ಸ೦ಘಟಿತ ಮತಧರ್ಮ ಮತ್ತು ರಾಜ್ಯಾಧಿಕಾರ
ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ಸವಲತ್ತಿಗೆ ಸವಾಲು
"ಧಾರ್ಮಿಕತೆ ಮತ್ತು ಫಾಸಿಸ್ಟ್ ಅನುಷ್ಠಾನಗಳು ಒಟ್ಟಿಗೆ ನಡೆಯಲಾಗದು ಎ೦ದು ಹೇಳಬಹುದೇ ?"
ನಾಝಿ ನಾಯಕರು ಮತ್ತು ಕ್ರಿಶ್ಚಿಯನ್ ಧರ್ಮ
ಮೈಕ್ ಮ್ಯಾಗೀ ಬರೆದದ್ದು | 5 ನವೆಂಬರ್ 2003
“ರಿಚರ್ಡ್ ನಿಕ್ಸನ್ ನಂತಹ ಕ್ಷುಲ್ಲಕ ದಬ್ಬಾಳಿಕೆಯವರು ಅಥವಾ ಹಿಟ್ಲರ್ ನಂತಹ ಹೆಚ್ಚು ಯಶಸ್ವಿ ದೌರ್ಜನ್ಯಕಾರರು ತಮ್ಮನ್ನು ಅನುಕರಣೀಯ ಕ್ರಿಶ್ಚಿಯನ್ನರು ಎಂದು ತಿಳಿದುಕೊಳ್ಳುತ್ತಾರೆ; ಅವರ ಅನುಯಾಯಿಗಳಿಗೆ ಈ ಅಭಿಪ್ರಾಯವನ್ನು ಒಪ್ಪಲು ಯಾವುದೇ ತೊಂದರೆ ಇರಲಿಲ್ಲ. ಹಿಟ್ಲರನ ಧಾರ್ಮಿಕತೆ - ಅವನು ಸಾಯುವವರೆಗೂ ಕ್ಯಾಥೊಲಿಕ್ ಆಗಿದ್ದನು - ಆಗಾಗ ಬಚ್ಚಿಡಲಾಗುತ್ತಿತು , ಆದರೆ ಅವನ ಪ್ರೇರಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ನಿರ್ಣಾಯಕವಾಗಿದೆ.”
- ಅನ್ನಿ ನಿಕೋಲ್ ಗೇಲರ್(ಅಮೆರಿಕಾದ ನಾಸ್ತಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಪ್ರತಿಪಾದಿ)
ಎರಡನೇ ಮಹಾಯುದ್ಧದ ನಂತರ, ನಾಝಿಗಳು ನಾಸ್ತಿಕತೆಯಿಂದ ಅಥವಾ ಎಲ್ಲಾ ರೀತಿಯ ದುಷ್ಟತನದ ಅತೀಂದ್ರಿಯ/ ನಿಸರ್ಗಾತೀತ (occultism) ವ್ಯಾಮೋಹಗಳಿಂದ ಪ್ರೇರಿತರಾಗಿದ್ದವರು ಎಂಬ ಸಂಪ್ರದಾಯವಿದೆ. ಕ್ರಿಶ್ಚಿಯನ್ನರು ಯುರೋಪಿನ ಫ್ಯಾಸಿವಾದ ಮತ್ತು ನಾಝಿವಾದದಿ೦ದ ದೂರವಿರಲು ಹೆಣಗಾಡುತ್ತಿದ್ದಾರೆ. ಆದರೂ "ಪ್ರತಿಯೊಂದು ಮರದ ಗುಣವು ಅದರ ಫಲದಿ೦ದಲೇ ಗೊತ್ತಾಗುವದು” ಎಂದು ಹೇಳಿದೆ (ಬೈಬಲ್, ಲೂಕ್ ೬:೪೪), ಅದರ೦ತೆ ಯುರೋಪಿಯನ್ ಫ್ಯಾಸಿವಾದ ಕ್ರಿಶ್ಚಿಯನ್ ಧರ್ಮದ ಫಲವಾಗಿದೆ. ಕ್ರಿಶ್ಚಿಯನ್ನರು ನಾಝಿಗಳಾಗಿದ್ದರು ಮತ್ತು ನಾಝಿ ದೌರ್ಜನ್ಯಗಳಲ್ಲಿ ಭಾಗವಹಿಸಿದರು. ಕ್ಯಾಥೊಲಿಕರಿಂದ ಪ್ರವರ್ತಿತವಾದ ನಾಝಿ ಪದ್ಧತಿಗಳಲ್ಲಿ ಬಲವಂತವಾಗಿ ಹಳದಿ ಗುರುತುಗಳನ್ನು ಧರಿಸುವುದು, Ghettoization - ಕೇರೀಕರಣ (ಯಹೂದ್ಯರನ್ನು ತಮ್ಮದೇ ಕೇರಿಗಳಿಗೆ ನಿರ್ಬ೦ಧಿಸುವದು), ಯಹೂದಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಕ್ರಿಶ್ಚಿಯನ್ನರ ಜೊತೆಗಿನ ವಿವಾಹವನ್ನು ನಿಷೇಧಿಸುವುದು ಸೇರಿವೆ. ಮಾರ್ಟಿನ್ ಲೂಥರ್ ಅವರ ಪುಸ್ತಕ, On the Jews and Their Lies (‘ಯೆಹೂದಿಯರು ಮತ್ತು ಅವರ ಸುಳ್ಳುಗಳು’) ಯಹೂದಿಗಳನ್ನು ಅವಹೇಳನ ಮಾಡುವುದು ಮತ್ತು ಅವರು ನಿರ್ನಾಮವಾಗುವುದನ್ನುಉತ್ತಮವೆ೦ದು ಸೂಚಿಸುವದು ಸೇರಿವೆ. ಹಿಟ್ಲರನ ‘Mein Kampf’ (‘ಮೇನ್ ಕ್ಯಾಂಪ್‌ಫ್’ - ಹಿಟ್ಲರನ ಆತ್ಮಚರಿತ್ರೆ ಮತ್ತು ಪ್ರಣಾಲಿಕೆ) ಪುಸ್ತಕದ ಅನೇಕ ಭಾಗಗಳನ್ನು ಲೂಥರ್ ನ ಪುಸ್ತಕ ಪ್ರೇರೇಪಿಸಿತು. ಇದರಲ್ಲಿ ಹಿಟ್ಲರ್ ಲೂಥರ್‌ನನ್ನು 'ಜರ್ಮನರ ನಾಯಕ' ಎಂದು ಹೊಗಳಿದರು.
“1930 ಮತ್ತು 1940 ರ ದಶಕದಲ್ಲಿ ಜರ್ಮನಿಯಲ್ಲಿ ರಾಷ್ಟ್ರೀಯ ಸಮಾಜವಾದಿ (ನಾಝಿ) ಆಡಳಿತದ ಕ್ರಮಗಳು ಅವರ ಪ್ರಸ್ತಾಪಗಳನ್ನು ಹೇಗೆ ಹೋಲುತ್ತವೆ ಎಂಬುದನ್ನು ಗಮನಿಸದೆ ಲೂಥರ್ ನ ಗ್ರಂಥವನ್ನು ಇಂದು ಪ್ರಕಟಿಸುವುದು ಅಸಾಧ್ಯ.”
-- ಲೂಥರ್‌ನ ಅಮೇರಿಕನ್ ಅನುವಾದಕ
ನಾಝಿ ಅತೀಂದ್ರಿಯ ಪುರಾಣವನ್ನು 1960 ರ ದಶಕದ ಆರಂಭದಲ್ಲಿ ಎಲ್ ಪೌವೆಲ್ಸ್ ಮತ್ತು ಜೆ ಬೆರ್ಗಿ ಬರೆದ The Dawn of Magic (‘ಡಾನ್ ಆಫ್ ಮ್ಯಾಜಿಕ್ ‘ - ‘ಇ೦ದ್ರಜಾಲದ ಉದಯ’) ಪುಸ್ತಕದ ಮೂಲಕ ಸಾರ್ವಜನಿಕ ಗಮನಕ್ಕೆ ತರಲಾಯಿತು. ಆದರೂ ಇದು ಮೊದಲ ಪುಸ್ತಕವಲ್ಲ. 1933 ರಲ್ಲಿ ವೂಲ್ಫ್‌ಗ್ಯಾಂಗ್ ವಾನ್ ವೀಸ್ಲ್ ಗಮನಿಸಿದಂತೆ, 30 ರ ದಶಕದ ಆರಂಭದಲ್ಲಿ ಅತೀಂದ್ರಿಯತೆಯು ಜನಪ್ರಿಯವಾಗಿತ್ತು, (ಆದರೆ ಅಮೆರಿಕದ ಇ೦ದಿನ ಅತಿಉದ್ರೇಕದ ಮೂಲಭೂತವಾದಿ ಕ್ರೈಸ್ತ ಪಂಥಗಳಿಗೆ ಇನ್ನೂ ಹೆಚ್ಚು ಜನಪ್ರಿಯತೆ ಇದೆ !). ಆಧ್ಯಾತ್ಮಿಕ ಗೀಳು ಮತ್ತು ಧಾರ್ಮಿಕ ಮೂಲಭೂತವಾದದ ಉಲ್ಬಣವು ಸಮಾಜವು ಅತಿರೇಕತೆಯ ಮೂಲಕ ವಿಘಟಿಸುವದರ ಅಗ್ನಿಪರೀಕ್ಷೆಯಂತೆ ಒಟ್ಟಾಗಿ ಹೋಗುತ್ತ ವೆ.
ನಾಝಿ ಆಡಳಿತವು ಅತೀಂದ್ರಿಯತೆಗೆ ಹೆಚ್ಚಾಗಿ, ಪ್ರತಿಕೂಲವಾಗಿತ್ತು, ಮತ್ತು ಜ್ಯೋತಿಷ್ಯ ಮತ್ತು ಮೆಸ್ಮೆರಿಸಂ (ವಶೀಕರಣ) ಅ೦ತಹ ಒಲವನ್ನು ಅನುಭವಿಸಿದ ಕೆಲವು ಪ್ರತ್ಯೇಕ ನಾಝಿ ನಾಯಕರೊಂದಿಗೆ ಸಂಬಂಧ ಹೊಂದಿದ್ದ ಅತೀಂದ್ರಿಯತೆಯಿಂದ ಹಿಟ್ಲರ್ ನಾಝಿಸಂ ಅನ್ನು ಬೇರ್ಪಡಿಸಲು ಪ್ರಯತ್ನಿಸಿದನು. 1941 ರಲ್ಲಿ ಯುದ್ಧವನ್ನು ಕೊನೆಗೊಳಿಸಲು ಯತ್ನಿಸಿದ ರುಡಾಲ್ಫ್ ಹೆಸ್ ಬ್ರಿಟನ್‌ಗೆ ಪಾರಚೂಟ್ ಮೂಲಕ ಧುಮಿಸಿದನು. ಅವನ ವೈಫಲ್ಯವು ನಾಝಿಗಳಿಗೆ ಪ್ರಚಾರದ ವೈಫಲ್ಯವಾಗಿತ್ತು. ಹೆಸ್ ಅನ್ನು ವಿಶ್ವಾಸಘಾತುಕತನಕ್ಕೆ ಪ್ರೇರಣೆಗೊ೦ಡ ತಲೆಗೆಟ್ಟವನಂತೆ ಚಿತ್ರಿಸಬೇಕಾಯಿತು. ಇದಕ್ಕೆ ಅವರು ನೀಡಿದ ಪುರಾವೆ ಹೋಮಿಯೋಪತಿ ಮತ್ತು ಜ್ಯೋತಿಷ್ಯದ ಬಗೆಗಿನ ಅವನ ಆಕರ್ಷಣೆ. ಇವುಗಳು ಈಗಲೂ ಅನೇಕರಲ್ಲಿ ಇರುವ೦ತೆ ಜನಪ್ರಿಯ ಚಟಗಳಾಗಿದ್ದವು. ನ್ಯೂರೆಂಬರ್ಗ್‌ನಲ್ಲಿ ತಮ್ಮ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಹೆಸ್ ಹೀಗೆ ಹೇಳಿದ:
“ನಾನು ಒ೦ದು ದಿನ ಸನಾತನದ ನ್ಯಾಯ ಪೀಠದ ಮುಂದೆ ನಿಲ್ಲುತ್ತೇನೆ. ನಾನು ಅವನಿಗೆ ಉತ್ತರಿಸುತ್ತೇನೆ. ಮತ್ತು, ನನಗೆ ಗೊತ್ತು, ಅವನು ನನ್ನನ್ನು ನಿರಪರಾಧಿ ಎಂದು ನಿರ್ಣಯಿಸುತ್ತಾನೆ.”
ಇದು ಯಾವುದೇ ಕ್ರಿಶ್ಚಿಯನ್ ಹೇಳುವುದಕ್ಕಿಂತ ಕಡಿಮೆಯಿಲ್ಲ!
ಹೆಸ್ ಅವರ ದೇಶದ್ರೋಹವನ್ನು ಅತೀಂದ್ರಿಯ ಚಲನೆಯನ್ನು ಹತ್ತಿಕ್ಕಲು ಬಳಸಲಾಯಿತು. 1937 ರ ಕಾನೂನು ಮೇಸನ್‌ಗಳು, ಥಿಯೊಸೊಫಿಸ್ಟ್‌ಗಳು ಮುಂತಾದವರನ್ನು ಕಾನೂನುಬಾಹಿರಗೊಳಿಸಿತು, ಆದರೆ ಇದನ್ನು ನಿರ್ದಿಷ್ಟವಾಗಿ ಜಾರಿಗೊಳಿಸಲಾಗಿದ್ದಿಲ್ಲ. ಹೆಸ್ ಹಾರಾಟದ ನಂತರ, ಅದನ್ನು ಜಾರಿಗೊಳಿಸಲಾಯಿತು. ಹಿಟ್ಲರ್ ಜ್ಯೋತಿಷಿಗಳನ್ನು "ರಿಫ್ ರಾಫ್" (ಹೇಸಿ ಜನ) ಎಂದು ವಿವರಿಸಿದ್ದಾನೆ, ಮತ್ತು ಹೆಚ್ಚಿನ ನಾಝಿ ನಾಯಕರು ಅವನ್ನು ಜನರಿಗೆ ಅಪ್ರಯೋಜಕವಾದ ಮೂಢ ನ೦ಬಿಕೆಗಳು ಎಂದು ಭಾವಿಸಿದರು. ಆಧ್ಯಾತ್ಮಿಕರಿಂದ ಹಿಡಿದು ಜ್ಯೋತಿಷಿಗಳವರೆಗೆ, ನಂಬಿಕೆಯ ಮೂಲಕ ಗುಣಪಡಿಸುವವರಿಂದ (Faith Healers) ಹಿಡಿದು ಆಂಥ್ರೊಪೊಸೊಫಿಸ್ಟ್‌ಗಳ (ಬೌದ್ಧಿಕವಾಗಿ ಅರಿತುಕೊಳ್ಳಬಹುದಾದ ಮಾನವರು ಅನುಭವಿಸ ಬಹುದಾದ ಆತ್ಮಿಕ ಜಗತ್ತಿನ ಅಸ್ತಿತ್ವವನ್ನು ವಾದಿಸುವವರು) ವರೆಗೆ ಪೊಲೀಸರು ಅವರೆಲ್ಲರನ್ನೂ ಬಂಧಿಸಿ ಯಹೂದಿಗಳು ಮತ್ತು ಕಮ್ಯುನಿಸ್ಟರೊಂದಿಗೆ ಕೆಲಸ ಶಿಬಿರಗಳಿಗೆ ತಳ್ಳಿದರು!
ಕ್ರಿಶ್ಚಿಯನ್ನ ಸಯೆನ್ಸ್ ಆಚರಿಸುವವರನ್ನು ( Christian Scientists) ಹೊರತುಪಡಿಸಿ ಕ್ರೈಸ್ತರನ್ನು ಸಾಮಾನ್ಯವಾಗಿ ಈ ಶುದ್ಧೀಕರಣದಲ್ಲಿ ಸೇರಿಸಲಾಗಿಲ್ಲ. ರಿಚರ್ಡ್ ಸ್ಟೀಗ್ಮನ್-ಗಾಲ್ ತಮ್ಮ ಪುಸ್ತಕ ‘ಹೋಲಿ ರೈಕ್-ಕ್ರಿಶ್ಚಿಯನ್ ಧರ್ಮದ ನಾಜಿ ಪರಿಕಲ್ಪನೆಗಳು, 1919-1945’ -( Richard Steigmann-Gall - The Holy Reich—Nazi Conceptions of Christianity, 1919-1945, 2003)ದಲ್ಲಿ ನಾಝಿಸಂ ಕ್ರಿಶ್ಚಿಯನ್ ಧರ್ಮವನ್ನು ವಿರೋಧಿಸುತ್ತದೆ ಎಂಬ ಕಲ್ಪನೆಯನ್ನು ಬಲವಾಗಿ ನಿರಾಕರಿಸಿದ್ದಾರೆ. ಅನೇಕ ನಾಝಿಗಳು ತಮ್ಮ ಸಿದ್ಧಾಂತವು ಮೂಲಭೂತವಾಗಿ ಕ್ರಿಶ್ಚಿಯನ್ ಎಂದು ನಂಬಿದ್ದರು. ಸೆಮಿಟಿಕ್ ಜನಾ೦ಗದ, ಲಿಬರಲ್ ಸಿದ್ಧಾ೦ತದ ಮತ್ತು ಮಾರ್ಕ್ಸ್ ವಾದದ ವಿರೋಧಗಳ ಮೂಲಕ ‘ಧನಾತ್ಮಕ ಕ್ರಿಶ್ಚಿಯನ್ ಧರ್ಮ’ ಜನತೆಯ ನೈತಿಕತೆಯನ್ನು ಪ್ರತಿರಕ್ಷಿಸಿತು. ಒ೦ದು ಕಡೆ ಫಾಸಿಸ್ಟ್ ವಾದವು ದೇವರ ಬಗ್ಗೆ ನಾಗರಿಕರ ಧಾರ್ಮಿಕ ಮತ್ತು ನೈತಿಕ ಕಟ್ಟುಪಾಡುಗಳನ್ನು ನಿವಾರಿಸುತ್ತದೆ ಎ೦ದು ಹೇಳಲಾಗಿತ್ತು. ಆದರೆ ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿನ ಚರ್ಚುಗಳು "ಫ್ಯಾಸಿಸಂ ಅನ್ನು ಕೆಲವೊಮ್ಮೆ ಗಣನೀಯ ಪ್ರಮಾಣದಲ್ಲಿ ಪ್ರೋತ್ಸಾಹಿಸುತ್ತವೆ" ಎಂಬುದನ್ನು "ನಿರಾಕರಿಸುವುದು ಕಷ್ಟ" ಎಂದು ಭಾವಿಸಿದರು ಅರ್ನ್ಸ್ಟ್ ನೋಲ್ಕ್( Ernst Nolke - The Three Faces of Fascism, 1963).
ಯುದ್ಧದ ಮೊದಲು ಜರ್ಮನಿ ಆಧುನಿಕ ಅಮೆರಿಕ ರಾಷ್ಟ್ರದ೦ತೆಯೇ ವಿಶ್ವದ ಅತ್ಯಂತ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಒಂದಾಗಿತ್ತು. 1939 ರ ಜನಗಣತಿಯಲ್ಲಿ ಮೂರನೇ ಎರಡರಷ್ಟು ಜನರು ಪ್ರೊಟೆಸ್ಟೆಂಟ್, ಉಳಿದವರು ಮುಖ್ಯವಾಗಿ ಕ್ಯಾಥೊಲಿಕ್, 1½ ಪ್ರತಿಶತ ಜನರು ನಂಬಿಕೆಯಿಲ್ಲದವರು. ಆದ್ದರಿಂದ, ಹೆಚ್ಚಿನ ನಾಝಿಗಳು ಸಾಮಾನ್ಯ ಜನಸಂಖ್ಯೆಯಂತೆ ಕ್ರಿಶ್ಚಿಯನ್ನರಾಗಿರಬೇಕು ಮತ್ತು ಅವರಲ್ಲಿ ಕೆಲವರು ನಾಸ್ತಿಕರಾಗಿರಬಹುದು. ಸತ್ಯವೆಂದರೆ ಹಿಟ್ಲರ್ ಆಸ್ಟ್ರಿಯನ್ ಮೂಲದವನು, ಮತ್ತು ಆಸ್ಟ್ರಿಯಾ, ಇಟಲಿಯಂತೆ, ಪ್ರಧಾನವಾಗಿ ಕ್ಯಾಥೊಲಿಕ್ ದೇಶವಾಗಿತ್ತು. ಅವನು ಸ್ವತಃ ದೀಕ್ಷಾಸ್ನಾನ ಪಡೆದ ರೋಮನ್ ಕ್ಯಾಥೊಲಿಕ್, ‘ಮಾಸ್’ ಧರ್ಮಾಚರಣೆಯಲ್ಲಿ ಭಾಗವಹಿಸುವವನು, ಪೂಜಾವೇದಿಕೆಯಲ್ಲಿ ಸೇವೆ ಸಲ್ಲಿಸಿದ ಹುಡುಗ, "ಕ್ರಿಸ್ತನ ಸೈನಿಕ" ಎಂದು ದೃಢೀಕರಿಸಲ್ಪಟ್ಟನು ಮತ್ತು ಒ೦ದು ಕಾಲದಲ್ಲಿ ಪೌರೋಹಿತ್ಯಕ್ಕೆ ಪ್ರವೇಶಿಸುವ ಬಗ್ಗೆ ಆಲೋಚಿಸಿದ್ದ ಹಿಟ್ಲರ್ ತನ್ನನ್ನು ಕ್ಯಾಥೊಲಿಕ್ ಎಂದು ಪರಿಗಣಿಸಿದನು ಮತ್ತು ಕ್ರಿಸ್ತನು ತನ್ನ ರಕ್ಷಕನೆಂದು ಹೇಳಿದನು. 1941 ರಲ್ಲಿ, ಜನರಲ್ ಗೆಹಾರ್ಟ್ ಎಂಗಲ್‌ಗೆ ಹೇಳಿದ ಪ್ರಕಾರ: "ನಾನು ಹಿ೦ದಿನ೦ತೆ ಈಗಲೂ ಕ್ಯಾಥೊಲಿಕ್‌ನಾಗಿದ್ದೇನೆ ಮತ್ತು ಯಾವಾಗಲೂ ಹಾಗೆಯೇ ಇರುತ್ತೇನೆ."
ಸಮಕಾಲೀನ ವ್ಯಕ್ತಿಗಳು ಮತ್ತು ಸಮಕಾಲೀನ ಛಾಯಾಚಿತ್ರಗಳು ಹಿಟ್ಲರನನ್ನು ಉತ್ತಮ ಕ್ಯಾಥೊಲಿಕ್ ಕ್ರಿಶ್ಚಿಯನ್ ಎಂದು ಖಚಿತಪಡಿಸುತ್ತಾರೆ. ಅವನು ಚರ್ಚ್ ಅನ್ನು ಎಂದಿಗೂ ಬಿಡಲಿಲ್ಲ, ಮತ್ತು ಚರ್ಚ್ ಅವನನ್ನು ಬಹಿಷ್ಕರಿಸಲಿಲ್ಲ ಅಥವಾ ಅವನನ್ನು ಖಂಡಿಸಲಿಲ್ಲ. ಹಿಟ್ಲರ್ ಜೀವನಚರಿತ್ರೆಕಾರ ಜಾನ್ ಟೊಲ್ಯಾಂಡ್ ವಿವರಿಸಿದರು:
“ರೋಮ್ ಚರ್ಚ್‌ನ ಉತ್ತಮ ಪರಿಗಣನೆಯಲ್ಲಿರುವ ಒಬ್ಬ ಸದಸ್ಯ ... ಯಹೂದಿಯು ದೇವರ ಕೊಲೆಗಾರನೆಂಬ ಬೋಧನೆಯನ್ನು ತನ್ನೊಳಗೆ ಹೊತ್ತೊಯ್ದನು ... ಆತ್ಮಸಾಕ್ಷಿಯ ಕಿಂಚಿತ್ತೂ ಚುಚ್ಚುವಿಕೆ ಇಲ್ಲದೆ ನಿರ್ನಾಮ ಮಾಡಬಹುದು ... ಅವನು ಕೇವಲ ದೇವರ ಸೇಡು ತೀರಿಸಿಕೊಳ್ಳುವ ಕೈಯಾಗಿ ಕಾರ್ಯ ಮಾಡುತ್ತಿದ್ದನು.”
ಫ್ಯಾಸಿಸ್ಟ್ ನಾಯಕರು ಕ್ರಿಶ್ಚಿಯನ್ ಧರ್ಮ ಚಾಚೂ ತಪ್ಪದೆ ಕಾರ್ಯಗತಗೊಳಿಸುತ್ತಿದ್ದಿಲ್ಲ ಎಂದು ವಾದಿಸಲು ಕೆಲವರು ಇಷ್ಟಪಡುತ್ತಾರೆ ಆದರೆ ಇವರೆಲ್ಲ ಹೆಚ್ಚಾಗಿ ನಿಸ್ಸಂದೇಹವಾಗಿ ಕ್ರಿಶ್ಚಿಯನ್ನರು ಎಂಬದನ್ನೂ ಅವರು ತಿಳಿದಿದ್ದಾರೆ. ಹಿಟ್ಲರನ ಕೆಳಗೆ ಇದ್ದವರು ಭಕ್ತರು ಅಥವಾ ಸಾಂಪ್ರದಾಯಿಕ ಕ್ರಿಶ್ಚಿಯನ್ನರು ಅಲ್ಲ, ಆದರೆ ಉನ್ನತ ನಾಝಿಗಳು ಯಾರೂ ಧರ್ಮಕ್ಕೆ ವಿರುದ್ಧವಾಗಿದ್ದರು ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಎಲ್ಲಾ ನಾಝಿ ನಾಯಕರು ಮುಖ್ಯವಾಗಿ ಸಹನೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಇಲ್ಲದ ಸರ್ವಾಧಿಕಾರಿ, ಧಾರ್ಮಿಕ ಕುಟುಂಬಗಳಲ್ಲಿ ಜನಿಸಿ, ಬಾಲ್ಯದಲ್ಲಿ ಕ್ರೈಸ್ತಸ್ನಾನ ಪಡೆದು, ಕ್ರಿಶ್ಚಿಯನ್ನರಾಗಿ ಬೆಳೆದವರು. ಹಿಟ್ಲರನ ತಂದೆ ನಂಬಿಕೆಯಿಲ್ಲದವರಾಗಿದ್ದರು, ಆದರೆ ಅವರು ಬಹಳ ಪ್ರೀತಿಸಿದ ತಾಯಿ ಧರ್ಮನಿಷ್ಠ ಮತ್ತು ಭಕ್ತ ಕ್ಯಾಥೊಲಿಕ್ ಆಗಿದ್ದರು. ಇತರ ಕ್ಯಾಥೊಲಿಕ್ ನಾಝಿಗಳಲ್ಲಿ ಹೆನ್ರಿಕ್ ಹಿಮ್ಲರ್, ರೀನ್ಹಾರ್ಡ್ ಹೆಡ್ರಿಕ್ ಮತ್ತು ಜೋಸೆಫ್ ಗೊಬೆಲ್ಸ್ ಸೇರಿದ್ದಾರೆ. ವಿಷ ಅನಿಲವನ್ನು ಮೊದಲು ಯಹೂದಿಗಳನ್ನು ಕೊಲ್ಲಲು ಬಳಸಲಾಗಿದ್ದ ಒಷ್ ವಿಟ್ಶ್ ಸೆರೆಶಿಬಿರದ ಕಮಾಂಡೆಂಟ್, ಕಟ್ಟುನಿಟ್ಟಾದ ಕ್ಯಾಥೊಲಿಕ್ ಪೋಷಕರನ್ನು ಹೊಂದಿದ್ದರು. ಹರ್ಮನ್ ಗೋರಿಂಗ್ ಅವರು ಮಿಶ್ರಿತ ಕ್ಯಾಥೊಲಿಕ್-ಪ್ರೊಟೆಸ್ಟೆಂಟ್ ಪೋಷಕರನ್ನು ಹೊ೦ದಿದ್ದನು. ರುಡಾಲ್ಫ್ ಹೆಸ್, ಮಾರ್ಟಿನ್ ಬೋರ್ಮನ್, ಆಲ್ಬರ್ಟ್ ಸ್ಪೀರ್ ಮತ್ತು ಅಡಾಲ್ಫ್ ಐಚ್‌ಮನ್ ಪ್ರೊಟೆಸ್ಟಂಟ್ ಹಿನ್ನೆಲೆಯನ್ನು ಹೊಂದಿದ್ದರು.
ಆರಂಭಿಕವಾಗಿ ನಾಝಿ ಶ್ರೇಣಿಯಲ್ಲಿ ಕಡಿಮೆ ಹ೦ತದಲ್ಲಿದ್ದ ಮಾರ್ಟಿನ್ ಬೋರ್ಮನ್, ಏಕೈಕ ಪ್ರಸಿದ್ಧ ಧರ್ಮ ವಿರೋಧಿ ವ್ಯಕ್ತಿ. ಇವರು ಧರ್ಮವನ್ನು ವಿರೋಧಿಸಿದ ಕಾರಣ ಏನ೦ದರೆ, ಅವರ ಪ್ರಕಾರ ನಾಝಿ ವಾದವು ‘ಕ್ರಿಶ್ಚಿಯನ್ ದರ್ಮ’ಕ್ಕಿ೦ತ ಹೆಚ್ಚಿನ ಮಟ್ಟದಲ್ಲಿ ‘ಕ್ರೈಸ್ತವ’ ಆಗಿತ್ತು.
“ರಾಷ್ಟ್ರೀಯ ಸಮಾಜವಾದ ಮತ್ತು ಕ್ರಿಶ್ಚಿಯನ್ ಧರ್ಮ ಪರಿಕಲ್ಪನೆಗಳನ್ನು ಸಮನ್ವಯಗೊಳಿಸಲಾಗುವದಿಲ್ಲ ... ನಮ್ಮ ರಾಷ್ಟ್ರೀಯ ಸಮಾಜವಾದಿ ಸಿದ್ಧಾಂತವು ಅಗತ್ಯ ಅಂಶಗಳಲ್ಲಿ ಯಹೂದಿಗಳಿಂದ ತೆಗೆದುಕೊಳ್ಳಲ್ಪಟ್ಟಿರುವ ಕ್ರಿಶ್ಚಿಯನ್ ಧರ್ಮದ ಪರಿಕಲ್ಪನೆಗಳಿಗಿಂತ ಹೆಚ್ಚು ಉತ್ಕೃಷ್ಟವಾಗಿದೆ.”
ಯಾವುದೇ ಉನ್ನತ ನಾಜಿ ನಾಯಕರು ಉದಾರವಾದಿ ಅಥವಾ ನಾಸ್ತಿಕ ಕುಟುಂಬವನ್ನು ಹೊಂದಿರಲಿಲ್ಲ. ಹಿಮ್ಲರ್ ವಿಧಿವತ್ತಾಗಿ ಕ್ಯಾಥೊಲಿಕ್ ಪೂಜೆಗಳಿಗೆ ಹಾಜರಾಗುತ್ತಿದ್ದನು, ಆದರೆ ಆರ್ಯರ ಬಗ್ಗೆ ಹೆಚ್ಚು ಗೀಳನ್ನು ಹೊಂದಿ, ಕ್ರಿಶ್ಚಿಯನ್ ಮತ್ತು (ಕ್ರೈಸ್ತೇತರ ಗು೦ಪಾದ) ಕ್ಯಾಥರ್ ಅವಶೇಷಗಳಾದ ‘ಹೋಲಿ ಗ್ರೇಲ್’ (ಪವಿತ್ರ ಬಟ್ಟಲು) ಮತ್ತು ‘ಸ್ಪಿಯರ್ ಆಫ್ ಲಾಂಗಿನಸ್’ (ಲಾ೦ಗಿನಸ್ಸಿನ ಭರ್ಜಿ)ಗಳನ್ನು ಹುಡುಕಲು ತ೦ಡಗಳನ್ನು ಕಳುಹಿಸಿದನು.
ಹಾಗಿದ್ದರೂ, ಬೇಹುಗಾರಿಕೆಯ ವಿಭಾಗ ಎಸ್ ಡಿ (Sicherheitsdienst - S D) ಯ ಮುಖ್ಯಸ್ಥರ ಪ್ರಕಾರ, ಅವರು ಗಣ್ಯ ದಳವಾದ ಎಸ್ ಎಸ್ (Schutzstaffel ಅಥವಾ S S ) ಅನ್ನು, ವಿಶೇಷವಾಗಿ ಅವರ ಮಾನಸಿಕ ಮುದ್ರೆಯನ್ನು ಮತ್ತು ರಚನೆಯನ್ನು ಜೆಸ್ವಿಟ್ ಪಾದ್ರಿಗಳ ತರಹ ಕಟ್ಟಿದ್ದನು
"ನನ್ನ ಇಗ್ನೇಷಿಯಸ್ ಲೊಯೋಲ" (ಜೆಸ್ವಿಟ್ ಧಾರ್ಮಿಕರ ಸ್ಥಾಪಕ) ಎಂದು ಹಿಮ್ಲರ್ಅನ್ನು ಹಿಟ್ಲರ್ ಕರೆದನು. ಉನ್ನತ ನಾಝಿಗಳಲ್ಲಿ ಕನಿಷ್ಠ ಸೈದ್ಧಾಂತಿಕನಾಗಿದ್ದ ಗೋರಿಂಗ್, ಪ್ರೊಟೆಸ್ಟಂಟ್ ಮತ್ತು ಕ್ಯಾಥೊಲಿಕ್ ಸಂಪ್ರದಾಯಗಳನ್ನು ಕೆಲವೊಮ್ಮೆ ಅನುಮೋದಿಸಿ ಮತ್ತು ಕೆಲವೊಮ್ಮೆ ಟೀಕಿಸಿದನು. ಗಬೆಲ್ಸ್ ಕ್ಯಾಥೊಲಿಕ್ ಧರ್ಮದ ವಿರುದ್ಧ ಬಿದ್ದು ಒ೦ದು ಸುಧಾರಿತ ಆರ್ಯನ್ ನಂಬಿಕೆಯ ಕಡೆಗೆ ತಿರುಗಿದನು. ಯುಗೊಸ್ಲಾವಿಯದ ಹಿಟ್ಲರನ ನಿಯೋಜಿತ ಆಡಳಿತಗಾರ ಎ. ಪಾವೆಲಿಕ್, ಕ್ರೊಯೇಷಿಯಾದ ಕ್ಯಾಥೊಲಿಕ್ ಆಗಿದ್ದು, ಅವನು ಗ್ರೀಕ್ ಆರ್ಥೊಡಾಕ್ಸ್ ಸರ್ಬರಾಗಿದ್ದ ಸ್ಲಾವ್ ಜನಾ೦ಗದವರನ್ನು ಕೊಲ್ಲಲು ಆರಂಭಿಸಿದನು. ಪೋಪ್ ಪಿಯಸ್ ಖಾಸಗಿಯಾಗಿ ಪಾವೆಲಿಕ್ ಅನ್ನು ಸ್ವೀಕರಿಸಿದರು, ಆ ಮೂಲಕ ಅವನ ಆಡಳಿತವನ್ನು ಅನುಮೋದಿಸಿದರು ಮತ್ತು ಅದರ ನಿಜರೂಪದ ಬಗ್ಗೆ ಮೌನವಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ