ಪೋಸ್ಟ್‌ಗಳು

ಇಮೇಜ್
  ಮುಂಡ್ಕಾ ಬೆಂಕಿಯು ಅನೌಪಚಾರಿಕ ವಲಯದ ಎಲ್ಲಾ ವ್ಯಾಧಿಗಳ ಲಕ್ಷಣವಾಗಿದೆ “ಉದ್ಯೋಗದಾತರಿಗೆ ಯಾವುದೇ ಹೊಣೆಗಾರಿಕೆ ಇಲ್ಲದೆ ಇರುವಾಗ, ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿರುವಾಗ, ಇಂತಹ ಭಯಾನಕ ಅಪಘಾತಗಳು ಇನ್ನೂ ಹೆಚ್ಚು ಸಂಭವಿಸಬಹುದು.” ಬರೆದವರು ನೀತಾ ಎನ್. |   ಮೇ 17, 2022 ‘ದಿ ಇ೦ಡಿಯನ್ ಎಕ್ಸ್ಪ್ರೆಸ್’ ಪಶ್ಚಿಮ ದೆಹಲಿಯ ಮುಂಡ್ಕಾದಲ್ಲಿರುವ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಪ್ರಯತ್ನಿಸುತ್ತಿದ್ದಾರೆ. (ಎಕ್ಸ್‌ಪ್ರೆಸ್ ಫೋಟೋ) ದೆಹಲಿಯ ಮುಂಡ್ಕಾದಲ್ಲಿ ಸಂಭವಿಸಿದ ಬೆಂಕಿಯಲ್ಲಿ  ಇದುವರೆಗೆ 27 ವ್ಯಕ್ತಿಗಳ ಸಾವಿನ ವಿವರ  ಇದೆ. ಅವರಲ್ಲಿ ಹೆಚ್ಚಿನವರು ಅನೌಪಚಾರಿಕ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಮಾಡುವ ಮಹಿಳಾ ಕಾರ್ಮಿಕರು . ಇದು  ನಗರದಲ್ಲಿನ ಅನೌಪಚಾರಿಕ ಕಾರ್ಮಿಕರ ಅದೃಶ್ಯತೆ ಮತ್ತು ಅಭದ್ರತೆಯನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ. ಸತ್ತವರ ಪೂರ್ವಾಪರಗಳು ಇನ್ನೂ ತಿಳಿದಿಲ್ಲ ಎಂಬುದು ಅನೌಪಚಾರಿಕ ವಲಯದ ಕಾರ್ಮಿಕರ ಅದೃಶ್ಯತೆ ಮತ್ತು ಗುರುತಿನ ಕೊರತೆಯನ್ನು ಸೂಚಿಸುತ್ತದೆ. ಕಟ್ಟಡಗಳಿಗೆ ಬೆಂಕಿ ತಗುಲುವುದರಿಂದ ಸಾವು ನೋವುಗಳ ವರದಿಗಳು, ನಗರ ಕೇಂದ್ರಗಳಲ್ಲಿ ಅಕ್ರಮ ನಿರ್ಮಾಣಗಳು ಮತ್ತು ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿಯ ಚರ್ಚೆಗಳು ಸ್ವಲ್ಪಮಟ್ಟಿಗೆ ಪುನರಾವರ್ತಿತ ವಿಷಯವಾಗಿದೆ. ಅಂತಹ ಪ್ರತಿಯೊಂದು ದು...
ಇಮೇಜ್
  ಭಾರತದ ಬಲಪಂಥೀಯರಿಗೆ  ಉರ್ದು ಭಾಷೆಯ ಮೇಲೆ  ಏಕೆ ಕೋಪ ? ಜೋಯಾ ಮತೀನ್  ಬಿಬಿಸಿ ನ್ಯೂಸ್, ದೆಹಲಿ 16 ಮೇ, 2022 ಭಾರತದಲ್ಲಿ ಉರ್ದು ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾದ ಭಾಷೆಯಾಗಿದೆ. ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ.    ಉರ್ದು ಯಾರಿಗೆ ಸೇರಿದ್ದು? ಭಾರತದ ಬಲಪಂಥೀಯರ ನೋಟದಲ್ಲಿ  ಬಹುಶಃ ಉರ್ದು ಒ೦ದು ವಿದೇಶಿ ಆಮದು,  ಇಸ್ಲಾಮಿಕ್ ಆಕ್ರಮಣಕಾರರೆಂದು ಕರೆಯಲ್ಪಡುವವರ ಬಲವ೦ತವಾಗಿ ಹೇರಿದ ಭಾಷೆ ಎಂದಿರಬಹುದು.     ಏಪ್ರಿಲ್‌ನಲ್ಲಿ , ಇತ್ತೀಚಿನ ಗಲಾಟೆಯಲ್ಲಿ, ಬಲಪಂಥೀಯ ಹೊಸ ಚಾನೆಲ್‌ನ ವರದಿಗಾರಳೊಬ್ಬಳು  ಜನಪ್ರಿಯ ಫಾಸ್ಟ್‌ಫುಡ್ ಸ್ಥಳಕ್ಕೆ ನುಗ್ಗಿದಳು,  ಮತ್ತು ತಿಂಡಿಗಳ ಪೊಟ್ಟಣವನ್ನು  ಉರ್ದು ಎಂದು ಅವಳು ಭಾವಿಸಿದ ಭಾಷೆಯಲ್ಲಿ ಲೇಬಲ್ ಮಾಡಿದ್ದಕ್ಕಾಗಿ ಅದರ ಉದ್ಯೋಗಿಗಳನ್ನು ಕೆಣಕಿದಳು. ಲೇಬಲ್ ವಾಸ್ತವವಾಗಿ ಅರೇಬಿಕ್ ಭಾಷೆಯಲ್ಲಿತ್ತು.      ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಬೇರುಗಳನ್ನು ಹೊಂದಿರುವ ವಸ್ತುಗಳನ್ನೆಲ್ಲ   ಭೇದ ಕಲ್ಪಿಸದೆ  ‘ಎಲ್ಲಾ ಒ೦ದೇ’ ಎ೦ದು ವರ್ಗೀಕರಿಸುವ ವಿಶಾಲ ಪ್ರಯತ್ನವನ್ನು ಇದು ಒತ್ತಿಹೇಳುತ್ತದೆ ಎಂದು ಹಲವರ ಅಭಿಪ್ರಾಯ. .   ಕಳೆದ ವರ್ಷ, ಬಟ್ಟೆ ಮಾರಾಟ ಅ೦ಗಡಿ  ಫ್ಯಾಬಿಂಡಿಯಾ ಉರ್ದು ಭಾಷೆಯಲ್ಲಿ  ಶೀರ್ಷಿಕೆಯಿದ್ದ  ಜಾಹೀರಾತನ್ನು ಆಡಳಿತಾರೂಢ ಭಾರತೀಯ ಜನತಾ...
ಇಮೇಜ್
  ವಿವರಣೆ: ಮೋದಿ ಯುಗದಲ್ಲಿ ದೇಶದ್ರೋಹದ ಕಾನೂನನ್ನು ಹೇಗೆ ಬಳಸಲಾಗಿದೆ ಕಳೆದ ದಶಕದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ 405 ಭಾರತೀಯರ ಮೇಲೆ ‘ದೇಶದ್ರೋಹ’ದ ಆರೋಪ ಹೊರೆಸಲಾಯಿತು. ಇವರಲ್ಲಿ  95% ರಷ್ಟು 2014 ರ ನಂತರ ಆರೋಪಿಸಲಾಗಿದೆ.   ಅಭಿಷೇಕ್ ಹರಿ ‘ದಿ ವೈರ್’ 11 ಮೇ 2022     ವಸಾಹತುಶಾಹಿ ಆಡಳಿತದ ಯಾವುದೇ ಕಟುವಾದ ಟೀಕೆಗಳನ್ನು ಎದುರಿಸಲು ಮತ್ತು ಭಾರತೀಯ ರಾಷ್ಟ್ರೀಯ ಚಳವಳಿಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಸಿಕೊಳ್ಳುವ ಸಾಧನವಾಗಿ ಬ್ರಿಟಿಷ್ ಸರ್ಕಾರವು ದೇಶದ್ರೋಹ ಕಾನೂನನ್ನು ಸೃಷ್ಟಿಸಿತು. ಬಾಲಗಂಗಾಧರ ತಿಲಕ್ ಮತ್ತು ಎಂ.ಕೆ.ಗಾಂಧಿ ಇದರ ಅತ್ಯಂತ ಪ್ರಸಿದ್ಧ ಬಲಿಪಶುಗಳು. ಗಾಂಧಿಜಿ ಈ ಕಾನೂನನ್ನು "ನಾಗರಿಕರ ಸ್ವಾತಂತ್ರ್ಯವನ್ನು ನಿಗ್ರಹಿಸಲು ವಿನ್ಯಾಸಗೊಳಿಸಿದ ಭಾರತೀಯ ದಂಡ ಸಂಹಿತೆಯ (IPC) ರಾಜಕೀಯ ಕಲಮುಗಳಲ್ಲಿ ರಾಜಕುಮಾರ" ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಸ್ವತಂತ್ರ ಭಾರತದಲ್ಲಿ ಕಾನೂನನ್ನು ಕೈಬಿಡಲಾಗಿಲ್ಲ ಮತ್ತು ಬದಲಿಗೆ ಈಗ, ಸ್ವಾತಂತ್ರ್ಯದ ಏಳು ದಶಕಗಳ ನಂತರ, ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಪ್ರಕರಣಗಳ ಉಲ್ಬಣಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇಷ್ಟಕ್ಕೂ ಭಾರತದ ಸರ್ವೋಚ್ಚ ನ್ಯಾಯಾಲಯ  ಕಾನೂನನ್ನೇ ಪ್ರಶ್ನಿಸಿದೆ . ಜಾಲತಾಣ ಆರ್ಟಿಕಲ್ 14 ವರದಿಸಿದ  ಪ್ರಕಾರ ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗ...