ಪೋಸ್ಟ್‌ಗಳು

ಜೂನ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
  ಚೊಮ್ಸ್ಕಿ ಸ೦ದರ್ಶನ ೧. ಎಡ ಪ೦ಥ ವ್ಯಾಖ್ಯಾನ    ಮತ್ತು  ೨. ಮುಕ್ತ ಭಾಷಣದ ತತ್ವ ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ವ್ಯಕ್ತಿ  ಒಬ್ಬರಲ್ಲದೆ  ಎಡವಿಚಾರ ಧಾರೆಯಲ್ಲಿ ಪ್ರಭಾವಿ, ವಿದ್ವಾಂಸ, ಲೇಖಕ, ಶಿಕ್ಷಕ, ಬುದ್ಧಿಜೀವಿ, ಕಾರ್ಯಕರ್ತ, ಮತ್ತು ವಿಮರ್ಶಕ, ನೋಮ್ ಚೋಮ್ಸ್ಕಿ ‘ಪ್ಲೆಬಿಟಿ’ ಸ೦ಸ್ಥೆಯ ವಾಕ್ ಸ್ವಾತಂತ್ರ್ಯ ಮತ್ತು ಎಡ ವಿಚಾರ ಸಮ್ಮೇಳನದಲ್ಲಿ ಭಾಗವಹಿಸಿದ ಸ೦ದರ್ಭದಲ್ಲಿಅವರ ಮು೦ದೆ ಇಟ್ಟ ಪ್ರಶ್ನೆಗಳು ಮತ್ತು ಚೊಮ್ಸ್ಕಿ ಹೇಳಿಕೆಗಳು: ಭಾಗ ೧ - ಎಡ ಪ೦ಥ ವ್ಯಾಖ್ಯಾನ ಸ೦ದರ್ಶಕ : ಎಡಪ೦ಥ  ಇಂದು ಅವನತಿಯಲ್ಲಿದೆ ಎ೦ದು, ಅಥವಾ ಅದು ತನ್ನ  ಪ್ರಸ್ತುತತೆಯನ್ನು ಕಳೆದುಕೊ೦ಡಿದೆ ಎ೦ದು, ಅಥವಾ ತನ್ನ ಅಸ್ತಿತ್ವವನ್ನೇ ಕಳೆದುಕೊ೦ಡಿದೆ  ಎಂದು ಹಲವರು ನಂಬುತ್ತಾರೆ. ಸ್ವಯಂ-ಗುರುತಿಸಲ್ಪಟ್ಟ ‘ಎಡ’ ಆ೦ದೋಲನ  ಮುರಿದು ವಿಭಜಿತವಾಗಿದೆ. ತಮ್ಮನ್ನು ಎಡಪಂಥೀಯರು ಎಂದು ಕರೆದುಕೊಳ್ಳುವ ಕೆಲವರು ವರ್ಗ ಮತ್ತು ಆರ್ಥಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತಿದ್ದರೆ ಬೇರೆ ಕೆಲವರ ನೋಟ ಸಾಮ್ರಾಜ್ಯಶಾಹಿ ಮತ್ತು ಯುದ್ಧದ ವಿಷಯಗಳ ಮೇಲೆ, ಅಥವಾ ಸಾಂಸ್ಕೃತಿಕ ಸಮಸ್ಯೆಗಳು ಮತ್ತು ಗುರುತಿನ ರಾಜಕೀಯದ ಬಗ್ಗೆ. ಇವರೆಲ್ಲ ಸಮಾನವಾಗಿ ಎಡಪಂಥೀಯರೇ? ಮತ್ತು ಹೇಗೆ ಈ ಹಲವಾರು ವಿಭಿನ್ನ ಸಮಸ್ಯೆಗಳನ್ನು ಒಟ್ಟಿಗೆ ಒ೦ದೇ ‘ಎಡ’ ಮುದ್ದೆಗಳಾಗಿ ವರ್ಗೀಕರಿಸಬಹುದು ? ನಿಮ್ಮ ಚಿ೦ತನೆಯಲ್ಲಿ ‘ಎಡ’ ಪಂಥೀಯತೆ ಎನ್ನುವದು ಇದೆಯೇ? ಮತ್ತು ಹಾಗಿದ್ದಲ್ಲಿ  ‘ಎಡ’ ದ ವ್ಯಾಖ್ಯಾನ ಏನು
  ಚೊಮ್ಸ್ಕಿ ಸ೦ದರ್ಶನ ೧. ಎಡ ಪ೦ಥ ವ್ಯಾಖ್ಯಾನ    ಮತ್ತು  ೨. ಮುಕ್ತ ಭಾಷಣದ ತತ್ವ ಭಾಗ ೨ - ಮುಕ್ತ ಮಾತಿನ ತತ್ವ ಸ೦ದರ್ಶಕ  :   ವಾಕ್ ಸ್ವಾತಂತ್ರ್ಯದ ಪ್ರಶ್ನೆಯನ್ನು ನಾವು ಇಂದಿನ ಸಂಭಾಷಣೆಯಲ್ಲಿ  ಗಮನಿಸ  ಬಯಸುತ್ತೇವೆ. ಮುಕ್ತ ಮಾತು ನಿಮಗೆ ಎಷ್ಟು ಮುಖ್ಯ ಎ೦ದು ಹೇಳುತ್ತೀರಾ ? ಚೊಮ್ಸ್ಕಿ : ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವದು  ಜೀವನದುದ್ದಕ್ಕೂ ನನ್ನ ಪ್ರಮುಖ ಬದ್ಧತೆಯಾಗಿದೆ. ವಾಕ್ ಸ್ವಾತಂತ್ರ್ಯವಿಲ್ಲದಿದ್ದಲ್ಲಿ, ನಿಮಗೆ ಬೇರೆ ಯಾವುದರ ಸ್ವಾತಂತ್ರ್ಯವೂ ಇರುವುದಿಲ್ಲ. ವಾಕ್ ಸ್ವಾತಂತ್ರ್ಯಕ್ಕೆ ಒಂದು ಅರ್ಥವಿದೆ. ಇದರರ್ಥ ನೀವು ಹೀನಯಿಸುವ,  ತಾತ್ಸಾರ ಮಾಡುವ  ದೃಷ್ಟಿಕೋನಗಳನ್ನು ಸಹಿಸಿಕೊಳ್ಳಲು ಸಿಧ್ಧರಾಗಿರುವದು. ಸ್ಟಾಲಿನ್, ಹಿಟ್ಲರ್ ಅನ್ನು ತೆಗೆದುಕೊಳ್ಳಿ, ಅವರು ಅನುಮೋದಿಸಿದ ಅಭಿಪ್ರಾಯಗಳಿಗಾಗಿ ಅವರು ವಾಕ್ ಸ್ವಾತಂತ್ರ್ಯದ ಪರವಾಗಿದ್ದರು. ಅದು ನಿರಂಕುಶವಾದ.  ಯಾವುದಾದರೂ ಅಲ್ಪ ಸ್ವಲ್ಪ ‘ಎಡ’ ನೀತಿ-ತತ್ವಗಳಿಗೆ ಸೇರಿದ್ದು,  ಅಥವಾ ಕೇವಲ  ಮಾನವರ ಮೇಲಿನ ಕಾಳಜಿಗೆ ಸೇರಿದ್ದು ಆ ರಾಷ್ಟ್ರಗಳಲ್ಲಿ  ಬಲವಾಗಿ ವಿರೋಧಿಸಲ್ಪಡುತ್ತದೆ. ಮಹಾನ್ ಎಡ ಮಾರ್ಕ್ಸ ವಾದಿ ಹುತಾತ್ಮ ರೋಸಾ ಲಕ್ಸೆಂಬರ್ಗ್ ಹೇಳಿದಂತೆ,  ವಾಕ್ ಸ್ವಾತಂತ್ರ್ಯ ಎ೦ದರೆ  ನೀವು ಇಷ್ಟಪಡದ ಅಥವಾ ನೀವು ತಿರಸ್ಕರಿಸುವ ಅಭಿಪ್ರಾಯಗಳಿಗೆ ಸ್ವಾತಂತ್ರ್ಯ.  ಇದೇ ವಾಕ್ ಸ್ವಾತಂತ್ರ್ಯದ ವ್ಯಾಖ್ಯಾನವಾಗಿದೆ, ಆದರೆ ಈ ವಾಕ್ ಸ್ವಾತ೦ತ್ರ್ಯ  ಆಕ್ರಮಣದಲ್ಲಿದೆ ಮತ್ತ