2014 ರಿಂದಲೂ ಜಾರಿಬೀಳುತ್ತಿದೆ
ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 165 ರಾಷ್ಟ್ರಗಳಲ್ಲಿ ಭಾರತವು 119 ನೇ ಸ್ಥಾನದಲ್ಲಿದೆ,
ಅಮೆರಿಕ ಮತ್ತು ಕೆನಡಾ ದೇಶಗಳಲಿರುವ ಎರಡು ‘ಥಿಂಕ್ ಟ್ಯಾಂಕ್’ಗಳ (ವೈಚಾರಿಕ ಸ೦ಸ್ಠೆಗಳ) ವರದಿ
ಅಮೆರಿಕಾದ ಕ್ಯಾಟೊ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾದ ಫ್ರೇಸರ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ಮಾನವ ಸ್ವಾತಂತ್ರ್ಯ ಸೂಚ್ಯಂಕ, 2008 ರಿಂದ 2019 ರವರೆಗೆ ದೇಶಗಳನ್ನು ಅಳತೆ ಮಾಡಲು 82 ಸೂಚಕಗಳನ್ನು ಬಳಸಿದೆ.
NIKHIL RAMPAL 18 ಡಿಸೆಂಬರ್, 2021 ದಿ ಪ್ರಿಂಟ್
ಹೊಸದಿಲ್ಲಿ: ಆರ್ಥಿಕ, ವೈಯಕ್ತಿಕ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿವಿಧ ಸೂಚಕಗಳಲ್ಲಿ ಭಾರತದ ಸಾಧನೆಯು 2013 ಮತ್ತು 2019 ರ ನಡುವೆ ನಿರಂತರ ಕುಸಿತದಲ್ಲಿದೆ ಎಂದು ಗುರುವಾರ 16-12-2021 ರ೦ದು ಬಿಡುಗಡೆ ಮಾಡಿದ ಈ ವರ್ಷದ ಮಾನವ ಸ್ವಾತಂತ್ರ್ಯ ಸೂಚ್ಯಂಕ ವರದಿಯು ಹೇಳಿದೆ. 2019 ರ ವಿವರಗಳ ಆಧಾರದ ಮೇಲೆ, ಭಾರತವು 165 ದೇಶಗಳಲ್ಲಿ 119 ನೇ ಸ್ಥಾನದಲ್ಲಿದೆ. ಇದು 2013ರಲ್ಲಿ 157 ದೇಶಗಳ ಮಧ್ಯೆ 90 ನೇ ಸ್ಥಾನದಲ್ಲಿತ್ತು. 2013 ರಿಂದಈಚೆಗೆ "ವೈಯಕ್ತಿಕ ಸ್ವಾತಂತ್ರ್ಯ" ಕ್ಕಾಗಿ ಭಾರತದ ಶ್ರೇಯಾಂಕವು ಕುಸಿದಿದ್ದರೂ, ಆ ಅವಧಿಯಲ್ಲಿ "ಆರ್ಥಿಕ ಸ್ವಾತಂತ್ರ್ಯ" ದ ಮೇಲೆ ಅದರ ಕಾರ್ಯಕ್ಷಮತೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ವಿವರಗಳು ತೋರಿಸಿವೆ.
2021 ರ ವರದಿ ಈ ಎರಡು ‘ಥಿಂಕ್ ಟ್ಯಾಂಕ್’ ಸ೦ಸ್ಥೆಗಳಿಂದ ಜ೦ಟಿಯಾಗಿ ಪ್ರಕಟಿಸಲಾಗಿದೆ . ಯುಎಸ್‌ಎ ದೇಶದ ಕ್ಯಾಟೊ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾ ದೇಶದ ಫ್ರೇಸರ್ ಇನ್‌ಸ್ಟಿಟ್ಯೂಟ್ 2008 ರಿಂದ 2019 ರವರೆಗೆ ದೇಶಗಳನ್ನು ಅಳತೆ ಮಾಡಲು 82 ಸೂಚಕಗಳನ್ನು ಬಳಸಿದೆ. ಇದು ಅಂತರರಾಷ್ಟ್ರೀಯವಾಗಿ ಹೋಲಿಸಬಹುದಾದ ಇತ್ತೀಚಿನ ವರ್ಷವಾಗಿದೆ.
ಭಾರತದ ಶ್ರೇಯಾಂಕವು ಅದರ ನೆರೆಯ ಚೀನಾ (150), ಪಾಕಿಸ್ತಾನ (145), ಮತ್ತು ಬಾಂಗ್ಲಾದೇಶ (142) ಗಳಿಗಿಂತ ಉತ್ತಮವಾಗಿದೆ, ಆದರೆ ಅದು ನೇಪಾಳ (84), ಭೂತಾನ್ (98), ಮತ್ತು ಶ್ರೀಲಂಕಾ (112) ಗಿಂತ ಕೆಟ್ಟದಾಗಿದೆ.
ವರದಿಯ ಪ್ರಕಾರ, ಪ್ರಪಂಚದ ಶೇಕಡಾ 83 ರಷ್ಟು ಜನರು 2008 ಮತ್ತು 2019 ರ ನಡುವೆ ಸ್ವಾತಂತ್ರ್ಯದ ಕುಸಿತವನ್ನು ಕಂಡಿದ್ದಾರೆ, ಇದು ಕೋವಿಡ್ -19 ಸಾಂಕ್ರಾಮಿಕ ಮತ್ತು ಸಂಬಂಧಿತ ನಿರ್ಬಂಧಗಳಿಗೆ ಮುಂಚಿನ "ಗೊಂದಲಕಾರಿ ಪ್ರವೃತ್ತಿಯನ್ನು" ಪ್ರತಿನಿಧಿಸುತ್ತದೆ.
ವರದಿಯ ದತ್ತಾಂಶವು ಪ್ರಪಂಚದಾದ್ಯಂತ ಅತ್ಯಂತ ದೊಡ್ಡ ಕುಸಿತಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮದ ಸ್ವಾತಂತ್ರ್ಯ ಮತ್ತು ಸಂಘಟನಾ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತ೦ತ್ರ್ಯ, ಮತ್ತು ನಾಗರಿಕ ಸಮಾಜ ಕಾರ್ಯದ ಕ್ಷೇತ್ರಗಳಲ್ಲಿವೆ ಎಂದು ತೋರಿಸುತ್ತದೆ. "ಭವಿಷ್ಯದ ವರದಿಗಳಲ್ಲಿ ಜಾಗತಿಕ ಸ್ವಾತಂತ್ರ್ಯ ಸೂಚಕಗಳಲ್ಲಿ ಕ್ಷೀಣತೆಯನ್ನು ನಾವು ಸಮಗ್ರವಾಗಿ ನಿರೀಕ್ಷಿಸುತ್ತೇವೆ" ಎಂದು ವರದಿ ಹೇಳಿದೆ.
ಉನ್ನತ ಮಟ್ಟದ ಸ್ವಾತಂತ್ರ್ಯವು ಸಮೃದ್ಧಿ ಮತ್ತು ಯೋಗಕ್ಷೇಮದೊಂದಿಗೆ ಸಂಬಂಧಿಸಿದೆ ಎಂದು ವರದಿ ಹೇಳುತ್ತಿದೆ. ಅಗ್ರ ಚತುರ್ಥಾ೦ಶದಲ್ಲಿರುವ ದೇಶಗಳು, ಕೆಳಗಿನ ೨೫%ನಲ್ಲಿರುವವರಿಗಿ೦ತ ಪ್ರತಿ ವ್ಯಕ್ತಿಗೆ ಹೆಚ್ಚಿನ ಆದಾಯವನ್ನು ಹೊಂದಿವೆ ಎಂದು ವರದಿ ಹೇಳಿದೆ. ($48,748 ಅಥವಾ ಅಂದಾಜು ರೂ. 37 ಲಕ್ಷ ಕ್ಕೆ ಹೋಲಿಸಿದರೆ $11,259 ಅಥವಾ ಅಂದಾಜು ರೂ. 8.6 ಲಕ್ಷ)
ಭಾರತದ ಕಥೆ - ಏನು ಬದಲಾಗಿದೆ?
2008 ಮತ್ತು 2013 ರ ನಡುವೆ, ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು ವಿಶ್ವದ ಅಗ್ರ 90 ದೇಶಗಳಲ್ಲಿ ಸ್ಥಾನ ಪಡೆದಿತ್ತು.
ಅದರ ಶ್ರೇಯಾಂಕವು 2013 ರಲ್ಲಿ 90 ಆಗಿತ್ತು, ಆದರೆ ಭಾರತದ ಶ್ರೇಯಾಂಕವು ಕುಸಿಯುತ್ತ 2014 ರಲ್ಲಿ 106, 2018 ರಲ್ಲಿ 114 ಆಗಿತ್ತು ಮತ್ತು ಇದು 2019 ರಲ್ಲಿ 119ನೆಯ ಸ್ಥಾನದಲ್ಲಿ ಇದುವರೆಗಿನ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿತು. ಭಾರತ, ಹಂಗೇರಿ ಮತ್ತು ವೆನೆಜುವೆಲಾದ ಕುಸಿತದ ಶ್ರೇಯಾಂಕಗಳನ್ನು ಉಲ್ಲೇಖಿಸಿ, ವರದಿ ವಿವರಗಳು "ಒಟ್ಟಾರೆ ಸ್ವಾತಂತ್ರ್ಯದ ಮೇಲೆ ವಿವಿಧ ರೀತಿಯ ಜನಪ್ರಿಯತತ್ವದ (ಪಾಪ್ಯುಲಿಸ್ಟ್ ರೂಲ್) ಆಡಳಿತದ ಪರಿಣಾಮಗಳನ್ನು" ತೋರಿಸಿವೆ ಎಂದು ಹೇಳಿದೆ.
ಗ್ರಾಫಿಕ್: ThePrint Team
ವೈಯಕ್ತಿಕ ಮತ್ತು ಆರ್ಥಿಕ ಸ್ವಾತಂತ್ರ್ಯಗಳ ಎರಡು ವಿಶಾಲ ನಿಯತಾಂಕಗಳ ಜೊತೆಗೆ ಕೆಲವು ಆಸಕ್ತಿದಾಯಕ ಪ್ರವೃತ್ತಿಗಳನ್ನು ಅಂಕಿಅಂಶಗಳ ಆಳವಾದ ನೋಟವು ತೋರಿಸುತ್ತದೆ.
2013 ಮತ್ತು 2019 ರ ನಡುವೆ, ವೈಯಕ್ತಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 85 ರಿಂದ 119 ಕ್ಕೆ ಕುಸಿದಿದೆ.
"ವೈಯಕ್ತಿಕ ಸ್ವಾತಂತ್ರ್ಯ" ದ ನಿಯತಾಂಕವು ಕಾನೂನಿನ ನಿಯಮ, ಭದ್ರತೆ ಮತ್ತು ಸುರಕ್ಷತೆ, ಚಲನೆಯ ಸ್ವಾತಂತ್ರ್ಯ, ಧರ್ಮದ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತ೦ತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳೂ ಸೇರಿದಂತೆ ಹಲವಾರು ಸೂಚಕಗಳನ್ನು ಒಳಗೊಂಡಿದೆ, ಮತ್ತುಸಲಿಂಗ ಸಂಬಂಧಗಳು ವಿಚ್ಛೇದನದಂತಹ ವೈಯಕ್ತಿಕ ಜೀವನದಲ್ಲಿ ಆಯ್ಕೆ ಮಾಡಲು ವಿವಿಧ ಸ್ವಾತಂತ್ರ್ಯಗಳು ಇದರಲ್ಲಿ ಸೇರಿವೆ.
ಈ ವಿಶಾಲ ವಿಭಾಗದಲ್ಲಿ, ಭಾರತವು "ಸೆನ್ಸಾರ್ ಮಾಡಲು ಸರ್ಕಾರದ ಪ್ರಯತ್ನಗಳು" ಸೂಚಕದಲ್ಲಿ ಭಾರೀ ಕುಸಿತವನ್ನು ದಾಖಲಿಸಿದೆ. ಈ ನಿರ್ದಿಷ್ಟ ಅಂಕಿಅಂಶವನ್ನು ಸ್ವೀಡನ್ ಮೂಲದ ಥಿಂಕ್ ಟ್ಯಾಂಕ್ ವಿ-ಡೆಮ್ ಇನ್‌ಸ್ಟಿಟ್ಯೂಟ್‌ನ (V-Dem Institute) 'ಪ್ರಜಾಪ್ರಭುತ್ವದ ವೈವಿಧ್ಯತೆಗಳು' ಮಾಪನದಿಂದ ಪಡೆಯಲಾಗಿದೆ.
ಎಲ್ಲಾ ಎಣಿಕೆಗಳನ್ನು ಗರಿಷ್ಠ 10 ಅ೦ಕಕ್ಕೆ ಅಳೆಯಲಾಗಿದೆ. 2014 ಕ್ಕಿಂತ ಮೊದಲು, ಈ ನಿರ್ದಿಷ್ಟ ಸೂಚಕಕ್ಕಾಗಿ ಭಾರತವು ಸರಾಸರಿ 8.6 ಅಂಕಗಳನ್ನು ಗಳಿಸಿತ್ತು, ಆದರೆ 2014-19 ಅವಧಿಯಲ್ಲಿ ಅದು 5.2 ಕ್ಕೆ ಇಳಿದಿದೆ. 2019 ರಲ್ಲಿ, ಈ ಅ೦ಕವು 4.1 ಕ್ಕೆ ಇಳಿದಿದೆ.
ಅಂತೆಯೇ, ಸೂಚ್ಯಂಕವು ನಾಗರಿಕ ಸಮಾಜದ ದಮನದಲ್ಲಿ (2013 ರ ಸರಾಸರಿ 8.2 ರಿಂದ 2019 ರ ಹೊತ್ತಿಗೆ 5.5), ನಾಗರಿಕ ಸಮಾಜ (civil society) ಘಟಕಗಳ ಯೋಜನೆ ಮತ್ತು ನಿರ್ಗಮನ (6.2 ರಿಂದ 3.9), ಧರ್ಮದ ಸ್ವಾತಂತ್ರ್ಯ (7.9 ರಿಂದ 6.1), ಅಭಿವ್ಯಕ್ತಿ ಸ್ವಾತಂತ್ರ್ಯ (9.3 ರಿಂದ 7.7), ಮತ್ತು ಧಾರ್ಮಿಕ ಸಂಘಟನೆಯ ನಿಗ್ರಹ (8.6 ರಿಂದ 6.6) ಗಳಲ್ಲಿ ದೊಡ್ಡ ಕುಸಿತಗಳನ್ನು ದಾಖಲಿಸಿದ,
ಕೆಲವು ಧನಾತ್ಮಕ ಸೂಚಕಗಳು
ಆದಾಗ್ಯೂ, ಆರ್ಥಿಕ ಸ್ವಾತಂತ್ರ್ಯಗಳಲ್ಲಿ, ಭಾರತದ ಅ೦ತಸ್ತು 2013 ರಲ್ಲಿ 111 ರಿಂದ 2019 ರಲ್ಲಿ 108 ಕ್ಕೆ ಏರುವುದರೊಂದಿಗೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ.
ಈ ನಿಯತಾಂಕವು ಸ್ವತ್ತುಗಳ ರಾಜ್ಯ ಮಾಲೀಕತ್ವ, ಬಂಡವಾಳ ಮತ್ತು ಜನರ ಚಲನೆ, ಹಣದುಬ್ಬರ, ನಿಯಂತ್ರಕ ವ್ಯಾಪಾರ ಅಡೆತಡೆಗಳು ಮತ್ತು ಕಾನೂನು ವ್ಯವಸ್ಥೆ ಮತ್ತು ಆಸ್ತಿ ಹಕ್ಕುಗಳ ಸದೃಢತೆಗೆ ಸಂಬಂಧಿಸಿದ ವಿವಿಧ ಅಂಶಗಳು.
ಕೆಲವು ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದಾಗ ಭಾರತದಲ್ಲಿ ಆರ್ಥಿಕ ಸ್ವಾತಂತ್ರ್ಯವು ಸುಧಾರಿಸಿದೆ ಎಂದು ಡೇಟಾ ತೋರಿಸುತ್ತದೆ. 2014 ರವರೆಗೆ, ವಿದೇಶಿ ಹಣದ ಬ್ಯಾಂಕ್ ಖಾತೆಯನ್ನು ಹೊಂದುವ ಸ್ವಾತಂತ್ರ್ಯದ ವಿಷಯದಲ್ಲಿ ಭಾರತವು 0 ಗಳಿಸಿತು, ಆದರೆ ಇದು 2015 ರಲ್ಲಿ 5 ಕ್ಕೆ ಏರಿತು (ಮತ್ತು ಅಲ್ಲಿಂದ ಇಲ್ಲಿಯವರೆಗೆ ಉಳಿದಿದೆ).
ಅಂತೆಯೇ, ಪರವಾನಗಿ ನಿರ್ಬಂಧಗಳ ಕಡಿತವು ಸಹ ಧನಾತ್ಮಕ ಪರಿಣಾಮ ಬೀರಿದೆ. 2008 ಮತ್ತು 2014 ರ ನಡುವೆ, ಭಾರತವು ಪರವಾನಗಿ ನಿರ್ಬಂಧ (‘ಲೈಸೆನ್ಸ್’) ಗಳಿಗಾಗಿ ಸರಾಸರಿ 4.62 ಅ೦ಕ ಪಡೆದಿದ್ದರೆ 2014 ರಿಂದ 2019 ರವರೆಗೆ, ಈ ಸರಾಸರಿ ಅ೦ಕವು 8.62 ಕ್ಕೆ ಏರಿತು.
ಮಾನವ ಸ್ವಾತಂತ್ರ್ಯ, ಮತ್ತು ಸಮೃದ್ಧಿಯೊಂದಿಗಿನ ಅದರ ಸಂಪರ್ಕಗಳು
ಸ್ವಾತಂತ್ರ್ಯದ ಮಟ್ಟ ಮತ್ತು ದೇಶದ ಸಮೃದ್ಧಿಯ ನಡುವೆ "ಬಲವಾದ ಸಂಬಂಧ" ಇದೆ ಎಂದು ವರದಿ ಸೂಚಿಸುತ್ತದೆ.
ಸ್ವಿಟ್ಜರ್ಲೆಂಡ್, ನ್ಯೂಜಿಲ್ಯಾಂಡ್, ಡೆನ್ಮಾರ್ಕ್, ಎಸ್ಟೋನಿಯಾ ಮತ್ತು ಐರ್ಲೆಂಡ್ ಈ ಅಗ್ರ-ಐವರನ್ನುಒಳಗೊಂಡಂತೆ ಅತ್ಯ೦ತ ಸ್ವತಂತ್ರ ರಾಷ್ಟ್ರಗಳು ಇತರ ಚತುರ್ಥಾ೦ಶ ದಲ್ಲಿರುವವರ ಸರಾಸರಿ ತಲಾ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚು ಆಸ್ವಾದಿಸುತ್ತವೆ.
"ಉತ್ಪಾದನಾ ಕಾರಣವನ್ನು" ಸೂಚಿಸಲು ಇದು ಸಾಕಾಗುವುದಿಲ್ಲ ಎಂದು ವರದಿ ಹೇಳುತ್ತದೆ, ಆದರೂ ಅಭಿವೃದ್ಧಿಗೆ ಮಾನವ ಸ್ವಾತಂತ್ರ್ಯ ಮುಖ್ಯವೇ ಎಂಬ ಪ್ರಶ್ನೆಯನ್ನು ಅದು ಹುಟ್ಟುಹಾಕುತ್ತದೆ.
ಶ್ರೇಯಾಂಕಗಳ ಪ್ರದೇಶವಾರು ವಿಶ್ಲೇಷಣೆಯು, ಹೆಚ್ಚಾಗಿ ಅಭಿವೃದ್ಧಿ ಹೊಂದಿದ ಸಮಾಜಗಳ ಹೆಚ್ಚಿನ ಸ೦ಖ್ಯೆಯೊ೦ದಿಗೆ ಉತ್ತರ ಅಮೆರಿಕಾ ಮತ್ತು ಪಶ್ಚಿಮ ಯುರೋಪ್‌ನಲ್ಲಿ ಮಾನವ ಸ್ವಾತಂತ್ರ್ಯವು ಏಷ್ಯಾ ಮತ್ತು ಆಫ್ರಿಕಾಕ್ಕಿಂತ ಹೆಚ್ಚಾಗಿರುತ್ತದೆ ಎಂದು ತೋರಿಸುತ್ತದೆ.
ನಾಗರಿಕ ಸ್ವಾತಂತ್ರ್ಯಗಳು ಆರ್ಥಿಕ ಸ್ವಾತಂತ್ರ್ಯಗಳೊಂದಿಗೆ ಪರಸ್ಪರ ಸಂಬಂಧ ಹೊಂದಿವೆ ಎಂದು ಲೇಖಕರು ಸಾಧಿಸುತ್ತಾರೆ. ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ದೇಶಗಳು ಉತ್ತಮ ವೈಯಕ್ತಿಕ ಸ್ವಾತಂತ್ರ್ಯದ ಅಂಕಗಳನ್ನು ಹೊಂದಿವೆ.
ಮಾನವ ಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಮಟ್ಟದೊಂದಿಗೆ ಧನಾತ್ಮಕವಾಗಿ ಸಂಬಂಧ ಹೊಂದಿವೆ ಎಂದು ವರದಿಯು ಉಲ್ಲೇಖಿಸುತ್ತದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (Economic Intelligenced Unit) ನ 'ಪ್ರಜಾಪ್ರಭುತ್ವ ಸೂಚ್ಯಂಕ'ವನ್ನು ಬಳಸಿಕೊಂಡು, ಪ್ರಜಾಪ್ರಭುತ್ವವು ಉತ್ತಮವಾದಷ್ಟೂ ಅದು ವೈಯಕ್ತಿಕ ಸ್ವಾತಂತ್ರ್ಯವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ ಎಂದು ವರದಿಯು ಸಮರ್ಥಿಸುತ್ತದೆ.
"ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ನಡುವೆ 0.87 ರ ಬಲವಾದ ಸಂಬಂಧವಿದೆ. ಈ ಕ೦ಡುಹಿಡಿಯುವಿಕೆಯಲ್ಲಿ ಆಶ್ಚರ್ಯವೇನಿಲ್ಲ, ಆದರೆ ಇವು ಎರಡು ವ್ಯತ್ಯಯಸಾಧ್ಯಗಳು. ಇವುಗಳ ನಡುವಿನ ಸಂಬಂಧ ಸ೦ಕೀರ್ಣ. ಇವುಗಳಲ್ಲಿ ಉತ್ಪಾದನೆಯ ಕಾರಣ ಅಥವಾ ಬೆಂಬಲದ ದಿಕ್ಕು ಯಾವುದಾದರೂ ಇದ್ದರೆ, ಅದು ಕಾಲಾನಂತರದಲ್ಲಿ ಬಲಗೊಳ್ಳಬಹುದು ಅಥವಾ ದುರ್ಬಲಗೊಳಿಸಬಹುದು ಮತ್ತು ಅಭಿವೃದ್ಧಿಯ ಮಟ್ಟ ಸೇರಿದ೦ತೆ ಹಲವಾರು ಇತರ ಅಂಶಗಳಿಂದ ಪ್ರಭಾವಿತವಾಗಬಹುದು. ಇವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಆಳವಾದ ಅವಕಾಶಗಳನ್ನು ಈ ವರದಿ ನೀಡುತ್ತದೆ”, ಎಂದು ಹೇಳಿದೆ.
ಆರ್ಥಿಕ ಸ್ವಾತಂತ್ರ್ಯವು "ಇತರ ಸ್ವಾತಂತ್ರ್ಯಗಳನ್ನು ಚಲಾಯಿಸಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ" ಮತ್ತು "ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಅಥವಾ ಅಧಿಕಾರವನ್ನು ಕೇಂದ್ರೀಕರಿಸಲು ಪ್ರಯತ್ನಿಸುವ" ಸಮಾಜದಲ್ಲಿನ ಸರ್ಕಾರಗಳು ಮತ್ತು ಇತರ ಶಕ್ತಿಗಳ ಮೇಲೆ ಅವರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ವರದಿಯು ವಿಶೇಷವಾಗಿ ಸೂಚಿಸುತ್ತದೆ.
(ಅಸಾವರಿ ಸಿಂಗ್ ಸಂಪಾದಿಸಿದ್ದಾರೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ