ಪೋಸ್ಟ್‌ಗಳು

EDUCATION ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
ಇಮೇಜ್
  ಜಿ ಎನ್ ದೇವಿ : ಭಾರತದ ಭಾಷಾ ಸಂಪತ್ತನ್ನು ದಾಖಲೆ ಮಾಡುವದು ಅದೇ ಸಮಯ ನಾಯಕರು ಹಿಂದಿಯನ್ನು ರಾಷ್ಟ್ರದ ಭಾಷೆ ಎಂದು ಮೇಲೇರಿಸುತ್ತಿದ್ದಾರೆ.   ಜಿ ಎನ್ ದೇವಿ ಅವರ ಭಾಷಾ ಸಂಶೋಧನೆಯು  ಭಾರತದಾದ್ಯಂತ, ಹಿಮಾಲಯದಿಂದ ಹಿಡಿದು, (ಅಲ್ಲಿನ  ಚಳಿ ತನ್ನನ್ನು ಕೊಲ್ಲುತ್ತದೆ ಎಂದು ಅವರು ಭಾವಿಸಿದ್ದರು!), ಕಾಡಿನಲ್ಲಿ ವಾಸಿಸುವ ಬೆಟ್ಟದ ಬುಡಕಟ್ಟು ಜನಾಂಗದವರೆಗೆ ಅವರನ್ನು ಕರೆದೊಯ್ದಿದೆ.  ಮತ್ತು ಕೆಲವೊಮ್ಮೆ ಅವರ ಸಂಶೋಧನೆಯು ತಮ್ಮದೇ  ವಿಶ್ವ ದೃಷ್ಟಿಕೋನವನ್ನು ಪ್ರಶ್ನೆ ಮಾಡಿದೆ ಸಮೀರ್ ಯಾಸಿರ್ ಬರೆದಿದ್ದಾರೆ   ನ್ಯೂಯಾರ್ಕ್ ಟೈಮ್ಸ್ |       ಧಾರವಾಡ |       ಜೂನ್ 11, 2022  ಭಾಷಾಶಾಸ್ತ್ರಜ್ಞ ಮತ್ತು ವಿದ್ವಾಂಸರಾದ ಗಣೇಶ್ ದೇವಿ ಅವರು ಮೇ 18, 2022 ರಂದು ಭಾರತದ ತೇಜ್‌ಗಢ್‌ನಲ್ಲಿರುವ ತಮ್ಮ ಆದಿವಾಸಿ ಅಕಾಡೆಮಿಯಲ್ಲಿ ಬುಡಕಟ್ಟು ಹಕ್ಕುಗಳ ಕುರಿತು ಚರ್ಚಿಸುತ್ತಿದ್ದಾರೆ. ದೇವಿ ಅವರು ಭಾರತದ ನೂರಾರು ವಿಭಿನ್ನ ಭಾಷೆಗಳನ್ನು ದಾಖಲಿಸಲು ಹಲವು ದಶಕಗಳನ್ನು ಕಳೆದಿದ್ದಾರೆ. ಮುಂದಿನ ಯೋಜನೆ:  ಭಾರತದ 12,000 ವರ್ಷಗಳ ಇತಿಹಾಸವನ್ನು ಬರೆಯುವದು. ಇದು  ‘ಹಿಂದೂ-ಮೊದಲ’ ರಾಷ್ಟ್ರೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಈ ದೇಶದಲ್ಲಿ ರಾಜಕೀಯ ಧರ್ಮಾಂಧತೆಯನ್ನು ಹರಡುವ ಉದ್ದೇಶಕ್ಕಾಗಿ  ಇತಿಹಾಸವನ್ನು ಕಲಿಸ...
ಇಮೇಜ್
  ಕರ್ನಾಟಕದಲ್ಲಿ ಶಾಲಾ ಮಧ್ಯಾಹ್ನದ ಉಪಹಾರ:      ಸಾಮಾಜಿಕ ಸಂಪ್ರದಾಯವಾದದ ಎದುರಿನಲ್ಲಿ ವೈಜ್ಞಾನಿಕ ಪುರಾವೆಗಳು   ಸಿಧ್ಧಾರ್ಥ್ ಜೋಶಿ ಸಿಲ್ವಿಯ ಕರ್ಪಗಮ್   ಎಕೊನೊಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ   ೪ ಜೂನ್, ೨೦೨೨ ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ ಮೊಟ್ಟೆಗಳನ್ನು ಪರಿಚಯಿಸುವುದಕ್ಕೆ ವಿರೋಧದ ಸಂದರ್ಭದಲ್ಲಿ, ರಾಜ್ಯದಲ್ಲಿ ಪೌಷ್ಟಿಕಾಂಶ ನೀತಿಯನ್ನು ಸಣ್ಣ ಆದರೆ ಪ್ರಭಾವಶಾಲಿ ಧಾರ್ಮಿಕ ಮತ್ತು ಜಾತಿ ಆಧಾರಿತ ಗುಂಪುಗಳು ವಿಶ್ವಸಿಸುವ ಸಂಶಯಾಸ್ಪದ ಅವೈಜ್ಞಾನಿಕ ನಂಬಿಕೆಗಳಿಗೆ  ಹೇಗೆ ಒತ್ತೆಯಾಳಾಗಿ ಇರಿಸಲಾಗಿದೆ ಎಂಬುದನ್ನು ಲೇಖನವು ಪರಿಶೀಲಿಸುತ್ತದೆ.    ಲೇಖನದ ಪ್ರಧಾನ ಬಿ೦ದುಗಳು:   ನವೆಂಬರ್ ೨೦೨೧ರಲ್ಲಿ, ಕರ್ನಾಟಕ ಸರ್ಕಾರವು ಅಕ್ಷರ ದಾಸೋಹ ಅಥವಾ ಮಧ್ಯಾಹ್ನದ ಉಪಹಾರದ (MDM)  ಕಾರ್ಯಕ್ರಮದ (GoK 2021) ಭಾಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಎಂದೂ ಕರೆಯಲಾಗುವ   ಈಶಾನ್ಯ ಕರ್ನಾಟಕದ ಏಳು ಅಪೌಷ್ಟಿಕತೆ ಪೀಡಿತ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ೧-೮  ನೇ ತರಗತಿಯ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸುವುದಾಗಿ ಘೋಷಿಸಿತು. ತಕ್ಷಣವೇ, ಈ ಕ್ರಮವನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಆಂದೋಲನದ ಬೆದರಿಕೆಯೊಂದಿಗೆ ಧಾರ್ಮಿಕ ಮುಖಂಡರಿಂದ ಈ ಕ್ರಮಕ್ಕೆ ಬಲವಾದ ವಿರೋಧ ಬ೦ದಿತು. ಇದರಲ್ಲಿ ಅಶ್ಚರ್ಯವಿದ್ದಿಲ್ಲ ಏಕ೦ದರೆ ಧಾರ್ಮಿಕ ವ್ಯ...
ಇಮೇಜ್
  ರಾಷ್ಟ್ರೀಯ ವಿದ್ಯಾರ್ಥಿವೇತನದಿಂದ ವಿದೇಶದಲ್ಲಿ 'ಭಾರತೀಯ' ವಿಷಯಗಳನ್ನು ಅಧ್ಯಯನ ಮಾಡಲು ಬಯಸುವ SC ವಿದ್ಯಾರ್ಥಿಗಳನ್ನು ಏಕೆ ಹೊರಪಡಿಸಲಾಗಿದೆ ?    ಭಾರತೀಯ ಗಣರಾಜ್ಯದ ಸ್ಥಾಪಕ ತತ್ವಗಳ ಮೇಲೆ ನಡೆಯುತ್ತಿರುವ ಹೆಚ್ಚಿನ ನೇರ ಆಕ್ರಮಣಗಳ ನಡುವೆ, ನಿರುಪದ್ರವಿಯಾಗಿ ಕಾಣುವ, ಬಹುಶಃ ಒಂದೆರಡು ಡಜನ್ ವಿದ್ಯಾರ್ಥಿಗಳಿಗಿಂತ ಹೆಚ್ಚು ಪರಿಣಾಮ ಬೀರದಿರುವ, ಸರ್ಕಾರಿ ಸುತ್ತೋಲೆಯನ್ನು ಗಮನಿಸದೆ ಇರುವದು ಸುಲಭವಾಗಿದೆ.  ಆದರೆ, ಹೀಗೆ ಮಾಡುವದು ದೊಡ್ಡದೊ೦ದು ಪ್ರಮಾದ . ಫೋಟೋ: ಜೋಶುವಾ ಹೋಹ್ನೆ/  ಸಿದ್ಧಾರ್ಥ್ ಜೋಶಿ ಮತ್ತು ದೀಪಕ್ ಮಲ್ಘನ್ ಜಾತಿ ಶಿಕ್ಷಣ ಸರ್ಕಾರ 20/FEB/2022 ದಿ ವಯರ್ ಪ್ರಕಟಣೆ   ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ (National Overseas Scholarship - NOS) SC, ST ಮತ್ತು ಭೂರಹಿತ ಕೃಷಿ ಕಾರ್ಮಿಕರ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಭಾರತದ ಹೊರಗಿನ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು  ( ಮಾಸ್ಟರ್ಸ್ ಮತ್ತು ಡಾಕ್ಟರೇಟ್ ಮಟ್ಟಗಳು) ಧನಸಹಾಯವನ್ನು ಒದಗಿಸುತ್ತದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು 1954 ರಲ್ಲಿ ಪ್ರಾರಂಭವಾಗಿ ಸುಮಾರು ಏಳು ದಶಕಗಳಿಂದ ಜಾರಿಯಲ್ಲಿದೆ.  ಸಾಧಾರಣ ವಾರ್ಷಿಕ ಬಜೆಟ್‌ನೊಂದಿಗೆ (2021 ರಲ್ಲಿ ವರ್ಷಕ್ಕೆ ರೂ. 20 ಕೋಟಿ...