ಪೋಸ್ಟ್‌ಗಳು

  ಚೊಮ್ಸ್ಕಿ ಸ೦ದರ್ಶನ ೧. ಎಡ ಪ೦ಥ ವ್ಯಾಖ್ಯಾನ    ಮತ್ತು  ೨. ಮುಕ್ತ ಭಾಷಣದ ತತ್ವ ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ವ್ಯಕ್ತಿ  ಒಬ್ಬರಲ್ಲದೆ  ಎಡವಿಚಾರ ಧಾರೆಯಲ್ಲಿ ಪ್ರಭಾವಿ, ವಿದ್ವಾಂಸ, ಲೇಖಕ, ಶಿಕ್ಷಕ, ಬುದ್ಧಿಜೀವಿ, ಕಾರ್ಯಕರ್ತ, ಮತ್ತು ವಿಮರ್ಶಕ, ನೋಮ್ ಚೋಮ್ಸ್ಕಿ ‘ಪ್ಲೆಬಿಟಿ’ ಸ೦ಸ್ಥೆಯ ವಾಕ್ ಸ್ವಾತಂತ್ರ್ಯ ಮತ್ತು ಎಡ ವಿಚಾರ ಸಮ್ಮೇಳನದಲ್ಲಿ ಭಾಗವಹಿಸಿದ ಸ೦ದರ್ಭದಲ್ಲಿಅವರ ಮು೦ದೆ ಇಟ್ಟ ಪ್ರಶ್ನೆಗಳು ಮತ್ತು ಚೊಮ್ಸ್ಕಿ ಹೇಳಿಕೆಗಳು: ಭಾಗ ೧ - ಎಡ ಪ೦ಥ ವ್ಯಾಖ್ಯಾನ ಸ೦ದರ್ಶಕ : ಎಡಪ೦ಥ  ಇಂದು ಅವನತಿಯಲ್ಲಿದೆ ಎ೦ದು, ಅಥವಾ ಅದು ತನ್ನ  ಪ್ರಸ್ತುತತೆಯನ್ನು ಕಳೆದುಕೊ೦ಡಿದೆ ಎ೦ದು, ಅಥವಾ ತನ್ನ ಅಸ್ತಿತ್ವವನ್ನೇ ಕಳೆದುಕೊ೦ಡಿದೆ  ಎಂದು ಹಲವರು ನಂಬುತ್ತಾರೆ. ಸ್ವಯಂ-ಗುರುತಿಸಲ್ಪಟ್ಟ ‘ಎಡ’ ಆ೦ದೋಲನ  ಮುರಿದು ವಿಭಜಿತವಾಗಿದೆ. ತಮ್ಮನ್ನು ಎಡಪಂಥೀಯರು ಎಂದು ಕರೆದುಕೊಳ್ಳುವ ಕೆಲವರು ವರ್ಗ ಮತ್ತು ಆರ್ಥಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತಿದ್ದರೆ ಬೇರೆ ಕೆಲವರ ನೋಟ ಸಾಮ್ರಾಜ್ಯಶಾಹಿ ಮತ್ತು ಯುದ್ಧದ ವಿಷಯಗಳ ಮೇಲೆ, ಅಥವಾ ಸಾಂಸ್ಕೃತಿಕ ಸಮಸ್ಯೆಗಳು ಮತ್ತು ಗುರುತಿನ ರಾಜಕೀಯದ ಬಗ್ಗೆ. ಇವರೆಲ್ಲ ಸಮಾನವಾಗಿ ಎಡಪಂಥೀಯರೇ? ಮತ್ತು ಹೇಗೆ ಈ ಹಲವಾರು ವಿಭಿನ್ನ ಸಮಸ್ಯೆಗಳನ್ನು ಒಟ್ಟಿಗೆ ಒ೦ದೇ ‘ಎಡ’ ಮುದ್ದೆಗಳಾಗಿ ವರ್ಗೀಕರಿಸಬಹುದು ? ನಿಮ್ಮ ಚಿ೦ತನೆಯಲ್ಲಿ ‘ಎಡ’ ಪಂಥೀಯತೆ ಎನ್ನುವ...
  ಚೊಮ್ಸ್ಕಿ ಸ೦ದರ್ಶನ ೧. ಎಡ ಪ೦ಥ ವ್ಯಾಖ್ಯಾನ    ಮತ್ತು  ೨. ಮುಕ್ತ ಭಾಷಣದ ತತ್ವ ಭಾಗ ೨ - ಮುಕ್ತ ಮಾತಿನ ತತ್ವ ಸ೦ದರ್ಶಕ  :   ವಾಕ್ ಸ್ವಾತಂತ್ರ್ಯದ ಪ್ರಶ್ನೆಯನ್ನು ನಾವು ಇಂದಿನ ಸಂಭಾಷಣೆಯಲ್ಲಿ  ಗಮನಿಸ  ಬಯಸುತ್ತೇವೆ. ಮುಕ್ತ ಮಾತು ನಿಮಗೆ ಎಷ್ಟು ಮುಖ್ಯ ಎ೦ದು ಹೇಳುತ್ತೀರಾ ? ಚೊಮ್ಸ್ಕಿ : ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವದು  ಜೀವನದುದ್ದಕ್ಕೂ ನನ್ನ ಪ್ರಮುಖ ಬದ್ಧತೆಯಾಗಿದೆ. ವಾಕ್ ಸ್ವಾತಂತ್ರ್ಯವಿಲ್ಲದಿದ್ದಲ್ಲಿ, ನಿಮಗೆ ಬೇರೆ ಯಾವುದರ ಸ್ವಾತಂತ್ರ್ಯವೂ ಇರುವುದಿಲ್ಲ. ವಾಕ್ ಸ್ವಾತಂತ್ರ್ಯಕ್ಕೆ ಒಂದು ಅರ್ಥವಿದೆ. ಇದರರ್ಥ ನೀವು ಹೀನಯಿಸುವ,  ತಾತ್ಸಾರ ಮಾಡುವ  ದೃಷ್ಟಿಕೋನಗಳನ್ನು ಸಹಿಸಿಕೊಳ್ಳಲು ಸಿಧ್ಧರಾಗಿರುವದು. ಸ್ಟಾಲಿನ್, ಹಿಟ್ಲರ್ ಅನ್ನು ತೆಗೆದುಕೊಳ್ಳಿ, ಅವರು ಅನುಮೋದಿಸಿದ ಅಭಿಪ್ರಾಯಗಳಿಗಾಗಿ ಅವರು ವಾಕ್ ಸ್ವಾತಂತ್ರ್ಯದ ಪರವಾಗಿದ್ದರು. ಅದು ನಿರಂಕುಶವಾದ.  ಯಾವುದಾದರೂ ಅಲ್ಪ ಸ್ವಲ್ಪ ‘ಎಡ’ ನೀತಿ-ತತ್ವಗಳಿಗೆ ಸೇರಿದ್ದು,  ಅಥವಾ ಕೇವಲ  ಮಾನವರ ಮೇಲಿನ ಕಾಳಜಿಗೆ ಸೇರಿದ್ದು ಆ ರಾಷ್ಟ್ರಗಳಲ್ಲಿ  ಬಲವಾಗಿ ವಿರೋಧಿಸಲ್ಪಡುತ್ತದೆ. ಮಹಾನ್ ಎಡ ಮಾರ್ಕ್ಸ ವಾದಿ ಹುತಾತ್ಮ ರೋಸಾ ಲಕ್ಸೆಂಬರ್ಗ್ ಹೇಳಿದಂತೆ,  ವಾಕ್ ಸ್ವಾತಂತ್ರ್ಯ ಎ೦ದರೆ  ನೀವು ಇಷ್ಟಪಡದ ಅಥವಾ ನೀವು ತಿರಸ್ಕರಿಸುವ ಅಭಿಪ್ರಾಯಗಳಿಗೆ ಸ್ವಾತಂತ...
ಇಮೇಜ್
ಮೋದಿ ಸಾಕ್ಷ್ಯಚಿತ್ರ    ಭಾರತದಲ್ಲಿ   ರೂಪ ನಿರ್ಮಾಣದ   ಹೊಸದೊ೦ದು ಯುದ್ಧ ನಡೆಯುತ್ತಿದೆ. ಬಿ ಬಿ ಸಿ ಯ ಮೋದಿ ಸಾಕ್ಷ್ಯಚಿತ್ರ ಅದರ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಸಾಮಾಜಿಕ ಮಾಧ್ಯಮ ಜಗಲಿಗಳಲ್ಲಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಪ್ರಧಾನಿ ಮೋದಿ  ‘ಬಲಿಷ್ಥ ವ್ಯಕ್ತಿ’ ಎನ್ನುವ ತಮ್ಮ ರೂಪ  ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿದ್ದಾರೆ. ‘ದಿ ಪ್ರಿ೦ಟ್’ನಲ್ಲಿ    ಶ್ರುತಿ ಕಪಿಲಾ ಜನವರಿ 23, 2023  ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೋ/ANI) ಬಿಬಿಸಿ ಸಾಕ್ಷ್ಯಚಿತ್ರ 'ಮೋದಿ ಪ್ರಶ್ನೆ’ ಹಳೆಯ ಪ್ರಶ್ನೆಗಳನ್ನು ಎತ್ತಿದೆ, ಭಾರತೀಯ ‘ಡಿಜಿಟಲ್’  ಸಮುದಾಯದ ಯೋಧರು ಪ್ರಸಾರಕ ಸ೦ಸ್ಥೆಯನ್ನು  ವಜಾಗೊಳಿಸುವಂತೆ ಹೊಸದಾದ ಕರೆಗಳನ್ನು  ಪ್ರಚೋದಿಸಿದೆ ಮತ್ತು  ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ನಿರ್ಬಂಧಿಸುವಿಕೆಯನ್ನು ಸಹ  ಸಾಧಿಸಿದೆ.  ಎಲ್ಲಾ ದೇಶೀಯ ಧ್ವನಿ ಮತ್ತು ಕೋಪಕ್ಕೆ ಹೊರತಾಗಿಯೂ, ಸಾಕ್ಷ್ಯಚಿತ್ರದ ಪ್ರಸಾರದ ಮುಖ್ಯ  ಪರಿಣಾಮ ಜಾಗತಿಕ ವೇದಿಕೆಯಲ್ಲಿ ಉನ್ನತ ದರ್ಜೆ ಗಳಿಸಲು ಭಾರತದ ರೂಪ ನಿರ್ಮಾಪಕ ಆಟಗಳ  ಮೇಲೆ ಬೀಳುವುದು. ಸಾಕ್ಷ್ಯಚಿತ್ರದ ಮೇಲೆ ನಡೆಯುತ್ತಿರುವ ವಿವಾದವು  ಅ೦ತಾರಾಷ್ಟ್ರೀಯ ಸ್ಥಾನಕ್ಕೆ ಸೇರಿದ೦ತೆ   ಭಾರತ...
ಇಮೇಜ್
  ಭಾರತವು 2022 ರಲ್ಲಿ ಕಾರ್ಯಕರ್ತರು, ಮಾಧ್ಯಮಗಳ ಮೇಲೆ ದಬ್ಬಾಳಿಕೆಯನ್ನು ತೀವ್ರಗೊಳಿಸಿತು: ಮಾನವತಾ ಹಕ್ಕುಗಳ ಕಾವಲು ಸ೦ಸ್ಥೆ Human Rights Watch (HRW) - ಹ್ಯೂಮನ್ ರೈಟ್ಸ್ ವಾಚ್ ವರದಿ ಭಾರತದಾದ್ಯಂತ ಅಧಿಕಾರಿಗಳು ಕಾರ್ಯಕರ್ತರು, ಪತ್ರಕರ್ತರು ಮತ್ತು ಸರ್ಕಾರದ ಇತರ ಟೀಕಾಕಾರರನ್ನು ಭಯೋತ್ಪಾದನೆ ಸೇರಿದಂತೆ "ರಾಜಕೀಯ ಪ್ರೇರಿತ" ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಹೇಳಿದೆ.  ಜನವರಿ 12, 2023     ‘ದಿ ಹಿ೦ದು’   ದಿನಪತ್ರಿಕೆಯ ವರದಿ   ಬುಲ್ಡೋಜರ್ ಉತ್ತರ ಪ್ರದೇಶದ ಅಧಿಕಾರಿಗಳು ಗಲಭೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಪ್ರಯಾಗ ರಾಜ್ ನಲ್ಲಿರುವ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಿದರು. ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. | ಫೋಟೋ ಕ್ರೆಡಿಟ್: ರಾಯಿಟರ್ಸ್  ಹ್ಯೂಮನ್ ರೈಟ್ಸ್ ವಾಚ್‌ನ ‘ವರ್ಲ್ಡ್ ರಿಪೋರ್ಟ್ 2023 ’  (ಜಾಗತಿಕ ವರದಿ ೨೦೨೩)  ಭಾರತೀಯ ಅಧಿಕಾರಿಗಳು 2022 ರ ವೇಳೆಗೆ ಕಾರ್ಯಕರ್ತರ ಗುಂಪುಗಳು ಮತ್ತು ಮಾಧ್ಯಮಗಳ ಮೇಲೆ ತಮ್ಮ ಶಿಸ್ತುಕ್ರಮವನ್ನು "ತೀವ್ರಗೊಳಿಸಿದ್ದಾರೆ ಮತ್ತು ವಿಸ್ತರಿಸಿದ್ದಾರೆ" ಎಂದು ಹೇಳಿದರು. "ಹಿಂದೂ ರಾಷ್ಟ್ರೀಯತಾವಾದಿ" ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು “ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರನ್ನು ನಿಗ್ರಹಿಸುವ ನಿಂದನಾತ್ಮಕ...