ಪೋಸ್ಟ್‌ಗಳು

ಇಮೇಜ್
  ಜೀನ್ಸ್ ಧರಿಸಿದ್ದಕ್ಕಾಗಿ ಕೊಲ್ಲಲ್ಪಟ್ಟ ಭಾರತೀಯ ಹುಡುಗಿ - ಬಿ ಬಿ ಸಿ ಯಲ್ಲಿ ವಿವರವಾದ ವರದಿ   ಬಾಲಕಿಯರು ಮತ್ತು ಯುವತಿಯರನ್ನು ಕುಟುಂಬ ಸದಸ್ಯರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಭಾರತದಲ್ಲಿ ಹುಡುಗಿಯರು ಮತ್ತು ಮಹಿಳೆಯರು ತಮ್ಮ ಮನೆಯೊಳಗೆ ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದರ ಬಗ್ಗೆಗಮನ ಸೆಳಯುತ್ತದೆ.     ಹಳ್ಳಿಯೊಂದರಲ್ಲಿ ಜೀನ್ಸ್ ಧರಿಸಲು ಒತ್ತಾಯಿಸಿದ್ದರಿಂದ ಹದಿಹರೆಯದ ಬಾಲಕಿ ತನ್ನ ಕುಟುಂಬ ಸದಸ್ಯರಿಂದ ಥಳಿಸಲ್ಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.   ಉತ್ತರ ಪ್ರದೇಶದ ದೆವರಿಯ ಜಿಲ್ಲೆಯಲ್ಲಿ ಸವ್ರಹಿ ಖಾರ್ಗ್ ಗ್ರಾಮದ 17 ವರ್ಷದ ನೇಹಾ ಪಾಸ್ವಾನ್ ಸೋಮವಾರ ಜೀನ್ಸ್ ಮತ್ತು ಟಾಪ್ ಧರಿಸಲು ಒತ್ತಾಯಿಸಿದ ನಂತರ ಅವಳನ್ನು ಕುಟುಂಬ ಸದಸ್ಯರು ತೀವ್ರವಾಗಿ ಥಳಿಸಿದ್ದಾರೆ. ತಾಯಿ ನೀಡಿದ ದೂರಿನ ಪ್ರಕಾರ, ಬಾಲಕಿಗೆ ಹೊಡೆದಾಗ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯ ಸಾವಿಗೆ ಕಾರಣವಾಗಿದೆ,  ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ತೀವ್ರವಾದ ಗಾಯ ಮತ್ತು ಮುರಿತ ಕೂಡ ಖಚಿತವಾಗಿದೆ ಎಂದು  ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ.  ಬಾಲಕಿಯ ಕಿರಿಯ ಸಹೋದರ ವಿವೇಕ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರ ಚಿಕ್ಕಪ್ಪ ಮತ್ತು ಅಜ್ಜ ಬಟ್ಟೆ ಒಗೆಯುವ ಬಗ್ಗೆ ಕೋಪಗೊಂಡಿದ್ದಾರೆ ಮತ್ತು ಅವಳನ್ನು ಥಳಿಸಿದ್ದಾರೆ, ಎ೦ದನು. ಇದು ರಾಜ್ಯದ ಅತ್ಯಂತ ಹಿ೦ದುಳಿದ ಪ್ರದೇಶಗಳಲ್ಲಿ ಒಂದ...
ಇಮೇಜ್
  ಪ್ಯೂ ಸಮೀಕ್ಷೆಯ ಚರ್ಚೆ ಪ್ಯೂ ಸಮೀಕ್ಷೆಯ ವರದಿಯ ಮುಖ್ಯ ಬಿ೦ದುಗಳನ್ನು ೨೦೨೧ರ ಜುಲೈ ೧೪ರ೦ದು ಈ ಪುಟಗಳಲ್ಲಿ ಪ್ರಕಟಿಸಲಾಗಿದೆ. ಪ್ರತೀಕ್ಷಿಸಬಹುದಾದ೦ತೆ ಈ ವರದಿಯ ಬಗ್ಗೆ ವ್ಯಾಪಕವಾದ ಚರ್ಚೆ ವಿವಿಧ ಮಾಧ್ಯಮಗಳಲ್ಲಿ ನಡೆದಿದೆ.  ಕೆಲವರು ಈ ಸಮೀಕ್ಷೆಯ ಗಾತ್ರ ಚಿಕ್ಕದು, ಆ ಕಾರಣ ಸಮೀಕ್ಷೆಯ ತೀರ್ಮಾನಗಳನ್ನು ಕ೦ಡುಹಿಡಿಕೆಗಳನ್ನು ಎಚ್ಚರಿಕೆಯಿ೦ದ ಪರಿಶೀಲಿಸಬೇಕು ಎ೦ದರೆ, ಕೆಲವರು ಪ್ರಶ್ನೆಗಳನ್ನು  ಮತ್ತು ಪ್ರಶ್ನೆಗಳನ್ನು ಕೇಳಿದ ರೀತಿಯನ್ನೇ ಹುಶಾರಾಗಿ ಶೋಧಿಸುತ್ತಿದ್ದಾರೆ. ಕೆಲವು ಗು೦ಪುಗಳಿಗೆ ಈ ವರದಿಯಿ೦ದ,  ವಿಶೇಷವಾಗಿ ದೇಶದ ಧಾರ್ಮಿಕ ಸ್ವಾತ೦ತ್ರ್ಯ ಮತ್ತು ಸಹಿಷ್ಣುತೆಗಳಿಗೆ ಸೇರಿದ  ಭಾಗಗಳಿಂದ, ಸಮಾಧಾನ ಉ೦ಟಾಗಿದೆ. ಸಮೀಕ್ಷೆ ತೋ ರಿಸುವದು  ವಿವಿಧ ಮತಧರ್ಮಗಳು ತಮ್ಮ ಮತ-ನಂಬಿಕೆಗಳನ್ನು ಆಚರಣೆ ಮಾಡಲು ತಾವು ತುಂಬಾ ಸ್ವತಂತ್ರರು ಎಂದು  ಮತ್ತು ಹೆಚ್ಚಿನವರು ಇತರ ಧರ್ಮದ ಜನರು ಸಹ ತಮ್ಮ ಧರ್ಮವನ್ನು ಆಚರಿಸಲು ತುಂಬಾ ಸ್ವತಂತ್ರರು ಎಂದು ಭಾರತೀಯರು ಹೇಳುತ್ತಾರೆ. ಭಾರತೀಯರು ತಮಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಭಾವಿಸುತ್ತಾರೆ, ಎಲ್ಲಾ ಧರ್ಮಗಳನ್ನು ಗೌರವಿಸುವುದನ್ನು ಒಂದು ಪ್ರಮುಖ ಮೌಲ್ಯವಾಗಿ ನೋಡುತ್ತಾರೆ.  ಭಾರತೀಯರು ಧಾರ್ಮಿಕ ಸಹಿಷ್ಣುತೆಯನ್ನು ಗೌರವಿಸುತ್ತಾರೆ. ಇದಕ್ಕೆ ವಿರುಧ್ಧವಾಗಿ ಕೆಲವರು ಈ ವರದಿಯನ್ನು ಪ್ರತೀಕ್ಷಿಸಿದ್ದಕ್ಕಿ೦ತ ಸಕಾರಾತ್ಮಕ ಚಿತ್ರವನ್ನು ಪ್ರಸ್ತುತ...
ಇಮೇಜ್
  ಹಿಂದುತ್ವ: ಹೆಸರಿನಲ್ಲಿ ಹೊರತುಪಡಿಸಿ ಎಲ್ಲದರಲ್ಲೂ ಭಾರತೀಯ ರಾಜ್ಯವು ಬಹುಸಂಖ್ಯಾತ ಧರ್ಮದ ನೆರಳಿನಲ್ಲಿದೆ. ಆದರೆ ಇದು ಇನ್ನೂ ಅಧಿಕೃತವಲ್ಲ.   ಪಾರ್ಸಾ ವೆಂಕಟೇಶ್ವರ ರಾವ್ ಜೂ. ಹಿಂದುತ್ವವು  ಕೋಣೆಯಲ್ಲಿರುವ ಆನೆ, ಆದರೆ ಎಲ್ಲರೂ ಅದನ್ನು ಗುರುತಿಸಲು ನಿರಾಕರಿಸುತ್ತಾರೆ. (ಟಿಪ್ಪಣಿ:ಇ೦ಗ್ಲಿಷ್ ಭಾಷೆಯಲ್ಲಿ ‘ಕೋಣೆಯಲ್ಲಿ ಆನೆ ಇದೆ’ (an elephant in the room) ಎ೦ದರೆ  ಜನರು ಮಾತನಾಡಲು ಇಷ್ಟಪಡದ ಸ್ಪಷ್ಟ ಸಮಸ್ಯೆ ಅಥವಾ ಕಷ್ಟಕರ ಪರಿಸ್ಥಿತಿ ಇದೆ ಎಂದು ಅರ್ಥ). ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ), ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಮತ್ತು ತಾವು ಎರಡೂ  ಸಂಘಟನೆಗಳಿಗೆ ಬೇಕಾಗಿರುವದು ರಾಷ್ಟ್ರೀಯತೆ, ರಾಷ್ಟ್ರೀಯ ಸಂಸ್ಕೃತಿ, ರಾಷ್ಟ್ರೀಯ ಭದ್ರತೆ ಇವು ಮಾತ್ರ, ಎ೦ದು ನಟಿಸುತ್ತವೆ.  ಇನ್ನೊ೦ದೆಡೆ ಹಿಂದುತ್ವವು ಸರ್ಕಾರದ ಪ್ರಧಾನ ಸಿದ್ಧಾಂತವಾಗಿ ಈಗಾಗಲೇ ಹೊರಹೊಮ್ಮಿದೆ ಎಂದು ಒಪ್ಪಲು ಕಲ್ಲೆದೆಯ  ಜಾತ್ಯತೀತ ವಿಮರ್ಶಕರೂ  ನಿರಾಕರಿಸುತ್ತಾರೆ. ಹಿಂದುತ್ವವು ಅಧಿಕಾರದ ನಿಯ೦ತ್ರಣವನ್ನು ತೆಗೆದುಕೊಳ್ಳುವುದನ್ನು ತಡೆಯುವ ಹೋರಾಟದಲ್ಲಿ ತಾವು ನಿರತರಾಗಿದ್ದೇವೆ ಎಂದು ಅವರು ಹೇಳುತ್ತಲೇ ಇರುತ್ತಾರೆ. ಆದರೆ ಅದು ಈಗಲೇ ಆಡಳಿತದ ಸಿದ್ಧಾಂತವಾಗಿದೆ. ಹಿ೦ದುತ್ವವು ಕುದುರೆಯ ತಡಿಯಲ್ಲಿ ಈಗಾಗಲೇ ಆಸೀನವಾಗಿರುವಾಗ,   ಜಾತ್ಯತೀತವಾದಿಗಳಿಗೆ ...
ಇಮೇಜ್
ಪೆಗಾಸಸ್ ತೆರೆದು ಬಿದ್ದಿದೆ ಯಾಕೆ ಈ ರೀತಿ  ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ? ಯಾರು ಅಕ್ರಮ ಕಣ್ಗಾವಲು ನಡೆಸುತ್ತಿದ್ದಾರೆಂದು ಸರ್ಕಾರ ಬಹಿರಂಗಪಡಿಸುವದೇ?   ಪೆಗಾಸಸ್ ಬಹಳ ಕಾಲದಿ೦ದ ವಿಶ್ವದ ವಿವಿಧ ಭಾಗಗಳಲ್ಲಿ  ಅಕ್ರಮ ಕಣ್ಗಾವಲು ಹಾಕುವುದು ಅಂತಿಮವಾಗಿ ಬಹು-ಸಾಂಸ್ಥಿಕ ಅಂತರರಾಷ್ಟ್ರೀಯ ತನಿಖೆಗೆ ಕಾರಣವಾಯಿತು. ಈ ತನಿಖೆಯನ್ನು ಸೈಬರ್ ಸುರಕ್ಷತೆ ತಜ್ಞರ ಸಹಾಯ ಮತ್ತು ಭಾಗವಹಿಸುವಿಕೆಯೊಂದಿಗೆ ಕೆಲವು ಪ್ರಸಿದ್ಧ ಸುದ್ದಿ ಸಂಸ್ಥೆಗಳು ಮತ್ತು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸೇರಿ ನಡೆಸಿದವು.. ಭಾರತದಲ್ಲಿ ಅನೇಕರನ್ನು ಪೆಗಾಸಸ್ ಸ್ಪೈವೇರ್ (ಬೇಹುಗಾರಿಕೆಯ ಕ೦ಪ್ಯೂಟರ್ ವಿಧಾನ) ಗುರಿಯಾಗಿಸಿಕೊಂಡಿರುವುದು ಈ ರಾಷ್ಟ್ರದಲ್ಲಿ  ಅನೇಕರಿಗೆ ಆಶ್ಚರ್ಯವಾಗುವುದಿಲ್ಲ. 'ರಾಷ್ಟ್ರೀಯ ಭದ್ರತೆ', ‘ಶ್ರೇಷ್ಠ ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಂಪ್ರದಾಯಗಳ ವಿರುದ್ಧದ ಪಿತೂರಿ’ ಇತ್ಯಾದಿ ‘ಸಬೂಬು’ಗಳನ್ನು ಹೇಳಿ  ಭಾರತ ಸರ್ಕಾರವು ಸ೦ಪೂರ್ಣವಾದ ಉತ್ತರವನ್ನು ನೀಡದೇ ಇರಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತದೆ. ಆದರೆ ವ್ಯಕ್ತಿಯ ಹಕ್ಕಿನ ವಿಷಯವಾಗಿ ವೈಯಕ್ತಿಕ ಮತ್ತು ವೃತ್ತಿಪರ ಗೌಪ್ಯತೆಯನ್ನು ಛಿದ್ರಮಾಡಿ ಕೆಲವರ  ಜೀವನ ಮತ್ತು ಕಾರ್ಯದೊಳಗೆ ಒಳನುಗ್ಗುವಿಕೆಯಿಂದ ನಾವೆಲ್ಲರೂ ತೊಂದರೆಗೀಡಾಗಿದ್ದೇವೆ. ಕಾನೂನು ಮತ್ತು ಅಷ್ಟೇ ಸರಕಾರದ ಹೊಣೆಗಾರಿಕೆಯ ಕೊರತೆಯು ಈ ಆಪಾದಿತ ಘಟನೆಗಳ ಬಗ್ಗೆ ಸರಿಯಾ...
ಇಮೇಜ್
  ಫರಿದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಖೋರಿ ಗ್ರಾಮದಲ್ಲಿ ಅನಧಿಕೃತ ಮನೆಗಳನ್ನು ನೆಲಸಮಗೊಳಿಸುವ ಕಾರ್ಯವನ್ನುಪ್ರಾರ೦ಭಿಸಿದೆ ಕಳೆದ ತಿಂಗಳು ಹರಿಯಾಣಾದ ಖೋರಿ ಗ್ರಾಮದಲ್ಲಿ ಬಡಜನರು ಕಟ್ಟಿ ವಾಸವಾಗಿದ್ದ "ಅಕ್ರಮ" ಗುಡಿಸಲುಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯರು, ಈ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.     ಎನ್‌ಡಿಟಿವಿ ಜುಲೈ ೧೪ ರಂದು ವರದಿ ಮಾಡಿದ ಪ್ರಕಾರ ಸುಮಾರು ೧೫೦ ಮನೆಗಳನ್ನು ನೆಲಸಮ ಮಾಡಲಾಗಿದೆ.  ಉರುಳಿಸುವಿಕೆಯ ಕಾರ್ಯಕ್ಕಾಗಿ  ಒಟ್ಟು ಎಂಟು ತಂಡಗಳು ಇಳಿದಿವೆ, ಕ್ರಮವನ್ನು ೧೭೨ ಎಕರೆ ಭೂಮಿಯಲ್ಲಿ ಸುಮಾರು 6,500 ಕಟ್ಟಡಗಳಲ್ಲಿ ಕೈಗೊಳ್ಳಲಾಗುವುದು. “ನಾವು ಇಂದು ನಿರ್ಮೂಲನೆಯ  ಕಾರ್ಯವನ್ನು ಪ್ರಾರಂಭಿಸಿದ್ದೇವೆ; ಇದಕ್ಕಾಗಿ ಕಾರ್ಮಿಕ  ತಂಡಗಳು, ಜೆಸಿಬಿಗಳು ಮತ್ತು ಪೋಕ್ಲೇನ್ ಗಳನ್ನು ಸ೦ಘಟಿಸಿದ್ದೇವೆ. ನಾವು ಸುಪ್ರೀಂ ಕೋರ್ಟ್ ಆದೇಶಗಳನ್ನು ಪೂರ್ಣವಾಗಿ  ಜಾರಿಗೊಳಿಸುತ್ತೇವೆ ”ಎಂದು ಎಂಸಿಎಫ್ ಆಯುಕ್ತ ಗರಿಮಾ ಮಿತ್ತಲ ತಿಳಿಸಿದರು. "ಪೂರ್ಣ ಪ್ರಮಾಣದ ಉರುಳಿಸುವಿಕೆಯನ್ನು ಪ್ರಾರಂಭಿಸಿದೆ. ಆದೇಶದಂತೆ ಎಲ್ಲಾ ರಚನೆಗಳನ್ನು ನೆಲಸಮ ಮಾಡಲಾಗುವುದು ಮತ್ತು ಖಾಲಿ ಇರುವ ಕಟ್ಟಡಗಳು ಮಾತ್ರವಲ್ಲ" ಎಂದು ಉಪ ಆಯುಕ್ತ ಯಶಪಾಲ್ ಹೇಳಿದರು. ಫರಿದಾಬಾದ್‌ನ ಖೋರಿ ಕೊಳೆಗೇ...
ಇಮೇಜ್
  ಇನ್ನೊ೦ದು ಅ೦ಕಣ ಓದಲೇ ಬೇಕಾದದ್ದು ! ಬಿಸಿನೆಸ್ಸ್ ಸ್ತಾ೦ಡರ್ಡ್ ಮತ್ತು ದಿ ಪ್ರಿ೦ಟ್ ಪತ್ರಿಕೆಗಳಲ್ಲಿ ೧೬ ಜುಲೈ ರ೦ದು ಪ್ರಕಟಿತ ಅ೦ಕಣದಲ್ಲಿ ಮಿಹಿರ್ ಶರ್ಮ ಅವರು ಸರ್ಕಾರದ ಕೈಗಾರಿಕಾ ನೀತಿಯನ್ನು ಕಠೋರವಾಗಿ  ಟೀಕಿಸಿದ್ದಾರೆ. ಅದರ ಸಾರಾ೦ಶ :   ೩೦ ವರ್ಷಗಳ ಹಿ೦ದೆ ಕೇ೦ದ್ರೀಯ ಯೋಜನೆಯ ಮಾದರಿಯನ್ನು ಕೈಬಿಟ್ಟು ಖಾಸಗಿ ವಲಯನ್ನು ಸ್ವತ೦ತ್ರಗೊಳಿಸಲಾಯಿತು. ಇನ್ನೂ ಮು೦ದೆ ಹೋಗುತ್ತ ೧೯೫೦ರ ದಶಕದ ಯೋಜನಾ ಆಯೋಗವನ್ನು ಮೋದಿ ಸರ್ಕಾರವು ಮುಚ್ಚಿತು. ಈಗ ಮೋದಿ ಸರ್ಕಾರವು ಮತ್ತೆ ಸಹಾಯಧನ (ಸಬ್ಸಿಡಿ) ಮತ್ತು ಪರವಾನಗಿ (ಲೈಸೆನ್ಸ್)ಗಳನ್ನು ನೀಡುತ್ತಿದೆ, ಮತ್ತು ಸು೦ಕದ ಗೋಡೆಗಳನ್ನು ಏರಿಸಿ ಖಾಸಗಿ ಕ್ಷೇತ್ರಕ್ಕೆ ರಕ್ಷಣೆ ನೀಡುತ್ತಿದೆ. ಹಳೆಯ ನೀತಿಗಳು ಹೊಸ ಉಡುಪಿನಲ್ಲಿ ತಿರುಗಿ ಬ೦ದಿವೆ! ವಿದೇಶ ನೇರ ಹೂಡಿಕೆಯನ್ನು ಹೆಚ್ಚಿಸುವದು ಮತ್ತು ಬಹುರಾಷ್ತ್ರೀಯ ಕ೦ಪನಿಗಳನ್ನು ಆಕರ್ಷಿಸಲು ವ್ಯಾಪಾರ ವಾತಾವರಣವನ್ನು ಸುಧಾರಿಸುವ ಬಗ್ಗೆ ಅಧಿಕಾರಿಗಳು ಸುದೀರ್ಘವಾಗಿ ಮಾತನಾಡಿದರು.  ಆದರೆ ‘ಮೇಕ್ ಇನ್ ಇ೦ಡಿಯ’ (‘ಬನ್ನಿ, ಭಾರತದಲ್ಲಿ ಮಾಡಿ’, ‘ಬನ್ನಿ, ಭಾರತದಲ್ಲಿ ತಯಾರಿಸಿ’, ‘ವಿಶ್ವದ ಯಾವುದೇ ದೇಶದಲ್ಲಿ ಮಾರಾಟ ಮಾಡಿ  ಆದರೆ ಇಲ್ಲಿ ತಯಾರಿಸಿ’) ಘೋಷಣೆ ತ್ವರಿತವಾಗಿ ಪೂರ್ಣ ಪ್ರಮಾಣದ ಸಾಧಾರಣ ಸರ್ಕಾರಿ ಕಾರ್ಯಕ್ರಮವಾಗಿ ಪರಿವರ್ತಿಸಿತು.   ೨೦೧೯ ರಲ್ಲಿ ಭಾರತದ ಜಿ ಡಿ ಪಿ ಯಲ್ಲಿ ಕೈಗಾರಿಕಾ ಉತ್ಪಾದನೆಯ ಪಾಲು ...