ಭಾರತದ ವಿಭಜನೆಗೆ ಕುಮ್ಮಕ್ಕು 

 

ಮಾಡುವುದು

 

ಪುಲಪ್ರೆ ಬಾಲಕೃಷ್ಣನ್ 

‘ದಿ ಹಿ೦ದು’  26 ಮೇ, 2022

 

ಸ್ವಸಂತೋಷದ ಒಪ್ಪಿಗೆ ಕೊಡುವವರ ಒಕ್ಕೂಟವಾಗಿ ಭಾರತದ ಕಲ್ಪನೆಯ ಬಗ್ಗೆ ಸ್ವಲ್ಪವಾದರೂ  ತಿಳುವಳಿಕೆಯಿಲ್ಲದ  ರಾಜಕೀಯ ಸಿದ್ಧಾಂತ ಮೇಲೇರುತ್ತಿದೆ. 

75 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸಲು ಒಂದು ಕಾರಣವೆಂದರೆ ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಉಳಿದುಕೊಳ್ಳುವದರ ಬಗ್ಗೆ ಕೆಲವರಲ್ಲಿ  ಸಂದೇಹವಿತ್ತು. ವಿನ್‌ಸ್ಟನ್ ಚರ್ಚಿಲ್‌ ಮುಖ್ಯ ಸಂದೇಹವುಳ್ಳವರಾಗಿದ್ದರು. ಭಾರತವು ಒ೦ದು ಭೌಗೋಳಿಕ ಘಟಕಕ್ಕಿ೦ತ ಹೆಚ್ಚೇನೂ ಅಲ್ಲ,  ಇದರ ಜನರನ್ನು ಬ್ರಿಟಿಷರು ವಿಜಯದ ಮೂಲಕ ಒಂದು ಛಾವಣಿಯಡಿಗೆ ತಂದು ಒ೦ದುಗೂಡಿಸಿ ಸಹಾಯಿಸಿದರು ಎಂದು ಪ್ರತಿಪಾದಿಸಿದರು.

ಆದರೆ ನಾವು ಸ್ವತ೦ತ್ರ ಭಾರತದ ಯಾತ್ರೆಯನ್ನು  ಸ೦ಭ್ರಮದಿ೦ದ ಆಚರಿಸುತ್ತಿರುವಾಗ, ಇಂದು ಅದರ ಏಕತೆಯನ್ನು ದುರ್ಬಲಗೊಳಿಸುವ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಗುರುತಿಸುವದು ಅವಶ್ಯ. ನಿರ್ದಿಷ್ಟವಾಗಿ ಹೇಳುವುದಾದರೆ, ಕೇಂದ್ರದಲ್ಲಿ ಪ್ರಸ್ತುತ ರಾಜಕೀಯ ಸ್ಥಾಪನೆಯ  ಆಶೀರ್ವಾದವನ್ನು ಹೊಂದಿರುವ ಎರಡು ಯೋಜನೆಗಳು ಭಾರತದ ಏಕತೆಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಜ್ಞಾನವಾಪಿ ಕಾ೦ಡ

ಮೊದಲನೆಯದಾಗಿ, ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ನಾವು ಆಘಾತ ಮತ್ತು ವಿಸ್ಮಯದಿಂದ ನೋಡುತ್ತೇವೆ. ಶತಮಾನಗಳಿಂದ ಮಸೀದಿಯಾಗಿದ್ದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ನಿಷ್ಪಕ್ಷಪಾತ ವೀಕ್ಷಕರು ಹೇಳುವಂತೆ ಮಸೀದಿಯು ಒಂದು ಕಾಲದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೆಡವಲ್ಪಟ್ಟ ದೇವಾಲಯವಾಗಿತ್ತು ಎಂಬುದಕ್ಕೆ ನಿರಾಕರಿಸಲಾಗದ ಪುರಾವೆಗಳಿವೆ. ಈಗ, ನಾವು 1991 ರ ಪೂಜಾ ಸ್ಥಳಗಳ ಕಾಯಿದೆಯನ್ನು ಹೊಂದಿದ್ದೇವೆ ಅದು ಧಾರ್ಮಿಕ ರಚನೆಯ ಸ್ಥಿತಿಯ ಬದಲಾವಣೆಯನ್ನು ಅನುಮತಿಸುವುದಿಲ್ಲ. ಮುಸ್ಲಿಮರ ಪ್ರಾರ್ಥನೆಯ ಸ್ಥಳವಾಗಿ ಅದರ ಸ್ಥಾನಮಾನದಲ್ಲಿನ ಬದಲಾವಣೆಯ ಬೆದರಿಕೆಯಿಂದ ಸಂಬಂಧಿಸಿದ ಮಸೀದಿಯನ್ನು ರಕ್ಷಿಸಲು ಇದು ಸಾಕಾಗುತ್ತದೆ. ಆದರೆ ನಾವು ಇದನ್ನು ಕೇವಲ ಕಾನೂನು ಪರಿಭಾಷೆಯಲ್ಲಿ ನೋಡಬೇಕೇ? ಇಂದಿನ ಭಾರತೀಯ ಮುಸ್ಲಿಮರು ಅವರು ಜವಾಬ್ದಾರರಲ್ಲದ ದೂರದ ಹಿಂದಿನ ಕ್ರಮದ ಆಧಾರದ ಮೇಲೆ ಮಸೀದಿಯನ್ನು ಖಾಲಿ ಮಾಡಲು ಕೇಳಬೇಕೇ? ಭಾರತದ ಹಿಂದೂಗಳು ತಮ್ಮ ಪೂರ್ವಜರಿಗೆ ಮಾಡಿದ  ಊಹಿಸಲೂ ಸಹ ಹೃದಯ ವಿದ್ರಾವಕವಾದ ಅನ್ಯಾಯಕ್ಕೆ ಸಮನ್ವಯ ಸಾಧಿಸುವ, ದೊಡ್ಡಮನಸ್ಸಿಗೆ  ಏರಬೇಕಲ್ಲವೇ? ಅವರು ಈಗ ಈ ದೇಶದ ಅಗಾಧ ಬಹುಸಂಖ್ಯಾತರಾಗಿದ್ದಾರೆ ಮಾತ್ರವಲ್ಲದೆ ಅವರಿಗೆ ಆರಾಧಿಸಲು ಸಾಕಷ್ಟು ಸ್ಥಳಗಳಿವೆ.

ಬೇರೊ೦ದು ಪ್ರಜಾಪ್ರಭುತ್ವದಿಂದ

ಕಳೆದ ವರ್ಷ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್, ತಮ್ಮ ಜನಪ್ರಿಯತೆ ಕುಗ್ಗುತ್ತಿರುವ  ಸ್ಥಿತಿಯಲ್ಲೂ , ಒಕ್ಲಹೋಮಾದ ತುಲ್ಸಾದಲ್ಲಿ ಪ್ರಮುಖ ಭಾಷಣ ಮಾಡಿದರು.  ಅವರು 1921 ರ ತುಲ್ಸಾ  ಜನಾ೦ಗೀಯ ಹತ್ಯಾಕಾಂಡದ ಸ್ಮರಣೆಯಲ್ಲಿ ಭಾಗವಹಿಸುತ್ತಿದ್ದರು. ಅವರು ಹೇಳಿದ್ದು:  "ಇದರಲ್ಲಿ ಯಾವುದೂ ಸಂಭವಿಸಿಲ್ಲ ಅಥವಾ ಇಂದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಟಿಸುವ ಮೂಲಕ ನಾವು ಯಾವುದೇ ಪ್ರಯೋಜನವನ್ನು ಮಾಡುವುದಿಲ್ಲ, ಏಕೆಂದರೆ ಅದು ಇಂದಿಗೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ನಾವು ಏನನ್ನು ಅವಶ್ಯವಾಗಿ ತಿಳಿದುಕೊಳ್ಳಲೇಬೇಕು ಎಂಬುದನ್ನು ಮರೆಮಾಚಿ ಬದಿಗಿಟ್ಟು ನಾವು ತಿಳಿಯಲು ಬಯಸುವುದನ್ನಷ್ಟೇ ಕಲಿಯಲು ಆಯ್ಕೆ ಮಾಡಲು ಸಾಧ್ಯವಿಲ್ಲ. ಮತ್ತು ಒಳ್ಳೆಯದು, ಕೆಟ್ಟದ್ದು, ಎಲ್ಲವನ್ನೂ ನಾವು ತಿಳಿದುಕೊಳ್ಳಬೇಕು. ಮಹಾನ್ ರಾಷ್ಟ್ರಗಳು ಅದನ್ನೇ ಮಾಡುತ್ತವೆ. ಅವರು ತಮ್ಮ ಕರಾಳ ವಸ್ತುತೆಗಳೊಂದಿಗೆ ಒಪ್ಪಂದಕ್ಕೆ ಬರುತ್ತಾರೆ.....”   ಬಿಡೆನ್ ಅವರು ಅಮೆರಿಕನ್ನರು ನೆನೆಯಿಸಿಕೊಳ್ಳಬೇಕಾದ ಸಂದರ್ಭದಲ್ಲಿ, ಕುಂದುಕೊರತೆಗಳನ್ನು ಮನಸ್ಸಿನಲ್ಲಿ ಸಂಗ್ರಹಿಸಿಕೊಳ್ಳದೆ  ಮುಂದುವರಿಯಬೇಕು ಎಂದು ಸೂಚಿಸುತ್ತಿದ್ದರು. ಈ ಸಂದೇಶವು ಸಂದರ್ಭಕ್ಕೆ ಅನುಗುಣವಾಗಿ ಭಾರತದ ಹಿಂದೂಗಳು ಮತ್ತು ಮುಸ್ಲಿಮರಿಬ್ಬರಿಗೂ ಮಾನ್ಯವಾಗಿದೆ.

ನಮ್ಮ ಇತಿಹಾಸದಲ್ಲಿ ಹಿಂಸಾಚಾರದ ದಾಖಲೆಗಳಲ್ಲಿ  ಉತ್ತರ ಭಾರತದಲ್ಲಿ ಮುಸ್ಲಿಂ ಆಡಳಿತವನ್ನು ಪ್ರತ್ಯೇಕಿಸುವ ಯೋಜನೆಯಲ್ಲಿ ಏನೋ ಅಪೂರ್ಣವಾಗಿದೆ. ಉತ್ತರ ಭಾರತದ ಮಹಾನ್ ದ್ರಾವಿಡ ವಸಾಹತುಗಳ ಅವನತಿಗೆ ಆರ್ಯರ ವಿಸ್ತರಣೆ ಅಥವಾ ಬರಗಾಲದಂತಹ ಪರಿಸರ ಸ್ಥಿತಿಗಳು ಕಾರಣವೇ ಎಂದು ಇನ್ನೂ ಸ್ಥಾಪಿಸಲಾಗಿಲ್ಲವಾದರೂ, ಈ ವಿಸ್ತರಣೆಯು ಹಿಂಸಾಚಾರವಿಲ್ಲದೆ ಸಾಧಿಸಲಿಲ್ಲ ಎಂದು ನಂಬಲು ನಮಗೆ ಕಾರಣವಿದೆ.  ಋಗ್ವೇದದಲ್ಲಿನ ಶ್ಲೋಕಗಳು ಆರ್ಯನ್ ದೇವರಾದ ಇಂದ್ರನನ್ನು "ದಸ್ಯು" ಗಳ,  ಅ೦ದರೆ ಅಕ್ಷರಶಃ ಭಾರತದ "ಗುಲಾಮ" ನಿವಾಸಿಗಳ, ಸಂಹಾರಕ ಎಂದು ಕರೆಯುತ್ತವೆ.  ಉತ್ತರ ಭಾರತದಾದ್ಯಂತ, ಆರ್ಯರು ತಮ್ಮ ಆಗಮನದ ನಂತರ ಸ್ಥಳೀಯ ಜನಸಂಖ್ಯೆಯನ್ನು ದಮನಿಸಿಕೊಂಡರು ಎಂಬ ಹೆಮ್ಮೆ ಇತ್ತೀಚಿನವರೆಗೂ ಇತ್ತು. ಆದರೆ ಹಿಂದೂ ರಾಷ್ಟ್ರೀಯತೆಗೆ  ಅಂತಹ ಉಲ್ಲಾಸ ಅಹಿತಕರ, ಏಕೆಂದರೆ ಅದು ಆರ್ಯರನ್ನು ಈ ಭೂಮಿಯಲ್ಲಿ ವಿದೇಶಿಯರನ್ನಾಗಿ ಮಾಡುತ್ತದೆ. ಅದರಿ೦ದಾಗಿ ಅವರ  ಸಾಂಸ್ಕೃತಿಕ ಮಾನದಂಡಗಳನ್ನು ಈ ದೇಶದಲ್ಲಿ ಅನ್ವಯಿಸಲು  ನ್ಯಾಯಸಮ್ಮತತೆ ಉಳಿಯುವುದಿಲ್ಲ.  ಆದಿವಾಸಿಗಳನ್ನು ಪರ್ವತಗಳಂತಹ ದುರ್ಗಮ ಸ್ಥಳಗಳಲ್ಲಿ ಅಥವಾ ಹಳ್ಳಿಗಳ ತುದಿಗಳಿಗೆ ಬಹಿಷ್ಕರಿಸಿದ ಭಾರತದಲ್ಲಿನ ವಸಾಹತು ಮಾದರಿಯು ಅವರನ್ನು ಸಾಮಾಜಿಕ ಜೀವನದಿಂದ ಹೊರಗಿಡುವ ಸಂಘಟಿತ ಕ್ರಮದ ಪರಿಣಾಮವಾಗಿದೆ ಎಂದು ಸೂಚಿಸುತ್ತದೆ. ಹಿಂಸೆಯ ಬೆದರಿಕೆಯಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ.

ಮತ್ತೊಂದು ಯೋಜನೆ,  ಭಾಷೆ 

ಧಾರ್ಮಿಕ ಪ್ರತಿಮೆಗಳ ನಾಶದ ಬಗ್ಗೆ ಮಾತನಾಡುತ್ತಾ, ಆರ್ಯರು ಎಲ್ಲಾ ನಂತರವೂ ಧರ್ಮದ ವಿಷಯದಲ್ಲಿ ವಿಶಾಲ ಮನಸ್ಕರು  ಆಗಿರಲಿಲ್ಲ ಎಂಬುದಕ್ಕೆ ಪುರಾವೆಗಳಿವೆ. ಪಶ್ಚಿಮ ಭಾರತದಲ್ಲಿ ಹರಪ್ಪಾ ನಾಗರಿಕತೆಯ ಸ್ಥಳಗಳಲ್ಲಿ ಉತ್ಖನನದಲ್ಲಿ ಭಾಗವಹಿಸಿದ ಪುರಾತತ್ತ್ವಜ್ಞರು ಕಲ್ಲಿನಲ್ಲಿ ಕೆತ್ತಿದ ಲಿಂಗಪೂಜೆಗೆ ಸಂಬಂಧಿಸಿದ 'ಫಾಲಿಕ್' ಚಿಹ್ನೆಯ ಅವಶೇಷಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದ್ದಾರೆ ಎಂದು ಸೂಚಿಸಿದ್ದಾರೆ. ವೈದಿಕ ಹಿಂದೂ ಧರ್ಮದ ಪವಿತ್ರ ಸಾಹಿತ್ಯದಲ್ಲಿ ಅಕ್ಷರಶಃ  ಲಿಂಗಪೂಜೆ ದೇವರಾದ ಶಿಷ್ಣದೇವನ ಆರಾಧನೆಯ ಪುನರ್ವಿಮರ್ಶೆಯ ಉಪದೇಶವನ್ನು ಕಾಣಬಹುದು. ಆದ್ದರಿಂದ, ಭಾರತದಲ್ಲಿ ಅಧೀನಗೊಳಿಸಿಕೊಂಡ ಜನರ ಧಾರ್ಮಿಕ ಪ್ರತಿಮೆಗಳ ನಾಶವು ಉತ್ತರ ಭಾರತದಲ್ಲಿ ಇಸ್ಲಾಮಿಕ್ ಆಡಳಿತಕ್ಕೆ ಸೀಮಿತವಾಗಿಲ್ಲ. ಕೆಲವು ಭಾರತೀಯರಿಗೆ, ಇದು ನಮ್ಮ ಪೂರ್ವ ಇತಿಹಾಸಕ್ಕೂ  ಹಿಂದಿನದು. ಇದು ನೈತಿಕ ಸಮಾನತೆಯನ್ನು ಸೂಚಿಸುವುದಲ್ಲ, ಏಕೆಂದರೆ ರಕ್ಷಣೆಯಿಲ್ಲದ ಜನರ ವಿರುದ್ಧದ ಯಾವುದೇ ಹಿಂಸಾಚಾರವು ಹೇಡಿತನವಾಗಿದೆ, ಆದರೆ ಇದು ಹಿಂದಿನ ಅನ್ಯಾಯಗಳಿಗೆ ಸಂಬಂಧಿಸಿದ ಪ್ರತೀಕಾರದ ನ್ಯಾಯದ ಬಗ್ಗೆ ಸೂಕ್ತ  ದೃಷ್ಟಿಕೋನವನ್ನು ಚರ್ಚೆಗೆ ತರಲು ಸಹಾಯ ಮಾಡುತ್ತದೆ. ತಮ್ಮ ಕೈಗಳಲ್ಲಿ ರಕ್ತವನ್ನು ಹೊಂದುವ ಸಾಧ್ಯತೆ ಕಡಿಮೆ ಇರುವದು ನಮ್ಮಲ್ಲಿರುವ ಆದಿವಾಸಿಗಳಲ್ಲಿ.  

ಭಾರತದ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸುವ ಯೋಜನೆಗೆ ಹೊಂದಿಕೊಂಡಿರುವ  ಹಿಂದೂ ರಾಷ್ಟ್ರೀಯತೆಯ ಎರಡನೇ ಯೋಜನೆಯಾಗಿದೆ  ದೇಶದಲ್ಲಿ ಹಿಂದಿಯನ್ನು ಪ್ರಬಲ ಭಾಷೆಯಾಗಿ ಸ್ಥಾಪಿಸುವದು. ಇದು ಕೇವಲ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸುವ ಇಚ್ಛೆಯ ಪ್ರತಿಬಿಂಬವಾಗಿದೆ.  ಇದನ್ನು ಪ್ರತೀಕಾರದ ನ್ಯಾಯದ ಅನ್ವೇಷಣೆಯಾಗಿ ತರ್ಕಬದ್ಧಗೊಳಿಸಲಾಗುವುದಿಲ್ಲ ಮತ್ತು ಇತರ ಯೋಜನೆಗಿಂತ ಭಿನ್ನವಾಗಿ ರಾಜ್ಯ ಬೆಂಬಲವನ್ನು ಹೊಂದಿದೆ. 

1960 ರ ದಶಕದಲ್ಲಿ ಬಹಳ ಪ್ರಬುದ್ಧವಾದ ಇತ್ಯರ್ಥದ ನಂತರ ಈ ಸಮಸ್ಯೆಯು ದೇಶದಲ್ಲಿ ಸುಪ್ತವಾಗಿ ಉಳಿದಿದೆ.  ಆ ಮೂಲಕ ದಕ್ಷಿಣದ ರಾಜ್ಯಗಳು ಬಯಸಿದವರೆಗೆ ಭಾರತ ಸರ್ಕಾರದ ಸಂವಹನಗಳಲ್ಲಿ ಇಂಗ್ಲಿಷ್ ಅನ್ನು ಬಳಸಲಾಗುವುದು ಎಂದು ಒಪ್ಪಿಕೊಳ್ಳಲಾಯಿತು.

2014 ರಿಂದ, ಕೇಂದ್ರ ಸರ್ಕಾರವು ಹಿಂದಿಗೆ ಹೊಸ ಒತ್ತು ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ದೇಶದ ಉಳಿದ ಭಾಗಗಳಲ್ಲಿ ಹಿಂದಿಯನ್ನು ಹೇರುವ ಪ್ರಯತ್ನವು ಕಪಟ ಭಾವದ್ದು. ಈ ಪ್ರಯತ್ನ  ಹಿಂದಿನದು, ಈಗಣ ಮಾತ್ರವಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಭಾಷೆಗಳ ಸಮಾನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುವಾಗ ಅಪ್ರಾಮಾಣಿಕವಾಗಿ  ವರ್ತಿಸುತ್ತಿದ್ದಾರೆ ಏಕ೦ದರೆ  ಅವರ ಗೃಹ ಸಚಿವರು ಹಿಂದಿಯ ವಿಶೇಷ ಸ್ಥಾನಮಾನವನ್ನು ದೇಶಕ್ಕೆ ನೆನಪಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಆಡಳಿತದ  ಎಲ್ಲಾ ಕಾರ್ಯನಿರ್ವಾಹಕರು ಇಂಗ್ಲಿಷ್ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಿರುವಾಗ ಹಿಂದಿಯನ್ನು ಪ್ರಚಾರ ಮಾಡಲು ವೆಚ್ಚ ಮಾಡುತ್ತಿರುವ  ಕೇಂದ್ರ ಸರ್ಕಾರದ ಸಂಸ್ಥೆಗಳ ಹೆಚ್ಚಿನ ಸಮಯ ಮತ್ತು ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ.   ಈ ಅನ್ವೇಷಣೆಯನ್ನು ಜೀವಂತವಾಗಿಡಲು ಭಾಷಿಕ ದುರಭಿಮಾನದ ಹೊರತು ಬೇರೇನೂ ಇಲ್ಲ. ಉತ್ತರ ಭಾರತದ ಸಮಾಜವಾದಿಗಳು ಎಂದು ಕರೆಯಲ್ಪಡುವವರು ಕೂಡ ಇದಕ್ಕೆ ಹೊರಗಾದವರಲ್ಲ  ಎಂದು 1990 ರ ದಶಕದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಅವರು, ಕೇರಳದ ತಮಗಿ೦ತ ಸಾರ್ವಜನಿಕವಾಗಿ ಸುದೀರ್ಘ ಅಧಿಕಾರಾವಧಿಯನ್ನುಅನುಭವಿಸಿದ್ದ ಮುಖ್ಯ ಮ೦ತ್ರಿಗೆ  ಹಿಂದಿಯಲ್ಲಿ ಬರೆದು,  ಬಹಿರಂಗಪಡಿಸಿದರು. ದೌರ್ಭಾಗ್ಯಕರವಾಗಿ  ಬಾಲಿವುಡ್ ನಟರ ಇತ್ತೀಚಿನ ಟಿಫ್ಫಣಿಳಲ್ಲಿ ಕಂಡುಬರುವಂತೆ, ಹಿಂದಿ ಮೇಲುಗೈ ಸಾಧಿಸಬೇಕು ಎಂಬ ಭಾವನೆ ಭಾರತದಲ್ಲಿ ಸಾಕಷ್ಟು ವ್ಯಾಪಕವಾಗಿದೆ. ಬಹುತೇಕ ವೇಷಭೂಷಣ ನಾಟಕದ ಈ ಪಾತ್ರಧಾರಿಗಳು  ಹಾಲಿವುಡ್ ಸ್ಥಾನಮಾನಕ್ಕಾಗಿ ಹಾತೊರೆಯಬಹುದು ಆದರೆ ಸ್ಥಳೀಯ ಅಮೆರಿಕನ್ನರ ಹಕ್ಕುಗಳನ್ನು ಪ್ರತಿಪಾದಿಸಿದ ಮಾರ್ಲನ್ ಬ್ರಾಂಡೊ ಅವರ ದೊಡ್ಡ ಹೃದಯವನ್ನು ಹೊಂದಿಲ್ಲ.

ಹಿಂದಿಯನ್ನು ಹೇರುವ ಪಟ್ಟುಬಿಡದ ಒತ್ತಡವು 1960 ರ ದಶಕದ ಮಧ್ಯಭಾಗದಲ್ಲಿ ಯಶಸ್ವಿಯಾಗಲು ಸಮೀಪಿಸಿತು, ಆದರೆ ಅದನ್ನು ತಡೆಯಲು ಮದ್ರಾಸ್ ರಾಜ್ಯದಲ್ಲಿ ಬೆಂಕಿ ಆಕ್ರಮಣ ಮತ್ತು ಸ್ವಯಂ-ದಹನಗಳು ಬೇಕಾಗಿ ಬ೦ದವು.  ಇಂದು, ಹಿಂದಿ ಮತೀಯವಾದಿಗಳಿಗೆ ಈ ಕ್ಷಣವು ಕಡಿಮೆ ಅನುಕೂಲಕರವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಎರಡರಲ್ಲೂ ದಕ್ಷಿಣ ಭಾರತ ಹಿಂದಿಯ ಹೃದಯಭಾಗಕ್ಕಿಂತ ಹೆಚ್ಚು ಮುಂದುವರಿದಿದೆ. ವಾಸ್ತವವಾಗಿ, ಇದು ಜೀವನೋಪಾಯದ ಹುಡುಕಾಟದಲ್ಲಿರುವ ಉತ್ತರ ಭಾರತದ ಕಾರ್ಮಿಕರಿಗೆ ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ದಕ್ಷಿಣದವರು ಕೂಡ ಹಿಂದಿಯನ್ನು ದೇಶದ ಅತ್ಯಂತ ಹಿಂದುಳಿದ ಭಾಗದ ಭಾಷೆಯಾಗಿ ನೋಡುತ್ತಾರೆ - ಅಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತದೆ, ಮಹಿಳೆಯರನ್ನು ಅಧೀನಗೊಳಿಸಲಾಗುತ್ತದೆ ಮತ್ತು ರಾಜಕಾರಣಿಗಳನ್ನು ಸಣ್ಣ ಊಳಿಗಮಾನ್ಯರಂತೆ ಪರಿಗಣಿಸಲಾಗುತ್ತದೆ. ಹಾಗಾದರೆ, ದಕ್ಷಿಣ ಭಾರತೀಯರು ಅನುಕರಣೆಗೆ ಅನರ್ಹವೆಂದು ಅವರು ಪರಿಗಣಿಸುವ ಪ್ರದೇಶದ ಭಾಷೆಯಲ್ಲಿ ಆಳ್ವಿಕೆ ನಡೆಸಲು ಏಕೆ ಒಪ್ಪುತ್ತಾರೆ? ಈ ಪ್ರಾಚೀನ ಭೂಮಿಗೆ ಇತ್ತೀಚೆಗೆ ವಲಸೆ ಬಂದವರ ಭಾಷೆ ಹಿಂದಿ ಎಂಬುದನ್ನು ಅವರು ನೆನಪಿಸಿಕೊಳ್ಳುವ ಕೂಡ ಅಗತ್ಯವಿಲ್ಲ. ಅವರು ಅದನ್ನು ಕೇವಲ ಬಹುಮತದ ಆಧಾರದ ಮೇಲೆ ರಾಷ್ಟ್ರೀಯ ಭಾಷೆ ಎಂದು ಪರಿಗಣಿಸುವದನ್ನು ತಿರಸ್ಕರಿಸುತ್ತಾರೆ.

ವೈವಿಧ್ಯಮಯ ಜನರು

ಸಾಂವಿಧಾನಿಕವಾಗಿ ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇದುವರೆಗೆ ದೊಡ್ಡ ಪ್ರತಿಕೂಲತೆಗಳ  ಅಡಿಯಲ್ಲಿಯೂ  ಯಶಸ್ವಿಯಾಗಿ ನಿರ್ವಹಿಸಿರುವ ಘಟಕವನ್ನು  ಅದರ  ಸಂಸ್ಥಾಪಕರು ರಚಿಸಿದ್ದಾರೆ. ಆದರೆ ಭಾರತವು ಇತಿಹಾಸ ಮತ್ತು ಸಂಸ್ಕೃತಿಯ ವಿಷಯದಲ್ಲಿ ವೈವಿಧ್ಯಮಯವಾಗಿರುವ ಜನರ ಒಕ್ಕೂಟವೂ ಆಗಿದೆ. ಅದನ್ನು  ಒಟ್ಟಿಗೆ ಹಿಡಿದಿಟ್ಟುಕೊಳ್ಳಲು  ವಿಶಾಲ ಹೃದಯದ ನಾಯಕರ ಅಗತ್ಯವಿದೆ  ಕೇವಲ ದೊಡ್ಡ ಅಳತೆಯ ಎದೆಯಲ್ಲ. ಸ್ವ-ಇಚ್ಛೆಯುಳ್ಳವರ ಒಕ್ಕೂಟವಾಗಿ ಭಾರತದ ಕಲ್ಪನೆಯ ಬಗ್ಗೆ ಸ್ವಲ್ಪವಾದರೂ  ತಿಳುವಳಿಕೆಯಿಲ್ಲದ ರಾಜಕೀಯ ಸಿದ್ಧಾಂತದ ಆರೋಹಣವನ್ನು ನಾವು ಇಂದು ನೋಡುತ್ತೇವೆ.  ಹೃದಯಗಳನ್ನು ಮತ್ತು ಮನಸ್ಸುಗಳನ್ನು ಗೆಲ್ಲಲು ಅಸಮರ್ಥವಾಗಿ,  ಇದು ವಿಭಜಕ ರಾಜಕೀಯವನ್ನು ಹುಟ್ಟುಹಾಕಿದೆ.  ಅತ್ಯ೦ತ  ಕಾಳಜಿಯೊಂದಿಗೆ ಜೊತೆಗೆ ಹಾಕಿದ ಒಕ್ಕೂಟವನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ದೃಢ ಮನಸ್ಕ  ಕ್ರಿಯಾಶೀಲ ನಾಗರಿಕರು ಮಾತ್ರ ಈ ಫಲಿತಾಂಶವನ್ನು ತಪ್ಪಿಸಬಹುದು.

ಪುಲಪ್ರೆ ಬಾಲಕೃಷ್ಣನ್ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಾರೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು