ಭಾರತದ ಮೇಲೆ ಫ್ಯಾಸಿಸ೦ ನೆರಳು
ಭಾರತದ ಮೇಲೆ ಫ್ಯಾಸಿಸ೦ ನೆರಳು
“ಕಳೆದ ಕೆಲವು ವರ್ಷಗಳಲ್ಲಿ ಭಾರತದ ಖ್ಯಾತಿಗೆ ದೊಡ್ಡ ಹೊಡೆತ ಬಿದ್ದಿದೆ. ನರೇಂದ್ರ ಮೋದಿಯವರು ಗೆಲ್ಲಲು ಫ್ಯಾಸಿಸ್ಟ ತರದ ತಂತ್ರಗಳನ್ನು
ಬಳಸುತ್ತಿದ್ದಾರೆ.”
‘ಹೌ ಫ್ಯಾಸಿಸ೦ ವರ್ಕ್ಸ್’ ಪುಸ್ತಕದ ಲೇಖಕ ಅಮೆರಿಕ ದೇಶದ ತತ್ವಜ್ಞಾನಿ ಜೇಸನ್ ಸ್ಟಾನ್ಲಿ ಅವರು ಸಿದ್ದಾರ್ಥ್ ಭಾಟಿಯಾ ಅವರೊಂದಿಗೆ ಸಂಭಾಷಣೆಯಲ್ಲಿ.(ಸ೦ಭಾಷಣ ಶೈಲಿಯನ್ನು ಉಳಿಸಿಕೊ೦ಡು, ಅಸ್ಪಷ್ಟತೆ ಅನಾವಶ್ಯಕ ಪುನರುಕ್ತಿಗಳನ್ನು ಕೈ ಬಿಡಲಾಗಿದೆ. ಒತ್ತು ನೀಡಲು ದಪ್ಪ ಅಕ್ಷರಗಳು ನನ್ನವು . - ಅನುವಾದಕ)
ದಿ ವೈರ್ 1 ಮಾರ್ಚ್ 2022
ಭಾರತವು ಫ್ಯಾಸಿಸ್ಟ್ ದೇಶವೇ? ಇಲ್ಲಿ ಪ್ರತಿ ಕೆಲವು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ, ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಕಾನೂನುಗಳು ಇನ್ನೂ ಅಸ್ತಿತ್ವದಲ್ಲಿವೆ ಮತ್ತು ಸಿದ್ಧಾಂತದಲ್ಲಿ, ಮಾಧ್ಯಮವು, ಅನೇಕ ಮಾಧ್ಯಮಗಳು ಈ ಹಕ್ಕನ್ನು ಆಚರಣೆ ಮಾಡಲು ಬಯಸದಿದ್ದರೂ ಸಹ, ಸ್ವತಂತ್ರವಾಗಿದೆ,
“ನನ್ನ ಪರಿಶೀಲನೆ ಕೇವಲ ಸರ್ಕಾರಗಳ ಬಗ್ಗೆ ಅಲ್ಲ ಆದರೆ ಫ್ಯಾಸಿಸ್ಟ್ ಆ೦ದೋಲನಗಳ ಬಗ್ಗೆಯೂ ಇದೆ “ ಎ೦ದು ಸ್ಟಾನ್ಲಿ ಹೇಳುತ್ತಾರೆ. ಅವರ ಪುಸ್ತಕವು ಭಾರತದ ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಮಾತನಾಡುತ್ತದೆ, ಇದು ಲಕ್ಷಾಂತರ ಮುಸ್ಲಿಮರನ್ನು ಭಾರತೀಯ ಪೌರತ್ವದಿಂದ ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.
"ಪೌರತ್ವವನ್ನು ತೆಗೆದುಹಾಕುವುದು ನರಮೇಧದ ಪೂರ್ವಭಾವಿಯಾಗಿದೆ… ಸಾವರ್ಕರ್ ಮತ್ತು ಗೋಲ್ವಾಲ್ಕರ್ ನಾಝಿ ಮಾದರಿಯನ್ನು ಸ್ಪಷ್ಟವಾಗಿ ಅನುಸರಿಸಿದರು” ಎಂದು ಹೇಳುತ್ತಾರೆ.
ಸ೦ಭಾಷಣೆಯ ಮುಖ್ಯ ಅ೦ಶಗಳು:
ಸಿದ್ದಾರ್ಥ್ ಭಾಟಿಯಾ:
ಫ್ಯಾಸಿಸಂ ಎಂಬುದು ಜಾಗತಿಕ ಸನ್ನಿವೇಶದಲ್ಲಿ ಇಂದಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿರುವ ಪದವಾಗಿದೆ ಮತ್ತು ಭಾರತದಲ್ಲಿಯೂ ಸಹ ಅನೇಕ ರಾಜಕೀಯ ವಿಮರ್ಶಕರು ದೇಶದಲ್ಲಿ ಪ್ರಸ್ತುತ ಪರಿಸ್ಥಿತಿಗಳು ಫ್ಯಾಸಿಸ್ಟ್ ಎಂದು ಹೇಳುತ್ತಿದ್ದಾರೆ.
ಫ್ಯಾಸಿಸಂ ಎನ್ನುವುದು 1930 ರ ದಶಕದಲ್ಲಿ ಇಟಲಿಯಲ್ಲಿ ಮುಸೊಲಿನಿಯ ಅಡಿಯಲ್ಲಿ ಜಾರಿಗೆ ಬ೦ದ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಸೂಚಿಸುತ್ತದೆ. ಆದರೆ ಈಗ ಈ ಪದವನ್ನು ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ನಿಗ್ರಹಿಸುವ ಹಾಗೂ ಅತಿರೇಕ - ರಾಷ್ಟ್ರೀಯತೆ ಪ್ರಚಾರ ಮಾಡುವ ಮತ್ತು ಕೇಂದ್ರೀಕೃತ ಅಧಿಕಾರವನ್ನುಆಚರಿಸುವ ಯಾವುದೇ ಬಲಪಂಥೀಯ ನಿರಂಕುಶ ಸರ್ಕಾರದ ಬಗ್ಗೆ ಬಳಸಲಾಗುತ್ತದೆ.
ಯೇಲ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಬೋಧಿಸುವ ಪ್ರೊಫೆಸರ್ ಜೇಸನ್ ಸ್ಟಾನ್ಲಿ ಅವರು ತಮ್ಮ 'ಫ್ಯಾಸಿಸಂ ಹೇಗೆ ಕೆಲಸ ಮಾಡುತ್ತದೆ' ( ‘How Fascism Works’) ಎಂಬ ಪುಸ್ತಕದಲ್ಲಿ ಇದನ್ನು ಬಹಳ ವಿವರವಾಗಿ ಪರಿಶೀಲಿಸಿದ್ದಾರೆ. ಅವರ ಇನ್ನೊಂದು ಪುಸ್ತಕ 'ಪ್ರಚಾರ ಹೇಗೆ ಕೆಲಸ ಮಾಡುತ್ತದೆ’ ( ‘How Propaganda Works’). ಅವರು ನಮ್ಮ ಮತ್ತು ಪ್ರಪಂಚದಾದ್ಯಂತದ ಇತರ ದೇಶಗಳ ಉದಾಹರಣೆಗಳನ್ನು ನೀಡಿದ್ದಾರೆ ಮತ್ತು ಎಲ್ಲಾ ಭಾರತೀಯರಿಗೆ ಪರಿಚಿತವಾಗಿರುವ ಕೆಲವು ಸಾಮಾನ್ಯತೆಗಳನ್ನು - ಸಂಸ್ಕೃತಿ ಯುದ್ಧಗಳು, ರಾಷ್ಟ್ರದ ಸುವರ್ಣ ಅವಧಿ ಎಂದು ಕರೆಯಲ್ಪಡುವ ಇತಿಹಾಸದ ಪೂಜ್ಯ ಭಾವನೆ, ಮತ್ತು ಬಹುಸಂಖ್ಯಾತ ಸಮಾಜಕ್ಕೆ (ಇದೊ೦ದು ಆಪಾದನೆ ) ‘ಬೆದರಿಕೆ’ಗಳನ್ನು ನಿರಂತರವಾಗಿ ಎಬ್ಬಿಸುವದು - ಇವನ್ನೆಲ್ಲ ಪತ್ತೆಹಚ್ಚಿದ್ದಾರೆ .
ಸಿಧ್ಧಾರ್ಥ್ ಭಾಟಿಯಾ: ಸ್ವಾಗತ, ಜೇಸನ್ ಸ್ತಾನ್ಲಿ ಅವರೇ, ಮತ್ತು ಧನ್ಯವಾದಗಳು. ನೀವು ನಾಝಿ ಹತ್ಯಾಕಾಂಡದಿಂದ ಬದುಕುಳಿದ ದ೦ಪತಿಗಳ ಪುತ್ರ ಎಂದು ಹೇಳಿದ್ದೀರಿ. ನಿಮ್ಮ ಅಜ್ಜಿ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಝಿ ಪಕ್ಷದ ಆರಂಭಿಕ ವರ್ಷಗಳ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ .
ನಿಮ್ಮ ಸ್ವಂತ ಪುಸ್ತಕ ವನ್ನು ಬರೆಯಲು ಅದು ನಿಮ್ಮನ್ನು ಪ್ರೇರೇಪಿಸಿದೆಯೇ ?
ಜೇಸನ್ ಸ್ಟಾನ್ಲಿ : ನನ್ನ ಹಿನ್ನೆಲೆ ಖಂಡಿತವಾಗಿಯೂ ಒಂದು ಪಾತ್ರವನ್ನು ವಹಿಸುತ್ತದೆ ಏಕೆಂದರೆ ನನ್ನ ಪೋಷಕರು ತಾವು ಬೆಳೆದ ರಾಷ್ಟ್ರ ಮತ್ತು ನನ್ನ ತಾಯಿನಾಡು ಯುನೈಟೆಡ್ ಸ್ಟೇಟ್ಸ್ ನಡುವಿನ ಹೋಲಿಕೆಗಳನ್ನು ಗಮನಿಸಿದರು. ಅಲ್ಪಸಂಖ್ಯಾತರನ್ನು ಬಲಿಪಶುವಾಗಿ ಬಳಸುವ ವಿಧಾನಗಳನ್ನು, ಸರ್ಕಾರವು ಅವರ ಮೇಲೆ ದಾಳಿ ಮಾಡುವುದನ್ನು, ಪ್ರಬಲ ಗುಂಪಿನ ಸದಸ್ಯರು ಅವರನ್ನು ಒಂದು ರೀತಿಯ ಆಂತರಿಕ ಶತ್ರು ಎಂದು ಭಾವಿಸುವುದನ್ನು - ನನ್ನ ಹೆತ್ತವರು ಇವನ್ನೆಲ್ಲ ಅನುಭವಿಸಿ ಬೆಳೆದವರು. ಹಾಗಾಗಿ ನನ್ನ ತಲೆಯಲ್ಲಿ ಒಂದು ರೀತಿಯ ರಚನೆಯೊಂದಿಗೆ ನಾನು ಬೆಳೆದೆ. ನನ್ನ ತಾಯಿಯು ನ್ಯಾಯಾಲಯದ ಸ್ಟೆನೋಗ್ರಾಫರ್ ಆಗಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಪ್ಪು ಅಮೇರಿಕನ್ನರು ಪ್ರತಿಕೂಲಕ್ಕೆ ಗುರಿ ಪಡಿಸಲ್ಪಡುತ್ತಾರೆ ಎಂದು ನನಗೆ ಯಾವಾಗಲೂ ತಿಳಿದಿತ್ತು. ಹಾಗಾಗಿ ಇದು ನಾನು ಬೆಳೆದು ಬ೦ದ ರಚನೆಯಾಗಿದೆ. ನನ್ನ ಈ ಹಿನ್ನೆಲೆಯೊಂದಿಗೆ ಬೆಳೆದಾಗ ಈ ರೀತಿಯ ಕ್ರಮಗಳು ಸಾಧ್ಯ , ಇದು ಯಾವುದೇ ಭ್ರಮೆಯಲ್ಲ, ಎಂದು ತಿಳಿಯುತ್ತದೆ.
ನನ್ನ ಹಿನ್ನೆಲೆಯಲ್ಲಿ ನಾನು ಯಹೂದಿ ಮತ್ತು ನನ್ನ ಹೆತ್ತವರು
ಯುರೋಪ್‌ನಲ್ಲಿ ಜನಿಸಿದರು ಮತ್ತು ನಿರಾಶ್ರಿತರಾದರು.
ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯಗಳನ್ನು ಹೊಂದಿದ್ದು ಪ್ರಮುಖ ಸಂಸ್ಕೃತಿಯಾಗಿದ್ದ 1920 ಮತ್ತು 30 ರ ಜರ್ಮನಿಯಲ್ಲಿ ಫಾಸಿಸ್೦ ಸಂಭವಿಸಬಹುದಾಗಿದ್ದರೆ ಅದು ಬೇರೆ ಎಲ್ಲೇ ಆದರೂ ಕೂಡ ಸಂಭವಿಸಬಹುದು ಎಂದು ಅರಿಯುತ್ತೇವೆ.
ಸಿಧ್ಧಾರ್ಥ್ ಭಾಟಿಯಾ: ಆದರೆ ನಾವು ಸರ್ವಾಧಿಕಾರಿ ಸರ್ಕಾರವನ್ನು ನೋಡಿದಾಗ ಅಥವಾ ಅದು ಭಿನ್ನಾಭಿಪ್ರಾಯವನ್ನು ನಿಗ್ರಹಿಸುವಾಗ ಇ೦ತಹ ಪ್ರತಿ ಸನ್ನಿವೇಶಕ್ಕೂ ‘ಫ್ಯಾಸಿಸ್ಟ್’ಗಳಂತಹ ಪದಗಳನ್ನು ಬಳಸಬೇಕೇ ಅಥವಾ ಇದು ಉತ್ಪ್ರೇಕ್ಷೆಯೇ ? ಅನೇಕ ಸಂದರ್ಭಗಳಲ್ಲಿ ಕೆಲವು ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಸಂಸ್ಥೆಗಳು ಇನ್ನೂ ಬಲವಾಗಿ ಉಳಿದಿವೆ. ಪತ್ರಿಕಾ ಸ್ವಾತ೦ತ್ರ್ಯ ಭಾರತದಲ್ಲಿ ಇನ್ನೂ ಹೆಚ್ಚಾಗಿ ಉಳಿದಿದೆ ಮತ್ತು ಖಂಡಿತವಾಗಿಯೂ ಯುನೈಟೆಡ್ ಸ್ಟೇಟ್ಸ್ನಲ್ಲಿ ಪತ್ರಿಕಾ ರ೦ಗ ಹೆಚ್ಚು ಮುಕ್ತವಾಗಿ ಉಳಿದಿದೆ. ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಮತ್ತು ನಿಯಮಿತವಾಗಿ ಚುನಾವಣೆಗಳು ನಡೆಯುತ್ತವೆ. ನಾವು ಈ ಸ್ಥಿತಿಯನ್ನು ಫ್ಯಾಸಿಸಂ ಎಂದು ಕರೆಯಲು ಕಾರಣಗಳಿವೆಯೇ ?
ಜೇಸನ್ ಸ್ಟಾನ್ಲಿ : ಹಲವಾರು ಕಲ್ಪನೆಗಳು ಮತ್ತು ವ್ಯತ್ಯಾಸಗಳನ್ನು ಇಲ್ಲಿ ಗಮನಿಸಬೇಕು.
ಮೊದಲಿಗೆ , ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಆದರೂ ಫ್ಯಾಸಿಸ್ಟ್‌ಗಳಲ್ಲದ ಸರ್ವಾಧಿಕಾರಿ ಸರ್ಕಾರಗಳಿವೆ. ಉದಾಹರಣೆಗೆ ಸ್ಟಾಲಿನ್ ಫ್ಯಾಸಿಸ್ಟ್ ಆಗಿರಲಿಲ್ಲ. ಫಿಡೆಲ್ ಕ್ಯಾಸ್ಟ್ರೋ ಫ್ಯಾಸಿಸ್ಟ್ ಅಲ್ಲ ಎಂದು ನಿಮಗೆ ತಿಳಿದಿದೆ. ನಿಸ್ಸಂಶಯವಾಗಿ ಸಂಪೂರ್ಣವಾಗಿ ಪ್ರಜಾಸತ್ತಾತ್ಮಕವಾದ ಕಮ್ಯುನಿಸ್ಟ್ ಸರ್ಕಾರಗಳಿವೆ. ಕೇರಳ ಉದಾಹರಣೆಯಾಗಿದೆ. ಫ್ಯಾಸಿಸ್ಟ್ ಅಲ್ಲದ ಕಠಿಣ ನಿರಂಕುಶ ಸರ್ಕಾರಗಳಿವೆ.
ನಿರಂಕುಶಾಧಿಕಾರವು ವಿವಿಧ ರೂಪಗಳಲ್ಲಿ ಬರುತ್ತದೆ. ಫಾಸಿಸ೦ ತತ್ವ ಅಥವಾ ಆಚರಣೆ ಒಂದು ಗುಂಪು ಅಥವಾ ಸಮಾಜದ ಜನಾಂಗೀಯ ಅಥವಾ ಧಾರ್ಮಿಕ ಗುರುತನ್ನು ಆಧರಿಸಿದೆ. ಮತ್ತು ಈ ಗು೦ಪು ದೇಶದ ಅಲ್ಪಸಂಖ್ಯಾತರನ್ನು, ಧರ್ಮ ಅಥವಾ ಜನಾಂಗ ಅಥವಾ ವ೦ಶಕ್ಕೆ ಸ೦ಬ೦ಧಿಸಿದ೦ತೆ ಅಲ್ಪಸಂಖ್ಯಾತ ಭಾಗವನ್ನು, ‘ಆಂತರಿಕ ಶತ್ರು’ ಎಂದು ತೆಗೆದುಕೊಳ್ಳುತ್ತದೆ. ಆದ್ದರಿಂದ ಫಾಸಿಸ೦ ಒಂದು ನಿರ್ದಿಷ್ಟ ರೂಪ ಪಡೆದಿದೆ.
ಕಮ್ಯುನಿಸ್ಟ್ ಸರ್ವಾಧಿಕಾರ ತುಂಬಾ ವಿಭಿನ್ನವಾಗಿರುತ್ತದೆ. ಕಮ್ಯುನಿಸ್ಟ್ ಸರ್ವಾಧಿಕಾರವು ಭವಿಷ್ಯದ ಕಡೆಗೆ ಸಜ್ಜಾಗಿದೆ. ಭವಿಷ್ಯದಲ್ಲಿ ನಾವು ರಾಮರಾಜ್ಯವನ್ನು ಹೊಂದುತ್ತೇವೆ, ನಾವು ಈಗ ಸಮಾಜವನ್ನು ಬದಲಾಯಿಸಲಿದ್ದೇವೆ, ಇದರಿಂದ ಭವಿಷ್ಯದಲ್ಲಿ ನಾವು ಹಿಂದೆಂದೂ ಸಾಧಿಸದಂತಹದನ್ನು ಸಾಧಿಸುತ್ತೇವೆ ಎಂದು ಅದು ಹೇಳುತ್ತದೆ.
ಫ್ಯಾಸಿಸಂ ಕಳೆದುಹೋದ ಕಾಲದ ದಿಸೆಯಲ್ಲಿ ನೋಡುತ್ತದೆ. ಫ್ಯಾಸಿಸಂ, 'ಹಿಂದೆ ನಾವು ಶ್ರೇಷ್ಠರು, ನಾವು ಶುದ್ಧರು ಆಗಿದ್ದೆವು, ಹಿ೦ದೆ ನಮಗೆ ಈ ಆಂತರಿಕ ಶತ್ರು ಇರಲಿಲ್ಲ,' ಎಂದು ಹೇಳುತ್ತದೆ.
ಹೀಗೆ ಅವು ವಿಭಿನ್ನ ರಚನೆಗಳಾಗಿವೆ. ಇದು ಮೊದಲ ಅಂಶ.
ಎರಡನೆಯ ಅಂಶವೆಂದರೆ ನಾವು ಫ್ಯಾಸಿಸ್ಟ್ ಆಡಳಿತವನ್ನು
ಫ್ಯಾಸಿಸ್ಟ್ ಸಾಮಾಜಿಕ ಮತ್ತು ರಾಜಕೀಯ ಚಳುವಳಿ, ಫ್ಯಾಸಿಸ್ಟ್ ರಾಜಕೀಯ ಪಕ್ಷದಿಂದ ಪ್ರತ್ಯೇಕಿಸಬೇಕಾಗಿದೆ. ಯುನೈಟೆಡ್ ಸ್ಟೇಟ್ಸ್ ಯಾವುದೇ ರೀತಿಯಲ್ಲಿ ಫ್ಯಾಸಿಸ್ಟ್ ಆಡಳಿತವನ್ನು ಹೊಂದಿಲ್ಲ.
ಅಮೆರಿಕದಲ್ಲಿ ನಮ್ಮಲ್ಲಿರುವುದು ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿರುವ ಫ್ಯಾಸಿಸ್ಟ್ ಸಾಮಾಜಿಕ ಮತ್ತು ರಾಜಕೀಯ ಚಳುವಳಿಯಾಗಿದೆ. ಆದ್ದರಿಂದ ಇದು ನಿರಂತರವಾಗಿರುತ್ತದೆ, ಮು೦ದುವರೆಯುತ್ತಲೇ ಇರುತ್ತದೆ. ನಾಝಿ ಜರ್ಮನಿ, ಮುಸೊಲಿನಿಯ ಇಟಲಿ ಇವು ವಾಸ್ತವಿಕ ಫ್ಯಾಸಿಸ್ಟ್ ಆಡಳಿತಗಳು. ಇದು ನಿರಂತರತೆಯ ಪ್ರಮಾಣದ ಕೊನೆಯಲ್ಲಿ ಸ೦ಭವಿಸಿತು.
ಹೆಚ್ಚಿನ ದೇಶಗಳು ಫ್ಯಾಸಿಸ್ಟ್ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳನ್ನು ಯಾವಾಗಲೂ ಹೊಂದಿರುತ್ತವೆ . ನಮ್ಮ ಗುರಿಯೇನು ? ಆ ಫ್ಯಾಸಿಸ್ಟ್ ಸಾಮಾಜಿಕ ಮತ್ತು ರಾಜಕೀಯ ಆಂದೋಲನಗಳು ಅಧಿಕಾರವನ್ನು ತೆಗೆದುಕೊಳ್ಳದಂತೆ ಮತ್ತು ಕಾನೂನನ್ನು ಬದಲಾಯಿಸುವುದರಿಂದ ಫ್ಯಾಸಿಸಂ ‘ಕಾನೂನು ಹಂತ’ವನ್ನು ಪ್ರವೇಶಿಸದ೦ತೆ ಮಾಡುವುದು ಗುರಿಯಾಗಿದೆ. ನಾಝಿಗಳು ಮಾಡಿದ ಪ್ರತಿಯೊಂದೂ ಕಾನೂನುಬದ್ಧವಾಗಿತ್ತು ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಏಕೆಂದರೆ ಅದು ಫ್ಯಾಸಿಸ್ಟ್ ಆಡಳಿತವಾಗಿತ್ತು.
ಹಾಗಾಗಿ ನನ್ನ ಪುಸ್ತಕ 'ಫ್ಯಾಸಿಸಂ ಹೇಗೆ ಕೆಲಸ ಮಾಡುತ್ತದೆ' , ಫ್ಯಾಸಿಸ್ಟ್ ರಾಜಕೀಯ ತತ್ವ, ಸಾಮಾಜಿಕ ಮತ್ತು ರಾಜಕಾರಣದ ಬಗ್ಗೆ, ಫ್ಯಾಸಿಸ್ಟ್ ಪಕ್ಷ ಅಥವಾ ಫ್ಯಾಸಿಸ್ಟ್ ಸಾಮಾಜಿಕ ಮತ್ತು ರಾಜಕೀಯ ಚಳುವಳಿಯು ಅಧಿಕಾರವನ್ನು ವಶಪಡಿಸಿಕೊಳ್ಳಲು ಹೇಗೆ ಕಾರ್ಯನಿರ್ವಹಿಸುತ್ತದೆ, ಅವರು ಬಳಸುವ ಪುರಾಣಗಳು, ಪೌರಾಣಿಕ ಭೂತಕಾಲದ ಕಟ್ಟುಕತೆಗಳು, ‘ಲವ್ ಜಿಹಾದ್’ ನಂತಹ ಪಿತೂರಿಯ ಸಿದ್ಧಾಂತಗಳು, ಎನ್ನುವದರ ಬಗ್ಗೆ. ‘ಲವ್ ಜಿಹಾದ್’ ನಾನು ಬಳಸುವ ಉದಾಹರಣೆಯಾಗಿದೆ.
ಆದ್ದರಿಂದ ಫ್ಯಾಸಿಸ೦ಗೆ ಸೇರಿದ ನಿರ್ದಿಷ್ಟ ತಂತ್ರಗಳು ಮತ್ತು ಫ್ಯಾಸಿಸಂ , ಬಹುತೇಕ ದೇಶಗಳಿಗೆ, ಯಾವುದೇ ದೇಶಕ್ಕೆ, ನಿರಂತರ ಬೆದರಿಕೆಯಾಗಿದೆ.
ಇದು ನಿರಂಕುಶವಾದದ ಒಂದು ನಿರ್ದಿಷ್ಟ ಆವೃತ್ತಿಯಾಗಿದೆ. ಕೆಲವೇ ದೇಶಗಳು ಇದೀಗ ಫ್ಯಾಸಿಸ್ಟ್ ಆಡಳಿತವನ್ನು ಹೊಂದಿವೆ. ಬಹುಶಃ ರಷ್ಯಾ ಉದಾಹರಣೆಯಾಗಿರಬಹುದು.
ಸಿಧ್ಧಾರ್ಥ್ ಭಾಟಿಯಾ: ಡೊನಾಲ್ಡ್ ಟ್ರಂಪ್ ಪೌರಾಣಿಕ ಭೂತಕಾಲದ ಕಡೆಗೆ ನೋಡಿದನು ಮತ್ತು ‘ಅಮೇರಿಕಾವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಿ’ ಎಂದು ಹೇಳಿದನು, ಅಲ್ಲವೆ ?
ಜೇಸನ್ ಸ್ಟಾನ್ಲಿ : ಹೌದು ಡೊನಾಲ್ಡ್ ಟ್ರಂಪ್ ನಿರಂತರವಾಗಿ ಫ್ಯಾಸಿಸ್ಟ್ ರಾಜಕೀಯ ತಂತ್ರಗಳನ್ನು ಬಳಸುತ್ತಿದ್ದನು.
ಸಿಧ್ಧಾರ್ಥ್ ಭಾಟಿಯಾ: ನಾನು ನಿಮ್ಮ ಪುಸ್ತಕವನ್ನು ಓದುವಾಗ ಕೆಲವು ಪ್ರಮುಖ ಅವಲೋಕನಗಳನ್ನು ನನ್ನ ದೇಶಕ್ಕೆ ಸಂಬಂಧಿಸಲು ಪ್ರಯತ್ನಿಸುತ್ತಿದ್ದೆ. ಇವುಗಳಲ್ಲಿ ಕೆಲವು ಸಮ೦ಜಸವಾಗಿವೆ, ಕೆಲವು ಆಗುವುದಿಲ್ಲ. ಪತ್ರಕರ್ತನಾಗಿರುವುದರಿ೦ದ ಮಾಧ್ಯಮಗಳು ನನ್ನ ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿದೆ. ಒ೦ದೆಡೆ ಸಾಕಷ್ಟು ಸ್ವತಂತ್ರ ಮಾಧ್ಯಮಗಳಿವೆ. ವರದಿಗಾರರು ಬಹಳ ಒಳ್ಳೆಯ ಕಥೆಗಳನ್ನು ಬರೆಯುತ್ತಾರೆ, ಸರ್ಕಾರಕ್ಕೆ ಸವಾಲು ಹಾಕುತ್ತಾರೆ. ಆದರೆ ಅದೇ ಸಮಯದಲ್ಲಿ ಸುವರ್ಣ ಭೂತಕಾಲಕ್ಕೆ ಹಿಂತಿರುಗುವುದೂ ಇದೆ.
ನಮ್ಮಲ್ಲಿ ವಸಾಹತುಶಾಹಿಯನ್ನು ಹೆಚ್ಚಾಗಿ ಉಲ್ಲೇಖಿಸುವುದಿಲ್ಲ, ಕೆಲವು ಕಾರಣಗಳಿಂದ ಬ್ರಿಟಿಷರು ಹೊಣೆ ತಪ್ಪಿಸಿಕೊಳ್ಳುತ್ತಾರೆ. ಆದರೆ ಮೊಗಲರು ಮತ್ತು ಅದಕ್ಕೂ ಮೊದಲು ಹಲವಾರು ಮುಸ್ಲಿಂ ಆಡಳಿತಗಾರರನ್ನು ಹೆಸರಿಸಲಾಗುತ್ತದೆ. ಹೀಗಾಗುವದರಿಂದ ‘1200 ವರ್ಷಗಳ ಗುಲಾಮಗಿರಿ’ ಇತ್ಯಾದಿ ಇತ್ಯಾದಿ ವಿಚಾರಗಳು ಹೊಮ್ಮುತ್ತವೆ.
( ಅನುವಾದಕ ಟಿಪ್ಪಣಿ : ನರೇಂದ್ರ ಮೋದಿಯವರ ಚೊಚ್ಚಲ ಲೋಕಸಭಾ ಭಾಷಣದಲ್ಲಿ, "1,200 ವರ್ಷಗಳ ಗುಲಾಮಗಿರಿ"ಯ ಉಲ್ಲೇಖದಿಂದ ಇತಿಹಾಸಕಾರರು ಗೊ೦ದಲಕ್ಕೊಳಗಾಗಿದ್ದರು, “ಇದು ಭಾರತೀಯರನ್ನು ಗುಲಾಮ ಮನಸ್ಥಿತಿಗೊಳಗಾಗಿಸಿದೆ …1,200 ವರ್ಷಗಳ ಈ ಗುಲಾಮ ಮನಸ್ಥಿತಿಯು ನಮ್ಮನ್ನು ತೊಂದರೆಗೊಳಿಸುತ್ತಿದೆ" ಎಂದು ಅವರು ಹೇಳಿದರು. )
ಅಸಂಖ್ಯಾತ ಸೆಮಿನಾರ್‌ಗಳು ‘ಭಾರತ ಹಿ೦ದೆ೦ದಾದರೂ ಒಂದು ದೇಶ ಅಥವಾ ರಾಷ್ಟ್ರವಾಗಿತ್ತೇ?’ ಮು೦ತಾದವನ್ನು ಚರ್ಚಿಸುತ್ತವೆ. ಆದರೂ ಹಿಂದೂಗಳು ಸುವರ್ಣ ಭೂತಕಾಲಕ್ಕೆ ಮರಳುವ ಎಲ್ಲ ವಿಚಾರಗಳೂ ಮುಸ್ಲಿಮರೊಂದಿಗೆ ಸಂಬಂಧ ಹೊಂದಿದೆ. ಇದರ ಪ್ರಕಾರ ಮುಸ್ಲಿಮರು ಇಲ್ಲಿಗೆ ಬಂದು ಅನಂತರ ಈ ರಾಷ್ಟ್ರವನ್ನು ಹಾಳುಮಾಡಿದ್ದಾರೆ.
ಕಳೆದ ಒಂದೂವರೆ ವರ್ಷಗಳಲ್ಲಿ ಬಲ ಪ೦ಥೀಯ ವಿಚಾರಗಳ ಶಕ್ತಿ ಕಡಿಮೆಯಾಗಿದೆ ಎಂದು ನಿಮಗೆ ತೋರುತ್ತಿದೆಯೇ ? ನಿಮ್ಮ ಪುಸ್ತಕದಲ್ಲಿ ವಿವರಿಸುವ ಯುನೈಟೆಡ್ ಸ್ಟೇಟ್ಸ್ ನಲ್ಲಿ ಟ್ರಂಪ್ ಸೋತ, ಅಧ್ಯಕ್ಷ ನೆತನ್ಯಾಹು (ಇಸ್ರಯೆಲ್) ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದು ಸೋತಿದ್ದಾನೆ, ಅಧ್ಯಕ್ಷ ಬೊಲ್ಸೊನಾರೊ (ಬ್ರಝಿಲ್) ಸಾರ್ವಜನಿಕ ವಿರೋಧವನ್ನು ಎದುರಿಸುತ್ತಿದ್ದಾನೆ ಮತ್ತು ಇಂದು ಚುನಾವಣೆಗಳು ನಡೆದರೆ ಗೆಲ್ಲಲಾರ ಎಂದು ನಾನು ಪಣತೊಡುತ್ತೇನೆ . ಆದರೆ ಇದು ಈ ದೇಶಗಳಲ್ಲಿ ಫಾಸಿಸ್೦-ನ ಅ೦ತ್ಯವಾಗಿರಲಿಕ್ಕಿಲ್ಲ. ಏಕೆಂದರೆ ಇವೆರಲ್ಲವರು ಹೋಗಿದ್ದಾರೆ ಆದರೆ ಬೇರೆಯವರು ಬರಬಹುದು.
ಜೇಸನ್ ಸ್ಟಾನ್ಲಿ : ಬಲಶಾಲಿಯಾದವರು ಮತ್ತು ದುರ್ಬಲರನ್ನು ಪ್ರತ್ಯೇಕಿಸುವುದು ಮುಖ್ಯ. ನಿಜವಾದ ಫ್ಯಾಸಿಸಂನಿಂದ ಫ್ಯಾಸಿಸ೦ ಅಲ್ಲದ್ದನ್ನು ಪ್ರತ್ಯೇಕಿಸುವದೂ ಬಹಳ ಮುಖ್ಯ. ದೇಶವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೆ ಪ್ರಯತ್ನಿಸಲಿಲ್ಲ ಎಂದು ಅರ್ಥವಲ್ಲ. ಬ್ರಝಿಲ್- ನ ಬೊಲ್ಸನಾರೊ ಫ್ಯಾಸಿಸ್ಟ್ ವಾಗ್ಮಿ-ಪುಢಾರಿಯೊಬ್ಬನ ಶುದ್ಧ ಉದಾಹರಣೆ. ಅವನು ಪದೇ-ಪದೇ ಮಿಲಿಟರಿಯನ್ನು ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ನ೦ತರ ತನಗೆ ಉಸ್ತುವಾರಿ ವಹಿಸುವಂತೆ ಕೇಳುತ್ತಿದ್ದಾನೆ. ಮಿಲಿಟರಿ ಇದನ್ನು ಒಪ್ಪುವುದಿಲ್ಲ. ಅ೦ದರೆ ಅವನು ಫ್ಯಾಸಿಸ್ಟ್ ಅಲ್ಲ ಎಂದಲ್ಲ, ಅವನು ಯಶಸ್ವಿ ಫ್ಯಾಸಿಸ್ಟ್ ಅಲ್ಲ ಎಂದರ್ಥ.
ನನ್ನ ಪುಸ್ತಕವು ಮೂರೂವರೆ ವರ್ಷಗಳ ಹಿಂದೆ 2018 ರಲ್ಲಿ ಪ್ರಕಟವಾಯಿತು ಮತ್ತು ಇದು ನಿಜವಾಗಿಯೂ ಟ್ರಂಪ್ ಬಗ್ಗೆ ಅಲ್ಲ. ನನ್ನ ಪುಸ್ತಕ ಫ್ಯಾಸಿಸ್ಟ್ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳನ್ನು ನಿರೂಪಿಸುತ್ತದೆ. ಅವುಗಳನ್ನು ಯಾವುದೇ ದೇಶದಲ್ಲಿ ಗುರುತಿಸಬಹುದು. ನಾನು ಮೊದಲೇ ಹೇಳಿದಂತೆ ಫ್ಯಾಸಿಸಂ ಶಾಶ್ವತ, ಅದನ್ನು ನಾವು ಎ೦ದಿಗೂ ಎದುರಿಸಬೇಕಾಗುತ್ತದೆ.
ಅದು ಕಾನೂನು ಹಂತವನ್ನು ಪ್ರವೇಶಿಸುವ ಮೊದಲು, ಅದು ಕಾನೂನುಗಳನ್ನು ಬದಲಾಯಿಸಲು ಪ್ರಾರಂಭಿಸುವ ಹಂತವನ್ನು ತಲುಪುವ ಮೊದಲು, ನಾವು ಅದನ್ನು ಗುರುತಿಸಲು ಸಾಧ್ಯವಾಗ ಬೇಕು.ಇದು ನನ್ನ ಉದ್ದೇಶ.
ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಲಪಂಥೀಯ ರಿಪಬ್ಲಿಕನ್ನರ ಬಗ್ಗೆ ನಿಮ್ಮ ಪ್ರಶ್ನೆ : ಕೆಲವು ರಾಜ್ಯಗಳಲ್ಲಿ ಅವರು ಕಾನೂನುಗಳನ್ನು ಬದಲಾಯಿಸಿದ್ದಾರೆ. ಅವರು ಚುನಾವಣೆಗಳನ್ನು ನಿಯಂತ್ರಿಸುವ ಕಾನೂನುಗಳನ್ನು ಬದಲಾಯಿಸಿದ್ದಾರೆ, ಇತಿಹಾಸದ ಬಗ್ಗೆ ಶಾಲೆಯಲ್ಲಿ ನೀವು ಏನು ಕಲಿಸಬಹುದು ಎಂಬುದನ್ನು ನಿಯಂತ್ರಿಸುವ ಕಾನೂನುಗಳನ್ನು ಅವರು ಬದಲಾಯಿಸಿದ್ದಾರೆ. ಆದ್ದರಿಂದ ಯುನೈಟೆಡ್ ಸ್ಟೇಟ್ಸ್ನಲ್ಲಿ ಫ್ಯಾಸಿಸಂ ರಾಜ್ಯ ಮಟ್ಟದಲ್ಲಿ ಪ್ರವೇಶಿಸುತ್ತಿದೆ, ರಾಜ್ಯ ಮಟ್ಟದಲ್ಲಿ ಅದರ ಕಾನೂನು ಹಂತವನ್ನು ಪ್ರವೇಶಿಸಿದೆ. ಪ್ರತಿಭಟಿಸುವ ಜನರ ಹಕ್ಕನ್ನು ನಿರ್ಬಂಧಿಸುವ ಪ್ರತಿಭಟನೆ-ವಿರೋಧಿ ಕಾನೂನುಗಳನ್ನು ಅನೇಕ ರಾಜ್ಯಗಳು ಅಂಗೀಕರಿಸಿವೆ. ಇದು 2024 ರಲ್ಲಿ ಚುನಾವಣೆಯನ್ನು ಕದಿಯುವ ನಿರೀಕ್ಷೆಯಲ್ಲಿ, ಎಂದು ನಾನು ಭಾವಿಸುತ್ತೇನೆ. ರಿಪಬ್ಲಿಕನ್ನರು ಅನೇಕ ರಾಜ್ಯ ಶಾಸನಸಭೆಗಳನ್ನು ನಿಯಂತ್ರಿಸುತ್ತಾರೆ ಮತ್ತು ಡೊನಾಲ್ಡ್ ಟ್ರಂಪ್ 2020 ರಲ್ಲಿ ಮಾಡಲು ಪ್ರಯತ್ನಿಸಿದ ರೀತಿಯ ದಂಗೆಯನ್ನು ಕಾನೂನುಬದ್ಧವಾಗಿ ಮಾಡಲು ಕಾನೂನುಗಳನ್ನು ಬದಲಾಯಿಸುತ್ತಿದ್ದಾರೆ.
ತಿಳಿದಿರಬೇಕಾದದ್ದು ಇದು : ಫ್ಯಾಸಿಸಂ ತನ್ನ ಆರಂಭಿಕ ಹಂತಗಳಲ್ಲಿ ಹಿಂಸಾತ್ಮಕವಾಗಿದೆ, ಕಾನೂನುಬಾಹಿರವಾಗಿದೆ, ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಒಳಗೊಂಡಿರುತ್ತದೆ, ಅಲ್ಪಸಂಖ್ಯಾತರು ನಿಮ್ಮ ಮಹಿಳೆಯರನ್ನು ಕದಿಯಲು ಮತ್ತು ದೇಶವನ್ನು ಹಾಳುಮಾಡಲು ಹೊರಟಿದ್ದಾರೆ ಎಂದು ಪ್ರಚಾರ ಮಾಡುತ್ತದೆ. ಆದ್ದರಿಂದ ಫ್ಯಾಸಿಸಂ-ಅನ್ನು ಅದರ ಆರಂಭಿಕ ಹಂತಗಳಲ್ಲಿ ಗುರುತಿಸುವದು ಸಾಧ್ಯವಾಗುತ್ತದೆ. ಅದರ ನಂತರದ ಹಂತಗಳಲ್ಲಿ ಕಾನೂನುಗಳನ್ನು ಬದಲಾಯಿಸಲಾಗುತ್ತದೆ, ದೇಶದ ಪೌರತ್ವ ಕಾನೂನುಗಳನ್ನು ನ್ಯೂರೆಂಬರ್ಗ್ ಕಾನೂನಿನ ತರ ಬದಲಾಯಿಸಲಾಗುತ್ತದೆ.
(ಅನುವಾದಕ ಟಿಪ್ಪಣಿ: ನ್ಯೂರೆಂಬರ್ಗ್ ಕಾನೂನುಗಳು ನಾಝಿ ಜರ್ಮನಿಯಲ್ಲಿ ಜಾರಿಗೊಳಿಸಲಾದ ಯೆಹೂದ್ಯ ವಿರೋಧಿ ಮತ್ತು ಜನಾಂಗೀಯ ಕಾನೂನುಗಳಾಗಿವೆ. ಎರಡು ಕಾನೂನುಗಳು ಜರ್ಮನ್ ರಕ್ತ ಮತ್ತು ಜರ್ಮನ್ ಗೌರವದ ರಕ್ಷಣೆಗಾಗಿ ಕಾನೂನಾಗಿದ್ದು, ಇದು ಯಹೂದಿಗಳು ಮತ್ತು ಜರ್ಮನ್ನರ ನಡುವಿನ ವಿವಾಹಗಳು ಮತ್ತು ವಿವಾಹೇತರ ಸಂಭೋಗವನ್ನು ನಿಷೇಧಿಸಿತು ಮತ್ತು ಯಹೂದಿ ಕುಟುಂಬಗಳಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜರ್ಮನ್ ಸ್ತ್ರೀಯರ ಉದ್ಯೋಗವನ್ನು ನಿಷೇಧಿಸಿತು; ಮತ್ತು ಪೌರತ್ವ ಕಾನೂನು, ಜರ್ಮನ್ ಅಥವಾ ಸಂಬಂಧಿತ ರಕ್ತದವರು ಮಾತ್ರ ನಾಗರಿಕರಾಗಲು ಅರ್ಹರು, ಉಳಿದವರು ಯಾವುದೇ ಪೌರತ್ವ ಹಕ್ಕುಗಳಿಲ್ಲದ ಪ್ರಜೆಗಳು ಎಂದು ಘೋಷಿಸಿತು. ನ೦ತರ ‘ಯೆಹೂದಿಗಳೆ೦ದರೆ ಯಾರು ?’ ಎನ್ನುವದನ್ನು ವ್ಯಾಖ್ಯಾನಿಸುವ ಕಾನೂನುಗಳು, ಮತ್ತು ಕರಿ ವರ್ಣದವರು ಮತ್ತು ರೋಮಾನಿ (ಜಿಪ್ಸಿ)ಗಳನ್ನು ಹೊರಪಡಿಸುವ ಕಾನೂನುಗಳನ್ನು ಘೋಷಿಸಲಾಯಿತು. ರೋಮಾನಿಗಳನ್ನು ಯೆಹೂದಿಗಳ ಹಾಗೆಯೇ ‘ಜನಾ೦ಗ-ಆಧಾರಿತ ರಾಷ್ಟ್ರದ ವೈರಿಗಳು’ ಎ೦ದು ಘೋಷಿಸಲಾಯಿತು. )
ಒಂದು ದೇಶವು ತನ್ನ ಪೌರತ್ವವನ್ನು ನಿಯಂತ್ರಿಸುವ ಕಾನೂನುಗಳನ್ನು ಬದಲಾಯಿಸುತ್ತಿದ್ದರೆ - ಯಾರು ನಾಗರಿಕರು , ಯಾರು ನಾಗರಿಕರಲ್ಲ - ಅದಕ್ಕೆ ನಿಜವಾಗಿಯೂ ಗಮನ ಹರಿಸಬೇಕು - ಅದು ಕಾನೂನು ಹಂತದಲ್ಲಿನ ಫ್ಯಾಸಿಸಂ. ಇದೊ೦ದು ವಿಭಿನ್ನ ಪ್ರಕ್ರಿಯೆ, ಮತ್ತು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಾವು ನೋಡುತ್ತಿರುವುದು ತಾಳ್ಮೆಯಿ೦ದ ನಿರಂಕುಶವಾದಿ ಫ್ಯಾಸಿಸ್ಟ್ ರಾಜಕೀಯ ಪಕ್ಷವು ಕಾನೂನುಗಳನ್ನು ಬದಲಾಯಿಸುತ್ತಿದೆ. ಇದರಿ೦ದಾಗಿ ಅವರು ಭವಿಷ್ಯದಲ್ಲಿ ಕೆಲವು ಹೆಜ್ಜೆಗಳನ್ನು ಚಲಿಸಬಹುದು.
ಸಿಧ್ಧಾರ್ಥ್ ಭಾಟಿಯಾ: ಅನೇಕರು ಹೇಳುವಂತೆ ಟ್ರಂಪ್ ಹೊರಕ್ಕೆ ಬಿದ್ದರೂ
ಟ್ರಂಪ್‌ವಾದವು ಮುಂದುವರಿಯುತ್ತದೆ
ಜೇಸನ್ ಸ್ಟಾನ್ಲಿ : ಸಂಪೂರ್ಣವಾಗಿ ಸತ್ಯ. ಟ್ರಂಪ್ ಅತ್ಯಂತ ಯಶಸ್ವಿಯಾಗಿದ್ದಾನೆ, ಅವನು ಯಾವುದೇ ರೀತಿಯಲ್ಲಿ ಕಣ್ಮರೆಯಾಗಿಲ್ಲ ಮತ್ತು ಟ್ರಂಪ್‌ಗಿಂತ ಹೆಚ್ಚು ಅಪಾಯಕಾರಿ ವ್ಯಕ್ತಿಗಳು ಇದ್ದಾರೆ - ಉದಾಹರಣೆಗೆ ಫ್ಲೋರಿಡಾದ ಗವರ್ನರ್ ಡೆಸಾಂಟಿಸ್. ಟ್ರಂಪ್ ಏನು ಮಾಡುವದು ಸಾಧ್ಯ ಎಂಬುದನ್ನು, ಅಧಿಕಾರದಲ್ಲಿ ಉಳಿಯಲು ಏನು ಅತಿರೇಕವನ್ನು ಪ್ರಯತ್ನಿಸಲು ಸಾಧ್ಯ ಎಂದು ತೋರಿಸಿದನು,
ಮತ್ತು ಬಹುತೇಕ ಯಶಸ್ವಿಯಾದನು. ಆದ್ದರಿಂದ ಇದು
ಭವಿಷ್ಯದ ಟ್ರಂಪ್‌ಗಿಂತಲೂ ಹೆಚ್ಚು ಅಸಾಧಾರಣವಾದ ನಿರಂಕುಶಾಧಿಕಾರಿಗಳಿಗೆ ಒ೦ದು ಸ೦ಕೇತ.
.
ಸಿಧ್ಧಾರ್ಥ್ ಭಾಟಿಯಾ: ಫ್ಯಾಸಿಸ್ಟ್ ಆ೦ದೋಲನಗಳು ಮತ್ತು ಸರ್ಕಾರಗಳು ಬಲಿಪಶು ಮನೋಭಾವವನ್ನು ಸಾಮಾನ್ಯವಾಗಿ ಹ೦ಚಿಕೊಳ್ಳುತ್ತವೆ, ಅಲ್ಲವೆ ? ಜರ್ಮನಿಯಲ್ಲಿ ಯಹೂದಿಗಳು, ಅಮೆರಿಕದಲ್ಲಿ ಮೆಕ್ಸಿಕನ್ ಅಲ್ಪಸಂಖ್ಯಾತರು, ಭಾರತದಲ್ಲಿ 1.4 ಶತಕೋಟಿ ಜನಸ೦ಖ್ಯೆಯಲ್ಲಿ 20 ಕೋಟಿ (ಸುಮಾರು 15 %) ಮುಸ್ಲಿಮರು , ಇವರೆಲ್ಲ ಬಹುಸ೦ಖ್ಯಾತರನ್ನು ಉಕ್ಕಿಹರಿಸುವರು ಎಂಬ ಭಯ, ಇದು ನಿಮ್ಮ ಪುಸ್ತಕದಿಂದಲ್ಲೂ ಬಂದಿದೆ.
ಇನ್ನೊ೦ದು ನಾವು ಕಾಣುವದು ಅಸಮಾಧಾನ ಅಥವಾ ಈರ್ಷೆಯ ನಿರಂತರ ಪ್ರಜ್ಞೆ, ಉತ್ತಮ ಕೆಲಸ ಉದ್ಯೋಗಗಳಲ್ಲಿರುವವರಲ್ಲಿಯೂ ಸಹ. ಇದನ್ನು ನಾನು ‘ಯಶಸ್ವಿಯ ಅಸಮಾಧಾನ’ ಎಂದು ಕರೆಯುತ್ತೇನೆ. ಅದು ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸಂಗತಿಯಾಗಿದೆ. ನೀವು ಯಶಸ್ವಿಯಾಗಿದ್ದೀರಿ, ನೀವು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ, ನೀವು ಜೀವನದಲ್ಲಿ ಚೆನ್ನಾಗಿ ಮಾಡುತ್ತಿದ್ದೀರಿ, ನಿಮ್ಮ ಮಕ್ಕಳು ನೀವು ಹೊಂದಿರುವ ಯಶಸ್ಸಿನ ಎಲ್ಲಾ ಫಲಗಳನ್ನು ಚೆನ್ನಾಗಿ ಪಡೆಯುತ್ತಿದ್ದಾರೆ, ಇನ್ನೂ ನೀವು ಅಸಮಾಧಾನದಿಂದ, ಈರ್ಷೆಯಿ೦ದ ಕುದಿಯುತ್ತಿರುವಿರಿ. ಇದರ ಅರ್ಥವೇನು ?
ಜೇಸನ್ ಸ್ಟಾನ್ಲಿ :ನಾನು ಮೊದಲು ಕೆಲವು ವ್ಯತ್ಯಾಸಗಳನ್ನು ಮಾಡುತ್ತೇನೆ. ಜರ್ಮನ್ ನಾಝಿವಾದ ಯಹೂದಿಗಳು ಯಹೂದಿ ಅಲ್ಲದ ಜರ್ಮನ್ನರನ್ನು ಮೀರಿಸುತ್ತಾರೆ, ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ ಎಂದು ಭಾವಿಸಿರಲಿಲ್ಲ .
ಯಹೂದಿಗಳು ಗಣ್ಯ ಎಡಪಂಥೀಯ ಉದಾರವಾದಿಗಳು ಎಂದು ಭಾವಿಸಿದ್ದರಿ೦ದ ನಾಝಿಗಳ ವಿರೋಧ ಹೊಮ್ಮಿತ್ತು. ಉದಾರವಾದಿಗಳು ನಂತರ ಜರ್ಮನರನ್ನು ಉಕ್ಕಿ ಹರಿಸಲು ಹೊರಟಿರುವ ವಲಸಿಗರಿಗೆ ದೇಶದ ದ್ವಾರಗಳನ್ನು ತೆರೆಯಲಿದ್ದಾರೆ, ಎನ್ನುವ ಭೀತಿಯನ್ನು ಹರಡಲಾಯಿತು .
ಆದ್ದರಿಂದ ಇಬ್ಬರು ಶತ್ರುಗಳಿದ್ದಾರೆ. ಒ೦ದು, ಸಹಿಷ್ಣುವಾಗಿರಲು ಬಯಸುವ ಉದಾರವಾದಿ ಗಣ್ಯರ ಗುಂಪು. ತಮ್ಮ ಸಹಿಷ್ಣುತೆಯ ಮೂಲಕ ಅವರು ದೇಶದ ವಿನಾಶಕ್ಕೆ ಕಾರಣವಾಗಲಿದ್ದಾರೆ. ಸಹಿಷ್ಣುತೆಯ ಅವರ ಬೇಡಿಕೆಗಳು ನಿಜವಾಗಿಯೂ ಪ್ರಬಲ ಗುಂಪಿನ ಮೇಲೆ ದಾಳಿ ಮಾಡುವ ಮಾರ್ಗವಾಗಿದೆ. ಬೌಧ್ಧಿಕ ಗಣ್ಯರೆಂದು ಭಾವಿಸಲಾದ ಗುಂಪನ್ನು ಸಾಮಾನ್ಯವಾಗಿ ಉದಾರವಾದಿಗಳು ಎಂದು, ಮಾರ್ಕ್ಸ್‌ವಾದಿಗಳು ಎಂದು, ಕರೆಯುತ್ತಾರೆ; ಈ ಗು೦ಪಿನವರು ಸಲಿಂಗಕಾಮ, ಸ್ತ್ರೀವಾದವನ್ನು ಪರಿಚಯಿಸುತ್ತಿದ್ದಾರೆ ಮತ್ತು ವಲಸೆಗಾರರನ್ನು ಅನುಮತಿಸುತ್ತಿದ್ದಾರೆ , ಸ್ವಾಧೀನಪಡಿಸಿಕೊಳ್ಳಲು ಅಲ್ಪಸಂಖ್ಯಾತರನ್ನು ಅನುಮತಿಸುತ್ತಿದ್ದಾರೆ, ಎನ್ನುವ ಭೀತಿಯನ್ನು ಹರಡಲಾಯಿತು. ತದನಂತರ ನಾಝಿಗಳು ಎರಡನೇ ವೈರಿ, ಅಲ್ಪಸಂಖ್ಯಾತ ಗುಂಪಿನ ಮೇಲೆ ದಾಳಿ ಮಾಡುತ್ತಾರೆ. ಇದು ಫ್ಯಾಸಿಸ್o-ನ ರಚನೆಯಾಗಿದೆ.
ಭಾರತದಲ್ಲಿ ಬೌಧ್ಧಿಕ ಗಣ್ಯರು ಮತ್ತು ವಿಶ್ವವಿದ್ಯಾನಿಲಯಗಳ ಮೇಲೆ ಆಕ್ರಮಣ ನಡೆಯುತ್ತಿದೆಯೇ ಎಂದು ನನಗೆ ತಿಳಿದಿಲ್ಲವಾದರೂ ಅದು ನಡೆಯುತ್ತಿದೆ ಎ೦ದು ನಾನು ಭಾವಿಸುತ್ತೇನೆ. ನಾವು ನೋಡುತ್ತಿರುವ ಫ್ಯಾಸಿಸಂನ ರಚನೆಗೆ ಇದು ಹೊ೦ದುತ್ತದೆ .
ಸಿಧ್ಧಾರ್ಥ್ ಭಾಟಿಯಾ: ಜನಾಂಗೀಯ ಪರಿಶುದ್ಧತೆಯ ಕಲ್ಪನೆಯು ಚಿತ್ರವನ್ನು ಪ್ರವೇಶಿಸುತ್ತದೆ
ಜೇಸನ್ ಸ್ಟಾನ್ಲಿ : ಸಂಪೂರ್ಣವಾಗಿ. ಪರಿಶುದ್ಧತೆಯ ಕಲ್ಪನೆ ಜನಾಂಗೀಯವಾಗಿರಬೇಕಾಗಿಲ್ಲ. ಅದು ಧರ್ಮವಾಗಿರಬಹುದು. ಪರಿಶುದ್ಧತೆ ಫ್ಯಾಸಿಸಂಗೆ ಕೇಂದ್ರವಾಗಿದೆ. ಆಂತರಿಕ ಶತ್ರುಗಳಾದ ಗಣ್ಯರು, ಉದಾರವಾದಿಗಳು, ದೇಶವನ್ನು ಅಶುದ್ಧಗೊಳಿಸಲು ಬಯಸುತ್ತಾರೆ. ಫ್ಯಾಸಿಸ೦ ಭಾವನೆಯಲ್ಲಿ
ಅಲ್ಪಸಂಖ್ಯಾತ ಗುಂಪು ಕೊಳಕು, ಅಸಹ್ಯಕರವಾಗಿದೆ . ಈ ಭಾವವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಲಸೆಯ ರಾಜಕೀಯದಲ್ಲಿ ಬಹಳಷ್ಟು ನೋಡುತ್ತೇವೆ. ಬಲಪ೦ಥೀಯರ ಪ್ರಕಾರ ಗಣ್ಯರು ಮತ್ತು ಉದಾರವಾದಿಗಳು ಇದನ್ನೇ ಬಯಸುತ್ತಾರೆ. ಇದು ನಾವು ಕಂಡುಕೊಳ್ಳುವ ರಚನೆಯಾಗಿದೆ. ಮತ್ತು ಪ್ರಬಲ ಗುಂಪುಗಳು ತಾವು ಬಲಿಪಶುಗಳಾಗಿದ್ದೇವೆ ಎಂದು ಭಾವಿಸಲು ಇದನ್ನೇ ಬಳಸುತ್ತಾರೆ. ಪ್ರಾಬಲ್ಯದ ಗುಂಪನ್ನು ಹೊರತುಪಡಿಸಿ ಯಾರಾದರೂ ಸಾಂಸ್ಕೃತಿಕ ಮುಖ್ಯವಾಹಿನಿಯ ಭಾಗವಾಗಿದ್ದರೆ
ತಾವು ಅಪಾಯಕ್ಕೆ, ಬೆದರಿಕೆಗೆ ಒಳಗಾಗುತ್ತೇವೆ ಎಂಬ ಕಲ್ಪನೆ. ನಿಖರವಾಗಿ ಈ ಪರಿಶುದ್ಧತೆಯ ಕಲ್ಪನೆಯನ್ನು ಬಳಸಲಾಗುತ್ತದೆ ಮತ್ತು ಅಶುದ್ಧತೆ ಇದೆ ಎಂದು ಹೇಳುತ್ತ ಕಾಯಿಲೆಯಂತಹ ಕಲ್ಮಶಗಳ ಕ೦ತೆಯನ್ನು ತಯಾರಿಸಲಾಗುತ್ತದೆ. ಅದಕ್ಕಾಗಿಯೇ ಉದ್ದೇಶಿತ ಗುಂಪನ್ನು ‘ಗೆದ್ದಲುಗಳು’ ಎ೦ದು ಕರೆಯುವ ಮೂಲಕ ನರಮೇಧವನ್ನು ಪ್ರಾರಂಭಿಸಲಾಗುತ್ತದೆ. ರಾಜಕಾರಣಿಗಳು ‘ಗೆದ್ದಲು’ಗಳಂತಹ ಪದಗಳನ್ನು ಬಳಸಲು ಪ್ರಾರ೦ಭಿಸಿದಾಗ ಯಾವಾಗಲೂ ಚಿಂತಿಸಬೇಕಾಗುತ್ತದೆ. .
(ಅನುವಾದಕ ಟಿಪ್ಪಣಿ:
'ಬಾಂಗ್ಲಾದೇಶಿ ವಲಸಿಗರು ಗೆದ್ದಲುಗಳಿದ್ದಂತೆ ಮತ್ತು ಅವರಲ್ಲಿ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗುವುದು', ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಅಮಿತ್ ಶಾ ಶನಿವಾರ ಹೇಳಿದ್ದಾರೆ.ಇತ್ತೀಚೆಗೆ ಅಸ್ಸಾಂನಲ್ಲಿ ಪ್ರಕಟವಾದ ಕರಡು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ಉಲ್ಲೇಖಿಸಿದ ಅವರು, ಬಿಜೆಪಿ ಸರ್ಕಾರವು ಸುಮಾರು 40 ಲಕ್ಷ ಅಕ್ರಮ ವಲಸಿಗರನ್ನು ಗುರುತಿಸಿದೆ ಎಂದು ಹೇಳಿದರು."ಬಿಜೆಪಿ ಸರ್ಕಾರ ಏಕ್-ಏಕ್ ಘುಸ್ಪೈಠಿಯೇ ಕೋ ಚುನ್-ಚುನ್ ಕರ್ ಮತ್ ದಾತಾ ಸುಚಿ ಸೇ ಹಟಾನೇ ಕಾ ಕಾಮ್ ಕರೇಗಿ" ಎಂದು ಅವರು ಹೇಳಿದರು. ("ಬಿಜೆಪಿ ಸರ್ಕಾರವು ಪ್ರತಿಯೊಬ್ಬ ನುಸುಳುಕೋರರನ್ನು ಆಯ್ಕೆ ಮಾಡುತ್ತದೆ ಮತ್ತು ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುತ್ತದೆ."- 'ದಿ ಹಿ೦ದು' ಪತ್ರಿಕೆಯಲ್ಲಿ ವರದಿ, ದಿ. ೨೨-೯-೨೦೧೮ ))
ಸಿಧ್ಧಾರ್ಥ್ ಭಾಟಿಯಾ: ಬಾಂಗ್ಲಾದೇಶದಿಂದ ಬರುವ ‘ಲಕ್ಷಾಂತರ ನಿರಾಶ್ರಿತರು’ ಎಂದು ಕರೆಯಲ್ಪಡುವವರ ಬಗ್ಗೆ ನಿಖರವಾದ ಈ ಪದವನ್ನು ಬಳಸಲಾಗಿದೆ. ಕೆಲವು ನಿರಾಶ್ರಿತರು ಹಿಂದೆ ಬಂದಿರಬೇಕು ಎಂಬುದು ನಿಜ ಆದರೆ ಬಾಂಗ್ಲಾದೇಶವು ಈ ಕ್ಷಣದಲ್ಲಿ ಭಾರತಕ್ಕಿಂತ ಆರ್ಥಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು
ಅವರ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ಒಳಹರಿವು ಎನ್ನುವ ಪದ ಇನ್ನು ಮುಂದೆ ಅನ್ವಯಿಸುವುದಿಲ್ಲ ಆದರೆ ‘ಗೆದ್ದಲು’ ತರದ ಪದವನ್ನು ಬಳಸಲಾಗಿದೆ.
ಜೇಸನ್ ಸ್ಟಾನ್ಲಿ : ಆದ್ದರಿಂದ CAA ಮತ್ತು ರಾಷ್ಟ್ರೀಯ ನೋಂದಣಿಯೊಂದಿಗೆ ಭಾರತದಲ್ಲಿ ಏನಾಗುತ್ತಿದೆ ಅ೦ದರೆ ಬಾಂಗ್ಲಾದೇಶಿ ವಲಸಿಗರು - ಬಾಂಗ್ಲಾದೇಶಿ ದಾಖಲೆ ರಹಿತ ವಲಸಿಗರು - ಎಂದು ಹೇಳುವ ಮೂಲಕ ಹತ್ತಾರು ಮಿಲಿಯನ್ ಮುಸ್ಲಿಂ ಭಾರತೀಯರಿಂದ ಪೌರತ್ವವನ್ನು ತೆಗೆದುಹಾಕುವ ಪ್ರಯತ್ನವಾಗಿದೆ. ಆದ್ದರಿಂದ ನೀವು ಈಗಾಗಲೇ ನಾಜಿ ನ್ಯೂರೆಂಬರ್ಗ್ ಕಾನೂನುಗಳಂತಹದನ್ನು
ಹೊಂದಿದ್ದೀರಿ. ಅಸ್ಸಾಂನಲ್ಲಿ ಈಗಾಗಲೇ ಬಂಧನ ಕೇಂದ್ರಗಳಿವೆ. ಆದ್ದರಿಂದ ನೀವು ಪೌರತ್ವ ಕಾನೂನುಗಳ ಬಗ್ಗೆ ನಿಜವಾಗಿಯೂ ಕಾಳಜಿಯನ್ನು ಹೊಂದಿರಬೇಕು, ಏಕೆಂದರೆ ಒಮ್ಮೆ ಪ್ರಾರಂಭಿಸಿದಾಗ ನಾಗರಿಕ ಸ್ಥಿತಿಯಿಲ್ಲದ ಯಾರಿಗಾದರೂ ಏನು ಬೇಕಾದರೂ ಮಾಡಬಹುದು ಎಂದು ನಿಮಗೆ ತಿಳಿದಿದೆ. ಆದ್ದರಿಂದ ಜನರಿಂದ ಪೌರತ್ವವನ್ನು ಕಿತ್ತೊಗೆಯುವುದು ನರಮೇಧಕ್ಕೆ ಸಿದ್ಧತೆಯಾಗಿದೆ.
ವಲಸಿಗರು ಸೇರಿಕೊಂಡು ದೇಶವನ್ನು ಅಶುದ್ಧಗೊಳಿಸುತ್ತಿದ್ದಾರೆ ಎಂಬ ಕಲ್ಪನೆ - ಇದು ಫ್ಯಾಸಿಸ್ಟ್ ರಾಜಕೀಯಕ್ಕೆ ಪ್ರಮುಖವಾಗಿದೆ . ಮತ್ತು ವಲಸಿಗರು ಇಲ್ಲದಿದ್ದರೂ ಸಹ ಇದು ಕಾರ್ಯನಿರ್ವಹಿಸುತ್ತದೆ. ಹಂಗೇರಿಯಲ್ಲಿ ಯಾವುದೇ ವಲಸಿಗರು ಇಲ್ಲ. (ಯಾರೂ ಹಂಗೇರಿಯಲ್ಲಿ ವಾಸಿಸಲು ಬಯಸುವುದಿಲ್ಲ! ) ಮತ್ತು ಪೋಲೆಂಡ್ . ಆದರೂ ಈ ದೇಶಗಳಲ್ಲಿ ಯಾವುದೇ ವಲಸಿಗರು ಇಲ್ಲದಿದ್ದರೂ ' ವಲಸಿಗರ'ನ್ನು ಬೆದರಿಕೆಯಾಗಿ ಬಳಸುತ್ತಾರೆ. ಶುದ್ಧತೆಯ ರಾಜಕೀಯ ‘ಅಯ್ಯೋ, ನಮ್ಮ ದೇಶವನ್ನು ಆಕ್ರಮಿಸಲಿದೆ ಮತ್ತು ಆದ್ದರಿಂದ ನಮಗೆ ಹಿಂಸಾತ್ಮಕ ಪ್ರತಿಕ್ರಿಯೆ ಬೇಕು,’ ಎ೦ದು ಜನರ ಯೋಚನೆಗೆ ಒಂದು ಮಾರ್ಗವಾಗಿದೆ,
ಸಿಧ್ಧಾರ್ಥ್ ಭಾಟಿಯಾ: ನೀವು ಆರ್ ಎಸ್ಎಸ್ ಬಗ್ಗೆ ಕೇಳಿರಬಹುದು
ನರೇಂದ್ರ ಮೋದಿಯವರ ಸಂಪೂರ್ಣ ರಾಜಕೀಯ ಚಿಂತನೆ ಇದರಿ೦ದ ಉದ್ಭವಿಸಿದೆ ಮತ್ತು ಅದು ಈಗ ದೇಶವನ್ನು ನಿಯಂತಿಸುತ್ತಿದೆ.
ಕಳೆದ ನೂರು ವರ್ಷಗಳಿಂದ ಅವರು ಅದಕ್ಕಾಗಿ ಶ್ರಮಿಸಿದ್ದಾರೆ.
ಅರ್ ಎಸ್ ಎಸ್ಸ್-ನ ಆರಂಭಿಕ ನಾಯಕರಲ್ಲಿ ಒಬ್ಬ 1931 ರಲ್ಲಿ ಇಟಲಿಗೆ ಭೇಟಿ ನೀಡಿದ್ದ, ಮತ್ತು ಮುಸೊಲಿನಿಯನ್ನು ಭೇಟಿಯಾದ. ಇದು ಅವನಿಗೆ ಸ್ಫೂರ್ತಿ ನೀಡಿದಂತಿದೆ. ಇಟಲಿಯನ್ನು ಹೊಗಳುವದಲ್ಲದೆ ಸ೦ಘದ ಆರಂಭಿಕ ಸಾಹಿತ್ಯದಲ್ಲಿ ಜರ್ಮನಿ - ನಾಝಿ ಜರ್ಮನಿ - ಯನ್ನು ಅನುಸರಿಸಲು ಉತ್ತಮ ಉದಾಹರಣೆ ಎಂದು ಪ್ರಶಂಸಿಸಲಾಯಿತು. ನಿಸ್ಸಂಶಯವಾಗಿ ಹಿಂದೂ ಶ್ರೇಷ್ಟತಾವಾದದ ಕೆಲವು ತಂತ್ರಗಳು ನಾಜಿ ಫ್ಯಾಸಿಸ್ಟ್ ಪಠ್ಯಪುಸ್ತಕದಿ೦ದ ಹೊರ ಬ೦ದಿದೆ. ಇದು ಬಹಳ ಮುಖ್ಯವಾಗಿದೆ. ಡೆಂಗ್ ಕ್ಸಿಯೋಪಿಂಗ್ ಅವರು 'ಚೀನೀ ಗುಣಲಕ್ಷಣಗಳೊಂದಿಗೆ ಬಂಡವಾಳಶಾಹಿ' ಎಂದು ಹೇಳಿದಂತೆಯೇ ಈಗ ನಾವು ಇದನ್ನು 'ಹಿಂದೂ ಗುಣಲಕ್ಷಣ'ಗಳೊಂದಿಗೆ ನೋಡುತ್ತಿದ್ದೇವೆ.
ಜೇಸನ್ ಸ್ಟಾನ್ಲಿ : ಹೌದು. ಭಾರತದ ವಿಷಯದಲ್ಲಿ ನೀವು ಹೇಳುವಂತೆ ಸಾವರ್ಕರ್ ಮತ್ತು ಗೋಲ್‌ವಾಲ್ಕರ್ ಇಬ್ಬರಲ್ಲಿ ನಾಝಿಗಳನ್ನು ಮಾದರಿಯಾಗಿ ಬಳಸಿಕೊಳ್ಳುವ ಬಗ್ಗೆ, ಮತ್ತು ಜರ್ಮನ್ ನಾಝಿಗಳು ಯಹೂದಿಗಳೊಂದಿಗೆ ವರ್ತಿಸಿದ೦ತೆ ಮುಸ್ಲಿಮರೊಂದಿಗೆ ವರ್ತಿಸುವ ಬಗ್ಗೆ ಸ್ಪಷ್ಟವಾಗಿ ಮಾತನಾಡುವ ಜನರು ನಿಮ್ಮಲ್ಲಿದ್ದಾರೆ. ಆದ್ದರಿಂದ ನೀವು ನಾಝಿಸ೦ ಮತ್ತು R.S S. ನಡುವೆ ನೇರವಾದ ಕಾರಣಿಕ ಪ್ರಭಾವವನ್ನು ಹೊಂದಿದ್ದೀರಿ, ಇದು ಅತ್ಯಂತ ಆತ೦ಕಕ್ಕೆ ಕಾರಣ.
ಇದಲ್ಲದೆ ಭಾರತದ ಪ್ರಚಲಿತ ಮನೋಭಾವದಲ್ಲಿ ದೊಡ್ಡ ಪ್ರಮಾಣದ ಜನರು ಹಿಟ್ಲರ್ ಅತ್ಯಂತ ಕೆಟ್ಟ ಮನುಷ್ಯರಲ್ಲಿ ಒಬ್ಬ ಎ೦ಬುದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದಿಲ್ಲ ಅಥವಾ ಅರಿತುಕೊಳ್ಳುವುದಿಲ್ಲ,
ಹಿಟ್ಲರನ ಬಗ್ಗೆ ಪ್ರಪಂಚದ ಉಳಿದ ಭಾಗಗಳಲ್ಲಿ ಹಂಚಿಕೊಂಡಿರುವ ದೃಷ್ಟಿಕೋನವನ್ನು ಅವರು ಹಂಚಿಕೊಳ್ಳುವುದಿಲ್ಲ. ಹಿಟ್ಲರನ ಪುಸ್ತಕ ‘ಮೈನ್ ಕಾ೦ಫ್’ ಅನ್ನು ಸಾಮಾನ್ಯವಾಗಿ ಭಾರತದಲ್ಲಿ ಒಬ್ಬ ಮಹಾನ್ ವಿಜಯಶಾಲಿಯ ಪುಸ್ತಕವಾಗಿ ಓದಲಾಗುತ್ತದೆ. ಆದ್ದರಿಂದ ಇದು ಅತ್ಯಂತ ಕಳವಳಕಾರಿಯಾಗಿದೆ.
(ಅನುವಾದಕ ಟಿಪ್ಪಣಿ : ‘Mein Kampf’ (ಮೈನ್ ಕ್ಯಾಂಫ್ - ನನ್ನ ಹೋರಾಟ) ನಾಜಿ ಪಕ್ಷದ ನಾಯಕ ಅಡಾಲ್ಫ್ ಹಿಟ್ಲರ್ -ನ 1925 ರ ಆತ್ಮಚರಿತ್ರೆ ಪ್ರಣಾಳಿಕೆಯಾಗಿದೆ. ಕೃತಿಯು ಹಿಟ್ಲರ್ ಯೆಹೂದ್ಯ ವಿರೋಧಿಯಾದ ಪ್ರಕ್ರಿಯೆಯನ್ನು ವಿವರಿಸುತ್ತದೆ ಮತ್ತು ಅವನ ರಾಜಕೀಯ ಸಿದ್ಧಾಂತ ಮತ್ತು ಜರ್ಮನಿಯ ಭವಿಷ್ಯದ ಯೋಜನೆಗಳನ್ನು ವಿವರಿಸುತ್ತದೆ.)
ಆದ್ದರಿಂದ ಇದನ್ನು ಒಟ್ಟಿಗೆ ಸೇರಿಸೋಣ: ಬಿಜೆಪಿ ಪಕ್ಷವು ಆರ್ ಎಸ್ ಎಸ್ ನಿ೦ದ ಹೊರಹೊಮ್ಮಿದೆ . ಆರ್‌ಎಸ್‌ಎಸ್‌ನ ಮುಖ್ಯ ಬೌದ್ಧಿಕ ನಾಯಕರು , ಅದರ ಮೂಲದವರು, ಸ್ಪಷ್ಟವಾದ ನರಮೇಧದ ಅತಿ- ರಾಷ್ಟ್ರೀಯವಾದಿಗಳು. ಆದ್ದರಿಂದ ಭಾರತದ ಸನ್ನಿವೇಶದಲ್ಲಿ ಯಾವುದೇ ಊಹೆಗೆ ಆಸ್ಪದವಿಲ್ಲ. ಫ್ಯಾಸಿಸಂ ಮತ್ತು ಭಾರತದ ನಡುವೆ ಹೇಗೆ ಸಂಬಂಧವಿರಬಹುದು ಎಂದು ಜನರು ನಿಜವಾಗಿಯೂ ಕೇಳಲು ಸಾಧ್ಯವಿಲ್ಲ. ಇದು ನೇರ ಸ೦ಬ೦ಧ. ಹಿಟ್ಲರ್, ಹಿಟ್ಲರ್ ವಾದದ ನರಮೇಧದ ಯೋಜನೆಯು ಭಯಾನಕವಾಗಿದೆ ಮತ್ತು ಅದನ್ನು ಖಂಡಿಸಬೇಕು ಮತ್ತು ಯಾವುದೇ ರೀತಿಯ ಶ್ರೇಷ್ಠ ನಾಯಕತ್ವ ಎಂದು ಪರಿಗಣಿಸಬಾರದು ಎಂದು ಜನರು ನಿಜವಾಗಿಯೂ ಅರ್ಥಮಾಡಿಕೊಳ್ಳದ ಹಿನ್ನೆಲೆ ಸಂಸ್ಕೃತಿಯನ್ನು ನೀವು ಹೊಂದಿದ್ದೀರಿ. ಆದ್ದರಿ೦ದ ಭಾರತವು ಅತ್ಯ೦ತ ಆತ೦ಕಕಾರಿಯಾಗಿದೆ.
ಸಿಧ್ಧಾರ್ಥ್ ಭಾಟಿಯಾ: : ನೀವು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಬರೆದಿದ್ದೀರಿ. ನನ್ನ ಪ್ರಕಾರ ವಿಷಯಗಳು ಹಲವು ವಿಧಗಳಲ್ಲಿಇನ್ನೂ ಕೆಟ್ಟದಾಗಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ನಿಮಗೆ ಗೊತ್ತಿದೆ. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಅದು ಮುಗಿಯಲಿದೆ. ಮುಖ್ಯಮಂತ್ರಿಗಳು
ಕಳೆದ ಮೂರು-ನಾಲ್ಕು ವರ್ಷಗಳಿಂದ ಪ್ರತಿಭಟನೆ ಮಾಡಿದರೆ ಅಲ್ಪಸಂಖ್ಯಾತರರ ಆಸ್ತಿಗಳನ್ನು ಕಸಿದುಕೊಳ್ಳುವದು. ಅದರ ಬೆದರಿಕೆ ಸೇರಿದಂತೆ ಹಲವು ವಿಧಗಳಲ್ಲಿ ಅಲ್ಪಸ೦ಖ್ಯಾತರಿಗೆ ಕಿರುಕುಳ ಕೊಟ್ಟಿದ್ದಾರೆ. ಏತನ್ಮಧ್ಯೆ ಮುಸ್ಲಿಮರನೇಕರು ತಮ್ಮ ಪೌರತ್ವದಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಅವರು ಪ್ರತಿಭಟಿಸಲು ಸಾಧ್ಯವಿಲ್ಲ. ಅಲ್ಪಸ೦ಖ್ಯಾತರ ಮೇಲಿನ ಆಕ್ರಮಣಗಳು ಕಾನೂನಿನಡಿ ಮತ್ತು ಕಾನೂನು ಬಾಹಿರವಾಗಿಯೂ ನಡೆದಿವೆ. ಇವು ಆಡಳಿತಕ್ಕೆ ಲಗತ್ತಿಸದ ಸ್ವತಂತ್ರ ಕಾರ್ಯಕರ್ತರಿ೦ದಲೂ ಆಡಳಿತಕ್ಕೆ ಸೇರಿದವರಿ೦ದಲೂ ಬ೦ದಿದೆ.
ಜೇಸನ್ ಸ್ಟಾನ್ಲಿ : ಇದು ತುಂಬಾ ರೂಡಿಬಧ್ಧವಾಗಿದೆ. ನೀವು ಹೇಳುವದು ತಿಮೋತಿ ಸ್ನೈಡರ್ ಮಾತನಾಡುವ ‘ಫ್ಯಾಸಿಸಂನ ಮಧ್ಯ ಹಂತ’ದಲ್ಲಿ ಇಡಲ್ಪಡುತ್ತದೆ. ಕಾನೂನುಬಾಹಿರ ಮತ್ತು ಮತ್ತು ಕಾನೂನುಬದ್ಧ ಸೇನಾಪಡೆಗಳು, ಕಾನೂನು ಪೊಲೀಸ್ ಪಡೆಗಳು ಕಾನೂನುಬಾಹಿರ ಹಿಂಸಾತ್ಮಕ ಸೇನಾಪಡೆಗಳೊಂದಿಗೆ ಸೇರಿಕೊಂಡಾಗ, ಅವುಗಳನ್ನು ಪ್ರತ್ಯೇಕವಾಗಿ ಹೇಳುವುದು ಸ್ವಲ್ಪ ಕಷ್ಟ ತೋರುವಾಗ, ನೀವು ಕಾಳಜಿ ವಹಿಸಬೇಕು. ಆರ್ ಎಸ್ಎಸ್ ಪಡೆಗಳು ಮತ್ತು ಅಧಿಕೃತ ಸರ್ಕಾರಿ ಪಡೆಗಳು ಒಟ್ಟಿಗೆ ಬೆರೆತಾಗ, ಮತ್ತು ಒಬ್ಬರು ಇನ್ನೊಂದನ್ನು ಬೆಂಬಲಿಸಿದಾಗ, ಅದು ನಿಜವಾಗಿಯೂ ಕೆಟ್ಟ ಸಂಕೇತವಾಗಿದೆ.
ನನ್ನ ಭವಿಷ್ಯದ ಯೋಜನೆಗಳ ಪ್ರಕಾರ ಅನೇಕ ದೇಶಗಳಲ್ಲಿ ವಿವಿಧ ಗುರಿಗಳೊಂದಿಗೆ ವಿವಿಧ ರೂಪಗಳನ್ನು ತೆಗೆದುಕೊಳ್ಳುವ ಜಾಗತಿಕ ಫ್ಯಾಸಿಸ್ಟ್ ಚಳುವಳಿ ನಡೆಯುತ್ತಿದೆ. ಇದನ್ನು ನನ್ನ ಕೆಲಸವು ಹೋರಾಡಲಿದೆ. ನನ್ನ ಕೆಲಸ ಹೋರಾಟಕ್ಕೆ ಮೀಸಲಾಗಿದೆ.
ಭಾರತದ ಪ್ರಕರಣವು ನನಗೆ ಇತರರಿಗಿಂತ ಹೆಚ್ಚು ಚಿಂತೆ ಮಾಡುತ್ತದೆ ಏಕೆಂದರೆ ನೀವು ಅಂತಹ ಶ್ರೇಷ್ಠ ಪ್ರಜಾಪ್ರಭುತ್ವ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅದರ ಕಾನೂನು ಹಂತದಲ್ಲಿ ಫ್ಯಾಸಿಸಂ ಕಡೆಗೆ ವ್ಯವಸ್ಥಿತ ಚಲನೆಯನ್ನು ನಾವು ನೋಡುತ್ತಿದ್ದೇವೆ. ಉದ್ದೇಶಿತ ಜನಸಂಖ್ಯೆಯನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನಿರೂಪಿಸಲು ಪೌರತ್ವ ಕಾನೂನುಗಳ ಬದಲಾವಣೆಯನ್ನು ಈ ಸಂದರ್ಶನದಲ್ಲಿ ನಾನು ಮೊದಲೇ ಹೇಳಿದ್ದೇನೆ. ಇದು ನಾಝಿ 1935 ನ್ಯೂರೆನ್‌ಬರ್ಗ್ ಕಾನೂನುಗಳಿಗೆ ಸಮಾನ. ಭಾರತವು ರಾಷ್ಟ್ರೀಯ ದಾಖಲಾತಿಯನ್ನು C A A ಯೊ೦ದಿಗೆ ಸಂಯೋಜಿಸುವ ಮೂಲಕ ಅದನ್ನು ನೆರವೇರಿಸುವ ಅತ್ಯಂತ ಬುದ್ಧಿವಂತ ಮಾರ್ಗವನ್ನು ಹೊಂದಿದೆ. ಇದರಿಂದಾಗಿ
ದಾಖಲಾತಿಗಳಿಲ್ಲದ ಹಿಂದೂಗಳು ತಕ್ಷಣ ನಾಗರಿಕರಾಗುತ್ತಾರೆ ಆದರೆ ದಾಖಲಾತಿಗಳಿಲ್ಲದ ಮುಸ್ಲಿಮರು ನಾಗರಿಕತ್ವ ಇಲ್ಲದವರಾಗುತ್ತಾರೆ. ಮತ್ತು ಸ್ಥಿತಿಯಿಲ್ಲದಿರುವಾಗ ಸ್ಥಿತಿಯಿಲ್ಲದ ಜನರಿಗೆ ಏನು ಬೇಕಾದರೂ ಮಾಡಬಹುದು. ಆದ್ದರಿಂದ ಪ್ರಪಂಚದ ಗಮನವು ಭಾರತದ ಮೇಲೆ ಕೇಂದ್ರೀಕೃತವಾಗಬೇಕು.
ಒಂದು ದಿನ ಶೀಘ್ರದಲ್ಲೇ ಭಾರತವು ತನ್ನ ಸಂವಿಧಾನವು ಘೋಷಿಸುವ ಶ್ರೇಷ್ಠ ಜಾತ್ಯತೀತ ಪ್ರಜಾಪ್ರಭುತ್ವವಾಗಿ ಮರಳುತ್ತದೆ ಎಂದು ನಾನು ಆಶಿಸುತ್ತೇನೆ.
ಸಿಧ್ಧಾರ್ಥ್ ಭಾಟಿಯಾ: ಭಾರತವು ಒಂದು ದೊಡ್ಡ ಮಾರುಕಟ್ಟೆಯಾಗಿದೆ
ಮತ್ತು ಪ್ರಾಯಶಃ ಒಂದು ಕಾರ್ಯತಂತ್ರದ ಪಾಲುದಾರ, ಯಾರೂ ಸಂಬಂಧವನ್ನು ಹಾಳುಮಾಡಲು ಬಯಸುವುದಿಲ್ಲ. ಸಿಎಎ ಬಗ್ಗೆ ನಿರ೦ತರ ಪ್ರತಿಭಟನೆ, ಮತ್ತು ಕೋವಿಡ್ ಎರಡನೇ ತರಂಗದಲ್ಲಿ ಕೆಲವು ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸಾಕಷ್ಟು ಕಳಪೆಯಾಗಿ ನಿರ್ವಹಿಸಲಾಗಿದೆ. ಇದರಿ೦ದಾಗಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಅನೇಕ ಇತರ ಪ್ರಕಟಣೆಗಳು ಭಾರತೀಯ ಪರಿಸ್ಥಿತಿಯನ್ನು ವರದಿ ಮಾಡುತ್ತಿವೆ. . ಖಂಡಿತವಾಗಿಯೂ ಎದುರು ಭಾಗವಾಗಿ ಭಾರತದ ವೀಕ್ಷಕರನ್ನು ಬೆನ್ನಟ್ಟುವ ಜನರ ದೊಡ್ಡ ಹಿಂದುತ್ವ ಲಾಬಿಯೂ ಇದೆ. ಅಂತರರಾಷ್ಟ್ರೀಯ ಸಂಬಂಧಗಳ ವೀಕ್ಷಕರು ಇತ್ತೀಚಿನವರೆಗೂ ಭಾರತವು ಪ್ರಬಲ ಪ್ರಜಾಪ್ರಭುತ್ವ ಎಂದು ಭಾವಿಸಿದ್ದರು. ಅದು ಬದಲಾಗಲು ಪ್ರಾರಂಭಿಸುತ್ತಿದೆ ಎಂದು ನೀವು ಭಾವಿಸುತ್ತೀರಾ.
ಜೇಸನ್ ಸ್ಟಾನ್ಲಿ : ಪ್ರಜಾಪ್ರಭುತ್ವವಾಗಿ ಸಂಪೂರ್ಣವಾಗಿ ಭಾರತದ ಖ್ಯಾತಿಯು ಅತ್ಯಂತ ಗಂಭೀರವಾದ ಹೊಡೆತವನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ವಿಶ್ವವಿದ್ಯಾನಿಲಯಗಳಲ್ಲಿನ ದಾಳಿಗಳು, ಪ್ರತಾಪ್ ಭಾನು ಮೆಹ್ತಾ ಅವರಂತಹ ಪ್ರಮುಖ ಭಾರತೀಯ ಬುದ್ಧಿಜೀವಿಗಳು ತಮ್ಮ ಶೈಕ್ಷಣಿಕ ಸ್ಥಾನಗಳನ್ನು ಕಳೆದುಕೊಳ್ಳುವ ಘಟನೆ, ರಾಣಾ ಅಯೂಬ್ ಪ್ರಸಿದ್ಧ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿದ್ದು, ಮತ್ತು ಹತ್ಯಾಕಾಂಡಗಳು, ಮುಸ್ಲಿಮರ ಮೇಲಿನ ಕೆಟ್ಟ ದಾಳಿಗಳು. ಈ ವರ್ಷ ಗುಜರಾತ್ ಹಿ೦ಸೆಯ 20 ನೇ ವಾರ್ಷಿಕೋತ್ಸವ. ಇವು ಜನರಿಗೆ ತಿಳಿದಿರುವ ವಿಷಯಗಳು.
ಜನರು ಇವುಗಳನ್ನು ಒಟ್ಟಿಗೆ ಸೇರಿಸಲು ನಿಧಾನವಾಗಿದ್ದಾರೆ. ಜನರು ಅದನ್ನು ಒಟ್ಟಿಗೆ ಸೇರಿಸಲು ನಿಧಾನವಾಗಲು ಕಾರಣವೆಂದರೆ 'ವಿಷಯಗಳು ಎಲ್ಲ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿವೆ' ಎ೦ಬ ಭಾವನೆ.
ಆದರೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ವ್ಯವಸ್ಥೆಯು ಉದಾರ ಪ್ರಜಾಪ್ರಭುತ್ವವಾಗಿದೆ. ಉದಾರ ಪ್ರಜಾಪ್ರಭುತ್ವವು ಕೇವಲ ಬಹುಮತದ ನಿಯಮವಲ್ಲ. ಇದರರ್ಥ ಅಲ್ಪಸಂಖ್ಯಾತರ ಹಕ್ಕುಗಳು. ಉದಾರವಾದವು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡಿರುತ್ತದೆ. ಭಾರತವು ತನ್ನ ಸಂವಿಧಾನದ ಮೂಲಕ ಜಾತ್ಯತೀತ ಉದಾರವಾದಿ ಪ್ರಜಾಪ್ರಭುತ್ವವಾಗಿದೆ.
ಬಹುಮತದಿಂದ ಚುನಾವಣೆ ಗೆಲ್ಲಲು ಮೋದಿ ಫ್ಯಾಸಿಸ್ಟ್ ರಾಜಕಾರಣ ಮಾಡುತ್ತಿರುವುದನ್ನು ಜನರು ಗಮನಿಸುತ್ತಿಲ್ಲ. ಹಾಗಾಗಿ ಜನರು ‘ಚುನಾವಣೆಯನ್ನು ಕದಿಯುತ್ತಿಲ್ಲವಲ್ಲ, ಏನು ತಪ್ಪು’, ಎಂದು ಕೇಳಬಹುದು. ಆದರೆ ಪತ್ರಿಕಾ ಮಾಧ್ಯಮದ ಮೇಲಿನ ಒತ್ತಡವು ತುಂಬಾ ತೀವ್ರವಾಗಿದೆ.
ಆದ್ದರಿಂದ ಸರ್ಕಾರ ರಚನೆಯ ಮೇಲೆ ಮೂಲಭೂತವಾಗಿ ಸಾಕಷ್ಟು ಅನುಕೂಲಕರ ಪ್ರಕ್ರಿಯೆಗಳಿವೆ.
ಭಾರತದಲ್ಲಿನ ಪರಿಸ್ಥಿತಿ ನೋಡಿದರೆ, ಹೆಚ್ಚಿನ ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ನಿಗ್ರಹಿಸುವದನ್ನು ಬೆ೦ಬಲಿಸುತ್ತಿದ್ದಾರೆ. ಮತ್ತು ಆದ್ದರಿಂದ ಇದು ಯುನೈಟೆಡ್ ಸ್ಟೇಟ್ಸ್‌ನಂತಹ ಪರಿಸ್ಥಿತಿಯಲ್ಲ, ಅಲ್ಲಿ ರಿಪಬ್ಲಿಕನ್ ಪಕ್ಷವು ರಾಷ್ಟ್ರೀಯ ಚುನಾವಣೆಗಳಲ್ಲಿ ಸೋತಿದೆ ಮತ್ತು ಅದು ಕೆಲವು ರಾಜ್ಯಗಳಲ್ಲಿ ಚುನಾವಣಾ ಕಾನೂನುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತದೆ. ಬಹುಸಂಖ್ಯಾತರು ತಮ್ಮದೇ ಆದ ಜನಾಂಗೀಯ ಅಥವಾ ಧಾರ್ಮಿಕ ಗುರುತಿನ ನಾಯಕರಿಗೆ ಮತ ಹಾಕುವ ಪರಿಸ್ಥಿತಿ ಭಾರತದಲ್ಲಿದೆ. ಹಾಗಾಗಿ ಇದು ಬಹುಸಂಖ್ಯಾತರ ದಬ್ಬಾಳಿಕೆಯಾಗಿದೆ. ಜನರಿಗೆ ಉದಾರವಾದವನ್ನು ವಿವರಿಸಬೇಕಾಗಿದೆ. ಅಲ್ಪಸಂಖ್ಯಾತರಿಂದ ಪೌರತ್ವವನ್ನು ತೆಗೆದುಹಾಕಲು ಬಹುಸಂಖ್ಯಾತರು ನಿರ್ಧರಿಸಿದರೆ ಅದು ಇನ್ನು ಮುಂದೆ ಉದಾರ ಪ್ರಜಾಪ್ರಭುತ್ವವಲ್ಲ ಎಂದು ಹೇಳಬೇಕಾಗುತ್ತದೆ. ಬಹುಮತದ ತಳಹದಿಯಿರುವದರಿ೦ದ ಏನು ಸಮಸ್ಯೆ, ಎಂದು ಹೇಳುವದು ತಪ್ಪಾಗುತ್ತದೆ. ಗಮನ ಹರಿಸದಿದ್ದರೆ ಭಾರತದ ಸಮಸ್ಯೆ ಏನು ಎಂದು ಯೋಚಿಸಬಹುದು, ಲಕ್ಷ್ಯ ಸೆಳೆಯದಿರಬಹುದು .
ಸಿಧ್ಧಾರ್ಥ್ ಭಾಟಿಯಾ: ಇದು ನಿರ್ಣಾಯಕ ಎಂದು ನಾನು ಭಾವಿಸುತ್ತೇನೆ. ಅಮೆರಿಕ ಅಥವಾ ಪಾಶ್ಚಾತ್ಯ ದೇಶಗಳಿಗಿ೦ತ ಭಿನ್ನವಾಗಿ ದೆ. ಅಲ್ಲಿ ಏನಾಗುತ್ತಿದೆ ಎಂಬುದನ್ನು ಸೂಚಿಸಲು ದೊಡ್ಡ ಪತ್ರಿಕೆಗಳ ಕೆಲವು ಪ್ರಯತ್ನಗಳಾದರೂ ಸ್ವಲ್ಪಮಟ್ಟಿಗೆ ಇರುತ್ತದೆ.
ಇಲ್ಲಿ ಮಾಧ್ಯಮದ ಮಟ್ಟಿಗೆ ಪ್ರಭಾವಿ ಪತ್ರಿಕಾ ಮಾಧ್ಯಮಗಳು, ದೂರದರ್ಶನ ಕೇಂದ್ರಗಳು, ದೊಡ್ಡ ಪತ್ರಿಕೆಗಳು, ಸಣ್ಣ ಪತ್ರಿಕೆಗಳು, ರಾಜ್ಯ ಮಟ್ಟದ ಪತ್ರಿಕೆಗಳು ಎಲ್ಲವೂ ಈ ಸರ್ಕಾರವನ್ನು ಬೆಂಬಲಿಸುತ್ತವೆ.
ಅವುಗಳಲ್ಲಿ ಹೆಚ್ಚಿನವು ಒತ್ತಡವಿಲ್ಲದೆ ಸಿದ್ಧರಿದ್ದಾರೆ. ಮತ್ತು ಸ್ಥಳೀಯ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗವು ವಿವಿಧ ಕಾರಣಗಳಿಗಾಗಿ- ಏಕೆಂದರೆ ತಮ್ಮ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು - ಸುಮ್ಮನಿರುತ್ತಾರೆ. ಕೋಮುವಾದವು ಅವರ ರಕ್ತಪ್ರವಾಹದಲ್ಲಿ ಹುದುಗಿಲ್ಲ ಎಂದು ನಾನು ಭಾವಿಸುತ್ತೇನೆ ಆದರೆ ಖಂಡಿತವಾಗಿಯೂ ಅವರು ಮುಸ್ಲಿಮರನ್ನು ಅಥವಾ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಾರೆ.
ಸಾಮಜಿಕ ತಾಣಗಳು ಭಾವನೆಗಳನ್ನು ಹರಡುವದರಲ್ಲಿ ಪ್ರಭಾವಶಾಲಿಗಳಾಗಿವೆ.
ಜೇಸನ್ ಸ್ಟಾನ್ಲಿ : ಹಾಗಾಗಿ ಭಾರತದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಜನರಿಗೆ ತಿಳಿದಿರುವಷ್ಟು ಅರಿವಿಲ್ಲ ಎಂಬುದಕ್ಕೆ ನನ್ನ ಅರ್ಥವೇನೆಂದರೆ, ಭಾರತದಲ್ಲಿ ಫ್ಯಾಸಿಸಂ ಅನ್ನು ಬೆಂಬಲಿಸುವ ಬಹಳಷ್ಟು ಜನರಿದ್ದಾರೆ. ಫ್ಯಾಸಿಸ೦ ಜೊತೆಗೆ ಸೇರಿ ಹೋಗುವ ಬಹಳಷ್ಟು ಜನರಿದ್ದಾರೆ,
ಅವರನ್ನು ಬಲವಂತವಾಗಿ ಒಯ್ಯುತ್ತಿಲ್ಲ, ಅದು ಜನಪ್ರಿಯವಾಗಿದೆ. ಆದ್ದರಿಂದ ಇದನ್ನೇ ಜನರು ಬಯಸುತ್ತಾರೆ, ಬಹುಸಂಖ್ಯಾತರು ಬಯಸುತ್ತಾರೆ, ಎ೦ದು ಹೇಳುತ್ತಾರೆ. ಉದಾರ ಪ್ರಜಾಪ್ರಭುತ್ವವು ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ದಬ್ಬಾಳಿಕೆಯಿಂದ ರಕ್ಷಿಸುವುದನ್ನು ಒಳಗೊಂಡಿರುತ್ತದೆ ಎಂಬುದನ್ನು ಮರೆತುಬಿಡುತ್ತಾರೆ.
ಮತ್ತು ನೀವು ಭಾರತದಲ್ಲಿ ಹೊಂದಿರುವ ಈ ರೀತಿಯನ್ನು ಉತ್ಕೃ ಷ್ಟ 'ಹೆರೆನ್‌ಫೋಕ್ '(Herrenvolk) ಪ್ರಜಾಪ್ರಭುತ್ವ ಎಂದು ಕರೆಯುತ್ತಾರೆ, ಅದು ಕೇವಲ ಒಂದು ಜನಾಂಗೀಯ ಗುಂಪಿನ ಪ್ರಜಾಪ್ರಭುತ್ವವಾಗಿದೆ, ಅದು ಒಂದು ರೀತಿಯ ಫ್ಯಾಸಿಸಂ.
(ಅನುವಾದಕ ಟಿಪ್ಪಣಿ : 'ಹೆರೆನ್ವೋಲ್ಕ್' ಪ್ರಜಾಪ್ರಭುತ್ವವು ಸರ್ಕಾರದ ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಒಂದು ನಿರ್ದಿಷ್ಟ ಜನಾಂಗೀಯ ಗುಂಪು ಮಾತ್ರ ಸರ್ಕಾರದಲ್ಲಿ ಭಾಗವಹಿಸುತ್ತದೆ, ಆದರೆ ಇತರ ಗುಂಪುಗಳು ಹಕ್ಕುರಹಿತವಾಗಿವೆ.)
ಸಿಧ್ಧಾರ್ಥ್ ಭಾಟಿಯಾ: ಮತ್ತು ಇದು ಕ್ರೋನಿ ಕ್ಯಾಪಿಟಲಿಸಂ - ಸಲಿಗೆಯ ಬಂಡವಾಳಶಾಹಿ - ಯ ಜೊತೆಗೆ ಹೋಗುತ್ತದೆ
ಜೇಸನ್ ಸ್ಟಾನ್ಲಿ : ಇದು ಸತ್ಯ. ಏಕೆಂದರೆ ನಿಷ್ಠೆಯನ್ನು ಆಧರಿಸಿದ ವ್ಯವಸ್ಥೆಗೆ ಫ್ಯಾಸಿಸ್ಮ್ ಸಂಬಂಧಿಸಿದೆ. ಇದು ಬುಡಕಟ್ಟಿನ ಗುಂಪಿನ ಭಾಗವಾಗಿರುವುದರಿ೦ದ ಯಾರೇ ಆದರೂ ನಿಷ್ಠೆ ಮತ್ತು ಗುರುತಿನ ಆಧಾರದ ಮೇಲೆ ಈ ಗುಂಪಿನ ಭಾಗವಾಗಿರಬೇಕು. ಆದರೆ ಬಂಡವಾಳಶಾಹಿಯ ಶುಧ್ಧ ರೂಪವು ಯಾವಾಗಲೂ ಫ್ಯಾಸಿಸಂನ ವಿರೋಧವನ್ನು ಎದುರಿಸುತ್ತದೆ ಏಕೆಂದರೆ ಶುಧ್ಧ ಬ೦ಡವಾಳಕ್ಕೆ ನೀವು ಯಾರಾಗಿದ್ದರೂ ಪರವಾಗಿಲ್ಲ. ಫ್ಯಾಸಿಸ೦ ಪ್ರತ್ಯೇಕತಾವಾದವು, ಗುರುತಿನ ನಿಷ್ಠೆಯ ಆಧಾರವು, ವ್ಯಾಪಾರಕ್ಕೆ ಕೆಟ್ಟದಾಗಬಹುದು.
ಸಿಧ್ಧಾರ್ಥ್ ಭಾಟಿಯಾ: ನೀವು ಭಾರತಕ್ಕೆ ಬರುತ್ತೀರಾ?
ಜೇಸನ್ ಸ್ಟಾನ್ಲಿ : ಭಾರತಕ್ಕೆ ಹೋಗುವುದು ನನ್ನ ಕನಸಾಗಿದೆ
ಇದು ಗಮನಾರ್ಹವಾದ ವೈವಿಧ್ಯಮಯ ದೇಶವಾಗಿದೆ. ನಾನು ಒಬ್ಬ ದಾರ್ಶನಿಕ;
ಭಾರತವು ಗಮನಾರ್ಹವಾದ ಆಳವಾದ ತಾತ್ವಿಕ ಸಂಪ್ರದಾಯವನ್ನು ಹೊಂದಿದೆ. ನಾನು ಭಾರತೀಯ ಸಂವಿಧಾನವನ್ನು ಮೆಚ್ಚುತ್ತೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ