ನೋಮ್ ಚೊಮ್ಸ್ಕಿ : ನಿಜವಾದ ಶಿಕ್ಷಣದ ಬಗ್ಗೆ

 ****


ನನ್ನ ಹೆಸರು ನೋಮ್ ಚೋಮ್ಸ್ಕಿ.  ನಾನು 65 ವರ್ಷಗಳಿಂದ ಮಾಸ್ಸಚುಸೆಟ್ಸ್ ಇನ್ಸ್ಟಿಟ್ಯೂಟ್ ಒಫ಼್ ಟೆಕ್ನಾಲಜಿ ಯಲ್ಲಿ ಪ್ರಾಧ್ಯಾಪಕ, ಈಗ ನಿವೃತ್ತ. 

ನಿಜವಾಗಿಯೂ ವಿದ್ಯಾವಂತನಾಗುವುದರ ಅರ್ಥವೇನು ಎಂಬ ಪ್ರಶ್ನೆಗೆ  ಈ ಬಗ್ಗೆ ಹಿ೦ದೆ ಹೇಳಿದ ಕೆಲವು ಅತ್ಯುತ್ತಮ ಉತ್ತರಗಳನ್ನು  ಮೀರಿ ಹೇಳುವದು ಸುಲಭವಲ್ಲ.

ಉದಾಹರಣೆಗೆ,  ಆಧುನಿಕ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ಥಾಪಕ,   ಜ್ಞಾನೋದಯದ ಯುಗ*ದ ಪ್ರಮುಖ ಮಾರ್ಗದರ್ಶಕ, ಮಾನವತೆಯ ಜಿಜ್ಞಾಸು ವಿಲ್ಹೆಲ್ಮ್  ವೋನ್ ಹು೦ಬೋಲ್ಟ್**  ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಬಗ್ಗೆ ವ್ಯಾಪಕವಾಗಿ ಬರೆದಿದ್ದು  ನನ್ನ ಅಭಿಪ್ರಾಯದಲ್ಲಿ  ಸ್ವೀಕಾರಾರ್ಹವಾಗಿ ವಾದಿಸಿದ ಪ್ರಕಾರ ಪಕ್ವತೆಯನ್ನು ತಲುಪಿದ  ಮಾನವನ ಮಧ್ಯಬಿ೦ದು ಮತ್ತು ಆವಶ್ಯಕತೆ ಏನ೦ದರೆ ರಚನಾತ್ಮಕವಾಗಿ, ಸ್ವತ೦ತ್ರವಾಗಿ, ಬಾಹ್ಯ ನಿಯ೦ತ್ರಣಗಳಿಲ್ಲದೆ ವಿಚಾರಿಸುವ ಮತ್ತು ಸೃಷ್ಟಿಸುವ  ಯೋಗ್ಯತೆ . 

ಆಧುನಿಕ ಸಮಯದಲ್ಲಿ ಇದೇ ಸ೦ಸ್ಥೆ(MIT)ಯಲ್ಲಿ ಕಲಿಸುತ್ತಿದ್ದ ಒಬ್ಬ ಪ್ರಮುಖ ಭೌತಶಾಸ್ತ್ರಜ್ಞರು ತಮ್ಮ ವಿಧ್ಯಾರ್ಥಿಗಳಿಗೆ ಹೇಳುತ್ತಿದ್ದ ಪ್ರಕಾರ, ನಿಮ್ಮ ಶಿಕ್ಷಣ ತರಗತಿ ಏನೇನನ್ನು ಒಳಗೊ೦ಡಿದೆ (cover) ಎನ್ನುವದು ಮುಖ್ಯವಲ್ಲ , ನೀವು ನೀವೇ ಏನನ್ನು ಕ೦ಡುಕೊಳ್ಳುತ್ತೀರಿ ಅಥವಾ ಕ೦ಡುಹಿಡಿಯುತ್ತೀರಿ (discover) ಎನ್ನುವದು ಮುಖ್ಯ. 

ನಿಜವಾದ ಸುಶಿಕ್ಷಿತನಾಗಿರಲು ಈ ದೃಷ್ಟಿಕೋನದಲ್ಲಿ  ಅರ್ಥವಾಗುವದು,  ನೀವು ನಿಮಗೆ ಲಭ್ಯವಿರುವ ಬೆಲೆಕೊಡುವ ಮತ್ತು ಅರ್ಥೈಸುವ ಸಂಪನ್ಮೂಲಗಳ ಆಧಾರದ ಮೇಲೆ ಶೋಧಿಸಲು ಮತ್ತು ಸೃಷ್ಟಿಸಲು, ಅನ್ವೇಷಿಸಲು ಎಲ್ಲಿ ನೋಡಬೇಕು, ಹೇಗೆ ಗಂಭೀರ ಪ್ರಶ್ನೆಗಳನ್ನು ರೂಪಿಸಲು, ಸೂಕ್ತವಾದಲ್ಲಿ ಪ್ರಮಾಣಿತ ಸಿದ್ಧಾಂತವನ್ನು ಪ್ರಶ್ನಿಸಲು, ಯೋಗ್ಯವಾದ ಪ್ರಶ್ನೆಗಳನ್ನು ರೂಪಿಸಲು ನಿಮ್ಮದೇ ಆದ ಮಾರ್ಗವನ್ನು ಅನುಸರಿಸಿ  ಅವನ್ನು ಮು೦ದುವರಿಸಲು ಮತ್ತು ಅಭಿವೃದ್ಧಿಪಡಿಸಲು  ತಿಳಿಯುವ ಸ್ಥಿತಿಯಲ್ಲಿರಬೇಕು..

ಅನೇಕ ವಿಷಯಗಳನ್ನು ತಿಳಿದಿರಬೇಕು ಮತ್ತು ಅರ್ಥಮಾಡಿಕೊ೦ಡಿರಬೇಕು. ನಿಜ.

ಆದರೆ  ನಿಮ್ಮ ಮನಸ್ಸಿನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಕ್ಕಿಂತ ಅತಿ ಹೆಚ್ಚು ಮುಖ್ಯವಾದುದು --

    ಎಲ್ಲಿ ನೋಡುವದು, ಹೇಗೆ ನೋಡುವದು,  ಹೇಗೆ ಪ್ರಶ್ನಿಸುವದು,  ಹೇಗೆ ಆಹ್ವಾನಿಸುವದು, ಪ್ರಪಂಚವು ನಿಮ್ಮ ಮು೦ದಿಡುವ  ಮತ್ತು ನಿಮ್ಮ ಸ್ವಯಂ ಶಿಕ್ಷಣ ಮತ್ತು ವಿಚಾರಣೆಯ ಸಮಯದಲ್ಲಿ ಮತ್ತು ಇತರರೊಂದಿಗೆ ಸಹಕಾರ,  ಐಕಮತ್ಯ ದಿ೦ದ  ನಡೆಸುವ  ತನಿಖೆಯಲ್ಲಿ ಮೂಡಿಬರುವ ಸವಾಲುಗಳನ್ನು ಹೇಗೆ ಸ್ವತಂತ್ರವಾಗಿ ಎದುರಿಸುವದು, ಮುಂದುವರಿಯುವುದು .

ಶಿಶುವಿಹಾರದಿಂದ ಉನ್ನತ ವಿಶ್ವವಿದ್ಯಾಲಯದ  ವರೆಗೂ ಇದನ್ನೇ ಒ೦ದು ಶಿಕ್ಷಣ ಪದ್ಧತಿ ಬೆಳೆಸಬೇಕು. ಮತ್ತು ಕೆಲವೊಮ್ಮೆ ಅತ್ಯುತ್ತಮ ಸಂದರ್ಭಗಳಲ್ಲಿ ಅದು ಯಶಸ್ವಿಯಾಗುತ್ತದೆ; ಹೀಗೆ , ಕನಿಷ್ಠ ನನ್ನ ಮಾನದಂಡಗಳ ಪ್ರಕಾರ, ಸುಶಿಕ್ಷಿತ ಜನರನ್ನು ತಯಾರಿಸುತ್ತದೆ. 

*ಜ್ಞಾನೋದಯ ಯುಗ - the Enlightenment  : ಬೌದ್ಧಿಕ ಮತ್ತು ತಾತ್ವಿಕ ಚಳುವಳಿಯಾಗಿದ್ದು, ಇದು 17 ಮತ್ತು 18 ನೇ ಶತಮಾನಗಳಲ್ಲಿ ಯುರೋಪಿನ ವಿಚಾರಗಳ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿತು  

** Wilhelm von Humboldt ಫ್ರೆಡ್ರಿಕ್ ವಿಲ್ಹೆಲ್ಮ್ ಕ್ರಿಶ್ಚಿಯನ್ ಕಾರ್ಲ್ ಫರ್ಡಿನ್ಯಾಂಡ್ ವಾನ್ ಹು೦ಬೋಲ್ಟ್ (೧೭೬೭-೧೮೩೫), ಪ್ರಷ್ಯ ದೇಶ (ಅನ೦ತರ ಜರ್ಮನಿಗೆ ಒಟ್ಟುಗೂಡಲಾಯಿತು) ದ ತತ್ವಜ್ಞಾನಿ, ಭಾಷಾಶಾಸ್ತ್ರಜ್ಞ, ಸರ್ಕಾರಿ ಆಡಳಿತಗಾರ, ರಾಜತಾಂತ್ರಿಕ,  ಮತ್ತು ಬರ್ಲಿನ್ ಹು೦ಬೋಲ್ಟ್ ವಿಶ್ವವಿದ್ಯಾಲಯದ ಸ್ಥಾಪಕ. ಇದಕ್ಕೆ 1949 ರಲ್ಲಿ ಅವರ  ಮತ್ತು ಅವರ ಕಿರಿಯ ಸಹೋದರ ನೈಸರ್ಗಿಕವಾದಿ, ಅಲೆಕ್ಸಾಂಡರ್ ವಾನ್ ಹು೦ಬೋಲ್ಟ್,  ಇವರ ಹೆಸರನ್ನು ಕೊಡಲಾಯಿತು. 

Noam Chomsky - On Being Truly Educated

1,603,316 views May 27, 2015

M I T

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು