ಕೊಲೆಗಡುಕ ಅಹ೦ಕಾರ: ದಲಿತ ಯುವಕ ಗೋಕುಲ್‌ರಾಜ್ ಹತ್ಯೆ ಪ್ರಕರಣದ ಕುರಿತು

 

ಸಂಪಾದಕೀಯ      ದಿ ಹಿ೦ದು

ಮಾರ್ಚ್ 14, 2022 

ಜಾತಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ತಮಿಳುನಾಡಿನಲ್ಲಿ ವಸ್ತುನಿಷ್ಠ ನ್ಯಾಯದ ಪರವಾಗಿ ಅಪರೂಪವಾದ ಒ೦ದು ಹೊಡೆತ

        ಪ್ರಬಲವಾದ ಒ೦ದು ಜಾತಿಯ ಗರ್ವವನ್ನು ಎತ್ತಿಹಿಡಿಯಲು ಎನ್ನುವ ಪಶ್ಚಿಮ ತಮಿಳುನಾಡಿನಲ್ಲಿ 2015 ರಲ್ಲಿನಡೆಸಿದ ದಲಿತ ಯುವಕನ ಭೀಕರ ಹತ್ಯೆಯನ್ನು  ಇತ್ತೀಚೆಗೆ ಜಾತಿ ಗಣದ ಸಂಘಟನೆಯ ನಾಯಕನಿಗೆ ಜೀವಾವಧಿ ಶಿಕ್ಷೆ ನೀಡುವ ಮೂಲಕ ಸ್ವಲ್ಪಮಟ್ಟಿಗೆ ಉಪಶಮನಗೊಳಿಸಿದೆ.   'ಗೌರವ ಹತ್ಯೆ'ಯ ಇತರ ಸಾಂಕೇತಿಕ ಪ್ರಕರಣಗಳಿಗೆ ಭಿನ್ನವಾಗಿ, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ವಿ.ಗೋಕುಲ್‌ರಾಜ್‌ನ ಕೊಲೆಯು ಪ್ರಬಲ ಜಾತಿಗೆ ಸೇರಿದ ಹುಡುಗಿಯ ಕುಟುಂಬದವರಿಂದ ಅಥವಾ ಅವರ ನಿರ್ದೇಶನದಿ೦ದ  ಮಾಡಲ್ಪಟ್ಟಿಲ್ಲ. ತನ್ನದೇ ನೇತೃತ್ವದ ಜಾತಿಯ ಸಂಘಟನೆಯನ್ನು ನಡೆಸುತ್ತಿದ್ದಎಸ್.ಯುವರಾಜನಿಗೆ    ಆಹುತಿಯಾದ ವ್ಯಕ್ತಿ ಅಥವಾ    ಅವನ ಸ್ನೇಹಿತೆಯ ಪರಿಚಯವೂ ಇದ್ದಿಲ್ಲ,   ಆದರೆ ದೇವಸ್ಥಾನದಲ್ಲಿ ಅವರಿಬ್ಬರಲ್ಲಿ ನಡೆದ ಸಂಭಾಷಣೆಯನ್ನು   ಆಕಸ್ಮಿಕವಾಗಿ ಕೇಳಿದ್ದನು.  ದೀನದಲಿತ ಸಮುದಾಯದ ವ್ಯಕ್ತಿಯನ್ನು ಶಿಕ್ಷಿಸುವ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ತನ್ನದೇ ಸಮುದಾಯದ ಯುವಕರಲ್ಲಿ ಭಯದ ಭಾವವನ್ನು ಸೃಷ್ಟಿಸಲು ಆತನು  ಪ್ರಯತ್ನಿಸಿದ್ದಾಗಿ ಸಾಧ್ಯವಿದೆ.  ಅವರ ಜಾತಿಯ ನೈಜತೆಯನ್ನು  ಖಚಿತಪಡಿಸಿಕೊಳ್ಳಲು ತ್ವರಿತ ಸಂದರ್ಶನದ ನಂತರ, ಅವನು ತನ್ನ ಸ್ವಂತ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ತನ್ನ ಗುಂಪಿಗೆ ಸೇರಿದ್ದ ಓರ್ವ  ದಂಪತಿಗಳ ಜೊತೆಗೆ  ಕಳುಹಿಸಿದನು. ಘಟನೆಗಳ ಭಯಾನಕ ಅನುಕ್ರಮದಲ್ಲಿ, ಯುವರಾಜ್ ಮತ್ತು ಅವನ ಸಹಚರರು ತಮ್ಮ ವಾಹನದಲ್ಲಿ ಯುವಕನನ್ನು ಅಪಹರಿಸಿ ಅವನನ್ನು ಕೊಂದು ಆದರೆ ಆತ್ಮಹತ್ಯೆ ಎಂದು ತೋರಿಸಲು  ಯೋಜನೆಯನ್ನು ಕ್ಷಣಾರ್ಧದಲ್ಲಿ ರೂಪಿಸಿದರು.  ತನ್ನ ಆತ್ಮಹತ್ಯೆಯ ಬಗ್ಗೆ  ಮಾತನಾಡುವಂತೆ ಒತ್ತಾಯಿಸಿದರು ಮತ್ತು ಅದನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡಿದರು,  ಮತ್ತು ನಂತರ ಅವನ ದೇಹದ ಮೇಲೆ ನೆಡಬೇಕೆಂದು 'ಆತ್ಮಹತ್ಯೆ ಟಿಪ್ಪಣಿ'ಯನ್ನು ಸಹ ನಿರ್ದೇಶಿಸಿದರು. ಏಕಾಂತ ಸ್ಥಳದಲ್ಲಿ ಆತನನ್ನು ಕತ್ತು ಹಿಸುಕಿ ಸಾಯಿಸಿದ ನಂತರ, ಯುವರಾಜ್ ಅವನ ತಲೆಯನ್ನು ತುಂಡರಿಸಿ ಮುಂಡವನ್ನು ರೈಲ್ವೆ ಹಳಿ ಮೇಲೆ ಮತ್ತು ತಲೆಯನ್ನು ಅದರ ಹತ್ತಿರ ಎಸೆದನು.

        ಧೀರನ್ ಚಿನ್ನಮಲೈ ಗೌಂಡರ್ ಪೆರವೈ ಎಂಬ ಗುಂಪನ್ನು ನಡೆಸುತ್ತಿದ್ದ ಯುವರಾಜ್, ದೇವಾಲಯದ ಬಳಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನು ಮತ್ತು ಅವನ ಸಹಚರರು ಗೋಕುಲರಾಜ್ ಒ೦ದಿಗೆ ದೇವಾಲಯದಿಂದ ಹೊರಟು ಹೋಗುವದು ಕ೦ಡನ೦ತರ ಪ್ರಮುಖ ಶಂಕಿತನಾಗಿ ಹೊರಬ೦ದನು.   ಮುಂದಿನ ಕೆಲವು ವಾರಗಳಲ್ಲಿ, ಯುವರಾಜ್  ಮೂರು ತಿಂಗಳು ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಧ್ವನಿಮುದ್ರಿಸಿದ ಸಂದೇಶಗಳನ್ನುಸಾರ್ವಜನಿಕಗೊಳಿಸಿದ್ದಲ್ಲದೆ  ಒ೦ದು  ಟೆಲಿವಿಶನ್ ಚರ್ಚೆಯಲ್ಲಿ ಕಾಣಿಸಿಕೊಂಡದ್ದರಿ೦ದ ಅವನು  ಜನಪ್ರಿಯತೆಯ ಹುಡುಕಾಟದಲ್ಲಿದ್ದನು ಎ೦ಬದು  ಸ್ಪಷ್ಟವಾಯಿತು. ಅಂತಿಮವಾಗಿ, ಈ ಅತಿಯಾದ ಆತ್ಮವಿಶ್ವಾಸ ಅವನ ಅವನತಿಗೆ ಕಾರಣವಾಯಿತು.    ದೇವಸ್ಥಾನದಲ್ಲಿ ದಂಪತಿಗಳನ್ನು ಕ೦ಡಿದ್ದೆನು ಆದರೆ ಅವರನ್ನು ಅಲ್ಲಿಯೇ ಬಿಟ್ಟಿದ್ದೆನು ಎ೦ದು ಹೇಳಿಕೊ೦ಡನು.   ಆದಾಗ್ಯೂ, 'ಕೊಲೆಯಾದ ಬಲಿಪಶುವಿನ ಜೊತೆಗೆ  ಕೊನೆಯದಾಗಿ ಕಾಣಲ್ಪಟ್ಟ  ಆರೋಪಿಯು ತನ್ನ ಗೈರುಹಾಜರಿಯನ್ನು ತೃಪ್ತಿಕರವಾಗಿ ವಿವರಿಸಬೇಕು' ಎಂಬ ತತ್ವವನ್ನು ಕಾನೂನು ಅನುಸರಿಸಿತು. ತನಿಖೆಯು ಕೆಲವು ಹಿನ್ನಡೆಗಳನ್ನು ಕಂಡಿತು - ತನಿಖೆ ನಡೆಸುತ್ತಿರುವ ಡಿಎಸ್ಪಿ ಆತ್ಮಹತ್ಯೆಯಿಂದ ಮರಣ, ಮತ್ತು ವಿಚಾರಣೆಯ ಸಮಯದಲ್ಲಿ ಹಲವಾರು ಸಾಕ್ಷಿಗಳು ಪ್ರತಿಕೂಲವಾದ ಸ೦ದರ್ಭದಲ್ಲಿ.  ನಾಮಕ್ಕಲ್‌ನಿಂದ ಮಧುರೈಗೆ ವಿಚಾರಣೆಯನ್ನು ವರ್ಗಾಯಿಸಲು ಮದ್ರಾಸ್ ಹೈಕೋರ್ಟ್‌ನಿಂದ ಆದೇಶ ಪಡೆದ ಸಂತ್ರಸ್ತ ತಾಯಿ ವಿ.ಚಿತ್ರಾ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಬಿ.ಮೋಹನ್ ಮತ್ತು ತಾಂತ್ರಿಕ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ ತನಿಖಾಧಿಕಾರಿಗಳು ಯಶಸ್ವಿ ಪ್ರಾಸಿಕ್ಯೂಷನ್‌ಗೆ ಶ್ಲಾಘನೆಗೆ ಅರ್ಹರು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ ಕಾನೂನು ಕ್ರಮಗಳು ಸಾಮಾನ್ಯವಾಗಿ ನಿರಾಸಕ್ತಿಯಲ್ಲಿ ತೇಲಾಡುವ ರಾಜ್ಯದಲ್ಲಿ, 10 ವ್ಯಕ್ತಿಗಳಿಗೆ ಎಲ್ಲರಿಗೂ ಅವರ ಉಳಿದ ಜೀವಿತಾವಧಿಯ ಸೆರೆವಾಸದ ಶಿಕ್ಷೆ ವಿಧಿಸುವುದು ವಸ್ತುನಿಷ್ಠ ನ್ಯಾಯಕ್ಕೆ ಅಪರೂಪದ ಹೊಡೆತವಾಗಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು