ಪೋಸ್ಟ್‌ಗಳು

ಇಮೇಜ್
  ಭಾರತದ ಪ್ರಜಾಪ್ರಭುತ್ವ - ಗಂಡಾಂತರದಡಿಯಲ್ಲಿ ಒ೦ದು  ಕನಸು ನಮ್ಮ ಪ್ರಜಾಪ್ರಭುತ್ವದ ಅವಸ್ಥೆಯ ಬಗ್ಗೆ ಎರಡು ಮಹತ್ವದ  ಪುಸ್ತಕಗಳು ದೇಶದಲ್ಲಿ ನಿರಂಕುಶ ಪ್ರಭುತ್ವ ಮತ್ತು ಅಸಮಾನತೆಯ ಏರಿಕೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತವೆ. ವಿಮರ್ಶಕರು ತಮ್ಮದೇ ಆಯಾಮಗಳನ್ನು ಕೊಡುತ್ತಾರೆ.  To Kill a Democracy: India’s Passage to Despotism by Debasish Roy Chowdhury and John Keane OUP, 336 pages. Modi’s India: Hindu Nationalism and the Rise of Ethnic Democracy by Christophe Jaffrelot Princeton,  656 pages ಈ ವರ್ಷದ ಆರಂಭದಲ್ಲಿ, ಬೋರಿಸ್ ಜಾನ್ಸನ್ ಮತ್ತು ಅವರ ಭಾರತದ ಸಹವರ್ತಿ ನರೇಂದ್ರ ಮೋದಿ ಅವರು ವಸ್ತುತಃ (‘ವರ್ಚುವಲ್’)  ಶೃಂಗಸಭೆಯನ್ನು ನಡೆಸಿದ್ದರು. ಇದರಲ್ಲಿ ಬ್ರಿಟನ್  ಪ್ರಧಾನಿ ಪರಸ್ಪರ ಸ್ನೇಹದ ಹೊಸ ಯುಗವನ್ನು ಶ್ಲಾಘಿಸಿದರು. "ಬ್ರಿಟನ್  ಮತ್ತು ಭಾರತ ಅನೇಕ ಮೂಲಭೂತ ಮೌಲ್ಯಗಳನ್ನು ಹಂಚಿಕೊಂಡಿವೆ" ಎಂದರು ಜಾನ್ಸನ್. "ಬ್ರಿಟನ್ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿದೆ. ಮತ್ತು ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ”. ಇ೦ತಹ ಭಾರತೀಯ ಪ್ರಣಯವು ಅನನ್ಯವಲ್ಲ.  ಇತರ ಪಾಶ್ಚಿಮಾತ್ಯ ರಾಷ್ಟ್ರಗಳು, ಅಮೆರಿಕವೂ ಸೇರಿದ೦ತೆ , ಭಾರತದ ಸಂಭಾವ್ಯ ಬೃಹತ್ ಆರ್ಥಿಕತೆಯ ಲಾಭ ಪಡೆಯುವ  ಗುರಿಯ...
ಇಮೇಜ್
  ನೋಮ್ ಚೊಮ್ಸ್ಕಿ : ನಿಜವಾದ ಶಿಕ್ಷಣದ ಬಗ್ಗೆ  **** ನನ್ನ ಹೆಸರು ನೋಮ್ ಚೋಮ್ಸ್ಕಿ.  ನಾನು 65 ವರ್ಷಗಳಿಂದ ಮಾಸ್ಸಚುಸೆಟ್ಸ್ ಇನ್ಸ್ಟಿಟ್ಯೂಟ್ ಒಫ಼್ ಟೆಕ್ನಾಲಜಿ ಯಲ್ಲಿ ಪ್ರಾಧ್ಯಾಪಕ, ಈಗ ನಿವೃತ್ತ.  ನಿಜವಾಗಿಯೂ ವಿದ್ಯಾವಂತನಾಗುವುದರ ಅರ್ಥವೇನು ಎಂಬ ಪ್ರಶ್ನೆಗೆ  ಈ ಬಗ್ಗೆ ಹಿ೦ದೆ ಹೇಳಿದ ಕೆಲವು ಅತ್ಯುತ್ತಮ ಉತ್ತರಗಳನ್ನು  ಮೀರಿ ಹೇಳುವದು ಸುಲಭವಲ್ಲ. ಉದಾಹರಣೆಗೆ,  ಆಧುನಿಕ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ಥಾಪಕ,   ಜ್ಞಾನೋದಯದ ಯುಗ*ದ ಪ್ರಮುಖ ಮಾರ್ಗದರ್ಶಕ, ಮಾನವತೆಯ ಜಿಜ್ಞಾಸು ವಿಲ್ಹೆಲ್ಮ್  ವೋನ್ ಹು೦ಬೋಲ್ಟ್**  ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಬಗ್ಗೆ ವ್ಯಾಪಕವಾಗಿ ಬರೆದಿದ್ದು  ನನ್ನ ಅಭಿಪ್ರಾಯದಲ್ಲಿ  ಸ್ವೀಕಾರಾರ್ಹವಾಗಿ ವಾದಿಸಿದ ಪ್ರಕಾರ ಪಕ್ವತೆಯನ್ನು ತಲುಪಿದ  ಮಾನವನ ಮಧ್ಯಬಿ೦ದು ಮತ್ತು ಆವಶ್ಯಕತೆ ಏನ೦ದರೆ ರಚನಾತ್ಮಕವಾಗಿ, ಸ್ವತ೦ತ್ರವಾಗಿ, ಬಾಹ್ಯ ನಿಯ೦ತ್ರಣಗಳಿಲ್ಲದೆ ವಿಚಾರಿಸುವ ಮತ್ತು ಸೃಷ್ಟಿಸುವ  ಯೋಗ್ಯತೆ .  ಆಧುನಿಕ ಸಮಯದಲ್ಲಿ ಇದೇ ಸ೦ಸ್ಥೆ(MIT)ಯಲ್ಲಿ ಕಲಿಸುತ್ತಿದ್ದ ಒಬ್ಬ ಪ್ರಮುಖ ಭೌತಶಾಸ್ತ್ರಜ್ಞರು ತಮ್ಮ ವಿಧ್ಯಾರ್ಥಿಗಳಿಗೆ ಹೇಳುತ್ತಿದ್ದ ಪ್ರಕಾರ, ನಿಮ್ಮ ಶಿಕ್ಷಣ ತರಗತಿ ಏನೇನನ್ನು ಒಳಗೊ೦ಡಿದೆ (cover) ಎನ್ನುವದು ಮುಖ್ಯವಲ್ಲ , ನೀವು ನೀವೇ ಏನನ್ನು ಕ೦ಡುಕೊಳ್ಳುತ್ತೀರಿ ಅಥವಾ ಕ೦ಡುಹಿಡಿಯುತ್ತೀರಿ (di...
ಇಮೇಜ್
  ಗುಜರಾತಿ ಕವಿಯಿತ್ರಿ ಪರುಲ್ ಖಕ್ಕರ್ ಬರೆದ ಕವಿತೆ (ಇಂಗ್ಲಿಷ್ ಅನುವಾದ ಆಧರಿಸಿ)   ತನ್ನ ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪರುಲ್ ಖಕ್ಕರ್ ಗುಜರಾತಿ ಭಾಷೆಯ ಜನಪ್ರಿಯ ಕವಿ. ಕೆಲವರು ಅವ ರ ನ್ನು ಟೀಕಿಸಿದರು. ಗುಜರಾತ್ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ, ಖಕ್ಕರ್ "ತುಂಬಾ ಒಳ್ಳೆಯ ಕವಿ", ಆದರೆ ಅವರ "ಹೊಸ ಕವಿತೆ ಕಾವ್ಯವಲ್ಲ" ಎಂದು ಹೇಳಿದರು.   "ಇದು ದುರುಪಯೋಗದಿಂದ ತುಂಬಿದೆ ಮತ್ತು ಮಾನಹಾನಿಕರವಾಗಿದೆ. ಪ್ರಾಸವು ಅಸಂಬದ್ಧವಾಗಿದೆ. ಶ್ರೀ ಮೋದಿ ಮತ್ತು ಬಿಜೆಪಿಗೆ ವಿರುದ್ಧವಾಗಿರುವ ಜನರು ಈ ಕವಿತೆಯನ್ನು ತಮ್ಮ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಮಗೆ ಕವಯಿತ್ರಿಯ ವಿರುದ್ಧ ಏನೂ ಇಲ್ಲ. ಅವ ರು ಏನು ಬೇಕಾದರೂ ಬರೆಯಬಹುದು. ನಾವು ಕೇವಲ ಎಡ ಉದಾರವಾದಿಗಳು ಮತ್ತು ರಾಷ್ಟ್ರ ವಿರೋಧಿ ಜನರಿಂದ ಅವರ ಕೆಲಸದ ದುರುಪಯೋಗಕ್ಕೆ ವಿರುದ್ಧವಾಗಿರುತ್ತೇವೆ "   ಕವಿತೆಯ ವಿರುದ್ಧ ಅಕಾಡೆಮಿಯ ಈ ನಿಲುವನ್ನು ವಿರೋಧಿಸಿ  ರಾಜ್ಯದ 160 ಕ್ಕೂ ಹೆಚ್ಚು ಪ್ರಖ್ಯಾತ ಜನರು ಹೇಳಿಕೆ ನೀಡಿದ್ದಾರೆ . ಸೃಷ್ಟಿಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಲಾಬಿಯ ಪ್ರಯತ್ನಗಳು ಎ೦ದು ಕೆಲವರು ಹೇಳಿದ್ದಾರೆ.    ಓದುಗರು ತಮ್ಮ ಭಾಷೆಯ ಪ್ರಮುಖ ಕವಯಿತ್ರಿಯ ಬರಹದ ಬಗ್ಗೆ ತಮ್ಮದೇ ಅಭಿಪ್ರಾಯ ಕೊಳ್ಳುವರು - ಸರ್ಕಾರ-ಪರ ಅಕಾಡೆಮಿ ಏನೇ  ಹೇಳಿದರೂ, ಅಲ್ಲವೇ ? ಶವವಾಹಿನಿ ಗ೦ಗಾ...
ಇಮೇಜ್
         ಹೆಣ್ಣಿನ ದೇಹದ ಹಲವು ಬಾಳುಗಳು ಬಾಳಿನುದ್ದಕ್ಕೂ  ಹೆಣ್ಣಿನ ದೇಹದ ಕಟ್ಟೋಣ   ನಡೆಯುತ್ತಲೇ ಇರುತ್ತದೆ- -ಗ೦ಡಸರ ಯಾಜಮಾನ್ಯದಿ೦ದ ಮತ್ತು  ಬಂಡವಾಳಶಾಹಿಯಿ೦ದ     ಗ೦ಡಿನ  ‘ಮೇಲ್ಮಟ್ಟ’ದ   ಆಣ್ಮೆಯ ಲಕ್ಷಣಗಳಿಗೆ ಪೂರಕವಾದ ಲಿಂಗಸೂಕ್ತ ಪಾತ್ರಗಳು ಮತ್ತು ಗುಣಗಳನ್ನು ಪಡೆದುಕೊಳ್ಳಲು ಚಿಕ್ಕ೦ದಿನಿ೦ದಲೂ  ಹೇಳಿಕೊಡುವುದರಿ೦ದ ಸ್ತ್ರೀಯರ ದೇಹಗಳು ಲಿಂಗ ರಚನೆಯನ್ನು ಅನುಭವಿಸುತ್ತವೆ ಹೆಣ್ಣುಗಳು  ಯಾವಾಗಲೂ ತಮ್ಮ ದೇಹದ ಬಗ್ಗೆ ಹೊ೦ದಾಣಿಕೆಯಿಲ್ಲದ ವರ್ಣನೆಗಳನ್ನು ಸ್ವೀಕರಿಸುತ್ತಾರೆ ತಕ್ಕದೆ೦ದೆಣಿಸಿದಾಗ , ಮೆಚ್ಚಿಕೆಯ  ಚಿತ್ರಗಳಿಂದ ದೇಹವನ್ನು ಹೊಗಳಲಾಗುತ್ತದೆ-- -- ದೇವಿ / ದೇವತೆಗಳ, ರಾಷ್ಟ್ರದ ಗೌರವ, ಅಥವಾ ಕುಟುಂಬ ಅಥವಾ ಸಮುದಾಯಗಳ ಹೆಸರಿನಲ್ಲಿ ಮತ್ತು ಕೆಲವೊಮ್ಮೆ ಅದೇ ದೇಹವನ್ನು ನಾಚಿಕೆಗೇಡು, ಮುಜುಗರ, ಕಿರಿಕಿರಿ, ಭಯ ಮತ್ತು ಅಸಹ್ಯಕರವಾಗಿ ತೋರಿಸಲಾಗುತ್ತದೆ ಹೆ೦ಗಸರು ಈ ‘ಆದರ್ಶ ಶರೀರ’ವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮನ್ನು 'ಒಳ್ಳೆಯ ಮಹಿಳೆಯರು' ಎಂದು ತೋರಿಸಲು ಹೆಣಗಾಡಿದ್ದಾರೆ ಅಥವಾ ‘ಕೆಟ್ಟ ಹೆಣ್ಣುಗಳು’ ಎ೦ದು ಚಿತ್ರಿಸುವದರ ನಕಾರಾತ್ಮಕ ಅಂಶಗಳನ್ನು ಎದುರಿಸಲು ಹೆದರುತ್ತಾರೆ. ಮತ್ತೊಂದೆಡೆ ಕೆಳಜಾತಿಗಳು ಮತ್ತು ವರ್ಗಗಳ ಲಿಂಗಾಧಾರಿತ  ದೇಹಗಳನ್ನು ಬಡತನ, ಅಪೌಷ್ಟಿಕತೆ, ಕೆಲಸದ ಹೊರಲಾಗದ ಭಾರ, ಲಿ೦...