ಪ್ಯೂ ಸಮೀಕ್ಷೆಯ ಚರ್ಚೆ


ಪ್ಯೂ ಸಮೀಕ್ಷೆಯ ವರದಿಯ ಮುಖ್ಯ ಬಿ೦ದುಗಳನ್ನು ೨೦೨೧ರ ಜುಲೈ ೧೪ರ೦ದು ಈ ಪುಟಗಳಲ್ಲಿ ಪ್ರಕಟಿಸಲಾಗಿದೆ.


ಪ್ರತೀಕ್ಷಿಸಬಹುದಾದ೦ತೆ ಈ ವರದಿಯ ಬಗ್ಗೆ ವ್ಯಾಪಕವಾದ ಚರ್ಚೆ ವಿವಿಧ ಮಾಧ್ಯಮಗಳಲ್ಲಿ ನಡೆದಿದೆ. 


ಕೆಲವರು ಈ ಸಮೀಕ್ಷೆಯ ಗಾತ್ರ ಚಿಕ್ಕದು, ಆ ಕಾರಣ ಸಮೀಕ್ಷೆಯ ತೀರ್ಮಾನಗಳನ್ನು ಕ೦ಡುಹಿಡಿಕೆಗಳನ್ನು ಎಚ್ಚರಿಕೆಯಿ೦ದ ಪರಿಶೀಲಿಸಬೇಕು ಎ೦ದರೆ, ಕೆಲವರು ಪ್ರಶ್ನೆಗಳನ್ನು  ಮತ್ತು ಪ್ರಶ್ನೆಗಳನ್ನು ಕೇಳಿದ ರೀತಿಯನ್ನೇ ಹುಶಾರಾಗಿ ಶೋಧಿಸುತ್ತಿದ್ದಾರೆ.


ಕೆಲವು ಗು೦ಪುಗಳಿಗೆ ಈ ವರದಿಯಿ೦ದ,  ವಿಶೇಷವಾಗಿ ದೇಶದ ಧಾರ್ಮಿಕ ಸ್ವಾತ೦ತ್ರ್ಯ ಮತ್ತು ಸಹಿಷ್ಣುತೆಗಳಿಗೆ ಸೇರಿದ  ಭಾಗಗಳಿಂದ, ಸಮಾಧಾನ ಉ೦ಟಾಗಿದೆ. ಸಮೀಕ್ಷೆ ತೋ ರಿಸುವದು  ವಿವಿಧ ಮತಧರ್ಮಗಳು ತಮ್ಮ ಮತ-ನಂಬಿಕೆಗಳನ್ನು ಆಚರಣೆ ಮಾಡಲು ತಾವು ತುಂಬಾ ಸ್ವತಂತ್ರರು ಎಂದು  ಮತ್ತು ಹೆಚ್ಚಿನವರು ಇತರ ಧರ್ಮದ ಜನರು ಸಹ ತಮ್ಮ ಧರ್ಮವನ್ನು ಆಚರಿಸಲು ತುಂಬಾ ಸ್ವತಂತ್ರರು ಎಂದು ಭಾರತೀಯರು ಹೇಳುತ್ತಾರೆ.


ಭಾರತೀಯರು ತಮಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಭಾವಿಸುತ್ತಾರೆ, ಎಲ್ಲಾ ಧರ್ಮಗಳನ್ನು ಗೌರವಿಸುವುದನ್ನು ಒಂದು ಪ್ರಮುಖ ಮೌಲ್ಯವಾಗಿ ನೋಡುತ್ತಾರೆ.  ಭಾರತೀಯರು ಧಾರ್ಮಿಕ ಸಹಿಷ್ಣುತೆಯನ್ನು ಗೌರವಿಸುತ್ತಾರೆ.


ಇದಕ್ಕೆ ವಿರುಧ್ಧವಾಗಿ ಕೆಲವರು ಈ ವರದಿಯನ್ನು ಪ್ರತೀಕ್ಷಿಸಿದ್ದಕ್ಕಿ೦ತ ಸಕಾರಾತ್ಮಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ, ದೇಶದಲ್ಲಿ ಚಾಲ್ತಿಯಲ್ಲಿರುವ “ದ್ವೇಷ ಪ್ರವಚನ” ಮತ್ತು “ಧ್ರುವೀಕರಣ”, ಇವನ್ನು ಪ್ರತಿಬಿ೦ಬಿಸುತ್ತಿಲ್ಲ ಎನ್ನುವ ವಿಚಾರ  ಹೊ೦ದಿದ್ದಾರೆ. ಎಸ್ ವೈ ಕುರೇಶಿ, ಹಿ೦ದಿನ ಮುಖ್ಯ ಚುನಾವಣಾ ಆಯುಕ್ತರು, "ಧಾರ್ಮಿಕ ಸಹಿಷ್ಣುತೆ ಸಂಪ್ರದಾಯಗಳಿವೆ ಆದರೆ ಜನರನ್ನು ವಿಭಜಿಸುವ ರಾಜಕೀಯ ಯೋಜನೆಯೂ ಇದೆ. ಇದು ಆಡಳಿತಾರೂಢ   ಬಿಜೆಪಿಯ ಗುರಿ,” ಎಂದು ಹೇಳಿದರು


"ಭಾರತವು  ಅನೇಕತ್ವದ, ವೈವಿಧ್ಯತೆಯ ಸಮಾಜವಾಗಿದೆ - ಇದು ಪ್ರಾಯೋಗಿಕ ಪ್ರತಿಪಾದನೆಯಾಗಿದೆ. ಇಷ್ಟಕ್ಕೇ   ಬಹುತ್ವವು ಒಂದು ಮೌಲ್ಯವಾಗಿದೆ ಎಂಬ ಪ್ರತಿಪಾದನೆಗೆ ಕಾರಣವಾಗುವುದಿಲ್ಲ, " - ನೀರಾ ಚ೦ದೋಕ್ ನಿವೃತ್ತ  ಪ್ರಾಧ್ಯಾಪಕರು, ದಿಲ್ಲಿ ವಿಶ್ವವಿದ್ಯಾಲಯ. 


ಹಾಗೆಯೇ ಯಾರಾದರೂ ಸಮತೋಲನವನ್ನು ಕದಡದಿರುವರೆಗೆ  ಭಾರತೀಯರು ಸಹಿಷ್ಣುಗಳು ಎಂದು ಸಮೀಕ್ಷೆಯು ಕಂಡುಹಿಡಿದಿದೆ - ಆದರೆ ಯಾರಾದರೂ ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸಲು ಪ್ರಾರಂಭಿಸಿದಾಗ ಏನಾಗುತ್ತದೆ?


 ಧಾರ್ಮಿಕ ಮೌಲ್ಯಗಳು ಮತ್ತು ಸಾಧಾರಣ  ಸಹಿಷ್ಣುತೆ ಇವು ಹೊರ ಹೊಮ್ಮಿವೆ , ಆದರೂ , ಭಾರತದ ಪ್ರಮುಖ ಧಾರ್ಮಿಕ ಸಮುದಾಯಗಳ ಸದಸ್ಯರು ಸಾಮಾನ್ಯವಾಗಿ “ಒಬ್ಬರಿಗೊಬ್ಬರು ಹೆಚ್ಚು ಸಾಮ್ಯತೆ ಹೊಂದಿದ್ದಾರೆಂದು ಭಾವಿಸುವುದಿಲ್ಲ”.


ಧರ್ಮಗಳಾದ್ಯಂತ ನಡೆಯುವ ಜಾತಿ ವಿಭಜನೆಯೂ ಕoಡುಬರುತ್ತಿದೆ: “ಭಾರತೀಯ ಸಮಾಜದಲ್ಲಿ ಧರ್ಮವು ಮಾತ್ತ್ರವಲ್ಲದೆ ದೇಶದ ಕೆಲವು ಪ್ರದೇಶಗಳಲ್ಲಿ, ಸಮಾಜದ ಗಮನಾರ್ಹ ವಿಭಾಗಗಳು  ವ್ಯಾಪಕವಾದ, ಜಾತಿ ಆಧಾರಿತ ತಾರತಮ್ಯವನ್ನು ಅನುಭವಿಸುತ್ತವೆ,” ಎಂದು ವರದಿ ಹೇಳುತ್ತದೆ. ಜಾತಿ ಆಧಾರಿತ  ಹಾಗೆಯೇ ಪ್ರಾಚೀನ  ತಾರತಮ್ಯವನ್ನು ಸರಿದೂಗಿಸಲು ಸರ್ಕಾರದ ಪ್ರಯತ್ನಗಳು ಭಾರತದಲ್ಲಿ ರಾಜಕೀಯವಾಗಿ ಸೂಕ್ಷ್ಮವಾದ  ವಿಷಯಗಳು. ಹೆಚ್ಚಿನ ಭಾರತೀಯರು ವ್ಯಾಪಕ ಜಾತಿ ಆಧಾರಿತ ತಾರತಮ್ಯವನ್ನು ನಿಜವೆಂದು ಒಪ್ಪಿಕೊಳ್ಳುವದಿಲ್ಲ  . ಕೇವಲ ಐದರಲ್ಲಿ ಒಬ್ಬ ಭಾರತೀಯರು ದಲಿತರ   ವಿರುದ್ಧ ಹೆಚ್ಚು  ತಾರತಮ್ಯವಿದೆ ಎಂದು ಹೇಳುತ್ತಾರೆ,  19% ಜನರು ಪರಿಶಿಷ್ಟ ವರ್ಗಗಳ ವಿರುಧ್ದ ಹೆಚ್ಚು  ತಾರತಮ್ಯವಿದೆ ಎಂದು ಹೇಳುತ್ತಾರೆ.  ಮತ್ತು ಒಬಿಸಿಗಳ ವಿರುದ್ಧ ಹೆಚ್ಚಿನ ಮಟ್ಟದ ತಾರತಮ್ಯವನ್ನು ಸ್ವಲ್ಪ ಕಡಿಮೆ (16%) ನೋಡುತ್ತಾರೆ.

ಸಮೀಕ್ಷೆಯು ದೇಶದಲ್ಲಿ "ಹಿಂದೂ ರಾಷ್ಟ್ರೀಯತೆಯ" ಆಯಾಮಗಳ ಮೇಲೆ ವಿಶೇಷ ಗಮನ ಹರಿಸಿದೆ. ಭಾರತದ ಹಿಂದೂ ಬಹುಸಂಖ್ಯಾತ ಮತ್ತು ದೇಶದ ಸಣ್ಣ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ನಡುವಿನ ಸಂಬಂಧವು ಧಾರ್ಮಿಕ ವಿಭಜನೆಯ ರೂಪ-ರೇಖೆಗಳನ್ನು ಎತ್ತಿ ತೋರಿಸಿದೆ ಎಂದು ವರದಿ ಹೇಳುತ್ತದೆ, ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಆಡಳಿತಾರೂಢ  ಭಾರತೀಯ ಜನತಾ ಪಕ್ಷ (ಬಿಜೆಪಿ)  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ  ಹಿಂದೂ ರಾಷ್ಟ್ರೀಯತಾವಾದಿ ಸಿದ್ಧಾಂತವನ್ನು ಉತ್ತೇಜಿಸುತ್ತದೆ ಎಂದು ಅನೇಕ ಸಾರಿ ವರ್ಣಿಸಲಾಗುತ್ತದೆ  ಎಂದು ವರದಿ ತಿಳಿಸುತ್ತದೆ (ದಿ  ವಯರ್ ನಲ್ಲಿ ಲೇಖನ).

ಪ್ಯೂ ಸಮೀಕ್ಷೆಯಬಗ್ಗೆ ವಿಶ್ಲೇಷಿಸುವಾಗ ಕ್ರಿಸ್ತೊಫ಼ರ್ ಜಫ಼್ರೆಲೊ, ಫ್ರಾನ್ಸ್ನಿಂದ ವ್ಯಾಖ್ಯಾನಕಾರ, ಇ೦ಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ,’ಇದು  ಬಹುಸಂಖ್ಯಾತ ಸಮುದಾಯ ಮತ್ತು ಹಿಂದುತ್ವಗಳ ನಡುವೆ ಬೆಳೆಯುತ್ತಿರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಇದನ್ನು ಮೀರಿ, ಇದು ಸುಧಾರಣಾವಾದಿ ವರ್ತನೆಗಳ ಅವನತಿ ಮತ್ತು ಜಾತಿಯ ಸ್ಥಿತಿಸ್ಥಾಪಕತ್ವವನ್ನು ಸಹ ವಿವರಿಸುತ್ತದೆ,’  ಎಂದಿದ್ದಾರೆ. 


ಈ ಮಟ್ಟದ ಜನಾಂಗೀಯತೆಯನ್ನು ಅವರು ಯಹೂದಿ  ತೀವ್ರಗಾಮಿತ್ವ  ‘ಝಯನ್ ವಾದ’  (Zionism) ಕ್ಕೆ ಹೋಲಿಸುತ್ತಾರೆ - ಅಂದರೆ ಭೂಮಿಯ ಪವಿತ್ರತೆ, ಜನರ “ಐತಿಹಾಸಿಕತೆ”, ವಂಶಾವಳಿ ಮತ್ತು ಭಾಷೆಯ ಆಧಾರದ ಮೇಲೆ ರಾಷ್ಟ್ರವನ್ನು ವ್ಯಾಖ್ಯಾನಿಸುವ ಸಿದ್ಧಾಂತ. ಹಿಂದೂತ್ವವು ಅದೇ ರೀತಿ, ಹಿಂದೂ ಸಮುದಾಯವನ್ನು ಧರ್ಮದ ಆಧಾರದ ಮೇಲೆ ಹೆಚ್ಚು ವ್ಯಾಖ್ಯಾನಿಸುವುದಿಲ್ಲ, ಆದರೆ ಜನಾಂಗೀಯ ಮತ್ತು ಸಾಂಸ್ಕೃತಿಕ ಲಕ್ಷಣಗಳನ್ನು ಹೊಂದಿರುವ ಜನರನ್ನು ರಾಷ್ಟ್ರದ ತಿರುಳನ್ನಾಗಿ ಮಾಡುತ್ತಾರೆ.


“ಪ್ರತ್ಯೇಕವಾಗಿ ಬದುಕುವುದು” ಶಾಂತಿಯುತವಾಗಿ ಬದುಕುವುದಕ್ಕೆ ಸಮಾನವಲ್ಲ. ಸಹನೆ ಸಹಿಷ್ಣುತೆಯಲ್ಲ. ಕೋಮು ಹಿಂಸಾಚಾರವನ್ನು ಭಾರತದ "ದೊಡ್ಡ ಸಮಸ್ಯೆಗಳಲ್ಲಿ"  65 ಶೇಕಡಾ ಹಿಂದೂಗಳು ಮತ್ತು ಮುಸ್ಲಿಮರು ಪಟ್ಟಿ ಮಾಡಿದ್ದಾರೆ. “‘ಸಹಿಷ್ಣು’ ಭಾರತವು  ಬಹುಸಂಖ್ಯಾತವರ್ಗದ ಆಡಳಿತದಡಿಯಲ್ಲಿರಬಹುದು ” ಎನ್ನುತ್ತಾರೆ  ನಿಸ್ಸಿಮ್ ಮನ್ನತುಕ್ಕಾರನ್ (ದಿ ಹಿಂದು  ದಿನಪತ್ರಿಕೆಯ ಲೇಖನದಲ್ಲಿ )


ಸಂಸ್ಕೃತಿಗಳ ಸಹಿಷ್ಣುತೆ ಅಥವಾ ಪ್ರಾಯೋಗಿಕ ಬಹುತ್ವವು ಬಹುಸಾಂಸ್ಕೃತಿಕತೆಯ ಪ್ರಜ್ಞಾಪೂರ್ವಕ ಪ್ರಜಾಪ್ರಭುತ್ವ ಯೋಜನೆಯಂತೆಯೇ ಅಲ್ಲ


ಬಿ.ಆರ್. ಅಂಬೇಡ್ಕರ್ ಒಮ್ಮೆ ಹೇಳಿದರು, “... ರಾಷ್ಟ್ರ ಇದ್ದಾಗ ಮಾತ್ರ ಭ್ರಾತೃತ್ವವು ಒಂದು ಸತ್ಯವಾಗಬಹುದು. ಭ್ರಾತೃತ್ವವಿಲ್ಲದೆ, ಸಮಾನತೆ ಮತ್ತು ಸ್ವಾತಂತ್ರ್ಯವು ಬಣ್ಣದ ಪದರಿಗಿಂತ ಆಳವಾಗಿರುವುದಿಲ್ಲ. ”


85% ಹಿಂದುಗಳು "ನಿಜವಾದ ಭಾರತೀಯರಾಗಲು ಎಲ್ಲಾ ಧರ್ಮಗಳನ್ನು ಗೌರವಿಸುವುದು ಬಹಳ ಮುಖ್ಯ" ಎಂದು ದೃಢ  ಪಡಿಸಿದ್ದಾರೆ. ಆದರೆ, ವಿಪರ್ಯಾಸವೆಂದರೆ, 64% ಹಿಂದು ಧರ್ಮದವರು  “ಹಿಂದುಗಳಾಗಿರುವುದು  ‘ನಿಜವಾದ ’ ಭಾರತೀಯರಾಗುವುದಕ್ಕೆ  ಬಹಳ ಮುಖ್ಯ”, ಮತ್ತು ಅವರಲ್ಲಿ 80% ಜನರು "ಹಿಂದಿ ಮಾತನಾಡುವುದು ‘ನಿಜವಾದ’ ಭಾರತೀಯರಾಗಲು ಬಹಳ ಮುಖ್ಯ" ಎಂದು ಹೇಳುತ್ತಾರೆ, ಇದು ಹಿಂದುತ್ವದ ಘೋಷಣೆಗೆ ವಿಶ್ವಾಸಾರ್ಹತೆವನ್ನು ನೀಡುತ್ತದೆ.


ಬಹುಸಂಖ್ಯಾತತೆಯ ಅನುಷ್ಠಾನ ಸಹನೆಯ ಅಭ್ಯಾಸದೊಂದಿಗೆ ಸಹಬಾಳ್ವೆ ಮಾಡಬಹುದು ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ಕೇವಲ ಸಹಿಷ್ಣುತೆ ಅಥವಾ ಸಂಸ್ಕೃತಿಗಳ ಪ್ರಾಯೋಗಿಕ ಬಹುಸಂಖ್ಯೆಯು ಬಹುಸಾಂಸ್ಕೃತಿಕತೆ ಅಥವಾ ಸಂಯೋಜಿತ ಸಂಸ್ಕೃತಿಯ ಪ್ರಜ್ಞಾಪೂರ್ವಕ ಪ್ರಜಾಪ್ರಭುತ್ವ ಯೋಜನೆಯಂತಲ್ಲ.


ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ಉಮೇದುವಾರರಾಗಿ  ಒಬ್ಬ ಮುಸ್ಲಿಮರೂ ಆಯ್ಕೆಯಾಗಿಲ್ಲ. ಗಮನಾರ್ಹವಾದ ಅಲ್ಪಸಂಖ್ಯಾತರ (20 ಕೋಟಿ ಸಂಖ್ಯೆಯ) ರಾಜಕೀಯ ಪ್ರಾತಿನಿಧ್ಯವನ್ನು ಅಳಿಸಿಹಾಕುವುದು - ಇದು ವಿಶ್ವದ ಯಾವುದೇ ಸ್ಥಾಪಿತ ಪ್ರಜಾಪ್ರಭುತ್ವದಲ್ಲಿ ಸಮಾನಾಂತರವಾಗಿಲ್ಲ - ಆದರೆ ಭಾರತದಲ್ಲಿ ಸಂಪೂರ್ಣವಾಗಿ ಇದು ಸಾಮಾನ್ಯವಾಗಿದೆ, ಮತ್ತು ಇದು ಚರ್ಚೆಯ ವಿಷಯವಲ್ಲ.


ಬಹುಸಂಖ್ಯಾತವಾದದ ಮೋಡಗಳ ಮಧ್ಯೆ, ಧರ್ಮಗಳಾದ್ಯಂತ, ಅಲ್ಪಸಂಖ್ಯೆಯಲ್ಲಿರುವ   ಮೇಲ್ಜಾತಿಗಳು ಅಧಿಕಾರದ ನಿಯಂತ್ರಣವನ್ನು ಹೊಂದಿದೆ, ಮತ್ತು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಕೆಳಜಾತಿಯವರು ಬಹುಸಂಖ್ಯಾತ ದಾಳಿಯ ತೀವ್ರತೆಯನ್ನು ಎದುರಿಸುತ್ತಾರೆ.


ಬಿ. ಆರ್. ಅಂಬೇಡ್ಕರ್ ಬಹಳ ಹಿಂದೆಯೇ ಗುರುತಿಸಿದ್ದು , ರಾಷ್ಟ್ರವನ್ನು ನಿರ್ಮಿಸುವ ಕೇಂದ್ರ ತಡೆಗೋಡೆ “ಸಾಮಾಜಿಕ ಜೀವನದಲ್ಲಿ ಪ್ರತ್ಯೇಕತೆ”.


ಯುನೈಟೆಡ್ ಸ್ಟೇಟ್ಸ್ ಮತ್ತು ಪಶ್ಚಿಮ ಯುರೋಪ್ ದೇಶಗಳಲ್ಲಿ  ಮುಸ್ಲಿಂ ವಿರೋಧಿ ಭಾವನೆಗಳ ಹೊರತಾಗಿಯೂ, ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಮುಸ್ಲಿಮರನ್ನು ನೆರೆಹೊರೆಯವರಾಗಿ ಸ್ವೀಕರಿಸಲು ಸಿದ್ಧರಿದ್ದಾರೆ. ಭಾರತ ಸೇರಿದಂತೆ 11 ಉದಯೋನ್ಮುಖ ಆರ್ಥಿಕತೆಗಳ ಕುರಿತಾದ ಪ್ಯೂ ಸಮೀಕ್ಷೆಯಲ್ಲಿ, ಲೆಬನಾನ್, ವೆನೆಜುವೆಲಾ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಹೆಚ್ಚುಪಾಲಿನ  ಸಮುದಾಯದವರು ಭಾರತಕ್ಕಿಂತ ಹೆಚ್ಚಿನ ಮಟ್ಟಿಗೆ ಅಲ್ಪಸಂಖ್ಯಾತರೊಂದಿಗೆ ಸಂವಹನ ನಡೆಸುತ್ತಾರೆ.


ದಕ್ಷಿಣ ಭಾರತದಲ್ಲಿ ಭಿನ್ನ ಮನೋಭಾವ 


ಆದರೆ ಬಹುಸಂಖ್ಯಾತ ಮತ್ತು ಬೇರ್ಪಡಿಸಿದ ದೃಷ್ಟಿಗೆ ವಿರುದ್ಧವಾದ ಧ್ವನಿಗಳನ್ನು ಪ್ರಸ್ತುತ ಸಮೀಕ್ಷೆಯಲ್ಲೂ ಕಾಣಬಹುದು. 


ಒಬ್ಬರ ಸ್ವಂತ ಧರ್ಮದ ಶ್ರೇಷ್ಠತೆ, ಇತರ ಧರ್ಮಗಳಿಂದ ಸ್ನೇಹಿತರು ಮತ್ತು ನೆರೆಹೊರೆಯವರನ್ನು ಹೊಂದಿರುವುದು, ಅಂತರ್-ಧಾರ್ಮಿಕ ವಿವಾಹಗಳನ್ನು ತಡೆಯುವುದು, ಹಿಂದೂ ಆಗುವುದು ಮತ್ತು ಹಿಂದಿ ಮಾತನಾಡುವುದು ನಿಜವಾದ ಭಾರತೀಯನಾಗಲು ಪ್ರಾಮುಖ್ಯತೆ,  ಗೋಮಾಂಸ ನಿಷೇಧ, ಈ ವಿಷಯಗಳಲ್ಲಿ  ಭಾರತದ ಉಳಿದ ಭಾಗಗಳಿಗೆ, ವಿಶೇಷವಾಗಿ ಉತ್ತರ ಮತ್ತು ಮಧ್ಯ ಭಾಗಗಳಿಗೆ, ಹೋಲಿಸಿದರೆ   ಸಣ್ಣದಲ್ಲದ  ಗಣನೀಯ ಅಂತರ ದಕ್ಷಿಣ ಭಾರತದಲ್ಲಿನ ಮನೋಭಾವ ಈ ಸಮೀಕ್ಷೆಯಲ್ಲಿ ತೋರಿಸುತ್ತದೆ. 


ಭಿನ್ನಾಭಿಪ್ರಾಯಗಳನ್ನು ಮುರಿಯುವ ಈ ವರ್ಧಿತ  ಪರಸ್ಪರ ವಿನಿಮಯ ದಕ್ಷಿಣದ ಹಿಂದೂಗಳು ಮತ್ತು ಮುಸ್ಲಿಮರನ್ನು ವ್ಯಾಪಿಸುತ್ತದೆ; ಇದು ಪರಸ್ಪರ ಕ್ರಿಯೆಯ ಹೆಚ್ಚಿದ ಪ್ರಯೋಜನಕಾರಿ ಪರಿಣಾಮಗಳನ್ನು ತೋರಿಸುತ್ತದೆ. 


ಈ ಸಂಸ್ಕೃತಿ ರಾಜಕೀಯದ ಮೇಲೆ ಅದರ ಪರಿಣಾಮ ಬೀರುವುದರಿಂದ, ಹಿಂದೂ ರಾಷ್ಟ್ರೀಯತೆಯು ದಕ್ಷಿಣದಲ್ಲಿ ಕಡಿಮೆ ಚುನಾವಣಾ ಯಶಸ್ಸನ್ನು ಕಂಡಿದೆ - ಕನಿಷ್ಠ ಇಲ್ಲಿಯವರೆಗೆ.


ಬಹುಸಂಖ್ಯಾತತೆಯ ಜೊತೆಗೆ  ಅಲ್ಪಸಂಖ್ಯಾತ ಸಮುದಾಯಗಳನ್ನು ಸಂವಹನ-ರಹಿತ ಪ್ರದೇಶಗಳಾಗಿ ಒಪ್ಪಿಕೊಳ್ಳುವುದೂ ಸೇರಿದರೆ, ಇದು  ಪ್ರಜಾಪ್ರಭುತ್ವದ ಮರಣದಂಡನೆಯಾಗಿದೆ. ಪ್ಯೂ ಸಮೀಕ್ಷೆಯು ಬಹುಸಂಖ್ಯಾತ ವರ್ತನೆಗಳು ಮತ್ತು ವಿಭಾಗೀಕರಣದ ಬಗ್ಗೆ ಸುಳಿವು ನೀಡುವ ಮಟ್ಟಿಗೆ, ಅದನ್ನು  ನಿರ್ಲಕ್ಷಿಸುವದು ನಮಗೆಲ್ಲ ಅಪಾಯಕರ. 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು