ಜಿ ಎನ್ ದೇವಿ : ಭಾರತದ ಭಾಷಾ ಸಂಪತ್ತನ್ನು ದಾಖಲೆ ಮಾಡುವದು ಅದೇ ಸಮಯ ನಾಯಕರು ಹಿಂದಿಯನ್ನು ರಾಷ್ಟ್ರದ ಭಾಷೆ ಎಂದು ಮೇಲೇರಿಸುತ್ತಿದ್ದಾರೆ. ಜಿ ಎನ್ ದೇವಿ ಅವರ ಭಾಷಾ ಸಂಶೋಧನೆಯು ಭಾರತದಾದ್ಯಂತ, ಹಿಮಾಲಯದಿಂದ ಹಿಡಿದು, (ಅಲ್ಲಿನ ಚಳಿ ತನ್ನನ್ನು ಕೊಲ್ಲುತ್ತದೆ ಎಂದು ಅವರು ಭಾವಿಸಿದ್ದರು!), ಕಾಡಿನಲ್ಲಿ ವಾಸಿಸುವ ಬೆಟ್ಟದ ಬುಡಕಟ್ಟು ಜನಾಂಗದವರೆಗೆ ಅವರನ್ನು ಕರೆದೊಯ್ದಿದೆ. ಮತ್ತು ಕೆಲವೊಮ್ಮೆ ಅವರ ಸಂಶೋಧನೆಯು ತಮ್ಮದೇ ವಿಶ್ವ ದೃಷ್ಟಿಕೋನವನ್ನು ಪ್ರಶ್ನೆ ಮಾಡಿದೆ ಸಮೀರ್ ಯಾಸಿರ್ ಬರೆದಿದ್ದಾರೆ ನ್ಯೂಯಾರ್ಕ್ ಟೈಮ್ಸ್ | ಧಾರವಾಡ | ಜೂನ್ 11, 2022 ಭಾಷಾಶಾಸ್ತ್ರಜ್ಞ ಮತ್ತು ವಿದ್ವಾಂಸರಾದ ಗಣೇಶ್ ದೇವಿ ಅವರು ಮೇ 18, 2022 ರಂದು ಭಾರತದ ತೇಜ್‌ಗಢ್‌ನಲ್ಲಿರುವ ತಮ್ಮ ಆದಿವಾಸಿ ಅಕಾಡೆಮಿಯಲ್ಲಿ ಬುಡಕಟ್ಟು ಹಕ್ಕುಗಳ ಕುರಿತು ಚರ್ಚಿಸುತ್ತಿದ್ದಾರೆ. ದೇವಿ ಅವರು ಭಾರತದ ನೂರಾರು ವಿಭಿನ್ನ ಭಾಷೆಗಳನ್ನು ದಾಖಲಿಸಲು ಹಲವು ದಶಕಗಳನ್ನು ಕಳೆದಿದ್ದಾರೆ. ಮುಂದಿನ ಯೋಜನೆ: ಭಾರತದ 12,000 ವರ್ಷಗಳ ಇತಿಹಾಸವನ್ನು ಬರೆಯುವದು. ಇದು ‘ಹಿಂದೂ-ಮೊದಲ’ ರಾಷ್ಟ್ರೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಈ ದೇಶದಲ್ಲಿ ರಾಜಕೀಯ ಧರ್ಮಾಂಧತೆಯನ್ನು ಹರಡುವ ಉದ್ದೇಶಕ್ಕಾಗಿ ಇತಿಹಾಸವನ್ನು ಕಲಿಸ...
ಪೋಸ್ಟ್‌ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕರ್ನಾಟಕದಲ್ಲಿ ಶಾಲಾ ಮಧ್ಯಾಹ್ನದ ಉಪಹಾರ: ಸಾಮಾಜಿಕ ಸಂಪ್ರದಾಯವಾದದ ಎದುರಿನಲ್ಲಿ ವೈಜ್ಞಾನಿಕ ಪುರಾವೆಗಳು ಸಿಧ್ಧಾರ್ಥ್ ಜೋಶಿ ಸಿಲ್ವಿಯ ಕರ್ಪಗಮ್ ಎಕೊನೊಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ೪ ಜೂನ್, ೨೦೨೨ ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ ಮೊಟ್ಟೆಗಳನ್ನು ಪರಿಚಯಿಸುವುದಕ್ಕೆ ವಿರೋಧದ ಸಂದರ್ಭದಲ್ಲಿ, ರಾಜ್ಯದಲ್ಲಿ ಪೌಷ್ಟಿಕಾಂಶ ನೀತಿಯನ್ನು ಸಣ್ಣ ಆದರೆ ಪ್ರಭಾವಶಾಲಿ ಧಾರ್ಮಿಕ ಮತ್ತು ಜಾತಿ ಆಧಾರಿತ ಗುಂಪುಗಳು ವಿಶ್ವಸಿಸುವ ಸಂಶಯಾಸ್ಪದ ಅವೈಜ್ಞಾನಿಕ ನಂಬಿಕೆಗಳಿಗೆ ಹೇಗೆ ಒತ್ತೆಯಾಳಾಗಿ ಇರಿಸಲಾಗಿದೆ ಎಂಬುದನ್ನು ಲೇಖನವು ಪರಿಶೀಲಿಸುತ್ತದೆ. ಲೇಖನದ ಪ್ರಧಾನ ಬಿ೦ದುಗಳು: ನವೆಂಬರ್ ೨೦೨೧ರಲ್ಲಿ, ಕರ್ನಾಟಕ ಸರ್ಕಾರವು ಅಕ್ಷರ ದಾಸೋಹ ಅಥವಾ ಮಧ್ಯಾಹ್ನದ ಉಪಹಾರದ (MDM) ಕಾರ್ಯಕ್ರಮದ (GoK 2021) ಭಾಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಎಂದೂ ಕರೆಯಲಾಗುವ ಈಶಾನ್ಯ ಕರ್ನಾಟಕದ ಏಳು ಅಪೌಷ್ಟಿಕತೆ ಪೀಡಿತ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ೧-೮ ನೇ ತರಗತಿಯ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸುವುದಾಗಿ ಘೋಷಿಸಿತು. ತಕ್ಷಣವೇ, ಈ ಕ್ರಮವನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಆಂದೋಲನದ ಬೆದರಿಕೆಯೊಂದಿಗೆ ಧಾರ್ಮಿಕ ಮುಖಂಡರಿಂದ ಈ ಕ್ರಮಕ್ಕೆ ಬಲವಾದ ವಿರೋಧ ಬ೦ದಿತು. ಇದರಲ್ಲಿ ಅಶ್ಚರ್ಯವಿದ್ದಿಲ್ಲ ಏಕ೦ದರೆ ಧಾರ್ಮಿಕ ವ್ಯ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಜಾಪ್ರಭುತ್ವದ ಒ೦ದು ದರುಶನಕ್ಕೆ ಅನ್ಯಾಯ ಸಿ. ಲಕ್ಷ್ಮಣನ್ , ಅಪರಾಜಯ್ ‘ದಿ ಹಿ೦ದು’ , ಮೇ 28, 2022 | ರಾಜಕೀಯ ಪಕ್ಷಗಳು ಅನುಸರಿಸುತ್ತಿರುವ ಅಸ್ತಿತ್ವದಲ್ಲಿರುವ ಆರ್ಥಿಕ ವ್ಯವಸ್ಥೆಯು ಬಿಆರ್ ಅಂಬೇಡ್ಕರ್ ಅವರು ರೂಪಿಸಿದ ಮಾದರಿಗೆ ವಿರುದ್ಧವಾಗಿದೆ ಪ್ರಪಂಚದಾದ್ಯ೦ತ ಹಿಂದೆಂದೂ ಇಲ್ಲದಂತೆ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ 131 ನೇ ಜನ್ಮದಿನವನ್ನು (ಏಪ್ರಿಲ್ 14) ವಿವಿಧ ರೂಪಗಳಲ್ಲಿ ಆಚರಿಸಲಾಯಿತು. ಅವರನ್ನು ಮತ್ತು ಜ್ಯೋತಿರಾವ್ ಫುಲೆಯಂತಹ ಇತರ ಜಾತಿ-ವಿರೋಧಿ ಆರಾಧ್ಯಮೂರ್ತಿಗಳನ್ನು ಗೌರವಿಸಲು, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು ಏಪ್ರಿಲ್ ಅನ್ನು 'ದಲಿತ ಇತಿಹಾಸ ತಿಂಗಳು' ಎಂದು ಘೋಷಿಸಿದೆ . ಯುನೈಟೆಡ್ ಸ್ಟೇಟ್ಸ್‌ನ ರಾಜ್ಯ ಕೊಲೊರಾಡೋ ಮತ್ತು ಮಿಚಿಗನ್ ಗಳಲ್ಲಿ ಇದು 'ಡಾ. ಬಿಆರ್ ಅಂಬೇಡ್ಕರ್ ಇಕ್ವಿಟಿ ಡೇ - ಸಮಾನ-ನ್ಯಾಯ ದಿನ' . ಭಾರತದಲ್ಲಿ, ಕೇ೦ದ್ರ ಸರ್ಕಾರವು ಅಂಬೇಡ್ಕರ್ ಅವರ ಜನ್ಮದಿನವನ್ನು ಔಪಚಾರಿಕವಾಗಿ ಆಚರಿಸಲು ಸಾರ್ವಜನಿಕ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಉತ್ತರ ಪ್ರದೇಶ ಸರ್ಕಾರವು ಈ ದಿನವನ್ನು "ಸಾಮಾಜಿಕ ಸಾಮರಸ್ಯದ ದಿನ", ತಮಿಳುನಾಡು ಸರ್ಕಾರ ಇದನ್ನು "ಸಮಾನತೆಯ ದಿನ" , ಎಂದು ಆಚರಿಸಿವೆ . ಅದೇ ಸಮಯದಲ್ಲಿ, ಅಂಬೇಡ್ಕರ್ ಅವರ ಸಾಮಾಜಿಕ-ಸಾಂಸ್ಕೃತಿಕ ನ್ಯಾಯ ಮತ್ತು ಆರ್ಥಿಕ ನ್ಯಾಯಸಮ್ಮತತೆಯ ತತ್ವಗಳನ್ನು ಸಾಕಾರಗೊಳಿಸಲು ಯಾ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತದ ವಿಭಜನೆಗೆ ಕುಮ್ಮಕ್ಕು ಮಾಡುವುದು ಪುಲಪ್ರೆ ಬಾಲಕೃಷ್ಣನ್ ‘ದಿ ಹಿ೦ದು’ 26 ಮೇ, 2022 ಸ್ವಸಂತೋಷದ ಒಪ್ಪಿಗೆ ಕೊಡುವವರ ಒಕ್ಕೂಟವಾಗಿ ಭಾರತದ ಕಲ್ಪನೆಯ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆಯಿಲ್ಲದ ರಾಜಕೀಯ ಸಿದ್ಧಾಂತ ಮೇಲೇರುತ್ತಿದೆ. 75 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸಲು ಒಂದು ಕಾರಣವೆಂದರೆ ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಉಳಿದುಕೊಳ್ಳುವದರ ಬಗ್ಗೆ ಕೆಲವರಲ್ಲಿ ಸಂದೇಹವಿತ್ತು. ವಿನ್‌ಸ್ಟನ್ ಚರ್ಚಿಲ್ ಮುಖ್ಯ ಸಂದೇಹವುಳ್ಳವರಾಗಿದ್ದರು. ಭಾರತವು ಒ೦ದು ಭೌಗೋಳಿಕ ಘಟಕಕ್ಕಿ೦ತ ಹೆಚ್ಚೇನೂ ಅಲ್ಲ, ಇದರ ಜನರನ್ನು ಬ್ರಿಟಿಷರು ವಿಜಯದ ಮೂಲಕ ಒಂದು ಛಾವಣಿಯಡಿಗೆ ತಂದು ಒ೦ದುಗೂಡಿಸಿ ಸಹಾಯಿಸಿದರು ಎಂದು ಪ್ರತಿಪಾದಿಸಿದರು. ಆದರೆ ನಾವು ಸ್ವತ೦ತ್ರ ಭಾರತದ ಯಾತ್ರೆಯನ್ನು ಸ೦ಭ್ರಮದಿ೦ದ ಆಚರಿಸುತ್ತಿರುವಾಗ, ಇಂದು ಅದರ ಏಕತೆಯನ್ನು ದುರ್ಬಲಗೊಳಿಸುವ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಗುರುತಿಸುವದು ಅವಶ್ಯ. ನಿರ್ದಿಷ್ಟವಾಗಿ ಹೇಳುವುದಾದರೆ, ಕೇಂದ್ರದಲ್ಲಿ ಪ್ರಸ್ತುತ ರಾಜಕೀಯ ಸ್ಥಾಪನೆಯ ಆಶೀರ್ವಾದವನ್ನು ಹೊಂದಿರುವ ಎರಡು ಯೋಜನೆಗಳು ಭಾರತದ ಏಕತೆಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ. ಜ್ಞಾನವಾಪಿ ಕಾ೦ಡ ಮೊದಲನೆಯದಾಗಿ, ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ನಾವು ಆಘಾತ ಮತ್ತು ವಿಸ್ಮಯ...