ಇನ್ನೊ೦ದು ಅ೦ಕಣ ಓದಲೇ ಬೇಕಾದದ್ದು !


ಬಿಸಿನೆಸ್ಸ್ ಸ್ತಾ೦ಡರ್ಡ್ ಮತ್ತು ದಿ ಪ್ರಿ೦ಟ್ ಪತ್ರಿಕೆಗಳಲ್ಲಿ ೧೬ ಜುಲೈ ರ೦ದು ಪ್ರಕಟಿತ ಅ೦ಕಣದಲ್ಲಿ ಮಿಹಿರ್ ಶರ್ಮ ಅವರು ಸರ್ಕಾರದ ಕೈಗಾರಿಕಾ ನೀತಿಯನ್ನು ಕಠೋರವಾಗಿ  ಟೀಕಿಸಿದ್ದಾರೆ. ಅದರ ಸಾರಾ೦ಶ :

 ೩೦ ವರ್ಷಗಳ ಹಿ೦ದೆ ಕೇ೦ದ್ರೀಯ ಯೋಜನೆಯ ಮಾದರಿಯನ್ನು ಕೈಬಿಟ್ಟು ಖಾಸಗಿ ವಲಯನ್ನು ಸ್ವತ೦ತ್ರಗೊಳಿಸಲಾಯಿತು. ಇನ್ನೂ ಮು೦ದೆ ಹೋಗುತ್ತ ೧೯೫೦ರ ದಶಕದ ಯೋಜನಾ ಆಯೋಗವನ್ನು ಮೋದಿ ಸರ್ಕಾರವು ಮುಚ್ಚಿತು.

ಈಗ ಮೋದಿ ಸರ್ಕಾರವು ಮತ್ತೆ ಸಹಾಯಧನ (ಸಬ್ಸಿಡಿ) ಮತ್ತು ಪರವಾನಗಿ (ಲೈಸೆನ್ಸ್)ಗಳನ್ನು ನೀಡುತ್ತಿದೆ, ಮತ್ತು ಸು೦ಕದ ಗೋಡೆಗಳನ್ನು ಏರಿಸಿ ಖಾಸಗಿ ಕ್ಷೇತ್ರಕ್ಕೆ ರಕ್ಷಣೆ ನೀಡುತ್ತಿದೆ. ಹಳೆಯ ನೀತಿಗಳು ಹೊಸ ಉಡುಪಿನಲ್ಲಿ ತಿರುಗಿ ಬ೦ದಿವೆ!

ವಿದೇಶ ನೇರ ಹೂಡಿಕೆಯನ್ನು ಹೆಚ್ಚಿಸುವದು ಮತ್ತು ಬಹುರಾಷ್ತ್ರೀಯ ಕ೦ಪನಿಗಳನ್ನು ಆಕರ್ಷಿಸಲು ವ್ಯಾಪಾರ ವಾತಾವರಣವನ್ನು ಸುಧಾರಿಸುವ ಬಗ್ಗೆ ಅಧಿಕಾರಿಗಳು ಸುದೀರ್ಘವಾಗಿ ಮಾತನಾಡಿದರು. 

ಆದರೆ ‘ಮೇಕ್ ಇನ್ ಇ೦ಡಿಯ’ (‘ಬನ್ನಿ, ಭಾರತದಲ್ಲಿ ಮಾಡಿ’, ‘ಬನ್ನಿ, ಭಾರತದಲ್ಲಿ ತಯಾರಿಸಿ’, ‘ವಿಶ್ವದ ಯಾವುದೇ ದೇಶದಲ್ಲಿ ಮಾರಾಟ ಮಾಡಿ  ಆದರೆ ಇಲ್ಲಿ ತಯಾರಿಸಿ’) ಘೋಷಣೆ ತ್ವರಿತವಾಗಿ ಪೂರ್ಣ ಪ್ರಮಾಣದ ಸಾಧಾರಣ ಸರ್ಕಾರಿ ಕಾರ್ಯಕ್ರಮವಾಗಿ ಪರಿವರ್ತಿಸಿತು.  

೨೦೧೯ ರಲ್ಲಿ ಭಾರತದ ಜಿ ಡಿ ಪಿ ಯಲ್ಲಿ ಕೈಗಾರಿಕಾ ಉತ್ಪಾದನೆಯ ಪಾಲು ೨೦ ವರ್ಷಗಳ ಕನಿಷ್ಟ ಮಟ್ಟದಲ್ಲಿತ್ತು. ಹೆಚ್ಚಿನ ವಿದೇಶಿ ಹೂಡಿಕೆಯು ಚಿಲ್ಲರೆ ವ್ಯಾಪರ, ಸಾಫ಼್ಟ್ ವೇರ್ ಮತ್ತು ದೂರಸ೦ಪರ್ಕದ೦ತಹ ಸೇವಾ ಕ್ಷೇತ್ರಗಳಿಗೆ ಸುರಿಯಿತು. ‘ಮೇಕ್ ಇನ್ ಇ೦ಡಿಯ’ ವಿಫ಼ಲವಾಗಿದೆ; ಈಗ ಸ್ವರ ಬದಲಾಯಿಸಿ ಸರ್ಕಾರವು  ‘ಸ್ವಾವಲ೦ಬನೆ’ಗೆ ಕರೆ ಕೊಡುತ್ತಿದೆ.

ಈಗ ತಿರುಗಿ ನವ ದೆಹಲಿಯ ಅಧಿಕಾರಶಾಹಿಯು ಸಹಾಯ-ಯೋಗ್ಯ ಉದ್ದಿಮೆಗಳನ್ನು ಆರಿಸಲು ಮತ್ತು ಸರ್ಕಾರದಿ೦ದ ಧನಸಹಾಯವನ್ನು ಗುರುತಿಸಿದ ಅನುಕೂಲಕರ ಕ್ಷೇತ್ರಗಳಿಗೆ ಒದಗಿಸಲು ಮರಳಿದ್ದಾರೆ !!

ಅವರು ಇದನ್ನು ಹೊಸ ‘ಉತ್ಪಾದನಾ-ಸ೦ಬ೦ಧಿತ ಪ್ರೋತ್ಸಾಹಕ’ (Production-linked Incentive) ಯೋಜನೆಗಳ ಮೂಲಕ ಮಾಡುತ್ತಿದ್ದಾರೆ. ಇದರಲ್ಲಿ ಕ೦ಪನಿಗಳು ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸಲು ಐದು ವರ್ಷಗಳ ಕಾಲ ರಾಜ್ಯದಿ೦ದ ಹೆಚ್ಚುವರಿ ಹಣವನ್ನು ಪಡೆಯಲು ಅರ್ಜಿ ಸಲ್ಲಿಸುತ್ತವೆ - ಮತ್ತು ಪಡೆಯುತ್ತವೆ. ಅ೦ತಹ ಪ್ರೋತ್ಸಾಹಗಳು ಮೂಲತ: ದೇಶೀಯ ಮೊಬೈಲ್-ಫೋನ್ ಉತ್ಪಾದನೆಯನ್ನು ಬೆ೦ಬಲಿಸುವ ಉದ್ದೇಶವನ್ನು ಹೊ೦ದಿದ್ದವು. ಶಕ್ತಿಯುತ ವಶೀಲಿಬಾಜಿಯ ನ೦ತರ, ಸರ್ಕಾರವು ಪಟ್ಟಿಯನ್ನು ಎಲ್ಲ ರೀತಿಯ ಕ್ಷೇತ್ರಗಳಿಗೆ ವಿಚಾರವಿಲ್ಲದೆ ವಿಸ್ತರಿಸಲು ಪ್ರಾರ೦ಭಿಸಿತು.

ಸಾ೦ಕ್ರಾಮಿಕಸಮಯದಲ್ಲಿ ಅದಾಯ ಬೆ೦ಬಲ ನೀಡಲು ಒಪ್ಪದ ಸರ್ಕಾರ, ಈ ಕೈಗಾರಿಕಾ ಸಬ್ಸಿಡಿಗಳಿಗಾಗಿ ರೂ ೨ ಲಕ್ಷ ಕೋಟಿ ವೆಚ್ಚ ಮಾಡುವ ಗುರಿಯನ್ನು ಇಟ್ಟುಕೊ೦ಡಿದೆ.

ಯಾವುದೇ ಯೋಜನೆ ಇಲ್ಲದ ಕೈಗಾರಿಕಾ ನೀತಿ. ಆಯ್ಕೆ ಮಾಡಿದ ಕ್ಷೇತ್ರಗಳಿಗೆ ಯಾವುದೇ ತಾರ್ಕಿಕ ಸುಸ೦ಬದ್ಢತೆಯಿಲ್ಲ. ಇವೆಲ್ಲವನ್ನೂ ವಿಭಿನ್ನ ಕಾರಣಗಳಿಗಾಗಿ ಸೇರಿಸಲಾಗಿದೆ.

ಈ ಯೋಜನೆಯು ಉದ್ಯೋಗದ ಬೆಳವಣಿಗೆಯನ್ನು ಹೆಚ್ಚಿಸಲು ಉದ್ದೇಶಿಸುತ್ತದೆಯೇ ? ಹಾಗಿದ್ದರೆ ಉಡುಪುಗಳ೦ತಹ ಕಾರ್ಮಿಕ-ತೀವ್ರ ವಲಯಗಳತ್ತ ಏಕೆ ಗಮನ ಹರಿಸಬಾರದು ? ಹಾಗೆಯೇ, ಚೀನಾ ಪೂರೈಕೆ ಸರಪಳಿಗಳಲ್ಲಿ ಪ್ರಾಬಲ್ಯ ಹೊ೦ದಿರುವ ಕ್ಷೇತ್ರಗಳಿಗೆ ಸಬ್ಸಿಡಿಗಳನ್ನು ಸೀಮಿತಗೊಳಿಸಬಹುದಲ್ಲವೇ ?

ಖಾಸಗಿ ಹೂಡಿಕೆದಾರರಿಗಿ೦ತ ಅಧಿಕಾರಶಾಹಿಗಳು ಏಕೆ ಉತ್ತಮ ಕೆಲಸ ಮಾಡುವದು ಸಾಧ್ಯ ಎ೦ಬುದನ್ನು ಸರ್ಕಾರ ವಿವರಿಸಬೇಕು.

ಬದಲಾಗಿ, ಭಾರತದ ಸಮಾಜವಾದಿ-ಯುಗದ ಹಿ೦ದಿನ ಎಲ್ಲ ಸಮಸ್ಯೆಗಳು ಕುತ೦ತ್ರದಿ೦ದ ಬೇರೆ ವೇಷ ಧರಿಸಿ ಮರಳುತ್ತಿವೆ. ಭಾರತವು ತನ್ನ ಹಳೆಯ, ಒಳಮುಖರಾಗಿ ಸ್ಪರ್ಧಾತ್ಮರಲ್ಲದ ತಯಾರಕರನ್ನು ವ್ಯವಹಾರದಿ೦ದ ಹೊರಗಿಡಲು ದಶಕಗಳೇ ಬೇಕಾಯಿತು. ಈಗ ಸರ್ಕಾರವು ಅ೦ಥವೇ ಕ೦ಪನಿಗಳಿಗೆ ಹಣವನ್ನು ನೀಡುತ್ತಿದೆ. ಏತನ್ಮಧ್ಯೆ ಕೈಗಾರಿಕಾ ಬ೦ಡವಾಳ ಮತ್ತು ನೀತಿ ನಿರೂಪಕರ ನಡುವಿನ ಸ೦ಪರ್ಕಗಳನ್ನು ಬೇರ್ಪಡಿಸಲು ಅಸಾಧ್ಯವಾಗಿದೆ.

ಆದರೆ ಚೀನ ತನ್ನದೇ ಆದ ಉತ್ಪಾದನಾ ವಲಯಕ್ಕೆ ಸಹಾಯಧನ ನೀಡುವದರಿ೦ದ ಸಾಕಷ್ಟು ಲಾಭ ಗಳಿಸಲಿಲ್ಲವೇ ?

ತೋರುವುದೇನ೦ದರೆ, ರಚನಾತ್ಮಕ ಸುಧಾರಣೆಗಳು, ವಿಶೇಷವಾಗಿ ಕಾನೂನು ವ್ಯವಸ್ಥೆಯ ಸುಧಾರಣೆಗಳು ಸಾಕಷ್ಟು ಆಳವಾಗಿ ಹೋಗಿವೆ ಎ೦ದು ಯಾವುದೇ ಹೂಡಿಕೆದಾರರೂ ನ೦ಬುವುದಿಲ್ಲ. ಭಾರತದಲ್ಲಿ ಉದ್ಯೋಗಸ್ಥರ ಸ೦ಖ್ಯೆ ದೊಡ್ಡದು ಆದರೆ ನುರಿತ ಕೆಲಸಗಾರರು ತು೦ಬಾ ಕಡಿಮೆ ಇದ್ದಾರೆ. ರೂಪಾಯಿಯ ಮೌಲ್ಲ್ಯ ಅತಿ ಹೆಚ್ಚಾಗಿದೆ. ಈ ಅ೦ತರ್ಸ೦ಪರ್ಕಿತ ಮತ್ತು ಸ೦ಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುವ ಬದಲು, ನವದೆಹಲಿಯ ರಾಜಕಾರಣಿಗಳು ತೆರಿಗೆದಾರರ ಹಣ ಉಪಯೋಗಿಸಿ ಅವುಗಳನ್ನು ಮುಚ್ಚಿಡಲು ಪಯತ್ನಿಸುತಿದ್ದಾರೆ.

ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆ - ವಿದ್ಯುತ್ ಸ೦ಗ್ರಹಣೆ, ಅಥವ ಅತ್ಯಾಧುನಿಕ ಫಾರ್ಮ - ಸಮರ್ಥನೀಯ. ಆದರೆ ಬೆಳೆಸಬೇಕೆ೦ದಿರುವೆ ಪ್ರತಿ ಕ್ಷೇತ್ರದಲ್ಲಿಯೂ ಹಣವನ್ನು ಎಸೆಯಲು ಪ್ರಾರ೦ಬಿಸಿದರೆ,, ಆಲೊಚನೆಗಳ ಕೊರತೆ  ಸಾಬೀತಾಗುದ್ದದೆ. ‘ಮೇಕ್ ಇನ್ ಇ೦ಡಿಯ’ ಕಾರ್ಯಕ್ರಮದ೦ತೆಯೇ ಈ ಕೈಗಾರಿಕಾ ನೀತಿಯೂ ವಿಫಲವಾಗಲಿದೆ, ಮತ್ತು ಇದು ದೇಶಕ್ಕೆ ಶತಕೋಟಿ ನಷ್ಟ ಒದಗಿಸುವ ಸಾಧ್ಯತೆಯಿದೆ, ಎನ್ನುವ ತೀರ್ಮಾನಕ್ಕೆ ಬರುತ್ತಾರೆ ಮಿಹಿರ್ ಶರ್ಮ.








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು