ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ನಾದವ್ ಲಾಪಿಡ್ :  ‘ಕಾಶ್ಮೀರ ಫೈಲ್ಸ್’ ಟೀಕೆಗಳನ್ನು ಮಾಡಿದ ಕಾರಣ ಮತ್ತು ಅದರ ತಕ್ಷಣದ ಪರಿಣಾಮಗಳು: ‘ಆತಂಕ, ಅಸ್ವಸ್ಥತೆ’ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ. ‘ಕಾಶ್ಮೀರ್ ಫೈಲ್ಸ್’ ಚಲನ ಚಿತ್ರದ  ವಿರುದ್ಧ ತನ್ನ ಮಹಾನ್  ರಾಜಕೀಯ ಹೇಳಿಕೆಯನ್ನು ನೀಡುವ ಮೊದಲು ಇಡೀ ದಿನ ತಾನು 'ಆತಂಕಿತನಾಗಿದ್ದೆ' ಎಂದು ನಾದವ್ ಲಾಪಿಡ್ ಹೇಳಿದರು. ‘ಜನರು ಬಂದು ನನಗೆ ಧನ್ಯವಾದ ಹೇಳಿದರು’, ಎಂದು ಅವರು ನಂತರದ ಘಟನೆಗಳ ಬಗ್ಗೆ ಹೇಳಿದರು. -ಇಂಡಿಯನ್ ಎಕ್ಸ್‌ಪ್ರೆಸ್| ನವೆಂಬರ್ 30, 2022 9:01:45 am ಇತ್ತೀಚೆಗೆ ಮುಕ್ತಾಯಗೊಂಡ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ತಮ್ಮ ಕಾಮೆಂಟ್‌ಗಳಿಂದ ಕೋಲಾಹಲಕ್ಕೆ ಕಾರಣರಾದ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಸಂದರ್ಶನವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ವಿರುದ್ಧ ಮಾತನಾಡುವುದು 'ಸುಲಭವಾಗಿದ್ದಿಲ್ಲ' ಮತ್ತು ಈ ಬಗ್ಗೆ ಅನುಭವಿಸಿದ ಆತಂಕದ ಬಗ್ಗೆ ವ್ಯಕ್ತಪಡಿಸಿದರು. ಉತ್ಸವದ ಸೋಮವಾರದ ಸಮಾರೋಪ ಸಮಾರಂಭದಲ್ಲಿ, ತೀರ್ಪುಗಾರರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಲ್ಯಾಪಿಡ್ ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಚಲನಚಿತ್ರವನ್ನು 'ಅಶ್ಲೀಲ, ಪ್ರಚಾರ' ಎಂದು ಕರೆದರು. ಗಣ್ಯರು ಮತ್ತು ಚಿತ್ರರಂಗದ ಪ್ರಸಿಧ್ಧ ವ್ಯಕ್ತಿಗಳಿಂದ ತುಂಬಿದ್ದ ಜನಸಮೂಹದ ಮುಂದೆ ಅವರು ಈ ಹ
ಇಮೇಜ್
  ಹಿಂದೂ ಧರ್ಮದ ದುರಭಿಮಾನವನ್ನು  ರಫ್ತು ಮಾಡುವದರ ಕುತ್ತು ಮೋದಿಯವರ ಭಾರತದ ಬಗ್ಗೆ ಲ೦ಡನ್ನಿನ ‘ ದಿ ಗಾರ್ಡಿಯನ್ ’ ಪತ್ರಿಕೆಯ ಸಂಪಾದಕೀಯ  27 ನವೆಂಬರ್ 2022  “ ಭಾರತದ ದೇಶೀಯ ರಾಜಕೀ ಯ ವು 20 ಕೋಟಿ  ಮುಸ್ಲಿಮರನ್ನು ರಾಕ್ಷಸೀಕರಿಸುತ್ತದೆ.    ನವದೆಹಲಿಯ ವಿದೇಶಾಂಗ ನೀತಿಯನ್ನು ಈ ದೇಶೀಯ ರಾಜಕೀಯದಿ೦ದ   ಬೇರ್ಪಡಿಸಲಾಗುವುದಿಲ್ಲ .”   ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನಾದಲ್ಲಿ ಬಿಜೆಪಿ ಮೇಳವನ್ನುದ್ದೇಶಿಸಿ ಮಾತನಾಡುತ್ತಾರೆ. ಡಿಸೆಂಬರ್ 1 ರಂದು ವಿಧಾನಸಭಾ ಚುನಾವಣೆ ಆರಂಭವಾಗಲಿದೆ. ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಮೊಕದ್ದಮೆಯಲ್ಲಿ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಕಾನೂನಿನ ಕ್ರಮದಿ೦ದ ವಿನಾಯಿತಿ ಹೊಂದಿರಬೇಕು ಎಂದು ಅಮೆರಿಕಾದ ರಾಜ್ಯ ಇಲಾಖೆ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿದಾಗ, ಅದು ತನ್ನ ವಾದವನ್ನು  ನೈತಿಕತೆಯಮೇಲಲ್ಲ , ಕಾನೂನಿನ  ಮೇಲೆ ಆಧರಿಸಿತು. ಪುರಾವೆಯಾಗಿ  ಇದು ಹಿಂದೆ ಇದೇ ರೀತಿಯ ರಕ್ಷಣೆಯನ್ನು ಒದಗಿಸಿದ ವಿದೇಶಿ ನಾಯಕರ ರಕ್ಕಸರ ಪಟಗಳನ್ನು  ತೋರಿಸಿದೆ. ಈ ಪಟ್ಟಿಯಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹತ್ಯೆ ಮಾಡಿದ ಜಿಂಬಾಬ್ವೆಯ ರಾಬರ್ಟ್ ಮುಗಾಬೆ ಮತ್ತು ವಾಷಿಂಗ್ಟನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳಿ೦ದ   ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಕಾಂಗೋದ ಜೋಸೆಫ್ ಕಬಿಲಾ , ಇವರ ನಡುವೆ ನೆಲೆಸಿರುವುದು ಭಾರತದ ನರೇಂದ್ರ ಮೋದಿ. ಇ೦ತಹ ಪಟ್ಟಿಗೆ ಮೋದಿಯನ
ಇಮೇಜ್
  ಜಗತ್ತಿನ ದೇಶಗಳಾದ್ಯಂತ ಮಾನವ ಸ್ವಾತಂತ್ರ್ಯದ ಅಂತರರಾಷ್ಟ್ರೀಯ ಅಧ್ಯಯನದಲ್ಲಿ ೧೬೫ ದೇಶಗಳಲ್ಲಿ ಭಾರತ ಗಣನೀಯವಾಗಿ ಕುಸಿದಿದೆ ಕೆನಡಾದ 'ಫ್ರೇಸರ್ ಇನ್ಸ್ಟಿಟ್ಯೂಟ್' ಜೊತೆಗೆ ಅಮೆರಿಕ ದೇಶದ  'ಕ್ಯಾಟೊ ಇನ್ಸ್ಟಿಟ್ಯೂಟ್' ವೈಯಕ್ತಿಕ, ನಾಗರಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒಳಗೊಂಡಿರುವ ವಿಶಾಲ ಅಳತೆಯ ಆಧಾರದ ಮೇಲೆ ವಿಶ್ವದ ಮಾನವ ಸ್ವಾತಂತ್ರ್ಯದ ಸ್ಥಿತಿ ಯ ಅಧ್ಯಯನವನ್ನು ನಡೆಸುತ್ತಿದೆ. ಮಾನವ ಸ್ವಾತಂತ್ರ್ಯ ವು ವ್ಯಕ್ತಿಗಳ ಘನತೆಯನ್ನು ಗುರುತಿಸುವ ಸಾಮಾಜಿಕ ಪರಿಕಲ್ಪನೆಯಾಗಿದೆ.  ಈ ಅಧ್ಯಯನದಲ್ಲಿ ಮಾನವ ಸ್ವಾತಂತ್ರ್ಯವನ್ನು ನಕಾರಾತ್ಮಕ ಸ್ವಾತಂತ್ರ್ಯ ಅಥವಾ ಬಲವಂತದ ನಿರ್ಬಂಧದ ಅನುಪಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. ಸ್ವಾತಂತ್ರ್ಯವು ಅಂತರ್ಗತವಾಗಿ ಮೌಲ್ಯಯುತವಾಗಿದೆ ಮತ್ತು ಮಾನವ ಪ್ರಗತಿಯಲ್ಲಿ ಪಾತ್ರವನ್ನು ವಹಿಸುತ್ತದೆಯಾದ್ದರಿಂದ, ಅದನ್ನು ಎಚ್ಚರಿಕೆಯಿಂದ ಅಳೆಯಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ.  ೨೦೦೮ ರಿಂದ ೨೦೧೯ ರವರೆಗೆ ದೇಶಗಳ ಶ್ರೇಣಿಯನ್ನು ನಿರ್ಧರಿಸಲು ವಾರ್ಷಿಕ ಮಾನವ ಸ್ವಾತಂತ್ರ್ಯ ಸೂಚ್ಯಂಕವು  ೮೨ ಸೂಚಕಗಳನ್ನು ಬಳಸಿದೆ. ಸೂಚ್ಯಂಕದಲ್ಲಿ ಭಾರತವು ೧೬೫ ದೇಶಗಳಲ್ಲಿ ೧೧೯ ನೇ ಸ್ಥಾನದಲ್ಲಿದೆ. ೨೦೧೩ಮತ್ತು ೨೦೧೯ ರ ನಡುವೆ ಆರ್ಥಿಕ, ವೈಯಕ್ತಿಕ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿವಿಧ ಸೂಚಕಗಳಲ್ಲಿ ಭಾರತದ ಕಾರ್ಯಕ್ಷಮತೆಯು ನಿರಂತರ ಕುಸಿತದಲ್ಲಿದೆ. ಡಿಸೆಂಬರ್ ೨೦೨೧ ರಲ್ಲಿ ಬಿಡುಗಡೆಯಾದ ಇ
  ಸಾವರ್ಕರ್‌ರ ರಾಷ್ಟ್ರೀಯತೆ ಕ್ರಿಸ್ಟೋಫ್ ಜಾಫ಼್ರೆಲೊ  ಫ್ರೆಂಚ್ ರಾಜಕೀಯ ವಿಜ್ಞಾನಿ ಮತ್ತು ದಕ್ಷಿಣ ಏಷ್ಯಾ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಪರಿಣತಿ ಹೊಂದಿರುವ ಭಾರತಶಾಸ್ತ್ರಜ್ಞ . ಇವರ ಇತ್ತೀಚಿನ ಪುಸ್ತಕ “ Modi's India : Hindu Nationalism and the Rise of Ethnic Democracy”.  (ಮೋದಿಯವರ ಭಾರತ: ಹಿಂದೂ ರಾಷ್ಟ್ರೀಯತೆ ಮತ್ತು ಜನಾಂಗೀಯ ಪ್ರಜಾಪ್ರಭುತ್ವದ ಉದಯ) ಅಗಸ್ಟ್ ೨೦೨೧  ಇ೦ಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆ ೩ ನವೆ೦ಬರ್ ೨೦೨೨ ‘ರಾಷ್ಟ್ರದ ಬಗೆಗಿನ ಸಾವರ್ಕರ್ ಅವರ ದೃಷ್ಟಿಕೋನವು ಜನಾಂಗೀಯ-ಧಾರ್ಮಿಕವಾಗಿತ್ತು; ಅವರ ಗಮನವು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ರಕ್ಷಿಸುವುದರಲ್ಲಿತ್ತು, ಇದಕ್ಕಾಗಿ ಅವರು ಬ್ರಿಟಿಷರೊಂದಿಗೆ ಸಹಕರಿಸಿದರು’      ಭಾರತವು ಇಂದು ಅನುಭವಿಸುತ್ತಿರುವ ಇತಿಹಾಸವನ್ನು  ಪರಿಷ್ಕರಿಸುವ  ಅಲೆಯು ಪಠ್ಯಪುಸ್ತಕಗಳಲ್ಲಿ ಹಾಗೂ ಸಾರ್ವಜನಿಕ ಸ೦ವಾದದಲ್ಲಿ  ಗತಕಾಲದ ವಿವಿಧ ರೀತಿಯ ತಪ್ಪು ನಿರೂಪಣೆಯಲ್ಲಿ ಅಭಿವ್ಯಕ್ತಿ ಕಂಡುಕೊಳ್ಳುತ್ತದೆ. ಜವಾಹರಲಾಲ್ ನೆಹರು ಈ ಪ್ರವೃತ್ತಿಯ ಪ್ರಮುಖ ಬಲಿಪಶುಗಳಲ್ಲಿ ಒಬ್ಬರು - ಒಂದೋ ಅವರನ್ನು ಇತಿಹಾಸದಿಂದ ಅಳಿಸಲಾಗುತ್ತದೆ,  ಅಥವಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಆಧುನಿಕ ಭಾರತವನ್ನು ರೂಪಿಸುವುದರಲ್ಲಿ ಅವರ ಪಾತ್ರವನ್ನು ತಿರುಚಲಾಗುತ್ತಿದೆ.       ಸ್ವತಃ  ಮಹಾತ್ಮಾ ಗಾಂಧಿ ಅವರನ್ನು , ಸರ್ಕಾರವು ಭಾರತದಲ್ಲಿ ಮತ್ತು ಇನ್ನೂ ಹೆಚ್ಚಾಗಿ
ಇಮೇಜ್
  ಪುಸ್ತಕ ವಿಮರ್ಶೆ:   ನೀಲಕಂಠನ್ ಆರ್‌ಎಸ್: South vs North: The Great Divide ‘ಉತ್ತರದ ವಿರುಧ್ಧ ದಕ್ಷಿಣ:ವಿಸ್ತಾರ ವಿಭಾಗ’ . ಒ೦ದೇ ಬುಟ್ಟಿ. ಬೇರೆ ಬೇರೆ ಫಲಗಳು     ವಿಮರ್ಶಕರು : ವೆಂಕಟರಾಘವನ್ ಶ್ರೀನಿವಾಸನ್   ದಿ ಹಿ೦ದು   ೨೮ ಅಕ್ಟೋಬರ್ ೨೦೨೨ ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಮೊದಲ ಭಾಗವು ಆರೋಗ್ಯ, ಶಿಕ್ಷಣ ಮತ್ತು ಅ   ದಿ ಹಿ೦ದು ಭಿವೃದ್ಧಿಯ ಮಾನದಂಡಗಳ ವಿಷಯದಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ತೆಗೆದುಕೊಳ್ಳುತ್ತದೆ. ಆರ್ಥಿಕ ನಿರೀಕ್ಷೆಗಳು. ಎಲ್ಲಾ ಸೂಚ್ಯಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ದಕ್ಷಿಣದ ರಾಜ್ಯಗಳಿಗೆ ಪ್ರತಿಫಲ ನೀಡಲು ಈಗಿರುವುದಕ್ಕಿ೦ತ  ಉತ್ತಮ ಮಾರ್ಗವಿರಬೇಕು, ಎ೦ದು ವಾದಿಸುತ್ತಾರೆ ನೀಲಕ೦ಟನ್ ಹೊಸ ಪುಸ್ತಕದಲ್ಲಿ ದಕ್ಷಿಣದ ರಾಜ್ಯಗಳು ಉತ್ತರಕ್ಕಿಂತ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ? ಇದು  ದತ್ತಾಂಶ ವಿಜ್ಞಾನಿ ನೀಲಕಂಠನ್ ಆರ್‌ಎಸ್ ಅವರು ತಮ್ಮ ಹೊಸ ಪುಸ್ತಕ  ಸೌತ್ ವರ್ಸಸ್ ನಾರ್ತ್: ಇಂಡಿಯಾಸ್ ಗ್ರೇಟ್ ಡಿವೈಡ್ ನಲ್ಲಿ ಪರಿಶೀಲಿಸುವ ಪ್ರಶ್ನೆ.  ಸ್ವಾತಂತ್ರ್ಯದ ಸಮಯದಲ್ಲಿ,  ದಕ್ಷಿಣದ ರಾಜ್ಯಗಳು ತಮ್ಮ ಅಭಿವೃದ್ಧಿಯ ಅಳತೆಗಳಲ್ಲಿ   ಭಾರತದ ಉಳಿದ ಭಾಗಗಳಿಂದ ಬೇರೆಯಾಗಿದ್ದಿಲ್ಲ. ಇಂದು, ವ್ಯತ್ಯಾಸವು ಸ್ಪಷ್ಟ ಮತ್ತು ಗಮನಾರ್ಹ. ದತ್ತಾಂಶ, ಅಂಕಿಅಂಶಗಳು, ಸಂಶೋಧನೆ ಮತ್ತು ವರದಿಯ ಬೆಂಬಲದೊಂದಿಗೆ, ಯಾವದೇ ರಾಜ್ಯವು ಹೊಂದಬಹುದಾದ ಪ್ರಮು