‘ಮಧ್ಯಮ ಆದಾಯದ ಬಲೆ’ 



“ಭಾರತವು ಮಧ್ಯಮ ಆದಾಯದ ಬಲೆಗೆ ಬೀಳಬಹುದು : ಆದರೆ ದೇಶವು   ಎಂದಿಗೂ ವಿಕಸಿತ ಆಗದೆ ಇರ ಬಹುದೇ ? ಹಾಗೇನಾದರೂ  ಆದಲ್ಲಿ  ಇದು ನಮ್ಮ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು”


2007 ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಮೊದಲಬಾರಿಗೆ "ಮಧ್ಯಮ ಆದಾಯದ ಬಲೆ" ಎಂಬ ಪರಿಕಲ್ಪನೆಯನ್ನು  ಮತ್ತು ಪದಗುಚ್ಛವನ್ನು ಸೂಚಿಸಲಾಯಿತು.  ‘ಬಲೆ’ ಎ೦ದರೆ ಬಿಡಿಸಿಕೊಳ್ಳಲು ಕಠಿಣವಾದ ಒ೦ದು ಪರಿಸ್ಥಿತಿ.  2007 ರಲ್ಲಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ  ಬೆಳವಣಿಗೆ ಮತ್ತು ಬಡತನ ಕಡಿತದ ಒಂದು ದಶಕದ ಹೊರತಾಗಿಯೂ ಅನೇಕ ಆರ್ಥಿಕತೆಗಳು - ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ - ಹೆಚ್ಚಿನ ಆದಾಯದ ಸ್ಥಿತಿಗೆ ಏರುವ ಪ್ರಯತ್ನಗಳಲ್ಲಿ ಅಸಫ಼ಲವಾಗಿವೆ  ಎಂಬುದು ಸ್ಪಷ್ಟವಾಗಿ ತೋರಿತ್ತು.  ‘ಮಧ್ಯಮ’ - ದಿಂದ ‘ಹೆಚ್ಚಿನ’ - ಆದಾಯದ ಸ್ಥಿತಿಗೆ ಪರಿವರ್ತನೆಯನ್ನು ಸಾಧಿಸುವಲ್ಲಿ  ಸಹಾಯ ಮಾಡಲು ಬೆಳವಣಿಗೆಯ ಅರ್ಥಶಾಸ್ತ್ರ  ವಿಶ್ವಾಸಾರ್ಹ ಸಿದ್ಧಾಂತವನ್ನು,  ಹಾಗೆಯೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ನಿರ್ಮಿಸಲು ಉತ್ತಮವಾದ ಬೆಳವಣಿಗೆಯ ಚೌಕಟ್ಟನ್ನು,  ಅರ್ಥಶಾಸ್ತ್ರಜ್ಞರು ಇನ್ನೂ ಒದಗಿಸಬೇಕಾಗಿಯೂ ತೋರಿತ್ತು.


2007 ರ ಪರೀಕ್ಷಾರ್ಥ ಕಲ್ಪನೆಯು ಇ೦ದು ಗಂಭೀರ ವಿಚಾರಕ್ಕೆ ಒಳಪಡಿಸುವ  ವಿಷಯವಾಗಿದೆ : ವಿಶ್ವ ಬ್ಯಾಂಕ್‌ನ 2024 ರ ವಿಶ್ವ ಅಭಿವೃದ್ಧಿ ವರದಿಗೆ  ‘ಮಧ್ಯಮ ಆದಾಯದ ಬಲೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.  ಇದು 2007 ರಲ್ಲಿ ಕ೦ಡಿದ್ದ ಬೆಳವಣಿಗೆಯ ಸಮಸ್ಯೆಯು ಹಲವು ದೇಶಗಳಿಗೆ ಇನ್ನೂ ತೀವ್ರವಾಗಿ ಮುಂದುವರಿದಿದೆ ಎಂದು ಸೂಚಿಸುತ್ತದೆ.

 

ದೇಶಗಳ ಆದಾಯ ಆಧಾರಿತ ವರ್ಗೀಕರಣ :


ವಿಶ್ವ ಬ್ಯಾಂಕ್ ವಿಶ್ಲೇಷಣಾತ್ಮಕ ಉದ್ದೇಶಗಳಿಗಾಗಿ ಆರ್ಥಿಕತೆಯನ್ನು ನಾಲ್ಕು ಆದಾಯ ಗುಂಪುಗಳಾಗಿ ವರ್ಗೀಕರಿಸುತ್ತದೆ: ಕಡಿಮೆ, ಕೆಳ-ಮಧ್ಯಮ, ಮೇಲಿನ-ಮಧ್ಯಮ ಮತ್ತು ಹೆಚ್ಚಿನ ಆದಾಯ. ಈ ಉದ್ದೇಶಕ್ಕಾಗಿ ಇದು ಒಟ್ಟು ದೇಶಗಳ ತಲಾ ರಾಷ್ಟ್ರೀಯ ಆದಾಯದ (GNI per capita) ವಿವರವನ್ನು ಸ್ಥಳೀಯ ಕರೆನ್ಸಿಯಿಂದ ಪರಿವರ್ತಿಸಲಾದ ಅಮೆರಿಕನ್ ಡಾಲರ್‌ (U S $) ಗಳಲ್ಲಿ ಬಳಸುತ್ತದೆ. 2024 ಆರ್ಥಿಕ ವರ್ಷದ ಮಟ್ಟಿಗೆ ತಲಾ U S $ 1,135 ಕ್ಕೂ ಕಡಿಮೆ ಇರುವ ದೇಶಗಳು ಮೊದಲ ಗು೦ಪಿಗೆ ಸೇರಿದ್ದರೆ, ಕೆಳ ಮಧ್ಯಮ-ಆದಾಯದ ಆರ್ಥಿಕತೆಗಳು ತಲಾ U S $ 1,136 ಮತ್ತುU S  $ 4,465 ನಡುವೆ GNI ಹೊಂದಿರುವವರು; ಮೇಲಿನ ಮಧ್ಯಮ-ಆದಾಯದ ಆರ್ಥಿಕತೆಗಳು U S $ 4,466 ಮತ್ತು U S $13,845 ನಡುವೆ ತಲಾ GNI ಹೊಂದಿರುವವು; ಹೆಚ್ಚಿನ ಆದಾಯದ ಆರ್ಥಿಕತೆಗಳು ತಲಾ U S  $13,846 ಅಥವಾ ಅದಕ್ಕಿಂತ ಹೆಚ್ಚಿನ GNI ಹೊಂದಿರುವ ಆರ್ಥಿಕತೆಗಳಾಗಿವೆ  


ಭಾರತವು ಕೆಳ ಮಧ್ಯಮ ಆದಾಯದ ದೇಶ


275-ಪುಟಗಳ 2024 ರ ವಿಶ್ವ ಅಭಿವೃದ್ಧಿ  ವರದಿಯು 2023 ರಲ್ಲಿ US $ 2540 ರ ತಲಾ  ಒಟ್ಟು ರಾಷ್ಟ್ರೀಯ ಆದಾಯ (Gross National Income - GNI) ಹೊಂದಿರುವ ಭಾರತವು ಕೆಳ ಮಧ್ಯಮ ಆದಾಯದ ದೇಶ (Low Middle Income Countries - LMIC) ಗಳ ಗುಂಪಿನಲ್ಲಿ ಸೇರಿಸಿದೆ. ಹೋಲಿಕೆಗಾಗಿ ಪಾಕಿಸ್ತಾನದ ಅಂಕಿ ಅಂಶವು US $ 1540 ಆಗಿದೆ, ಆದರೆ ವಿಯೆಟ್ನಾಂ ಉತ್ತಮ ಪ್ರಗತಿಯನ್ನು ಸಾಧಿಸಿ US $ 4180 ನ್ನು ತಲುಪಿದೆ. ಇವೆಲ್ಲವೂ LMIC ಗಳು.  


ಅಧಿಕ ಮಧ್ಯಮ ಆದಾಯ ದೇಶಗಳಲ್ಲಿ  (High Middle Income Countries - HMICs) ಇಂಡೋನೇಷ್ಯಾ (US $ 4870), ದಕ್ಷಿಣ ಆಫ್ರಿಕಾ (US $ 6750), ಮಲೇಷ್ಯಾ (US $ 11790), ಮತ್ತು ಚೀನಾ (US $  13400) ) ದೇಶಗಳೂ ಸೇರಿವೆ.  


ಎಲ್ಲಾ ರಾಷ್ಟ್ರಗಳಲ್ಲಿ ಅಮೆರಿಕ (ಯುನೈಟೆಡ್ ಸ್ಟೇಟ್ಸ್) ಇನ್ನೂ ವಿಶ್ವದ ಆರ್ಥಿಕ ನಾಯಕ ಎಂದು ಪರಿಗಣಿಸಲಾಗಿದೆ

ಅಮೆರಿಕ ದೇಶ (U S A) ದ ತಲಾ GNI  ಅಂಕಿ ಅಂಶವು U S $ 80,300 ಆಗಿದ್ದು, ಅದು ಇತರ ಎಲ್ಲಾ ದೇಶಗಳಿಗಿ೦ತ ಮು೦ದಿದೆ.  ಅಮೆರಿಕಕ್ಕೆ  ಸಮೀಪದಲ್ಲಿ ಬರುವ ದೇಶಗಳು ಕತಾರ್ ( U S $ 70,700), ಯುಎಇ ( U S $ 53,290),  ಮು೦ಚೂಣಿಯಲ್ಲಿದ್ದು, ಬೆಲ್ಜಿಯಂ, ಯುಕೆ (ಬ್ರಿಟ್ಟನ್) , ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ದಕ್ಷಿಣ ಕೊರಿಯಾ ಮತ್ತಿತರ ದೇಶಗಳು ಇವು ಈ ಅಧಿಕ ಉತ್ಪನ್ನದ ಗು೦ಪಿನ ಸದಸ್ಯರಾಗಿವೆ.


ವಿಶ್ವಬ್ಯಾಂಕ್ ವರ್ಗೀಕರಿಸಿದಂತೆ, ಭಾರತವೂ ಸೇರಿದ೦ತೆ 108 ದೇಶಗಳು ಮಧ್ಯಮ-ಆದಾಯದ ಅರ್ಹತೆ ಪಡೆದಿವೆ. ವಿಶ್ವದ ಜನಸಂಖ್ಯೆಯ ನಾಲ್ಕನೇ ಮೂರು ಭಾಗದಷ್ಟು ಹೊ೦ದಿರುವ ಈ 108 ಮಧ್ಯಮ-ಆದಾಯದ ದೇಶಗಳು ಜಾಗತಿಕ ಆರ್ಥಿಕ ಚಟುವಟಿಕೆಯ ಸುಮಾರು 40 ಪ್ರತಿಶತವನ್ನು ಪಡೆದಿವೆ. ಜಾಗತಿಕವಾಗಿ ಕಡು ಬಡತನದಲ್ಲಿರುವ ಪ್ರತಿ ಐದು ಜನರಲ್ಲಿ ಮೂರಕ್ಕಿಂತ ಹೆಚ್ಚು ಜನರು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮತ್ತು ಎಲ್ಲಾ ಇಂಗಾಲದ  (Carbon Dioxide emission) ಹೊರಸೂಸುವಿಕೆಗಳಲ್ಲಿ 60 ಪ್ರತಿಶತಕ್ಕಿಂತಲೂ ಹೆಚ್ಚು ಭಾಗವನ್ನು ಮಧ್ಯಮ-ಆದಾಯದ ರಾಷ್ಟ್ರಗಳು ಉತ್ಪಾದಿಸುತ್ತವೆ.   ಜಾಗತಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಈ 108  ದೇಶಗಳು ವಹಿಸುತ್ತವೆ ಮತ್ತು ಅವರು ಎದುರಿಸುತ್ತಿರುವ ತೊಂದರೆಗಳು ಜಾಗತಿಕ ಕಾಳಜಿಯ ವಸ್ತುವಾಗಿದೆ.  ಸಂಕ್ಷಿಪ್ತವಾಗಿ ಹೇಳುವುದಾದರೆ, ತೀವ್ರ ಬಡತನವನ್ನು ಕೊನೆಗೊಳಿಸುವ ಮತ್ತು ಸಮೃದ್ಧಿ ಮತ್ತುಆರೋಗ್ಯ ಮತ್ತು ಸಂತೋಷದ ಜೀವನವನ್ನು ಹರಡುವ ಜಾಗತಿಕ ಪ್ರಯತ್ನವು ಈ ದೇಶಗಳ ಸಾಧನೆಯಿ೦ದಾಗಿ  ಗೆಲ್ಲಬೇಕಾಗಿದೆ.



ಹಾಗಾದರೆ ಈ ಆರ್ಥಿಕತೆಗಳು ಯಾವ ದಿಶೆಯಲ್ಲಿ  ಹೋಗುತ್ತಿವೆ?


ವಿಶ್ವದ ಮೂರನೇ ಎರಡರಷ್ಟು ಜನರು ಒಂದು ಡಾಲರ್‌ಗಿಂತ ಕಡಿಮೆ ಹಣದಲ್ಲಿ ವಾಸಿಸುತ್ತಿದ್ದ1990 ರ ದಶಕದಿಂದ, ಅನೇಕ ದೇಶಗಳು  ಉತ್ತಮವಾಗಿ ಕಾರ್ಯನಿರ್ವಹಿಸಿ

ಕಡಿಮೆ ಆದಾಯದ ಮಟ್ಟದಿಂದ ತಪ್ಪಿಸಿಕೊಳ್ಳಲು ಮತ್ತು ತೀವ್ರ ಬಡತನನಿರ್ಮೂಲನೆ ಮಾಡಲು ಯಶಸ್ವಿಯಾದವು.. ಭಾರತವೂ ಇ೦ಥ ಒ೦ದು ಯಶಸ್ವಿ ದೇಶ, ಆದರೆ ನಮ್ಮ ಮು೦ದಿರುವ ಸವಾಲು ಇನ್ನೂ ಹೆಚ್ಚು.


 ಮಧ್ಯಮ-ಆದಾಯದ ದೇಶಗಳ ಮಹತ್ವಾಕಾಂಕ್ಷೆ ಏನ೦ದರೆ ಮುಂದಿನ ಎರಡು ಅಥವಾ ಮೂರು ದಶಕಗಳಲ್ಲಿ ಹೆಚ್ಚಿನ ಆದಾಯದ ಸ್ಥಿತಿಯನ್ನು ತಲುಪಲು. ಆದರೆ ಗಮನಾರ್ಹವಾಗಿ, ಮಧ್ಯಮ-ಆದಾಯದ ದೇಶಗಳ ಪ್ರಗತಿಯು ಇತ್ತೀಚಿನ ದಶಕಗಳಲ್ಲಿ ನಿಧಾನಗೊಂಡಿದೆ. ದೇಶಗಳು ಶ್ರೀಮಂತವಾಗಿ ಬೆಳೆಯುತ್ತಿದ್ದಂತೆ, ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೆ ವಾರ್ಷಿಕ US GDP ಯ ಸುಮಾರು 10% ರಷ್ಟು ಅ೦ದರೆ  ಇಂದು $ 8,000 ಕ್ಕೆ ಸಮನಾಗಿರುವ ಮಟ್ಟವನ್ನು ತಲುಪಿದರೆ, ಈ ದೇಶಗಳು ಮಧ್ಯಮ ಆದಾಯದ ."ಬಲೆ" ಯನ್ನು ಎದುರಿಸಿ ಮು೦ದಿನ ಅಭಿವ್ರುಧ್ಧಿಗೆ ತೊಡಕನ್ನು ಎದುರಿಸುತ್ತವೆ. ಕಳೆದ 34 ವರ್ಷಗಳಲ್ಲಿ, ಕೇವಲ 34 ಆರ್ಥಿಕತೆಗಳು ಅದರಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ. ದೀರ್ಘ ಕಾಲ ಮಧ್ಯಮ ಆದಾಯದ ಬಲೆಯಲ್ಲಿ ಸಿಲುಕಿರುವ ಕೆಲವು ದೇಶಗಳೆಂದರೆ ಟರ್ಕಿ, ಫಿಲಿಪೈನ್ಸ್, ಈಜಿಪ್ಟ್, ಅರ್ಜೆಂಟೀನಾ, ದಕ್ಷಿಣ ಆಫ಼್ರಿಕ,  ಮತ್ತು ಬ್ರೆಜಿಲ್ .



1970 ರಿಂದ, ಮಧ್ಯಮ-ಆದಾಯದ ದೇಶಗಳ ಸರಾಸರಿ ತಲಾ ಆದಾಯವು US ಮಟ್ಟದ 10 ಪ್ರತಿಶತಕವನ್ನು - ಈ ಅಂಕಿ ಸುಮಾರು US $ 8,000 ಆಗಿರುತ್ತದೆ - ಮೀರಿಲ್ಲ. 


ಅನೇಕ ದೇಶಗಳು ಮುಂದಿನ ಎರಡು ಅಥವಾ ಮೂರು ದಶಕಗಳಲ್ಲಿ ಹೆಚ್ಚಿನ ಆದಾಯದ ಸ್ಥಿತಿಯನ್ನು ತಲುಪುವ ತಮ್ಮ  ಮಹತ್ವಾಕಾಂಕ್ಷೆಯ ಗಡುವನ್ನು ನಿಗದಿಪಡಿಸಿವೆ, ಆದರೆ ಅದನ್ನು ಸಾಧಿಸುವದು ಸುಲಭವಾಗಿಲ್ಲ.  1990ರ ದಶಕದಿಂದೀಚೆಗೆ, ಕೇವಲ 34 ಮಧ್ಯಮ-ಆದಾಯದ ಆರ್ಥಿಕತೆಗಳು ಮಾತ್ರ ಆ ಸಾಧನೆಯಲ್ಲಿ ಯಶಸ್ವಿಯಾಗಿವೆ.  ಉಳಿದವರು ಇನ್ನೂ  "ಮಧ್ಯಮ ಆದಾಯದ ಬಲೆ”ಗೆ ಸಿಲುಕಿದ್ದಾರೆ. ಜಗದಾದ್ಯ೦ತ ಕೇವಲ 25 ಕೋಟಿ  ಜನರು ಕಳೆದ 30 ವರ್ಷಗಳಲ್ಲಿ  ಹೆಚ್ಚಿನ ಆದಾಯಕ್ಕೆ ಪ್ರಗತಿ ಸಾಧಿಸಿದ್ದಾರೆ. 



1990 ಮತ್ತು 2023 ರ ನಡುವೆ, ಸುಮಾರು 34 ವರ್ಷಗಳು,  ವಾಸ್ತವವಾಗಿ 34 ದೇಶಗಳು ಮಧ್ಯಮ ಆದಾಯದಿಂದ ಹೆಚ್ಚಿನ ಆದಾಯಕ್ಕೆ ಹೋದವು. ಈ ದೇಶಗಳ ಯಶಸ್ಸಿಗೆ ವಿಶೇಷ ಕಾರಣಗಳನ್ನು ಕಾಣಬಹುದು. ಕೆಲವು ಮೂಲಭೂತವಾಗಿ ಬಹಳಷ್ಟು ತೈಲ ಮತ್ತು ಅನಿಲವನ್ನು ಹೊಂದಿರುವ ದೇಶಗಳಾಗಿವೆ. ಈ ದೇಶಗಳ  ನೈಸರ್ಗಿಕ ಸಂಪನ್ಮೂಲಗಳು  ಹೆಚ್ಚಿನ ಸರಕುಗಳ ಬೆಲೆಯೊಂದಿಗೆ ಹೊಂದಿಕೆಯಾಯಿತು, ಮತ್ತು  ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವಾಯಿತು.  ಎರಡನೇ ಗುಂಪು ಯುರೋಪಿಯನ್ ಒಕ್ಕೂಟದ ನೆರೆಹೊರೆಯಲ್ಲಿರುವ ದೇಶಗಳು. ಈ ದೇಶಗಳು  ಪಾಶ್ಚಿಮಾತ್ಯ ಮಾರುಕಟ್ಟೆಗಳಿಗೆ, ಪಾಶ್ಚಿಮಾತ್ಯ ಜ್ಞಾನ ಮತ್ತು ಪಾಶ್ಚಿಮಾತ್ಯ ಹಣಕಾಸುಗಳಿಗೆ ಪ್ರವೇಶವನ್ನು ಪಡೆದವು. ಮತ್ತು  ತಮ್ಮ ಸಂಸ್ಥೆಗಳನ್ನು ಸುಧಾರಿಸಲು ಸಾಕಷ್ಟು ಒತ್ತಡವನ್ನೂ ಪಡೆದರು. ಆದ್ದರಿಂದ ಅವರ ಸಂದರ್ಭಗಳು ಸಹ ಸಾಕಷ್ಟು ವಿಶೇಷವಾಗಿವೆ. 


ಈ 34 ದೇಶಗಳಲ್ಲಿ ಬೆರಳೆಣಿಕೆಯಷ್ಟು ದೇಶಗಳು ಮಾತ್ರ  ಭಾರತದಂತಹ ಪರಿಸ್ಥಿತಿಗಳನ್ನು ಹೊಂದಿರುವ ದೇಶಗಳು - ಅ೦ದರೆ ನೈಸರ್ಗಿಕ ಸಂಪನ್ಮೂಲಗಳಲ್ಲಿ ಅನುಕೂಲತೆಯಾಗಲಿ, ಯುರೋಪಿಯನ್ ಒಕ್ಕೂಟಕ್ಕೆ ಸಾಮೀಪ್ಯವಾಗಲಿ ಇಲ್ಲದ ತೈವಾನ್, ಕೊರಿಯ  ದೇಶಗಳು. 





ಭಾರತದ ಸ್ಠಿತಿಯನ್ನು ಈ ರೀತಿ ವಿಶ್ಲೇಷಲಾಗಿದೆ:  ಇದೀಗ ಭಾರತದ ತಲಾ ಆದಾಯವು ಅಮೆರಿಕ ದೇಶದ ತಲಾ ಆದಾಯದ ಸುಮಾರು 3% ರಷ್ಟಿದೆ

ನಾವು ಹೆಚ್ಚಿನ ಆದಾಯ ಎಂದು ಕರೆಯುವ ಆದಾಯವನ್ನು ಭಾರತವು ತಲಾವಾರು ಸಾಧಿಸಿದಾಗ ಅದು ಯುನೈಟೆಡ್ ಸ್ಟೇಟ್ಸ್‌ನ ತಲಾ ಆದಾಯದ  ಐದನೇ ಒಂದು ಭಾಗಕ್ಕಿಂತ ಕಡಿಮೆ ಆಗಿರುತ್ತದೆ. 


ಸಂಕ್ಷಿಪ್ತವಾಗಿ ಹೇಳಲು  "ಸದ್ಯಕ್ಕೆ ಆರ್ಥಿಕತೆಗಳು ಕಾರ್ಯನಿರ್ವಹಿಸುತ್ತಿರುವ ರೀತಿ ನೋಡಿದರೆ,  ಅಮೆರಿಕದ ತಲಾ ಆದಾಯದ ಕಾಲುಭಾಗವನ್ನು ತಲುಪಲು ಚೀನಾಕ್ಕೆ 10 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇಂಡೋನೇಷ್ಯಾ ಸುಮಾರು 70 ವರ್ಷಗಳು ಮತ್ತು ಭಾರತಕ್ಕೆ 75 ವರ್ಷಗಳು."



ಆದಾಗ್ಯೂ ಹೆಚ್ಚಿನ ಮಧ್ಯಮ ಆದಾಯದ ದೇಶಗಳು ಹೆಚ್ಚಿನ ಆದಾಯದ ದೇಶಗಳಾಗುವ ಹೆಚ್ಚು ಸೀಮಿತ ಗುರಿಯನ್ನು ಹೊಂದಿವೆ, ಇದರರ್ಥ ಪ್ರಸ್ತುತ US $ 14000 ಸರಾಸರಿ ಆದಾಯದ ಮಟ್ಟವನ್ನು ಸಾಧಿಸುವುದು. ಇ ಗುರಿಯು ಭಾರತಕ್ಕೂ ಅನ್ವಯಿಸುತ್ತದೆ ಎ೦ದು ಬೇರೆ ಹೇಳಬೇಕಾಗಿಲ್ಲ.




ಮಧ್ಯಮ ಆದಾಯದ ಬಲೆ ಎಂದರೇನು?  ಎಲ್ಲಾ ರಾಷ್ಟ್ರಗಳ ಆರ್ಥಿಕ ಇತಿಹಾಸವನ್ನು  ಅಭ್ಯಸಿಸಿದ ನ೦ತರ ವಿಶ್ವ ಬಾಂಕ್ ಕ೦ಡದ್ದೇನ೦ದರೆ ಮಧ್ಯಮ-ಆದಾಯದ ದೇಶಗಳ ವಿಶಿಷ್ಟ ಸಂಭವಿಸುವ ಸಾಧ್ಯತೆ ಎ೦ದರೆ ಅದೇ  ಸ್ಥಿತಿಯಲ್ಲಿ ಉಳಿಯುವುದು ಮತ್ತು ಹೆಚ್ಚಿನ ಆದಾಯದ ಸ್ಥಿತಿಯನ್ನು ಸಾಧಿಸದಿರುವುದು. 


ಈ ರಾಷ್ಟ್ರಗಳ ಸಮಸ್ಯೆಯನ್ನು ವಿಶ್ವ ಬಾ೦ಕ್ ವರದಿಯಲ್ಲಿ ಈ ರೀತಿ ವಿಶ್ಲೇಷಿಸಲಾಗಿದೆ: 


ನಿಧಾನಗತಿಯ ಬೆಳವಣಿಗೆ : ಮಧ್ಯಮ-ಆದಾಯದ ದೇಶಗಳಲ್ಲಿನ ಬೆಳವಣಿಗೆಯು ಇತರ ಆದಾಯದ ಹಂತಗಳಲ್ಲಿನ ದೇಶಗಳಿಗಿಂತ ನಿಧಾನವಾಗಿದೆಯೇ? ಉತ್ತರ: ಹೌದು. ಕಡಿಮೆ ಅಥವಾ ಹೆಚ್ಚಿನ ಆದಾಯದ ದೇಶಗಳಿಗಿಂತ ಮಧ್ಯಮ-ಆದಾಯದ ದೇಶಗಳಲ್ಲಿ ಬೆಳವಣಿಗೆಯ ಕುಸಿತಗಳು ಹೆಚ್ಚಾಗಿ ಸಂಭವಿಸುತ್ತವೆ.


ಕಡಿಮೆ ಆದಾಯದ ಹಂತದಲ್ಲಿ ದೇಶಗಳಿಗೆ ಉತ್ತಮವಾಗಿ ಸೇವೆ ಸಲ್ಲಿಸಿದ ಅಭಿವೃದ್ಧಿ ಕಾರ್ಯತಂತ್ರಗಳು - ಬಂಡವಾಳ ಹೂಡಿಕೆ, ನಿರ್ದಿಷ್ಟವಾಗಿ - ಪ್ರಸ್ತುತದಲ್ಲಿ ಇದರಿ೦ದ ದೊರಕುವ ಇಳುವರಿ ಕಡಿಮೆಯಾಗುತ್ತಿದೆ.


ದುರ್ಬಲ ಸಂಸ್ಥೆಗಳನ್ನು ಹೊಂದಿರುವ ದೇಶಗಳು - ಮತ್ತು ವಿಶೇಷವಾಗಿ ಕಡಿಮೆ ಮಟ್ಟದ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಹೊಂದಿರುವ ದೇಶಗಳು - ಇನ್ನೂ ಕಡಿಮೆ ಮಟ್ಟದ ಆದಾಯದಲ್ಲಿ ನಿಧಾನಗತಿಗೆ ಒಳಗಾಗುತ್ತವೆ.


ರಚನಾತ್ಮಕ ನಿಶ್ಚಲತೆ: ಮಧ್ಯಮ-ಆದಾಯದ ದೇಶಗಳಲ್ಲಿನ ಬೆಳವಣಿಗೆಯು ಇತರ ಆದಾಯದ ಹಂತಗಳಲ್ಲಿನ ದೇಶಗಳಿಗಿಂತ ಭಿನ್ನವಾಗಿದೆಯೇ? ವರದಿ ಹೇಳುತ್ತದೆ, ಹೌದು. ಯಶಸ್ವಿ ಮಧ್ಯಮ-ಆದಾಯದ ದೇಶಗಳು ಆರ್ಥಿಕ ರಚನೆಗಳನ್ನು ಅಭಿವೃದ್ಧಿಪಡಿಸಲು ಎರಡು ಸತತ ಪರಿವರ್ತನೆಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ, ಅದು ಅಂತಿಮವಾಗಿ ಹೆಚ್ಚಿನ ಆದಾಯದ ಮಟ್ಟವನ್ನು ಉಳಿಸಿಕೊಳ್ಳುತ್ತದೆ. • ಮೊದಲ ಸ್ಥಿತ್ಯಂತರವು ಹೂಡಿಕೆಯನ್ನು ವೇಗಗೊಳಿಸುವ ಕಾರ್ಯತಂತ್ರದಿಂದ ಹೂಡಿಕೆ ಮತ್ತು ಒಳಹರಿವು ಎರಡನ್ನೂ ಕೇಂದ್ರೀಕರಿಸುವ ತಂತ್ರವಾಗಿದೆ, ಇದರಲ್ಲಿ ಒಂದು ದೇಶವು ವಿದೇಶದಿಂದ ತಂತ್ರಜ್ಞಾನಗಳನ್ನು ತರುತ್ತದೆ ಮತ್ತು ಅವುಗಳನ್ನು ದೇಶೀಯವಾಗಿ ಹರಡುತ್ತದೆ-ಈ ಪ್ರಕ್ರಿಯೆಯು ಕಡಿಮೆ-ಮಧ್ಯಮ-ಆದಾಯದ ದೇಶಗಳಿಗೆ ವ್ಯಾಪಕವಾಗಿ ಅನ್ವಯಿಸುತ್ತದೆ. ಎರಡನೆಯ ಸ್ಥಿತ್ಯಂತರವು ಕಾರ್ಯತಂತ್ರಕ್ಕೆ ಬದಲಾಯಿಸುವುದು, ಇದು ನಾವೀನ್ಯತೆಗೆ ಹೆಚ್ಚಿನ ಗಮನವನ್ನು ನೀಡುತ್ತದೆ-ಈ ಪ್ರಕ್ರಿಯೆಯು ಉನ್ನತ-ಮಧ್ಯಮ-ಆದಾಯದ ದೇಶಗಳಿಗೆ ಹೆಚ್ಚು ಅನ್ವಯಿಸುತ್ತದೆ.


ಕುಗ್ಗುತ್ತಿರುವ ಸ್ಥಳಗಳು : ಮಧ್ಯಮ-ಆದಾಯದ ದೇಶಗಳಲ್ಲಿ ಬೆಳವಣಿಗೆ ಸಾಧಿಸುವುದು ಈಗ ಹೆಚ್ಚು ಕಷ್ಟವೇ? •ಹೌದು, ಎ೦ದು  ವರದಿ ಹೇಳುತ್ತದೆ. ವಿದೇಶಿ ವ್ಯಾಪಾರ ಮತ್ತು ಹೂಡಿಕೆಯು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಸಂಕುಚಿತಗೊಳ್ಳುವ ಅಪಾಯದಲ್ಲಿದೆ ಮತ್ತು ಜನಪರತೆಯು ಸರ್ಕಾರಗಳು ಕಾರ್ಯನಿರ್ವಹಿಸಲು ಅವಕಾಶವನ್ನು ಕುಗ್ಗಿಸುತ್ತಿದೆ. •ಏರುತ್ತಿರುವ ಸಾಲ ಮತ್ತು ಪ್ರತಿಕೂಲ ಜನಸಂಖ್ಯಾಶಾಸ್ತ್ರಗಳು ಖಾಸಗಿ ಹೂಡಿಕೆದಾರರನ್ನು ಹೊರಗಿಡುತ್ತಿವೆ ಮತ್ತು ಸಾರ್ವಜನಿಕ ಹೂಡಿಕೆಯನ್ನು ಕಡಿಮೆ ಮಾಡುತ್ತಿವೆ. • ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಮೂಲಸೌಕರ್ಯ ಮತ್ತು ನಿಯಂತ್ರಕ ಸುಧಾರಣೆಗಳಲ್ಲಿ ದೊಡ್ಡ ಹೂಡಿಕೆಗಳ ಅಗತ್ಯವಿರುತ್ತದೆ ಅದು ಉತ್ಪಾದಕತೆಯನ್ನು ಸ್ಥಗಿತಗೊಳಿಸಬಹುದು


ವಿಶ್ವ ಬಾಂಕ್ ಸಲಹೆ :


ತಮ್ಮ ಅಭಿವೃದ್ಧಿಯ ಹಂತವನ್ನು ಅವಲಂಬಿಸಿ, ದೇಶಗಳು ಅನುಕ್ರಮ ಮತ್ತು ಹಂತಹಂತವಾಗಿ ಹೆಚ್ಚು ಅತ್ಯಾಧುನಿಕ ನೀತಿಗಳ ಮಿಶ್ರಣವನ್ನು ಅಳವಡಿಸಿಕೊಳ್ಳಬೇಕು:


ಕಡಿಮೆ ಆದಾಯದ ದೇಶಗಳು ತಮ್ಮ ಅರ್ಥಿಕತೆಯ ವಿಷಯದಲ್ಲಿ  ಹೂಡಿಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ನೀತಿಗಳ ಮೇಲೆ ಮಾತ್ರ ಗಮನಹರಿಸಬಹುದು


ಕೆಳ-ಮಧ್ಯಮ-ಆದಾಯದ ದೇಶಗಳು ನೀತಿ-ರೀತಿಗಳನ್ನು ಬದಲಾಯಿಸಬೇಕು. ಇ ದೇಶಗಳು  ಹೂಡಿಕೆಯನ್ನು ವಿಸ್ತರಿಸಬೇಕು, ಅಲ್ಲದೆ  ಮುಂದುವರಿದ ದೇಶಗಳಿಂದ ಈಗಾಗಲೇ ಸಾಬೀತಾಗಿರುವ ತಂತ್ರಜ್ಞಾನಗಳ ಒಳಹರಿವನ್ನು ಸುಗಮಗೊಳಿಸ ಬೇಕು.


ಉನ್ನತ-ಮಧ್ಯಮ-ಆದಾಯದ ದೇಶಗಳು ಮತ್ತೊಮ್ಮೆ  ಬದಲಾಯಿಸಬೇಕಾಗಿದೆ . ಹೂಡಿಕೆ ತಂತ್ರಜ್ಞಾನಗಳ ಒಳಹರಿವಿಕೆಗಳೊ೦ದಿಗೆ ತಮ್ಮ ಪರಿಸರಕ್ಕೆ ಸೇರಿದ೦ತೆ ನಾವೀನ್ಯತೆಯನ್ನು ಬುಧ್ಧಿವ೦ತಿಕೆಯಿ೦ದ ಅಳವಡಿಸಿಕೊಳ್ಳ ಬೇಕು.


ಯಶಸ್ವಿ ದೇಶಗಳ ಉದಾಹರಣೆಗಳು


3 ಹಂತದ ಕಾರ್ಯತಂತ್ರದ ಎಲ್ಲಾ ಮೂರು ಹಂತಗಳಲ್ಲಿ ದಕ್ಷಿಣ ಕೊರಿಯಾ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ವರದಿ ಹೇಳುತ್ತದೆ. 1960 ರಲ್ಲಿ, ಅದರ ತಲಾ ಆದಾಯ ಕೇವಲ $1,200 ಇತ್ತು. 2023 ರ ಅಂತ್ಯದ ವೇಳೆಗೆ, ಆ ಸಂಖ್ಯೆಯು $ 33,000 ಕ್ಕೆ ಏರಿತು. ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಲು ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ದಕ್ಷಿಣ ಕೊರಿಯಾ ಸರಳವಾದ ನೀತಿ ಮಿಶ್ರಣದೊಂದಿಗೆ ಪ್ರಾರಂಭವಾಯಿತು. ಇದು 1970 ರ ದಶಕದಲ್ಲಿ ಕೈಗಾರಿಕಾ ನೀತಿಗೆ ರೂಪುಗೊಂಡಿತು, ಇದು ವಿದೇಶಿ ತಂತ್ರಜ್ಞಾನ ಮತ್ತು ಹೆಚ್ಚು ಅತ್ಯಾಧುನಿಕ ಉತ್ಪಾದನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ದೇಶೀಯ ಸಂಸ್ಥೆಗಳನ್ನು ಉತ್ತೇಜಿಸಿತು.


ತೈವಾನ್, ಪೋಲೆಂಡ್ ಮತ್ತು ಚಿಲಿ ಸೇರಿದಂತೆ ಇತರ ದೇಶಗಳು ಇದೇ ಮಾರ್ಗಗಳನ್ನು ಅನುಸರಿಸಿದವು. ಪಾಶ್ಚಿಮಾತ್ಯ ಯುರೋಪ್‌ನಿಂದ ತುಂಬಿದ ತಂತ್ರಜ್ಞಾನಗಳೊಂದಿಗೆ ಉತ್ಪಾದಕತೆಯನ್ನು ಹೆಚ್ಚಿಸುವುದರ ಮೇಲೆ ಪೋಲೆಂಡ್ ಗಮನಹರಿಸಿತು. ಚಿಲಿ ವಿದೇಶದಿಂದ ತಂತ್ರಜ್ಞಾನ ವರ್ಗಾವಣೆಯನ್ನು ಪ್ರೋತ್ಸಾಹಿಸಿತು-ಮತ್ತು ದೇಶೀಯ ನಾವೀನ್ಯತೆಯನ್ನು ಹೆಚ್ಚಿಸಲು ಅದನ್ನು ಬಳಸಿತು.


Part II will follow.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು