‘ಆದರ್ಶ’ ಬಲಿಪಶುವನ್ನು ತಿರಸ್ಕರಿಸುವುದು

 

ಇತ್ತೀಚಿನ ಸೆಷನ್ಸ್ ನ್ಯಾಯಾಲಯದ ತೀರ್ಪು ದೌರ್ಜನ್ಯಕ್ಕೆ ಗುರಿಯಾದವರ  ಬಗ್ಗೆ ಆಳವಾಗಿ ಹುದುಗಿರುವ ಜಾತಿ-ಪಿತೃಪ್ರಧಾನ ತಿಳುವಳಿಕೆಯನ್ನು ಬಹಿರಂಗಪಡಿಸುತ್ತದೆ.

 

    ದಿಶಾ ವಾಡೆಕರ್ ಬರೆಯುತ್ತಾರೆ:

    ಗೋವಾದ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ, ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ತಮ್ಮ ಕಿರಿಯ ಸಹೋದ್ಯೋಗಿ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ.  ಆರೋಪವನ್ನು ಪುಷ್ಟೀಕರಿಸುವ ಫ಼ಿರ್ಯಾದುದಾರಳನ್ನು ಬೆ೦ಬಲಿಸುವ ಪುರಾವೆಗಳ ಕೊರತೆ,   ಮತ್ತು ಆತ್ಮವಿಶ್ವಾಸವನ್ನು ಪ್ರೇರೇಪಿಸದ ಆಕೆಯ ಹೇಳಿಕೆಯಲ್ಲಿನ ಕಡೆಗಣಿಸಲಾಗದ ವಿರೋಧಾಭಾಸಗಳು ಮತ್ತು ಲೋಪಗಳು, ಇವುಗಳನ್ನು ಉಲ್ಲೇಖಿಸಿ ನ್ಯಾಯಾಲಯವು ತೇಜ್‌ಪಾಲ್‌ನನ್ನು ಖುಲಾಸೆಗೊಳಿಸಿತು. 

    527 ಪುಟಗಳ ತೀರ್ಪು  ದೂರುದಾರಳ ಲೈಂಗಿಕ ಇತಿಹಾಸ ಮತ್ತು ಘಟನೆಯ ನಂತರ ಆಕೆಯ ನಡವಳಿಕೆ, ಮುಖ್ಯವಾಗಿ ಸಾರ್ವಜನಿಕ ದೃಷ್ಟಿಯಲ್ಲಿ ಆಕೆಗೆ ತಕ್ಷಣದ ಆಘಾತದ ಕೊರತೆಯ ಬಗ್ಗೆ,  ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.  ಇದುಸುಪ್ರೀಂ ಕೋರ್ಟ್‌ನ ಮಾರ್ಚ್ 2021 ರ ಅಪರ್ಣ ಭಟ್ ವಿ. ಮಧ್ಯ ಪ್ರದೇಶ್  ತೀರ್ಪಿನ ನೇರ ಉಲ್ಲಂಘನೆಯಾಗಿದೆ. ಇದರಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಬದುಕುಳಿದವರ ಸ೦ಬ೦ಧವಿಲ್ಲದ  ನಡವಳಿಕೆಯ ಬಗ್ಗೆ ನ್ಯಾಯಾಲಯಗಳು ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಅಭಿಪ್ರಾಯಪಟ್ಟಿದೆ. ಭಾರತೀಯ ಸಾಕ್ಷ್ಯಾಧಾರದ ಕಾಯ್ದೆಯ ಸೆಕ್ಷನ್ 8 ಆರೋಪಿ ಅಥವಾ ದೌರ್ಜನ್ಯಾನುಭವಿಯ   ಪ್ರಕರಣಕ್ಕೆ ಸಂಬಂಧಿಸಿದ ಹಿಂದಿನ ಅಥವಾ ನಂತರದ ನಡವಳಿಕೆಯನ್ನು ಪರಿಗಣಿಸಲು ಅನುಮತಿಸುತ್ತದೆಯಾದರೂ, ಇದನ್ನು ಹೆಚ್ಚಾಗಿ ಪೀಡಿತೆಯ ಪ್ರತಿಕ್ರಿಯೆಯನ್ನು     ಲೈಂಗಿಕ ದೌರ್ಜನ್ಯಕ್ಕೊಳಗಾದವರಿಂದ ಪ್ರತೀಕ್ಷಿಸುವ ‘ಪ್ರಮಾಣಕ ನಡವಳಿಕೆ’ಗೆ ಹೋಲಿಸಿ ಪೀಡಿತೆಯ ವಿಶ್ವಾಸಾರ್ಹತೆಯನ್ನು ಅಳತೆ ಮಾಡಲು ನಿರ್ಣಯಿಸಲೂ ಉಪಯೋಗಿಸಲಾಗುತ್ತಿದೆ.

    ವಿಚಾರಣೆಯಲ್ಲಿ ತಪ್ಪನ್ನು ನಿರ್ಧರಿಸುವ ಪ್ರಕ್ರಿಯೆಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಂದ ನಿರೀಕ್ಷಿಸಲ್ಪಡುವ ಈ ಮಾನಬದ್ಧಗೊಳಿಸಲಾದ  “ಪ್ರಮಾಣಕ  ನಡವಳಿಕೆ”, ಅಪರಾಧದ ಮೊದಲು, ಅಪರಾಧ ನಡೆಯುತ್ತಿರುವಾಗ, ಮತ್ತು ಅಪರಾಧದ  ನಂತರದ ಪೀಡಿತೆಯ  ನಡವಳಿಕೆಯ ಮೇಲೆ ಅನಗತ್ಯವಾಗಿ  ಅವಲಂಬಿಸುತ್ತದೆ. ಸಂಭೋಗದ ಸಮಯದಲ್ಲಿ ವಿಸರ್ಜನೆ, ದೈಹಿಕ ಗಾಯಗಳ ಅಥವಾ ದೈಹಿಕ ಹೋರಾಟದ ಚಿಹ್ನೆಗಳ ಅನುಪಸ್ಥಿತಿ ಮೊದಲಾದ ಆಧಾರದ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ಪೀಡಿತೆಯ ಒಪ್ಪಿಗೆಯನ್ನು ಹೇಗೆ ನಿರ್ಣಯಿಸಲಾಗಿದೆ ಎ೦ಬುದನ್ನು ವಿದ್ವಾಂಸರು ಗಮನಿಸಿದ್ದಾರೆ. ಇತ್ತೀಚೆಗೆ, ಕರ್ನಾಟಕ ಹೈಕೋರ್ಟ್‌ನಿಂದ ಅತ್ಯಾಚಾರಕ್ಕೊಳಗಾದ ನಂತರ ನಿದ್ರಿಸುವುದು “ಭಾರತೀಯ ಮಹಿಳೆಗೆ ಯೋಗ್ಯವಾದದ್ದಲ್ಲ,  ಮತ್ತು ನಮ್ಮ ಮಹಿಳೆಯರು ಹಟಸ೦ಭೋಗಗೊಂಡಾಗ ಅವರು ಪ್ರತಿಕ್ರಿಯಿಸುವ ರೀತಿ ಅಲ್ಲ” ಎಂದು ಹೇಳಲಾಗಿತ್ತು. ಈ ಅವಲೋಕನವು ದೌರ್ಜನ್ಯಾನುಭವಿಯಿ೦ದ   ನಿರೀಕ್ಷಿಸಲ್ಪಟ್ಟ “ಪ್ರಮಾಣಕ ನಡವಳಿಕೆ”ಗೆ  ಅಂತಹ ಸಂದರ್ಭಗಳಲ್ಲಿ ಯಾವುದೇ ನೈಸರ್ಗಿಕ ಅಥವಾ ಸಾಮಾನ್ಯ ನಡವಳಿಕೆ ಇದೆ ಎ೦ಬ ಪ್ರಾಯೋಗಿಕ ಸಾಕ್ಷ್ಯಗಳಿಗಿಂತ ಅದು “ಭಾರತೀಯ ಮೌಲ್ಯಗಳನ್ನು” ಆಧರಿಸಿದೆ ಎಂಬ ಸ್ಪಷ್ಟ ಸೂಚನೆಯಾಗಿದೆ.

    ದೌರ್ಜನ್ಯಪೀಡಿತೆ ಸ್ತ್ರೀಯರು ಮತ್ತು ಹಿಂಸಾಚಾರದಿಂದ ಬದುಕುಳಿದವರ ನ್ಯಾಯಾಂಗ ರೂಢಿಗತಗೊಳಿಸುವಿಕೆಯು "ಸ್ವಾಭಿಮಾನಿ ಮಹಿಳೆ", "ಪರಿಶುದ್ಧ ಭಾರತೀಯ ಮಹಿಳೆ", "ಗೌರವಾನ್ವಿತ ಮತ್ತು ಸದ್ಗುಣಶೀಲ ಮಹಿಳೆ" ಯನ್ನು ನಂಬಲರ್ಹ, ವಿಶ್ವಾಸಾರ್ಹ ಬಲಿಪಶುವಾಗಿ ರೂಪಿಸುತ್ತದೆ, ಇದು ನ್ಯಾಯಕ್ಕೆ ಅರ್ಹಳಾದ "ಆದರ್ಶ ದೌರ್ಜನ್ಯಪೀಡಿತೆ “ ಯೊಬ್ಬಳ ನಿರ್ಮಾಣಕ್ಕೆ ಕಾರಣವಾಗಿದೆ. ಅಂತಹ “ಆದರ್ಶ ದೌರ್ಜನ್ಯಪೀಡಿತೆ” ಮಾನದಂಡಗಳನ್ನು ನಿರ್ಮಿಸುವಲ್ಲಿ, “ಭಾರತೀಯ ಮೌಲ್ಯಗಳನ್ನು” ಉಲ್ಲೇಖಿಸುವಾಗ, ನ್ಯಾಯಾಲಯಗಳು ಮೂಲತಃ ಆದರ್ಶ ಸ್ತ್ರೀತ್ವಕ್ಕೆ ಸಂಬಂಧಿಸಿದ ಮನುವಿನ ಬ್ರಾಹ್ಮಣ ಕಾನೂನಿನಿಂದ ಎರವಲು ಪಡೆಯುತ್ತಿವೆ.

    ಕ್ರೋಡೀಕರಿಸಿದ ಬ್ರಾಹ್ಮಣ ಪಿತೃಪ್ರಭುತ್ವದ ವ್ಯವಸ್ಥೆಯು ಮನುಸ್ಮೃತಿಯಲ್ಲಿ "ತನ್ನ ಮನಸ್ಸು, ಮಾತು ಮತ್ತು ದೇಹವನ್ನು ನಿಯಂತ್ರಿಸುವ ಮತ್ತು ಎಂದಿಗೂ ವಿಶ್ವಾಸದ್ರೋಹಿ ಆಗದ ಮಹಿಳೆ ... ಸದ್ಗುಣಶೀಲ ಜನರು ಅವಳನ್ನು ಒಳ್ಳೆಯ ಮಹಿಳೆ ಎಂದು ಕರೆಯುತ್ತಾರೆ" ಎಂದು ಆದೇಶಿಸುತ್ತದೆ. ದ್ವಿಜ-ಸವರ್ಣ (ಮೇಲ್ಜಾತಿ) ಮಹಿಳೆಯರ “ಪರಿಶುದ್ಧತೆ ಮತ್ತು ಸದ್ಗುಣ” ವನ್ನು ಉಳಿಸಿಕೊಳ್ಳುವ ಮೂಲಕ ಬ್ರಾಹ್ಮಣ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವಾಗ ದ್ವಿಜ-ಸವರ್ಣ ಪುರುಷರಿ೦ದ ಬಹುಜನ ಮಹಿಳೆಯರ ಉಲ್ಲಂಘನೆಯನ್ನು ಅನುಮೋದಿಸುತ್ತಾರೆ. ದ್ವಿಜ-ಸವರ್ಣ ಮಹಿಳೆ ಖಾಸಗಿ ವಲಯಕ್ಕೆ ಸೀಮಿತವಾಗಿರುವಲ್ಲಿ ನ್ಯಾಯಾಲಯಗಳ ಎಣಿಕೆ 'ಆದರ್ಶ ದೌರ್ಜನ್ಯಪೀಡಿತೆ' ನಿರ್ಮಾಣಕ್ಕೆ ಅನುಗುಣವಾಗಿರಬಹುದು. ಬದುಕುಳಿದವರ ಸಾರ್ವಜನಿಕ ವ್ಯಕ್ತಿತ್ವವು ಈ ಬ್ರಾಹ್ಮಣ ಕಲ್ಪನೆಗೆ ಹೊಂದಿಕೆಯಾಗದಿದ್ದಾಗ, ಅವಳು ನ್ಯಾಯಾಲಯಗಳಿಗೆ 'ಆದರ್ಶ ದೌರ್ಜನ್ಯಪೀಡಿತೆ'ಯಾಗಿಲ್ಲ; ಪ್ರಸ್ತುತ ಚರ್ಚೆಯಲ್ಲಿರುವ ನ್ಯಾಯಾಲಯದ ತೀರ್ಪಿನಿಂದ ಇದು ಸ್ಪಷ್ಟವಾಗಿದೆ. ಬಹುಜನ (ಜಾತಿ ತುಳಿತಕ್ಕೊಳಗಾದವರು) ಮತ್ತು ಮ೦ಗಳಮುಖಿ ಮಹಿಳೆಯರನ್ನು, ದುರ್ಬಲತೆಗಳ ಕ್ಷೇತ್ರಕ್ಕೆ ಗಡೀಪಾರು ಮಾಡಲಾಗುವುದು ಮತ್ತು ಅವರ ಜಾತಿ ಸ್ಥಾನಮಾನದ ಕಾರಣದಿಂದಾಗಿ ಸದ್ಗುಣ ಮತ್ತು ಧಾರ್ಮಿಕ ಪರಿಶುದ್ಧತೆಯ ಕೊರತೆಯೆಂದು ಪರಿಗಣಿಸಲಾಗುತ್ತದೆ; ಅವರಿಗೆ ನ್ಯಾಯಾಲಯಗಳು ನಂಬಲರ್ಹವೆಂದು ಪರಿಗಣಿಸಲ್ಪಟ್ಟ ಆದರ್ಶ ದೌರ್ಜನ್ಯಪೀಡಿತೆ ರಚನೆಯೊಳಗೆ ಬರುವುದು ವಾಸ್ತವಿಕವಾಗಿ ಅಸಾಧ್ಯ.

    ಇದು ಬಹುಜನ ಮಹಿಳೆಯನ್ನು ಆಧುನಿಕ ಅಪರಾಧ ನ್ಯಾಯ ವ್ಯವಸ್ಥೆಗೆ ಪೂರ್ವನಿಯೋಜಿತವಾಗಿ ವಿದೇಶಿಯಾಗಿ ಮಾಡುತ್ತದೆ. ಉದಾಹರಣೆಗೆ, ತುಕರಾಂ ವಿ ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣದಲ್ಲಿ, ಮಥುರಾ ಎಂಬ 16 ವರ್ಷದ ಆದಿವಾಸಿ ಬಾಲಕಿಯನ್ನು ಪೊಲೀಸರು ಬಂಧನದಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿಸಿದ್ದರು. ಸುಪ್ರೀಂ ಕೋರ್ಟ್ ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿದೆ ಏಕ೦ದರೆ ಆಕೆ ಅಶ್ಲೀಲ ಸ್ವಭಾವದವಳು, ಲೈ೦ಗಿಕತೆಯ  ಅಭ್ಯಾಸ ಹೊಂದಿದ್ದಳು,  ಸಹಾಯಕ್ಕಾಗಿ ಕೂಗಲಿಲ್ಲ,   ಮತ್ತು ಗಾಯಗಳ ಮತ್ತು ಹೋರಾಟದ ಚಿಹ್ನೆಗಳ ಅನುಪಸ್ಥಿತಿ ಕಂಡುಬಂದವು ಎನ್ನುವ ಕಾರಣಗಳಿ೦ದ. ಘಟನೆಯ ಮೊದಲು ಮತ್ತು ನಂತರ ಮಥುರಾ ಅವರ ನಡವಳಿಕೆ ಮತ್ತು ಅವಳ ಜಾತಿ ಸ್ಥಾನವು ನ್ಯಾಯಾಲಯದ ದೃಷ್ಟಿಯಲ್ಲಿ ಆದರ್ಶ ದೌರ್ಜನ್ಯಪೀಡಿತೆ ವರ್ತನೆಗೆ ಸರಿಹೊಂದುವುದಿಲ್ಲ. 

    ಅಂತೆಯೇ, ಭನ್ವಾರಿ ದೇವಿ ಪ್ರಕರಣದಲ್ಲಿ, ಮೇಲ್ಜಾತಿಯ ಪುರುಷರು ಕೆಳಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸೆಷನ್ಸ್ ನ್ಯಾಯಾಲಯ ಪುರುಷರನ್ನು ಖುಲಾಸೆಗೊಳಿಸಿದೆ. ಭನ್ವಾರಿ ದೇವಿ, “ಕೆಳಜಾತಿಯ” ಮಹಿಳೆ “ಆದರ್ಶ ದೌರ್ಜನ್ಯಪೀಡಿತೆ” ಅಲ್ಲ ಮತ್ತು ಮೇಲ್ಜಾತಿಯ ಪುರುಷರು ಸಹ ನ್ಯಾಯಾಲಯದ ದೃಷ್ಟಿಯಲ್ಲಿ “ಆದರ್ಶ ದುಷ್ಕರ್ಮಿಗಳು” ಅಲ್ಲ. 

    ಸ್ಥಳೀಯವಾಗಿ ಪ್ರಬಲವಾದ ಕುಣ್ಬಿ ಜಾತಿಯ  ಪುರುಷರಿಂದ ಇಡೀ ದಲಿತ ಕುಟುಂಬವನ್ನು ಹತ್ಯೆಗೈದ ಖೈರ್ಲಂಜಿ ಜಾತಿ ಹತ್ಯಾಕಾಂಡದಲ್ಲಿ, ತಾಯಿ ಮತ್ತು ಮಗಳ ಶವಗಳು ಬೆತ್ತಲೆಯಾಗಿ ಮತ್ತು ವಿಕೃತ ಸ್ಥಿತಿಯಲ್ಲಿ ಕಂಡುಬಂದವು, ಆದರೆ ಅತ್ಯಾಚಾರ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಸಾಕ್ಷ್ಯಗಳನ್ನು ನಾಶಮಾಡಲು ದೇಹದ ಲೈ೦ಗಿಕ ಭಾಗಗಳನ್ನು ವಿರೂಪಗೊಳಿಸಲಾಗಿತ್ತು.

    ಆಧುನಿಕ ಅಪರಾಧ ನ್ಯಾಯ ವ್ಯವಸ್ಥೆಯಿಂದ ಆದರ್ಶ ದೌರ್ಜನ್ಯಪೀಡಿತೆ ನಿರ್ಮಾಣವು ಮನುವಿನ ಕಾನೂನಿನಂತೆಯೇ ಬದುಕುಳಿದವರಿಗೆ ವ್ಯಕ್ತಿತ್ವ ಮತ್ತು ಮಾನವೀಯತೆಯನ್ನು ನಿರಾಕರಿಸುತ್ತದೆ. ತೇಜ್‌ಪಾಲ್ ತೀರ್ಪಿನ ಬೆಳಕಿನಲ್ಲಿ, ಕೇಳುವದು ಅನಿವಾರ್ಯ: ಬದುಕುಳಿದವರ ವಿಶ್ವಾಸಾರ್ಹತೆಯನ್ನು ನಿರ್ಣಯಿಸಲು ಬ್ರಾಹ್ಮಣ ಪಿತೃಪ್ರಭುತ್ವದ ಚೌಕಟ್ಟಿನಿಂದ ಎರವಲು ಪಡೆಯುತ್ತಿರುವಂತೆ ಕಂಡುಬಂದಾಗ, ನಮ್ಮ ನ್ಯಾಯ ವ್ಯವಸ್ಥೆಯು ಸಂವಿಧಾನವು ಖಾತರಿಪಡಿಸಿದ ವ್ಯಕ್ತಿತ್ವವನ್ನು ಹೇಗೆ ಕಾಪಾಡುತ್ತದೆ? ಹೆಚ್ಚುವರಿಯಾಗಿ, ಅಂತಹ ದೃಷ್ಟಿಕೋನವು ಬಹುಜನ ಮಹಿಳೆಯರಿಗೆ ನ್ಯಾಯದ ಸಾಧ್ಯತೆಗಳನ್ನು ಅಸಾಧ್ಯಗೊಳಿಸುತ್ತದೆಯಲ್ಲವೇ ಎಂದು ಸಹ ಕೇಳಬೇಕು. 

    (ಎಕನಾಮಿಕ್ ಅ೦ಡ್ ಪೊಲಿಟಿಕಲ್ ವೀಕ್ಲಿ, ಜುನ್ ೫, ೨೦೨೧)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು