ಚೊಮ್ಸ್ಕಿ ಸ೦ದರ್ಶನ


೧. ಎಡ ಪ೦ಥ ವ್ಯಾಖ್ಯಾನ

 

 ಮತ್ತು 


೨. ಮುಕ್ತ ಭಾಷಣದ ತತ್ವ


ಭಾಗ ೨ - ಮುಕ್ತ ಮಾತಿನ ತತ್ವ


ಸ೦ದರ್ಶಕ  :   ವಾಕ್ ಸ್ವಾತಂತ್ರ್ಯದ ಪ್ರಶ್ನೆಯನ್ನು ನಾವು ಇಂದಿನ ಸಂಭಾಷಣೆಯಲ್ಲಿ  ಗಮನಿಸ  ಬಯಸುತ್ತೇವೆ. ಮುಕ್ತ ಮಾತು ನಿಮಗೆ ಎಷ್ಟು ಮುಖ್ಯ ಎ೦ದು ಹೇಳುತ್ತೀರಾ ?


ಚೊಮ್ಸ್ಕಿ : ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವದು  ಜೀವನದುದ್ದಕ್ಕೂ ನನ್ನ ಪ್ರಮುಖ ಬದ್ಧತೆಯಾಗಿದೆ. ವಾಕ್ ಸ್ವಾತಂತ್ರ್ಯವಿಲ್ಲದಿದ್ದಲ್ಲಿ, ನಿಮಗೆ ಬೇರೆ ಯಾವುದರ ಸ್ವಾತಂತ್ರ್ಯವೂ ಇರುವುದಿಲ್ಲ.


ವಾಕ್ ಸ್ವಾತಂತ್ರ್ಯಕ್ಕೆ ಒಂದು ಅರ್ಥವಿದೆ. ಇದರರ್ಥ ನೀವು ಹೀನಯಿಸುವ,  ತಾತ್ಸಾರ ಮಾಡುವ  ದೃಷ್ಟಿಕೋನಗಳನ್ನು ಸಹಿಸಿಕೊಳ್ಳಲು ಸಿಧ್ಧರಾಗಿರುವದು.


ಸ್ಟಾಲಿನ್, ಹಿಟ್ಲರ್ ಅನ್ನು ತೆಗೆದುಕೊಳ್ಳಿ, ಅವರು ಅನುಮೋದಿಸಿದ ಅಭಿಪ್ರಾಯಗಳಿಗಾಗಿ ಅವರು ವಾಕ್ ಸ್ವಾತಂತ್ರ್ಯದ ಪರವಾಗಿದ್ದರು. ಅದು ನಿರಂಕುಶವಾದ. 


ಯಾವುದಾದರೂ ಅಲ್ಪ ಸ್ವಲ್ಪ ‘ಎಡ’ ನೀತಿ-ತತ್ವಗಳಿಗೆ ಸೇರಿದ್ದು,  ಅಥವಾ ಕೇವಲ 

ಮಾನವರ ಮೇಲಿನ ಕಾಳಜಿಗೆ ಸೇರಿದ್ದು ಆ ರಾಷ್ಟ್ರಗಳಲ್ಲಿ  ಬಲವಾಗಿ ವಿರೋಧಿಸಲ್ಪಡುತ್ತದೆ.


ಮಹಾನ್ ಎಡ ಮಾರ್ಕ್ಸ ವಾದಿ ಹುತಾತ್ಮ ರೋಸಾ ಲಕ್ಸೆಂಬರ್ಗ್ ಹೇಳಿದಂತೆ,  ವಾಕ್ ಸ್ವಾತಂತ್ರ್ಯ ಎ೦ದರೆ  ನೀವು ಇಷ್ಟಪಡದ ಅಥವಾ ನೀವು ತಿರಸ್ಕರಿಸುವ ಅಭಿಪ್ರಾಯಗಳಿಗೆ ಸ್ವಾತಂತ್ರ್ಯ.  ಇದೇ ವಾಕ್ ಸ್ವಾತಂತ್ರ್ಯದ ವ್ಯಾಖ್ಯಾನವಾಗಿದೆ, ಆದರೆ ಈ ವಾಕ್ ಸ್ವಾತ೦ತ್ರ್ಯ  ಆಕ್ರಮಣದಲ್ಲಿದೆ ಮತ್ತು ಈ ದಾಳಿ ವಿವಿಧ ಹಂತಗಳಲ್ಲಿ ಸಾಕಷ್ಟು ಮಟ್ಟದಲ್ಲಿ ನಡೆಯುತ್ತಿದೆ.  ಇದು ಹೊಸದಲ್ಲ, ಹಳೆಯದು.


ಇಂದು ಹೆಚ್ಚು ಗಮನ ಹರಿಸಲಾಗುವುದಕ್ಕೆ    ಕಾರಣವೇನ೦ದರೆ  ಹೆಚ್ಚಾಗಿ ಯುವ ವಿದ್ಯಾರ್ಥಿಗಳಿಂದ, ಇನ್ನೂ ಇತರರಿಂದ, ಅಭಿಪ್ರಾಯಗಳನ್ನು ನಿಗ್ರಹಿಸಲು ಪ್ರಯತ್ನಿಸುವುದು ಅಧಿಕಾರೂಢ ಸ್ಥಾಪನೆಗಳು  ಎಡಪಂಥದ  ದಮನಕ್ಕೆ ಬಳಸಿದ ಬಹಳ ಹಳೆಯ ತ೦ತ್ರಗಳು. ಆ ಕಾಲದಲ್ಲಿ  ಯಾರೂ ಅದರ ಬಗ್ಗೆ ಮಾತನಾಡಲಿಲ್ಲ ಏಕೆಂದರೆ ಅದು ಅವರು ಇಷ್ಟ ಮಾಡದ ಜನರ ದಮನವಾಗಿತ್ತು.


ಹಾಗೆ. ಆದರೆ ನಾವು ಪ್ರೆಸಿಡೆ೦ಟ್ ವುಡ್ರೊ ವಿಲ್ಸನ್ ಕಾಲದ  ‘ಕೆ೦ಪು ಹೆದರಿಕೆ‘ (ಟಿಪ್ಪಣಿ : Red Scare - ಸಮಾಜ ಅಥವಾ ರಾಜ್ಯದಿಂದ ಕಮ್ಯುನಿಸಂ, ಅರಾಜಕತಾವಾದ ಅಥವಾ ಇತರ ಎಡಪಂಥೀಯ ಸಿದ್ಧಾಂತಗಳ ಸಂಭಾವ್ಯ ಏರಿಕೆಯ ವ್ಯಾಪಕ ಭಯದ ಪ್ರಚಾರ).  ಪ್ರೆಸಿಡೆ೦ಟ್ ಟ್ರೂಮನ್ ಕಾಲದಲ್ಲಿ ಇದನ್ನು ಮೆಕಾರ್ಥಿ-ಇಸಂ ಎಂದು ಕರೆಯುತ್ತಾರೆ, ಇದನ್ನು ಟ್ರೂಮನ್ ಪ್ರಾರಂಭಿಸಿದರು, ಮೆಕಾರ್ಥಿ ಅವರು ಎತ್ತಿಕೊ೦ಡರು.    ಮೆಕಾರ್ಥಿ ಯೋಜನೆಯ೦ತಹ     ಎಡ ಘಟಕಗಳ ಹೆದರಿಕೆಯನ್ನು ವಿಶಾಲವಾಗಿ ಉಪಯೋಗಿಸಿದ ಯುಗಗಳ ಬಗ್ಗೆ ಯೋಚಿಸುತ್ತೇವೆ.  ಇದು ಸ್ವತಂತ್ರ ಚಿಂತನೆಯನ್ನು ಪುಡಿಮಾಡಿತು,


ಈ ಪ್ರಕ್ರಿಯೆ  ನಿರಂತರವಾಗಿರುವುದರಿಂದ ಇದು ಸ್ವಲ್ಪ ತಪ್ಪುದಾರಿಗೆಳೆಯುವಂತಿದೆ. ನಾನು ನಿಮಗೆ ಸಾಕಷ್ಟು ಉದಾಹರಣೆಗಳನ್ನು ನೀಡಬಲ್ಲೆ.


ನನ್ನ ಸ್ವಂತ ಅನುಭವ, (ಅದೇನೂ  ಅತ್ಯ೦ತ ಕೆಟ್ಟದಲ್ಲ) ಅದೇ ರೀತಿ. ಮಿತವಾಗಿಯಾದರೂ ‘ಎಡ’ ಎ೦ದು  ಕ೦ಡ ಅಭಿಪ್ರಾಯಗಳನ್ನು  ಕಡೆಗಣಿಸುವುದು 

ತೊಡೆದುಹಾಕುವದು, ನಿಗ್ರಹಿಸುವದು ಸರಿಯಾದದ್ದು ಎ೦ದು ತಿಳಿಯಲಾಗುತ್ತಿತ್ತು. 


ವಿಪರ್ಯಾಸವೆ೦ದರೆ ಅಮೆರಿಕದಷ್ಟು ಕಾನೂನಿನ ಪ್ರಕಾರ ವಾಕ್ ಸ್ವಾತ೦ತ್ಯವಿರುವ ಇನ್ನೊ೦ದು ದೇಶ ಸಿಗಲಾರದು.



1960 ರ ದಶಕದಲ್ಲಿ ಸರ್ವೋಚ್ಚ ನ್ಯಾಯಾಲಯವು ವಾಕ್ ಸ್ವಾತಂತ್ರ್ಯದ ರಕ್ಷಣೆಗೆ ಸಾಕಷ್ಟು ಉನ್ನತ ಗುಣಮಟ್ಟವನ್ನು ನಿಗದಿಪಡಿಸಿತು.


ಅದು ತಾತ್ವಿಕವಾಗಿ. ಆಚರಣೆ  ಮಾತ್ರ ಆ ರೀತಿ ಆಗಿಲ್ಲ.   


ಹಾಗಾಗಿ  ಮುಕ್ತವಾದ ವಿಚಾರಣೆ ಮತ್ತು ಮಾತನಾಡುವುದರ ಅಧಿಕಾರವನ್ನು ರಾಜ್ಯದ  ಔಪಚಾರಿಕ ಕಾರ್ಯರೀತಿ ಅಲ್ಲದ ವಿವಿಧ ರೀತಿಯಲ್ಲಿ ನಿಗ್ರಹಿಸಲಾಗಿದೆ.  


ವಾಸ್ತವವಾಗಿ ಏನೋ 80 ವರ್ಷಗಳ ಹಿಂದೆ ಜಾರ್ಜ್ ಆರ್ವೆಲ್ ಇದನ್ನು ಚರ್ಚಿಸಿದರು. ‘ಅನಿಮಲ್ ಫಾರ್ಮ್’ ಪುಸ್ತಕದ ಅವರ  ಮುನ್ನುಡಿಯಲ್ಲಿ. ಎಲ್ಲರೂ ಓದಿದ್ದಾರೆ  ‘ಅನಿಮಲ್ ಫಾರ್ಮ್’ ಪುಸ್ತಕವನ್ನು. ಆದರೆ ಪುಸ್ತಕದ  ಪೀಠಿಕೆಯನ್ನು ನಿಗ್ರಹಿಸಿದ್ದರಿಂದ ಹೆಚ್ಚು ಜನ ಓದಿಲ್ಲ. ಇದು ಹಲವು ವರ್ಷಗಳ ನಂತರ ಅವರ ಅಪ್ರಕಟಿತ ಪತ್ರಿಕೆಗಳಲ್ಲಿ ಪತ್ತೆಯಾಯಿತು. ಆದರೆ ಇದು ಆಸಕ್ತಿದಾಯಕವಾಗಿದೆ. 


ಮುನ್ನುಡಿಯನ್ನು ಇಂಗ್ಲೆಂಡಿನ,  ಸ್ವತಂತ್ರ ಇಂಗ್ಲೆಂಡಿನ, ಜನರನ್ನು ಉದ್ದೇಶಿಸಿ ಬರೆದಿದೆ.  ಪುಸ್ತಕವು  ಒರ್ವೆಲ್ ದ್ವೇಷಿಸುತ್ತಿದ್ದ ನಿರಂಕುಶ ಶತ್ರುವಿನ ವಿಡಂಬನೆಯಾಗಿದೆ ಎಂದು ಅದು ಹೇಳುತ್ತದೆ.  ಅವರು ಸ್ಟಾಲಿನಿಸ್ಟ್ ದಬ್ಬಾಳಿಕೆಯ ಕಟು ವಿರೋಧಿಯಾಗಿದ್ದರು. ಮತ್ತು ಪುಸ್ತಕ, ಸಹಜವಾಗಿ, ಸೋವಿಯತ್ ಒಕ್ಕೂಟದ ವಿಡಂಬನೆಯಾಗಿದೆ. ಆದರೆ  ಇಂಗ್ಲೆಂಡಿನ  ಜನರು ವಾಸ್ತವಾ೦ಶವನ್ನು ತಿಳಿಯದಿರಬಹುದು ಸ್ವತಂತ್ರ ಇಂಗ್ಲೆಂಡ್‌ನಲ್ಲಿ, ಜನಪ್ರಿಯವಲ್ಲದ ವಿಚಾರಗಳನ್ನು ಬಲಾತ್ಕಾರದ  ಬಳಕೆ ಇಲ್ಲದೇ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ನಿಗ್ರಹಿಸಬಹುದು. ಅವರು ಕೆಲವು ಉದಾಹರಣೆಗಳನ್ನು ನೀಡುತ್ತಾರೆ, ಕೆಲವು ಕಾರಣಗಳನ್ನು ನೀಡುತ್ತಾರೆ:


ಪತ್ರಿಕೋದ್ಯಮ್ಮ ಶ್ರೀಮಂತ ವ್ಯಕ್ತಿಗಳ  ಒಡೆತನದಲ್ಲಿದೆ,  ಕೆಲವು ವಿಚಾರಗಳನ್ನು ವ್ಯಕ್ಡಿಪಡಿಸುವುದನ್ನು ಅದುಮುವುದನ್ನು   ಅವರು ಇಚ್ಚಿಸುವುದಕ್ಕೆ  ಸಬಲ ಕಾರಣಗಳಿವೆ.


ಇದು  ನಿಖರವಾದ ವಿವರಣೆ,   ಇದರ ಸಾಕಷ್ಟು ಉದಾಹರಣೆಗಳನ್ನು ಇಂದು ಕಾಣಬಹುದು. 


ಇನ್ನೊಂದು ಅಂಶವೆಂದರೆ, ಅವರು ಹೇಳುತ್ತಾರೆ, ಪ್ರಬಲ ಸಂಸ್ಕೃತಿಯಲ್ಲಿ ಸ೦ಪೂರ್ಣ ಮುಳುಗುವಿಕೆ. ಆದ್ದರಿಂದ ನೀವು ಉತ್ತಮ ಶಿಕ್ಷಣವನ್ನು ಹೊಂದಿರುತ್ತೀರಿ, ನೀವು ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್‌ಗೆ ಹೋಗಿದ್ದೀರಿ, ಪರಿಣಾಮವಾಗಿ   ಮಾಡ ಬಾರದ, ( ನಾವು ಸೇರಿಸಬಹುದು  - ಹೇಳಲು, ಯೋಚಿಸಲು ಸಹ ಬಾರದ) ಕೆಲವು ವಿಷಯಗಳಿವೆ ಎಂಬ ತಿಳುವಳಿಕೆಯನ್ನು ನೀವು ನಿಮ್ಮೊಳಗೆ ತುಂಬಿಕೊ೦ಡಿರುತ್ತೀರಿ.


ಸರಿ, ಇದು ಯುನೈಟೆಡ್ ಸ್ಟೇಟ್ಸ್ ಗೆ ಬಹಳ ಸ್ಪಷ್ಟವಾಗಿ   ಅನ್ವಯಿಸುತ್ತದೆ.

ರಾಜ್ಯವನ್ನು ನಿಯ೦ತ್ರಿಸುವ  ಕಾರ್ಪೊರೇಟ್ ಶಕ್ತಿಯ ಬಗ್ಗೆ ತುಂಬಾ ವಿಮರ್ಶಾತ್ಮಕವಾಗಿ ಏನನ್ನೂ ಹೇಳಲು ಅಸಾಧ್ಯವಾದ  ವಿಷಯಗಳಿವೆ.


ಹೇಳಿದರೆ  ನೀವು ಜೈಲಿಗೆ ಹೋಗುವುದಿಲ್ಲ, ಆದರೆ ಹೇಳಲು ನೀವು ಸ್ವತ: ಬಯಸುವುದಿಲ್ಲ. ಇದೆಲ್ಲ ಮಾತನಾಡಿದ್ದಕ್ಕೆ ನನಗೆ ಜೈಲು ಶಿಕ್ಷೆ ಆಗುವುದಿಲ್ಲಆದರೆ 

ಅದನ್ನು   ಕಾಣಲಾಗದ ಅಂಚುಗಳಲ್ಲಿ ಇಡಲಾಗುತ್ತದೆ. ಪುಸ್ತಕಗಳನ್ನು ನಿಗ್ರಹಿಸಬಹುದು, ನನ್ನ ಪ್ರಕರಣದಲ್ಲಿ ವಾಸ್ತವವಾಗಿ ಆಗಿದೆ.  ಭಾಷಣಗಳನ್ನು ತಡೆಯಲಾಗುವದು. ಅಧ್ಯಾಪಕ ನೇಮಕಾತಿಗಳನ್ನು ನಿರಾಕರಿಸಲಾಗಬಹುದು. ನಾನು ಅದೃಷ್ಟಶಾಲಿಯಾಗಿದ್ದೆ, ಇನ್ನೂ ಹಲವರು ಆಗಲಿಲ್ಲ.ಇದು ನಿರಂತರವಾಗಿದೆ. 


ಈಗ ತಮ್ಮನ್ನು ಎಡಪಂಥೀಯರೆಂದು ಪರಿಗಣಿಸುವ ಬಹುತೇಕ ಯುವಜನರ ವಿಭಾಗಗಳು - ಅವರು ಎಡಭಾಗದಲ್ಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ, ಆದರೆ ಅವರು ತಮ್ಮನ್ನು ಎಡಭಾಗದಲ್ಲಿ ಪರಿಗಣಿಸುತ್ತಾರೆ - ಈ ತಂತ್ರಗಳಲ್ಲಿ ಕೆಲವನ್ನು ಎತ್ತಿಕೊಳ್ಳುತ್ತಿದ್ದಾರೆ, ಅವರಿಗೆ ಹಿಡಿಸದ ಅಭಿಪ್ರಯಗಳನ್ನು ಹೊ೦ದಿದ ಕೆಲವರ ಭಾಷಣಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ನಿರ್ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಇದು ತುಂಬಾ ಗಂಭೀರವಾದದ್ದು, ಇ೦ತಹದನ್ನು ಮಾಡಬಾರದು, ಈ  ತಂತ್ರಗಳು ತಪ್ಪು, ತಾತ್ವಿಕವಾಗಿ ತಪ್ಪು. ಯುದ್ಧತಂತ್ರವಾಗಿ ತಪ್ಪು ಕೂಡ. ಇವರು ಬಲಪಂಥಕ್ಕೆ ಕೊಡುಗೆ ಮಾತ್ರ, ಅದು ಅವರನ್ನು ಪ್ರೀತಿಸುತ್ತದೆ, ಅವರಲ್ಲಿ ಸಂತೋಷವಾಗುತ್ತದೆ, ಅವರೊಂದಿಗೆ ಓಡುತ್ತದೆ. ಆದ್ದರಿಂದ ಇದು ತಾತ್ವಿಕವಾಗಿ ತಪ್ಪು, ಯುದ್ಧತಂತ್ರವಾಗಿ ಸ್ವಯಂ-ವಿನಾಶಕಾರಿ - ಆದರೆ ಇದು  ಹರಡುತ್ತಿದೆ.

 

ಕೆಲವೊಮ್ಮೆ ಇದು ಒಳ್ಳೆಯ ಉದ್ದೇಶಗಳನ್ನು ಹೊಂದಿದೆ ಎಂದು ನೀವು ನೋಡಬಹುದು. ಕೆಲವು ಜನರು ಹೇಳುವಂತೆ ನಾವು ಜನಾಂಗೀಯ, ಸ್ತ್ರೀದ್ವೇಷ, ಹಿಂಸಾತ್ಮಕ ಅಭಿವ್ಯಕ್ತಿಗಳನ್ನು  ಇದರಿಂದ ಎಷ್ಟು ಜನರು ಹಾನಿಗೊಳಗಾಗುತ್ತಾರೆ ಎಂಬುದನ್ನು ನೋಡಿ ಅನುಮತಿಸಬಾರದು. 

ಇದು ಒಂದು ರೀತಿಯ ಅಂತಃಪ್ರಜ್ಞೆಯಾಗಿ ತೋರಬಹುದು.  ಆದರೆ ಹಾನಿಯನ್ನು ತಡೆಯುವ ಮಾರ್ಗವು ಅಭಿಪ್ರಾಯಗಳನ್ನು  ತಡೆಯಲು ಪ್ರಯತ್ನಿಸುವ ಮೂಲಕವಲ್ಲ.  ನೀವು ಆ ರೀತಿಯಲ್ಲಿ ಹಾನಿಯನ್ನು ನಿಲ್ಲಿಸುವುದಿಲ್ಲ. ವಾಸ್ತವವಾಗಿ, ನೀವು ಹಕ್ಕುಗಳು, ನ್ಯಾಯ, ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತಿರುವವರಿಗೆ ವಿಶ್ವಾಸಾರ್ಹತೆಯನ್ನು ನೀಡುವ ಮೂಲಕ ಅದನ್ನು ಹೆಚ್ಚಿಸುತ್ತೀರಿ.  ಅವರು ಅದನ್ನು ಮೆಚ್ಚುತ್ತಾರೆ.


ಹಾಗಾಗಿ ಇವುಗಳು ಇದೀಗ ಬಹಳ ನಿರ್ಣಾಯಕ ಸಮಸ್ಯೆಗಳಾಗಿವೆ ಎಂದು ನಾನು ಭಾವಿಸುತ್ತೇನೆ. ವಿಶ್ವವಿದ್ಯಾನಿಲಯಗಳಲ್ಲಿ ಅನೇಕರು ಮಾತನಾಡಲು ಬಹುತೇಕ ಭಯಪಡುತ್ತಾರೆ ಏಕೆಂದರೆ ಅವರು ಯಾರದಾದರೂ ಮನಸ್ಸು ನೋಯಿಸುವಂತಹದನ್ನು ಹೇಳಬಹುದು ಎ೦ಬ ಭಯದಿ೦ದ. ಆದರೆ ಮುಕ್ತ ವಿಚಾರ, ಮುಕ್ತ ಭಾಷಣಗಳು, ಆಕ್ಷೇಪಾರ್ಹವಾದ ಚರ್ಚೆ,  ಇವನ್ನೇ ವಿಶ್ವವಿದ್ಯಾನಿಲಯದಲ್ಲಿ  ಮಾಡಬೇಕು.  ನಿಮಗೆ ಕಲಿಸಲಾಗಿರುವ ವಿಚಾರಗಳ ಬಗ್ಗೆ ಯೋಚಿಸ ಬೇಕು. ಅದು ವಿಧ್ವಂಸಕವಾಗಬಹುದು. ಆದರೆ ಇದು  ಇತಿಹಾಸದಲ್ಲಿಎ೦ದೆ೦ದೂ ನಡೆದಿದೆ.


ಗ್ರೀಸ್, ಶಾಸ್ತ್ರೀಯ ಗ್ರೀಕ್ ಇತಿಹಾಸಕ್ಕೆ  ಹಿಂತಿರುಗಿ. ಯಾರೋ ಒಬ್ಬರನ್ನು ಆತ್ಮಹತ್ಯೆ ಕೈಗೊಳ್ಳಲು  ಬಲವ೦ತ ಮಾಡಲಾಯಿತು ಏಕೆಂದರೆ ಆತನು ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಅಥೆನ್ಸ್‌ನ ಯುವಕರನ್ನು ಭ್ರಷ್ಟಗೊಳಿಸುತ್ತಿದ್ದನು - ಸಾಕ್ರಟೀಸ್.


ಅದು ಸತ್ಯ. ಪ್ರಶ್ನೆಗಳನ್ನು ಕೇಳುವುದು ವಿಧ್ವಂಸಕ. ಆರ್ವೆಲ್ ಹೇಳಿದಂತೆ, ಪ್ರಶ್ನೆಗಳನ್ನು ಎತ್ತುವುದು ಎನ್ನುವದರ ಅರ್ಥ ಯಾವುದರ ವಿರುಧ್ಧವಾಗಿ   ಹೇಳುವದು  ಅಥವಾ ಯೋಚಿಸುವದು  ಸರಿಯಲ್ಲ ಎ೦ದು ನಿಮಗೆ ಕಲಿಸಿಕೊಡಲಾಗಿದೆಯೋ ಅವುಗಳ ಬಗ್ಗೆ ಪ್ರಶ್ನಿಸುವದು. ಖ೦ಡಿತವಾಗಿಯೂ ಬುಡಮೇಲು ಮಾಡುವ ವರ್ತನೆ. ಮತ್ತು ಮುಕ್ತ  ವಿಚಾರಣೆಗೆ ,ಜೀವನವು ಹೇಗೆ ಕಾರ್ಯನಿರ್ವಹಿಸುತ್ತದೆ, ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ,  ಅದು ಹೇಗೆ ಇರಬೇಕು ಎಂಬ ಬಗ್ಗೆ  ತಿಳುವಳಿಕೆ, ಒ೦ದು ಪರಿಕಲ್ಪನೆಯನ್ನು ಪಡೆಯಲು,

ಮೀಸಲಾದ ಸಂಸ್ಥೆಯಲ್ಲಿ ಯಾರಾದರೂ  ನಿರೀಕ್ಷಿಸಬಹುದಾದದ್ದು ಈ ವರ್ತನೆಯನ್ನೇ. 


ಇದು ಸವಾಲಿನ, ಪ್ರಚೋದನಕಾರಿ ಸ್ಥಳ ಆಗಿರಬೇಕು. ಇದರರ್ಥ ಕೆಲವೊಮ್ಮೆ ನಿಮಗೆ ಕೇಳಲು ಬಯಸದಿರುವ ವಿಷಯಗಳನ್ನು ಕೇಳಬೇಕು.


ಪ್ರಪಂಚದ ಬಗ್ಗೆ ತಿಳುವಳಿಕೆ ಇಲ್ಲದೆ ಜೀವಿಸುವದು,,  ಅಥವಾ ಅದರ ನಿಜ ಸ್ವಭಾವ ಬೇರೆ ಏನೋ ಇದೆ   ಎಂದು ನಟಿಸುವುದು,  ನಿರಂಕುಶ ರಾಜ್ಯದಲ್ಲಿ ಅಥವಾ ನಮ್ಮ ದೇಶದಲ್ಲಿ ಅನೇಕ ವಿಷಯಗಳಲ್ಲಿರುವಂತೆ  ಪ್ರಚಾರದ ಗುಳ್ಳೆಗಳ ಜಗತ್ತಿನಲ್ಲಿ ವಾಸಿಸುವದು ತುಂಬಾ ಸಮಾಧಾನಕರವಾಗಿರಬಹುದು.


ಆದರೆ ನಾವು ಸಾಕ್ರಟಿಸ್ ತರದ ಯೋಚಿಸಲು ಅಹಿತಕರವಾದ ಕಷ್ಟಕರವಾದ ಪ್ರಶ್ನೆಗಳನ್ನು ಕೇಳಲು ಪ್ರೋತ್ಸಾಹಿಸುವ ಒಂದು ವಾತಾವರಣವನ್ನು ಪ್ರೋತ್ಸಾಹಿಸಬೇಕು


ಅದು ಮಾನವ ಸಮಾಜ ಮತ್ತು ಮಾನವ ಸಂಸ್ಕೃತಿ ಗಳಿಸಿದ  ಪ್ರಗತಿಯ ಮಾರ್ಗವಾಗಿದೆ.



ಸ೦ದರ್ಶಕ : ಅದೊಂದು ಮಹತ್ವದ ಸಂದೇಶ. ಮತ್ತು ನೀವು ಹೇಳಿದಂತೆ, ವಾಕ್ ಸ್ವಾತಂತ್ರ್ಯದ ಮೇಲಿನ ಈ ಆಕ್ರಮಣವು ಹೊಸದೇನಲ್ಲ,ಆದರೆ ಇದು ನಡೆಯುತ್ತಿದೆ,  ಇದು ಖಂಡಿತವಾಗಿಯೂ ವಾಕ್ ಸ್ವಾತ೦ತ್ರ್ಯ ಈಗ ಆಕ್ರಮಣದಲ್ಲಿದೆ. 


ಮತ್ತು ನಿಮ್ಮ ಮಾತಿನಿ೦ದ ನಮ್ಮ ಧ್ವನಿಯೊಂದಿಗೆ ನಿಮ್ಮ ಧ್ವನಿಯನ್ನು ಸೇರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. 


ಇತರ ಜನರು ಧೈರ್ಯವನ್ನು ಪಡೆಯಲು ಮತ್ತು ಸ್ವತಂತ್ರವಾಗಿ ಮಾತನಾಡಲು ಮತ್ತು ಮುಕ್ತವಾಗಿ ಬೆಂಬಲಿಸಲು ತಮ್ಮದೇ ಆದ ಶಕ್ತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಈ ವಿಚಾರಗಳ ವಿನಿಮಯ. ಇದು ತುಂಬಾ ಅವಶ್ಯಕವಾಗಿದೆ. ಮತ್ತು ನಿಮ್ಮ ಸಂಪೂರ್ಣ ವೃತ್ತಿಜೀವನ  ನನಗೆ ತಿಳಿದಿದೆ


ವಾಕ್ ಸ್ವಾತಂತ್ರ್ಯಕ್ಕೆ ಅಚಲ ಬೆಂಬಲದ ದೀರ್ಘ ನಿಲುವು. ಮತ್ತು ಆದ್ದರಿಂದ ನಾನು ಮತ್ತೊಮ್ಮೆ ಧನ್ಯವಾದಗಳು.


ನಮ್ಮೊಂದಿಗೆ ಸೇರಿದ್ದಕ್ಕಾಗಿ  ಧನ್ಯವಾದ ಪ್ರೊಫೆಸರ್ ಚೋಮ್ಸ್ಕಿ. ನೀವು ಏನು ಮಾಡುತ್ತಿದ್ದೀರಿ ಎಂಬುದಕ್ಕೆ ಧನ್ಯವಾದಗಳು. ಇದು ಒಂದು ಮುಖ್ಯ ಹೋರಾಟ. ಧನ್ಯವಾದ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು