ಭಾರತದ ಬಡವರು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ವಂಚಿತರಾಗಿದ್ದಾರೆ. ಸರ್ಕಾರದ ಲೆಕ್ಕದಲ್ಲಿ ಎಲ್ಲವೂ ಸೇರಿಲ್ಲ. ಆದಾಯ, ಬಳಕೆ, ಅಥವಾ 'ಸಾಮರ್ಥ್ಯಗಳ' ಕೊರತೆ. ಭಾರತದಲ್ಲಿ ಒಬ್ಬ ವ್ಯಕ್ತಿಯನ್ನು ಬಡವಾಗಿಸುವುದು ಯಾವುದು ನುಶೈಬ ಇಕ಼್ಬಲ್ ‘ ಇ೦ಡಿಯ ಸ್ಪೆನ್ದ್’ ೪ ಎಪ್ರಿಲ್ ೨೦೨೨ ದಿ ಬಿಸಿನೆಸ್ ಸ್ಟ೦ಡರ್ಡ್ ಕೋವಿಡ್-೧೯ರ ವಸತಿಹೀನ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ವಿತರಿಸಲಾಗುತ್ತಿದೆ ನೊಯ್ಡ: ಚಾ೦ದನಿ ಖಟೂನ್ ಕುಟು೦ಬಕ್ಕೆ ಪ್ರತಿ ತಿ೦ಗಳು ಸಿಗುವ ಪಡಿತರ ೯ ಕಿಲೊ ಗೋದಿ ಮತ್ತು ೬ ಕಿಲೊ ಅಕ್ಕಿ. ೯ ಜನ ಸದಸ್ಯರ ಕುಟು೦ಬಕ್ಕೆ ಪ್ರತಿ ತಿ೦ಗಳು ೨೫-೩೦ ಕಿಲೊ ಅಕ್ಕಿ ಅ೦ಗಡಿಗಳಿ೦ದ ಬಝಾರದ ದರದಲ್ಲಿ ಖರೀದಿಸುತ್ತಾರೆ. ‘ಕೇವಲ ೧ ಕಿಲೊ ಕಡಲೆ ನಮಗೆ ಈಗ ಕೊವಿಡ್ ನಿರ್ಬ೦ಧಗಳ ನ೦ತರ ಕೊಡುತ್ತಿದ್ದಾರೆ. ಉಳಿದದ್ದೆಲ್ಲವನ್ನು - ಬೇಳೆ , ಎಣ್ಣೆ, ಮಸಾಲ - ನಾವೇ ಖರೀದಿಸುತ್ತೇವೆ. ರೊಟ್ಟಿಗಿ೦ತ ನಮಗೆ ಹಿಡಿಸುವದು ಅನ್ನ. ದುಡ್ಡಿದ್ದರೆ ಯಾವಾಗಲೊಮ್ಮೆ ಬೇಳೆಗಳು, ಮಾ೦ಸ ಮತು ತರಕಾರಿಗಳನ್ನು ಖರೀದಿಸುತ್ತೇವೆ.’ ಈ ಕುಟು೦ಬದಲ್ಲಿ ವಯಸ್ಕರಿಗೆ ಸಿಗುತ್ತಿರುವ ಸರಾಸರಿ ೨೧೪ ಗ್ರಾಮ್ ಧಾನ್ಯ , ಆರೋಗ್ಯ ಸ೦ಶೋಧನಾ ಸ೦ಸ್ಥೆ ಶಿಫಾರಸ್ಸು ಮಾಡಿರುವ ೩೪೫ ಗ್ರಾಮಿಗಿ೦ತ ಕಡಿಮೆ. ಮೂರು ಕೋಣೆಗಳ ಅವರ ಮನೆ ಮಣ್ಣಿನ ಗೋಡೆಗಳದು. ಕುಟು೦ಬದ ಮುಖ್ಯ ಉತ್ಪನ್ನ ತ೦ದೆಯ ಸೈಕಲ್ ರಿಕ್ಷದಿ೦ದ; ಚಾ೦ದನಿ ...
ಪೋಸ್ಟ್‌ಗಳು
POVERTY ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಆಕ್ಸ್‌ಫ್ಯಾಮ್ ವರದಿ: 2021 ರಲ್ಲಿ, ಭಾರತದಲ್ಲಿ 84% ಕುಟುಂಬಗಳ ಆದಾಯ ಕುಸಿಯಿತು, ಆದರೆ ಶತಕೋಟ್ಯಾಧೀಶರ ಸಂಖ್ಯೆಯು ಹೆಚ್ಚಾಯಿತು 🔴 ಆಕ್ಸ್‌ಫ್ಯಾಮ್ ವರದಿಯು ಕೋವಿಡ್ ಭಾರತವನ್ನು ಪಾಳುಗೆಡವುದನ್ನು ಮುಂದುವರೆಸಿದೆ ಆದರೆ ದೇಶದ ಆರೋಗ್ಯ ಬಜೆಟ್ 2020 ರ RE (ಪರಿಷ್ಕೃತ ಅಂದಾಜುಗಳು) ನಿಂದ 10% ಕುಸಿತವನ್ನು ಕಂಡಿದೆ ಎಂದು ಕಂಡುಹಿಡಿದಿದೆ. ಈಶಾ ರಾಯ್ | ನವದೆಹಲಿ | ಜನವರಿ 17, 2022 ದಿ ಇ೦ಡಿಯನ್ ಎಕ್ಸ್ಪ್ರೆಸ್ ಜಾಗತಿಕ ವರದಿಯ ಭಾರತ ಪುರವಣಿಯು 2021 ರಲ್ಲಿ, ಭಾರತದ ಅಗ್ರ 100 ಶ್ರೀಮಂತರ ಸಾಮೂಹಿಕ ಸಂಪತ್ತು ರೂ 57.3 ಲಕ್ಷ ಕೋಟಿ (USD 775 ಶತಕೋಟಿ)ಗೆ ತಲುಪಿದೆ, ಈ ಗರಿಷ್ಟ ಮೊತ್ತ ಒ೦ದು ಹೊಸ ದಾಖಲೆ, ಎಂದು ಹೇಳುತ್ತದೆ. ಅದೇ ವರ್ಷದಲ್ಲಿ, ರಾಷ್ಟ್ರೀಯ ಸಂಪತ್ತಿನಲ್ಲಿ ಕೆಳಭಾಗದ 50 ಪ್ರತಿಶತ ಜನಸಂಖ್ಯೆಯ ಪಾಲು ಕೇವಲ 6 ಪ್ರತಿಶತದಷ್ಟಿತ್ತು. 2021 ರಲ್ಲಿ ಭಾರತ ದೇಶದ 84 ಪ್ರತಿಶತ ಕುಟುಂಬಗಳ ಆದಾಯವು ಕುಸಿಯಿತು, ಆದರೆ ಅದೇ ಸಮಯದಲ್ಲಿ ಭಾರತೀಯ ಬಿಲಿಯನೇರ್ (ಶತಕೋಟ್ಯಾಧೀಶರುಗಳ)ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿತು, ಹೀಗೆ ಕೋವಿಡ್ ಸಾಂಕ್ರಾಮಿಕವು ದೇಶದ ಆದಾಯದ ವಿಭಜನೆಯನ್ನು ಇನ್ನೂ ಹೆಚ್ಚು ಹದಗೆಡಿಸಿದೆ ಎಂದು ಆಕ್ಸ್‌ಫ್ಯಾಮ್ ವರದಿಯು ಹೇಳಿದೆ. ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಭಾನು...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಜಾಗತಿಕ ಹಸಿವಿನ ಸೂಚ್ಯಂಕ : ೧೧೬ ದೇಶಗಳಲ್ಲಿ ೧೦೧ನೇ ಸ್ಥಾನದಲ್ಲಿದೆ ಭಾರತ ಜಾಗೃತಿ ಚಂದ್ರ ದಿ ಹಿ೦ದು , ಹೊಸದಿಲ್ಲಿ: ಅಕ್ಟೋಬರ್ ೧೪, ೨೦೨೧ “ಹಸಿವಿನ ಅಳತೆಯಲ್ಲಿ ಕೇವಲ ೧೫ ದೇಶಗಳು ಭಾರತಕ್ಕಿ೦ತ ಕೆಟ್ಟದಾಗಿವೆ.” ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index) ಒಟ್ಟು ೧೧೬ ದೇಶಗಳಲ್ಲಿ ಭಾರತವನ್ನು ೧೦೧ ನೇ ಸ್ಥಾನದಲ್ಲಿಟ್ಟಿದೆ. ‘ಹಸಿವು ಗಂಭೀರ’ ಎಂದು ಗುರುತಿಸಲಾಗಿರುವ ೩೧ ದೇಶಗಳಲ್ಲಿ ಭಾರತವೂ ಸೇರಿದೆ. ಕಳೆದ ವರ್ಷ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ ದಲ್ಲಿ ೧೦೭ ದೇಶಗಳ ಪೈಕಿ ಭಾರತ ೯೪ನೇ ಸ್ಥಾನದಲ್ಲಿದೆ. ಕೇವಲ ೧೫ ದೇಶಗಳು ಭಾರತಕ್ಕಿಂತ ಕೆಟ್ಟದಾಗಿದೆ. ಇವುಗಳಲ್ಲಿ ಪಪುವಾ ನ್ಯೂಗಿನಿ (೧೦೨), ಅಫ್ಘಾನಿಸ್ತಾನ (೧೦೩), ನೈಜೀರಿಯಾ (೧೦೩), ಕಾಂಗೋ(೧೦೫), ಮೊಜಾಂಬಿಕ್ (೧೦೬), ಸಿಯೆರಾ ಲಿಯೋನ್ (೧೦೬), ಟಿಮೋರ್-ಲೆಸ್ಟೆ (೧೦೮), ಹೈಟಿ (೧೦೯), ಲೈಬೀರಿಯಾ (೧೧೦), ಮಡಗಾಸ್ಕರ್ (೧೧೧), ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (೧೧೨), ಚಾಡ್ (೧೧೩), ಮಧ್ಯ ಆಫ್ರಿಕನ್ ಗಣರಾಜ್ಯ (೧೧೪), ಯೆಮೆನ್ (೧೧೫) ಮತ್ತು ಸೊಮಾಲಿಯಾ (೧೧೬). ಭಾರತವು ಬಹುತೇಕ ನೆರೆಯ ರಾಷ್ಟ್ರಗಳ ಹಿಂದೆ ಇದೆ. ಪಾಕಿಸ್ತಾನವು 92 ನೇ ಸ್ಥಾನದಲ್ಲಿದೆ, ನೇಪಾಳ 76 ನೇ ಸ್ಥಾನದಲ್ಲಿದೆ ಮತ್ತು ಬಾಂಗ್ಲಾದೇಶ ಕೂಡ 76 ನೇ ಸ್ಥಾನದಲ್ಲಿದೆ. ಜಾಗತಿಕ ಹಸಿವಿನ ಸೂಚ್ಯಂಕ ಆಧಾರಿತ ಪ್...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತದಲ್ಲಿ ಬಡತನ ಮತ್ತೆ ಹೆಚ್ಚುತ್ತಿದೆ ಸ೦ತೋಷ್ ಮೆಹ್ರೋತ್ರ ಮತ್ತು ಜಜತಿ ಕೇಶರಿ ಪರಿದ ದಿ ಹಿ೦ದು ಪತ್ರಿಕೆಯ ಲೇಖನದ ಸಾರಾ೦ಶ - 4 ಅಗಸ್ಟ್ 2021 ಕರೋನವೈರಸ್ ಸಾಂಕ್ರಾಮಿಕತೆಗೆ ಮೊದಲು ಆರ್ಥಿಕತೆಯು ಒಂಬತ್ತು ತ್ರೈಮಾಸಿಕಗಳಿಂದ ನಿಧಾನವಾಗುತ್ತಿದೆ ಎಂದು ನಮಗೆ ತಿಳಿದಿದೆ. 2017-18ರಲ್ಲಿ ನಿರುದ್ಯೋಗವು 45 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. 1973 ರಿಂದ 2012 ರವರೆಗೆ ಬಡತನದ ಕುಸಿತದ ಸ್ಪಷ್ಟ ಪಥವಿದೆ. ವಾಸ್ತವವಾಗಿ, ಭಾರತವು ಬಡತನದ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದಾಗಿನಿಂದ, ಬಡತನದ ಸಂಭವವು ಯಾವಾಗಲೂ ಕಡಿಮೆಯಾಗುತ್ತಲೇ ಇತ್ತು. ಇದು 1973-4 ರಲ್ಲಿ 54.9% ಆಗಿತ್ತು; 1983-84 ರಲ್ಲಿ 44.5%; 1993-94ರಲ್ಲಿ 36% ಮತ್ತು 2004-05ರಲ್ಲಿ 27.5%. (ದತ್ತಾ೦ಶಗಳ ಮತ್ತು ಬಡತನ ರೇಖೆಗಳ ಚರ್ಚೆ ಇಲ್ಲಿ ಪುನರಾವರ್ತಿಸುತ್ತಿಲ್ಲ) ನಗರ ಮತ್ತು ಗ್ರಾಮೀಣ ಬಡತನದಲ್ಲಿ ಏರಿಕೆ ಭಾರತದ ಬಡತನವನ್ನು ಅಂದಾಜಿಸುವ ಇತಿಹಾಸದಲ್ಲಿ ಮೊದಲ ಬಾರಿಗೆ, 2011-12ರ ನಂತರ ಬಡತನದ ಹೆಚ್ಚಳವು ಕಂಡುಬಂದಿದೆ. 2012 ರಿಂದ 2018 ರ ನಡುವಿನ ಗ್ರಾಮೀಣ ಬಳಕೆ ( ಸರಕು ಮತ್ತು ಸೇವೆಗಳ ಮೇಲೆ ಕುಟುಂಬದ ಖರ್ಚು) 8%ರಷ್ಟು ಕಡಿಮೆಯಾಗಿದ್ದರೆ, ನಗರ ಬಳಕೆ ಕೇವಲ 2%ರಷ್ಟು ಹೆಚ್ಚಾಗಿದೆ. ಭಾರತದ ಜನಸಂಖ್ಯೆಯ ಬಹುಪಾಲು (ಖಂಡಿತವಾಗಿಯೂ 65%ಕ್ಕಿಂತಲೂ ಹೆಚ್ಚು) ಗ್ರಾಮೀಣವಾಗಿರುವುದರಿಂದ, ಭಾರತದಲ್ಲಿ ಬಡತನವು ಪ...