ಮೂಲಭೂತವಾಗಿ ದೋಷಪೂರಿತವಾಗಿದೆ: ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ಕುರಿತು
ಮೂಲಭೂತವಾಗಿ ದೋಷಪೂರಿತವಾಗಿದೆ: ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ಕುರಿತು ‘ದಿ ಹಿ೦ದು’ ಸ೦ಪಾದಕೀಯ ಮಾರ್ಚ್ 17, 202 2 ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಸಮಂಜಸವಾದ ಅವಕಾಶ ಕಲ್ಪಿಸುವದರ ಅಗತ್ಯವನ್ನು ಗುರುತಿಸಲು ವಿಫಲವಾಗಿದೆ ಕರ್ನಾಟಕ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಿರುವ ನ್ಯಾಯಾಲಯದ ತೀರ್ಪು ಹಲವು ಹಂತಗಳಲ್ಲಿ ತಪ್ಪಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ವಿವಾದದಿಂದ ಉದ್ಭವಿಸುವ ಪ್ರಶ್ನೆಗಳನ್ನು ನ್ಯಾಯಾಲಯ ವು ರೂಪಿಸಿದ ರೀತಿ ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತದೆ. ನಿಗದಿತ ಸಮವಸ್ತ್ರದ ಜೊತೆಗೆ, ಆದರೆ ಬಣ್ಣದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಹಿಜಾಬ್ ಧರಿಸುವುದು ಶಾಲೆ ಅಥವಾ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸುವ ಕಾರಣವೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ವಿಫಲವಾಗಿದೆ. ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಅಭ್ಯಾಸವಾಗಿದೆ ಮತ್ತು ಆದ್ದರಿಂದ, ವಿ ಧಿ 25 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿ ಸಾಂವಿಧಾನಿಕ ರಕ್ಷಣೆಗೆ ಅರ್ಹವಾಗಿದೆ ಎಂದು ವಿದ್ಯಾರ್ಥಿಗಳ ಹೇಳಿಕೆಯನ್ನು ಒಪ್ಪದ ಪೀಠವು ಕುರಾನ್‌ನ ಪದ್ಯಗಳನ್ನು ಪರಿಶೀಲಿಸಿತು. ಆದರೆ ಅದು ನಿಜವಾದ ಸಮಸ್ಯೆಯಾಗಿ ತ್ತೇ ? ವೈವಿಧ್ಯತೆಯನ್ನು ಹೊ೦ದಿರುವ ಸಮಾಜವು ವಿದ್ಯಾರ್ಥಿಗಳಲ್ಲಿ ಸಮಾನತೆಯ ಭಾವನೆಯನ್ನು ಹಾಳು ಮಾಡದೆಯೇ ...