ಗುಜರಾತಿ ಕವಿಯಿತ್ರಿ ಪರುಲ್ ಖಕ್ಕರ್ ಬರೆದ ಕವಿತೆ

(ಇಂಗ್ಲಿಷ್ ಅನುವಾದ ಆಧರಿಸಿ)

 

ತನ್ನ ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪರುಲ್ ಖಕ್ಕರ್ ಗುಜರಾತಿ ಭಾಷೆಯ ಜನಪ್ರಿಯ ಕವಿ. ಕೆಲವರು ಅವನ್ನು ಟೀಕಿಸಿದರು. ಗುಜರಾತ್ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ, ಖಕ್ಕರ್ "ತುಂಬಾ ಒಳ್ಳೆಯ ಕವಿ", ಆದರೆ ಅವರ "ಹೊಸ ಕವಿತೆ ಕಾವ್ಯವಲ್ಲ" ಎಂದು ಹೇಳಿದರು.

 

"ಇದು ದುರುಪಯೋಗದಿಂದ ತುಂಬಿದೆ ಮತ್ತು ಮಾನಹಾನಿಕರವಾಗಿದೆ. ಪ್ರಾಸವು ಅಸಂಬದ್ಧವಾಗಿದೆ. ಶ್ರೀ ಮೋದಿ ಮತ್ತು ಬಿಜೆಪಿಗೆ ವಿರುದ್ಧವಾಗಿರುವ ಜನರು ಈ ಕವಿತೆಯನ್ನು ತಮ್ಮ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಮಗೆ ಕವಯಿತ್ರಿಯ ವಿರುದ್ಧ ಏನೂ ಇಲ್ಲ. ಅವರು ಏನು ಬೇಕಾದರೂ ಬರೆಯಬಹುದು. ನಾವು ಕೇವಲ ಎಡ ಉದಾರವಾದಿಗಳು ಮತ್ತು ರಾಷ್ಟ್ರ ವಿರೋಧಿ ಜನರಿಂದ ಅವರ ಕೆಲಸದ ದುರುಪಯೋಗಕ್ಕೆ ವಿರುದ್ಧವಾಗಿರುತ್ತೇವೆ "

 

ಕವಿತೆಯ ವಿರುದ್ಧ ಅಕಾಡೆಮಿಯ ಈ ನಿಲುವನ್ನು ವಿರೋಧಿಸಿ  ರಾಜ್ಯದ 160 ಕ್ಕೂ ಹೆಚ್ಚು ಪ್ರಖ್ಯಾತ ಜನರು ಹೇಳಿಕೆ ನೀಡಿದ್ದಾರೆ. ಸೃಷ್ಟಿಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಲಾಬಿಯ ಪ್ರಯತ್ನಗಳು ಎ೦ದು ಕೆಲವರು ಹೇಳಿದ್ದಾರೆ. 

 

ಓದುಗರು ತಮ್ಮ ಭಾಷೆಯ ಪ್ರಮುಖ ಕವಯಿತ್ರಿಯ ಬರಹದ ಬಗ್ಗೆ ತಮ್ಮದೇ ಅಭಿಪ್ರಾಯ ಕೊಳ್ಳುವರು - ಸರ್ಕಾರ-ಪರ ಅಕಾಡೆಮಿ ಏನೇ  ಹೇಳಿದರೂ, ಅಲ್ಲವೇ ?

ಶವವಾಹಿನಿ ಗ೦ಗಾ

ಪರುಲ್ ಖಕ್ಕರ್

ಶವಗಳು ಒಂದೇ ಧ್ವನಿಯಲ್ಲಿ ನುಡಿದವು: “ಎಲ್ಲವೂ ಚೆನ್ನಾಗಿದೆ, ಸಬ್ ಕುಚ್ ಚಂಗಾ-ಚಂಗಾ”

ಪ್ರಭುವೇ, ನಿಮ್ಮ ಆದರ್ಶ ಕ್ಷೇತ್ರದಲ್ಲಿ ಶವವಾಹಿನಿ ಈಗ ಗಂಗಾ.

 

ಪ್ರಭು,  ನಿಮ್ಮ ಶ್ಮಶಾನಗಳು ತುಂಬಾ ಕಡಿಮೆ; ಚಿತೆಗೆ ಮರ ಇನ್ನೂ ಕಡಿಮೆ

ಭಗವ೦ತ, ನಮ್ಮ ಶವ ಹೊರುವವರೂ  ತುಂಬಾ ಕಡಿಮೆ, ಇನ್ನೂ ವಿರಳ ಶೋಕಿಸುವವರು

ಪ್ರಭು, ಪ್ರತಿ ಮನೆಯಲ್ಲೂ ಯಮ ನೃತ್ಯ ಭೀಕರ

ಪ್ರಭುವೇ, ನಿಮ್ಮ ಆದರ್ಶ ಕ್ಷೇತ್ರದಲ್ಲಿ ಶವಯಾನ ಈಗ ಗಂಗಾ

 

ಪ್ರಭು, ನಿಮ್ಮ ಹೊಗೆ ಕಕ್ಕುವ ಚಿಮಣಿಗಳು ಈಗ ಬಿಡುವು ಕೇಳುತ್ತಿವೆ

ಸ್ವಾಮಿ, ನಮ್ಮ ಬಳೆಗಳು ಚೂರುಚೂರಾಗಿವೆ, ನಮ್ಮ ಹೃದಯಗಳು ನುಚ್ಚುನೂರಾಗಿವೆ

ಪಟ್ಟಣಗಳು ​​ಧಗಧಗಿಸುತ್ತಿರುವಾಗ ಪಿಟೀಲು ನುಡಿಸುತ್ತದೆ, “ವಾಹ್, ಬಿಲ್ಲಾ-ರಂಗ”

ಕರ್ತನೇ, ನಿಮ್ಮ ಆದರ್ಶ ಕ್ಷೇತ್ರದಲ್ಲಿ ಶವ ವಾಹಿನಿ ಈಗ ಗಂಗಾ

 

ಭಗವಂತ, ನಿಮ್ಮ ಬಟ್ಟೆಗಳು ದೈವಿಕ, ದೈವಿಕ ನಿಮ್ಮ ಕಾಂತಿ

ಪ್ರಭು, ಪಟ್ಟಣವೆಲ್ಲವು ನಿಮ್ಮನ್ನು ನಿಮ್ಮ ನೈಜ ರೂಪದಲ್ಲಿ ನೋಡುತ್ತದೆ

ಇಲ್ಲಿ ನಿಜವಾದ ಗ೦ಡೊಬ್ಬನು ಇದ್ದರೆ, ಮುಂದೆ ಬಂದು ಹೇಳಲಿ:

“ಚಕ್ರವರ್ತಿಗೆ ಬಟ್ಟೆಗಳಿಲ್ಲ” 

ಸ್ವಾಮಿ, ನಿಮ್ಮ ಆದರ್ಶ ಕ್ಷೇತ್ರದಲ್ಲಿ ಶವ ವಾಹಿನಿ ಈಗ ಗಂಗಾ.

ಕಾಮೆಂಟ್‌ಗಳು

  1. ಕವಿತೆ ವಾಸ್ತವವಾದಿ ನೆಲೆಯಲ್ಲಿ ಇದೆ ಚೆನ್ನಾಗಿ ಅನುವಾದ ಆಗಿದೆ

    ಪ್ರತ್ಯುತ್ತರಅಳಿಸಿ
  2. ಮಾನವೀಯ ಕಾಳಜಿಯೊಂದಿಗೆ ಕೋವಿಡ್ -19 ಅನ್ನು ನಿಭಾಯಿಸುವಲ್ಲಿ ನಮ್ಮ ವೈಫಲ್ಯಕ್ಕೆ ಕನ್ನಡಿ ಹಿಡಿದಿರುವ ಈ ಕವಿತೆಗೆ ಕನ್ನಡದಲ್ಲಿ ವ್ಯಾಪಕವಾದ ಕವರೇಜ್ ನೀಡಿದ್ದಕ್ಕಾಗಿ ಅಭಿನಂದನೆಗಳು. ಒಂದು ರಾಷ್ಟ್ರವಾಗಿ, ನಾವು ಲಕ್ಷಾಂತರ ನಾಗರಿಕರಿಗೆ ಸಾವಿನ ಘನತೆಯನ್ನು ನಿರಾಕರಿಸಿದ್ದೇವೆ. ಅಂಕಿಅಂಶಗಳನ್ನು ಹೆಚ್ಚು ಎಚ್ಚರಿಕೆಯಿಂದ ಸಂಗ್ರಹಿಸದೆ ನಾವು ಲಕ್ಷಾಂತರ ಜನರ ಸಾವನ್ನು ನಿರಾಕರಿಸಿದ್ದೇವೆ. ಪಾರುಲ್ ಖಕ್ಕರ್ ಅವರ ಕವಿತೆಗೆ 'ರಾಮ್ ತೇರಿ ಗಂಗಾ ಮೈಲಿ' ಎಂದು ಹೆಸರಿಡಬಹುದಿತ್ತು. ಒಂದು ರಾಷ್ಟ್ರವಾಗಿ, ಗಂಗಾ ನದಿಯನ್ನು ಕಲುಷಿತಗೊಳಿಸಲು ನಾವು ಒಟ್ಟಾಗಿ ಜವಾಬ್ದಾರರಾಗಿರುತ್ತೇವೆ.
    ಕೃಷ್ಣ ಕುಮಾರ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು