ರೈತರ ಸ೦ಘಟನೆಯ ಸಮರ್ಥನೆಯಲ್ಲಿ ೨೦೨೦ ರ ಭಾರತದ ಮೂರು ಕೃಷಿ ಕಾಯ್ದೆಗಳು ರೈತರಲ್ಲಿ ಆಳವಾದ ಮತ್ತು ವ್ಯಾಪಕ ಅಸಮಾಧಾನವನ್ನು ಸೃಷ್ಟಿಸಿವೆ. ನಡೆಯುತ್ತಿರುವ ಆಂದೋಲನದ ಮೂಲ ಕಾರಣಗಳನ್ನು ರೈತರ ದುರ್ಬಲತೆ, ಸಾಮಾಜಿಕ-ಪರಿಸರ ವ್ಯವಸ್ಥೆಗಳು ಮತ್ತು ಪರಿಸರ ಆಡಳಿತದ ದೃಷ್ಟಿಕೋನಗಳಿಂದ ಪರಿಶೀಲಿಸುತ್ತಾ, ಈ ಸುಧಾರಣೆಗಳು ಪ್ರಸ್ತುತ ಭಾರತೀಯ ಕೃಷಿಯನ್ನು ಮುಗ್ಗರಿಸುವ ಮತ್ತು ಭವಿಷ್ಯದಲ್ಲಿಯೂ ಹಾಗೆ ಮಾಡುವ ಮೂರು ಪ್ರಮುಖ ಸಮಸ್ಯೆಗಳು, ಅ೦ದರೆ ಅನಿಶ್ಚಿತತೆ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಮತ್ತು ಸೈರಿಸುವಿಕೆ, ಇವನ್ನು ಪರಿಹರಿಸುವುದಿಲ್ಲ ಎಂದು ನಾನು ವಾದಿಸುತ್ತೇನೆ. ಸುಧಾರಣೆಗಳೊಂದಿಗೆ, ಈ ಮೂರು ಕೃಷಿ ಮಸೂದೆಗಳು ಭಾರತದ ಕೃಷಿಯನ್ನು ಪರಿವರ್ತಿಸುವ ಮುಖ್ಯ ಕಾರ್ಯಕರ್ತರುಗಳಾಗಿ ಪ್ರಬಲ ಮಾರುಕಟ್ಟೆ ಚಟುವಟಿಕೆಗಾರರನ್ನು ಸ್ಥಾಪಿಸುತ್ತವೆ. ಆದಾಗ್ಯೂ, ಬಹುಸಂಖ್ಯಾತರಾಗಿರುವ ಮತ್ತು ಉತ್ತಮ ಬೆಲೆಗಳು, ಕೃಷಿ ಪದ್ಧತಿಗಳು ಮತ್ತು ಅಂತರ್ಜಲ ಸುಸ್ಥಿರತೆಗಾಗಿ ತಮ್ಮ ಪ್ರಯತ್ನಗಳನ್ನು ಹೆಚ್ಚಾಗಿ ಕ್ರೋಢೀಕರಿಸುತ್ತಿರುವ ಸಣ್ಣ ಹಿಡುವಳಿದಾರರ ರಾಷ್ಟ್ರವಾಗಿ, ರೈತ ಸಂಸ್ಥೆಗಳು ಕೃಷಿ ಪರಿವರ್ತನೆಗೆ ಮುಂದಾಗುವ ಉತ್ತಮ ಸ್ಥಿತಿಯಲ್ಲಿದ್ದಾರೆ. ದೊಡ್ಡ ಕಾರ್ಪೊರೇಟ್ಗಳ ವಿರುದ್ಧ ಹೋರಾಡಿದಾಗ, ರೈತರು ಮತ್ತು ಅವರ ಸಂಸ್ಥೆಗಳು ಉತ್ತಮ ವ್ಯವಹಾರ ಒಪ್ಪ೦ದಗಳಿಗಾಗಿ ಚೌಕಾಶಿ ಮಾಡಲು ಮತ್ತು ನೀತಿಯನ್ನು ರೂಪಿಸುವ ವಿಶಾಲ ರಾ...
ಪೋಸ್ಟ್ಗಳು
FARMERS AGITATION ಲೇಬಲ್ ಜೊತೆಗೆ ಪೋಸ್ಟ್ಗಳನ್ನು ತೋರಿಸಲಾಗುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ದಿ ವಯರ್ ನಲ್ಲಿ ಪ್ರಕಟಿತ ಭಾರತದಲ್ಲಿ ಕೃಷಿಕರ ಆಂದೋಲನದಬಗ್ಗೆ ನೋಮ್ ಚೋಮ್ಸ್ಕಿ ನಾಸಾ ವಿಜ್ಞಾನಿ ಮತ್ತು ಚಲನಚಿತ್ರ ನಿರ್ಮಾಪಕ ಬೇದಬ್ರತ ಪೇನ್ಗೆ ನೀಡಿದ ಸಂದರ್ಶನದಲ್ಲಿ, ಪ್ರೊ. ನೋಮ್ ಚೋಮ್ಸ್ಕಿ ಅವರು ಭಾರತದಲ್ಲಿ ರೈತರ ಪ್ರತಿಭಟನೆಯನ್ನು ಚರ್ಚಿಸುತ್ತಾರೆ.. ಇದನ್ನು 'ಕರಾಳ ಕಾಲದಲ್ಲಿ ಭರವಸೆಯ ದಾರಿದೀಪ' ಎಂದು ಕರೆದ ಖ್ಯಾತ ಭಾಷಾಶಾಸ್ತ್ರಜ್ಞ, ವಿದ್ವಾಂಸ ಮತ್ತು ಕಾರ್ಯಕರ್ತ, ಭಾರತದ ರೈತರು ನಡೆಸುವ ಪ್ರದರ್ಶನಗಳು ವಿಶ್ವದಾದ್ಯಂತ 'ಹೋರಾಟದ ಮಾದರಿ' ಎಂದು ಹೇಳುತ್ತಾರೆ. ಜೂನ್ 26, 2021 ಬೇದಬ್ರತ ಪೇನ್: ಭಾರತೀಯ ರೈತರು ಪ್ರತಿಭಟನೆಯ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ನೀವು ಹೇಳುತ್ತೀರಾ ? ಚೋಮ್ಸ್ಕಿ: ಖಂಡಿತ. ಇದು ಬಹಳ ಮುಖ್ಯವಾದ ಪ್ರತಿಭಟನೆಯಾಗಿದೆ ಮತ್ತು ದಬ್ಬಾಳಿಕೆ, ಹಿಂಸಾಚಾರ ಮತ್ತು ಎಲ್ಲಾ ರೀತಿಯ ಮಾಧ್ಯಮ ದಾಳಿಗಳ ನಡುವೆಯೂ ಅದನ್ನು ಮು೦ದುವರಿಸಿಕೊಳ್ಳಲು ಅವರು ಸಮರ್ಥರಾಗಿದ್ದಾರೆ ಎಂಬುದು ಅದ್ಭುತಕರವಾಗಿದೆ. ಅವರು ಅಲ್ಲಿಯೇ ಪಟ್ಟು ಹಿಡಿದು ಮು೦ದುವರೆದು , ಅವರು ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕೃಷಿ ಸಮುದಾಯದ ಹಕ್ಕುಗಳಿಗಾಗಿ ಮಾತ್ರವಲ್ಲ, ಆದರೆ ಭಾರತವು ತನ್ನ ನಾಗರಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ನೋಡಿಕೊಳ್ಳುವ ಕಾರ್ಯನಿರತ ಸಮಾಜವಾಗಿದೆ ಎನ್ನುವ ಉದ್ದೇಶದಿ೦ದ. ಬೇದಬ್ರತ: “ಭಾರತೀಯ ಸರ್ಕಾರವು ಇಂದು ಭಾರತ...