ಪೋಸ್ಟ್‌ಗಳು

ಸೆಪ್ಟೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ನೋಮ್ ಚೊಮ್ಸ್ಕಿ : ನಿಜವಾದ ಶಿಕ್ಷಣದ ಬಗ್ಗೆ  **** ನನ್ನ ಹೆಸರು ನೋಮ್ ಚೋಮ್ಸ್ಕಿ.  ನಾನು 65 ವರ್ಷಗಳಿಂದ ಮಾಸ್ಸಚುಸೆಟ್ಸ್ ಇನ್ಸ್ಟಿಟ್ಯೂಟ್ ಒಫ಼್ ಟೆಕ್ನಾಲಜಿ ಯಲ್ಲಿ ಪ್ರಾಧ್ಯಾಪಕ, ಈಗ ನಿವೃತ್ತ.  ನಿಜವಾಗಿಯೂ ವಿದ್ಯಾವಂತನಾಗುವುದರ ಅರ್ಥವೇನು ಎಂಬ ಪ್ರಶ್ನೆಗೆ  ಈ ಬಗ್ಗೆ ಹಿ೦ದೆ ಹೇಳಿದ ಕೆಲವು ಅತ್ಯುತ್ತಮ ಉತ್ತರಗಳನ್ನು  ಮೀರಿ ಹೇಳುವದು ಸುಲಭವಲ್ಲ. ಉದಾಹರಣೆಗೆ,  ಆಧುನಿಕ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ಥಾಪಕ,   ಜ್ಞಾನೋದಯದ ಯುಗ*ದ ಪ್ರಮುಖ ಮಾರ್ಗದರ್ಶಕ, ಮಾನವತೆಯ ಜಿಜ್ಞಾಸು ವಿಲ್ಹೆಲ್ಮ್  ವೋನ್ ಹು೦ಬೋಲ್ಟ್**  ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಬಗ್ಗೆ ವ್ಯಾಪಕವಾಗಿ ಬರೆದಿದ್ದು  ನನ್ನ ಅಭಿಪ್ರಾಯದಲ್ಲಿ  ಸ್ವೀಕಾರಾರ್ಹವಾಗಿ ವಾದಿಸಿದ ಪ್ರಕಾರ ಪಕ್ವತೆಯನ್ನು ತಲುಪಿದ  ಮಾನವನ ಮಧ್ಯಬಿ೦ದು ಮತ್ತು ಆವಶ್ಯಕತೆ ಏನ೦ದರೆ ರಚನಾತ್ಮಕವಾಗಿ, ಸ್ವತ೦ತ್ರವಾಗಿ, ಬಾಹ್ಯ ನಿಯ೦ತ್ರಣಗಳಿಲ್ಲದೆ ವಿಚಾರಿಸುವ ಮತ್ತು ಸೃಷ್ಟಿಸುವ  ಯೋಗ್ಯತೆ .  ಆಧುನಿಕ ಸಮಯದಲ್ಲಿ ಇದೇ ಸ೦ಸ್ಥೆ(MIT)ಯಲ್ಲಿ ಕಲಿಸುತ್ತಿದ್ದ ಒಬ್ಬ ಪ್ರಮುಖ ಭೌತಶಾಸ್ತ್ರಜ್ಞರು ತಮ್ಮ ವಿಧ್ಯಾರ್ಥಿಗಳಿಗೆ ಹೇಳುತ್ತಿದ್ದ ಪ್ರಕಾರ, ನಿಮ್ಮ ಶಿಕ್ಷಣ ತರಗತಿ ಏನೇನನ್ನು ಒಳಗೊ೦ಡಿದೆ (cover) ಎನ್ನುವದು ಮುಖ್ಯವಲ್ಲ , ನೀವು ನೀವೇ ಏನನ್ನು ಕ೦ಡುಕೊಳ್ಳುತ್ತೀರಿ ಅಥವಾ ಕ೦ಡುಹಿಡಿಯುತ್ತೀರಿ (discover) ಎನ್ನುವದು ಮುಖ್ಯ.   ನಿಜವಾದ ಸುಶಿಕ್ಷಿತನಾಗಿರಲು ಈ ದೃಷ್ಟಿಕೋನದಲ್ಲಿ  ಅರ್ಥವಾ
ಇಮೇಜ್
  ಗುಜರಾತಿ ಕವಿಯಿತ್ರಿ ಪರುಲ್ ಖಕ್ಕರ್ ಬರೆದ ಕವಿತೆ (ಇಂಗ್ಲಿಷ್ ಅನುವಾದ ಆಧರಿಸಿ)   ತನ್ನ ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪರುಲ್ ಖಕ್ಕರ್ ಗುಜರಾತಿ ಭಾಷೆಯ ಜನಪ್ರಿಯ ಕವಿ. ಕೆಲವರು ಅವ ರ ನ್ನು ಟೀಕಿಸಿದರು. ಗುಜರಾತ್ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ, ಖಕ್ಕರ್ "ತುಂಬಾ ಒಳ್ಳೆಯ ಕವಿ", ಆದರೆ ಅವರ "ಹೊಸ ಕವಿತೆ ಕಾವ್ಯವಲ್ಲ" ಎಂದು ಹೇಳಿದರು.   "ಇದು ದುರುಪಯೋಗದಿಂದ ತುಂಬಿದೆ ಮತ್ತು ಮಾನಹಾನಿಕರವಾಗಿದೆ. ಪ್ರಾಸವು ಅಸಂಬದ್ಧವಾಗಿದೆ. ಶ್ರೀ ಮೋದಿ ಮತ್ತು ಬಿಜೆಪಿಗೆ ವಿರುದ್ಧವಾಗಿರುವ ಜನರು ಈ ಕವಿತೆಯನ್ನು ತಮ್ಮ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಮಗೆ ಕವಯಿತ್ರಿಯ ವಿರುದ್ಧ ಏನೂ ಇಲ್ಲ. ಅವ ರು ಏನು ಬೇಕಾದರೂ ಬರೆಯಬಹುದು. ನಾವು ಕೇವಲ ಎಡ ಉದಾರವಾದಿಗಳು ಮತ್ತು ರಾಷ್ಟ್ರ ವಿರೋಧಿ ಜನರಿಂದ ಅವರ ಕೆಲಸದ ದುರುಪಯೋಗಕ್ಕೆ ವಿರುದ್ಧವಾಗಿರುತ್ತೇವೆ "   ಕವಿತೆಯ ವಿರುದ್ಧ ಅಕಾಡೆಮಿಯ ಈ ನಿಲುವನ್ನು ವಿರೋಧಿಸಿ  ರಾಜ್ಯದ 160 ಕ್ಕೂ ಹೆಚ್ಚು ಪ್ರಖ್ಯಾತ ಜನರು ಹೇಳಿಕೆ ನೀಡಿದ್ದಾರೆ . ಸೃಷ್ಟಿಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಲಾಬಿಯ ಪ್ರಯತ್ನಗಳು ಎ೦ದು ಕೆಲವರು ಹೇಳಿದ್ದಾರೆ.    ಓದುಗರು ತಮ್ಮ ಭಾಷೆಯ ಪ್ರಮುಖ ಕವಯಿತ್ರಿಯ ಬರಹದ ಬಗ್ಗೆ ತಮ್ಮದೇ ಅಭಿಪ್ರಾಯ ಕೊಳ್ಳುವರು - ಸರ್ಕಾರ-ಪರ ಅಕಾಡೆಮಿ ಏನೇ  ಹೇಳಿದರೂ, ಅಲ್ಲವೇ ? ಶವವಾಹಿನಿ ಗ೦ಗಾ ಪರುಲ್ ಖಕ
ಇಮೇಜ್
         ಹೆಣ್ಣಿನ ದೇಹದ ಹಲವು ಬಾಳುಗಳು ಬಾಳಿನುದ್ದಕ್ಕೂ  ಹೆಣ್ಣಿನ ದೇಹದ ಕಟ್ಟೋಣ   ನಡೆಯುತ್ತಲೇ ಇರುತ್ತದೆ- -ಗ೦ಡಸರ ಯಾಜಮಾನ್ಯದಿ೦ದ ಮತ್ತು  ಬಂಡವಾಳಶಾಹಿಯಿ೦ದ     ಗ೦ಡಿನ  ‘ಮೇಲ್ಮಟ್ಟ’ದ   ಆಣ್ಮೆಯ ಲಕ್ಷಣಗಳಿಗೆ ಪೂರಕವಾದ ಲಿಂಗಸೂಕ್ತ ಪಾತ್ರಗಳು ಮತ್ತು ಗುಣಗಳನ್ನು ಪಡೆದುಕೊಳ್ಳಲು ಚಿಕ್ಕ೦ದಿನಿ೦ದಲೂ  ಹೇಳಿಕೊಡುವುದರಿ೦ದ ಸ್ತ್ರೀಯರ ದೇಹಗಳು ಲಿಂಗ ರಚನೆಯನ್ನು ಅನುಭವಿಸುತ್ತವೆ ಹೆಣ್ಣುಗಳು  ಯಾವಾಗಲೂ ತಮ್ಮ ದೇಹದ ಬಗ್ಗೆ ಹೊ೦ದಾಣಿಕೆಯಿಲ್ಲದ ವರ್ಣನೆಗಳನ್ನು ಸ್ವೀಕರಿಸುತ್ತಾರೆ ತಕ್ಕದೆ೦ದೆಣಿಸಿದಾಗ , ಮೆಚ್ಚಿಕೆಯ  ಚಿತ್ರಗಳಿಂದ ದೇಹವನ್ನು ಹೊಗಳಲಾಗುತ್ತದೆ-- -- ದೇವಿ / ದೇವತೆಗಳ, ರಾಷ್ಟ್ರದ ಗೌರವ, ಅಥವಾ ಕುಟುಂಬ ಅಥವಾ ಸಮುದಾಯಗಳ ಹೆಸರಿನಲ್ಲಿ ಮತ್ತು ಕೆಲವೊಮ್ಮೆ ಅದೇ ದೇಹವನ್ನು ನಾಚಿಕೆಗೇಡು, ಮುಜುಗರ, ಕಿರಿಕಿರಿ, ಭಯ ಮತ್ತು ಅಸಹ್ಯಕರವಾಗಿ ತೋರಿಸಲಾಗುತ್ತದೆ ಹೆ೦ಗಸರು ಈ ‘ಆದರ್ಶ ಶರೀರ’ವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮನ್ನು 'ಒಳ್ಳೆಯ ಮಹಿಳೆಯರು' ಎಂದು ತೋರಿಸಲು ಹೆಣಗಾಡಿದ್ದಾರೆ ಅಥವಾ ‘ಕೆಟ್ಟ ಹೆಣ್ಣುಗಳು’ ಎ೦ದು ಚಿತ್ರಿಸುವದರ ನಕಾರಾತ್ಮಕ ಅಂಶಗಳನ್ನು ಎದುರಿಸಲು ಹೆದರುತ್ತಾರೆ. ಮತ್ತೊಂದೆಡೆ ಕೆಳಜಾತಿಗಳು ಮತ್ತು ವರ್ಗಗಳ ಲಿಂಗಾಧಾರಿತ  ದೇಹಗಳನ್ನು ಬಡತನ, ಅಪೌಷ್ಟಿಕತೆ, ಕೆಲಸದ ಹೊರಲಾಗದ ಭಾರ, ಲಿ೦ಗ ತಾರಮತಮ್ಯಗಳಿ೦ದ ನಿರ್ಮಿಸಲಾಗಿದೆ ಅವರ ಮೈಗಳನ್ನು ನಾಚಿಗೆಕೆಟ್ಟ, ಮಾಲಿನ್ಯಕಾರಕ, ಹೊಲಸು ಮತ್ತು ಅಶುದ್
ಇಮೇಜ್
  ಸ೦ಘಟಿತ ಮತಧರ್ಮ  ಮತ್ತು ರಾಜ್ಯಾಧಿಕಾರ ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ಸವಲತ್ತಿಗೆ  ಸವಾಲು "ಧಾರ್ಮಿಕತೆ ಮತ್ತು ಫಾಸಿಸ್ಟ್ ಅನುಷ್ಠಾನಗಳು ಒಟ್ಟಿಗೆ ನಡೆಯಲಾಗದು ಎ೦ದು ಹೇಳಬಹುದೇ ?" ನಾಝಿ ನಾಯಕರು ಮತ್ತು ಕ್ರಿಶ್ಚಿಯನ್ ಧರ್ಮ ಮೈಕ್ ಮ್ಯಾಗೀ ಬರೆದದ್ದು | 5 ನವೆಂಬರ್ 2003 “ರಿಚರ್ಡ್ ನಿಕ್ಸನ್ ನಂತಹ ಕ್ಷುಲ್ಲಕ ದಬ್ಬಾಳಿಕೆಯವರು ಅಥವಾ ಹಿಟ್ಲರ್ ನಂತಹ ಹೆಚ್ಚು ಯಶಸ್ವಿ ದೌರ್ಜನ್ಯಕಾರರು ತಮ್ಮನ್ನು ಅನುಕರಣೀಯ ಕ್ರಿಶ್ಚಿಯನ್ನರು ಎಂದು ತಿಳಿದುಕೊಳ್ಳುತ್ತಾರೆ ; ಅವರ ಅನುಯಾಯಿಗಳಿಗೆ ಈ ಅಭಿಪ್ರಾಯವನ್ನು ಒಪ್ಪಲು ಯಾವುದೇ ತೊಂದರೆ ಇರಲಿಲ್ಲ. ಹಿಟ್ಲರನ ಧಾರ್ಮಿಕತೆ - ಅವನು ಸಾಯುವವರೆಗೂ ಕ್ಯಾಥೊಲಿಕ್ ಆಗಿದ್ದನು - ಆಗಾಗ ಬಚ್ಚಿಡಲಾಗುತ್ತಿತು , ಆದರೆ ಅವನ ಪ್ರೇರಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ನಿರ್ಣಾಯಕವಾಗಿದೆ.” - ಅನ್ನಿ ನಿಕೋಲ್ ಗೇಲರ್(ಅಮೆರಿಕಾದ ನಾಸ್ತಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಪ್ರತಿಪಾದಿ) ಎರಡನೇ ಮಹಾಯುದ್ಧದ ನಂತರ,  ನಾಝಿಗಳು  ನಾಸ್ತಿಕತೆಯಿಂದ ಅಥವಾ ಎಲ್ಲಾ ರೀತಿಯ ದುಷ್ಟತನದ  ಅತೀಂದ್ರಿಯ/ ನಿಸರ್ಗಾತೀತ (occultism) ವ್ಯಾಮೋಹಗಳಿಂದ ಪ್ರೇರಿತರಾಗಿದ್ದವರು  ಎಂಬ ಸಂಪ್ರದಾಯವಿದೆ. ಕ್ರಿಶ್ಚಿಯನ್ನರು ಯುರೋಪಿನ ಫ್ಯಾಸಿವಾದ ಮತ್ತು ನಾಝಿವಾದದಿ೦ದ  ದೂರವಿರಲು ಹೆಣಗಾಡುತ್ತಿದ್ದಾರೆ. ಆದರೂ "ಪ್ರತಿಯೊಂದು ಮರದ ಗುಣವು ಅದರ ಫಲದಿ೦ದಲೇ ಗೊತ್ತಾಗುವದು”  ಎಂದು  ಹೇಳಿದೆ  (ಬೈಬಲ್, ಲೂಕ್ ೬
ಇಮೇಜ್
ದಿಲ್ಲಿಯಿ೦ದ ಪಾಕಿಸ್ತಾನಕ್ಕೆ ಹೊರಟಿರುವ ನಿರಾಶ್ರಿತರು ದಿಲ್ಲಿ ರೈಲು ನಿಲ್ದಾಣದಲ್ಲಿ - , ಸಪ್ಟ೦ಬರ್ ೧೯೪೭ ೧೯೪೭ರಲ್ಲಿ  ಜಮ್ಮು ಮುಸ್ಲಿಮರ ವಿರುದ್ಧ ನಡೆದ  ಹಿಂಸಾಚಾರವನ್ನು  ಉಲ್ಲೇಖಿಸಿದ ಕರಣ್ ಥಾಪರ್ ಅಂಕಣವನ್ನು ' ಏಷ್ಯನ್ ಏಜ್' ದಿನಪತ್ರಿಕೆ ಮೊದಲು ಪ್ರಕಟಿಸಿ ಅನ೦ತರ ಅದೇ ಅಂಕಣವನ್ನು ತಡೆಹಿಡಿಯಲು "ಮಾಲೀಕರು ನಿರ್ಧರಿಸಿದ್ದಾರೆ" ಎಂದು ತಿಳಿಸಲಾಯಿತು.   ಲೇಖನವು  ಪ್ರಧಾನಿ ಮೋದಿಯವರ  ‘ವಿಭಜನೆಯ ಭಯಾನಕ ಸ್ಮರಣೆಯ ದಿನ'ವನ್ನು ಪ್ರಶ್ನಿಸಿತ್ತು.  ಅಜೋಯ್ ಆಶೀರ್ವಾದ್ ಮಹಾಪ್ರಶಸ್ತಾ               ದಿ ವಯರ್ 25 / ಆಗಸ್ಟ್ / 2021    ವಿಭಜನೆಯ ಸಮಯದಲ್ಲಿ   ಜಮ್ಮುವಿನ ಮುಸ್ಲಿಮರ ವಿರುದ್ಧ ನಡೆದ ಹಿ೦ಸಾಚಾರ ವನ್ನು ಪ್ರಸ್ತಾಪಿಸಿದ್ದಕ್ಕಾಗಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರು ತಮ್ಮ ಪಾಕ್ಷಿಕ ಅಂಕಣವನ್ನು  'ಏಷ್ಯನ್ ಏಜ್'   ಪತ್ರಿಕೆಯು ಪ್ರಕಟಿಸಿದ ನ೦ತರ ಹಿ೦ತೆಗೆದುಕೊ೦ಡದ್ದನ್ನು ಅನುಭವಿಸ ಬೇಕಾಯಿತು. ಇದು ನರೇಂದ್ರ ಮೋದಿ ಸರ್ಕಾರದ ಬಹುಸಂಖ್ಯಾವಾದದ ಬಯಕೆಗಳಿಗೆ  ಭಾರತೀಯ ಮಾಧ್ಯಮ ಸಂಸ್ಥೆಯೊ೦ದು ಶರಣಾದ ಇತ್ತೀಚಿನ ಘಟನೆಯಾದ೦ತೆ ತೋರುತ್ತದೆ. ಥಾಪರ್ ಅವರು ' ದಿ ವೈರ್' ಗೆ ಹೇಳಿದ ಪ್ರಕಾರ ತಮ್ಮ ಅ೦ಕಣ "ಏಸ್ ಐ ಸೀ ಇಟ್" (‘ನಾನು ಕ೦ಡ೦ತೆ’)ಅನ್ನು ಆಗಸ್ಟ್ 20, 2021 ರಂದು ಪ್ರಕಟಿಸಿದ ನಂತರ, ಈ ರಾಷ್ಟ್ರೀಯ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಕೌಶಿಕ್ ಮಿತ್ತರ