ಮೂಲಭೂತವಾಗಿ ದೋಷಪೂರಿತವಾಗಿದೆ: ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ಕುರಿತು

 




ಮೂಲಭೂತವಾಗಿ ದೋಷಪೂರಿತವಾಗಿದೆ: ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ಕುರಿತು

 

‘ದಿ ಹಿ೦ದು’ ಸ೦ಪಾದಕೀಯ ಮಾರ್ಚ್ 17, 2022

ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಸಮಂಜಸವಾದ ಅವಕಾಶ ಕಲ್ಪಿಸುವದರ  ಅಗತ್ಯವನ್ನು ಗುರುತಿಸಲು ವಿಫಲವಾಗಿದೆ

 ಕರ್ನಾಟಕ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಿರುವ ನ್ಯಾಯಾಲಯದ ತೀರ್ಪು ಹಲವು ಹಂತಗಳಲ್ಲಿ ತಪ್ಪಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ವಿವಾದದಿಂದ ಉದ್ಭವಿಸುವ ಪ್ರಶ್ನೆಗಳನ್ನು ನ್ಯಾಯಾಲಯವು ರೂಪಿಸಿದ ರೀತಿ ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತದೆ. ನಿಗದಿತ ಸಮವಸ್ತ್ರದ ಜೊತೆಗೆ, ಆದರೆ ಬಣ್ಣದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಹಿಜಾಬ್ ಧರಿಸುವುದು ಶಾಲೆ ಅಥವಾ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸುವ ಕಾರಣವೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ವಿಫಲವಾಗಿದೆ. ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಅಭ್ಯಾಸವಾಗಿದೆ ಮತ್ತು ಆದ್ದರಿಂದ,  ವಿಧಿ  25 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿ ಸಾಂವಿಧಾನಿಕ ರಕ್ಷಣೆಗೆ ಅರ್ಹವಾಗಿದೆ ಎಂದು ವಿದ್ಯಾರ್ಥಿಗಳ ಹೇಳಿಕೆಯನ್ನು ಒಪ್ಪದ ಪೀಠವು ಕುರಾನ್‌ನ ಪದ್ಯಗಳನ್ನು ಪರಿಶೀಲಿಸಿತು. ಆದರೆ ಅದು ನಿಜವಾದ ಸಮಸ್ಯೆಯಾಗಿತ್ತೇ ? ವೈವಿಧ್ಯತೆಯನ್ನು ಹೊ೦ದಿರುವ  ಸಮಾಜವು ವಿದ್ಯಾರ್ಥಿಗಳಲ್ಲಿ ಸಮಾನತೆಯ ಭಾವನೆಯನ್ನು ಹಾಳು ಮಾಡದೆಯೇ ಶಾಲಾ ಕೊಠಡಿಯಲ್ಲಿ ಸಾಮಾಜಿಕ ಬಹುತ್ವವನ್ನು ಪ್ರತಿಬಿಂಬಿಸಲು 'ಸಮಂಜಸತರದ ಅವಕಾಶ'ದ  ಮೂಲಕ ಅನುಮತಿಸಬಹುದು. ಆದರೆ ಇದನ್ನು  ಸಮರ್ಥಿಸುವ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು.  ಶಾಲೆಗಳಂತಹ "ಅರ್ಹತೆ ಹೊಂದಿರುವ ಸಾರ್ವಜನಿಕ ಸ್ಥಳಗಳಲ್ಲಿ" ಉಡುಪಿನ  ಮಾನದಂಡಗಳು ಬೇಕಾಗಬಹುದು. ಆದರೆ ನಿಗದಿತ ಸಮವಸ್ತ್ರಕ್ಕೆ ಅಡ್ಡಿಯಾಗದ ಹೆಚ್ಚುವರಿ ಬಟ್ಟೆಯ ಆಯ್ಕೆಗೆ ಅವಕಾಶ ಕಲ್ಪಿಸದಿರಲು ಯಾವುದೇ ಕಾರಣವಿಲ್ಲ.

'ಆತ್ಮಸಾಕ್ಷಿಯ ಸ್ವಾತಂತ್ರ್ಯ' ಆಧಾರಿತ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ಮನವಿಯಲ್ಲಿ ಇದರ ವಿವರಣೆಯಿಲ್ಲದಿರುವದನ್ನು  ಉಲ್ಲೇಖಿಸಿದೆ. ಸಮಾನತೆ ಮತ್ತು ಏಕರೂಪತೆಯ ಉಲ್ಲಂಘಿಸಲಾಗದ ಸಂಕೇತವಾಗಿ ಸಮವಸ್ತ್ರದ ಮಹತ್ವವನ್ನು ಒತ್ತುವ  ತೀರ್ಪು ಯಾವುದೇ ರೀತಿಯ ರಿಯಾಯಿತಿಯ ಪರವಾಗಿ ಯಾವುದೇ ವಾದವನ್ನು  ತಳ್ಳಿಹಾಕಿದ್ದಾಗಿ  ತೋರುತ್ತದೆ. ಈ ಸಂದರ್ಭದಲ್ಲಿ 'ಅಗತ್ಯ ಆಚರಣೆ' ಪರೀಕ್ಷೆ  ಬೇಕಾಗಿತ್ತೇ ಎಂಬುದು ಮತ್ತೊಂದು ಪ್ರಶ್ನೆ.  ಏನಾದರೂ ಅತಿರೇಕವಾಗಿ ಧಾರ್ಮಿಕವಾಗಿದ್ದರೆ, ಏಕರೂಪತೆ ಮತ್ತು ಯಾವುದೇ 'ಪ್ರತ್ಯೇಕತೆಯ ಪ್ರಜ್ಞೆ'ಯನ್ನು ತೆಗೆದುಹಾಕುವುದು ಪವಿತ್ರವಾದ ಗುರಿಗಳಾಗಿದ್ದರೆ, ಅದನ್ನು ಕ್ಯಾಂಪಸ್‌ನಿಂದಲೇ ಹೊರಗಿಡುವ ಸಾಧ್ಯತೆ ಹೆಚ್ಚು. ಧರ್ಮಶಾಸ್ತ್ರದ ಪರಿವಿಧಿಯನ್ನು  ಪ್ರವೇಶಿಸದೆ ವಿಷಯವನ್ನು ವಿಲೇವಾರಿ ಮಾಡಬಹುದಿತ್ತು. 'ಅಗತ್ಯ ಧಾರ್ಮಿಕ ಆಚರಣೆ' ಪರೀಕ್ಷೆಯು ಅರ್ಥಹೀನ ವ್ಯಾಯಾಮವಾಗಿದೆ, ಏಕೆಂದರೆ ಅದನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಬಹುತೇಕ ಸಾಧಿಸಲಾಗದ ಮಾನದಂಡವನ್ನು ಸ್ಥಾಪಿಸಿದೆ. ಯಾವದೇ ಆಚರಣೆಯ ಅನುಪಸ್ಥಿತಿ ಅಥವಾ ತೆಗೆದುಹಾಕುವಿಕೆಯು ಧರ್ಮವನ್ನು ನಾಶಪಡಿಸುವ ಪರಿಣಾಮವನ್ನು ಹೊಂದಿದ್ದರೆ ಮಾತ್ರ ಯಾವುದಾದರೂ 'ಅತ್ಯಗತ್ಯ ಆಚರಣೆ’ಯಾಗುತ್ತದೆ. ಕೆಲವು ಮೂಲಭೂತ ಅಂಶಗಳನ್ನು ಉಳಿಸಿ, ಯಾವುದೇ ಧಾರ್ಮಿಕ ಆಚರಣೆಯು ಅಂತಹ ಪರಿಶೀಲನೆಯಿಂದ ಉಳಿಯುವುದಿಲ್ಲ. ವಿಧಿ 25ರ ರಕ್ಷಣೆಯ ಹಕ್ಕಿನ ಕೋರಿಕೆಯನ್ನು  ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಘನತೆ ಮತ್ತು ಗೌಪ್ಯತೆಗಳ   (ಸಹಜವಾಗಿ, ಆರೋಗ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಬದ್ಧವಾಗಿ)  ಶೋಧನೆಯ ಮೂಲಕ ಪರೀಕ್ಷಿಸಿದರೆ ಅದು  ಉತ್ತಮವಾಗಿರುತ್ತದೆ.  ಸೈದ್ಧಾಂತಿಕವಾಗಿ  ವ್ಯಾಖ್ಯಾನಿಸುವ ಧರ್ಮಶಾಸ್ತ್ರದ  ಕೆಲವು  ಪರಿಕಲ್ಪನೆಗಳು ಉಳಿದ ಎಲ್ಲವನ್ನು ಅತಿಕ್ರಮಿಸಲು ಅನುಮತಿಸುವ ಕಾರಣದಿ೦ದಾಗಿ  ಮಾತ್ರ  'ಅತ್ಯಗತ್ಯತೆ’ಯ ಪರೀಕ್ಷೆಯನ್ನು ಶಾಶ್ವತವಾಗಿ ಕೈಬಿಡಬೇಕು. ಸಾಂವಿಧಾನಿಕ ತತ್ವಗಳಿಗೆ ಯಾವುದು ಅಸಹ್ಯಕರವೋ ಅದು ಧರ್ಮಕ್ಕೆ ಅತ್ಯಗತ್ಯವೆಂದು ಪರಿಗಣಿಸಲ್ಪಟ್ಟರೂ ಹಾಗೆಯೇ ಉಳಿಯುತ್ತದೆ. ಧರ್ಮದ ಸ್ವಾತಂತ್ರ್ಯವು ಮುಖ್ಯವಾದದ್ದು ಏಕೆಂದರೆ ಸ್ವಾತಂತ್ರ್ಯಗಳು ಮುಖ್ಯವಾಗಿವೆ;  ಧರ್ಮಗಳು ಮುಖ್ಯ ಎನ್ನುವ  ಕಾರಣದಿ೦ದ ಅಲ್ಲ.

 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು