ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ 

- ೧೦ ಪುಸ್ತಕಗಳ ಪರಿಚಯ


ಪ್ರತಿ ವರ್ಷ, 2 ದಶಲಕ್ಷಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೆ ಕಳೆದ 500 ವರ್ಷಗಳಲ್ಲಿ  ಹೊರಬಂದಿರುವ ಶತಕೋಟಿ ಶೀರ್ಷಿಕೆಗಳಲ್ಲಿ, ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು  ಮಾತ್ರ ನಿಜವಾಗಿಯೂ ಮಾನವಕುಲದ ಮಾರ್ಗವನ್ನು ಬದಲಾಯಿಸಿವೆ . ಈ ಹೊತ್ತಿಗೆಗಳು  ಕೇವಲ ಜನಪ್ರಿಯವಾಗಿರಲಿಲ್ಲ; ಈ ಕೃತಿಗಳು  ಅಧಿಕಾರಕ್ಕೆ ಸವಾಲು ಹಾಕಿದವು , ಸಮಾಜಗಳನ್ನು ಮರುರೂಪಿಸಿದವು,  ದೈವ ವಿಶ್ವಾಸ ಪಧ್ಧತಿ ಗಳನ್ನು ಪ್ರಶ್ನಿಸಿದವು, ರಾಜಕೀಯವನ್ನು ಪುನರ್ ವ್ಯಾಖ್ಯಾನಿಸಿದಲ್ಲದೇ  ಮನುಷ್ಯರು ಯೋಚಿಸುವ ರೀತಿಯನ್ನು ಪರಿವರ್ತಿಸಿದವು.  ನನ್ನ ಈ ವೈಯಕ್ತಿಕ   ಅತ್ಯಂತ ಪ್ರಭಾವಶಾಲಿ   ಪುಸ್ತಕಗಳು ಐತಿಹಾಸಿಕ  ಬದಲಾವಣೆಗಳ  ಕಾಲಗಳನ್ನು ಬದುಕುಳಿದರಲ್ಲದೆ  ತಾವೇ ಕಾಲದ ಚಲನೆಯ ವಿನ್ಯಾಸವನ್ನು   ವ್ಯಾಖ್ಯಾನಿಸಿವೆ .



  1. ಸಮಾಜದ ಬಗ್ಗೆ 2400 ವರ್ಷಗಳ ಹಳೆಯ ಕೈಪಿಡಿ 

- ದಿ ರಿಪಬ್ಲಿಕ್


ಪ್ರಥಮ ಸ್ಥಾನದಲ್ಲಿದೆ  ಸಾಮಾನ್ಯ ಯುಗಕ್ಕೆ  375 ವರ್ಷ  ಮೊದಲು (ಇದನ್ನು ಹಿಂದೆ ‘ಕ್ರಿಸ್ತು ಪೂರ್ವ’ ಎಂದು ಹೇಳಲಾಗುತ್ತಿತ್ತು ) ಪ್ಲೇಟೋ  ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಪೊಲಿಟಿಯ  (POLITEIEA  - ಇಂಗ್ಲಿಷ್ ಅನುವಾದದಲ್ಲಿ ‘ದಿ  ರಿಪಬ್ಲಿಕ್’ -  ಗಣರಾಜ್ಯ ) ಎನ್ನುವ ಶೀರ್ಷಕದಲ್ಲಿ ಬರೆದ   ಕೃತಿ . 


ಹೀಗೆ  ನಮ್ಮ ಪ್ರಯಾಣವು 2,400 ಕ್ಕೂ ಹೆಚ್ಚು ವರ್ಷಗಳ ಹಿಂದೆ ಪಾಶ್ಚಾತ್ಯ ತತ್ವಶಾಸ್ತ್ರದ ಪಿತಾಮಹನೊಂದಿಗೆ ಪ್ರಾರಂಭವಾಗುತ್ತಿದೆ.  ಪ್ಲೇಟೋ ರಚಿಸಿದ  ಮೇರುಕೃತಿ, ದಿ ರಿಪಬ್ಲಿಕ್  ಕೇವಲ ಒಂದು ಪುಸ್ತಕವಲ್ಲ. ಅದುರಾಜಕೀಯ ಸಿದ್ಧಾಂತ, ನೀತಿಶಾಸ್ತ್ರ ಮತ್ತು ಮನೋವಿಜ್ಞಾನಗಳ ಅಡಿಪಾಯ. ತನ್ನ ಗುರು ಸಾಕ್ರಟೀಸಿನ ಸಂವಾದಗಳ ಸರಣಿಯ ಶೈಲಿಯಲ್ಲಿ ಬರೆಯಲಾಗಿರುವ ಈ ಪುಸ್ತಕ  ಒಂದು ಪ್ರಶ್ನೆಯಮೇಲೆ ಕೇಂದ್ರೀಕರಿಸುತ್ತದೆ:  

 ನ್ಯಾಯ ಎಂದರೇನು? ಮತ್ತುಹೆಚ್ಚು ಮುಖ್ಯವಾಗಿ, ಒಬ್ಬ ನ್ಯಾಯಯುತ ವ್ಯಕ್ತಿ

ಅನ್ಯಾಯದವರಿಗಿಂತ ಹೆಚ್ಚು ಸಂತೋಷದಲ್ಲಿರುವನೇ ? 

 ಪ್ಲೇಟೋ ತನ್ನ ಗುರು ಸಾಕ್ರಟೀಸಿನ  ಧ್ವನಿಯ ಮೂಲಕ ಸುಲಭವಾದ ಉತ್ತರಗಳನ್ನು ನೀಡುವುದಿಲ್ಲ. ಅವನು ಕಾಲಿಪೋಲಿಸ್ ಹೆಸರಿನ  ಕಾಲ್ಪನಿಕ ಆದರ್ಶ ನಗರವನ್ನು ನಿರ್ಮಿಸಿ ಅದರಲ್ಲಿ ಪ್ರತಿಯೊಂದು ಕೋನದಿಂದಲೂ ನ್ಯಾಯವನ್ನು ಅನ್ವೇಷಿಸುತ್ತಾನೆ : 

ಆತ್ಮದ ರಚನೆ, 

ಸತ್ಯ ಮತ್ತು ಜ್ಞಾನದ ಪಾತ್ರ,

ಶಿಕ್ಷಣ, 

ಪ್ರಜಾಪ್ರಭುತ್ವದ ಅಪಾಯಗಳು, ಮತ್ತು 

ರೂಪಗಳ ಸಿದ್ಧಾಂತವೂ ಸಹ - ಭೌತಿಕ  ಪ್ರಪಂಚವು ಕೇವಲ ಪರಿಪೂರ್ಣ ಶಾಶ್ವತ ಸತ್ಯಗಳ ನೆರಳು ಎಂದು ವಾದಿಸುವ  ಪ್ಲೇಟೋ  ವಿವರಿಸುವ ಬೆರಗುಗೊಳಿಸುವ ಕಲ್ಪನೆ  ಈ ಪುಸ್ತಕವು ಕೇವಲ ಪ್ರಶ್ನೆಗಳನ್ನು ಎತ್ತುವುದಲ್ಲ.  ಅದು ನಿಮ್ಮನ್ನು ನೀವು ಎಂದಾದರೂ ನಂಬಿದ್ದೆಲ್ಲವನ್ನೂ ಪ್ರಶ್ನಿಸುವಂತೆ ಒತ್ತಾಯಿಸುತ್ತದೆ

ನೀವು ದಿ ರಿಪಬ್ಲಿಕ್ ಓದಿಲ್ಲವಾದಲ್ಲಿ ತತ್ವಜ್ಞಾನವನ್ನೇ ತಿಳಿದುಕೊಂಡಿಲ್ಲ.  ಅದು ಪ್ರಾಚೀನ ಇತಿಹಾಸವಲ್ಲ. ಅದು ಜೀವಂತವಾಗಿದೆ ಮತ್ತು  ಮುಂದಿನ 2,400 ವರ್ಷಗಳವರೆಗೆ ಹಾಗೆಯೇ ಉಳಿಯುತ್ತದೆ.  


"ಪುರುಷರಂತೆಯೇ ಮಹಿಳೆಯರು ಅದೇ ಕೆಲಸವನ್ನು ಮಾಡಬೇಕೆಂದು ನಿರೀಕ್ಷಿಸಿದರೆ, ನಾವು ಅವರಿಗೆ ಅದೇ ವಿಷಯಗಳನ್ನು ಕಲಿಸಬೇಕು.” - ಪ್ಲೇಟೋ 

------------------------------------------------------------


ಎರಡನೆಯದು,

ಮರುರೂಪಿಸಲಾದ ಮೂಲ ಕಥೆ


 ಚಾರ್ಲ್ಸ್ ಡಾರ್ವಿನ್ ೧೮೫೯ರಲ್ಲಿ ಬರೆದ ಗ್ರಂಥ,   ಜೀವಿ-ಜಾತಿಗಳ ಮೂಲದ ಕುರಿತು (On the Origin of Species by Charles Darwin)


 ಪ್ಲೇಟೋ ನಮಗೆ ಮನಸ್ಸನ್ನು ನೀಡಿದ್ದರೆ, ಡಾರ್ವಿನ್ ನಮಗೆ ಜೀವನದ ಕಾರ್ಯವಿಧಾನವನ್ನು ನೀಡಿದರು.ಈ ಪುಸ್ತಕ ಎಷ್ಟು  ಮೂಲಭೂತವಾಗಿತ್ತೆಂದರೆ ಅದು 

ಶತಮಾನಗಳ  ಧಾರ್ಮಿಕ ಸಿದ್ಧಾಂತಗಳನ್ನು  ಛಿದ್ರಗೊಳಿಸಿತು ಮತ್ತು ಜೀವಶಾಸ್ತ್ರವನ್ನು ಶಾಶ್ವತವಾಗಿ ಮರು ವ್ಯಾಖ್ಯಾನಿಸಿದರು.


 ಅವರಕೇಂದ್ರ ಕಲ್ಪನೆ ನೈಸರ್ಗಿಕ ಆಯ್ಕೆಯ ಮೂಲಕ ವಿಕಸನ ಎನ್ನುವುದಾಗಿತ್ತು.

 ಡಾರ್ವಿನ್ ಕೇವಲ ಜೀವ-ಜಾತಿಗಳ ಬದಲಾವಣೆಯ ಸಿದ್ಧಾಂಥ ವನ್ನು ಪ್ರತಿಪಾದಿಸಲಿಲ್ಲ   ಅದನ್ನು ಸಾಬೀತುಪಡಿಸಲು ಫಿಂಚ್‌ ಪಕ್ಷಿಗಳು, ಏಡಿಗಳಿಗೆ ಸೇರಿದ   ಸಮುದ್ರ ಜೀವಿಗಳು, ಪಳೆಯುಳಿಕೆಗಳು, ಮತ್ತು ಸಂತಾನೋತ್ಪತ್ತಿ ಮಾದರಿಗಳು ಇವುಗಳ ಸೂಕ್ಷ್ಮ ಅವಲೋಕನಗಳ ಮೂಲಕ ಪ್ರಯತ್ನಿಸಿದರು. 


ಜೀವನ ಸ್ಥಿರ ಅಲ್ಲ ಎಂದು ಅವರು ತೋರಿಸಿದರು.  ಜೀವನವು ದ್ರವ ಸ್ವಭಾವದ್ದಾಗಿದೆ.  ಜೀವನವು ಹೊಂದಿಕೊಳ್ಳುತ್ತದೆ ಮತ್ತು ಬದುಕುಳಿಯುತ್ತದೆ.  ಯಾರು ಅತಿ-ಯೋಗ್ಯರೋ ಅವರ ಬದುಕುಳಿಯುವಿಕೆ ಸಾಧ್ಯವಾಗುತ್ತದೆ ಎನ್ನುವ  ನುಡಿಗಟ್ಟು ಆಧುನಿಕ ವಿಜ್ಞಾನವು ಸಾಧಕರನ್ನು ಒಟ್ಟುಗೂಡಿಸುವ ಕರೆ ಆಯಿತು.  


ಆದರೆ ಈ ಪುಸ್ತಕವನ್ನು  ಅಪಾಯಕಾರಿಯಾಗಿಸಿದ್ದು ಇದು :  ಈ ಪುಸ್ತಕವು  

ದೇವರು ಎಲ್ಲ ಜೀವನವನ್ನು ಅದರ ಪರಿಪೂರ್ಣ , ಬದಲಾಗದ ರೂಪದಲ್ಲಿ  ಸೃಷ್ಟಿಸಿದನೆಂಬ ಕಲ್ಪನೆಯನ್ನು ನೇರವಾಗಿ ಪ್ರಶ್ನಿಸಿತು. 


ಧಾರ್ಮಿಕ ಅಧಿಕಾರಿಗಳು ಕೋಪಗೊಂಡರು.ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದರು. ಸಾರ್ವಜನಿಕರು ದಿಗ್ಭ್ರಮೆಗೊಂಡರು. ಆದರೂ ಕೆಲವೇ ದಶಕಗಳ ಒಳಗೆ, ಡಾರ್ವಿನ್ನ ಸಿದ್ಧಾಂತವು ಜೀವಶಾಸ್ತ್ರ, ತಳಿಶಾಸ್ತ್ರ, ಔಷಧ ಶಾಸ್ತ್ರ ಮತ್ತು

ಮನೋವಿಜ್ಞಾನ ಇವೆಲ್ಲವುಗಳ ಮೂಲಾಧಾರವಾಯಿತು.  ಇಂದು, ಪ್ರತಿಯೊಂದು ಲಸಿಕೆ, ಪ್ರತಿ ಜೀನ್ ಚಿಕಿತ್ಸೆ,  ಮಾನವ ನಡವಳಿಕೆಯ ವಿಕಸನ ಆಧಾರಿತ ಪ್ರತಿಯೊಂದು ವಿವರಣೆ, ಅದೆಲ್ಲವೂ ಪತ್ತೆ ಹಚ್ಚಲು ಈ ಪುಸ್ತಕಕ್ಕೆ ಹಿಂತಿರುಗಿ ನೋಡುತ್ತದೆ.  ಅದು 

ವಿಜ್ಞಾನವನ್ನು ಬದಲಾಯಿಸಿದ್ದು ಮಾತ್ರವಲ್ಲ. . ಅದು ನಾವು ಹೇಗೆ ವಿಶ್ವದಲ್ಲಿ ನಮ್ಮ ಸ್ಥಾನವನ್ನು ನೋಡುತ್ತೇವೆ ಎನ್ನುವದನ್ನೂ ಬದಲಾಯಿಸಿತು. 


“ಈ ಸಂಪುಟದಲ್ಲಿ ನೀಡಲಾದ ಅಭಿಪ್ರಾಯಗಳು ಯಾರದಾದರೂ  ಧಾರ್ಮಿಕ ದೃಷ್ಟಿಕೋನಗಳನ್ನು ಆಘಾತಗೊಳಿಸಬೇಕು ಎಂಬುದಕ್ಕೆ ನನಗೆ ಯಾವುದೇ ಒಳ್ಳೆಯ ಕಾರಣ ಕಾಣುತ್ತಿಲ್ಲ.” - ಚಾರ್ಲ್ಸ್ ಡಾರ್ವಿನ್ .


--------------------------------------------------


ಕ್ರಾಂತಿಯ ಕಿಡಿಯನ್ನು ಹಚ್ಚಿಸು


ನಮ್ಮ ಮೂರನೇ ಪುಸ್ತಕ ಕಮ್ಯುನಿಸ್ಟ್ ಪ್ರಣಾಳಿಕೆ -( The Communist Manifesto by Karl Marx and Friedrich Engels) ೧೮೪೮ರಲ್ಲಿ ಪ್ರಕಟವಾದ ಈ ಪು ಸ್ತಕದ ಲೇಖಕರು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗಲ್ಸ್,. 

ಡಾರ್ವಿನ್ ಜೀವಶಾಸ್ತ್ರವನ್ನು ಬದಲಾಯಿಸಿದರೆ, ಮಾರ್ಕ್ಸ್‌ಬದಲಾಯಿಸಿದರು  ಇತಿಹಾಸವನ್ನು.ಕೈಗಾರಿಕಾ ಕ್ರಾಂತಿಯ  ಮಧ್ಯದಲ್ಲಿ ಪ್ರಕಟಿಸಿದ ಈ ಪುಸ್ತಕ 

ಕಾರ್ಮಿಕರನ್ನು  ಶೋಷಿಸಿ, ,  ಅವರಿಗೆ ಕಡಿಮೆ ವೇತನ ನೀಡಿ ಮತ್ತುಅವರು ಏನೋ ಕಣ್ಣಿಗೆ ಕಾಣದವರಂತೆ ನಡೆಸಿಕೂಳ್ಳುತ್ತಿದ್ದ ಆ ಸಮಯದಲ್ಲಿ ಕಮ್ಯುನಿಸ್ಟ್ ಪ್ರಣಾಳಿಕೆ ಹೋರಾಟದ ಒಂದು ಕಹಳೆಯಾಗಿತ್ತು. 


ಪುಸ್ತಕದಾದ್ಯಂತ ಮತ್ತು ವಿಶೇಷವಾಗಿ ಅದರ  ಅತ್ಯಂತ ಪ್ರಸಿದ್ಧ ಸಾಲಿನಲ್ಲಿ -   “ವಿಶ್ವದ ಕಾರ್ಮಿಕರೇ, ಒಗ್ಗಟ್ಟಾಗಿರಿ . ಕಳೆದುಕೊಳ್ಳಲು ನಿಮ್ಮಲ್ಲಿರುವುದು  ನಿಮ್ಮ ಸರಪಳಿಗಳು  ಮಾತ್ರ, ಬೇರೇನಿಲ್ಲ “-   ಮಾರ್ಕ್ಸ್ಬಂಡವಾಳಶಾಹಿಯನ್ನು ಟೀಕಿಸುವುದಷ್ಟೇ ಅಲ್ಲ. ಅದರ ಮೂಲ ಸತ್ಯವನ್ನು ಬಹಿರಂಗಪಡಿಸಿದರು.  .ಈ ವರೆಗೆ ಅಸ್ತಿತ್ವದಲ್ಲಿದ್ದಿರುವ ಎಲ್ಲ ಸಮಾಜದ ಇತಿಹಾಸವು  ಕಾರ್ಖಾನೆಗಳು   ಜಮೀನು, ಮತ್ತು ಉತ್ಪಾದನೆಯ ಸಾಮಗ್ರಿಗಳ  ಮಾಲೀಕರಾದವರು ಮತ್ತು ಕೇವಲ ಬದುಕುಳುವಿಕೆಗಾಗಿ ತಮ್ಮ  ಶ್ರಮವನ್ನು   ಬಿಕರಿ ಮಾಡುವ ಕಾರ್ಮಿಕರ ನಡುವಿನ ವರ್ಗ ಕಲಹದ ಇತಿಹಾಸವಾಗಿದೆ. ಬಂಡವಾಳಶಾಹಿ ತನ್ನ ಸ್ವಭಾವದಿಂದಲೇ ತನ್ನದೇ ಆದ ಸಮಾಧಿಯನ್ನು ಅಗೆಯುತ್ತದೆ  ಎಂದು ಮಾರ್ಕ್ಸ್  ಮುನ್ಸೂಚನೆ ನೀಡಿದರು.  ಶೋಷಿತರು ಮೇಲೆದ್ದು, ವ್ಯವಸ್ಥೆ ಕುಸಿಯುತ್ತದೆ ಮತ್ತು ಅದರ ಚಿತಾ ಭಸ್ಮದಿಂದ ಒಂದು  ಹೊಸ ಜಗತ್ತು ಹೊರಹೊಮ್ಮುತ್ತದೆ. ಅಲ್ಲಿ ಲಾಭವಲ್ಲ, ಮಾನವ ಸಂಭಾವ್ಯತೆ ಅಥವಾ ಸಾಮರ್ಥ್ಯವು ಮೌಲ್ಯದ ಅಳತೆಯಾಗಿರುತ್ತದೆ.


 ಮಾರ್ಕ್ಸ್ ಅವರ  ಮಾತುಗಳು  ಪ್ರಪಂಚದಾದ್ಯಂತದ ರಷ್ಯಾ ಚೀನಾ ಮತ್ತು ಯುರೋಪಿನಲ್ಲಿ  ಕ್ರಾಂತಿಗಳನ್ನು ಉತ್ತೇಜಿಸಿದವು. ಧ್ವನಿ  ಇಲ್ಲದವರಿಗೆ ಅವರು ಧ್ವನಿ ನೀಡಿದರು  ಹೌದು, ವಿಮರ್ಶಕರು ಮಾರ್ಕ್ಸ್  ಬಂಡವಾಳಶಾಹಿಗಳ ಹೊಂದಿಕೊಳ್ಳುವಿಕೆಯ ಶಕ್ತಿಯನ್ನು ಸಾಕಷ್ಟು ಅರಿತುಕೊಂಡಿದ್ದಿಲ್ಲ ಎನ್ನುವರು.  ಇತರರು ಅವರ   ದೃಷ್ಟಿಕೋನವನ್ನು  ಸರ್ವಾಧಿಕಾರಿತ್ವ ಎನ್ನುವರು. 

 ಆದರೆ ನೀವು ಒಪ್ಪುತ್ತೀರೋ ಇಲ್ಲವೋ  ಈ ಪುಸ್ತಕವು ಜಗತ್ತನ್ನು  ಮತ್ತು ಇತಿಹಾಸದ ಮಾರ್ಗವನ್ನು ಬದಲಾಯಿಸಿತು.  ಅದು ನಿಜಸ್ಥಿತಿಯನ್ನು ಕೇವಲ  ವಿವರಿಸುವುದಲ್ಲ, ,  ಅದು ಅದನ್ನು ಪುನಃ ರಚಿಸಲು ಪ್ರಯತ್ನಿಸಿತು.

 ಬಹುಶಃ ಅದರ ಅತ್ಯಂತ ಸುಂದರವಾದ ವಾಕ್ಯಗಳು : 

“ಪ್ರತಿಯೊಬ್ಬರ ಮುಕ್ತ ಅಭಿವೃದ್ಧಿ ಎಲ್ಲರ  ಮುಕ್ತ ಅಭಿವೃದ್ಧಿ ಸಾಧಿಸಲು  ಪೂರ್ವಭಾವಿ ಷರತ್ತು”.  

ಮತ್ತು 

“ಪ್ರತಿಯೊಬ್ಬರಿಂದ ತಮ್ಮ   ಸಾಮರ್ಥ್ಯದ ಮೇರೆಗೆ, ಹಾಗೆಯೇ  ಪ್ರತಿಯೊಬ್ಬರಿಗೂ ಅವರ  ಅಗತ್ಯಗಳಿಗೆ ಅನುಗುಣವಾಗಿ.


"ಘನವೆನಿಸಿದ್ದೆಲ್ಲವೂ ಗಾಳಿಯಲ್ಲಿ ಕರಗುತ್ತದೆ, ಪವಿತ್ರವಾದದ್ದೆಲ್ಲವೂ ಅಪವಿತ್ರಗೊಳ್ಳುತ್ತದೆ, ಮತ್ತು ಮನುಷ್ಯನು ಕೊನೆಗೂ ಸಮಚಿತ್ತದ ಇಂದ್ರಿಯಗಳೊಂದಿಗೆ, ಅವನ ಜೀವನದ ನಿಜವಾದ ಸ್ಥಿತಿಗತಿಗಳೊಂದಿಗೆ ಮತ್ತು ಅವನ ರೀತಿಯೊಂದಿಗಿನ ಸಂಬಂಧಗಳೊಂದಿಗೆ ಎದುರಿಸಲು ಒತ್ತಾಯಿಸಲ್ಪಡುತ್ತಾನೆ."- ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ 


------------------------------------------------------


ಛಿದ್ರಗೊಂಡ ಶತಮಾನಗಳ ಊಹೆಗಳು


ಸಿಮೊನ್ ಡ ಬೊವ್ವ ಅವರಿಂದ  “ ದ್ವಿತೀಯ ಲಿಂಗ”. ( The Second Sex by Simone de Beauvoir)


೧೯೪೯ರಲ್ಲಿ ಪ್ರಕಟಿಸಿದ  ಇದು ಕೇವಲ ಒಂದು ಸ್ತ್ರೀವಾದಿ ಪುಸ್ತಕವಲ್ಲ . ಇದು 

ಆಧುನಿಕ ಸ್ತ್ರೀವಾದದ ಜನನದ ಪ್ರಮಾಣಪತ್ರ. “ಜನಿಸುವಾಗ ಯಾರೂ  ಸ್ತ್ರೀ ಆಗಿರುವುದಿಲ್ಲ, ಆದರೆ ಮುಂದೆ ಬಂದು ಸ್ತ್ರೀಯಾಗುತ್ತಾಳೆ.” ಆ ಒಂದು ವಾಕ್ಯವು 

ಶತಮಾನಗಳ ಕಾಲದ ಕಲ್ಪನೆಯನ್ನು  ಛಿದ್ರಗೊಳಿಸಿತು. 

 ಈ ಲೇಖಕಿಯ ವಾದವೆಂದರೆ  "ಸ್ತ್ರೀತ್ವ ಎಂದರೆ ಜೈವಿಕವಲ್ಲ, ಅದನ್ನು  ನಿರ್ಮಿಸ ಲಾಗುತ್ತದೆ. ಸಮಾಜವು ಮಹಿಳೆಯರನ್ನು ಕಂಡುಹಿಡಿಯುವುದಿಲ್ಲ, ಅದು ಮಹಿಳೆಯರನ್ನು ಉತ್ಪಾದಿಸುತ್ತದೆ.”

 ಬಾಲ್ಯದಿಂದಲೂ ಹುಡುಗಿಯರಿಗೆ ನೀಡಲಾಗುತ್ತದೆ ಗೊಂಬೆಗಳು ಮತ್ತು ಹುಡುಗರಿಗೆ  ಉಪಕರಣಗಳು. ಹುಡುಗಿಯರಿಗೆ ಕಲಿಸಲಾಗುತ್ತದೆ ಸೌಮ್ಯ, ವಿಧೇಯ ಮತ್ತು ಅವಲಂಬಿತರಾಗಿರಲು. ಹುಡುಗರಿಗೆ ಬಲಶಾಲಿಗಳು, ಸ್ವತಂತ್ರರು ಮತ್ತು ಮುಂದಾಳುಗಳು  ಆಗಲು ಕಲಿಸಲಾಗುತ್ತದೆ.  ಕಾಲಾನಂತರದಲ್ಲಿ,

ಈ ಸಣ್ಣ ಸಂದೇಶಗಳು ಆಂತರಿಕವಾಗುತ್ತವೆ. 

ಮತ್ತು ನಾವು ಮರೆತುಬಿಡುತ್ತೇವೆ -  ನಾವು ಎಂದಿಗೂ ಎರಡನೇ ಲಿಂಗವಾಗಿ ಹುಟ್ಟಲಿಲ್ಲ, ಅದು  ನಮಗೆ ತರಬೇತಿ ನೀಡಲಾಗಿದ್ದ ತೀರ್ಮಾನಿಸಿದ  ಪಾತ್ರ.


ಸಿಮೊನ್ ಡ ಬೊವ್ವ ಹೇಳುತ್ತಾರೆ  ಧರ್ಮ, ಸಂಸ್ಕೃತಿ, ಕಾನೂನು ಮತ್ತು ಭಾಷೆ ಕೂಡ ಮಹಿಳೆಯರನ್ನು ವಸ್ತುಗಳು,  ಹೆಂಡತಿಯರು,  ತಾಯಂದಿರು,  ಆರೈಕೆದಾರರು ಇಂಥ ಕೆಳಮಟ್ಟದ ಸ್ಥಿತಿಗೆ ಇಳಿಸಿ ಎಂದಿಗೂ ಪೂರ್ಣ ಮಾನವ ಸ್ಥಾನವನ್ನು ನೀಡಲಿಲ್ಲ.


 ಅವಳ ಪುಸ್ತಕ ಸ್ತ್ರೀವಾದದ ಎರಡನೇ ಅಲೆಯನ್ನು ಹೊತ್ತಿಸಿತು: ಸಮಾನ ವೇತನ ಬೇಡಿಕೆ,  ಸಂತಾನೋತ್ಪತ್ತಿ  ಹಕ್ಕುಗಳು, ದೈಹಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ

ಲಿಂಗ ಆಧಾರಿತ ಪಾತ್ರಗಳಿಂದ ಸ್ವಾತಂತ್ರ್ಯ ಇವುಗಳ ಹಕ್ಕೊತ್ತಾಯ. ಕೆಲವು ವಿಮರ್ಶಕರ  ಪ್ರಕಾರ ಈ ಲೇಖಕಿ  ತಾಯ್ತನವನ್ನು ಅಲಕ್ಷ್ಯಮಾಡುತ್ತಿದ್ದಾರೆ.  ಇತರರಿಗೆ ಇದು  ತುಂಬಾ ತಾತ್ವಿಕ. ಆದರೆ ಸತ್ಯ ಇಲ್ಲಿದೆ:


ಎರಡನೇ ಲಿಂಗವು ಕೇವಲ ಸಮಾನತೆಯನ್ನು ವಾದಿಸಲಿಲ್ಲ. ಇದು ಮಹಿಳೆಯರಿಗೆ 

ಅವರ ದಬ್ಬಾಳಿಕೆಯನ್ನು ಅರ್ಥಮಾಡಿಕೊಳ್ಳುವ ಅಭಿವ್ಯಕ್ತಿಗಳು  ಮತ್ತು

ಅದರ ವಿರುದ್ಧ ಹೋರಾಡುವ ಧೈರ್ಯ ಇವುಗಳನ್ನು ನೀಡಿತು. 

ಇದುವರೆಗೆ ಬರೆದ ಅತ್ಯಂತ ಪ್ರಮುಖ ಸ್ತ್ರೀವಾದಿ ಪಠ್ಯವಾಗಿ ಉಳಿದಿದೆ. ಯಾರೇ ಒಪ್ಪಲಿ ಅಥವಾ ಒಪ್ಪದಿರಲಿ, ಈ ಪುಸ್ತಕ ಪ್ರಪಂಚದಾದ್ಯಂತದ ಒಂದು ಚಳುವಳಿಗೆ ಚಾಲನೆ ನೀಡಿತು. 


“ತನ್ನ ಪುರುಷತ್ವದ ಬಗ್ಗೆ ಚಿಂತೆ ಮಾಡುವ ಪುರುಷನಿಗಿಂತ ಮಹಿಳೆಯರ ಬಗ್ಗೆ ಹೆಚ್ಚು ದುರಹಂಕಾರಿ, ಆಕ್ರಮಣಕಾರಿ ಅಥವಾ ತಿರಸ್ಕಾರದ ವ್ಯಕ್ತಿ ಯಾರೂ ಇಲ್ಲ.- ಸಿಮೊನ್  ಡ  ಬೊವ್ವ, “ದ್ವಿತೀಯ ಲಿಂಗ” 


--------------------------------------------------------------------


ತಾತ್ವಿಕ ಭೂಕಂಪ “ಒಳ್ಳೆಯದು ಮತ್ತು ಕೆಟ್ಟದ್ದನ್ನುಮೀರಿ” 


ಐದನೇ ಸಂಖ್ಯೆಯಲ್ಲಿದೆ , ಫ್ರೆಡ್ರಿಕ್ ನೀಚೆ  ಲಿಖಿತ   (೧೮೮೬) ‘ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ’ (‘Beyond  Good and Evil’ by Freidrich Nietzsche). ನೀಚೆಯ ವಿಚಾರಗಳನ್ನುಹೀರಿಕೊಳ್ಳಲು ಪ್ರಯತ್ನಿಸುವ  ಮುನ್ನ ಪ್ರಜ್ಞೆಯನ್ನು ಬಲಪಡಿಸುವದು ಅವಶ್ಯ . 


ನೀ ಚೆ ಕೇವಲ ತತ್ವಜ್ಞಾನಿಯಲ್ಲ  ಅವರು ತತ್ವಜ್ಞಾನದ ಒಂದು ಭೂಕಂಪ ಮತ್ತು ‘ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ’ ಅವರ ಎರಡು ಅತ್ಯಂತ ವಿಸ್ಫೋಟಕ ಕೃತಿಗಳಲ್ಲಿ ಒಂದು.  ಎರಡನೆಯ ಮುಖ್ಯ ಕೃತಿ ,  ೧೮೮೩ಯಲ್ಲಿ ಪ್ರಕಟಿತ ‘ಝರತುಷ್ಟ್ರ ಹೀಗೆ ಮಾತನಾಡಿದರು’ (‘Thus Spoke Zarathustra’ ). ಈ ಪುಸ್ತಕಗಳಲ್ಲಿ ನೀಚೆ  ನೈತಿಕತೆಯನ್ನು ಪ್ರಶ್ನಿಸಿದು ಮಾತ್ರವಲ್ಲ  ಅವರು ಅದನ್ನು ಸುಳ್ಳು ಎಂದು ಘೋಷಿಸಿದರು. ಯಾವುದು ಒಳ್ಳೆಯದು ಅಥವಾ ದುಷ್ಟವಾದದ್ದು ಎಂದು ಯಾರು ನಿರ್ಧರಿಸುತ್ತಾರೆ -  ದುರ್ಬಲರೋ, ವಿಧೇಯರೋ ಅಥವಾ ಭಯಭೀತರೋ? ಎಂದು ಪ್ರಶ್ನಿಸಿ  ಅವರು ಸಾಂಪ್ರದಾಯಿಕ ನೈತಿಕತೆಯು ಹಿಂಡಿನ ನೈತಿಕತೆ, ಅದರ ಮೌಲ್ಯಗಳು

ಸಿಂಹಗಳದ್ದಲ್ಲ, ಕುರಿಗಳದು ಎಂದು ವ್ಯಾಖ್ಯಾನಿಸಿದರು. 


ಅಧಿಕಾರ  ಅಂದರೆ ಶಕ್ತಿಯನ್ನು  ಗಳಿಸುವ ಸಂಕಲ್ಪದ   ಮೂಲಭೂತ ಕಲ್ಪನೆಯನ್ನು ನೀಚೆ ನೀಡಿದರು. ಮಾನವ ಜೀವಿಗಳು ಬದುಕುಳಿಯುವಿಕೆಯ ಆಸೆಯಿಂದಲ್ಲ  ನಡೆಸಲ್ಪಡುವದು. ಅವರು ಸೃಷ್ಟಿಸುವ, ಪ್ರತಿಪಾದಿಸುವ, ಕೈಮೇಲಾಗುವ  ಬಯಕೆಯಿಂದ ನಡೆಸಲ್ಪಡುತ್ತಾರೆ, ಮಾನವನು ಕೇವಲ  ಒಳ್ಳೆಯವನಾಗಿರಬೇಕೆಂದು ನೀಚೆ  ಬಯಸಲಿಲ್ಲ. ವ್ಯಕ್ತಿಯು ತಾನೇತಾನಾಗಿರಬೇಕು, ತನ್ನ ಸ್ವಂತ ಮೌಲ್ಯಗಳನ್ನು ರಚಿಸಬೇಕು, ತನ್ನ  ಸ್ವಂತ ಅರ್ಥವನ್ನು ವ್ಯಾಖ್ಯಾನಿಸಿ ಪ್ರಾರಂಭದಿಂದಲೂ ತನ್ನದಾಗಿರದ ದೇವರುಗಳನ್ನು, ಸಂಪ್ರದಾಯಗಳನ್ನು ಅಥವಾ ನೈತಿಕತೆಯ ಸಂಹಿತೆಯನ್ನು ಕುರುಡು ಭಕ್ತಿಯಿಂದ ಪೂಜಿಸುವುದನ್ನು ಬಿಟ್ಟುಕೊಡಬೇಕು ಎಂ ದು ಇಚ್ಚಿಸಿದರು ನೀಚೆ.

 ಅವರು ಇದನ್ನು ಎಲ್ಲ ಮೌಲ್ಯಗಳ ಮರುಮಾಪನ, ಹಿಂಡಿನ ಆಚೆಗೆ ಬದುಕಲು ಧೈರ್ಯ ಮಾಡುವ ವ್ಯಕ್ತಿಯ ಹಾದಿ ಎಂದು ಕರೆದರು. ಉಬರ್‌ಮೆನ್ಷ್ ಎಂಬುದು ನೀಚೆ ಯವರ ಸಾಂಪ್ರದಾಯಿಕ ನೈತಿಕತೆಯನ್ನು ಮೀರಿದ ಮತ್ತು ತಮ್ಮದೇ ಆದ ಮೌಲ್ಯಗಳನ್ನು ಸೃಷ್ಟಿಸುವ, ಭೂಮಿಯ ಮೇಲಿನ ಜೀವನವನ್ನು ಸಂಪೂರ್ಣವಾಗಿ ದೃಢೀಕರಿಸುವ ಮಾನವನ ಆದರ್ಶವಾಗಿದೆ. 

ಈ ಪುಸ್ತಕ ದುರ್ಬಲ ಹೃದಯದವರಿಗೆ ಅಲ್ಲ. ಇದು ತಮ್ಮ ಹಳೆಯ ನಂಬಿಕೆಗಳನ್ನು ಸುಡಲು  ಮತ್ತು ನಿಜವಾದದ್ದನ್ನು ನಿರ್ಮಿಸಲು ಸಿದ್ಧರಾಗಿರುವರಿಗಾಗಿ ಬರೆದ ಪುಸ್ತಕ. ನೀಚೆ ಕೇವಲ ದೈವ ವಿಶ್ವಾಸ ಪದ್ಧತಿಗಳಿಗೆ  ಸವಾಲು ಎತ್ತಲಿಲ್ಲ. 

ಮಾನವನಾಗಲು ನಮಗೆ ಅನುಮತಿ ಬೇಕು ಎಂಬ ಕಲ್ಪನೆಗೇ ಅವರು ಸವಾಲು ಎತ್ತಿದರು. 


ನೀಚೆ ಅಸ್ತಿತ್ವವಾದದ  ಪಿತಾಮಹ  ಮತ್ತು ಆಧುನಿಕ ಸಂದಿಗ್ಧತೆಯ ಅನುಮಾನದ ಮೌನದಲ್ಲಿ ಪಿಸುಗುಟ್ಟುತ್ತಿರುವ ಧ್ವನಿ. 


“ಪ್ರೀತಿಯಿಂದ ಮಾಡಲ್ಪಟ್ಟದ್ದು ಯಾವಾಗಲೂ ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ ನಡೆಯುತ್ತದೆ.” - ಫ್ರೆಡ್ರಿಕ್ ನೀಚೆ 


------------------------------------------------------------------

ಉಪಪ್ರಜ್ಞೆಗೆ ನಕ್ಷೆ



ಸಂಖ್ಯೆ ಆರು, ‘ಕನಸುಗಳ ವ್ಯಾಖ್ಯಾನ’,  ಸಿಗ್ ಮಂಡ್   ಫ್ರಾಯ್ಡ್‌ರ ೧೮೯೯ರ ಪುಸ್ತಕ ( ‘The Interpretation of Dreams’, by Sigmund Freud)


ನೀಚೆ ಮನಸ್ಸಿನ ನೈತಿಕ ಗೋಡೆಗಳನ್ನು ಹರಿದು ಹಾಕಿದರೆ ಫ್ರಾಯ್ಡ್ ಮನಸ್ಸಿನ  ಕತ್ತಲೆಯಾದ, ಗುಪ್ತ ಕೋಣೆಗಳನ್ನು  ಆಳವಾಗಿ ಅಗೆದು ಪ್ರವೇಶಿಸಿದರು.  ‘ಕನಸುಗಳ ವ್ಯಾಖ್ಯಾನ’ವು  ಮನೋವಿಶ್ಲೇಷಣೆಯನ್ನು ಆವಿಷ್ಕರಿಸಿದ  ಪುಸ್ತಕವಾಗಿದೆ.  ಫ್ರಾಯ್ಡ್ ಅವರ ಕ್ರಾಂತಿಕಾರಿ  ಪ್ರತಿಪಾದನೆಯ ಪ್ರಕಾರ ಸುಪ್ತಾವಸ್ಥೆಯ ಮನಸ್ಸು ನಮಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ನಿಯಂತ್ರಿಸುತ್ತದೆ. ಕನಸುಗಳು ಯಾದೃಚ್ಛಿಕ ಅಸಂಭತೆಗಳಲ್ಲ ಎಂದು ಫ್ರಾಯ್ಡ್ ವಾದಿಸಿದರು ಅವು ನಮ್ಮ ಅತ್ಯಂತ ಆಳವಾದ ಒಳಗಣ ಭಾಗಗಳು, ನಮ್ಮ ದಮನಿತ ಆಸೆಗಳು, ಭಯಗಳು, ಆಘಾತಗಳು ಮತ್ತು ರಹಸ್ಯಗಳಿಂದ  ಬರುವ   ಸಂಕೇತಿಸಿದ ಸಂದೇಶಗಳು .   

ಫ್ರಾಯ್ಡ್  ಕನಸುಗಳನ್ನು ಎರಡು ಪದರಗಳಾಗಿ ವಿಂಗಡಿಸಿದರು. ಒಂದನೆಯದು ಬಹಿರಂಗವಾದ ವಸ್ತು, ನಮ್ಮ   ನೆನಪಿನಲ್ಲಿರುವಂತವು  ,  ವಿಚಿತ್ರ ಕಥೆ,; ಎರಡನೆಯ ಪದರ ಸುಪ್ತ ವಿಷಯ, ಗುಪ್ತ ಅರ್ಥ, ನಿಜವಾದ ಸತ್ಯ. ಅವುಗಳನ್ನು ಅರ್ಥ ಮಾಡಿಕೊಳ್ಳಲು ಫ್ರಾಯ್ಡ್  ಮುಕ್ತ ಸಾಹಚರ್ಯದಲ್ಲಿ  ದೋಷ ವಿಮರ್ಶಕ ನಿಯಂತ್ರಣ - ಸೆನ್ಸಾರ್ಶಿಪ್ - ಇಲ್ಲದೆ   ಮನಸ್ಸನ್ನು ಮುಕ್ತವಾಗಿ ಅಲೆದಾಡಲು ಬಿಡುವ ತಂತ್ರವನ್ನು ನಡೆಸಿದರು. 


ಇತಿಹಾಸದಲ್ಲಿ ಮೊದಲ ಬಾರಿಗೆ ನಮಗೆ ಮನಸ್ಸಿನ ಸುಪ್ತಾವಸ್ಥೆಯ ಒಂದು ನಕ್ಷೆ ದೊರಕಿತು. ಅವರ ಮೂಲ ವಿಚಾರಗಳಾದ ಇಡಿಪಸ್ ಮಾನಸಿಕ  ಸಂಕೀರ್ಣ, ರಕ್ಷಣಾ ಕಾರ್ಯವಿಧಾನಗಳು, ಮನಸ್ಸಿನ ಸೈದ್ಧಾಂತಿಕ ರಚನೆಗಳಾದ ಇದ್ , ಇಗೊ ಮತ್ತು ಸೂಪರ್ ಇಗೊ ಇವು  ಆಧುನಿಕ ಮನೋವಿಜ್ಞಾನ,  ಸಾಹಿತ್ಯ, ಚಲನಚಿತ್ರ ಮತ್ತು ಜಾಹೀರಾತು ಕ್ರಿಯೆಗೆ ಕೂಡ ಅಡಿಪಾಯಗಳಾದುವು. .

ಹೌದು, ಅವರ ಕೆಲವು ಸಿದ್ಧಾಂತಗಳು ಹಳೆಯದಾಗಿವೆ, ಆದರೆ ಅವರ ಮೂಲ ಒಳನೋಟ ಉಳಿದಿದೆ. ನಾವು  ತರ್ಕಬದ್ಧ ಜೀವಿಗಳಲ್ಲ.  ನಾವು . ನಮಗೆ ಪೂರ್ಣವಾಗಿ ಅರ್ಥಮಾಡಲಾಗದ ಶಕ್ತಿಗಳಿಂದ ನಡೆಸಲ್ಪಡುತ್ತೇವೆ.  


 ನೀವು ಮಾಡುತ್ತಿರುವ  ರೀತಿಯಲ್ಲಿ ಏಕೆ ಯೋಚಿಸುತ್ತೀರಿ, ಅನುಭವಿಸುತ್ತೀರಿ ಮತ್ತು ವರ್ತಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಇಲ್ಲಿಂದ ಪ್ರಾರಂಭಿಸಿ.


“ಹೆಚ್ಚಿನ ಜನರು ನಿಜವಾಗಿಯೂ ಸ್ವಾತಂತ್ರ್ಯ ವನ್ನು ಬಯಸುವುದಿಲ್ಲ ಏಕೆಂದರೆ ಸ್ವಾತಂತ್ರ್ಯವು ಜವಾಬ್ದಾರಿಯನ್ನು ಒಡಗೊಂಡಿರುತ್ತದೆ. ” - ಸಿಗ್ಮಂಡ್ ಫ್ರಾಯ್ಡ್ 


--------------------------------------------------------------------------------


ಮಾನಸಿಕ ಶವಪರೀಕ್ಷೆ



ಏಳು, ಫ್ಯೊಡೊರ್ ಡಾಸ್ಟೊಯೆವ್ಸ್ಕಿ  ಅವರ’ಅಪರಾಧ ಮತ್ತುಶಿಕ್ಷೆ’

 (೧೮೬೬) (CRIME AND PUNISHMENT by Fyodor Dostoyevsky)


ಇದು ಕಾದಂಬರಿಯಲ್ಲ. ಇದು ಮಾನಸಿಕ ಶವಪರೀಕ್ಷೆ.  ರಸ್ಕೊಲ್ನಿಕೋವ್ ಒಬ್ಬ ಬಡ ಮಾಜಿ-ವಿದ್ಯಾರ್ಥ. ತನ್ನ ಬಗ್ಗೆ , ತಾನು ನೈತಿಕತೆಗೆ  ಮೇಲಿದ್ದೇನೆಂದು ನಂಬುತ್ತಾನೆ.

ನೆಪೋಲಿಯನ್ ನಂತಹ  ಅಸಾಧಾರಣ ವ್ಯಕ್ತಿಗಳಿಗೆ ಹೆಚ್ಚಿನ ಒಳಿತಿಗಾಗಿ ಅಪರಾಧಗಳನ್ನು ಮಾಡುವ ಹಕ್ಕಿದೆ ಎಂದು ಅವನು ವಾದಿಸುತ್ತಾನೆ.. ಆದ್ದರಿಂದ ಅವನು ಒಬ್ಬಳು  ಕ್ರೂರ ದುರಾಶಿ ಗಿರವಿ ದಲ್ಲಾಳಿ ಮಹಿಳೆಯನ್ನು  ಕೊಲೆ ಮಾಡುತ್ತಾನೆ  ಆದರೆ ವಿಮೋಚನೆಯ ಬದಲು, ಅವನು ಅಪರಾಧಿ ಭಾವನೆಯಿಂದ ಮುಳುಗಿದ್ದಾನೆ. ಅವನಿಗೆ ಭ್ರಮೆ ಬರುತ್ತದೆ. ಅವನು ನಡುಗುತ್ತಾನೆ. ಅವನು ಸ್ವಂತ ಆತ್ಮಸಾಕ್ಷಿಯ ಭಾರದಡಿಯಲ್ಲಿ ಕುಸಿಯುತ್ತಾನೆ.

 ಡಾಸ್ಟೊಯೆವ್ಸ್ಕಿ ಕೇವಲ ಒಂದು ಅಪರಾಧದ ಕತೆಯನ್ನು ಹೇಳುವದಿಲ್ಲ.  ಅವರು  ನಮಗೆ ತೋರಿಸುವದು  ಆತ್ಮವು ತನ್ನದೇ ಸಮರ್ಥನೆಯ ವಿರುದ್ಧ ದಂಗೆ ಎದ್ದಿರುವುದು

 ನಿಜವಾದ ಅಪರಾಧವೆಂದರೆ ಕೊಲೆ ಅಲ್ಲ.  ಅಪರಾಧವೇನೆಂದರೆ  ನಾವು ದೇವರುಗಳು  ಆಗಬಹುದು ಮತ್ತು ದೇವರುಗಳಂತೆ   ನಡೆದರೆ ಆಗುವ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಅಪ ನಂಬಿಕೆ.  

ಈ ಪುಸ್ತಕ ಭಯಾನಕವಾಗಿದೆ ಏಕೆಂದರೆ ಅದು ಸತ್ಯವನ್ನು ತೋರಿಸುತ್ತದೆ.  

ಅದು ರಾಸ್ಕಲಿಕೋವ್  ಮೇಲೆ ತೀರ್ಪು ನೀಡುವದಿಲ್ಲ.  ಇದು ನೀವು ಎಷ್ಟು ಸುಲಭವಾಗಿ

ಅವನಾಗಬಹುದು ಎಂಬುದನ್ನು ತೋರಿಸುತ್ತದೆ. ‘ಅಪರಾಧ ಮತ್ತು ಶಿಕ್ಷೆ’ ಅಪರಾಧ ಪ್ರಜ್ಞೆ , ವಿಮೋಚನೆ, ಮತ್ತು ಬೌದ್ಧಿಕ ದುರಹಂಕಾರದ ಭರಿಸಲಾಗದ ವೆಚ್ಚಗಳ ಅಂತಿಮ ಪರಿಶೋಧನೆಯಾಗಿದೆ.  ತತ್ವಶಾಸ್ತ್ರ, ಮನೋವಿಜ್ಞಾನದಲ್ಲಿ ಆಸಕ್ತಿ ಇರುವವರು , ಅಥವಾ ಸಾಮಾನ್ಯವಾಗಿ ಕಾದಂಬರಿಗಳನ್ನು ಓದುವ ವಾಚಕರು ಓದಲೇ ಬೇಕಾದ ಅದ್ಭುತ ಮೇರುಕೃತಿ. 


“ಮಾನವ ಅಸ್ತಿತ್ವದ ರಹಸ್ಯವು ಜೀವಂತವಾಗಿರುವುದರಲ್ಲಿ ಅಲ್ಲ, ಬದಲಾಗಿ ಬದುಕಲು ಯೋಗ್ಯ ಉದ್ದೇಶವನ್ನು  ಕಂಡುಕೊಳ್ಳುವುದರಲ್ಲಿದೆ.” - ಫ್ಯೊಡೊರ್ ಡಾಸ್ಟೊಯೆವ್ಸ್ಕಿ


------------------------------------------------------------------


ನಮಗೆ ಏನಾದರೂ ಹೇಗೆ ಗೊತ್ತು?


ಸಂಖ್ಯೆ ಎಂಟರಲ್ಲಿದೆ ಇಮ್ಯಾನುಯೆಲ್ ಕಾಂಟ್ ಗ್ರಂಥ  ‘ಶುದ್ಧ ವಿವೇಚನೆಯ  ವಿಮರ್ಶೆ’, ೧೭೯೧ (CRITIQUE OF PURE REASON by Immanuel Kant)



ಈ ಪಟ್ಟಿಯಲ್ಲಿರುವ ಅತ್ಯಂತ ಕಠಿಣ ಪುಸ್ತಕ ಇದು. ಮತ್ತು ಬಹುಶಃ ಅತ್ಯಂತ ಮುಖ್ಯವಾದದ್ದು.ಕಾಂಟ್ ಬರೆದಿರುವ ‘ಶುದ್ಧ ವಿವೇಚನೆಯ ವಿಮರ್ಶೆ’ 

ತತ್ವಶಾಸ್ತ್ರವನ್ನು ಮಾತ್ರ ಬದಲಾಯಿಸಲಿಲ್ಲ, ಅದುನಾವು ಏನನ್ನೂ ತಿಳಿದುಕೊಳ್ಳುವ ವಿಧಾನವನ್ನು ಬದಲಾಯಿಸಿದೆ.

ಕಾಂಟ್ ಗಿಂತ ಮೊದಲು, ವಿಚಾರವಾದಿಗಳು ವಾದಿಸಿದರು ‘ಜ್ಞಾನವು ಕೇವಲ ಕಾರಣದಿಂದಲೇ ಅಂದರೆ ವಿವೇಚನಾ ಸಾಮರ್ಥ್ಯದಿಂದ ಮಾತ್ರ ಬರುತ್ತದೆ’. ತದ್ವಿರುದ್ಧವಾಗಿ ಅನುಭವಶಾಸ್ತ್ರಜ್ಞರು ‘ಜ್ಞಾನವು ಅನುಭವದಿಂದ  ಬರುತ್ತದೆ’ ಎಂದು ಹೇಳಿದರು


ಕಾಂತ್ ಇವೆರಡನ್ನೂ  ಹೇಳಲಿಲ್ಲ. ಅವರು ವಾದಿಸಿದರು ಜ್ಞಾನವು ನಮ್ಮ ಮನಸ್ಸಿನ ರಚನೆಯಿಂದ ರೂಪುಗೊಂಡ ಸಂಶ್ಲೇಷಣೆಯಾಗಿದೆ ನಮ್ಮ ಮನಸ್ಸಿನ ರಚನೆ. ನಾವು  ವಾಸ್ತವವನ್ನು ಅದು ಇರುವಂತೆಯೇ ಗ್ರಹಿಸುವದಿಲ್ಲ.  ನಾವು ಅದನ್ನು 

ಸಮಯ, ಸ್ಥಳ ಮತ್ತು ನಮ್ಮ ಮೆದುಳು ವಿಧಿಸುವ ವರ್ಗಗಳು ಎನ್ನುವ ಮಸೂರಗಳ ಮುಲಕ ಗ್ರಹಿಸುತ್ತೇವೆ . ಕ್ಯಾಂಟ್  ‘ನ್ಯೂಮಿನ’ ಮತ್ತು ‘ಫೆನೊಮೇನೋನ್’ ಎನ್ನುವ ಎರಡು ಪರಿಕಲ್ಪನೆಗಳನ್ನು ಚರ್ಚೆಗೆ ತಂದಂರು. ‘ನ್ಯೂಮಿನ’ ಎನ್ನುವದು  ಒಂದು ವಸ್ತು ತನ್ನಲ್ಲಿ ಇರುವ ರೀತಿ ಮತ್ತುಅಜ್ಞೇಯ.  ‘ ಫೆನೊಮೇನೋನ್’ ನಾವು ಕಾಣುವ, ಅನುಭವಿಸುವ ವಸ್ತು. 

ಇದನ್ನು  ತತ್ವಶಾಸ್ತ್ರದ ಮಟ್ಟಿಗೆ ಕೊಪೆರ್ನಿಕಸ್ ಖಗೋಳ ಶಾಸ್ತ್ರದಲ್ಲಿ ತಂದಿಟ್ಟ ಕ್ರಾಂತಿಗೆ  ಹೋಲಿಸಬಹುದಾದ ಕ್ರಾಂತಿ ಆಗಿತ್ತು. ಕೊಪರ್ನಿಕಸನು ಭೂಮಿಯನ್ನು ವಿಶ್ವದ ಕೇಂದ್ರದಿಂದ  ಸ್ಥಳಾಂತರಿಸಿದಂತೆಯೇ ಕ್ಯಾಂಟ್ ಮಾನವನ ಮನಸ್ಸನ್ನು ಜ್ಞಾನದ ಕೇಂದ್ರಕ್ಕೆ ಸ್ಥಳಾಂತರಿಸಿದರು. 


 ಈ ಪುಸ್ತಕವು ದಟ್ಟವಾಗಿದೆ. ಅದನ್ನು ಅರ್ಥಮಾಡಿಕೊಳ್ಳಲು ಸುಲಭವಲ್ಲ, ಬಹಳ ಸಮಯ  ಹಿಡಿಯುತ್ತದೆ. . ಆದರೆ ಮಾನವನ ತಿಳುವಳಿಕೆಯ ಮಿತಿಗಳನ್ನು ಗ್ರಹಿಸಲು ಬಯಸುತ್ತಿದ್ದರೆ,  ನಾವು  ಯೋಚಿಸುವ ರೀತಿಯನ್ನು ಅರ್ಥಮಾಡಿಕೊಳ್ಳಲು ಇಚ್ಚಿಸುತ್ತಿದ್ದರೆ, ಇದು  ಓದಬೇಕಾದ ಪುಸ್ತಕ. ಇದು ಸುಲಭವಲ್ಲ, ಆದರೆ ಇದು ಅತ್ಯಗತ್ಯ.


“ವಿಷಯವಿಲ್ಲದ ಆಲೋಚನೆಗಳು ಖಾಲಿ, ಪರಿಕಲ್ಪನೆಗಳಿಲ್ಲದ ಅಂತಃಪ್ರಜ್ಞೆಗಳು ಕುರುಡು.’ - ಇಮ್ಮಾನುಎಲ್ ಕಾಂಟ್ 



---------------------------------------------------



ಆಧುನಿಕ ಅರ್ಥಶಾಸ್ತ್ರದ ಬೈಬಲ್


ಒಂಬತ್ತನೇ ಸಂಖ್ಯೆ,ರಾಷ್ಟ್ರಗಳ ಸಂಪತ್ತು” - ದಿ ವೆಲ್ತ್ ಆಫ್ ನೇಷನ್ಸ್ (“The Wealth of Nations  by Adam Smith)


ಲೇಖಕ ಆಡಮ್ ಸ್ಮಿತ್, ೧೭೭೬


ಇದು ಬಂಡವಾಳಶಾಹಿಯ ಬೈಬಲ್. 1776 ರಲ್ಲಿ ಪ್ರಕಟವಾದ ಅದೇ ವರ್ಷ,

ಅಮೇರಿಕ ಸ್ವಾತಂತ್ರ್ಯ ಗಳಿಸಿತು.  ಆಡಮ್ ಸ್ಮಿತ್ ಅವರ ‘ದಿವೆ ಲ್ತ್ ಆಫ್ ನೇಷನ್ಸ್ ‘ ಆಧುನಿಕ ಅರ್ಥಶಾಸ್ತ್ರಕ್ಕೆ  ಅಡಿಪಾಯ ಹಾಕಿತು. ಅವರ ಅತ್ಯಂತ ಪ್ರಸಿದ್ಧ

ಕಲ್ಪನೆ, ‘ಮಾಂಸ, ಪಾನೀಯಗಳು ಮತ್ತು ರೊಟ್ಟಿ ಮಾರುವವರ ಔದಾರ್ಯದಿಂದಲ್ಲ, ಪರಂತು  ಅವರು  ತಮ್ಮ ಸ್ವಂತ ಹಿತಾಸಕ್ತಿಗಳನ್ನು ನೋಡಿಕೊಳ್ಳುವುದರ ಮೂಲಕವೇ, ನಾವು ನಮ್ಮ ಭೋಜನವನ್ನು ಪಡೆಯುವುದು.’ 


ಬೇರೆ ರೀತಿಯಲ್ಲಿ ಹೇಳುವುದಾದರೆ,  ಯಾವಾಗ ಮುಕ್ತ ಮಾರುಕಟ್ಟೆಗಳ ಮೂಲಕ ಸ್ವ-ಹಿತವನ್ನು ನೆರವೇರಿಸಲಾಗುತ್ತದೆಯೋ, ಆಗ ಅದು  ಸೃಷ್ಟಿಸುತ್ತದೆ

ಎಲ್ಲರಿಗೂ ಸಮೃದ್ಧಿಯನ್ನು. .  ಆರ್ಥಿಕ ಪರಿಶ್ರಮದಲ್ಲಿ ಶ್ರಮಗಳ  ವಿಭಾಗೀಕರಣ, 

  ಸರಕುಗಳ ಪೂರೈಕೆ ಮತ್ತು ಬೇಡಿಕೆಗಳ  ಪಾತ್ರ, ಮತ್ತುಆರ್ಥಿಕ ಪ್ರಗತಿಯಲ್ಲಿ  

‘ಕಾಣದ ಕೈ’  ಪಾತ್ರ - ಇದರರ್ಥ ಸ್ವತಂತ್ರ ಮಾರುಕಟ್ಟೆಯಲ್ಲಿ ತಮ್ಮ ಸ್ವಂತ ಹಿತಾಸಕ್ತಿಯನ್ನು ಅನುಸರಿಸುವ ವ್ಯಕ್ತಿಗಳು ಉದ್ದೇಶಪೂರ್ವಕವಲ್ಲದೆ  ಸಾರ್ವಜನಿಕ ಹಿತವನ್ನು ಹೇಗೆ ಉತ್ತೇಜಿಸಬಹುದು - ಮತ್ತು ಸರ್ಕಾರದ ಅತಿರೇಕದ  ಅಪಾಯಗಳು, ಇವರುಗಳನ್ನು ಸ್ಮಿಥ್ ವಿಶದೀಕರಿಸಿದರು.

 

ಮಾರುಕಟ್ಟೆಗಳನ್ನು ವಿವರಿಸಿದು ಮಾತ್ರವಲ್ಲ.  ಬಲವಂತವಿಲ್ಲದೆ ಮಾನವ ಸಹಕಾರವನ್ನು ಮಾರುಕಟ್ಟೆಗಳು ಹೇಗೆ ಸಂಘಟಿಸುತ್ತವೆ  ಎಂಬುದನ್ನು ಬಹಿರಂಗಪಡಿಸಿದರು. 

ಇಂದು, ಪ್ರತಿಯೊಂದು ಆರ್ಥಿಕ ನೀತಿ, ಪ್ರತಿಯೊಂದು ಷೇರು ಮಾರುಕಟ್ಟೆ, ಪ್ರತಿಯೊಂದು ವ್ಯವಹಾರ ತಂತ್ರ, ಇದೆಲ್ಲವೂ ಸ್ಮಿತ್‌ ಅವರ 

ಒಳನೋಟಗಳಿಂದ ಹರಿಯುತ್ತದೆ.  ಬಂಡವಾಳಶಾಹಿ ಪರಿಪೂರ್ಣವೇ? ಇಲ್ಲ. ಆದರೆ

ಸ್ಮಿತ್ ನಮಗೆ  ಅದನ್ನು ಅರ್ಥಮಾಡಿಕೊಳ್ಳುವ  ಮತ್ತು ಸುಧಾರಿಸುವ ಚೌಕಟ್ಟನ್ನು ಕೊಟ್ಟರು.  ಈ ಪುಸ್ತಕವು ಕೇವಲ ಸಂಪತ್ತನ್ನು ವಿವರಿಸಲಿಲ್ಲ. ಅದು ಮಾನವ ಸ್ವಾತಂತ್ರ್ಯ ಮತ್ತು ಸಹಕಾರವು ಹೇಗೆ ಸಮೃದ್ಧಿಯನ್ನು ಸೃಷ್ಟಿಸುತ್ತದೆ. ಎಂಬುದನ್ನು  ತೋರಿಸಿತು.


ಇಂದಿನ ಶತಮಾನದಲ್ಲಿ ಬಂಡವಾಳಶಾಹಿಯ ಅಪಾಯಗಳನ್ನು ಮುಕ್ತವಾಗಿ ಕಾಣುತ್ತೇವೆ. ಇಂದು ಕಾಣುತ್ತಿರುವ  ಭಂಡವಾಳಶಾಹಿಯನ್ನು ವಿರೋಧಿಸುವವರೇ ಹೆಚ್ಚು . 


“ಬಹುಪಾಲು ಸದಸ್ಯರು ಬಡವರು ಮತ್ತು ದುಃಖಿತರಾಗಿರುವ ಯಾವುದೇ ಸಮಾಜವು ನಿಜವಾಗಿಯೂ ಅಭಿವೃದ್ಧಿ ಹೊಂದಲು ಮತ್ತು ಸಂತೋಷವಾಗಿರಲು ಸಾಧ್ಯವಿಲ್ಲ.” - ಆಡಮ್ ಸ್ಮಿಥ್ 


-----------------------------------------------

ಶುದ್ಧ ಪ್ರತಿಭೆಯ ಪರ್ವತ


ಅಂತಿಮವಾಗಿ, ಸಂಖ್ಯೆ ೧೦ರಲ್ಲಿ  “ಯುದ್ಧ ಮತ್ತು ಶಾಂತಿ” ಲಿಯೋ 

ಟೋಲ್ಟಾಯ್ (‘WAR AND PEACE’ by Leo Tolstoy)


’ಯುದ್ಧ ಮತ್ತು ಶಾಂತಿ’ ಪುಸ್ತಕವು 1,200 ಪುಟಗಳಷ್ಟು ಶುದ್ಧಅವಿರತ ಪ್ರತಿಭೆ. ಮೊದಲ ನೋಟದಲ್ಲಿ, ಇದು ನೆಪೋಲಿಯನ್ ರಷ್ಯಾ   ಮೇಲೆ ನಡೆಸಿದ ಆಕ್ರಮಣದ ಬಗ್ಗೆ ಆದರೆ ಅದರ ಕೆಳಗೆ, ಅದು ಸುಮಾರು  ಎಲ್ಲವನ್ನೂ ಒಳಗೊಳ್ಳುತ್ತದೆ   ವಿಧಿ, , ಸ್ವತಂತ್ರ ಸಂಕಲ್ಪ, ಪ್ರೀತಿ, ಮೃತ್ಯು , ಜೀವನದ ಅರ್ಥ, ಇವುಗಳೊಂದಿಗೆ ಹಿಡಿತ ಸಾಧಿಸಲು ಹೋರಾಡಲು ಪ್ರಯತ್ನಿಸುವ ಶ್ರೀಮಂತ ಕುಲೀನರು,  ರೈತರು, ಸೈನಿಕರು, ಪ್ರೇಮಿಗಳು,

ತತ್ವಜ್ಞಾನಿಗಳು, ಪ್ರತಿಯೊಬ್ಬರನ್ನೂ ಟಾಲ್ಸ್ಟಾಯ್ ಹಿಂಬಾಲಿಸುತ್ತಾರೆ.  

ಇತಿಹಾಸವು ಶ್ರೇಷ್ಠರಿಂದ ಹೇಗೆ ರೂಪುಗೊಳ್ಳುವುದಿಲ್ಲ ಪರಂತು  ಲಕ್ಷಾಂತರ ಸಣ್ಣ ಕಾಣದ ಲಕ್ಷಿಸದ ಆಯ್ಕೆಗಳಿಂದ, ಎಂಬುದನ್ನು ತೋರಿಸುತ್ತಾರೆ ಟಾಲ್ಸ್ಟಾಯ್.  . 


ತದನಂತರ ಅವರೊಂದು  ಬಾಂಬ್ ಬೀಳಿಸುತ್ತಾರೇ:  

‘ಜೀವಂತವಾಗಿರುವುದು ಮಾತ್ರವೇ  ನಿಜವಾದ ಸಂತೋಷ.’


ಶಕ್ತಿ, ವೈಭವ ಮತ್ತು ಸಿದ್ಧಾಂತಗಳ ಗೀಳುಗಳಲ್ಲಿ ತೊಡಗಿ ಯಾವುದೇ  ಕ್ರಮ ಕೈಗೊಳ್ಳಲು ಅಸಮರ್ಥಗೊಳಿಸಲಾಗಿರುವ  ಜಗತ್ತಿಗೆ ಟೋಲ್ಟಾಯ್ ಪಿಸುಗುಟ್ಟುತ್ತಾನೆ:


 "ಪವಾಡ ಇದೊಂದೇ.  ನೀವು ಇಲ್ಲಿದ್ದೀರಿ. ನೀವು ಉಸಿರಾಡುತ್ತಿದ್ದೀರಿ, ನೀವು ಅನುಭವಿಸುತ್ತಿದ್ದೀರಿ." 


‘ಯುದ್ಧ ಮತ್ತು ಶಾಂತಿ’ ಯನ್ನು ಓದುವದು ಎಂದರೆ ಒಂದು ಪುಸ್ತಕವನ್ನು  ಮುಗಿಸುವುದಲ್ಲ ಆದರೆ   ಜೀವಕ್ಕೆ ಮರಳಿ ಬರುವ ಬಗ್ಗೆ. 

ನಿಮ್ಮನ್ನು ಹೆಚ್ಚು ಮಾನವೀಯವಾಗುವಂತೆ,   ಹೆಚ್ಚು

ಸಂಪರ್ಕಗೊಳ್ಳುವಂತೆ,  ಹೆಚ್ಚು ಕೃತಜ್ಞರಾಗಿರುವಂತೆ ಮಾಡುತ್ತದೆ.  ಅದು 

ಉತ್ತರಗಳನ್ನು ನೀಡುವದಿಲ್ಲ.   ಅದು ಪ್ರಸ್ತುತತೆಯನ್ನು ನೀಡುತ್ತದೆ ಮತ್ತು 

 ಧಾವಿಸಿ ಅತಿ ವೇಗದಲ್ಲಿ  ಓಡಿಸುವ ಜಗತ್ತಿನಲ್ಲಿ  ನಮ್ಮನ್ನು ನಿಧಾನಗೊಳಿಸುತ್ತದೆ.

ಮತ್ತು ಇದೇ  ಅದರ ಅತ್ಯುತ್ತಮ ಕೊಡುಗೆ.


 "ಪ್ರತಿಯೊಬ್ಬರೂ ಜಗತ್ತನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಾರೆ, ಆದರೆ ಯಾರೂ ತಮ್ಮನ್ನು ತಾವು ಬದಲಾಯಿಸಿಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ." ಟಾಲ್ಸ್ಟಾಯ್ 


ಕೊನೆಯದಾಗಿ 


ಈ ೧೦ ಪುಸ್ತಕಗಳು ಅವಶೇಷಗಳಲ್ಲ. ಅವು ಜೀವಂತವಾಗಿವೆ.  ನಿಮ್ಮೊಂದಿಗೆ ಮಾತನಾಡಿದರೆ ನೀವು ಕೇಳಲು ಸಿದ್ಧರಾಗಿದ್ದಲ್ಲಿ   ಅವು ನಿಮ್ಮೊಂದಿಗೆ ಸಂಭಾಷಿಸಲು  ಸಿಧ್ಹವಾಗಿವೆ. ಒಂದೇ ದಿನದಲ್ಲಿ ಅವುಗಳನ್ನು ಓದುವದು ಅಸಾಧ್ಯ. ನಿಮಗೆ ವೈಚಾರಿಕವಾಗಿ, ಭಾವನಾತ್ಮಕವಾಗಿ ಇಷ್ಟವಾಗುವ ಒಂದನ್ನು ಮೊದಲು  ಓದಿ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು