೆರಿಕದಾದ್ಯಂತ ದಂಗೆಗಳು ಮತ್ತು ಕೊಲೆಗಾರ ತಂಡಗಳನ್ನು ಬೆಂಬಲಿಸಿದರು . ಅವರ ಜೀವನಚರಿತ್ರೆಕಾರ ಗ್ರೆಗ್ ಗ್ರ್ಯಾಂಡಿನ್ ಪ್ರಕಾರ, ಕಿಸ್ಸಿ೦ಜರ್ ಅವರ ಕೈಗಳ ಮೇಲೆ  ಕನಿಷ್ಠ 3೦ ಲಕ್ಷ  ಜನರ ರಕ್ತವಿತ್ತು. "ಹೆನ್ರಿ ಕಿಸ್ಸಿಂಜರ್‌ನಂತೆ ಪ್ರಪಂಚದಾದ್ಯ