ಮೋದಿ ಸಾಕ್ಷ್ಯಚಿತ್ರ  

ಭಾರತದಲ್ಲಿ   ರೂಪ ನಿರ್ಮಾಣದ   ಹೊಸದೊ೦ದು ಯುದ್ಧ ನಡೆಯುತ್ತಿದೆ. ಬಿ ಬಿ ಸಿ ಯ ಮೋದಿ ಸಾಕ್ಷ್ಯಚಿತ್ರ ಅದರ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ

ಸಾಮಾಜಿಕ ಮಾಧ್ಯಮ ಜಗಲಿಗಳಲ್ಲಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಪ್ರಧಾನಿ ಮೋದಿ  ‘ಬಲಿಷ್ಥ ವ್ಯಕ್ತಿ’ ಎನ್ನುವ ತಮ್ಮ ರೂಪ  ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿದ್ದಾರೆ.


‘ದಿ ಪ್ರಿ೦ಟ್’ನಲ್ಲಿ    ಶ್ರುತಿ ಕಪಿಲಾ

ಜನವರಿ 23, 2023 


ಪ್ರಧಾನಿ ನರೇಂದ್ರ ಮೋದಿ (ಫೈಲ್ ಫೋಟೋ/ANI)


ಬಿಬಿಸಿ ಸಾಕ್ಷ್ಯಚಿತ್ರ 'ಮೋದಿ ಪ್ರಶ್ನೆ’ ಹಳೆಯ ಪ್ರಶ್ನೆಗಳನ್ನು ಎತ್ತಿದೆ, ಭಾರತೀಯ ‘ಡಿಜಿಟಲ್’ 

ಸಮುದಾಯದ ಯೋಧರು ಪ್ರಸಾರಕ ಸ೦ಸ್ಥೆಯನ್ನು  ವಜಾಗೊಳಿಸುವಂತೆ ಹೊಸದಾದ ಕರೆಗಳನ್ನು 

ಪ್ರಚೋದಿಸಿದೆ ಮತ್ತು  ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ನಿರ್ಬಂಧಿಸುವಿಕೆಯನ್ನು ಸಹ 

ಸಾಧಿಸಿದೆ. 

ಎಲ್ಲಾ ದೇಶೀಯ ಧ್ವನಿ ಮತ್ತು ಕೋಪಕ್ಕೆ ಹೊರತಾಗಿಯೂ, ಸಾಕ್ಷ್ಯಚಿತ್ರದ ಪ್ರಸಾರದ ಮುಖ್ಯ 

ಪರಿಣಾಮ ಜಾಗತಿಕ ವೇದಿಕೆಯಲ್ಲಿ ಉನ್ನತ ದರ್ಜೆ ಗಳಿಸಲು ಭಾರತದ ರೂಪ ನಿರ್ಮಾಪಕ ಆಟಗಳ 

ಮೇಲೆ ಬೀಳುವುದು.





ಸಾಕ್ಷ್ಯಚಿತ್ರದ ಮೇಲೆ ನಡೆಯುತ್ತಿರುವ ವಿವಾದವು  ಅ೦ತಾರಾಷ್ಟ್ರೀಯ ಸ್ಥಾನಕ್ಕೆ ಸೇರಿದ೦ತೆ  

ಭಾರತದ ಹೊಸ ಯುದ್ಧಗಳ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ. 



ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ಯುಗದ ಬಲಿಷ್ಠ ವ್ಯಕ್ತಿಯಾಗಲು ಆದ್ಯತೆ ನೀಡಿದ್ದರೆ, 

ಈಗ ಆ ಚಿತ್ರಣವು ಮೃದು ಶಕ್ತಿಯಲ್ಲಿ ಭಾರತದ ದೊಡ್ಡ ಆಸ್ತಿಯ ವಿರುದ್ಧವಾಗಿದೆ. ಈ ಸೊತ್ತೆ೦ದರೆ  

ಭಾರತದ  ಬಹುಸಂಸ್ಕೃತಿಯ ಉದಾರವಾದಿ ಪ್ರಜಾಪ್ರಭುತ್ವ.

ಆದರೆ ಮೊದಲಿಗೆ, ಈ ಸಾಕ್ಷ್ಯಚಿತ್ರವು ಈಗಾಗಲೇ  ಇರುವ ಇತರ ವರದಿಗಳಿಂದ ಯಾವ ರೀತಿಯಲ್ಲಿ ಭಿನ್ನವಾಗಿದೆ ?

ಬಿ ಬಿ ಸಿಯ ಹೊಡೆತಗಳು

2002ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವು ಮೂರು ಕಾರಣಗಳಿಗಾಗಿ ಗಮನಾರ್ಹವಾಗಿದೆ. ಇವು ಯಾವುದೂ ಸ್ಪರ್ಧಾತ್ಮಕ ರಾಕ್ಷಸೀಕರಣಕ್ಕೆ  ಸಂಬಂಧಿಸಿಲ್ಲ.

ಒಂದು, ಈ ಸಾಕ್ಷ್ಯಚಿತ್ರವು ಬ್ರಿಟಿಷ್ ವಿದೇಶಾಂಗ ಕಚೇರಿಯ ಅಧಿಕೃತ ಸರ್ಕಾರಿ ವರದಿಯನ್ನು ಆಧರಿಸಿದೆ. ಎರಡು, ಮಾಜಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜ್ಯಾಕ್ ಸ್ಟ್ರಾ ಅವರೊಂದಿಗಿನ ಬಿಚ್ಚುಮನದ ಸಂದರ್ಶನದಲ್ಲಿ  ಅವರು ತಮ್ಮ ತೀರ್ಮಾನದಲ್ಲಿ  ನಿಸ್ಸಂದಿಗ್ಧರಾಗಿದ್ದಾರೆ. ಅಂತಿಮವಾಗಿ, ಇದು ಯಾವುದೊ೦ದು ಖಾಸಗಿ ಪೂರೈಕೆದಾರರ ಕೃತಿಯಲ್ಲ.  ಇದು ತನಿಖಾ ಪತ್ರಿಕೋದ್ಯಮದ ಭಾಗವಾಗಿ, ಸಾರ್ವಜನಿಕ ಸೇವಾ ಪ್ರಸಾರಕದಲ್ಲಿ ಕಾಣಿಸಿಕೊಂಡಿದೆ.   ಬ್ರಿಟಿಷ್ ಸ್ಥಾಪನೆಯ ಉತ್ಪನ್ನವಾಗಿರುವುದರ ಕಾರಣವೇ ನಿಖರವಾಗಿ  ಈ ಸಾಕ್ಷ್ಯಚಿತ್ರವನ್ನು ಅನನ್ಯವಾಗಿ ಅಧಿಕೃತವಾಗಿಸುತ್ತದೆ.

ಈ ಸಾಕ್ಷ್ಯಚಿತ್ರವು 'ಮಾನವ ಹಕ್ಕು’ಗಳಿಗೆ ಸಾಮಾನ್ಯವಾಗಿ ಜತೆಗೂಡಿದವರು,  ಅಥವಾ ಅದಕ್ಕೆ ಸಹಾನುಭೂತಿ ಹೊಂದಿದ್ದಕ್ಕಾಗಿ ನಮ್ಮ ಕಾಲದಲ್ಲಿ  ವಾಡಿಕೆಯಂತೆ ನಿ೦ದಿಸಲ್ಪಡುವ ಮೃದು -ಹೃದಯದ ಉದಾರವಾದಿಯರು, ಉತ್ಪಾದಿಸಿದ ವಸ್ತುವಲ್ಲ.  ಬ್ರಿಟನ್‌ನ ಮಾನವ ಹಕ್ಕುಗಳ ಕಾರ್ಯಕರ್ತರು ವಾದಯೋಗ್ಯವಾಗಿ ಭಾರತದ  ಅವರ ಸಹವರ್ತಿಗಳ೦ತೆಯೇ  ತೊಂದರೆಗೊಳಗಾಗಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನೇತೃತ್ವದ ಸರ್ಕಾರದೊಂದಿಗೆ ಕಠಿಣ ಸ೦ಬ೦ಧವನ್ನು ಹೊಂದಿರುವ ಬಿಬಿಸಿಯ ಪರಿಸ್ಥಿತಿಯೂ ಅದೇ ತರಹ. ಪ್ರಸ್ತುತ ವಾತಾವರಣದ ಹೊರತಾಗಿಯೂ, ಸರಣಿಯು ಸರ್ವೋತ್ಕೃಷ್ಟವಾದ ಬಿ ಬಿ ಸಿ ಉತ್ಪಾದನೆಯ ಗುಣವನ್ನು  ಪ್ರದರ್ಶಿಸುತ್ತದೆ  - ಕಚ್ಚಾ ಮತ್ತು ಮನಸ್ಸನ್ನು ತಳಮಳಗೊಳಿಸುವ  ತುಣುಕನ್ನು ಬಿಗಿಯಾದ ಮತ್ತು ತಟಸ್ಥ ನಿರೂಪಣೆಯೊಟ್ಟಿಗೆ  ಹೊಂದಿಸಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಡಾಕ್ಯುಮೆಂಟರಿಯು ಮೋದಿಯ ಬೆಂಬಲಿಗರಿಗೆ ಪೂರ್ಣ ಮತ್ತು ಸಮಾನ ಅವಕಾಶವನ್ನು ನೀಡಿದೆ.  ಬಿಜೆಪಿಯ ಮಾಜಿ ರಾಜ್ಯಸಭಾ ಸಂಸದ ಸ್ವಪನ್ ದಾಸ್‌ಗುಪ್ತಾ ಅವರು ಇತರರೊಂದಿಗೆ ಕಥಾನಕದ ಮಧ್ಯದಲ್ಲಿ ಅದರ  ಹಲವಾರು ಪ್ರಮುಖ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಇದಲ್ಲದೆ  ದಾಸ್  ಗುಪ್ತ  ಅವರು ಭಾರತದ ಇತ್ತೀಚಿನ ಇತಿಹಾಸದಲ್ಲಿನ ಈ ಪ್ರಮುಖ ಘಟನೆಯ ವಿಷಯದಲ್ಲಿ ಸಾರ್ವತ್ರಿಕ  ‘ಉಪಸ೦ಹಾರ’ವನ್ನು ಒತ್ತಾಯಿಸುತ್ತಾ  ಸಾಕ್ಷ್ಯ ಚಿತ್ರದ ಮೊದಲ ಸಂಚಿಕೆಯ ಮುಕ್ತಾಯದ ಮಾತುಗಳನ್ನು  ಹೇಳುವ  ಸವಲತ್ತನ್ನು ಹೊಂದಿದ್ದಾರೆ.

ವಿಪರ್ಯಾಸವೆಂದರೆ, ಮೋದಿಯ ಯಾವುದೇ ಟೀಕಾಕಾರರು ಮತ್ತು ವಿರೋಧಿಗಳಿಗಿಂತ ಸಾಕ್ಷ್ಯಚಿತ್ರಕ್ಕೆ ಹೆಚ್ಚಿನ ಮತ್ತು ದೀರ್ಘಾವಧಿಯ ಜೀವನವನ್ನು ನೀಡುವಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಅದರ ಬೆಂಬಲಿಗರು ಪ್ರಮುಖ  ಕಾರ್ಯಕರ್ತರಾಗಿರುತ್ತಾರೆ.

ಪಠ್ಯ, ಚಿತ್ರ ಅಥವಾ ಪದದ ಜೀವನವನ್ನು ಸುರಕ್ಷಿತವಾಗಿರಿಸಲು ಉತ್ತಮ ಮಾರ್ಗವೆಂದರೆ ಅದನ್ನು ಪ್ರಬಲ ಸರ್ಕಾರವು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ಎಂದು ಇತ್ತೀಚಿನ ಮತ್ತು ಇತರ ಹಲವು ಪ್ರಕರಣಗಳ  ಇತಿಹಾಸವು ತೋರಿಸಿದೆ. ಸಲ್ಮಾನ್ ರಶ್ದಿಯವರಿಗಿಂತ ಮುಂದೆ ನೋಡಬೇಕಾಗಿಲ್ಲ. ಸಲ್ಮಾನ್ ರಶ್ದಿ  ಅನೇಕ ಕಾದ೦ಬರಿಗಳನ್ನು ಬರೆದಿದ್ದಾರೆ, ಮತ್ತು, ನನ್ನ ದೃಷ್ಟಿಯಲ್ಲಿ, ಸೈತಾನಿಕ್ ವರ್ಸಸ್, ಅವರ ಅತ್ಯುತ್ತಮ ಕಾದಂಬರಿಯೂ ಅಲ್ಲ. ಆದರೂ ಇದು ಅವರು ಬರೆದ ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳುವ ಕಾದಂಬರಿಯಾಗಿದೆ.! 



ಇದೇ ರೀತಿ  ಎಂ.ಕೆ. ಗಾಂಧಿ ಅವರು ಬರೆದ  ಹಿಂದ್ ಸ್ವರಾಜ್ ಅಥವಾ ವಿ.ಡಿ. ಸಾವರ್ಕರ್ ಅವರ ಕೃತಿಗಳನ್ನು ನಿಷೇಧಿಸಿದ ಕಾರಣ  ಸಂಪೂರ್ಣವಾಗಿ ಒಳಸಂಚುಗಳಿಂದ ಉಂಟಾಗುವ ಉತ್ಸಾಹ ಹೆಚ್ಚುವರಿಯಾಗಿ ಹರಿದು ಬ೦ದಿತು. 

ನಿಸ್ಸಂಶಯವಾದ  ಈ ಅಂಶವನ್ನು  ನಮ್ಮ ಕಾಲದ ಅತಿರೇಕ ಉತ್ಸಾಹದಿಂದ ಸೆನ್ಸಾರ್-ಮನಸ್ಸಿನ ಆಡಳಿತ ವರ್ಗದವರು   ಸ್ಪಷ್ಟವಾಗಿ  ಕಡೆಗಣಿಸಿದ್ದಾರೆ. ಆದ್ದರಿಂದ, ಈ ಬಿ ಬಿ ಸಿ ಯ ಸಾಕ್ಷ್ಯಚಿತ್ರವು ಪ್ರಸಾರವಾಗುವುದನ್ನು ಮತ್ತು ಗಮನವನ್ನು ಸೆಳೆಯುವುದನ್ನು ಮುಂದುವರಿಸಿದರೆ, ಬ್ರಿಟಿಷ್ ಪ್ರಸಾರಕರು ಭಾರತ ಸರ್ಕಾರಕ್ಕೆ ಮಾತ್ರ ಧನ್ಯವಾದ ಹೇಳಬೇಕಾಗುತ್ತದೆ.

.

ಮೃದು ಶಕ್ತಿ ಅಥವಾ ಬಲಶಾಲಿ

ಸಾಮಾಜಿಕ ಮಾಧ್ಯಮ ಜಗುಲಿಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಯಾವುದೇ ಪ್ರಸರಣ ಅಥವಾ ಉಲ್ಲೇಖವನ್ನು ನಿರ್ಬಂಧಿಸುವ ಮೂಲಕ, ಮೋದಿ ಅವರು ತಮ್ಮ  ‘ಪ್ರಬಲ ವ್ಯಕ್ತಿ’ಯಂತೆ  ವಿನ್ಯಾಸಿಸಿರುವ ರೂಪ  ಮತ್ತು ಕಾರ್ಯರೀತಿಗಳನ್ನು ಗಟ್ಟಿಪಡಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಅತ್ಯಂತ ಪ್ರಸಿದ್ಧ  'ಇಂದಿರಾ ಈಸ್ ಇಂಡಿಯಾ' ಎಂಬ ಘೋಷಣೆಯ ನ೦ತರ , ಮೋದಿ ಮಾತ್ರ ರಾಷ್ಟ್ರವನ್ನು ವ್ಯಕ್ತಿಗತಗೊಳಿಸುವದರ ಹತ್ತಿರಕ್ಕೆ ಬಂದಿದ್ದಾರೆ.

ಮೋದಿಯವರ ಇತ್ತೀಚಿನ 'ಜಾಗತಿಕ ಗುರು’ ಅಥವಾ  ‘ವಿಶ್ವಗುರು’  ಅವತಾರಗಳು ರೂಪ ನಿರ್ಮಾಣ - image building -  ಆಟಗಳ  ಸಂಭಾವ್ಯ ಲಾಭವನ್ನು ತುಂಬಾ ಹೆಚ್ಚಿಸಿದೆ.

ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವುದು ಮೋದಿಯವರ ಉತ್ಕಟ ಮತ್ತು ಅತೃಪ್ತ ಬೆಂಬಲಿಗರ ನೆಲೆಯನ್ನು ದೃಢಪಡಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಅವರು ಅದನ್ನು 'ವಸಾಹತುಶಾಹಿ' ಮತ್ತು 'ಬಿಳಿಯ' ಪ್ರಚಾರ ಎಂದು ಟೀಕಿಸಿದ್ದಾರೆ. ನಿಸ್ಸ೦ಶಯವಾಗಿ ಈ  ಪ್ರತಿಕ್ರಿಯೆಯನ್ನು  ಮು೦ಗಾಣಬಹುದಾಗಿತ್ತು.   ಈಗ ಕೆಲವು ವರ್ಷಗಳಿಂದ, ಮೋದಿ ಮತ್ತು ಬಿಜೆಪಿಯ ಸಾಮಾಜಿಕ ಮಾಧ್ಯಮ ಯೋಧರು ಮತ್ತು  ಹೆಚ್ಚು ಸ್ಪಷ್ಟವಾದ ಬೆಂಬಲಿಗರು ತಮ್ಮದೇ ಆದ ಭಾವೋದ್ರಿಕ್ತ ಸಂಕುಚಿತ ಸಂಸ್ಕೃತಿಯ ಯುದ್ಧಗಳಿಗಾಗಿ ಜಾಗತಿಕ ಎಡಪದರ ಶಬ್ದಕೋಶವನ್ನು ದುರುಪಯೋಗ  ಮಾಡುತ್ತಿದ್ದಾರೆ ಎ೦ಬುದನ್ನು ಕ೦ಡೇ ಇದ್ದೇವೆ. 

ಭಾರತದ ಸಾಂಸ್ಕೃತಿಕ ಮತ್ತು ಇತರ ಚಿಹ್ನೆಗಳನ್ನು 'ಅವಸಾಹತೀಕರಣ' ಮಾಡುವ ಅವರ ಕರೆಯು ಪಶ್ಚಿಮದಲ್ಲಿ ಸಾಮ್ರಾಜ್ಯಶಾಹಿ ಪರಂಪರೆಗಳೊಂದಿಗೆ ಅದೇ ರೀತಿ ಮಾಡಬೇಕೆಂಬ ಜಾಗತಿಕ ‘ಎಡ’ ಬೇಡಿಕೆಗಳ ಸಂಪೂರ್ಣ 180-ಡಿಗ್ರಿ ತಲೆಕೆಳಗು ಆಗಿದೆ. ಗಂಭೀರ ವ್ಯಂಗ್ಯತೆ  ಮತ್ತು ಕಲ್ಪನೆಗಳ ಬಡತನದ ಪ್ರಕರಣವೆಂದರೆ ಭಾರತದ ಸಾಂಸ್ಕೃತಿಕ ಯೋಧರು ತಮ್ಮದೇ ಆದ ಶಬ್ದಕೋಶವನ್ನು ಉತ್ಪಾದಿಸಲು ಸಹ ನಿರ್ವಹಿಸಲಿಲ್ಲ!

ಈ ಎಲ್ಲಾ ಅಬ್ಬರ ಮತ್ತು ತಡೆಹಿಡಿತಗಳು ಮೋದಿಯವರ ಚುನಾವಣಾ ನೆಲೆಯನ್ನು ಹುರಿದುಂಬಿಸಬಹುದು. ಆದರೆ ಇದು ಮೋದಿ ಹೆಚ್ಚು  ಬೆಲೆಕಟ್ಟುವುದನ್ನು  ಸಮರ್ಥವಾಗಿ ಕ್ಷೀಣಗೊಳಿಸುತ್ತದೆ  - ಅವರ ಅಂತಾರಾಷ್ಟ್ರೀಯ ಚಿತ್ರಣ.

ಇಂದು ವಿಶ್ವದಲ್ಲಿ ಭಾರತದ ಏರುತ್ತಿರುವ ಸ್ಥಾನಮಾನವು ಬಹುಸಾಂಸ್ಕೃತಿಕ ಪ್ರಜಾಪ್ರಭುತ್ವವಾಗಿ ಅದರ ಸ್ಥಾನಮಾನದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಕರಾರುವಾಕ್ಕಾಗಿ ಹೇಳುವುದಾದರೆ, ಭಾರತವು ಚೀನಾ ಅಲ್ಲದ ಕಾರಣ, ಇಂದು ಆಕಾರವನ್ನು ಬದಲಾಯಿಸುತ್ತಿರುವ ವಿಶ್ವ ಕ್ರಮದಲ್ಲಿ ಭಾರತವನ್ನು ಹೆಚ್ಚು ಬೇಡಿಕೆಯ ಪಾಲುದಾರನನ್ನಾಗಿ ಮಾಡುತ್ತದೆ. ಆದರೆ ಭಾರತದ ಬೃಹತ್ ಪ್ರಮಾಣದ 1.4 ಶತಕೋಟಿ ಜನರು ಮತ್ತು ಎಣಿಕೆಯ ಹೊರತಾಗಿಯೂ ಭಾರತವು ಇನ್ನೊ೦ದು ಚೀನಾ ಆಗದೇ ಇರುವುದು ಅಷ್ಟೇ ಸಾಕಾಗುವುದಿಲ್ಲ.

ನಿಸ್ಸಂದೇಹವಾಗಿ, ಇದು ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ  ಅಜೇಯ ತುರುಪು  ಎಲೆಗಳಾಗಿ ಉಳಿದಿರುವದು  ಭಾರತದ ವೈವಿಧ್ಯತೆ, ಸ್ವಾತಂತ್ರ್ಯ ಮತ್ತು ಉದಾರವಾದ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದೆ.

ಶೀತಲ ಸಮರದ ಉತ್ತುಂಗದಲ್ಲಿ ಮತ್ತು ಬಾಂಗ್ಲಾದೇಶದ ರಚನೆಯ ಗಳಿಗೆಯಲ್ಲಿ  ರಿಚರ್ಡ್ ನಿಕ್ಸನ್ ಇಂದಿರಾಗಾಂಧಿಯವರ ಮೇಲೆ ಹೋರಿಸಿದ ಅವಮಾನವನ್ನು  ಮಾತ್ರ ನೆನಪಿಸಿಕೊಳ್ಳಿರಿ.   ಅದೇ ಸಮಯದಲ್ಲಿ, ಅವರ ಸರ್ಕಾರವು ಅಮೆರಿಕದಿಂದ ತಾಂತ್ರಿಕ ಅಥವಾ ಆರ್ಥಿಕ ಬೆಂಬಲವನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಡಲಿಲ್ಲ. ಅದು ಕಠಿಣ ಕ್ರಿಯೆಯಲ್ಲಿ ಮೃದು ಶಕ್ತಿಯಾಗಿತ್ತು. ತುರ್ತುಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಖ್ಯಾತಿಯು ಕೆಟ್ಟದಾಗಿ ನರಳಿತು ಮತ್ತು ಇತರ ಕಾರಣಗಳ ಜೊತೆಗೆ   ಭಾರತದ ಜಾಗತಿಕ  ಬೇರುಪಡಿಸುವಿಕೆಯನ್ನು ಕೊನೆಗೊಳಿಸಲು ಅವರು ಅದನ್ನು ಕೊನೆಗೊಳಿಸಿದರು ಎಂದು ಹಲವರು ಊಹಿಸುತ್ತಾರೆ.  ಆ ಸ೦ದರ್ಭದಲ್ಲಿ ಇ೦ದಿರಾ ಅವರು  ‘ಜಗತ್ತಿಗೆ ಗುರು’ವಾಗುವ ಮೇಲಂಗಿ ಧರಿಸಿದ್ದಿಲ್ಲ !

2023 ರಲ್ಲಿ, ವಿಶ್ವ ನಾಯಕರು ಭಾರತದ  G20 ಅಧ್ಯಕ್ಷತೆಯ ಭಾಗವಾಗಿ ದೆಹಲಿಗೆ ತೆರಳುತ್ತಾರೆ, ಭಾರತವನ್ನು ತೀವ್ರವಾಗಿ ವೀಕ್ಷಿಸಲಾಗುತ್ತದೆ. ಸಂಬಂಧಿತವಾಗಿ, ಬಿಜೆಪಿಯ ಇತ್ತೀಚಿಗೆ ಮುಕ್ತಾಯಗೊಂಡ ರಾಷ್ಟ್ರೀಯ ಕಾರ್ಯಕಾರಿ ಪ್ರಕ್ರಿಯೆಗಳು ಸ್ಪಷ್ಟಪಡಿಸುವಂತೆ, 2024 ರ ಚುನಾವಣೆಗಾಗಿ ಮೋದಿಯವರ ಇತ್ತೀಚಿನ ಪ್ರಚಾರವು ಜಾಗತಿಕ ವೇದಿಕೆಯಲ್ಲಿ ಅವರ ದೊಡ್ಡ ವ್ಯಕ್ತಿತ್ವವನ್ನು ಆಧರಿಸಿದೆ. ಇದಲ್ಲದೆ, ಉಕ್ರೇನ್ ಮತ್ತು ರಷ್ಯಾ ನಡುವಿನ ನಡೆಯುತ್ತಿರುವ ಸಂಘರ್ಷದಲ್ಲಿ ಮೋದಿ ಅವರು ತಮ್ಮನ್ನು ಆದರ್ಶ ಮಧ್ಯವರ್ತಿ ಎಂದು ಪುನರಾವರ್ತಿತವಾಗಿ ಬಿಂಬಿಸಿಕೊಂಡಿದ್ದಾರೆ (ಅದನ್ನು ಮಾಡುವ ಇನ್ನೊಬ್ಬ ನಾಯಕ ಟರ್ಕಿಯ ರೆಸೆಪ್ ತಯ್ಯಿಪ್ ಎರ್ಡೋಗನ್). ಇಲ್ಲಿಯವರೆಗೆ, ಇವರ ಪ್ರಯಾಸದಿ೦ದ ಸ್ವಲ್ಪ ಪ್ರಯೋಜನವೂ ಇಲ್ಲ.

ಉಕ್ರೇನ್ ಯುದ್ಧವು  ಬಹುತ್ವ ಮತ್ತು ಉದಾರ ಪ್ರಜಾಪ್ರಭುತ್ವಕ್ಕೆ ಪಶ್ಚಿಮದ ಬದ್ಧತೆ ಎಂದು ಕರೆಯಲ್ಪಡುವದನ್ನು ದ್ವಿಗುಣಗೊಳಿಸಿದೆ. ಬ್ರೆಜಿಲ್‌ನಿಂದ ಅಮೇರಿಕಾ ಮತ್ತು ಬ್ರಿಟನ್‌ನವರೆಗಿನ ವೈಯಕ್ತಿಕ ಪ್ರಜಾಪ್ರಭುತ್ವಗಳು ಸಹ ದೇಶೀಯ ಮೂಲಜನ ಆಧಾರಿತ  ಜನಪ್ರಿಯತೆಯ ಆಯಾಸವನ್ನು ತೋರುತ್ತಿವೆ, ಏಕೆಂದರೆ ಅವರು ಪ್ರಬಲ ನಾಯಕರ  ವೀರರ ಭಂಗಿ ಶೈಲಿಯನ್ನು ತಿರಸ್ಕರಿಸಿದ್ದಾರೆ.

ಉಕ್ಕಿನ ಮುಷ್ಟಿಯನ್ನು ಮೆರೆಸುವುದು ಮತ್ತು ಭಾರತೀಯ ಪ್ರೇಕ್ಷಕರು ಏನು ನೋಡುತ್ತಾರೆ ಅಥವಾ ನೋಡುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ನಿರ್ವಹಿಸುವುದು ಅಧಿಕಾರವನ್ನು ಪ್ರದರ್ಶಿಸುತ್ತದೆ, ನೈತಿಕ ಬಲವನ್ನಲ್ಲ. ಮೋದಿ ಬೆಂಬಲಿಗರು ಬಿಬಿಸಿಯನ್ನು ಎಲ್ಲಾ ರೀತಿಯ ಕೆಟ್ಟ ಹೆಸರುಗಳೊಂದಿಗೆ ಕೂಗುವ ಮೂಲಕ ಸಂತಸಗೊಂಡಿದ್ದಾರೆ. ಇದು ಪ್ರಜಾಸತ್ತಾತ್ಮಕ ಭಾರತದ ವ್ಯಕ್ತಿತ್ವವನ್ನು ಹಾನಿಗೊಳಿಸುತ್ತದೆ, ಅದು ಭಾರತದ ಮೃದು ಶಕ್ತಿಯನ್ನು ಸಮಾನವಾಗಿ ನಾಶಪಡಿಸುತ್ತದೆ. ತಡೆಹಿಡಿಯುವಿಕೆಗಳು ಮತ್ತು ಹೆಸರು-ಕರೆಯುವಿಕೆಯು ಮೂಲಜನವಾದಿಗಳಲ್ಲಿ  ಬಲವಾದ ಭಾವನೆಯನ್ನು ಉಂಟುಮಾಡಬಹುದು ಮತ್ತು  ಜನಪ್ರಿಯತೆಯ ಭ್ರಮೆಯನ್ನು  ತೋಚಬಹುದು. ಆದರೆ ‘56 ಇಂಚಿನ ಎದೆ’ ಖ್ಯಾತಿಯ ಮೋದಿ ಈಗ 'ವಿಶ್ವಗುರು ಮೋದಿ' ಜತೆ ಸಂಘರ್ಷಕ್ಕಿಳಿದಿದೆ.  ಅವರ ದೇಶೀಯ ಅನುಯಾಯಿಗಳು ಈ ಸಂಘರ್ಷದ ಬಗ್ಗೆ ಕಾಳಜಿ ವಹಿಸದಿರಬಹುದು ಅಥವಾ ಈ ವಿರೋಧಾಭಾಸವನ್ನು ಆಚರಿಸಲು ಯೋಗ್ಯ   ವೀರ ಕ್ರಮ ಎಂದು ತಿಳಿಯ ಬಹುದು.

ಆದರೆ ವಿಶ್ವವನ್ನು ಕೈಬಿಟ್ಟು  ನೀವು ವಿಶ್ವ ನಾಯಕರಾಗಲು ಸಾಧ್ಯವಿಲ್ಲ; ಹಾಗೆಯೇ ನೀವು ಭಾರತದಲ್ಲಿ ಮಾತ್ರ ವಿಶ್ವಪ್ರಸಿದ್ಧರಾಗಲು ಸಾಧ್ಯವಿಲ್ಲ.

ಶ್ರುತಿ ಕಪಿಲಾ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಇತಿಹಾಸ ಮತ್ತು ಜಾಗತಿಕ ರಾಜಕೀಯ ಚಿಂತನೆಯ ಪ್ರಾಧ್ಯಾಪಕರಾಗಿದ್ದಾರೆ. @shrutikapila ಎಂದು ಟ್ವೀಟ್ ಮಾಡಿದ್ದಾರೆ. 

(ತರನ್ನುಮ್ ಖಾನ್ ಸಂಪಾದಿಸಿದ್ದಾರೆ)




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು