ಸಾವರ್ಕರ್‌ರ ರಾಷ್ಟ್ರೀಯತೆ ಕ್ರಿಸ್ಟೋಫ್ ಜಾಫ಼್ರೆಲೊ ಫ್ರೆಂಚ್ ರಾಜಕೀಯ ವಿಜ್ಞಾನಿ ಮತ್ತು ದಕ್ಷಿಣ ಏಷ್ಯಾ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಪರಿಣತಿ ಹೊಂದಿರುವ ಭಾರತಶಾಸ್ತ್ರಜ್ಞ . ಇವರ ಇತ್ತೀಚಿನ ಪುಸ್ತಕ “ Modi's India : Hindu Nationalism and the Rise of Ethnic Democracy”. (ಮೋದಿಯವರ ಭಾರತ: ಹಿಂದೂ ರಾಷ್ಟ್ರೀಯತೆ ಮತ್ತು ಜನಾಂಗೀಯ ಪ್ರಜಾಪ್ರಭುತ್ವದ ಉದಯ) ಅಗಸ್ಟ್ ೨೦೨೧ ಇ೦ಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆ ೩ ನವೆ೦ಬರ್ ೨೦೨೨ ‘ರಾಷ್ಟ್ರದ ಬಗೆಗಿನ ಸಾವರ್ಕರ್ ಅವರ ದೃಷ್ಟಿಕೋನವು ಜನಾಂಗೀಯ-ಧಾರ್ಮಿಕವಾಗಿತ್ತು; ಅವರ ಗಮನವು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ರಕ್ಷಿಸುವುದರಲ್ಲಿತ್ತು, ಇದಕ್ಕಾಗಿ ಅವರು ಬ್ರಿಟಿಷರೊಂದಿಗೆ ಸಹಕರಿಸಿದರು’ ಭಾರತವು ಇಂದು ಅನುಭವಿಸುತ್ತಿರುವ ಇತಿಹಾಸವನ್ನು ಪರಿಷ್ಕರಿಸುವ ಅಲೆಯು ಪಠ್ಯಪುಸ್ತಕಗಳಲ್ಲಿ ಹಾಗೂ ಸಾರ್ವಜನಿಕ ಸ೦ವಾದದಲ್ಲಿ ಗತಕಾಲದ ವಿವಿಧ ರೀತಿಯ ತಪ್ಪು ನಿರೂಪಣೆಯಲ್ಲಿ ಅಭಿವ್ಯಕ್ತಿ ಕಂಡುಕೊಳ್ಳುತ್ತದೆ. ಜವಾಹರಲಾಲ್ ನೆಹರು ಈ ಪ್ರವೃತ್ತಿಯ ಪ್ರಮುಖ ಬಲಿಪಶುಗಳಲ್ಲಿ ಒಬ್ಬರು - ಒಂದೋ ಅವರನ್ನು ಇತಿಹಾಸದಿಂದ ಅಳಿಸಲಾಗುತ್ತದೆ, ಅಥವಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಆಧುನಿಕ ಭಾರತವನ್ನು ರೂಪಿಸುವುದರಲ್ಲಿ ಅವರ ಪಾತ್ರವನ್ನು ತಿರುಚಲಾಗುತ್ತಿದೆ. ...
ಪೋಸ್ಟ್‌ಗಳು
HISTORY ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಜಿ ಎನ್ ದೇವಿ : ಭಾರತದ ಭಾಷಾ ಸಂಪತ್ತನ್ನು ದಾಖಲೆ ಮಾಡುವದು ಅದೇ ಸಮಯ ನಾಯಕರು ಹಿಂದಿಯನ್ನು ರಾಷ್ಟ್ರದ ಭಾಷೆ ಎಂದು ಮೇಲೇರಿಸುತ್ತಿದ್ದಾರೆ. ಜಿ ಎನ್ ದೇವಿ ಅವರ ಭಾಷಾ ಸಂಶೋಧನೆಯು ಭಾರತದಾದ್ಯಂತ, ಹಿಮಾಲಯದಿಂದ ಹಿಡಿದು, (ಅಲ್ಲಿನ ಚಳಿ ತನ್ನನ್ನು ಕೊಲ್ಲುತ್ತದೆ ಎಂದು ಅವರು ಭಾವಿಸಿದ್ದರು!), ಕಾಡಿನಲ್ಲಿ ವಾಸಿಸುವ ಬೆಟ್ಟದ ಬುಡಕಟ್ಟು ಜನಾಂಗದವರೆಗೆ ಅವರನ್ನು ಕರೆದೊಯ್ದಿದೆ. ಮತ್ತು ಕೆಲವೊಮ್ಮೆ ಅವರ ಸಂಶೋಧನೆಯು ತಮ್ಮದೇ ವಿಶ್ವ ದೃಷ್ಟಿಕೋನವನ್ನು ಪ್ರಶ್ನೆ ಮಾಡಿದೆ ಸಮೀರ್ ಯಾಸಿರ್ ಬರೆದಿದ್ದಾರೆ ನ್ಯೂಯಾರ್ಕ್ ಟೈಮ್ಸ್ | ಧಾರವಾಡ | ಜೂನ್ 11, 2022 ಭಾಷಾಶಾಸ್ತ್ರಜ್ಞ ಮತ್ತು ವಿದ್ವಾಂಸರಾದ ಗಣೇಶ್ ದೇವಿ ಅವರು ಮೇ 18, 2022 ರಂದು ಭಾರತದ ತೇಜ್‌ಗಢ್‌ನಲ್ಲಿರುವ ತಮ್ಮ ಆದಿವಾಸಿ ಅಕಾಡೆಮಿಯಲ್ಲಿ ಬುಡಕಟ್ಟು ಹಕ್ಕುಗಳ ಕುರಿತು ಚರ್ಚಿಸುತ್ತಿದ್ದಾರೆ. ದೇವಿ ಅವರು ಭಾರತದ ನೂರಾರು ವಿಭಿನ್ನ ಭಾಷೆಗಳನ್ನು ದಾಖಲಿಸಲು ಹಲವು ದಶಕಗಳನ್ನು ಕಳೆದಿದ್ದಾರೆ. ಮುಂದಿನ ಯೋಜನೆ: ಭಾರತದ 12,000 ವರ್ಷಗಳ ಇತಿಹಾಸವನ್ನು ಬರೆಯುವದು. ಇದು ‘ಹಿಂದೂ-ಮೊದಲ’ ರಾಷ್ಟ್ರೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಈ ದೇಶದಲ್ಲಿ ರಾಜಕೀಯ ಧರ್ಮಾಂಧತೆಯನ್ನು ಹರಡುವ ಉದ್ದೇಶಕ್ಕಾಗಿ ಇತಿಹಾಸವನ್ನು ಕಲಿಸ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಅಭಿಪ್ರಾಯ: ನೆಹರೂ ಕಾಡುತ್ತಿರುವ ಏಕ ಪ್ರಧಾನಿ ಮೋದಿ ಮಾತ್ರ, ಏಕೆ? ಮೋದಿ ನಮಗೆ ಉತ್ತರ ಕೊಡುವ ಸಾಧ್ಯತೆ ಕಡಿಮೆ. ಪಾರ್ಥ ಎಸ್ ಘೋಷ್ ೨೦, ಮೇ ೨೦೨೨ ಜವಾಹರಲಾಲ್ ನೆಹರು ಅವರು 1964 ರಲ್ಲಿ ನಿಧನರಾದಾಗ ನರೇಂದ್ರ ಮೋದಿಯವರು ಹದಿನಾಲ್ಕು ವರ್ಷದ ಹುಡುಗರಾಗಿದ್ದರು. ಆದ್ದರಿಂದ ನೆಹರು ಅವರು ಭಾರತವನ್ನು ಹೇಗೆ ಆಳಿದರು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಯಾವುದೇ ಕಾರಣವಿರಲಿಲ್ಲ, ದೇಶದ ಮೊದಲ ಪ್ರಧಾನ ಮಂತ್ರಿಯಾಗಿ ನೆಹರು ಎದುರಿಸಿದ ಮೂಲಭೂತ ಸವಾಲುಗಳ ಬಗ್ಗೆ ಅಥವಾ ನಾಯಕನಾಗಿ ಮತ್ತು ವ್ಯಕ್ತಿಯಾಗಿ ನೆಹರು ಅವರ ಪ್ರಮುಖ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಯಾವುದೇ ತಿಳುವಳಿಕೆ ಪಡೆಯಲು ಮೋದಿಯವರಿಗೆ ಅವಕಾಶವಿದ್ದಿಲ್ಲ.. ಪ್ರಧಾನಿಯಾಗಿ ನೆಹರೂ ಅವರ ಆರಂಭಿಕ ವರ್ಷಗಳು ವಿಭಜನೆಯ ನೆರಳಿನಲ್ಲಿ ಕಳೆದವು. ಆಶ್ರಯ ಮತ್ತು ಪುನರ್ವಸತಿ ಎರಡನ್ನೂ ಬಯಸಿದ ಪಾಕಿಸ್ತಾನದಿಂದ ಲಕ್ಷಾಂತರ ನಿರಾಶ್ರಿತರ ಆಗಮನವು ಈಗಾಗಲೇ ಬಡ ಮತ್ತು ಅಸುರಕ್ಷಿತ ರಾಷ್ಟ್ರವನ್ನು ಇನ್ನೂ ಪ್ರಯಾಸಕ್ಕೆ ತಲುಪಿಸಿತು. ಎರಡನೆಯ ಮಹಾಯುದ್ಧದ ಕಾರಣ, ರಾಷ್ಟ್ರೀಯ ಆರ್ಥಿಕತೆಯು ಈಗಾಗಲೇ ಹದಗೆಟ್ಟಿತ್ತು. ನೆಹರೂ ಈ ಸವಾಲುಗಳನ್ನು ಹೇಗೆ ಎದುರಿಸಿದರು? ಯುವ ನರೇಂದ್ರ ಮೋದಿಗೆ ನಿಸ್ಸಂದೇಹವಾಗಿ ಯಾವುದೇ ಸುಳಿವು ಇರಲಿಲ್ಲ. ನೆಹರೂ ಅವರ ಕಷ್ಟಗಳ ಬಗ್ಗೆ ಮೋದಿಯವರು ಹೊಂದಿದ್ದ ಯಾವುದೇ ತಿಳುವಳಿಕೆಯು ಸರಿಯಾದ ಶಾಲಾ ಶಿಕ್ಷಣದ ಕೊರತೆಯಿಂದ ಮತ್ತಷ್ಟು ತ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ವಾರಣಾಸಿಯ ಸಾತ್ವಿಕಭೋಜನಾಲಯಗಳು ವಿಶ್ವದ ಪ್ರಖ್ಯಾತಿಯನ್ನು ಗಳಿಸುತ್ತಿವೆ. ಕನಿಷ್ಠ ಕ್ರಿ.ಪೂ.೧೮೦೦ ರಿ೦ದ ಅಸ್ತಿತ್ವದಲ್ಲಿರುವ ವಾರಣಾಸಿಯು ಜಗತ್ತಿನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ ಮತ್ತು ಪ್ರಪಂಚದ ಅಂದಾಜು ೧.೨ ಶತಕೋಟಿ ಹಿಂದೂಗಳಿಗೆ ಅತ್ಯಂತ ಪವಿತ್ರವಾಗಿದೆ. “ಸಾತ್ವಿಕ ಭಕ್ಷ್ಯವು ಆಯುರ್ವೇದ ತತ್ವಗಳನ್ನು ಆಧರಿಸಿದೆ ಮತ್ತು ಹಿಂದೂ ಧರ್ಮದ ಸಂಪೂರ್ಣ ರೂಪವಾದ ಸನಾತನ ಧರ್ಮದಿಂದ ಸೂಚಿಸಲಾದ ಸಸ್ಯಾಹಾರದ ಕಟ್ಟುನಿಟ್ಟಾದ ಮಾನದಂಡಗಳಿಗೆ ಬದ್ಧವಾಗಿದೆ. ಹಾಗಾಗಿ, ಅಡುಗೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಳಕೆಯನ್ನು ಇದು ನಿಷೇಧಿಸುತ್ತದೆ, ಇದು ಇತರ ವಿಷಯಗಳ ಜೊತೆಗೆ ಕೋಪ, ಆಕ್ರಮಣಶೀಲತೆ ಮತ್ತು ಆತಂಕವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.” ಈ ಪುರಾತನ ಧಾರ್ಮಿಕ, ಅಧ್ಯಾತ್ಮಿಕ, ಸಾ೦ಸ್ಕೃತಿಕ ಮತ್ತು ಐತಿಹಾಸಿಕನಗರದ ಬಗ್ಗೆ ಹೊಸದೇನೆ೦ದರೆ, ಪ್ರಪಂಚದಾದ್ಯಂತದ ಬಾಣಸಿಗರು ಅದರ ಪಾಕಶಾಲೆಯ ಪರಂಪರೆಯಿಂದ ಸ್ಫೂರ್ತಿ ಪಡೆಯಲು ಪ್ರಾರಂಭಿಸುತ್ತಿದ್ದಾರೆ, ತಮ್ಮ ಭೋಜನಾಲಯಗಳಲ್ಲಿ ಅದರ ರುಚಿಗಳನ್ನು ಮರುಸೃಷ್ಟಿಸುತ್ತಾರೆ. ವಾರಣಾಸಿಯ ಸಸ್ಯಾಹಾರಿ ಪಾಕಪದ್ಧತಿಯನ್ನು ಎಷ್ಟು ಆಸಕ್ತಿದಾಯಕವಾಗಿಸುತ್ತದೆ ಎಂದರೆ ಅದರ ಸಾತ್ವಿಕ ಮತ್ತು ಸಸ್ಯಾಹಾರಿ ವಿಶೇಷತೆಗಳು ಅದರ ಆಧ್ಯಾತ್ಮಿಕತೆಯ ಬಲವಾದ ಪ್ರಜ್ಞೆಯಿಂದ ನೇರವಾಗಿ ಪ್ರಭಾವಿತವಾಗಿವೆ. ೨೦೧೯ ರಲ್ಲಿ, ಹಿಂದೂ-ರಾಷ್ಟ್ರೀಯವಾದಿ ಬಿಜೆಪಿ ಸರ್ಕಾರವು ಎಲ್ಲಾ ವಾರಣಾಸಿ ದೇವಾಲಯಗಳು ಮತ್...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಗುಜರಾತಿ ಕವಿಯಿತ್ರಿ ಪರುಲ್ ಖಕ್ಕರ್ ಬರೆದ ಕವಿತೆ (ಇಂಗ್ಲಿಷ್ ಅನುವಾದ ಆಧರಿಸಿ) ತನ್ನ ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪರುಲ್ ಖಕ್ಕರ್ ಗುಜರಾತಿ ಭಾಷೆಯ ಜನಪ್ರಿಯ ಕವಿ. ಕೆಲವರು ಅವ ರ ನ್ನು ಟೀಕಿಸಿದರು. ಗುಜರಾತ್ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ, ಖಕ್ಕರ್ "ತುಂಬಾ ಒಳ್ಳೆಯ ಕವಿ", ಆದರೆ ಅವರ "ಹೊಸ ಕವಿತೆ ಕಾವ್ಯವಲ್ಲ" ಎಂದು ಹೇಳಿದರು. "ಇದು ದುರುಪಯೋಗದಿಂದ ತುಂಬಿದೆ ಮತ್ತು ಮಾನಹಾನಿಕರವಾಗಿದೆ. ಪ್ರಾಸವು ಅಸಂಬದ್ಧವಾಗಿದೆ. ಶ್ರೀ ಮೋದಿ ಮತ್ತು ಬಿಜೆಪಿಗೆ ವಿರುದ್ಧವಾಗಿರುವ ಜನರು ಈ ಕವಿತೆಯನ್ನು ತಮ್ಮ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಮಗೆ ಕವಯಿತ್ರಿಯ ವಿರುದ್ಧ ಏನೂ ಇಲ್ಲ. ಅವ ರು ಏನು ಬೇಕಾದರೂ ಬರೆಯಬಹುದು. ನಾವು ಕೇವಲ ಎಡ ಉದಾರವಾದಿಗಳು ಮತ್ತು ರಾಷ್ಟ್ರ ವಿರೋಧಿ ಜನರಿಂದ ಅವರ ಕೆಲಸದ ದುರುಪಯೋಗಕ್ಕೆ ವಿರುದ್ಧವಾಗಿರುತ್ತೇವೆ " ಕವಿತೆಯ ವಿರುದ್ಧ ಅಕಾಡೆಮಿಯ ಈ ನಿಲುವನ್ನು ವಿರೋಧಿಸಿ ರಾಜ್ಯದ 160 ಕ್ಕೂ ಹೆಚ್ಚು ಪ್ರಖ್ಯಾತ ಜನರು ಹೇಳಿಕೆ ನೀಡಿದ್ದಾರೆ . ಸೃಷ್ಟಿಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಲಾಬಿಯ ಪ್ರಯತ್ನಗಳು ಎ೦ದು ಕೆಲವರು ಹೇಳಿದ್ದಾರೆ. ಓದುಗರು ತಮ್ಮ ಭಾಷೆಯ ಪ್ರಮುಖ ಕವಯಿತ್ರಿಯ ಬರಹದ ಬಗ್ಗೆ ತಮ್ಮದೇ ಅಭಿಪ್ರಾಯ ಕೊಳ್ಳುವರು - ಸರ್ಕಾರ-ಪರ ಅಕಾಡೆಮಿ ಏನೇ ಹೇಳಿದರೂ, ಅಲ್ಲವೇ ? ಶವವಾಹಿನಿ ಗ೦ಗಾ...