ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
  ಎಹ್ಸಾನ್ ಜಾಫ್ರಿ ಯವರ ನೆನಪು  ಏಕೆ ಮುಖ್ಯ : ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಾರ್ಮಿಕ   ಒಕ್ಕೂಟವಾದಿ, ಜಾಫ್ರಿ ಗುಜರಾತ ದ ಪ್ರಗತಿಪರ ರಾಜಕೀಯದ ಸಂಪ್ರದಾಯಕ್ಕೆ ಸೇರಿದವರು. ಕ್ರಿಸ್ಟೋಫ್ ಜಾಫ್ರೆಲಾ | ಇ೦ಡಿಯನ್ ಎಕ್ಸಪ್ರೆಸ್ಸ್  : ಮಾರ್ಚ್ 1, 2022   1969 ರ ಕೋಮು ಗಲಭೆಯಲ್ಲಿ ನಗರವನ್ನು ಧ್ವಂಸಗೊಳಿಸಲಾಯಿತು , ಜಾಫ್ರಿ ಅವರ ಮನೆ ಸುಡಲಾಯಿತು ಮತ್ತು ಅವರ ಕುಟುಂಬವು ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿತು. ತಮ್ಮ ಮನೆಯನ್ನು ಜಾಫ್ರಿ ಅಹಮದಾಬಾದ್‌ನ ಅದೇ ಸ್ಥಳದಲ್ಲಿ, ಕೈಗಾರಿಕಾ ವಲಯದಲ್ಲಿ  ಮರುನಿರ್ಮಾಣ ಮಾಡಿದರು ಮತ್ತು ಬೊಹ್ರಾ ಹೌಸಿಂಗ್ ಅಸೋಸಿಯೇಷನ್, ಗುಲ್ಬರ್ಗ್ ಸೊಸೈಟಿಯನ್ನು ಸಹ ಸ್ಥಾಪಿಸಿದರು. (ಎಕ್ಸ್‌ಪ್ರೆಸ್ ಆರ್ಕೈವ್) ಎಹ್ಸಾನ್ ಜಾಫ್ರಿ ಸರಿಯಾಗಿ 20 ವರ್ಷಗಳ ಹಿಂದೆ ಕೊಲ್ಲಲ್ಪಟ್ಟರು, ಕೋಮು ಹಿಂಸಾಚಾರದ ಅಲೆಯ ಮೊದಲ ದಿನದಂದು ಅವರ ನಗರವಾದ ಅಹಮದಾಬಾದ್ ಸೇರಿದಂತೆ ಗುಜರಾತ್‌ನ ಹಲವಾರು ನಗರಗ ಳು ಧ್ವಂಸಗೊ೦ಡವು. ಜಾಫ್ರಿ ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ಸ೦ಘವಾದಿ ಮತ್ತು ಸಾಹಿತ್ಯಿಕ ವ್ಯಕ್ತಿ. ಬುರ್ಹಾನ್‌ಪುರದಲ್ಲಿ ಜನಿಸಿದ ಅವರು 1935 ರಲ್ಲಿ ಆರು ವರ್ಷದವರಾಗಿದ್ದಾಗ ಅಹಮದಾಬಾದ್‌ಗೆ ತೆರಳಿದರು. ಅಹಮದಾಬಾದ್‌ನ ಆರ್‌ಸಿ ಹೈಸ್ಕೂಲ್‌ನಲ್ಲಿರುವಾಗ ಅವರು ಉರ್ದುವಿನಲ್ಲಿ ನಿಯತಕಾಲಿಕವನ್ನು ಪ್ರಕಟಿಸಿದರು ಮತ್ತು ನಂತರ 1940 ರ ದಶಕದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸೇರಿದರು. ಕಾರ್ಮಿಕ ಸಂಘಟನೆಯ ನಾಯಕನಾದ ನಂತರ, 19
ಇಮೇಜ್
  ಮೇಲ್ಜಾತಿಗಳ ದಂಗೆ   ಝಾನ್ ಡ್ರೆಜ್   Jean Drèze   ಝಾನ್ ಡ್ರೆಜ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ, ಅರ್ಥಶಾಸ್ತ್ರ ವಿಭಾಗ, ರಾಂಚಿ ವಿಶ್ವವಿದ್ಯಾಲಯ, ರಾಂಚಿ.     ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ಭೋಪಾಲ್‌ | ಸುಯಶ್ ದ್ವಿವೇದಿ (ವಿಕಿಮೀಡಿಯಾ) ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯ ಉಲ್ಬಣವು ಪ್ರಜಾಪ್ರಭುತ್ವದ ಸಮಾನತೆಯ ಬೇಡಿಕೆಗಳ ವಿರುದ್ಧ ಮೇಲ್ಜಾತಿಗಳ ದಂಗೆಯಾಗಿ ಕಂಡುಬರುತ್ತದೆ. ಹಿಂದುತ್ವ ಯೋಜನೆಯು ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯನ್ನು ಮರುಸ್ಥಾಪಿಸುವ ಭರವಸೆ ನೀಡುವಲ್ಲಿ ಮೇಲ್ಜಾತಿಗಳಿಗೆ ಬಚಾವು ಮಾಡುವ ಜೀವದ ನೌಕೆಯಾಗಿದೆ. ಭಾರತದಲ್ಲಿ ಇತ್ತೀಚಿನ ಹಿಂದೂ ರಾಷ್ಟ್ರೀಯತೆಯ ಉಲ್ಬಣವು ಜಾತಿಯನ್ನು ನಿರ್ಮೂಲನೆ ಮಾಡುವ ಮತ್ತು ಹೆಚ್ಚು ಸಮಾನ ಸಮಾಜವನ್ನು ತರುವ ಚಳುವಳಿಗೆ ಭಾರಿ ಹಿನ್ನಡೆಯಾಗಿದೆ. ಈ ಹಿನ್ನಡೆ ಆಕಸ್ಮಿಕವಲ್ಲ: ಹಿಂದೂ ರಾಷ್ಟ್ರೀಯತೆಯ ಬೆಳವಣಿಗೆಯನ್ನು ಪ್ರಜಾಪ್ರಭುತ್ವದ ಸಮಾನತೆಯ ಬೇಡಿಕೆಗಳ ವಿರುದ್ಧ ಮೇಲ್ಜಾತಿಗಳ ದಂಗೆ ಎಂದು ಕಾಣಬಹುದು. ಹಿಂದುತ್ವ ಮತ್ತು ಜಾತಿ "ಹಿಂದುತ್ವ" ಎಂದೂ ಕರೆಯಲ್ಪಡುವ ಹಿಂದೂ ರಾಷ್ಟ್ರೀಯತೆಯ ಅಗತ್ಯ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಎಸೆನ್ಷಿಯಲ್ಸ್ ಆಫ್ ಹಿಂದುತ್ವ (ಹಿ೦ದುತ್ವದ ಮೂಲತತ್ವಗಳು) ಪುಸ್ತಕ ದಲ್ಲಿ ( Essentials of Hindutva , Savarkar, 1923) ) ವಿ ಡಿ ಸಾವರ್ಕರ್ ಅವರು ಇವುಗಳನ್ನು ಬಹಳ ಸ್
ಇಮೇಜ್
ಸಮವಸ್ತ್ರ ಆದೇಶ ದಿ ೫-೨-೨೦೨೨  
ಇಮೇಜ್
      ಕರ್ನಾಟಕದಲ್ಲಿ ಕಾನೂನು ಎಲ್ಲಿದೆ?   ಕರ್ನಾಟಕದಲ್ಲಿ ಕಾನೂನು ಆಳ್ವಿಕೆಯ ಕುರಿತು ರಾಷ್ಟ್ರಪತಿಗಳಿಗೆ ನಾಗರಿಕ ಸ್ವಾತಂತ್ರ್ಯಕ್ಕಾಗಿ  ಜನರ ಒಕ್ಕೂಟಗಳು  ( Peoples Unions for Civil Liberties - PUCL) ಬರೆದ ಪತ್ರ 16 ಫೆಬ್ರುವರಿ 2022     ಗೌರವಾನ್ವಿತರೇ, ಬಸವರಾಜ್ ಬೊಮ್ಮಾಯಿ  ಅವರು ಜುಲೈ 2021 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆಗಿನಿಂದಲೂ ಕರ್ನಾಟಕದಲ್ಲಿ ಕಾನೂನು ಮತ್ತು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಗಳ ಹದಗೆಟ್ಟ ಸ್ಥಿತಿಯ ಬಗ್ಗೆ  ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ ಗಳು ( Peoples Unions for Civil Liberties - PUCL - ಪಿ ಯು ಸಿ ಎಲ್ ) ಆದ ನಾವು,   ಈ  ಪತ್ರ ಬರೆಯುತ್ತೇವೆ. ಬೊಮ್ಮಾಯಿ ಅವರ ಆಡಳಿತವು ಇಲ್ಲಿಯವರೆಗೆ ಕೋಮು ಆಧಾರಿತ ಪೋಲೀಸು ಕ್ರಮಗಳು  ಮತ್ತು ದ್ವೇಷದ ಅಪರಾಧಗಳು, ಚರ್ಚ್‌ಗಳ ಮೇಲಿನ ದಾಳಿಗಳು ಮತ್ತು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವದನ್ನು ಕ೦ಡಿವೆ. ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್‌ಗಿರಿಯ ಬಗ್ಗೆ ಏನು ಮಾಡಲಾಗುತ್ತಿದೆ  ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು  “ಸಮಾಜದಲ್ಲಿ ಹಲವು ಭಾವನೆಗಳಿವೆ. ಈ ಭಾವನೆಗಳಿಗೆ ಧಕ್ಕೆಯಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಈ ಭಾವನೆಗಳನ್ನು ನೋಯಿಸಿದಾಗ, ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳು ಹೊರಹೊಮ್ಮುತ್ತವೆ. ಕಾನೂನು ಮತ್ತು ಸುವ್