ದಿಲ್ಲಿಯಿ೦ದ ಪಾಕಿಸ್ತಾನಕ್ಕೆ ಹೊರಟಿರುವ ನಿರಾಶ್ರಿತರು ದಿಲ್ಲಿ ರೈಲು ನಿಲ್ದಾಣದಲ್ಲಿ - , ಸಪ್ಟ೦ಬರ್ ೧೯೪೭
೧೯೪೭ರಲ್ಲಿ ಜಮ್ಮು ಮುಸ್ಲಿಮರ ವಿರುದ್ಧ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಕರಣ್ ಥಾಪರ್ ಅಂಕಣವನ್ನು 'ಏಷ್ಯನ್ ಏಜ್' ದಿನಪತ್ರಿಕೆ ಮೊದಲು ಪ್ರಕಟಿಸಿ ಅನ೦ತರ ಅದೇ ಅಂಕಣವನ್ನು ತಡೆಹಿಡಿಯಲು "ಮಾಲೀಕರು ನಿರ್ಧರಿಸಿದ್ದಾರೆ" ಎಂದು ತಿಳಿಸಲಾಯಿತು.
ಲೇಖನವು ಪ್ರಧಾನಿ ಮೋದಿಯವರ ‘ವಿಭಜನೆಯ ಭಯಾನಕ ಸ್ಮರಣೆಯ ದಿನ'ವನ್ನು ಪ್ರಶ್ನಿಸಿತ್ತು.
ಅಜೋಯ್ ಆಶೀರ್ವಾದ್ ಮಹಾಪ್ರಶಸ್ತಾ ದಿ ವಯರ್ 25 / ಆಗಸ್ಟ್ / 2021
ವಿಭಜನೆಯ ಸಮಯದಲ್ಲಿ ಜಮ್ಮುವಿನ ಮುಸ್ಲಿಮರ ವಿರುದ್ಧ ನಡೆದ ಹಿ೦ಸಾಚಾರವನ್ನು ಪ್ರಸ್ತಾಪಿಸಿದ್ದಕ್ಕಾಗಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರು ತಮ್ಮ ಪಾಕ್ಷಿಕ ಅಂಕಣವನ್ನು 'ಏಷ್ಯನ್ ಏಜ್' ಪತ್ರಿಕೆಯು ಪ್ರಕಟಿಸಿದ ನ೦ತರ ಹಿ೦ತೆಗೆದುಕೊ೦ಡದ್ದನ್ನು ಅನುಭವಿಸ ಬೇಕಾಯಿತು. ಇದು ನರೇಂದ್ರ ಮೋದಿ ಸರ್ಕಾರದ ಬಹುಸಂಖ್ಯಾವಾದದ ಬಯಕೆಗಳಿಗೆ ಭಾರತೀಯ ಮಾಧ್ಯಮ ಸಂಸ್ಥೆಯೊ೦ದು ಶರಣಾದ ಇತ್ತೀಚಿನ ಘಟನೆಯಾದ೦ತೆ ತೋರುತ್ತದೆ.
ಥಾಪರ್ ಅವರು 'ದಿ ವೈರ್' ಗೆ ಹೇಳಿದ ಪ್ರಕಾರ ತಮ್ಮ ಅ೦ಕಣ "ಏಸ್ ಐ ಸೀ ಇಟ್" (‘ನಾನು ಕ೦ಡ೦ತೆ’)ಅನ್ನು ಆಗಸ್ಟ್ 20, 2021 ರಂದು ಪ್ರಕಟಿಸಿದ ನಂತರ, ಈ ರಾಷ್ಟ್ರೀಯ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಕೌಶಿಕ್ ಮಿತ್ತರ್ ಅವರು ಪತ್ರಿಕೆಯ ಮಾಲೀಕರು ತಮ್ಮ ಅಂಕಣವನ್ನು "ತಡೆಹಿಡಿಯಲು" ಸೂಚಿಸಿದ್ದಾರೆ ಎಂದು ತಿಳಿಸಿದರು.
ಮಿತ್ತರ್ ಅವರಿಗೆ ಪತ್ರಿಕೆಯ ಮಾಲೀಕರು ಅ೦ಕಣದ ಕೊನೆಯ ಮೂರು ಪರಿಚ್ಛೇದಗಳಿಗೆ ಹಿ೦ದೇಟು ಬರುವ ಭಯವಿದೆ ಎಂದು ಸ್ಪಷ್ಟವಾಗಿಹೇಳಿದರು. ಇದರಲ್ಲಿ ಥಾಪರ್ ವಿಭಜನೆಯ ಸಮಯದಲ್ಲಿ ಇತಿಹಾಸದ ಉತ್ತಮ ದಾಖಲಿತ ಅಧ್ಯಾಯವಾದ ಜಮ್ಮುವಿನ ಮುಸ್ಲಿಮರ ಮೇಲಿನ ಹಿಂಸಾಚಾರ ಇದು ಮತ್ತು ಅದರಿ೦ದಾಗಿ ಪ್ರದೇಶದಿಂದ ಸಮುದಾಯದ ಸಾಮೂಹಿಕ ಸ್ಥಳಾಂತರಗಳ ಬಗ್ಗೆ ಬರೆದಿದ್ದಾರೆ.
ಕಳೆದ 10 ತಿಂಗಳುಗಳಿಂದ ಪತ್ರಿಕೆಯ ಆಹ್ವಾನದ ಮೇರೆಗೆ 'ಏಶನ್ ಏಜ್' ದೈನಿಕದಲ್ಲಿ ಅ೦ಕಣವನ್ನು ಬರೆಯುತ್ತಿದ್ದು, ಈ ಸಮಯದಲ್ಲಿ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹಿಂದೂ-ಬಹುಸಂಖ್ಯಾತ ಸಾಮಾಜಿಕ ಮತ್ತು ರಾಜಕೀಯ ಕಾರ್ಯಸೂಚಿ ಸೇರಿದಂತೆ ನೀತಿಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆದಿದ್ದಾರೆ.
ಅವರ ಈ (ಕೊನೆಯ) ಅಂಕಣದಲ್ಲಿ ಆಗಸ್ಟ್ 14 ರನ್ನು 'ವಿಭಜನೆಯ ಭಯಾನಕ ಸ್ಮರಣೆಯ ದಿನ' (ಇದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಕೂಡ) ಎ೦ದು ನೆನಪಿಸಿಕೊಳ್ಳುವ ಮೋದಿಯವರ ಇತ್ತೀಚಿನ ಘೋಷಣೆಯನ್ನು ನಿರ್ದಿಷ್ಟವಾಗಿ ಭಾರತದಲ್ಲಿ ಮುಸ್ಲಿಂ ವಿರೋಧಿ ಭಾವನೆ ಮೂಡಿಸಲು ಉದ್ದೇಶಿಸಲಾಗಿದೆ ಎಂದು ಅವರು ವಾದಿಸಿದರು. ಗಡಿಯ ಎರಡೂ ಬದಿಗಳಲ್ಲಿ ಹಿಂದುಗಳು, ಸಿಖ್ಖರು ಮತ್ತು ಮುಸ್ಲಿಮರು ಸಮಾನವಾಗಿ ದೌರ್ಜನ್ಯವನ್ನು ಅನುಭವಿಸಿದರು.
ಬ್ರಿಟನ್ನಲ್ಲಿ ಯುದ್ಧವಿರಾಮ ದಿನ, ಇಸ್ರೇಲ್ ನ ಹತ್ಯಾಕಾಂಡದ ದಿನ, ಆಸ್ಟ್ರೇಲಿಯಾದಲ್ಲಿ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಯುದ್ಢ ಮುಗಿದ ‘ಆನ್ ಝಾಕ್’ ದಿನ, ಮತ್ತು ಅಮೆರಿಕದಲ್ಲಿ ಥ್ಯಾಂಕ್ಸ್ಗಿವಿಂಗ್ ಡೇ, ಈ ಎಲ್ಲ ಉದಾಹರಣೆಗಳನ್ನು ಉಲ್ಲೇಖಿಸಿ ಥಾಪರ್ ಇವೆಲ್ಲ ಹಿಂದಿನ ತಪ್ಪುಗಳ ವಿರುದ್ಧ ಜನರನ್ನು ಒಟ್ಟುಗೂಡಿಸಲು ಉದ್ದೇಶಿತವಾಗಿವೆ.
ಆದರೆ ಪ್ರಧಾನಮಂತ್ರಿಯವರ ಈ ಕ್ರಮವು ಭಾರತದ ಜನರನ್ನು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಿಸುವ ಉದ್ದೇಶವನ್ನು ಹೊಂದಿದೆ ಎಂದು ಥಾಪರ್ ಅಭಿಪ್ರಾಯಪಟ್ಟರು.
ವಿಭಜನೆಯ ಸಮಯದಲ್ಲಿ ಎಲ್ಲಾ ಸಮುದಾಯಗಳು ಅನ್ಯದ್ವೇಷದ ಹಿಂಸೆಯನ್ನು ಅನುಭವಿಸಿವೆ ಎಂದು ಸ್ಥಾಪಿಸುವ ಪ್ರಯತ್ನದಲ್ಲಿ, ಅವರು 1947 ರ ಜನಾಂಗೀಯ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಅಥವಾ ಸ್ಥಳಾಂತರಗೊಂಡ ಅಧಿಕ ಸಂಖ್ಯೆಯ ಜಮ್ಮುವಿನ ಮುಸ್ಲಿಮರನ್ನು ತಮ್ಮ ಓದುಗರಿಗೆ ನೆನಪಿಸಿದರು.
"ಆ ಸಮಯದಲ್ಲಿ, ಜಮ್ಮು ಮುಸ್ಲಿಂ -ಬಹುಸಂಖ್ಯಾತ ನಗರ ಆಗಿತ್ತು. ಆದರೂ ಕೆಲವೇ ವಾರಗಳಲ್ಲಿ ಕೋಮು ಗಲಭೆಗಳು, ಸಾಮೂಹಿಕ ಹತ್ಯೆಗಳು ಮತ್ತು ಬಲವಂತದ ವಲಸೆಯು ಅದನ್ನು ಹಿಂದೂ-ಬಹುಸಂಖ್ಯಾತ ನಗರವನ್ನಾಗಿ ಪರಿವರ್ತಿಸಿತು. ಸಮಕಾಲೀನ ದಾಖಲೆಗಳು ಮತ್ತು ಇತಿಹಾಸಕಾರರು ಕೊಲ್ಲಲ್ಪಟ್ಟ ಅಥವಾ ಹೊರಹಾಕಲ್ಪಟ್ಟವರ ಸಂಖ್ಯೆಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಲೆಕ್ಕಿಸಿದವು, ” ಎ೦ದು ತಮ್ಮ ಪ್ರಸ್ತುತ ಅಂಕಣ '1947 ವಿಭಜನೆಯ ಭಯಾನಕ ಕತೆಗಳು : ಆಯ್ದು ತೆಗೆದ ನೆನಪು?' ಇದರಲ್ಲಿ ಥಾಪರ್ ಬರೆದಿದ್ದಾರೆ.
ಅವರು ಜಮ್ಮುವಿನಲ್ಲಿ ಮುಸ್ಲಿಂ ವಿರೋಧಿ ಹಿಂಸೆಯನ್ನು ದಾಖಲಿಸಿದ ಅನೇಕ ಮೂಲಗಳನ್ನು ಉಲ್ಲೇಖಿಸಿದರು - 'ದಿ ಸ್ಪೆಕ್ಟೇಟರ್' ನಲ್ಲಿ ಮಹಾತ್ಮ ಗಾಂಧಿಯವರನ್ನು ಉದ್ಢರಿಸಿದ ವರದಿಗಳು, 'ದಿ ಸ್ಟೇಟ್ಸ್‌ಮನ್'ನಲ್ಲಿನ ವರದಿ, ಮತ್ತು ಖ್ಯಾತ ವಿದ್ವಾಂಸರಾದ ಅರ್ಜುನ್ ಅಪ್ಪದುರೈ ಮತ್ತು ಏರಿಯನ್ ಮ್ಯಾಕ್ ಅವರ ಲೇಖನಗಳು ಮತ್ತು ಭಾರತದ ಮಾಜಿ ಮುಖ್ಯ ಮಾಹಿತಿ ಆಯುಕ್ತ, ವಜಾಹತ್ ಹಬೀಬುಲ್ಲಾ.
ಈ ಮೂಲಗಳಿಂದ ಉಲ್ಲೇಖಿಸಿದ ಅವರು, ರಾಜ್ಯ ಅಧಿಕಾರಿಗಳ ಮೌನ ಬೆಂಬಲದೊಂದಿಗೆ ಹಿಂದೂಗಳು ಮತ್ತು ಸಿಖ್ಖರು ನಡೆಸಿದ ಹಿಂಸಾಚಾರದಲ್ಲಿ ಎರಡರಿಂದ ಐದು ಲಕ್ಷ ಮುಸ್ಲಿಮರು ಕೊಲ್ಲಲ್ಪಟ್ಟರು ಮತ್ತು ಜಮ್ಮುವಿನಲ್ಲಿ ಇನ್ನೂ ಅನೇಕರು ಸ್ಥಳಾಂತರಗೊಂಡರು ಎಂದು ಅಂದಾಜಿಸಿದ್ದಾರೆ. 'ಟೈ೦ಸ್ ಆಫ್ ಇ೦ಡಿಯ' ಅಂಕಣಕಾರ ಸ್ವಾಮಿನಾಥನ್ ಅಯ್ಯರ್ 2018 ರ ಒ೦ದು ಅಂಕಣದಲ್ಲಿ ಜಮ್ಮುವಿನ ಮುಸ್ಲಿಮರ ಹತ್ಯಾಕಾಂಡವು "ಐದು ದಶಕಗಳ ನಂತರ ನಡೆದ ಪಂಡಿತ ಜನಾಂಗೀಯ ಶುದ್ಧೀಕರಣವನ್ನು ಮೀರಿದೆ" ಎಂದು ಹೇಳಿದ್ದರು.
ಥಾಪರ್ ನಂತರ ತನ್ನ ಲೇಖನವನ್ನು ಈ ಪ್ರಶ್ನೆಯೊಂದಿಗೆ ಮುಗಿಸಿದರು: "ಈಗ ಶ್ರೀ ಮೋದಿಯವರು ವಿಭಜನೆಯ ಭೀಕರತೆಯನ್ನು ನೆನಪಿಟ್ಟುಕೊಳ್ಳಲು ಬಯಸುತ್ತಾರೆ, ಇದರಲ್ಲಿ (ಜಮ್ಮು ಮುಸ್ಲಿಮರ ಹತ್ಯೆ ಮತ್ತು ಅವರ ವಿರುದ್ಧ ದೌರ್ಜನ್ಯ) ಸೇರಿದೆಯೇ ?"
“'ಏಶನ್ ಏಜ್ 'ನ ಮಾಲೀಕರು ಇದು ಹಿಂದೂ-ಮುಸ್ಲಿಂ ಸಮಸ್ಯೆಗಳನ್ನು ಕೆರಳಿಸುವ ಒಂದು ತುಣುಕು ಎಂದು ಭಾವಿಸುತ್ತಾರೆ ಮತ್ತು ಆ ಸಮಸ್ಯೆಗಳನ್ನು ಪ್ರಸ್ತಾಪಿಸುವುದು ಅವರಿಗೆ ಇಷ್ಟವಿಲ್ಲ. ಇದು ಅವರನ್ನು ಚಿಂತೆಗೀಡುಮಾಡಿದೆ. ”
"ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರವು ಅವರ ಮೇಲೆ ಹೇರುವ ಒತ್ತಡದಿಂದ ಅವರು ಹೆದರುತ್ತಾರೆ" ಎಂದು ಥಾಪರ್ ಹೇಳಿದರು.
"1947 ರಲ್ಲಿ ಮೂರು-ನಾಲ್ಕು ತಿಂಗಳ ಅವಧಿಯಲ್ಲಿ ಜಮ್ಮುವಿನ ಮುಸ್ಲಿಮರ ವಿರುದ್ಧದ ಹಿಂಸಾಚಾರವು ಇತಿಹಾಸದಲ್ಲಿಉತ್ತಮವಾಗಿ ದಾಖಲಿಸಲ್ಪಟ್ಟಿದೆ . ಇದು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಹಾಗಾಗಿ ಮಾಲೀಕರು ಅಪಾರ ಒತ್ತಡದಲ್ಲಿದ್ದಾರೆ ಎಂದು ನಾನು ಊಹಿಸುತ್ತೇನೆ, ಸಂಭಾವ್ಯವಾಗಿ ಶ್ರೀ ಮೋದಿ ಮತ್ತು ಶ್ರೀ ಶಾ ಅವರಿಂದ".
ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮತ್ತು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಮುಂತಾದ ಅನೇಕ ಬಿಜೆಪಿ ನಾಯಕರು ತನ್ನ ಸ೦ಭಾಷಣೆಗಳಲ್ಲಿ ಕಾಣಿಸಿಕೊಳ್ಳದಂತೆ ಪಕ್ಷದ ಹೈಕಮಾಂಡ್ ಆದೇಶಿಸಿದೆ ಎ೦ದು ಥಾಪರ್ ತಿಳಿಸಿದರು. 'ಏಷ್ಯನ್ ಏಜ್ ' ತನ್ನ ಅಂಕಣವನ್ನು ನಿಲ್ಲಿಸುವಂತೆ ಮಾಡಿದ್ದು ಮೋದಿ-ಶಾ ಜೋಡಿಯ ಸೇಡಿನ ಕ್ರಮವಾಗಿರಬಹುದು ಎಂದು ಸೂಚಿಸುತ್ತದೆ.
'ಏಷ್ಯನ್ ಏಜ್ ' ಪತ್ರಿಕೆಯ ಜೊತೆ ತಮಗೆ ಯಾವುದೇ ಸಮಸ್ಯೆ ಇರಲಿಲ್ಲ ಈ ಮೊದಲು. ನಾನು ಬರೆದ ಎಲ್ಲವನ್ನೂ ಪ್ರಶ್ನಿಸದೆ ಪ್ರಕಟಿಸಿದೆ. ಜಮ್ಮುವನ್ನು ಮುಸ್ಲಿಂ-ಬಹುಸಂಖ್ಯಾತರಿಂದ ಹಿಂದೂ-ಬಹುಸಂಖ್ಯಾತ ನಗರವಾಗಿ ಪರಿವರ್ತಿಸಿದ ಕುಪ್ರಸಿದ್ಧ ಹತ್ಯಾಕಾಂಡದ ಬಗ್ಗೆ ಬರೆದ ಅ೦ಕಣಕ್ಕೆ ಮಾಲೀಕರು ಆಕ್ಷೇಪಿಸಿದರೆ, ನಾನು ಅವರಿಗೆ ಇನ್ನು ಮು೦ದೆ ಬರೆಯುವುದಿಲ್ಲ ಎಂದು ನಾನು ತಿಳಿಸಿದ್ದೇನೆ , ಎಂದು ಥಾಪರ್ ಹೇಳಿದರು.
ಎರಡು ವರ್ಷಗಳ ಹಿಂದೆ ಜಮ್ಮುವಿನ ವಿಭಜನೆಯ ಹಿಂಸಾಚಾರದ ಬಗ್ಗೆ ತಮ್ಮ 'ಹಿಂದುಸ್ತಾನ್ ಟೈಮ್ಸ್'' ಅ೦ಕಣ 'ಸಂಡೇ ಸೆಂಟಿಮೆಂಟ್ಸ್' ನಲ್ಲಿ ಬರೆದಿದ್ದ ಥಾಪರ್, ಇನ್ನೊ೦ದು ರಾಷ್ಟ್ರೀಯ ದಿನಪತ್ರಿಕೆಯು ಒತ್ತಡಕ್ಕೆ ಬಿಟ್ಟುಕೊಡುವಷ್ಟು ಬಲಹೀನವಾಗಿರುವುದು ಆಶ್ಚರ್ಯಕರವಾಗಿದೆ ಎ೦ದರು .
ಭಾರತ ಪಾಕಿಸ್ತಾನ ವಿಭಜನೆಯ ಇತಿಹಾಸದ ವಾಸ್ತವ ಸ್ಥಿತಿಗತಿ ಬಗ್ಗೆ ಬರೆದ ಪತ್ರಕರ್ತರಿಗೆ ಹಾಗೂ ಪತ್ರಿಕೆಗಳಿಗೆ ಇರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ನಡೆ ಅಮಾನವೀಯ. ಸನ್ಮಾನ್ಯ ಶ್ರೀ ಸುಂದರ ಥಾಮಸ್ ರವರು ಅನುವಾದ ಮೂಲಕ ಕನ್ನಡ ಕುಲಕೋಟಿಗೆ
ಪ್ರತ್ಯುತ್ತರಅಳಿಸಿಹಾಗೂ ಸಂವಿಧಾನ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ.
ಡಾ.ಸುಬ್ರಮಣ್ಯ ಸ್ವಾಮಿ . ಪ್ರಾಧ್ಯಾಪಕರು.
ತಮ್ಮ ಪ್ರೋತ್ಸಾಹಕ್ಕೆ ಕೃತಜ್ಞನಾಗಿದ್ದೇನೆ . ಸುಂದರ್
ಅಳಿಸಿನಿಮ್ಮ ಈ ಕೆಲಸ ನಿಜಕ್ಕೂ ಬಹಳ ಮೌಲಿಕ ಹಾಗೂ ಪ್ರಶಂಸನೀಯ ಸಾರ್. ಧನ್ಯವಾದಗಳು.ಡಾ.ಸುಬ್ರಮಣ್ಯ ಸ್ವಾಮಿ. ಪ್ರಾಧ್ಯಾಪಕರು ಕನ್ನಡ ವಿಭಾಗ.ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು.ಮಲ್ಲೇಶ್ವರಂ.ಬೆಂಗಳೂರು.
ಅಳಿಸಿ