ಯಾಕೆ ಈ ರೀತಿ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ? ಯಾರು ಅಕ್ರಮ ಕಣ್ಗಾವಲು ನಡೆಸುತ್ತಿದ್ದಾರೆಂದು ಸರ್ಕಾರ ಬಹಿರಂಗಪಡಿಸುವದೇ?
ಪೆಗಾಸಸ್ ಬಹಳ ಕಾಲದಿ೦ದ ವಿಶ್ವದ ವಿವಿಧ ಭಾಗಗಳಲ್ಲಿ ಅಕ್ರಮ ಕಣ್ಗಾವಲು ಹಾಕುವುದು ಅಂತಿಮವಾಗಿ ಬಹು-ಸಾಂಸ್ಥಿಕ ಅಂತರರಾಷ್ಟ್ರೀಯ ತನಿಖೆಗೆ ಕಾರಣವಾಯಿತು. ಈ ತನಿಖೆಯನ್ನು ಸೈಬರ್ ಸುರಕ್ಷತೆ ತಜ್ಞರ ಸಹಾಯ ಮತ್ತು ಭಾಗವಹಿಸುವಿಕೆಯೊಂದಿಗೆ ಕೆಲವು ಪ್ರಸಿದ್ಧ ಸುದ್ದಿ ಸಂಸ್ಥೆಗಳು ಮತ್ತು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸೇರಿ ನಡೆಸಿದವು..
ಭಾರತದಲ್ಲಿ ಅನೇಕರನ್ನು ಪೆಗಾಸಸ್ ಸ್ಪೈವೇರ್ (ಬೇಹುಗಾರಿಕೆಯ ಕ೦ಪ್ಯೂಟರ್ ವಿಧಾನ) ಗುರಿಯಾಗಿಸಿಕೊಂಡಿರುವುದು ಈ ರಾಷ್ಟ್ರದಲ್ಲಿ ಅನೇಕರಿಗೆ ಆಶ್ಚರ್ಯವಾಗುವುದಿಲ್ಲ. 'ರಾಷ್ಟ್ರೀಯ ಭದ್ರತೆ', ‘ಶ್ರೇಷ್ಠ ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಂಪ್ರದಾಯಗಳ ವಿರುದ್ಧದ ಪಿತೂರಿ’ ಇತ್ಯಾದಿ ‘ಸಬೂಬು’ಗಳನ್ನು ಹೇಳಿ ಭಾರತ ಸರ್ಕಾರವು ಸ೦ಪೂರ್ಣವಾದ ಉತ್ತರವನ್ನು ನೀಡದೇ ಇರಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತದೆ. ಆದರೆ ವ್ಯಕ್ತಿಯ ಹಕ್ಕಿನ ವಿಷಯವಾಗಿ ವೈಯಕ್ತಿಕ ಮತ್ತು ವೃತ್ತಿಪರ ಗೌಪ್ಯತೆಯನ್ನು ಛಿದ್ರಮಾಡಿ ಕೆಲವರ ಜೀವನ ಮತ್ತು ಕಾರ್ಯದೊಳಗೆ ಒಳನುಗ್ಗುವಿಕೆಯಿಂದ ನಾವೆಲ್ಲರೂ ತೊಂದರೆಗೀಡಾಗಿದ್ದೇವೆ. ಕಾನೂನು ಮತ್ತು ಅಷ್ಟೇ ಸರಕಾರದ ಹೊಣೆಗಾರಿಕೆಯ ಕೊರತೆಯು ಈ ಆಪಾದಿತ ಘಟನೆಗಳ ಬಗ್ಗೆ ಸರಿಯಾದ ತನಿಖೆ ಪಡೆಯುವುದನ್ನು ತಪ್ಪಿಸುತ್ತಿದೆ.
ಪೆಗಾಸಸ್ ಗುರಿಗಳ ಪಟ್ಟಿಯಲ್ಲಿ 1,000 ಕ್ಕೂ ಹೆಚ್ಚು ಭಾರತೀಯರು, ಕನಿಷ್ಠ 40 ಪತ್ರಕರ್ತರು, ಸಂಸತ್ತಿನ ಹಲವಾರು ಸದಸ್ಯರು (ಆಡಳಿತ ಪಕ್ಷದ ಸದಸ್ಯರು ಸೇರಿದಂತೆ), ಮಂತ್ರಿಗಳು ಮತ್ತು ಪ್ರತಿಪಕ್ಷಗಳು, ಹಿರಿಯ ನ್ಯಾಯಾಧೀಶರು ಮತ್ತು ಆಡಳಿತ ಸೇವಕರು, ದಲಿತ ಕಾರ್ಯಕರ್ತರು, ಕೊರೆಗಾ೦ವ-ಭೀಮಾ ಪ್ರಕರಣದಲ್ಲಿ ಬಂಧಿತರು, ಎಲ್ಲರೂ ಸೇರಿದ್ದಾರೆ ಎಂದು ವರದಿಯಾಗಿದೆ . ತಾ೦ತ್ರಿಕ ತಜ್ಞರು ಪರೀಕ್ಷಿಸಿದ ಕೆಲವು ಫೋನ್‌ಗಳು ನಿಜಕ್ಕೂ ಸೋಂಕಿಗೆ ಒಳಗಾಗಿವೆ ಎಂದು ದೃಢ ಪಡಿಸಿದ್ದಾರೆ.
ಖಾಸಗಿ ಘಟಕವೊಂದಕ್ಕೆ ಇದೇನಾದರೂ ಮಾಡುವುದು ಕಾನೂನುಬಾಹಿರವಾಗಿದೆ. ಸರ್ಕಾರಕ್ಕೆ ಸಂಬಂಧಿಸಿದಂತೆ, ಭಾರತದಲ್ಲಿ ದತ್ತಾಂಶ ಸಂರಕ್ಷಣಾ ಕಾನೂನುಗಳಿಲ್ಲ, ಮತ್ತು ಕಣ್ಗಾವಲಿಗೆ ಅಧಿಕಾರ ನೀಡುವ ವಿಷಯದಲ್ಲಿ ಅಪಾರದರ್ಶಕ ಮತ್ತು ಅನಿಯಂತ್ರಿತ ಕಾರ್ಯವಿಧಾನಗಳು ಆಚರಣೆಯಲ್ಲಿವೆ.
ಇದನ್ನೆಲ್ಲ ನಿರಾಕರಿಸುವ ಹೇಳಿಕೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಘಟನೆಗಳು ನಡೆದಿವೆ ಎಂದು ಸರ್ಕಾರ ನಿರಾಕರಿಸಿಲ್ಲ. ಇದರ ಬಗ್ಗೆ ತನಿಖೆಗೆ ಸಿಧ್ಧವಾಗಿಲ್ಲ. ಅಂತರರಾಷ್ಟ್ರೀಯ ತನಿಖೆಯಿಂದ ಹೆಸರಿಸಲ್ಪಟ್ಟ ಪೆಗಾಸಸ್ ಎಂಬ ಬೇಹುಗಾರಿಕ ತ೦ತ್ರಕ್ಕೆ ಭಾರತ ಸರ್ಕಾರ ಒಬ್ಬ ಗ್ರಾಹಕ ಎಂದು ನಿರಾಕರಿಸಿಲ್ಲ.
ಸರ್ಕಾರವಲ್ಲದಿದ್ದರೆ ಇದನ್ನೆಲ್ಲ ಯಾರು ಮಾಡಿದ್ದಾರೆ?
‘ಪೆಗಸಸ್’ನ ತಯಾರಕ, ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ, ಈ ಉತ್ಪನ್ನವನ್ನು 40 ದೇಶಗಳಲ್ಲಿ 60 ಸಂಖ್ಯೆಯ ಪರಿಶೀಲಿಸಿದ ಪ್ರಮಾಣೀಕರಿತ ಸರ್ಕಾರಿ ಸಂಸ್ಥೆಗಳಿಗೆ (ಕಾನೂನು ಜಾರಿ, ಗುಪ್ತಚರ ಮತ್ತು ಮಿಲಿಟರಿಯಲ್ಲಿ) ಮಾತ್ರ ಮಾರಾಟ ಮಾಡುತ್ತದೆ ಎಂದು ಹೇಳಿಕೊಂಡಿದೆ. ಪರವಾನಗಿಗಳನ್ನು ಮಾರಾಟ ಮಾಡುವುದರ ಹೊರತಾಗಿ, ಎನ್ಎಸ್ಒ ಅವಶ್ಯವಾದ ಸೌಕರ್ಯಗಳನ್ನು ಅನುಸ್ಥಾಪನೆಯನ್ನು ಮಾಡುತ್ತದೆ, ಡೇಟಾವನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಭೌತಿಕ ಮೂಲಸೌಕರ್ಯವನ್ನು ಹೊಂದಿಸುತ್ತದೆ ಮತ್ತು ಡೇಟಾ ಸಂಗ್ರಹಣೆಯಲ್ಲಿ ಗ್ರಾಹಕರಿಗೆ ತರಬೇತಿ ನೀಡುತ್ತದೆ. ಆದ್ದರಿಂದ ತನ್ನ ಸಂಪೂರ್ಣ ಶುಚಿತ್ವವನ್ನು ಪದೇ ಪದೇ ಹೇಳಿಕೊಳ್ಳುವ ಎನ್ಎಸ್ಒ ಸ೦ಸ್ಥೆ ತಾನು ಕಾನೂನು ವಿರುಧ್ಢ “ಹ್ಯಾಕಿಂಗ್’ ನಲ್ಲಿ ಭಾಗವಹಿಸುವುದನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ.
ಪೆಗಾಸಸ್ ದುಬಾರಿ ಪ್ಯಾಕೇಜ್ ಎಂದು ಹೇಳಲಾಗುತ್ತದೆ. ಕಣ್ಗಾವಲು. ನಿರ್ವಹಿಸಲು ಆವರ್ತಿತ ಖರ್ಚುಗಳಿವೆ. ಮೇಲ್ವಿಚಾರಣೆಗಾಗಿ ವ್ಯಾಪಕವಾದ ಭೌತಿಕ ಮೂಲಸೌಕರ್ಯಗಳನ್ನು ಸ್ಥಾಪಿಸುವ ಅಗತ್ಯವಿರುತ್ತದೆ ಮತ್ತು ಎನ್ಎಸ್ಒ ಮತ್ತು ಗ್ರಾಹಕರ ನಡುವೆ ವಿಸ್ತೃತ ಸಂವಾದಗಳನ್ನು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ‘ಪೆಗಸಸ್’ನ ಗ್ರಾಹಕ ಭಾರತದ ಸರ್ಕಾರವಲ್ಲದಿದ್ದರೆ, ದೀರ್ಘಕಾಲದ ಅವಧಿಯಲ್ಲಿ ಇಂತಹ ದುಬಾರಿ ಕಾರ್ಯಾಚರಣೆ ಮಾಡುವ ಶಕ್ತಿ ಹೊ೦ದಿದ ಮತ್ತೊಂದು ಘಟಕ ನಮ್ಮ ಮಧ್ಯೆ ಕಾರ್ಯ ಮಾಡುತ್ತಿದೆಯೇ ? ಇದು ಭಯಾನಕ ಪರ್ಯಾಯ ಸಾಧ್ಯತೆಯಾಗಿದೆ. ಹೀಗಾಗಿ, ಈ ವಿಷಯದ ಬಗ್ಗೆ ಸರ್ಕಾರ ಸತ್ಯವನ್ನು ಬಹಿರ೦ಗ ಪಡಿಸುವದು ಅನಿವಾರ್ಯ.
****************************************************************************************
ಮೋದಿಯವರ 2017 ರ ಇಸ್ರೇಲ್ ಪ್ರವಾಸದ ಸಮಯದ ಸುತ್ತಮುತ್ತ ಬೇಹುಗಾರಿಕೆಗೆ ಗುರಿಯಾದ ಭಾರತೀಯ ಫ಼ೋನ್ ಸಂಖ್ಯೆಗಳ ಆಯ್ಕೆ ಪ್ರಾರಂಭವಾಯಿತು. ಇದು ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿ. ಇದಾದ ಮೇಲೆ ದೆಹಲಿ ಮತ್ತು ಇಸ್ರೇಲಿ ನಡುವಿನ ಸ೦ಬ೦ಧ ರಕ್ಷಣಾ ಕೈಗಾರಿಕೆಗಳು ಸೇರಿದ೦ತೆ ಶತಕೋಟಿ ಡಾಲರ್ ಮಟ್ಟಕ್ಕೆ ಬೆಳೆಯಿತು.. - ದಿ ಗಾರ್ಡಿಯನ್ ಪತ್ರಿಕೆ, ಲ೦ಡನ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ