“ಕೋಪಗೊಂಡ ಯುವತಿ ಮತ್ತು ಮಲಯಾಳಿ (ಪ್ರಗತಿಪರ) ಅಪ್ಪ - ಎರಡು 'ಅಚ್ಚನ್’ ಪ್ರಹಸನಗಳು”
ಸಂಸ್ಕೃತಿ, ಸ್ತ್ರೀವಾದ, ಲಿಂಗಗಳು, ಸರ್ಕಾರ, ಎಡ ವೀಕ್ಷಣೆ
'ಅಚ್ಚನ್’ ಎನ್ನುವದು ಪ್ರೀತಿ, ಗೌರವ, ಕೃತಜ್ಞತೆ, ಮುಂದುವರಿಯುವ ಪೋಷಣೆ-ಸ೦ರಕ್ಷಣೆಗಳ ಪ್ರತೀಕ್ಷೆಯಿ೦ದ ಮಲಯಾಳಿಗಳೆಡೆಲ್ಲಿ ಕುಟುಂಬದ ಪುರುಷ ಮುಖ್ಯಸ್ಥ ‘ತ೦ದೆ’ಯನ್ನು ಸಂಬೋಧಿಸುವ ಪದ.
ಕೇರಳದ ಜನರು ಮತ್ತು ಸಮಾಜವು ತುಲನಾತ್ಮಕವಾಗಿ ಸ್ವಲ್ಪ ಪ್ರಗತಿಪರ ಎ೦ದು ಅನೇಕರು, ಕೇರಳದವರೂ ಸೇರಿದ೦ತೆ, ಪರಿಗಣಿಸುತ್ತಾರೆ. ಎರಡು ಇತ್ತೀಚಿನ ಸ೦ಭವಗಳು ಈ ನ೦ಬಿಕೆಯನ್ನು ಪ್ರಶ್ನಿಸಿವೆ. ಎರಡರಲ್ಲೂ 'ಅಚ್ಚನ್’ ಪಾತ್ರ ಗಮನೀಯ.
ಇದಕ್ಕೆ ಜೆ ದೆವಿಕಾ ‘ಕಾಫ಼ೀಲ್’ ಆನ್ಲೈನ್ ಪ್ರಕಟನೆಯಲ್ಲಿ ಬರೆದ ಲೇಖನವನ್ನು ಅವಲ೦ಬಿಸಿದ್ದೇನೆ. ಶೀರ್ಷಿಕೆಯೂ ಅವರದೇ: ಕೋಪಗೊಂಡ ಯುವತಿ ಮತ್ತು ಮಲಯಾಳಿ (ಪ್ರಗತಿಪರ) ಅಪ್ಪ - ಎರಡು 'ಅಚ್ಚನ್’ ಉಪಕಥೆಗಳು’ (https://kafila.online/2021/10/30/the-malayali-progressive-acchan-2-the-second-season/)
“ಈ ಹುಡುಗಾಟಿಕೆಯ-ಧ್ವನಿಯ ಶೀರ್ಷಿಕೆಗಾಗಿ ನನ್ನನ್ನು ಕ್ಷಮಿಸಬೇಕು. ಆದರೆ ಲಿಂಗ ರಾಜಕೀಯವು ಹೆಚ್ಚುಹೆಚ್ಚಾಗಿ ಭಾವಾತಿರೇಕದ ನಾಟಕಕ್ಕೆ ಇಳಿದಿರುವುದು ಕೇರಳದಲ್ಲಿ ಜೀವಂತ ವಾಸ್ತವವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಸಿಪಿಎಂ ಬೆಂಬಲಿಗರಿದ್ದರೆ, ವಿಶೇಷವಾಗಿ ದೆಹಲಿ-ಗಣ್ಯರ ತಳಿಯಾಗಿದ್ದರೆ, ಈ ಶೀರ್ಷಿಕೆಯನ್ನು ಕೇವಲ ಕಡಿತಕ್ಕೆ ಆಕರ್ಷಿಸುವ ಗಾಳದ ಹುಳ ಎಂದು ಕರೆಯುತ್ತಿದ್ದರೆ, ನಿಮ್ಮ ವಿಚಾರದ ಬಗ್ಗೆ ನಾನು ಎಳ್ಳಷ್ಟು ಕಾಳಜಿ ಮಾಡಲಾರೆ. ನೀವಲ್ಲ ಈ ದುಃಸ್ವಪ್ನವನ್ನು ಜೀವಿಸುವುದು, ನಾವು.”
ಕೇರಳದಲ್ಲಿ ಹೊಸ ಶತಮಾನದ ಸ್ವಾದವನ್ನು ತೋರುವ ಈ ನಾಟಕದ ಮೊದಲ ‘ಉಪಕಥೆ’ 2017 ರಲ್ಲಿ ಆಡಲ್ಪಟ್ಟಿತು. ಯುವ OBC ಮಹಿಳೆ, ತನ್ನ ಹೆತ್ತವರ ಏಕೈಕ ಮಗು, ಇಸ್ಲಾಂಗೆ ಮತಾಂತರಗೊಳ್ಳಲು ಮತ್ತು ಆ ಮತವನ್ನು ಹಂಚಿಕೊಂಡ ಗಂಡನನ್ನು ಹುಡುಕಲು ನಿರ್ಧರಿಸಿದಾಗ. ತನ್ನ ಸುತ್ತಲಿನ ಬಹುತೇಕ ಎಲ್ಲರ ಕೋಪಕ್ಕೆ ತಕ್ಷಣವೇ ಒಳಗಾಗುತ್ತಳೆ - ಆಕೆಯ ಪೋಷಕರು ಮತ್ತು ಕುಟುಂಬ, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು, ಜಾತಿ/ಸಮುದಾಯದ ಚಳುವಳಿಗಳು, ಎಲ್ಲಾ ರೀತಿಯ ಧಾರ್ಮಿಕ ಅಧಿಕಾರಿಗಳು, ನಾಸ್ತಿಕರು, ಬೇಲಿ ದೊ೦ಬರಾಟ ಚತುರ ಜಾತ್ಯತೀತರು, ಪೊಲೀಸರು, ನ್ಯಾಯಾಂಗ, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಎಡ ಬೌದ್ಧಿಕ ನಟನೆಯನ ಪ್ರವೀಣರು, ಮತ್ತು ಆ ಕಾಲದ ಸಿಪಿಐ (ಎಂ) ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಹೊಂದಿದ ಜಿಗಣೆಗಳು. ಭಾರತೀಯ ಪ್ರಜೆಯಾಗಿ ಆಕೆಯ ಹಕ್ಕುಗಳನ್ನು ರಕ್ಷಿಸಬೇಕಾಗಿದ್ದ ಸಂಸ್ಥೆಗಳೇ ಕಣ್ಣು ಮುಚ್ಚಿ ಕುಳಿತವು. ಬದಲಾಗಿ, ತನ್ನ ಮಗಳನ್ನು ಐಸಿಸ್ ಅಪಹರಣ ಮಾಡಿ ಫಿರಂಗಿ-ಮೇವಾಗಿ ಬಳಸುವ ಸಾಧ್ಯತೆಯ ಬಗ್ಗೆ ತಂದೆಯ ಕಾಳಜಿಯ ಗಟ್ಟಿಯಾದ ಪ್ರತಿಭಟನೆಗಾಗಿ ಹೆಚ್ಚು ಸುದ್ದಿಯಲ್ಲಿದ್ದ 'ಅಚ್ಚನ್’, ತಂದೆಯೂ ಹೊ೦ದಿದ್ದ 'ಹಕ್ಕು’ಗಳನ್ನು ಅವಳ ಆಯ್ಕೆಯು ಉಲ್ಲಂಘಿಸಿರಬಹುದು ಎಂಬ ಕಲ್ಪನೆಗೆ ಒಳ್ಳೆ ಬುಧ್ಧಿವ೦ತ ಮನಸ್ಸುಗಳು ಸಹ ಕ್ಷಣಮಾತ್ರವಾದರೂ ತಿರುಗಿದವು. ಹೇಗಾದರೂ, ಸುಪ್ರೀಂ ಕೋರ್ಟ್ ಅಂತಿಮವಾಗಿ ಅವಳ ಹಕ್ಕುಗಳನ್ನು ಮರುಸ್ಥಾಪಿಸುವ ಮೂಲಕ ಮತ್ತು ಅವಳ ಗಂಡನ ಪೂರ್ವನಿದರ್ಶನಗಳ ಬಗ್ಗೆ ಅನೇಕ ತನಿಖೆಗಳನ್ನು ದುರ್ಬಲಗೊಳಿಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿತು. ದಂಪತಿಗಳು ಈಗ ಕಠೋರ ಮಾಧ್ಯಮದ ಬೆಳಕಿನಿಂದ ದೂರವಾಗಿ ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ ಮತ್ತು’ತಪ್ಪು’ ಅನುಭವಿಸಿದ್ದ ಅಪ್ಪ ಈಗ ನಿಜಕ್ಕೂ ಸ್ನೇಹಪರರಾಗಿದ್ದಾರೆ ಮತ್ತು ಮಗಳ ಆಯ್ಕೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ.
(”ಬಹಳ ಸಮಯದ ನಂತರ, ಹಾದಿಯಾಳ ಹೆತ್ತವರಾದ ಅಶೋಕನ್ ಮತ್ತು ಪೊನ್ನಮ್ಮ ತಮ್ಮ ಮಗಳನ್ನು ನೋಡಲು ಬರುತ್ತಾರೆ” - ಕೇರಲ ಕೌಮುದಿ ಪತ್ರಿಕೆ)
ಹಾದಿಯಾ ಅಶೋಕನ್ ಅವರ ಅನುಭವ ಕೊನೆಯಲ್ಲಿ, ಭಾರತದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಹೋರಾಟದ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ. ಆದಾಗ್ಯೂ, ಆಕೆಯ ವಿರುದ್ಧದ ಪ್ರಚಾರವು ಅಲ್ಲಲ್ಲಿ ಇನ್ನೂ ಉಳಿದುಕೊ೦ಡಿದೆ - 'ಲವ್ ಜಿಹಾದ್' ನ೦ತ ಪಿಶಾಚಿಯ, ಮತ್ತು ಹಾದಿಯಾ ಬೆಂಬಲಿಗರೆಲ್ಲರೂ ಮೂಲಭೂತ ಇಸ್ಲಾಮಿಸ್ಟ್‌ಗಳು ಮತ್ತು ಜಿಹಾದಿಗಳು ಎಂಬ ನಿ೦ದನೆಯ ರೂಪಗಳಲ್ಲಿ.
ಇಸ್ಲಾಮೋಫೋಬಿಯಾವನ್ನು ತಮ್ಮ ಆಯ್ಕೆಯ ಅಸ್ತ್ರವನ್ನಾಗಿ ಬಳಸಿಕೊಂಡು ತಂದೆಯ ಅಭದ್ರತೆಯನ್ನು ಉಲ್ಬಣಗೊಳಿಸಲು ಆರಿಸಿಕೊಂಡ ನಮ್ಮ ಸಮಾಜದಲ್ಲಿನ ಅಸಹ್ಯಕರ ಶಕ್ತಿಗಳು ಇಲ್ಲದಿದ್ದರೆ ಇದು ಮೊದಲೇ ಕೊನೆಗೊಳ್ಳುತ್ತಿತ್ತು. ಆದರೆ ಅವರ ಮಧ್ಯಪ್ರವೇಶವಿಲ್ಲದಿದ್ದರೆ, ಇದು ಹೆಚ್ಚಿನ ಮಲಯಾಳಿಗಳನ್ನು, ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ, ಇಷ್ಟು ದೀರ್ಘಕಾಲ ರಂಜಿಸಿದ - ಎಲ್ಲರ ವ್ಯಸನವಾದ - ರೋಮಾಂಚಕ ಭಾವನಾತ್ಮಕ ನಾಟಕ ಆಗುತ್ತಿರಲಿಲ್ಲ.
ಮತ್ತು ಈಗ ಎರಡನೆಯ ಉಪಕಥೆ : ಈ ಬಾರಿ 'ಅಚ್ಚನ್' ರಾಜಧಾನಿ ತಿರುವನಂತಪುರಂನಲ್ಲಿ ಸಿಪಿಎಂನ ಕೆಳ ಹಂತದ ನಾಯಕರಾಗಿದ್ದಾರೆ, ಹೊಸದಾಗಿ ಶ್ರೀಮಂತ ಪ್ರದೇಶದಲ್ಲಿ ಸ್ಥಳೀಯ ಸಮಿತಿಯ ಸದಸ್ಯರಾಗಿದ್ದಾರೆ. ಅವರು ಸ್ವತಃ ಸಿಪಿಎಂನಲ್ಲಿ ನಿಜವಾದ ಶ್ರೇಷ್ಟ ಕುಲೀನ ಮೂಲದವರು, ಹಿಂದಿನ ಕಾಲದ ಪ್ರಬಲ ಸ್ಥಳೀಯ ನಾಯಕನ ಮಗ. ಅವರ ಪತ್ನಿಯೂ ಸಿಪಿಎಂ ಸದಸ್ಯೆ. ಇವರದೂ ಅಂತರ್ ಧಾರ್ಮಿಕ ವಿವಾಹ - ಅನುಪಮ ತಾಯಿಯ ಹೆಸರು ಸ್ಮಿತ ಜೆಮ್ಸ್. ವಿವಾದಾತ್ಮಕ ಪರಿಸ್ಥಿತಿಯಲ್ಲಿರುವ ಮಗಳು ಅನುಪಮಾ ಜಯಚಂದ್ರನ್ ಸ್ವತಃ ಎಸ್‌ಎಫ್‌ಐ ಮತ್ತು ಪ್ರಸ್ತುತ ಡಿವೈಎಫ್‌ಐ ಕಾರ್ಯಕರ್ತೆ. ಅವರ ಮಗುವಿನ ತ೦ದೆ ಅಜಿತ್ ದಲಿತ್ ಕ್ರೈಸ್ತವರ್ಗಕ್ಕೆ ಸೇರಿದವರು ಹಾಗೂ ಪಕ್ಷದ ಕಾರ್ಯಕರ್ತರು.
ಈ ಉಪಕಥೆಯಲ್ಲಿ ಅವಿಧೇಯಿ ಮಗಳು ಎಡಪಂಥೀಯ 'ಸಮುದಾಯ'ವನ್ನು ತೊರೆದಿಲ್ಲ - ಅವಳು ತನ್ನ ವರ್ಗಕ್ಕಿಂತ ಕೆಳಗಿರುವ ಜತೆಗಾರನನ್ನು ಆರಿಸಿಕೊಂಡಳು, 'ಸಂಸ್ಕೃತಿ' ಮತ್ತು ಗೌರವದ ಮಾನದಂಡಗಳನ್ನು ನಿರ್ಲಕ್ಷಿಸಿ, ಅವಳು ವಿವಾಹ ಬಾಹ್ಯ ಸಂಬಂಧದಲ್ಲಿ ಸೇರಿಕೊ೦ಡು ಅದರಲ್ಲಿ ಗರ್ಭಿಣಿಯಾದಳು. ಬೇಸರಗೊಂಡ ಕುಟುಂಬವು ಹುಟ್ಟಿದ ಮಗುವನ್ನು ಅವರಿಗೆ ನೀಡುವಂತೆ ಮನವೊಲಿಸಿದರು. ದೂರಿನ ಪ್ರಕಾರ, ತನ್ನ ಅಕ್ಕನ ಮದುವೆಯ ನಂತರ ಮಗುವನ್ನು ಹಿಂತಿರುಗಿಸುವುದಾಗಿ ಅನುಪಮಗೆ ಭರವಸೆ ನೀಡಲಾಗಿತ್ತು.
ಆದರೆ ಮಕ್ಕಳ ಕಲ್ಯಾಣ ಅಡಳಿತ ಸಾಧನಗಳನ್ನು ಕುಶಲತೆಯಿಂದ ಉಪಯೋಗಿಸಿ ಅನುಪಮಳ ಪೋಷಕರು ತಮ್ಮ ಮಗಳ ಗಂಡು ಮಗುವನ್ನು ‘ಅನಾಥ’ ಎ೦ದು ತೋರಿಸಿ ದತ್ತು ಕೊಡಲು ಕಾರಣವಾದರು. ನೊಂದ ತ೦ದೆ-ತಾಯಿ ತಮ್ಮ ಕಳುವಾದ ಮಗುವನ್ನು ಹುಡುಕುತ್ತಾ ಹಲವೆಡೆ ಓಡಾಡಿದರು - ಅವರು ಪೋಲಿಸ್ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳನ್ನು ಮಾತ್ರವಲ್ಲದೆ ಸಿಪಿಎಂನ ಉನ್ನತ ಮಟ್ಟದ ನಾಯಕರ ಸಹಾಯವನ್ನು ಕೋರಿದರು. ಅವರಲ್ಲಿ ಕೆಲವರು ಪರಿಹಾರದ ಭರವಸೆ ನೀಡಿದರು, ಆದರೆ ಏನೂ ವಾಸ್ತವಿಕ ಸಹಾಯ ಮಾಡಲಿಲ್ಲ. ಅಂತಿಮವಾಗಿ, ಅನುಪಮ ಮತ್ತು ಅವರ ಸಂಗಾತಿ (ಅವರ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದರು) ಈ ವಿಷಯದ ಬಗ್ಗೆ ಬಹಿರ೦ಗವಾಗಿ ಹೇಳಿಕೆ ನೀಡಿ ಚಳುವಳಿ ಮಾಡಿದರು. ವಿಷಯವು ಕುಟು೦ಬದ ಹೊರಗೆ ಬ೦ದಿತು. ತಾನು ಮಾಡಿದ್ದನ್ನು ಅನುಪಮ ತ೦ದೆ ಸಮರ್ಥಿಸಿಕೊ೦ಡರು.
.
ಈ ಪ್ರಕರಣ ಕೊನೆಯಿಲ್ಲದೆ ಮು೦ದುವರಿಯುತ್ತಿದೆ. ಅನುಪಮಳ ಮಗುವನ್ನು ಆ೦ಧ್ರ ಪ್ರದೇಶದಲ್ಲಿ ದತ್ತು ಪಡೆದ ಶಾಲಾ ಶಿಕ್ಷಕ ದ೦ಪತಿಯವರ ವಶದಲ್ಲಿ ಕ೦ಡದ್ದಾಗಿದೆ. ದತ್ತು ಪ್ರಕ್ರಿಯೆಯ ಪೂರ್ತಿಗೆ ಉಚ್ಚ ನ್ಯಾಯಾಲಯವು ತಡೆನೀಡಿದೆ. ಅನುಪಮ ಮತ್ತು ಅವರ ಜತೆಗಾರ ಸಾರ್ವಜನಿಕವಾಗಿ ನ್ಯಾಯ ಕೇಳುತ್ತಿದ್ದಾರೆ ಅಲ್ಲದೆ ತನ್ನ ತ೦ದೆ-ತಾಯಿಯರ ವಿರುಧ್ಧ ನ್ಯಾಯಾಲಯವನ್ನೂ ಮೊರೆ ಹೋಗಿದ್ದಾರೆ.
ಮಾರ್ಕ್ಸಿಸ್ಟ್ ಪಕ್ಷವು ಅನುಪಮಳ ತ೦ದೆ ಜಯಚಂದ್ರನ ವಿರುಧ್ಧ ಶಿಸ್ತಿನ ಕ್ರಮ ತೆಗೆದುಕೊ೦ಡಿದೆ.
ವಿಷಾದ ಪೂರ್ವಕವಾಗಿ ಅನ್ನುತ್ತಾರೆ ಅಂಕಣಕರ್ತೆ ದೇವಿಕ: “ಇಸ್ಲಾಮೋಫೋಬಿಯಾದ ಆಳವು ಹಾದಿಯಾ ಅವರ ಹೋರಾಟದಲ್ಲಿ ಬಹಿರಂಗವಾಗಿದ್ದರೆ, ಅನುಪಮಾ ಅವರ ಹೋರಾಟವು ಸಿಪಿಎಂ ಬೆಂಬಲಿಗರಲ್ಲಿ ಅವರ ಜಾತಿವಾದ ಮತ್ತು ಲೈಂಗಿಕ ಸಂಪ್ರದಾಯವಾದದ ಬೊಕ್ಕೆಗಳನ್ನು ತೆರೆದುಕೊಂಡಿತು...ಸಿಪಿಎಂನ ಆಡಳಿತದಲ್ಲಿ ದಲಿತ ಭಿನ್ನಮತೀಯರ ಮೇಲಿನ ದಾಳಿಗಳು ಅಪರೂಪವಾಗಿರಲಿಲ್ಲ, ಆದರೆ ಶಿಶುವಿನ ಹಕ್ಕುಗಳ ಆಘಾತಕಾರಿ ಉಲ್ಲಂಘನೆಗೆ ಕಾರಣವಾಗುವ ಜಾತಿ/ವರ್ಗದೊಳಗೆ ಮಾತ್ರ ಮದುವೆಯಾಗುವ ಗೀಳು ಹಿಂದಿನ ಘಟನೆಗಳಿಗಿಂತ ಹೆಚ್ಚು ಕೊಳೆತವನ್ನು ಬಹಿರಂಗಪಡಿಸಿತು. ಸಿಪಿಎಂನಲ್ಲಿ ಸಾಮಾನ್ಯವಾಗಿ ಕಂಡುಬರುವ 'ಜಾತ್ಯತೀತ ಜಾತೀಯತೆ' ಸಂಪೂರ್ಣ ಪ್ರದರ್ಶನಗೊಂಡಿತು.”
ಇದನ್ನೂ ಓದಿ:
A Mother and the Metaphor......
https://english.mathrubhumi.com/news/columns/view-from-my-window/a-mother-and-the-metaphor-m-g-radhakrishnan-column-1.6133694
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ