ಪುಸ್ತಕ ವಿಮರ್ಶೆ:

 

ನೀಲಕಂಠನ್ ಆರ್‌ಎಸ್: South vs North: The Great Divide ‘ಉತ್ತರದ ವಿರುಧ್ಧ ದಕ್ಷಿಣ:ವಿಸ್ತಾರ ವಿಭಾಗ’ . ಒ೦ದೇ ಬುಟ್ಟಿ. ಬೇರೆ ಬೇರೆ ಫಲಗಳು

 

 

ವಿಮರ್ಶಕರು : ವೆಂಕಟರಾಘವನ್ ಶ್ರೀನಿವಾಸನ್

 

ದಿ ಹಿ೦ದು  ೨೮ ಅಕ್ಟೋಬರ್ ೨೦೨೨

ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಮೊದಲ ಭಾಗವು ಆರೋಗ್ಯ, ಶಿಕ್ಷಣ ಮತ್ತು ಅ   ದಿ ಹಿ೦ದು ಭಿವೃದ್ಧಿಯ ಮಾನದಂಡಗಳ ವಿಷಯದಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ತೆಗೆದುಕೊಳ್ಳುತ್ತದೆ. ಆರ್ಥಿಕ ನಿರೀಕ್ಷೆಗಳು.

ಎಲ್ಲಾ ಸೂಚ್ಯಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ದಕ್ಷಿಣದ ರಾಜ್ಯಗಳಿಗೆ ಪ್ರತಿಫಲ ನೀಡಲು ಈಗಿರುವುದಕ್ಕಿ೦ತ  ಉತ್ತಮ ಮಾರ್ಗವಿರಬೇಕು, ಎ೦ದು ವಾದಿಸುತ್ತಾರೆ ನೀಲಕ೦ಟನ್ ಹೊಸ ಪುಸ್ತಕದಲ್ಲಿ

ದಕ್ಷಿಣದ ರಾಜ್ಯಗಳು ಉತ್ತರಕ್ಕಿಂತ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ? ಇದು  ದತ್ತಾಂಶ ವಿಜ್ಞಾನಿ ನೀಲಕಂಠನ್ ಆರ್‌ಎಸ್ ಅವರು ತಮ್ಮ ಹೊಸ ಪುಸ್ತಕ  ಸೌತ್ ವರ್ಸಸ್ ನಾರ್ತ್: ಇಂಡಿಯಾಸ್ ಗ್ರೇಟ್ ಡಿವೈಡ್ ನಲ್ಲಿ ಪರಿಶೀಲಿಸುವ ಪ್ರಶ್ನೆ.  ಸ್ವಾತಂತ್ರ್ಯದ ಸಮಯದಲ್ಲಿ,  ದಕ್ಷಿಣದ ರಾಜ್ಯಗಳು ತಮ್ಮ ಅಭಿವೃದ್ಧಿಯ ಅಳತೆಗಳಲ್ಲಿ   ಭಾರತದ ಉಳಿದ ಭಾಗಗಳಿಂದ ಬೇರೆಯಾಗಿದ್ದಿಲ್ಲ. ಇಂದು, ವ್ಯತ್ಯಾಸವು ಸ್ಪಷ್ಟ ಮತ್ತು ಗಮನಾರ್ಹ.

ದತ್ತಾಂಶ, ಅಂಕಿಅಂಶಗಳು, ಸಂಶೋಧನೆ ಮತ್ತು ವರದಿಯ ಬೆಂಬಲದೊಂದಿಗೆ, ಯಾವದೇ ರಾಜ್ಯವು ಹೊಂದಬಹುದಾದ ಪ್ರಮುಖ ಆರ್ಥಿಕ ಸಂಪನ್ಮೂಲದಿಂದ - ಅದರ ಜನರು - ಪ್ರಾರಂಭಿಸಿ ಅವರು ಸಂಭವನೀಯ ಕಾರಣಗಳನ್ನು ಒದಗಿಸುತ್ತಾರೆ,. "ಸಮಂಜಸವಾಗಿ ಉತ್ತಮವಾಗಿ ನಡೆಯುವ ಸರ್ಕಾರದೊಂದಿಗೆ ಆರೋಗ್ಯಕರ ಮತ್ತು ಸುಶಿಕ್ಷಿತ ಜನಸಂಖ್ಯೆಯು ಉತ್ತಮ ಆರ್ಥಿಕ ಭವಿಷ್ಯವನ್ನು ಹೊಂದುವ ಸಾಧ್ಯತೆಯಿದೆ. ದಕ್ಷಿಣ ಭಾರತದಲ್ಲಿ ಆದಾಯದ ಮಟ್ಟಗಳು ಮತ್ತು ಉದ್ಯೋಗದ ನಿರೀಕ್ಷೆಗಳು ಉತ್ತರಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿವೆ ಎನ್ನುವದು ಆಶ್ಚರ್ಯವಲ್ಲ.”

ಆದರೆ ಈ ಯಶಸ್ಸು ಉತ್ತಮ ಪ್ರದರ್ಶನ ನೀಡುತ್ತಿರುವ ದಕ್ಷಿಣ ರಾಜ್ಯಗಳನ್ನು ಒತ್ತಡಕ್ಕೆ ಸಿಲುಕಿಸಬಹುದು. ಹೆಚ್ಚುತ್ತಿರುವ ಕೇಂದ್ರೀಕೃತ ನೀತಿ-ನಿರ್ಮಾಣವು ಕಾಳಜಿಯ ಒಂದು ಕ್ಷೇತ್ರವಾಗಿದ್ದರೆ, ದಕ್ಷಿಣದ ಜನಸಂಖ್ಯೆಯ ಬೆಳವಣಿಗೆಯ ಉತ್ತಮ ನಿರ್ವಹಣೆಯು ಅದರ ಅನನುಕೂಲತೆಗೆ ಕೆಲಸ ಮಾಡುತ್ತಿದೆ ಎಂದು ಅವರು ವಾದಿಸುತ್ತಾರೆ. “ಭಾರತೀಯ ಒಕ್ಕೂಟದ ಸಂಪನ್ಮೂಲ ಹಂಚಿಕೆಯು ಉತ್ತರದ ಕಡೆಗೆ ಹೆಚ್ಚು ಒಲವು ತೋರುತ್ತದೆ ಮತ್ತು ದಕ್ಷಿಣದ ವಿರುದ್ಧ ಪರಿಣಾಮ  ಮಾಡುತ್ತದೆ. ದಕ್ಷಿಣಕ್ಕೆ ಸಮಗ್ರವಾಗಿ  ಮತ್ತು ತಲಾವಾರು ಆಧಾರದ ಮೇಲೆ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ, ಆದರೆ ಅದರ ಜನಸಂಖ್ಯೆಯ ಬೆಳವಣಿಗೆಯು ಕಡಿಮೆ ಇರುವ ಕಾರಣಕ್ಕೆ ಪ್ರತಿಯಾಗಿ ಕಡಿಮೆ ಹಂಚಿಕೆಯನ್ನು ಪಡೆಯುತ್ತದೆ.”

'ಒಂದು ಗಾತ್ರದ ಉಡುಪು ಎಲ್ಲರಿಗೂ ಸರಿಹೊಂದುವುದಿಲ್ಲ'

ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಮೊದಲ ಭಾಗವು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ನಿರೀಕ್ಷೆಗಳಂತಹ ಅಭಿವೃದ್ಧಿ ಮಾಪನಗಳ ವಿಷಯದಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ಪರಿಶೀಲಿಸುತ್ತದೆ .  ಉತ್ತಮ ಆಡಳಿತ ಸೂಚ್ಯಂಕ (Good Governance Index) ಅಥವಾ ನೀತಿ ಆಯೋಗದ  ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs)  ಮಾಡುವ ವಿಧಾನದಂತಹ ಹಲವಾರು ಸರ್ಕಾರಿ ವರದಿಗಳ ವಿಧಾನ ಮತ್ತು ದತ್ತಾ೦ಶಗಳನ್ನು ಅವರು ಟೀಕಿಸಿದ್ದಾರೆ. "ಈ ವರದಿಗಳಲ್ಲಿ ರಾಜ್ಯಗಳನ್ನು ಹೋಲಿಸುವ ಉದ್ದೇಶವು  ತತ್ಕಾಲ ಆಡಳಿತ ನಡೆಸುತ್ತಿರುವ  ರಾಜ್ಯ ಸರ್ಕಾರಗಳ ಕಾರ್ಯ ನಿರ್ವಹಣೆಯ ಶ್ರೇಣಿಯನ್ನು ನಿಗದಿ  ಮಾಡುವುದು, ಮತ್ತು ಹೀಗೆ ಮಾಡುವಾಗ ಒಕ್ಕೂಟದ [ಸರ್ಕಾರದ] ನೀತಿಯ ವಿಶೇಷಾಧಿಕಾರಗಳನ್ನು ಆಧರಿಸುವದು  ಎಂದು ತೋರುತ್ತದೆ."

ಎರಡನೆಯ ವಿಭಾಗವು ಅಂತಹ ವ್ಯತ್ಯಾಸದ  ಪರಿಣಾಮಗಳೊಂದಿಗೆ ವ್ಯವಹರಿಸುತ್ತದೆ, ಮೊದಲನೆಯದಾಗಿ ರಾಜ್ಯಗಳ ಕಾರ್ಯಕ್ಷಮತೆ ಮತ್ತು ಕೆಲವು "ಅಸಂಬದ್ಧ ಶ್ರೇಯಾಂಕಗಳು". ಕೊನೆಯ ಭಾಗದಲ್ಲಿ, ನೀಲಕಂಠನ್ "ಹಿಂಸಾಚಾರ ಮತ್ತು ಬಾಲ್ಕನೀಕರಣ (ಪ್ರದೇಶ ಗುರುತುಗಳ ತಳಹದಿಯ ಮೇಲೆ ದೇಶದ ವಿಭಜನೆ ) ಬೆದರಿಕೆಗಳನ್ನು ತಪ್ಪಿಸಲು ಮತ್ತು ಭಾರತ ಎದುರಿಸುತ್ತಿರುವ ಕಷ್ಟಕರವಾದ ಸಂಪನ್ಮೂಲ ಹಂಚಿಕೆ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲು" ಸಂಭವನೀಯ ಪರಿಹಾರಗಳನ್ನು ನೀಡುತ್ತದೆ. ಲೇಖಕರು ದತ್ತಾಂಶ-ಚಾಲಿತ ಉದಾಹರಣೆಗಳೊಂದಿಗೆ, ಕೇಂದ್ರದ ಸರ್ಕಾರವು ನಡೆಸುತ್ತಿರುವ "ಒಂದೇ ಗಾತ್ರದ ಉಡುಪು  ಎಲ್ಲರಿಗೂ ಸರಿಹೊಂದುತ್ತದೆ" ನೀತಿಯ ತರ್ಕದ ವಿರುದ್ಧ  ಬಲವಾದ ವಾದವನ್ನು ಮಾಡುತ್ತಾರೆ. ಭಾರತದಾದ್ಯಂತ ನೀತಿ-ನಿರೂಪಕರಿಗೆ ಒಂದು ಪ್ರಮುಖ ಪಾಠ ಇದ್ದರೆ, ಅದು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು; ಮತ್ತು ಹಲವಾರು ದಕ್ಷಿಣ ರಾಜ್ಯಗಳು ಮಾಡಿದಂತೆ ಅವರಿಗೆ ಪೌಷ್ಟಿಕಾಂಶದ ಊಟ ಮತ್ತು ಮುಟ್ಟಿನ ನೈರ್ಮಲ್ಯದ  ಸೌಕರ್ಯ ನೀಡುವ ಮೂಲಕ ಅವರು ಹೊರಗುಳಿಯದಂತೆ ಸರ್ಕಾರವು ಖಚಿತಪಡಿಸಿಕೊಳ್ಳಬೇಕು.

ಕೇಂದ್ರೀಕೃತ ನೀತಿ, ರಾಜ್ಯ-ಚಾಲಿತ ನೀತಿಗಳಿಗೆ ವಿರುದ್ಧವಾಗಿ, ಚುನಾವಣೆಗಳು ಹತ್ತಿರಬರುತ್ತಿರುವಾಗ   "ರಾಜಕೀಯ ಮೇಲುಗೈತನ " ಹೊರತುಪಡಿಸಿ ಯಾವುದೇ ನೈಜ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಅವರು ವಾದಿಸುತ್ತಾರೆ.

ಆರ್ಥಿಕತೆಯ ಅಧ್ಯಾಯವು ಐತಿಹಾಸಿಕವಾಗಿ ಮರೆಮಾಚುವ ನಿರುದ್ಯೋಗಕ್ಕೆ ಕಾರಣವಾದ ಕೃಷಿಯತ್ತ ಭಾರತದ ಉತ್ತೇಜನಗಳ ಅಂಶದೊಂದಿಗೆ ವ್ಯವಹರಿಸುತ್ತದೆ. ಹವಾಮಾನ ಬದಲಾವಣೆಯ ರೂಪದಲ್ಲಿ ಮಾನವರು ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಈ ವಲಯದ ನೀತಿ ವಿಧಾನವನ್ನು ಮರುಪರಿಶೀಲಿಸಬೇಕಾಗಿದೆ ಎಂದು ನೀಲಕಂಠನ್ ಹೇಳುತ್ತಾರೆ.

ಚುನಾವಣಾ ಪ್ರಜಾಪ್ರಭುತ್ವದ ತಳಹದಿಯಾಗಿ  ಕುದುರೆ ಓಟದ ಪಂದ್ಯಕ್ಕೆ ಸರಿಹೋಗುವ ‘First-Past-The-Post’ ‘ಗೆಲ್ಲುಕಂಬ ಮೊದಲು ತಲುಪುವವನೊಬ್ಬನೇ ಜಯಶಾಲಿ’  ಫಲಿತಾ೦ಶದ  ಪದ್ಧತಿಯ ವೈಫಲ್ಯಗಳನ್ನು ಲೇಖಕರು ಗಮನಿಸುತ್ತಾರೆ. ರಾಜಕೀಯ ವಿಜ್ಞಾನಿಗಳು 'ಕ್ಯೂಬ್ ಕಾನೂನಿನ ದಬ್ಬಾಳಿಕೆ' ಎಂದು ಕರೆಯುವ ಈ ಪಧ್ಧತಿ ಪ್ರಜಾಪ್ರಭುತ್ವಗಳಿಗೆ ಅರ್ಥಪೂರ್ಣವೇ  ?  ಈ ಪಧ್ಧತಿಯಡಿಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ಪಕ್ಷವು ಅತಿಯಾಗಿ ಅನುಪಾತ ಮೀರಿ ಪ್ರತಿನಿಧಿಸುವ ಹಕ್ಕನ್ನು ಪಡೆಯುತದೆ ಎಂದು ಈ ನಿಯಮವು ಸೂಚಿಸುತ್ತದೆ. (ಮತ್ತು ಪ್ರತಿಯಾಗಿ, ಕಡಿಮೆ ಮತಗಳನ್ನು ಪಡೆಯುವ ಪಕ್ಷವು ಅನುಪಾತಕ್ಕಿ೦ತ ಅತಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದುತ್ತದೆ.) ಅಥೆನಿಯನ್ ಪ್ರಜಾಪ್ರಭುತ್ವದ ಕಲಿಕೆಯಿಂದ ಸಂಗ್ರಹಿಸಿದ ವಾದಗಳೊಂದಿಗೆ ಅವರು ವಿಶ್ಲೇಷಣಾತ್ಮಕವಾಗಿ ವಾದವನ್ನು ಮಂಡಿಸುತ್ತಾರೆ. ಭಾರತದಂತಹ ದೊಡ್ಡ, ಸಂಕೀರ್ಣ ಮತ್ತು ವೈವಿಧ್ಯಮಯ ದೇಶದ  ಜನ್ಮವನ್ನು ಅವರು  ಐತಿಹಾಸಿಕ ಅಪಘಾತವೆನ್ನುತ್ತಾರೆ. ಇ೦ಥ ದೇಶವನ್ನು   ಆಳುವ ಪರಿಶ್ರಮದಲ್ಲಿ ಏಕೀಕೃತ ಶಕ್ತಿ ರಚನೆಯು ಒಂದು ಉತ್ತಮ ವಿಧಾನವಲ್ಲ.  

ಒಂದು ಸಮಾಜವಾಗಿ, ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಶಿಕ್ಷಣ, ಆರ್ಥಿಕತೆ ಮತ್ತು ಆರೋಗ್ಯದ ಎಲ್ಲಾ ರಂಗಗಳಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಮಹಿಳೆಯರು ಆರ್ಥಿಕತೆಯ ವಿಷಯಗಳಲ್ಲಿ ಭಾಗವಹಿಸಿದರೆ ಮತ್ತು ಅವರು ಉತ್ಪಾದನಾ ಸ್ವತ್ತುಗಳ ಮೇಲೆ ಮಾಲೀಕತ್ವ ಮತ್ತು ನಿಯಂತ್ರಣವನ್ನು ತೆಗೆದುಕೊಂಡರೆ, ಅದು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ, ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ ಎಂದು ಅವರು ಸೂಚಿಸುತ್ತಾರೆ.

South vs North: The Great Divide; Nilakantan R.S., Juggernaut, ₹599.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು