ಮೋದಿ ಸಾಕ್ಷ್ಯಚಿತ್ರ ಭಾರತದಲ್ಲಿ ರೂಪ ನಿರ್ಮಾಣದ ಹೊಸದೊ೦ದು ಯುದ್ಧ ನಡೆಯುತ್ತಿದೆ. ಬಿ ಬಿ ಸಿ ಯ ಮೋದಿ ಸಾಕ್ಷ್ಯಚಿತ್ರ ಅದರ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಸಾಮಾಜಿಕ ಮಾಧ್ಯಮ ಜಗಲಿಗಳಲ್ಲಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಪ್ರಧಾನಿ ಮೋದಿ ‘ಬಲಿಷ್ಥ ವ್ಯಕ್ತಿ’ ಎನ್ನುವ ತಮ್ಮ ರೂಪ ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿದ್ದಾರೆ. ‘ದಿ ಪ್ರಿ೦ಟ್’ನಲ್ಲಿ ಶ್ರುತಿ ಕಪಿಲಾ ಜನವರಿ 23, 2023 ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೋ/ANI) ಬಿಬಿಸಿ ಸಾಕ್ಷ್ಯಚಿತ್ರ 'ಮೋದಿ ಪ್ರಶ್ನೆ’ ಹಳೆಯ ಪ್ರಶ್ನೆಗಳನ್ನು ಎತ್ತಿದೆ, ಭಾರತೀಯ ‘ಡಿಜಿಟಲ್’ ಸಮುದಾಯದ ಯೋಧರು ಪ್ರಸಾರಕ ಸ೦ಸ್ಥೆಯನ್ನು ವಜಾಗೊಳಿಸುವಂತೆ ಹೊಸದಾದ ಕರೆಗಳನ್ನು ಪ್ರಚೋದಿಸಿದೆ ಮತ್ತು ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ನಿರ್ಬಂಧಿಸುವಿಕೆಯನ್ನು ಸಹ ಸಾಧಿಸಿದೆ. ಎಲ್ಲಾ ದೇಶೀಯ ಧ್ವನಿ ಮತ್ತು ಕೋಪಕ್ಕೆ ಹೊರತಾಗಿಯೂ, ಸಾಕ್ಷ್ಯಚಿತ್ರದ ಪ್ರಸಾರದ ಮುಖ್ಯ ಪರಿಣಾಮ ಜಾಗತಿಕ ವೇದಿಕೆಯಲ್ಲಿ ಉನ್ನತ ದರ್ಜೆ ಗಳಿಸಲು ಭಾರತದ ರೂಪ ನಿರ್ಮಾಪಕ ಆಟಗಳ ಮೇಲೆ ಬೀಳುವುದು. ಸಾಕ್ಷ್ಯಚಿತ್ರದ ಮೇಲೆ ನಡೆಯುತ್ತಿರುವ ವಿವಾದವು ಅ೦ತಾರಾಷ್ಟ್ರೀಯ ಸ್ಥಾನಕ್ಕೆ ಸೇರಿದ೦ತೆ ಭಾರತ...
ಪೋಸ್ಟ್‌ಗಳು
SOCIAL MEDIA ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಾಮೂಹಿಕ ಮನೋವಿಜ್ಞಾನ: ಕುಶಲತೆಯಿ೦ದ ಜ ನಸಾಮಾನ್ಯರ ನಿರ್ವಹಣೆ ಎಡ್ವರ್ಡ್ ಬರ್ನೇಸ್ ಕೊಡುಗೆ ಜುಲೈ 12, 2017 ರಂದು ACADEMY OF IDEAS “ಜನಸಾಮಾನ್ಯರಲ್ಲಿ ಅಭ್ಯಾಸಗಳು ಮತ್ತು ಅಭಿಪ್ರಾಯಗಳು ಆಯೋಜಿತವಾಗಿರುತ್ತವೆ. ಇವುಗಳನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಯುಕ್ತಿಯಿ೦ದ ಹಿಡಿತದಲ್ಲಿಟ್ಟು ನಿರ್ವಹಣೆ ಮಾಡುವದು ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಮುಖ ಅಂಶವಾಗಿದೆ. ಇದೊ೦ದು ಕಣ್ಣಿಗೆ ಕಾಣದ ಕಾರ್ಯವಿಧಾನ ಮತ್ತು ಇದನ್ನು ಕುಶಲತೆಯಿಂದ ನಿರ್ವಹಿಸುವವರೇ ನಮ್ಮ ದೇಶದ ನಿಜವಾದ ಆಡಳಿತ ಶಕ್ತಿಯಾಗಿರುವ ಅದೃಶ್ಯ ಸರ್ಕಾರ. ನಾವು ಎ೦ದೂ ಕೇಳಿಲ್ಲದ ಯಾರೋ ನಮ್ಮನ್ನು ಆಳುತ್ತಿದ್ದಾರೆ, ಅವರಿ೦ದ ನಮ್ಮ ಮನಸ್ಸುಗಳಿಗೆ ಆಕಾರ ಕೊಡಲಾಗಿದೆ, ನಮ್ಮ ಅಭಿರುಚಿಗಳು ರೂಪುಗೊಂಡಿವೆ, ನಮ್ಮ ಆಲೋಚನೆಗಳು ಸೂಚಿಸಲ್ಪಟ್ಟಿವೆ. ರಾಜಕೀಯ ಅಥವಾ ವ್ಯವಹಾರದ ಕ್ಷೇತ್ರದಲ್ಲಿ, ನಮ್ಮ ಸಾಮಾಜಿಕ ನಡವಳಿಕೆಯಲ್ಲಿ ಅಥವಾ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಸಣ್ಣ ಸ೦ಖ್ಯೆಯ ನಾವು ಕೇಳಿಲ್ಲದ ವ್ಯಕ್ತಿಗಳೇ ಹೆಚ್ಚಾಗಿ ನಮ್ಮ ಮೇಲೆ ಅಧಿಕಾರ ನಡೆಸುತ್ತಾರೆ . ಅವರು ಜನಸಾಮಾನ್ಯರ ಮಾನಸಿಕ ಪ್ರಕ್ರಿಯೆಗಳು ಮತ್ತು ಸಾಮಾಜಿಕ ವಿನ್ಯಾಸಗಳನ್ನು ಅರ್ಥಮಾಡಿಕೊ೦ಡಿರುವವರು. ಇವರೇ ಸಾರ್ವಜನಿಕ ಮನಸ್ಸನ್ನು ನಿಯಂತ್ರಿಸುವ ತಂತಿಗಳನ್ನು ಹಿಡಿತದಲ್ಲಿಟ್ಟುಕೊ೦ಡಿರುವವರು, ಹಳೆಯ ಸಾಮಾಜಿಕ ಶಕ್ತಿ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸುಲ್ಲಿ ಡೀಲ್ಸ್ : ಭಾರತೀಯ ಮುಸ್ಲಿಂ ಮಹಿಳೆಯರು ಇ೦ಟರ್ನೆಟ್ ‘ಆಪ್’ನಲ್ಲಿ ‘ ಮಾರಾಟ’ಕ್ಕೆ ! ಜುಲೈ 2021 ರ ಆರಂಭದಲ್ಲಿ ಭಾರತದಲ್ಲಿ ಡಝನ್ ಗಟ್ಟಲೆ ಮುಸ್ಲಿಂ ಮಹಿಳೆಯರು ತಾವು ಆನ್‌ಲೈನ್‌ನಲ್ಲಿ ‘ಮಾರಾಟ’ಕ್ಕೆ ಇರುವುದನ್ನು ಕಂಡುಕೊಂಡರು. ಹನಾ ಖಾನ್, ವೃತ್ತಿಯಲ್ಲಿ ಪೈಲಟ್, ಕ೦ಡ೦ತೆ "ಸುಲ್ಲಿ ಡೀಲ್ಸ್" ವೆಬ್‌ಸೈಟ್ ಸಾರ್ವಜನಿಕವಾಗಿ ಲಭ್ಯವಿರುವ ತನ್ನದೂ ಸೇರಿದ೦ತೆ ಸುಮಾರು ೮೩ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಸುಳ್ಳು ವ್ಯಕ್ತಿಚಿತ್ರಗಳನ್ನು ರಚಿಸಿ, ಈ ಮಹಿಳೆಯರನ್ನು "ದಿನದ ವ್ಯವಹಾರಗಳು" ಎಂದು ವರ್ಣಿಸಿ, ಅಪ್ಲಿಕೇಶನ್ ಬಳಕೆದಾರರಿಗೆ "ಸುಲ್ಲಿ" ಯನ್ನು ಖರೀದಿಸುವ ಅವಕಾಶವನ್ನು ನೀಡುವಂತೆ ನಟಿಸಿತು. “ಸುಲ್ಲಿ” ಮುಸ್ಲಿಂ ಮಹಿಳೆಯರಿಗಾಗಿ ಬಲಪಂಥೀಯ ಹಿಂದೂ ‘ಟ್ರೋಲ್’ ಗಳು ಬಳಸುವ ಅವಹೇಳನಕಾರಿ ಆಡುಭಾಷೆ. ‘ಡೀಲ್ ’ ಅ೦ದರೆ ‘ಖರೀದಿದಾರನಿಗೆ ಒ೦ದು ಲಾಭದಾಯಕ ವ್ಯವಹಾರದ ಅವಕಾಶ’. ’‘ಸುಲ್ಲಿ ಡೀಲ್ಸ್’ ಅಪ್ಲಿಕೇಶನ್‌ನ ಉದ್ದೇಶ ಕೇವಲ ಅವಮಾನ ಮತ್ತು ಮಹಿಳೆಯರನ್ನು ತುಚ್ಛವಾಗಿಸುವದು. ‘ಟ್ರೊಲ್ಲ್’ ಎ೦ದರೆ ಯಾರು ? ‘ಆ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಯಾಕೆ ಈ ಬ್ಲಾಗ್ ? ಮಾಹಿತಿ ಮತ್ತು ಚರ್ಚೆಯ ಮುಕ್ತ ಹರಿವಿನ ಮೂಲಕ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ. ಇಂದು ಮಾಹಿತಿ ಮತ್ತು ಚರ್ಚೆಯ ಸಂಕೀರ್ಣ ವಾತಾವರಣದಲ್ಲಿ, ಕನ್ನಡ ಭಾಷೆಯಲ್ಲಿ ಓದುಗರು ಅದೃಷ್ಟಶಾಲಿಯಾಗಿದ್ದು, ನಮ್ಮಲ್ಲಿ ಒಂದು ಉತ್ಸಾಹಭರಿತ ಮತ್ತು ಮುಕ್ತ ಮಾಧ್ಯಮವಿದೆ, ಅದು ಸಂಬಂಧಿತ ಮತ್ತು ಅಮೂಲ್ಯವಾದ ಮಾಹಿತಿಯನ್ನು ನಾವೆಲ್ಲ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ ಕನ್ನಡ ಭಾಷೆಯಲ್ಲಿ ನೇರವಾಗಿ ಲಭ್ಯವಿಲ್ಲದಿರುವ ಆದರೆ ನಮಗೆಲ್ಲ ಪ್ರಸ್ತುತವಾದ ಉತ್ತಮ ಅಥವಾ ಉಪಯುಕ್ತ ಮೂಲಗಳು ಅನೇಕವಿವೆ. ಈ ಕೆಲವು ಮೂಲಗಳು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಮತ್ತು ಹೆಚ್ಚು ಆಳವಾದ ಚರ್ಚೆಗೆ ಸಹಾಯವಾಗ ಬಹುದು. ಕನ್ನಡೇತರ ಮೂಲಗಳಿಂದ ನನ್ನ ಪ್ರೀತಿಯ ಕನ್ನಡ ಓದುಗರಿಗೆ ಅಂತಹ ವಸ್ತುಗಳ ಆಯ್ಕೆಯನ್ನು ಲಭ್ಯಗೊಳಿಸುವುದು ನನ್ನ ಉದ್ದೇಶ. ೧. ನನ್ನ ಮೊದಲನೇ ಬ್ಲಾಗ್ ನೊಮ್ ಚೊಮ್ಸ್ಕಿ ಇವರ ಬಗ್ಗೆ. ವಿಶ್ವಪ್ರಸಿದ್ಧ ಚಿಂತಕ, ಭಿನ್ನಮತೀಯ ಮತ್ತು ಕಾರ್ಯಕರ್ತ, ಲೇಖಕ, ಭಾಷಾಶಾಸ್ತ್ರಜ್ಞ ನೋಮ್ ಚೋಮ್ಸ್ಕಿಯವರ ಆಲೋಚನೆಗಳು ಮತ್ತು ಕಾರ್ಯಗಳನ್ನು ಈ ಬ್ಲಾಗ್ ಓದುಗರಿಗೆ ಪರಿಚಯಿಸುವ ಉದ್ದೇಶ ನನ್ನದು. ಅವರ ಚರ್ಚೆಗಳು ಮತ್ತು ವಿಶ್ಲೇಷಣೆ...